Author: AIN Author

ತಿರುಮಲ ತಿರುಪತಿ ದೇವಸ್ಥಾನದಲ್ಲಿ ವಿವಿಧ ಉದ್ಯೋಗಗಳಿಗೆ ಅರ್ಹ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ತಿರುಮಲ ತಿರುಪತಿ ದೇವಸ್ಥಾನದಲ್ಲಿ ನೌಕರಿ ಪಡೆಯುವುದಕ್ಕಿಂತ ದೊಡ್ಡ ಭಾಗ್ಯ ಬೇರೊಂದಿಲ್ಲ ಎಂದು ಹಲವು ಭಕ್ತರು ನಂಬುತ್ತಾರೆ. ಟಿಟಿಡಿಯಲ್ಲಿ ಕೆಲಸ ಸಿಕ್ಕರೆ ಜೀವನವು ಸ್ಥಿರವಾಗಿದೆ ಎಂದು ಭಕ್ತರು ಭಾವಿಸುತ್ತಾರೆ. https://ainlivenews.com/it-is-not-right-for-all-the-leaders-to-shed-tears-mahadevappa-has-returned-to-nikhil/ ಹೀಗಾಗಿ ಆಸಕ್ತ ಭಕ್ತರಿಗೆ ಇದೊಂದು ಸುವರ್ಣಾವಕಾಶ ಎನ್ನಲಾಗಿದೆ. ತನ್ನಲ್ಲಿ ಖಾಲಿ ಇರುವ ಹಲವು ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಟಿಟಿಡಿ ಸಂಸ್ಥೆ ಅಡಿ ಕಾರ್ಯನಿರ್ವಹಿಸುವ ಶ್ರೀಪದ್ಮಾವತಿ ಮಕ್ಕಳ ಹೃದಯ ಕೇಂದ್ರದಲ್ಲಿ ಖಾಲಿ ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತಿದೆ. ಇದೇ ಸಂಬಂಧ ನುರಿತ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ ಶ್ರೀಪದ್ಮಾವತಿ ಮಕ್ಕಳ ಹೃದಯ ಕೇಂದ್ರದಲ್ಲಿ ಪಿಡಿಯಾಟ್ರಿಕ್ ಕಾರ್ಡಿಯಾಕ್ ಅನಸ್ತಾಟಿಸ್ಟ್ ಹಾಗೂ ಪಿಡಿಯಾಟ್ರಿಕ್ ಕಾರ್ಡಿಯಲಾಜಿಸ್ಟ್​ ಉದ್ಯೋಗ ಖಾಲಿ ಇವೆ. ಎಂಬಿಬಿಎಸ್​ ಪೂರ್ಣಗೊಳಿಸಿರುವುದರ ಜೊತೆಗೆ ಪಿಜಿ ಕೂಡ ಪೂರ್ಣಗೊಳಿಸಿರಬೇಕು. ಅಲ್ಲದೇ ಈಗಾಗಲೇ ಕೆಲಸ ಮಾಡಿದ ಅನುಭವ ಕೂಡ ಹೊಂದಿರಬೇಕು. ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿ 42 ವರ್ಷದ ಒಳಗಿನವರು ಆಗಿರಬೇಕು. ಅಭ್ಯರ್ಥಿಗಳನ್ನ…

