ಬೆಂಗಳೂರು/ನವದೆಹಲಿ:- ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ DCM ಡಿಕೆಶಿಗೆ ಸುಪ್ರೀಂ ಕೋರ್ಟ್ ಕೊಂಚ ರಿಲೀಫ್ ಕೊಟ್ಟಿದ್ದು, 4 ವಾರ ವಿಚಾರಣೆ ಮುಂದೂಡಿಕೆ ಮಾಡಿದೆ. https://ainlivenews.com/big-shock-increased-pressure-for-the-retirement-of-two-star-players-of-team-india/ ಇತ್ತೀಚೆಗೆ ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಯನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿತ್ತು. ಸರ್ಕಾರದ ಈ ನಡೆ ಪ್ರಶ್ನಿಸಿ ಸಿಬಿಐ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಸೋಮವಾರ ಸುಪ್ರೀಂಕೋರ್ಟ್ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದು, ಸದ್ಯ ನಾಲ್ಕು ವಾರಗಳ ಕಾಲ ಮುಂದೂಡಿದೆ. ಇನ್ನೂ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಸಂಬಂಧ ಕರ್ನಾಟಕದ ಹಿಂದಿನ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿತ್ತು. ಹಾಗಾಗಿ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿತ್ತು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಸಿಬಿಐ ತನಿಖೆ ಆದೇಶ ವಾಪಸ್ ಪಡೆಯುವ ನಿರ್ಧಾರ ಕೈಗೊಂಡಿತ್ತು.
Author: AIN Author
ಟೀಮ್ ಇಂಡಿಯಾಗೆ ದೊಡ್ಡ ಆಘಾತ ಎದುರಾಗಿದ್ದು, ಕೊಹ್ಲಿ, ರೋಹಿತ್ ನಿವೃತ್ತಿಗೆ ಒತ್ತಡ ಹೆಚ್ಚಾಗಿದೆ. ಇನ್ನೂ ಇದಕ್ಕೆ ಕಾರಣವೇನು ಎನ್ನುವುದನ್ನು ತಿಳಿಯಲು ಈ ಸುದ್ದಿ ಪೂರ್ತಿ ಓದಿ. https://ainlivenews.com/69th-kannada-rajyotsava-program-by-mahila-auto-chalakiya-sangh/ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಶಾರ್ಟೆಸ್ಟ್ ಫಾರ್ಮೇಟ್ ಕ್ರಿಕೆಟ್ನಿಂದ ನಿವೃತ್ತಿಯಾದ್ರು. ಈಗ ಕೇವಲ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ತಂಡದ ಭಾಗವಾಗಿದ್ದಾರೆ. ಈ ಮಧ್ಯೆ ಕೊಹ್ಲಿ, ರೋಹಿತ್ ನಿವೃತ್ತಿ ಆಗಲಿದ್ದಾರೆ ಅನ್ನೋ ಚರ್ಚೆ ಜೋರಾಗಿದೆ. ಇತ್ತೀಚೆಗೆ ನಡೆದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಕಂಡಿದೆ. ಮಹತ್ವದ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ಭಾರತ ತಂಡದ ಸೂಪರ್ ಸ್ಟಾರ್ಸ್ ನಿವೃತ್ತಿ ಆಗಬಹುದು ಅನ್ನೋ ಮಾತುಗಳು ಕೇಳಿ ಬಂದಿವೆ. ಅಭಿಮಾನಿಗಳು ಕೂಡ ಇಬ್ಬರು ನಿವೃತ್ತಿ ಆಗಲೇಬೇಕು ಎಂದು ಒತ್ತಡ ಹಾಕುತ್ತಿದ್ದಾರೆ. ತವರಿನಲ್ಲಿ ಟೀಮ್ ಇಂಡಿಯಾದ ಹೀನಾಯ ಸೋಲಿಗೆ ತಂಡದ ಬ್ಯಾಟಿಂಗ್ ವೈಫಲ್ಯವೇ ಕಾರಣ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟೆಸ್ಟ್…
