ಬೆಂಗಳೂರು:- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಲಾಕ್ ಆಗಿದ್ದ ನಟ ದರ್ಶನ್ ಈಗ ಆಸ್ಪತ್ರೆ ಪಾಲಾಗಿದ್ದಾರೆ. ಬೆನ್ನು ನೋವು ಅಂತಾ ಮಧ್ಯಂತರ ಜಾಮೀನು ಪಡೆದು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ದಾಸನಿಗೆ ಆಗಿರೋ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ವೈದ್ಯರು ಸಾಲುಸಾಲು ವೈದ್ಯಕೀಯ ಪರೀಕ್ಷೆ ನಡೆಸುತ್ತಿದ್ದಾರೆ. ನಿನ್ನೆಯಿಂದಲೂ ಅನೇಕ ಸ್ಕ್ಯಾನಿಂಗ್, ಟೆಸ್ಟ್ ನಡೆಸುತ್ತಿದ್ದು ಅದರ ರಿಪೋರ್ಟ್‌ಗಳು ಕೂಡ ಒಂದೊಂದಾಗಿ ವೈದ್ಯರ ಕೈ ಸೇರ್ತಿವೆ.. https://ainlivenews.com/note-if-yours-is-4g-mobile-follow-this-trick-to-get-net-speed-like-5g/ ಬಳ್ಳಾರಿ ಜೈಲಿನಲ್ಲಿ ಕಷ್ಟದ ದಿನಗಳನ್ನು ಅನುಭವಿಸಿ, ಆರೋಗ್ಯ ಸಮಸ್ಯೆ ಕಾರಣ ಹೇಳಿದ್ದ ದರ್ಶನ್ ತೂಗುದೀಪ್ ಅವರು ರಿಲೀಸ್ ಆಗಿದ್ದಾರೆ. ಹೀಗೆ ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿ ಹೊರಗೆ ಬಂದಿದ್ದರೂ ದರ್ಶನ್ ತೂಗುದೀಪ್ ಅವರ ಜೀವನ ಮತ್ತಷ್ಟು ಸಂಕಷ್ಟಕ್ಕೆ ಇದೀಗ ಸಿಲುಕಿದೆ. ಯಾಕಂದ್ರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಆರೋಗ್ಯ ಸಮಸ್ಯೆ ಹೆಚ್ಚಾಗಿ ವಿಲವಿಲ ಒದ್ದಾಡುತ್ತಿದ್ದಾರೆ. ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ನಟನ ಬಿಟ್ಟು ಕೊಡಲ್ಲ ಎಂಬುದು ಮತ್ತೆ ಮತ್ತೆ ಸಾಬೀತು ಆಗುತ್ತಿದೆ.…
Author: AIN Author
ಇತ್ತೀಚಿನ ದಿನಗಳಲ್ಲಿ ಮೊಬೈಲ್ಗಳ ಬಳಕೆ ವ್ಯಾಪಕವಾಗಿ ಹಬ್ಬಿದೆ. ಅದೇ ರೀತಿ ಇಂಟರ್ನೆಟ್ ಅನ್ನು ಬಳಕೆ ಮಾಡುವವರು ಸಹ ಹೆಚ್ಚಾಗಿದ್ದಾರೆ. ಆದರೆ ಕೆಲವೊಂದು ಸಂದರ್ಭದಲ್ಲಿ ಈ ಇಂಟರ್ನೆಟ್ಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಸ್ಮಾರ್ಟ್ಫೋನ್ ಬಳಕೆದಾರರಲ್ಲಿ ಮುಖ್ಯವಾಗಿ ಕಾಣುವ ಸಮಸ್ಯೆಯೆಂದರೆ ನೆಟ್‌ವರ್ಕ್ ಸಮಸ್ಯೆ. ಎಷ್ಟೇ ಡೇಟಾ ಪ್ಯಾಕ್ ಇದ್ದರೂ ಕೆಲವೊಮ್ಮೆ ಇಂಟರ್ನೆಟ್ ಸ್ಪೀಡ್ ಇರೋದೆ ಇಲ್ಲ https://ainlivenews.com/is-india-responsible-for-increasing-air-pollution-in-lahore-what-is-the-accusation-of-the-minister-of-pakistan/ 4G ಫೋನ್‌ನಲ್ಲಿ ಕೆಲವೊಂದು ಬಾರಿ ಸರಿಯಾಗಿ ರೀತಿಯಲ್ಲಿ ಅಥವಾ ವೇಗದ ಇಂಟರ್ನೆಟ್ ಸಿಗುವುದಿಲ್ಲ. ಇದಕ್ಕೆ ಕಾರಣವೇನು?. ಇದಕ್ಕೆಲ್ಲ ನಿಜವಾದ ಸಮಸ್ಯೆ ನಿಮ್ಮ ಫೋನ್‌ನಲ್ಲಿ ಅಡಗಿರುತ್ತದೆ. ಈ ಟ್ರಿಕ್ ಫಾಲೋ ಮಾಡಿದ್ರೆ ನಿಮ್ಮ 4G ಫೋನ್ ಕೂಡ ಸೂಪರ್‌ಫಾಸ್ಟ್ 5G ಸ್ಪೀಡ್ನಲ್ಲಿ ಇಂಟರ್ನೆಟ್ ಕೆಲಸ ಮಾಡುತ್ತದೆ. ಫೋನ್‌ನಲ್ಲಿ ಇಂಟರ್ನೆಟ್ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ನೆಟ್‌ವರ್ಕ್ ಪರಿಶೀಲಿಸುವುದು ಬಹಳ ಮುಖ್ಯ. ವಿಶೇಷವಾಗಿ ನೀವು 4G ಹೊಂದಿದ್ದರೆ, ಆದರೆ ಸರಿಯಾಗಿ ನೆಟ್‌ವರ್ಕ್ ಇರದ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ನೆಟ್‌ವರ್ಕ್ ಬೂಸ್ಟರ್ ಅನ್ನು ಬಳಸುವುದು ಉತ್ತಮ ಆಯ್ಕೆ. ಹಲವಾರು ಅನಗತ್ಯ ಅಪ್ಲಿಕೇಶನ್‌ಗಳು ಫೋನ್ ಮತ್ತು ಇಂಟರ್ನೆಟ್…
ಬಳ್ಳಾರಿ: ವಾಲ್ಮೀಕಿ ನಿಗಮದ ಹಗರಣದಲ್ಲಿ ಪಾಲು ಕೇವಲ ಮಾಜಿ ಸಚಿವ ಬಿ ನಾಗೇಂದ್ರ ಅವರಿಗೆ ಮಾತ್ರ ಹೋಗಿಲ್ಲ. ಅದರಲ್ಲಿ ಒಂದಷ್ಟು ಪಾಲು ಬಳ್ಳಾರಿ ಸಂಸದ ಇ ತುಕಾರಾಂ ಅವರಿಗೂ ಹೋಗಿದೆ ಎಂದು ಮಾಜಿ ಸಚಿವ ಬಿ ಶ್ರೀರಾಮುಲು ಅವರ ಹೇಳಿಕೆಗೆ ಸಂಡೂರು ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು ತಿರುಗೇಟು ನೀಡಿದ್ದಾರೆ. https://ainlivenews.com/good-news-for-farmers-if-you-deposit-%e2%82%b955-in-this-scheme-you-will-get-a-pension-of-%e2%82%b93000-per-month-apply-today/ ತುಕಾರಾಂ ಅವರ ಮೇಲೆ ಶ್ರೀರಾಮುಲು ಅವರು ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ತುಕಾರಾಂ ತಮ್ಮ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಇದ್ದವರು. ಸೋಲಿನ ಹತಾಶೆಯಲ್ಲಿ ಹೇಳಿಕೆ ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಶ್ರೀರಾಮುಲು ಮಾಡ್ತಾ ಇದ್ದಾರೆ. ಇದರಿಂದ ಏನೂ ಪ್ರಯೋಜನ ಆಗುವುದಿಲ್ಲ. ತುಕಾರಾಂ ಅವರು ಕುಟುಂಬ ರಾಜಕಾರಣ ಮಾಡ್ತಾ ಇದ್ದಾರೆ ಎಂಬ ಶ್ರೀರಾಮುಲು ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅನ್ನಪೂರ್ಣ ಅವರು, ಇಷ್ಟು ದಿನ ರೆಡ್ಡಿ ಅಂಡ್ ಗ್ಯಾಂಗ್ ಏನು ಮಾಡಿತು..? ಎಂಬುದು ಜನರಿಗೆ ತಿಳಿದಿದೆ. ರಾಮುಲು ಮನೆಯಲ್ಲಿ ಶಾಂತ,…