Read More

ಬೆಂಗಳೂರು:- ಲೀಡರ್ ಗಳೆಲ್ಲಾ ಕಣ್ಣೀರು ಹಾಕೋದು ಸರಿಯಲ್ಲ ಎಂದು ಹೇಳುವ ಮೂಲಕ ನಿಖಿಲ್ ಗೆ ಮಹದೇವಪ್ಪ ತಿರುಗೇಟು ಕೊಟ್ಟಿದ್ದಾರೆ. https://ainlivenews.com/hole-anjaneyaswamy-cp-yogeshwar-sat-in-front-of-the-sanctum-sanctorum-and-offered-prayers/ ಕಣ್ಣೀರು ಹಾಕಿದ್ರೆ ಆರೋಗ್ಯಕ್ಕೆ ಒಳ್ಳೆಯದು. ಭಾರ ಕಡಿಮೆ ಆಗುತ್ತೆ. ಮನಸು ಹಗರು ಆಗುತ್ತೆ. ಡಿಕೆ ಸುರೇಶ್ ಸೋತಿದ್ದಕ್ಕೆ ಅವರು ಅತ್ತರು. ಅಭಿವೃದ್ಧಿ ಮಾಡಿ ಸೋತ್ರು ಎಂದು ಅತ್ತರು. ಆದರೆ ಚುನಾವಣೆ ಬಂದಾಗ ಅಳೋದು ಸರಿಯಲ್ಲ. ಅವರೆಲ್ಲ ಲೀಡರ್‌ಗಳು. ಹೀಗೆ ಅಳೋದು ಸರಿಯಲ್ಲ ಎಂದು ತಿರುಗೇಟು ಕೊಟ್ಟರು. ದೇವೇಗೌಡರು ಅಂಬ್ಯುಲೆನ್ಸ್ನಲ್ಲಿ ಬಂದು ಪ್ರಚಾರ ಮಾಡುತ್ತಾರೆ ಎಂಬ ಡಿಕೆ ಸುರೇಶ್ ಹೇಳಿಕೆ ವಿಚಾರವಾಗಿ ಮಾತನಾಡಿ, ಎಲ್ಲರ ಆರೋಗ್ಯ ಚೆನ್ನಾಗಿ ಇರಲಿ. ಕಣ್ಣೀರು, ರಾಜಕೀಯ, ಕ್ಷೇತ್ರದ ಅಭಿವೃದ್ಧಿಗೆ ಎಲ್ಲಿ ಸಂಬಂಧ ಇದೆ. ಜನರು ಕ್ಷೇತ್ರದ ಅಭಿವೃದ್ಧಿಯನ್ನು ಚುನಾವಣೆಯಲ್ಲಿ ನೋಡುತ್ತಾರೆ. ಕಣ್ಣೀರಿಗೂ ಚುನಾವಣೆಗೂ ಸಂಬಂಧವಿಲ್ಲ ಎಂದು ಕಿಡಿಕಾರಿದರು. ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಎಲ್ಲಾ ಮತಗಳ ಮೇಲೆ ಕಣ್ಣು ಇಟ್ಟಿರುತ್ತಾರೆ.ಆದರೆ ಜನ ಎಲ್ಲವನ್ನೂ ತೀರ್ಮಾನ ಮಾಡ್ತಾರೆ. ಏನು ಕೆಲಸ ಮಾಡುತ್ತಾರೆ ಏನು ಅಭಿವೃದ್ಧಿ ಮಾಡುತ್ತಾರೆ ಎಂದು ಜನ…

