Author: AIN Author

IPL ಮೆಗಾ ಹರಾಜಿಗೆ ಕೆಲವೇ ದಿನಗಳು ಬಾಕಿ ಇದ್ದು, ಕ್ರಿಕೆಟ್ ಅಭಿಮಾನಿಗಳು ಕಾತುರರಾಗಿ ಕಾಯುತ್ತಿದ್ದಾರೆ. https://ainlivenews.com/centres-one-nation-one-election-tvk-opposes-waqf-amendment-bill/ ಕೆಲವು ಫ್ರಾಂಚೈಸಿಗಳು ಬಿಸಿಸಿಐ ರೂಪಿಸಿದ್ದ ಧಾರಣ ನಿಯಮವನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದರೆ, ಇನ್ನು ಕೆಲವು ಫ್ರಾಂಚೈಸಿಗಳು ಕೆಲವೇ ಕೆಲವು ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡು, ಉಳಿದವರನ್ನು ತಂಡದಿಂದ ಬಿಡುಗಡೆ ಮಾಡಿದ್ದವು. ಇದೀಗ ಆ ಎಲ್ಲಾ ಫ್ರಾಂಚೈಸಿಗಳ ಕಣ್ಣು ಮೆಗಾ ಹರಾಜಿನತ್ತ ನೆಟ್ಟಿದೆ. ಏಕೆಂದರೆ ಮೆಗಾ ಹರಾಜಿನಲ್ಲಿ ತಂಡಕ್ಕೆ ಅವಶ್ಯಕವಾದ ಆಟಗಾರರನ್ನು ಖರೀದಿಸುವುದು ಈ ಫ್ರಾಂಚೈಸಿಗಳ ಪ್ರಮುಖ ಗುರಿಯಾಗಿದೆ. ಇದೀಗ ಐಪಿಎಲ್ ಮೆಗಾ ಹರಾಜಿಗೆ ಸಂಬಂಧಿಸಿದಂತೆ ದೊಡ್ಡ ಅಪ್‌ಡೇಟ್‌ ಹೊರಬಿದ್ದಿದ್ದು, ಬಿಸಿಸಿಐ ಈ ಬಾರಿಯ ಐಪಿಎಲ್ ಹರಾಜಿಗೆ ಸ್ಥಳವನ್ನು ಆಯ್ಕೆ ಮಾಡಿರುವುದಾಗಿ ವರದಿಯಾಗಿದೆ. ಐಪಿಎಲ್ 2025 ರ ಮೆಗಾ ಹರಾಜು ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ ನಡೆಯಲಿದೆ. ಕೆಲವೇ ದಿನಗಳ ಹಿಂದೆ, ಬಿಸಿಸಿಐ ಲಂಡನ್ ಅಥವಾ ಸೌದಿಯಲ್ಲಿ ಹರಾಜು ಆಯೋಜಿಸಬಹುದು ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗಿತ್ತು. ಆದರೆ ಇದೀಗ ಬಿಸಿಸಿಐ, ರಿಯಾದ್​ನಲ್ಲಿ ಹರಾಜು ನಡೆಸಲು ತೀರ್ಮಾನಿಸಿದೆ. ಇದೀಗ ಇದರ…