ಚಾಮರಾಜನಗರ: ಶಾಲಾ ಪ್ರವಾಸ ಬಸ್ ಡಿಕ್ಕಿಯಾಗಿ ಪಾದಾಚಾರಿ ವೃದ್ದ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ರಾಘವಾಪುರ ಬಳಿ ನಡೆದಿದೆ. ನಂಜನಗೂಡು ತಾಲೂಕಿನ ಹುರ ಗ್ತಾಮದ ಗೋಪಾಲಕೃಷ್ಣ ಮೃತ ವ್ಯಕ್ತಿಯಾಗಿದ್ದು, ಕೇರಳದಿಂದ ಮೈಸೂರಿನತ್ತ ತೆರಳುತ್ತಿದ್ದ ಶಾಲಾ ಬಸ್ ಡಿಕ್ಕಿ ಹೊಡೆದಿದೆ. https://ainlivenews.com/good-news-for-farmers-if-you-deposit-%e2%82%b955-in-this-scheme-you-will-get-a-pension-of-%e2%82%b93000-per-month-apply-today/ ಡಿಕ್ಕಿ ರಭಸಕ್ಕೆ ಪಾದಾಚಾರ ಸ್ಥಳದಲ್ಲಿಯೇ ದುರ್ಮರಣ ಹೊಂದಿದ್ದಾರೆ. ಸಿಸಿ ಕ್ಯಾಮಾರದಲ್ಲಿ ಅಪಘಾತದ ಭೀಕರ ದೃಶ್ಯ ಸೆರೆಯಾಗಿದ್ದು, ಘಟನಾ ಸ್ಥಳಕ್ಕೆ ಬೇಗೂರು ಪೋಲೀಸ್ ಠಾಣೆ ಪೋಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಬೇಗೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಹುಬ್ಬಳ್ಳಿ: ರೈತರ ಹಾಗೂ ಹಿಂದುಗಳು ಆಸ್ತಿಯಲ್ಲಿ ವಕ್ಪ್ ಹೆಸರು ತೆಗೆದು ಹಾಕುವವರೆ ನಮ್ಮ ಹೋರಾಟ ನಿರಂತರವಾಗಿ ಇರುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಸ್ಪಷ್ಟಪಡಿಸಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ವಕ್ಪ್ ಆಸ್ತಿಯಲ್ಲಿ ರೈತರಿಗೆ ನೋಟೀಸ್ ನೀಡಿದಂತೆ ಸಿಎಂ ಆದೇಶ ವಿಚಾರವಾಗಿ ಮಾತನಾಡಿದ ಅವರುರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಲ್ಲ ನಂತರ ಅಲ್ಪಸಂಖ್ಯಾತರ ತುಷ್ಟೀಕರಣ ಹೆಚ್ಚಾಗಿದ್ದು ಅಲ್ಪಸಂಖ್ಯಾತರ ತುಷ್ಟೀಕರಣವನ್ನ ಪರಮೋಚ್ಚ ಸ್ಥಾನಕ್ಕೆ ಹೊಯ್ಯಲಾಗಿದೆ.ರಾಜ್ಯದಿಂದ ವಿಶೇಷ ತಂಡ ವತಿಯಿಂದ ವಿಜಯಪುರಕ್ಕೆ ರೈತರನ್ನ ಜನರನ್ನ ಬಿಜೆಪಿ ಭೇಟಿ ಮಾಡಿತು ಆ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಏನು ಮಾಡಿದ ಬಗ್ಗೆ ಹೋರಾಟ ನಡೆಸಲಾಯಿತು. ಇದಕ್ಕೋ ಮೊದಲು ಅಲ್ಲಿ ಮಸಚಿವ ಜಮೀರ್ ಅಹ್ಮದ್ ಖಾನ್ ಅಧಿಕಾರಗಳ ಸಭೆ ನಡೆಸಿದರು. https://ainlivenews.com/good-news-for-farmers-if-you-deposit-%e2%82%b955-in-this-scheme-you-will-get-a-pension-of-%e2%82%b93000-per-month-apply-today/ ಕೇವಲ15 ದಿನಗಳಲ್ಲಿ ವಕ್ಪ್ ಆಸ್ತಿಯಲ್ಲಿ ಹೆಸರು ನೊಂದಾಯಿಸಲು ತಾಕೀತು ಮಾಡಿದರು ಇದರಲ್ಲಿ ಮುಖ್ಯಮಂತ್ರಿಗಳ ಮೌಖಿಕ ಸೂಚನೆ ಮೇರೆಗೆ ವಕ್ಪ್ ಆಸ್ತಿ ನೋಂದಣಿ ಪ್ರಕ್ರಿಯೆ ನಡೆಸಲಾಗುತ್ತಿದೆ…