Read More

ರಾಮನಗರ: ಕರ್ನಾಟಕ ಉಪ ಕದನದ ಕುರುಕ್ಷೇತ್ರ ರಂಗೇರುತ್ತಿದೆ. ನಾಡಿನ ನಾಡಿಮಿಡಿತ ಏನು ಅನ್ನೋ ಚಿತ್ರಣ ಕಟ್ಟಿಕೊಡುವ ಈ 3 ವಿಧಾನಸಭಾ ಉಪ ಚುನಾವಣೆ ಪ್ರತಿಷ್ಠೆ, ಅಸ್ತಿತ್ವದ ಹೋರಾಟಕ್ಕೆ ಸಾಕ್ಷಿ ಆಗಲಿದೆ. 136 ಕ್ಷೇತ್ರಗಳನ್ನ ಗೆದ್ದು ಬೀಗುತ್ತಿರುವ ಕಾಂಗ್ರೆಸ್‌. ಉಪಕದನದಲ್ಲಿ ಮೂರೂ ಕ್ಷೇತ್ರಗಳನ್ನ ಗೆದ್ದು ಶಕ್ತಿಯನ್ನ ಮತ್ತಷ್ಟು ಹೆಚ್ಚಿಸಿಕೊಳ್ಳುವ ಹಠಕ್ಕೆ ಬಿದ್ದಿದೆ. ಈ ನಿಟ್ಟಿನಲ್ಲಿ ಸಿಪಿ ಯೋಗೇಶ್ವರ್, ಚುನಾವಣೆ ಗೆಲ್ಲಲು ಆಂಜನೇಯನ ಮೊರೆ ಹೋಗಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿರುವ ಹೊಳೆ ಆಂಜನೇಯ ಸ್ವಾಮಿಗೆ ಹರಕೆ ಕಟ್ಟಿದ್ದಾರೆ. https://ainlivenews.com/need-to-lose-weight-fast-eat-chia-seeds-at-this-time-of-day/ ಚನ್ನಪಟ್ಟಣ ಉಪಚುನಾವಣೆ ಕನಕ್ಕೆ ಇವತ್ತು ಡಿಸಿಎಂ ಡಿಕೆ ಶಿವಕುಮಾರ್ ಎಂಟ್ರಿ ಕೊಟ್ಟಿದ್ದಾರೆ. ಚನ್ನಪಟ್ಟಣದ ತಗಟೆಗೆರೆ ಪ್ರಚಾರ ಆರಂಭಿಸಿದ್ದಾರೆ. ತಗಚಗೆರೆಯಲ್ಲಿ ಸಿಪಿ ಯೋಗೇಶ್ವರ್ ಪರ ಡಿಸಿಎಂ ಡಿಕೆ, ಸಚಿವರಾದ ರಾಮಲಿಂಗಾರೆಡ್ಡಿ, ಭೈರತಿ ಸುರೇಶ್, ವೆಂಕಟೇಶ್ ಪ್ರಚಾರ ನಡೆಸಿದ್ದಾರೆ. ದೋಸ್ತಿಗಳ ವಿರುದ್ಧ ಅಬ್ಬರಿಸಿದ್ದಾರೆ.

Read More

ಗದಗ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಗುಡಿ ಬಳಿಯ ರಾಷ್ಟ್ರೀಯ ಹೆದ್ದಾರಿ 67 ರಲ್ಲಿ ಬೈಕ್ ಹಾಗೂ ಕ್ರೂಸರ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ನಡೆದಿದೆ. ಬೈಕ್ ಸವಾರ ಅಂದಪ್ಪ ಜಕ್ಕಲಿ (45 ) ಮೃತ ವ್ಯಕ್ತಿಯಾಗಿದ್ದು, https://ainlivenews.com/need-to-lose-weight-fast-eat-chia-seeds-at-this-time-of-day/ ಮುಂಡರಗಿ ತಾಲೂಕಿನ ಪೇಠಾಲೂರ ಗ್ರಾಮದ ವ್ಯಕ್ತಿಯಾಗಿದ್ದಾರೆ. ಡಿಸೇಲ್ ತರಲು ಬೈಕ್‌ ನಲ್ಲಿ  ಹೊರಟ್ಟಿದ ವೇಳೆ ಕೊಪ್ಪಳದಿಂದ ಗದಗ ಕಡೆ ಬರ್ತಿದ್ದ ಕ್ರೂಸರ್ ನಡುವೆ ಅಪಘಾತ ಸಂಭವಿಸಿ ಈ ದುರ್ಘಟನೆ ನಡೆದಿದೆ. ಇನ್ನೂ ಮುಂಡರಗಿ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.  