Read More

ಅಡುಗೆ ಮನೆಯಲ್ಲಿ ಬೇಕಾಗುವ ಮುಖ್ಯ ಪದಾರ್ಥಗಳಲ್ಲಿ ಒಂದು ಶುಂಠಿ. ಸಾಂಬಾರು, ಟೀ, ಸ್ನ್ಯಾಕ್ಸ್ ಹೀಗೆ ಹಲವು ಅಡುಗೆಗಳನ್ನು ತಯಾರಿಸುವಾಗಲೂ ಶುಂಠಿ ಮುಖ್ಯವಾಗಿ ಬೇಕಾಗುತ್ತದೆ. ಆದರೆ, ಶುಂಠಿಯ ಸಿಪ್ಪೆ ತೆಗೆಯುವ ಕೆಲಸ ಹಲವರಿಗೆ ತಲೆನೋವು. https://ainlivenews.com/will-there-be-a-change-of-cm-in-karnataka-what-did-minister-hc-mahadevappa-say/ ಎಲ್ಲಾ ವಿಧದ ಅಡುಗೆಗೂ ಶುಂಠಿ ಇರಲೇಬೇಕು. ಕೆಲವರಂತೂ ಶುಂಠಿ ಟೀಯನ್ನು ಇಷ್ಟ ಪಟ್ಟು ಸೇವಿಸುತ್ತಾರೆ. ಆದರೆ ಅಡುಗೆಗೆ ಬಳಸುವ ಮುನ್ನ ಇದರ ಸಿಪ್ಪೆ ಸುಲಿದು ಬಳಸುವುದು ಉತ್ತಮ. ಈ ಸಿಪ್ಪೆಯೂ ಅಂಟಿಕೊಂಡಿರುವುದರಿಂದ ಇದನ್ನು ಸುಲಿಯುವುದು ತುಂಬಾ ಕಿರಿಕಿರಿ ಉಂಟುಮಾಡುವ ಕೆಲಸವಾಗಿದೆ. ಎಳೆ ಶುಂಠಿಯ ಸಿಪ್ಪೆಯನ್ನು ಕೈ ಬೆರಳು ಸಹಾಯದಿಂದಲೇ ಸುಲಿಯ ಬಹುದು ಸಿಪ್ಪೆ ತೆಗೆಯಲು ಇಲ್ಲಿದೆ ಕೆಲವು ಟಿಪ್ಸ್. ಶುಂಠಿ ಮಣ್ಣಿನೊಳೆಗೆ ಬೆಳೆಯುವುದರಿಂದ, ಶುಂಠಿಯನ್ನು ಚೆನ್ನಾಗಿ ತೊಳೆದುಕೊಳ್ಳಿ. ಸ್ವಲ್ಪ ಸಮಯದವರೆಗೆ ಅದನ್ನು ನೀರಿನಲ್ಲಿ ನೆನೆ ಹಾಕಿದರೆ ಸುಲಭವಾಗಿ ಸಿಪ್ಪೆ ತೆಗೆಯಬಹುದು. ಚಾಕುವಿನಲ್ಲಿ ಸಿಪ್ಪೆ ತೆಗೆದರೆ ಶುಂಠಿಯ ಅರ್ಧ ಭಾಗವೇ ಸಿಪ್ಪೆಯೊಂದಿಗೆ ಹೋಗುತ್ತವೆ. ಹೀಗಾಗಿ ಇದರ ಸಿಪ್ಪೆ ತೆಗೆಯಲು ಸ್ಪೂನ್‌ ಬಳಸುವುದು ಉತ್ತಮ ಮಾರ್ಗವಾಗಿದೆ. ಚಮಚದ ಮುಂಭಾಗವನ್ನು…