ಲಾಹೋರ್: ಪಾಕಿಸ್ತಾನದ ಎರಡನೇ ಅತೀ ದೊಡ್ಡ ನಗರವಾದ ಲಾಹೋರ್ ಮತ್ತೊಮ್ಮೆ ವಿಶ್ವದ ಅತ್ಯಂತ ಕಲುಷಿತ ನಗರ ಎಂದು ಹೆಸರಿಸಲ್ಪಟ್ಟಿದೆ. ವಾಯುಮಾಲಿನ್ಯ ಮತ್ತಷ್ಟು ಹದಗೆಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸರಕಾರಕ್ಕೆ ಸೂಚಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್, ಎಲ್ಲಾ ಮಾರುಕಟ್ಟೆ, ಅಂಗಡಿ, ಉಪಾಹಾರ ಗೃಹ ಹಾಗೂ ಇತರ ಸಂಸ್ಥೆಗಳನ್ನು ರಾತ್ರಿ 10ರೊಳಗೆ ಮುಚ್ಚುವಂತೆ ಸೂಚಿಸಿದೆ. https://ainlivenews.com/are-you-sleepy-at-night-if-so-stop-these-foods-today/ ಇನ್ನೂ ವಾಯುಮಾಲಿನ್ಯದ ಮಟ್ಟದ ಹಠಾತ್ ಹೆಚ್ಚಳಕ್ಕೆ ಪಾಕಿಸ್ತಾನದ ಸಚಿವರು ಭಾರತವನ್ನು ದೂಷಿಸಲು ಪ್ರಾರಂಭಿಸಿದ್ದಾರೆ. ಹಿರಿಯ ಸಚಿವ ಮರಿಯುಮ್ ಔರಂಗಜೇಬ್ ಭಾರತದಿಂದ ಪಾಕಿಸ್ತಾನಕ್ಕೆ ಬರುತ್ತಿರುವ ಹೊಗೆಯ ಬಗ್ಗೆ ತಮ್ಮ ದೇಶದ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಇನ್ನೂ ಕನಿಷ್ಠ ಒಂದು ವಾರದವರೆಗೆ ಗಾಳಿಯು ಲಾಹೋರ್ ಕಡೆಗೆ ಬೀಸಲಿದೆ ಎಂದು ಹೇಳಿದ್ದಾರೆ. ಇನ್ನೂ ಪಾಕಿಸ್ತಾನದ ಎರಡನೇ ಅತಿದೊಡ್ಡ ನಗರವಾದ ಲಾಹೋರ್ ಭಾನುವಾರ ದಟ್ಟವಾದ ಹೊಗೆಯಿಂದ ಆವೃತವಾಗಿತ್ತು. ಏಕೆಂದರೆ ವಾಯು ಗುಣಮಟ್ಟ ಸೂಚ್ಯಂಕವು 1,067ಕ್ಕೆ ತಲುಪಿತ್ತು. ಸ್ವಿಜರ್ಲೆಂಡ್ ಮೂಲದ ವಾಯು ಗುಣಮಟ್ಟದ ವಾಚ್‌ಡಾಗ್ IQAir…
ಹುಬ್ಬಳ್ಳಿ: ಶಿಗ್ಗಾವಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಕೈಗೊಳ್ಳಬೇಕಾದ ಯೋಜನೆಗಳ ಕುರಿತು ಚರ್ಚಿಸಲು ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಸಚಿವ ಈಶ್ವರ ಖಂಡ್ರೆ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರ ಸಭೆ ನಡೆಯಿತು. https://ainlivenews.com/good-news-for-farmers-if-you-deposit-%e2%82%b955-in-this-scheme-you-will-get-a-pension-of-%e2%82%b93000-per-month-apply-today/ ಉಪ ಚುನಾವಣೆ ಉಸ್ತುವಾರಿ, ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ, ಸಚಿವರಾದ ಸತೀಶ ಜಾರಕಿಹೊಳಿ, ಎಚ್.ಕೆ.ಪಾಟೀಲ, ಶಿವಾನಂದ ಪಾಟೀಲ, ಕೆಪಿಸಿಸಿ ಕಾರ್ಯದರ್ಶಿ ಸಲೀಂ ಅಹ್ಮದ್ ಹಾಗೂ ಹತ್ತಕ್ಕೂ ಹೆಚ್ಚು ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು.