Read More

ಬೆಂಗಳೂರು:- ಕಾನೂನು ಬಾಹಿರವಾಗಿ ರೈತರ ಜಮೀನು ವಕ್ಫ್ ಗೆ ಸೇರಲು ಬಿಡಲ್ಲ ಎಂದು MB ಪಾಟೀಲ್ ಹೇಳಿದ್ದಾರೆ. https://ainlivenews.com/the-boy-who-went-to-wash-the-cows-body-in-the-lake-drowned-and-died/ ಈ ಸಂಬಂಧ ಮಾತನಾಡಿದ ಅವರು,ವಕ್ಫ್ ವಿಚಾರವಾಗಿ ಬಿಜೆಪಿ ಪ್ರತಿಭಟನೆ ಮಾಡಿ ರಾಜಕೀಯ ಮಾಡುತ್ತಿದ್ದಾರೆ. ಬೊಮ್ಮಾಯಿ ಸಿಎಂ ಆಗಿದ್ದಾಗ ಏನು ಹೇಳಿದ್ದಾರೆ ಎಲ್ಲಾ ನೋಡಿದ್ದಾರೆ. ಬಿಜೆಪಿ ಅವಧಿಯಲ್ಲಿ ನೋಟಿಸ್ ಕೊಟ್ಟಿದ್ದಾರೆ. ಬಿಜೆಪಿ ಅವಧಿಯಲ್ಲಿ ವಕ್ಫ್ ಆಸ್ತಿ ಎಂದು ಹೆಸರು ಬಂದಿತ್ತು. ಈಗಾಗಲೇ ಸಿಎಂ ಕ್ಲಿಯರ್ ಮಾಡಿದ್ದಾರೆ. ಯಾವ ರೈತರ ಜಮೀನು ಸರ್ಕಾರ ಪಡೆಯೋದಿಲ್ಲ ಎಂದು ತಿಳಿಸಿದರು. ನಮ್ಮ ಜಿಲ್ಲೆಯಲ್ಲಿ ಟಾಸ್ಕ್ ಫೋರ್ಸ್ ಮಾಡಿದ್ದೇವೆ. ಎಲ್ಲಾ ದಾಖಲಾತಿ ತೆಗೆದು ರೈತರ ಜಾಗ ಇದ್ದರೆ ರೈತರಿಗೆ ಕೊಡುತ್ತೇವೆ. ವಕ್ಫ್ ಆಸ್ತಿ ಇದ್ದರೆ ಅವರಿಗೆ ಕೊಡುತ್ತೇವೆ. ಸರ್ಕಾರದ ಜಾಗ ಇದ್ದರೆ ಸರ್ಕಾರ ಪಡೆಯುತ್ತದೆ. ಬಿಜೆಪಿ ಅವರು ಜನರನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ. ಒಂದು ಇಂಚು ರೈತರ ಆಸ್ತಿ ಕಾನೂನುಬಾಹಿರವಾಗಿ ವಕ್ಫ್ ಆಸ್ತಿ ಆಗಲು ನಾನು ಬಿಡೋದಿಲ್ಲ ಎಂದು ಸ್ಪಷ್ಟಪಡಿಸಿದರು.

Read More

ಕಲಘಟಗಿ: ತಾಲ್ಲೂಕಿನ ಬಿಸರಳ್ಳಿ ಗ್ರಾಮದ ಬಸ್ ನಿಲ್ದಾಣ ಸಮೀಪದ ಕೆರೆಯಲ್ಲಿ ಹಸುವಿನ ಮೈತೊಳೆಯಲು ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಅಜ್ಜಯ್ಯ ಮೃತಪಟ್ಟಿದ್ದಾನೆ. ಗ್ರಾಮದ ಅಜ್ಜಯ್ಯ ಹಿರೇಮಠ (15) ಮೃತಪಟ್ಟ ಬಾಲಕ. ದೀಪಾವಳಿ ಹಬ್ಬದ ಅಂಗವಾಗಿ ಅಜ್ಜಯ್ಯ ಹಸುವಿನ ಮೈತೊಳೆಯಲು ಕೆರೆಗೆ ಹೋಗಿದ್ದ ವೇಳೆ ಅವಘಡ ಸಂಭವಿಸಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಮೃತದೇಹವನ್ನು ಹೊರತೆಗೆದರು. ಅಜ್ಜಯ್ಯ ಗ್ರಾಮದ ಸರ್ಕಾರಿ ಶಾಲೆಯಲ್ಲಿ 9 ನೇ ತರಗತಿ ಓದುತ್ತಿದ್ದ. ದೀಪಾವಳಿ ಹಬ್ಬದ ಸ೦ಭ್ರಮದಲ್ಲಿದ್ದ ಕುಟುಂಬಸ್ಥರಲ್ಲಿ ದು ಮಡುಗಟ್ಟಿತ್ತು. ಹಿರೇಮಠ https://ainlivenews.com/need-to-lose-weight-fast-eat-chia-seeds-at-this-time-of-day/ ‘ಕೆರೆ ರಸ್ತೆ ಪಕ್ಕ ಇದ್ದು, ಸುತ್ತಲೂ ತಡೆ ಗೋಡೆ ಹಾಗೂ ರಕ್ಷಣೆ ಇಲ್ಲ. ಎಲ್ಲೆಂದರಲ್ಲಿ ನೀರಿನಲ್ಲಿ ಇಳಿಯುತ್ತಾರೆ. ಮಳೆಗೆ ಕೆರೆ ತುಂಬಿ ಕೆರೆಯ ಒಡ್ಡು ಅಲ್ಲಲ್ಲಿ ಒಡೆದಿದೆ. ಅಧಿಕಾರಿಗಳು ಗಮನಹರಿಸಿ, ಕೆರೆಯ ಸುತ್ತ ತಡೆಗೋಡೆ ನಿರ್ಮಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದರು. ✍ ವರದಿ: ಮಾರುತಿ ಲಮಾಣಿ