Read More

ಚಿತ್ರನಟ ವಿಜಯ್ ದಳಪತಿ ಅವರ ರಾಜಕೀಯ ಪ್ರವೇಶದ ಬಗ್ಗೆ ತಮಿಳುನಾಡು ಈಗಾಗಲೇ ಬಿಸಿ ವಿಷಯವಾಗಿದೆ. ತಮಿಳುನಾಡಿನಲ್ಲಿ ಅಕ್ಟೋಬರ್ 27 ರಂದು ಆಯೋಜಿಸಿದ್ದ ಸಮಾವೇಶಕ್ಕೆ ಅಪಾರ ಜನಸ್ತೋಮ ಸೇರಿತ್ತು. ತಮಿಳಗ ವೆಟ್ರಿ ಕಳಗಂ ಹೆಸರಿನಲ್ಲಿ ಹುಟ್ಟು ಹಾಕಿರುವ ಪಕ್ಷದ ಸಾರ್ವಜನಿಕ ಸಭೆಯ ಯಶಸ್ಸು ಮುಂದಿನ ದಿನಗಳಲ್ಲಿ ತಮಿಳುನಾಡಿನ ಜನತೆ ಹೇಗೆ ಬೆಂಬಲಿಸುತ್ತಾರೆ ಎಂಬುದಕ್ಕೆ ನಿದರ್ಶನ. 5 ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದರು. ಸಕ್ಸಸ್​ಪುಲ್ ಆಗಿ ಇದು ನೆರವೇರಿತ್ತು. ಇನ್ನೂ ರಾಜಕಾರಣಿ ವಿಜಯ್ ದಳಪತಿ ಅವರ ಪಕ್ಷ ತಮಿಳಗ ವೆಟ್ರಿ ಕಳಗಂ ಬಿಜೆಪಿಯ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಯೋಜನೆ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದೆ. ‘ಒಂದು ರಾಷ್ಟ್ರ, ಒಂದು ಚುನಾವಣೆ’ ಯೋಜನೆಯು ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆ ತತ್ವಗಳಿಗೆ ವಿರುದ್ಧವಾಗಿದೆ ಎಂದು ಟಿವಿಕೆ ನಿರ್ಣಯದಲ್ಲಿ ಉಲ್ಲೇಖಿಸಿದೆ. https://ainlivenews.com/good-news-for-farmers-if-you-deposit-%e2%82%b955-in-this-scheme-you-will-get-a-pension-of-%e2%82%b93000-per-month-apply-today/ ಪಕ್ಷವು ನೀಟ್ ವಿಚಾರದಲ್ಲಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ. ಶಿಕ್ಷಣವನ್ನು ರಾಜ್ಯ ಪಟ್ಟಿಗೆ ತರಬೇಕೆಂದು ಒತ್ತಾಯಿಸಿದೆ. ರಾಜ್ಯ ಸ್ವಾಯತ್ತ ನೀತಿಯ ನಮ್ಮ ಬೇಡಿಕೆಯ ಪ್ರಕಾರ, ಶಿಕ್ಷಣವು ರಾಜ್ಯ…

Read More

ಬೆಂಗಳೂರು:- ಕರ್ನಾಟಕದಲ್ಲಿ ಸಿಎಂ ಬದಲಾವಣೆ ಕುರಿತಾದ ವನಂತಿಗೆ ಸಚಿವ HC ಮಹದೇವಪ್ಪ ಪ್ರತಿಕ್ರಿಯೆ ಕೊಟ್ಟಿದ್ದಾರೆ. https://ainlivenews.com/nda-candidate-nikhil-pro-parishad-mla-ta-sharavana-poll/ ಈ ಸಂಬಂಧ ಮಾತನಾಡಿದ ಅವರು,ಸಿದ್ದರಾಮಯ್ಯ ಇರುವವರೆಗೂ ಸಿಎಂ ಬದಲಾವಣೆ ಚರ್ಚೆಯೇ ಇಲ್ಲ. 136 ಸ್ಥಾನ ನಾವು ಇದ್ದೇವೆ. ಒಂದು ಸ್ಥಾನಕ್ಕೆ ಈಗ ಚುನಾವಣೆ ನಡೆಯುತ್ತಿದೆ. ಒಂದು ಸ್ಥಾನದಿಂದ ಸಿಎಂ ಸ್ಥಾನಕ್ಕೆ ಯಾಕೆ ಪರಿಣಾಮ ಬೀರುತ್ತದೆ. ಮುಖ್ಯಮಂತ್ರಿ ಸ್ಥಾನ ಯಾಕೆ ಅಲ್ಲಾಡುತ್ತದೆ. ಕೋಳಿವಾಡ ಹೇಳಿಕೆ ಅವರ ವೈಯಕ್ತಿಕ. ಹರಿಯಾಣ ಸೋಲಿಗೆ ಬೇರೆ ಕಾರಣ ಇದೆ. ಸಿಎಂ ಬದಲಾವಣೆ ಚರ್ಚೆಯೇ ಇಲ್ಲ ಎಂದರು. ಸಿದ್ದರಾಮಯ್ಯ ಇರುವವರೆಗೂ ಸಿಎಂ ಬದಲಾವಣೆಯ ಯಾವುದೇ ಮಾತು ಇಲ್ಲ. ಕಾಂಗ್ರೆಸ್ ಮುಂದೆ ಸಿಎಂ ಬದಲಾವಣೆ ವಿಷಯ ಇಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಅವರೇ ಮುಂದುವರೆಯತ್ತಾರೆ ಎಂದು ಸ್ಪಷ್ಟಪಡಿಸಿದರು.