ರಾತ್ರಿ ಏನೇ ಮಾಡಿದರೂ ಕಣ್ಣಿಗೆ ನಿದ್ರೆನೇ ಹತ್ತಲ್ಲ ಎನ್ನುವ ಮಾತನ್ನು ನಾವು ಹಲವರು ಬಾಯಿಯಿಂದ ಕೇಳಿರುತ್ತೇವೆ. ಇಂತಹ ಸಮಸ್ಯೆಯು ನಮ್ಮನ್ನು ಕೂಡ ಕೆಲವೊಂದು ಸಂದರ್ಭದಲ್ಲಿ ಕಾಡಿರಬಹುದು https://ainlivenews.com/ipl-2025-mega-auction-mega-auction-will-be-held-in-two-days-complete-details-of-date-venue/ ಅತಿಯಾಗಿ ಆಲೋಚನೆ, ಕೆಲಸದ ಒತ್ತಡ ಹಾಗೂ ಮಾನಸಿಕ ತುಮುಲದಿಂದಾಗಿ ಕೆಲವೊಂದು ಸಲ ಎಷ್ಟೇ ಪ್ರಯತ್ನ ಮಾಡಿದರೂ ನಿದ್ರೆಯು ಕಣ್ಣಿಗೆ ಹತ್ತದು, ಮಗ್ಗುಲ ಬದಲಾಯಿಸುತ್ತಲೇ ರಾತ್ರಿ ಕಳೆಯಬೇಕಾಗುತ್ತದೆ. ನೀವು ರಾತ್ರಿಯಲ್ಲಿ ಉತ್ತಮ ನಿದ್ರೆ ಬಯಸಿದರೆ ಮತ್ತು ಸಮಯಕ್ಕೆ ಸರಿಯಾಗಿ ಮಲಗಲು ಬಯಸಿದರೆ, ಮಲಗುವ ಕೆಲವು ಗಂಟೆಗಳ ಮೊದಲು ನೀವು ತಿನ್ನುವುದು ಮತ್ತು ಕುಡಿಯುವುದನ್ನು ನಿಲ್ಲಿಸಬೇಕು. ನಿರ್ದಿಷ್ಟವಾಗಿ ಹೇಳುವುದಾದರೆ, ರಾತ್ರಿಯಲ್ಲಿ ತಿನ್ನಬಾರದು ಅಥವಾ ಕುಡಿಯಬಾರದು ಎಂಬ 7 ಆಹಾರಗಳಿವೆ. ಮಲಗುವ ಮುನ್ನ ಈ ವಸ್ತುಗಳನ್ನು ಸೇವಿಸಿದರೆ ನಿದ್ರೆಗೆ ತೊಂದರೆಯಾಗುತ್ತದೆ. ಆದ್ದರಿಂದ ಮಲಗುವ ಮೊದಲು ಯಾವ ಆಹಾರಗಳನ್ನು ತಪ್ಪಿಸಬೇಕು ಎಂಬುದನ್ನು ಇಲ್ಲಿ ತಿಳಿಯೋಣ. ಕಾಫಿ: ಹೆಲ್ತ್ ಲೈನ್ ನ ವರದಿಯ ಪ್ರಕಾರ, ಕಾಫಿಯಲ್ಲಿ ಹೆಚ್ಚಿನ ಪ್ರಮಾಣದ ಕೆಫೀನ್ ಇದೆ. ರಾತ್ರಿ ಕಾಫಿ ಸೇವಿಸಿದರೆ ನಿದ್ರೆಗೆ ತೊಂದರೆಯಾಗುತ್ತದೆ. ಕೆಫೀನ್…
ಕೆ.ಆರ್.ಪುರ: ಕಿತ್ತೂರು ರಾಣಿಚೆನ್ನಮ್ಮ ಮಹಿಳಾ ಆಟೋ ಚಾಲಕಿಯರ ಸಂಘದ ವತಿಯಿಂದ ಏರ್ಪಡಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆಮೋಹನ್ ಹಾಗೂ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಉದ್ಘಾಟಿಸಿದರು. ಉದ್ಘಾಟಿಸಿ ಮಾತನಾಡಿದಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆಮೋಹನ್ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸಹಕಾರ ನೀಡಿದ ಶಿಶುಮಂದಿರ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು. ಕನ್ನಡ ಭಾಷೆ ಉಳಿಸಿ ಬೆಳಸುವ ಕಾರ್ಯ ಮಾಡುವ ಕೆಲಸ ನಾವೆಲ್ಲಾರೂ ಮಾಡಬೇಕು ಎಂದು ತಿಳಿಸಿದರು. 