Read More

ಕಲಘಟಗಿ: ಕನ್ನಡ ಹಬ್ಬವನ್ನು ನಾವೆಲ್ಲರೂ ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದು, ಇದು ನಮ್ಮೆಲ್ಲರ ಅಸ್ಥಿತೆಯ ಹಬ್ಬವಾಗಿದೆ ಎಂದು ತಾಲೂಕು ತಹಶೀಲ್ದಾ‌ರ್ ವೀರೇಶ ಮುಳಗುಂದಮಠ ಹೇಳಿದರು. ಅವರು ಪಟ್ಟಣದ ಶಾಸಕರ ಮಾದರಿ ಶಾಲೆಯಲ್ಲಿ ತಾಲೂಕು ಆಡಳಿತ ಕನ್ನಡ ಸಾಹಿತ್ಯ ಪರಿಷತ್ ಮತ್ತು ವಿವಿಧ ಕನ್ನಡ ಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಭೂಮಂಡಲದ ಏಕೈಕ ಭಾಷೆ ಎಂದರೆ ಅದು ನಮ್ಮ ತಾಯಿ ಭಾಷೆ ನಾಡ ಭಾಷೆ ನಮ್ಮೆಲ್ಲರ ಭಾಷೆ ಅದೇ ಕನ್ನಡ ಭಾಷೆ ಇಂತಹ ಸುಂದರ ಸಮೃದ್ಧ ಭಾಷೆ ನಾಡಿನಲ್ಲಿ ಜನಿಸುವುದು ನಮ್ಮೆಲ್ಲರ ಸೌಭಾಗ್ಯ ಎಂದರು. ರಾಜ್ಯೋತ್ಸವ ಕಾರ್ಯಕ್ರಮದ ಉಪನ್ಯಾಸಕರಾಗಿ ಮಾತನಾಡಿದ ಶಿಕ್ಷಕ ಹಾಗೂ ಸಾಹಿತಿ ವೈಜಿ ಭಗವತಿ ಕನ್ನಡ ನಾಡು ” ಉದಯವಾಗಿ ಅರವತ್ತೆಂಟು ವರ್ಷವಾಯಿತು. ಒಂದೆಡೆ ಅಭಿವೃದ್ಧಿಯಾದರೇ ಇನ್ನೊಂದೆಡೆ ಕನ್ನಡ ಭಾಷೆ, ಆಹಾರ, ಉಡುಗೆ ತೊಡುಗೆ, ಸಂಸ್ಕೃತಿಗಳ ಮೇಲೆ ಅನ್ಯ ಸಂಸ್ಕೃತಿಯ https://ainlivenews.com/need-to-lose-weight-fast-eat-chia-seeds-at-this-time-of-day/ ಕಲಘಟಗಿ ಪಟ್ಟಣದ ಶಾಸಕರ…