Read More

ಬೆಂಗಳೂರು: ರಾಜ್ಯದಲ್ಲಿ ಮೂರು ಕ್ಷೇತ್ರಗಳ ಉಪ ಕದನ ರಂಗೇರಿದೆ. ಚನ್ನಪಟ್ಟಣ ಗೆದ್ದು ಮೊದಲ ಬಾರಿಗೆ ಶಾಸಕನಾಗಲು ಹಂಬಲಿಸುತ್ತಿರುವ NDA ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ವಿಧಾನ ಪರಿಷತ್ ಸದಸ್ಯರಾದ ಟಿ.ಎ ಶರವಣ ಅವರು ಮತಯಾಚನೆ ಮಾಡಿದ್ದಾರೆ. ಹೌದು ಉಪ ಕದನದ ಅಖಾಡ ರಂಗೇರಿದೆ. ಅಭ್ಯರ್ಥಿಗಳು ಕಣಕ್ಕಿಳಿದಾಗಿದೆ.. ಗೆಲುವಿನ ಲೆಕ್ಕಾಚಾರವೂ ಜೋರಾಗಿದೆ. ಮೂರು ದಿಕ್ಕು, ಮೂರು ಕ್ಷೇತ್ರದ ಉಪ ಕದನ.. ಕಾಂಗ್ರೆಸ್ಗೆ ಅಗ್ನಿಪರೀಕ್ಷೆ, ಬಿಜೆಪಿಗೆ ಪ್ರತಿಷ್ಠೆ, ದಳಕ್ಕೆ ಅಸ್ತಿತ್ವದ ಹೋರಾಟ. ಈ ಮಧ್ಯೆ ವಿಧಾನ ಪರಿಷತ್ ಸದಸ್ಯರಾದ ಟಿ.ಎ ಶರವಣ ಅವರು ಕ್ರಿಶ್ಚಿಯನ್ ಸಮುದಾಯ ಮುಖಂಡರ ಜೊತೆ ಮತಯಾಚನೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಟಿ.ಎ ಶರವಣ ಅವರು, ಬಿಜೆಪಿ, ಜೆಡಿಎಸ್ ನಾಯಕರು ಒಂದಾಗಿ ನಿಖಿಲ್ ರವರಿಗೆ NDA ಟಿಕೆಟ್ ನೀಡಿದ್ದೇವೆ. ನಿಖಿಲ್ ರವರನ್ನು ಗೆಲ್ಲಿಸುವ ಮೂಲಕ ಕುಮಾರಸ್ವಾಮಿರವರ ಕೈ ಬಲಪಡಿಸಬೇಕಾಗಿದೆ. ಚನ್ನಪಟ್ಟಣ ಕ್ಷೇತ್ರಕ್ಕೆ ನಿಖಿಲ್ ಒಳ್ಳೆಯ ಅಭ್ಯರ್ಥಿಯಾಗಿದ್ದಾರೆ. ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಟಿ.ಎ ಶರವಣ…