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಿತ್ತೂರು ರಾಣಿಚನ್ನಮ್ಮ ಆಟೋ ಚಾಲಕಿಯರ ಮಹಿಳೆಯರಿಗೆ ಸೀರೆ ಹಾಗೂ ಸಿಹಿ ಹಂಚಿ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.ಕರ್ನಾಟಕದಲ್ಲಿ ಕನ್ನಡಿಗರ ಜೊತೆಗೆ ಬೇರೆ ಭಾಷಿಕರೂ ಜೀವನ ಮಾಡುತ್ತಿದ್ದಾರೆ. ಕನ್ನಡಿಗರು ಧಾರಾಳವಾಗಿ ಇತರೆ ಭಾಷಿಕರಿಗೆ ಆಶ್ರಯ, ಸೌಹಾರ್ದ ತೋರಿದ್ದಾರೆ. ಇಲ್ಲಿನ ಭಾಷೆ, ನೆಲ, ಜಲ ವಿಚಾರದಲ್ಲಿ ಕನ್ನಡಿಗರಂತೆಯೇ ಪರಭಾಷಿಕರ ಭಾವನೆಯೂ ಇರಬೇಕು. ಮನೆಯಲ್ಲಿ ಯಾವುದೇ ಭಾಷೆಯನ್ನು ಮಾತನಾಡಿ. ಆದರೆ, ಹೊರಗೆ ಬಂದಾಗ ಕನ್ನಡ ಭಾಷೆಯನ್ನು ಮಾತನಾಡಿ…
ಕೋಲಾರ: ಕೋಲಾರ ತಾಲ್ಲೂಕು ವೇಮಗಲ್ ಗ್ರಾಮದಲ್ಲಿ ಇದೇ ತಿಂಗಳ 10 ರಂದು 8 ನೇ ವರ್ಷದ ಕನ್ನಡ ರಾಜ್ಯೋತ್ಸವ ಹಾಗೂ ಬಡವ್ರ ಮಕ್ಳೂ ಬೆಳೀ ಬೇಕು ಕಣ್ರಯ್ಯ ಕನ್ನಡ ಚಲನ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಚಿತ್ರದ ನಿರ್ಮಾಪಕರಾದ ಸಿ.ಎಸ್.ವೆಂಕಟೇಶ್ ತಿಳಿಸಿದರು. ಚಿತ್ರದ ಟೀಸರ್ ಬಿಡುಗಡೆ ಕುರಿತು ಕೋಲಾರದ ವೇಮಗಲ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕಳೆದ ವರ್ಷಗಳಂತೆ ಈ ಬಾರಿಯೂ ವೇಮಗಲ್ ಗ್ರಾಮದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ. https://ainlivenews.com/good-news-for-farmers-if-you-deposit-%e2%82%b955-in-this-scheme-you-will-get-a-pension-of-%e2%82%b93000-per-month-apply-today/ ಬೆಳ್ಳಿಗೆ 9 ಗಂಟೆಗೆ ಬಸ್ ನಿಲ್ದಾಣದಲ್ಲಿ ಕನ್ನಡ ಧ್ವಜಾರೋಹಣ ನೇರವೇರಿಸಿ ಭುವನೇಶ್ವರಿ ದೇವಿಗೆ ಪೂಜೆ ಮತ್ತು ವಿಶೇಷ ಅಲಂಕಾರಗೊಂಡ ಆಟೋಗಳು ಹಾಗೂ ವಿವಿಧ ಕಲಾತಂಡಗಳಿಂದ ಮೆರವಣಿಗೆ ನಡೆಯಲಿದೆ. ಅಂದು ಸಂಜೆ 6 ಗಂಟೆಗೆ ಬಡವ್ರ ಮಕ್ಳೂ ಬೆಳೀ ಬೇಕು ಕಣ್ರಯ್ಯ ಕನ್ನಡ ಚಲನ ಚಿತ್ರದ ಟೀಸರ್ ಬಿಡುಗಡೆ ಸಮಾರಂಭವನ್ನು ವೇಮಗಲ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.