Read More

ಕಲಘಟಗಿ: ಮುತ್ತಗಿ ಗ್ರಾಮದಲ್ಲಿ ಇತ್ತೀಚಿಗೆ ಕಲುಷಿತ ನೀರಿನ ಸೇವನೆಯಿಂದ 50 ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು ವಾಂತಿ ಬೇಧಿಯಿಂದ ಆಸ್ಪತ್ರೆ ಸೇರಿದ್ದ ಹಿನ್ನೆಲೆಯಲ್ಲಿ ತಾಲ್ಲೂಕಿನ ಮುತ್ತಗಿ ಗ್ರಾಮಕ್ಕೆ ಕಾರ್ಮಿಕ ಸಚಿವ ಸಂತೋಷ ಲಾಡ್ ಶುಕ್ರವಾರ ಭೇಟಿ ನೀಡಿ ಗ್ರಾಮಸ್ಥರ ಆರೋಗ್ಯ ವಿಚಾರಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಪರಿಶೀಲನೆ ಮಾಡುವಂತೆ ಸೂಚಿಸಿದರು. ಕೊಳವೆಬಾವಿ ನೀರು ತಾತ್ಕಾಲಿಕವಾಗಿ ಸ್ಥಗಿತ ಮಾಡಿ ಟ್ಯಾಂಕರ್ ಮೂಲಕವೇ ನೀರು ಪೂರೈಸಬೇಕು. ಕುಡಿಯುವ ನೀರು ಪರೀಕ್ಷೆ ಒಳಪಡಿಸಿ, ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು. https://ainlivenews.com/need-to-lose-weight-fast-eat-chia-seeds-at-this-time-of-day/ ಗ್ರಾಮಸ್ಥರು ಅಮಾನತು ಅದ ಪಿಡಿಒ ವಿರುದ್ಧ ಹರಿಹಾಯ್ದರು ಪಂಚಾಯಿತಿಯವರು ಠರಾವು ಪಾಸ್ ಮಾಡಿ ಲಿಖಿತ ದೂರುಗಳನ್ನು ನೀಡಲು ಎಂದು ಲಾಡ್ ಹೇಳಿದರು. ಜಿಪಂ ಸಿಇಒ ಸ್ವರೂಪಾ ಟಿ.ಕೆ, ಡಿಎಚ್‌ ಒ ಡಾ. ಶಶಿ ಪಾಟೀಲ, ತಾಪಂ ಇಓ ಪರಶುರಾಮ ಸಾವಂತ, ತಾಲ್ಲೂಕ ವೈದ್ಯಾಧಿಕಾರಿ ಡಾ.ಕರ್ಲವಾಡ, ಎಸ್. ಆರ್ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ…

Read More

ಬೆಂಗಳೂರು:- ವಕ್ಫ್ ನೋಟಿಸ್ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕದಾದ್ಯಂತ ಪ್ರತಿಭಟನೆಗೆ ಬಿಜೆಪಿ ಕರೆ ಕೊಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. https://ainlivenews.com/colossal-defeat-against-new-zealand-coach-gautam-gambhir-hangs-on/ ಈ ಸಂಬಂಧ ಮಾತನಾಡಿದ ಅವರು,ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರಿಂದ ಹಿಡಿದು ಎಲ್ಲಾ ನಾಯಕರು ಆರಾಮವಾಗಿ ಇದ್ದಾರೆ. ಹೀಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು. ಬಿಜೆಪಿಯವರೆಲ್ಲಾ ತುಂಬಾ ಆರಾಮಾಗಿದ್ದಾರೆ. ಬಿಜೆಪಿ ಅಧ್ಯಕ್ಷರಿಂದ ಹಿಡಿದು ಎಲ್ಲರೂ ಬಿಡುವಾಗಿದ್ದಾರೆ. ಮುಂದಿನ ಐದು ವರ್ಷ ಕೂಡ ಅವರು ಬಿಡುವಾಗಿ ಇರುತ್ತಾರೆ. ವಿಪಕ್ಷದಲ್ಲೇ ಕೂರುತ್ತಾರೆ. ಹೀಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಈಗಾಗಲೇ ವಕ್ಫ್ ವಿಚಾರವಾಗಿ ಸಿಎಂ ಸ್ಪಷ್ಟನೆ ನೀಡಿದ್ದಾರೆ. ನೋಟಿಸ್ ಕೊಡಲು ಕಾರಣ ಯಾರು ಅಂದರೆ ಅದು ಬಿಜೆಪಿ ಅವರೇ. ಮಗು ಚಿವುಟೋದು ಅವರೇ, ತೊಟ್ಟಿಲು ತೂಗೋದು ಅವರೇ. ಅವರಿಂದಲೇ ನೋಟಿಸ್ ಕೊಟ್ಟಿದ್ದು ಅಲ್ವಾ. ಅದನ್ನು ಈಗ ನಾವು ನಿಲ್ಲಿಸುತ್ತಿದ್ದೇವೆ. ನಾವು ರೈತರ ಪರವಾಗಿ ಇದ್ದೇವೆ ಎಂದು ಕಿಡಿಕಾರಿದರು.