Read More

ಬೆಂಗಳೂರು:- ವಕ್ಫ್ ಭೂ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ವಕ್ಫ್ ಮಸೂದೆ 2024 ರ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರಿಗೆ ವಿಪಕ್ಷ ನಾಯಕ ಆರ್​ ಅಶೋಕ್​ ಪತ್ರ ಬರೆದಿದ್ದಾರೆ. https://ainlivenews.com/need-to-learn-from-you-that-perversity-can-be-seen-even-in-death-jagdeesh-a-fierce-lawyer-against-jaggesh/ ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಮತ್ತು ವಕ್ಫ್‌ ಮಂಡಳಿಯು ಕಂದಾಯ ದಾಖಲೆಗಳನ್ನು ತಿದ್ದುವ ಹಾಗೂ ರೈತರ ಜಮೀನುಗಳ ಮಾಲೀಕತ್ವ ವರ್ಗಾಯಿಸಿಕೊಳ್ಳುವ ಪ್ರಯತ್ನ ಆರಂಭವಾಗಿದೆ. ಈ ರೀತಿ ತರಾತುರಿಯಲ್ಲಿ ಜಮೀನುಗಳನ್ನು ವಕ್ಫ್​​ ಮಂಡಳಿ ನೋಂದಾಯಿಸಿಕೊಳ್ಳುತ್ತಿರುವ ಪರಿಣಾಮ ಸಾವಿರಾರು ಬಡವರು ಹಾಗೂ ರೈತರು ವಂಶಪಾರಂಪರ್ಯವಾಗಿ ಬಂದ ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ 15,000 ಎಕರೆ ಜಮೀನನ್ನು ವಶಪಡಿಸಿಕೊಳ್ಳಲು ನೋಟಿಸ್‌ ನೀಡಲಾಗಿದೆ ಎಂದು ನೂರಾರು ರೈತರು ಹೇಳಿದ ಬಳಿಕ ಈ ಸಂಗತಿ ಬೆಳಕಿಗೆ ಬಂದಿದೆ. ಎಲ್ಲಾ ಜಿಲ್ಲೆಗಳಲ್ಲಿ ತಲಾ 10,000 ಎಕರೆ ಜಮೀನನ್ನು ವಕ್ಫ್​ ನೋಂದಣಿ ಮಾಡಿಕೊಳ್ಳುವ ಪ್ರಯತ್ನ ಮಾಡಿದೆ ಎಂದು ಹೇಳಲಾಗಿದೆ. ವಕ್ಫ್​ ಮಂಡಳಿಯು ದೇವಸ್ಥಾನ, ಮಠ ಹಾಗೂ ಇತರೆ ಹಿಂದೂ ಧಾರ್ಮಿಕ ಸಂಸ್ಥೆಗಳ…

Read More

ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದೆ. ಸ್ಪಿನ್ನರ್​​​ಗಳ ಮುಂದೆ ಟೀಮ್​ ಇಂಡಿಯಾದ ವೀರಾಧಿವೀರರು ಮಕಾಡೆ ಮಲಗಿದ್ದಾರೆ. https://ainlivenews.com/left-arm-spinners-who-wrote-a-new-record-in-the-test-match-against-new-zealand/ ನ್ಯೂಜಿಲೆಂಡ್​ ಪ್ರವಾಸದ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್​ ಇಂಡಿಯನ್​ ಬ್ಯಾಟರ್ಸ್​ ಸಾಮರ್ಥ್ಯ ಪೇಸ್​ ಅಟ್ಯಾಕ್​​ ಎದುರು ಬಟಾಬಯಲಾಗಿತ್ತು. ಚಿನ್ನಸ್ವಾಮಿ ಮೈದಾನದಲ್ಲಿ ಸೋಲುಂಡ ಬಳಿಕ ಪುಣೆ ಹಾಗೂ ವಾಂಖೆಡೆ ಪಿಚ್​​ನಲ್ಲೇ ಹೊಸ ಗೇಮ್​​ ಆಡಿದ ಟೀಮ್​ ಮ್ಯಾನೇಜ್​ಮೆಂಟ್​ ಸ್ಪಿನ್​ ಟ್ರ್ಯಾಕ್​ ಮೊರೆ ಹೋಗಿತ್ತು. ಅಂತಿಮವಾಗಿ ತಾವೇ ತೋಡಿದ ಹಳ್ಳಕ್ಕೆ ಟೀಮ್​ ಇಂಡಿಯಾ ಬಿತ್ತು. ಪೇಸ್​​ ಟ್ರ್ಯಾಕ್​​ನಲ್ಲಿ ಮುಗ್ಗರಿಸಿದ್ದ ಟೀಮ್​ ಇಂಡಿಯಾ 2 ಮತ್ತು 3ನೇ ಟೆಸ್ಟ್​​ನಲ್ಲಿ ಸ್ಪಿನ್​​ ಟ್ರ್ಯಾಕ್ ನಿರ್ಮಿಸಿ ಕಣಕ್ಕಿಳಿಯಿತು. ಆದ್ರೆ, ತಾವೇ ತೋಡಿದ ಹಳ್ಳಕ್ಕೆ ಟೀಮ್​ ಇಂಡಿಯಾ ಆಟಗಾರರು ಬಿದ್ರು. ಪುಣೆಯಲ್ಲಿ ನಡೆದ 2ನೇ ಟೆಸ್ಟ್​ನಲ್ಲಿ ಎರಡೂ ಇನ್ನಿಂಗ್ಸ್​ ಸೇರಿ 18 ವಿಕೆಟ್​ಗಳನ್ನ ಟೀಮ್​ ಇಂಡಿಯಾ ಕಳೆದುಕೊಳ್ತು. ಇನ್ನು, ಮುಂಬೈನಲ್ಲೂ 16 ವಿಕೆಟ್​ಗಳನ್ನ ಸ್ಪಿನ್ನರ್​ಗಳಿಗೆ ಟೀಮ್​ ಇಂಡಿಯಾ ಬ್ಯಾಟರ್ಸ್​ ಒಪ್ಪಿಸಿದ್ರು. ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್ ಸರಣಿಯಲ್ಲಿ…

Read More

ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಎಡಗೈ ಸ್ಪಿನ್ನರ್ ಗಳು ಹೊಸ ಇತಿಹಾಸ ಬರೆದಿದ್ದಾರೆ. https://ainlivenews.com/there-are-no-rowdies-here-there-are-no-pudars-everyone-is-a-farmer-vijayendras-statement-to-bellary-collector/ ಭಾರತ ಮತ್ತು ನ್ಯೂಝಿಲೆಂಡ್ ಟೆಸ್ಟ್​ ಪಂದ್ಯವೊಂದರ ನಾಲ್ಕು ಇನಿಂಗ್ಸ್​ಗಳಲ್ಲಿ ಐದೈದು ವಿಕೆಟ್​ ಕಬಳಿಸಿದ ಎಡಗೈ ಸ್ಪಿನ್ನರ್​ಗಳು ಕೇವಲ ಇಬ್ಬರು. ಅವರೇ ರವೀಂದ್ರ ಜಡೇಜಾ ಹಾಗೂ ಎಜಾಝ್ ಪಟೇಲ್. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ 65 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ನ್ಯೂಝಿಲೆಂಡ್ ಎಡಗೈ ಸ್ಪಿನ್ನರ್ ಎಜಾಝ್ ಪಟೇಲ್ 103 ರನ್ ನೀಡಿ 5 ವಿಕೆಟ್ ಪಡೆದಿದ್ದರು. ಇನ್ನು ಎರಡನೇ ಇನಿಂಗ್ಸ್​ನಲ್ಲಿ ರವೀಂದ್ರ ಜಡೇಜಾ 55 ರನ್ ನೀಡಿ 5 ವಿಕೆಟ್ ಪಡೆದರೆ, ಎಜಾಝ್ ಪಟೇಲ್ 57 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು. ಇದರೊಂದಿಗೆ ಟೆಸ್ಟ್ ಪಂದ್ಯವೊಂದರ 4 ಇನಿಂಗ್ಸ್​ಗಳಲ್ಲಿ 5 ವಿಕೆಟ್​ ಪಡೆದ ಎಡಗೈ ಸ್ಪಿನ್ನರ್​ಗಳೆಂಬ ವಿಶೇಷ ದಾಖಲೆ ಎಜಾಝ್ ಪಟೇಲ್…