Read More

ನ್ಯೂಝಿಲೆಂಡ್ ವಿರುದ್ಧ ಹೀನಾಯ ಸೋಲು ಬೆನ್ನಲ್ಲೇ ಕೋಚ್ ಗೌತಮ್ ಗಂಭೀರ್ ಬದಲಾವಣೆ ಪ್ರಶ್ನೆ ಎದ್ದಿದೆ. https://ainlivenews.com/bus-fell-into-a-ditch-in-uttarakhand-20-killed-rs-4-lakh-for-the-families-of-the-deceased-solution/ ಟೀಮ್ ಇಂಡಿಯಾ ಆಯ್ಕೆ ವಿಚಾರದಲ್ಲಿ ಗೌತಮ್ ಗಂಭೀರ್‌ಗೆ ಮುಕ್ತ ಅವಕಾಶ ನೀಡಲಾಗಿದೆ. ಇದರ ಜೊತೆ ಗಂಭೀರ್ ಬೇಡಿಕೆಯಿಟ್ಟ ಸಿಬ್ಬಂದಿ ವರ್ಗಗಳನ್ನು ಸಹ ನೀಡಲಾಗಿತ್ತು. ಇದಾಗ್ಯೂ ಭಾರತ ತಂಡವು ಸತತ ವೈಫಲ್ಯ ಅನುಭವಿಸಿದೆ. ಅಷ್ಟೇ ಅಲ್ಲದೆ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ತಂಡದ ಆಯ್ಕೆಯಲ್ಲೂ ಗೌತಮ್ ಗಂಭೀರ್ ಭಾಗವಾಗಿದ್ದಾರೆ. ಅವರ ಸೂಚನೆ ಮೇರೆಗೆ ದೆಹಲಿ ವೇಗಿ ಹರ್ಷಿತ್ ರಾಣಾ ಮತ್ತು ಆಂಧ್ರ ಪ್ರದೇಶದ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಬಾರ್ಡರ್-ಗವಾಸ್ಕರ್ ಟ್ರೋಫಿ ತಂಡದಲ್ಲಿ ಸೇರಿಸಲಾಗಿದೆ. ಅಂದರೆ ಇಲ್ಲಿ ಬಿಸಿಸಿಐ ಗೌತಮ್ ಗಂಭೀರ್ ಅವರ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತಾ ಬಂದಿದೆ. ಆದರೆ ಕಳೆದ ಎರಡು ಸರಣಿಗಳಲ್ಲಿ ಟೀಮ್ ಇಂಡಿಯಾ ಹೀನಾಯವಾಗಿ ಸೋಲುವ ಮೂಲಕ ಭಾರೀ ಮುಖಭಂಗಕ್ಕೆ ಒಳಗಾಗಿದೆ. ಹೀಗಾಗಿಯೇ ಗೌತಮ್ ಗಂಭೀರ್ ಅವರ ಗರಡಿಯಲ್ಲಿ ಟೀಮ್ ಇಂಡಿಯಾ ಮುಂದಿನ ಸರಣಿಗಳನ್ನು ಹೇಗೆ ಆಡಲಿದೆ ಎಂಬುದನ್ನು ಪರಿಶೀಲಿಸಲು ಬಿಸಿಸಿಐ…

Read More