Read More

ಬಳ್ಳಾರಿ: ಇಲ್ಲಿ ಯಾರೂ ರೌಡಿಗಳಿಲ್ಲ, ಪುಡಾರಿಗಳೂ ಇಲ್ಲ ಎಲ್ಲರೂ ರೈತರೇ ಬನ್ನಿ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಕರೆದ ಘಟನೆ ನೆಡೆಯಿತು. ಬಳ್ಳಾರಿ ಜಿಲ್ಲಾ ಕೇಂದ್ರದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡ ವಕ್ಫ ಆಸ್ತಿ ನೋಂದಣಿ ವಿರೋಧಿ‌ ಪ್ರತಿಭಟನೆಯಲ್ಲಿ ಹೀಗೆ ನಡೆಯಿತು. https://ainlivenews.com/good-news-for-farmers-if-you-deposit-%e2%82%b955-in-this-scheme-you-will-get-a-pension-of-%e2%82%b93000-per-month-apply-today/ ಎಲ್ಲ ಮುಖಂಡರ ಮಾತು ಮುಗಿದ ಬಳಿಕ ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿ ಆಗಮಿಸಿದಾಗ ಮಹಾತ್ಮ ಗಾಂಧಿ ಪ್ರತಿಮೆ ಇರುವ ಉದ್ಯಾನವನದ ಕಟ್ಟೆ ಮೇಲೆ ವಿಜಯೇಂದ್ರ ಸೇರಿ ಇತರೆ ಮುಖಂಡರು ಇದ್ದರು. ಮನವಿ ನೀಡಲು ಕೆಳಗೆ ಬನ್ನಿ ಎಂದು ಪೊಲೀಸರು ಬಿಜೆಪಿ ‌ನಾಯಕರಿಗೆ ಹೇಳಿದರು. ಈ ವೇಳೆ ಪ್ರತಿಕ್ರಿಯಿಸಿದ ವಿಜಯೇಂದ್ರ ಅವರು ಇಲ್ಲಿ‌‌ ಯಾರು ರೌಡಿಗಳು ಇಲ್ಲ. ಪುಡಾರಿಗಳು ಇಲ್ಲ. ಎಲ್ಲ ರೈತರೇ ಇರುವುದು ಬನ್ನಿ ಎಂದರು. ಈ ವೇಳೆ ನೆರೆದವರೆಲ್ಲ ಕೇಕೆ ಹಾಕಿದರು.

Read More

ಬೆಂಗಳೂರು:- ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕದಾದ್ಯಂತ ಬಿಜೆಪಿ ಪ್ರತಿಭಟನೆಗೆ ಕರೆ ಕೊಟ್ಟಿದೆ. ಬೆಂಗಳೂರಿನಲ್ಲೂ ಕೆ.ಆರ್ ಪುರಂ ಬಿಬಿಎಂಪಿ ಕಚೇರಿ ಎದುರು ವಿಪಕ್ಷ ನಾಯಕ ಆರ್‌. ಅಶೋಕ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಮಾಜಿ ಸಚಿವರಾದ ಬೈರತಿ ಬಸವರಾಜು, ಸಪ್ತಗಿರಿ ಗೌಡ, ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದಾರೆ. https://ainlivenews.com/great-paying-job-in-tirupati-eligible-apply-soon/ ಇದೇ ವೇಳೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಆರ್.ಅಶೋಕ್‌, ಲವ್ ಜಿಹಾದ್ ಮಾಡಿ ಹಿಂದೂ ಹೆಣ್ಮಕ್ಕಳನ್ನ ಮತಾಂತರ ಮಾಡಿಯಾಯ್ತು. ಈಗ ಲ್ಯಾಂಡ್‌ ಜಿಹಾದ್‌ ಮೂಲಕ ರೈತರ ಜಮೀನನ್ನು ಕನ್ವರ್ಷನ್ ಮಾಡ್ತಿದ್ದಾರೆ ಎಂದು ಕಿಡಿ ಕಾರಿದರು. ರಾಜ್ಯ ಸರ್ಕಾರ ಅನ್ನದಾತರ ತಲೆ ಮೇಲೆ ಚಪ್ಪಡಿಕಲ್ಲು ಎಳೆದಿದೆ. ಜಮೀರ್ ರೈತರ ಜಮೀನು ಕಬಳಿಕೆಗೆ ಮುಂದಾಗಿದ್ದಾರೆ. ರೈತರ ಜಮೀನು ಕಬಳಿಸಲು ಹುನ್ನಾರ ನಡೆದಿದೆ. 1974 ರಲ್ಲಿ ಆವತ್ತಿನ ಕಾಂಗ್ರೆಸ್ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ, ಇದು ರದ್ದಾಗಬೇಕು. ಈ ನೋಟಿಫಿಕೇಷನ್ ಮುಸಲ್ಮಾನರ ಓಲೈಕೆಗಾಗಿ ಮಾಡಲಾಗಿದೆ. ಸಿದ್ದರಾಮಯ್ಯ ಎಲ್ಲ ಪ್ರಕ್ರಿಯೆ ಸ್ಥಗಿತ ಮಾಡಿದ್ದೀವಿ…

Read More