ಸೂರ್ಯನ ಕಿರಣಗಳಿಗೆ ನಿಮ್ಮ ಚರ್ಮ ಒಡ್ಡಿಕೊಂಡರೆ ಸನ್ ಟ್ಯಾನ್ ಆಗುವುದು ಖಚಿತ. ಸೂರ್ಯನ ನೇರಳಾತೀತ ಕಿರಣಗಳು ನಿಮ್ಮ ಚರ್ಮವನ್ನು ನೇರವಾಗಿ ಸ್ಪರ್ಶಿಸುವುದರಿಂದ ಸನ್ ಟ್ಯಾನ್, ಸನ್ ಬರ್ನ್ನಂತಹ ಸಮಸ್ಯೆಗಳು ಉಂಟಾಗುತ್ತದೆ. ನಿಮ್ಮ ಮುಖ, ತೋಳುಗಳು, ಕೈಗಳು, ಕುತ್ತಿಗೆ, ಬೆನ್ನು ಮತ್ತು ಪಾದಗಳು ಸನ್ ಟ್ಯಾನ್ಗೆ ಒಳಗಾಗುತ್ತವೆ. ಟ್ಯಾನ್ ಹೋಗಲಾಡಿಸಲು ಕೆಲವು ಮನೆಮದ್ದು ಇಲ್ಲಿವೆ ನೋಡಿ.. https://ainlivenews.com/bjp-protests-on-emotional-issues-mahadevappa-sarcasm/ ನಿಂಬೆ ರಸ ಮತ್ತು ಜೇನುತುಪ್ಪ ನಿಂಬೆ ರಸ ಮತ್ತು ಜೇನುತುಪ್ಪ: ಒಂದು ಪಾತ್ರೆಯಲ್ಲಿ ಜೇನುತುಪ್ಪ ತೆಗೆದುಕೊಂಡು ಅದಕ್ಕೆ ನಿಂಬೆ ರಸವನ್ನು ಬೆರೆಸಿ ಮುಖಕ್ಕೆ ಹಚ್ಚಿ. ಒಂದಿಷ್ಟು ಹೊತ್ತು ಬಿಟ್ಟು ತೊಳೆಯಿರಿ. ಮೊಸರು ಮತ್ತು ಕಡಲೆ ಹಿಟ್ಟು ಮೊಸರು ಮತ್ತು ಕಡಲೆ ಹಿಟ್ಟನ್ನು ಬೆರೆಸಿ ಮುಖಕ್ಕೆ ಹಚ್ಚಿ. ಒಣಗಿದ ನಂತರ ತೊಳೆಯಿರಿ. ಇದರಿಂದ ಮುಖ ಮೃದುವಾಗುತ್ತದೆ ಜೊತೆಗೆ ಹೊಳೆಯುತ್ತದೆ. ಟೊಮೆಟೊ: ಟೊಮೆಟೊವನ್ನು ಜಜ್ಜಿ ರಸ ತೆಗೆದು ಮುಖಕ್ಕೆ ಹಚ್ಚಿ. ಒಣಗಿದ ಮೇಲೆ ತೊಳೆಯಿರಿ. ಅಲೋವೆರಾ: ಅಲೋವೆರಾ ಜೆಲ್ ಅನ್ನು ಮುಖಕ್ಕೆ ಹಚ್ಚಿ ಒಣಗಿದ ನಂತರ ತೊಳೆಯಿರಿ.…
ದೇವರನ್ನು ತೋರಿಸುವ ಶಕ್ತಿ ದೀಪಕ್ಕೆ ಇದೆ ದೀಪದಿಂದ ಶಾಂತಿ ಆರೋಗ್ಯ ಕಲ್ಯಾಣ ವಾಗುತ್ತದೆ. ಎಲ್ಲ ಶರಣರು ದೀಪವನ್ನು ಗೌರವಿಸಿದ್ದಾರೆ .ಶರಣರು ಹೇಳಿದಂತೆ ನಮ್ಮಲ್ಲಿರುವ ಕತ್ತಲೆಯನ್ನು ಹೋಗಲಾಡಿಸಲು ದೀಪದ ಅವಶ್ಯಕತೆ. ಇದೆ . ದೀಪಾವಳಿ ಸಂದರ್ಭದಲ್ಲಿ ದೀಪಕ್ಕೆ ಹೆಚ್ಚು ಪ್ರಾಧಾನ್ಯತೆ ಇದೆ ಅಜ್ಞಾನವನು ಕಳೆದು ಸುಜ್ಞಾನವನ್ನು ದೀಪ ಹಚ್ಚುವುದರ ಮೂಲಕ ಪಡೆಯುವುದೇ ಈ ಬೆಳಕಿನ ಹಬ್ಬ ದೀಪಾವಳಿಯ ಉದ್ದೇಶವಾಗಿದೆ ಎಂದು ರಬಕವಿಯ ಶ್ರೀ ಗುರುದೇವ ಬ್ರಹ್ಮಾನಂದ ಮಠದ ಪೂಜ್ಯಶ್ರೀ ಗುರುಸಿದ್ದೇಶ್ವರ ಸ್ವಾಮೀಜಿಯವರು ಹೇಳಿದರು. https://ainlivenews.com/good-news-for-farmers-if-you-deposit-%e2%82%b955-in-this-scheme-you-will-get-a-pension-of-%e2%82%b93000-per-month-apply-today/ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಗಟ್ಟಿಗಿ ಬಸವೇಶ್ವರ ರಥೋತ್ಸವದ ಅಂಗವಾಗಿ ಪ್ರಾರಂಭವಾದ ಪ್ರವಚನ ಕಾರ್ಯಕ್ರಮದಲ್ಲಿ ಹೇಳಿದರು. ಪ್ರಕಾಶ ಕುಂಬಾರ ಬಾಗಲಕೋಟೆ
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಬನಹಟ್ಟಿಯ ಸೋಮವಾರ ಪೇಟೆ ಸಮಸ್ತ ದೈವ ಮಂಡಳಿ ಹಾಗೂ ಶ್ರೀ ಮಲ್ಲಿಕಾರ್ಜುನ ಸದ್ಬಕ್ತ ಮಂಡಳಿಯವರು ಪ್ರತಿ ವರ್ಷ ನಡೆಸಿಕೊಂಡು ಬರುತ್ತಿರುವ ಶ್ರೀ ಮಲ್ಲಿಕಾರ್ಜುನ ದೇವರ ರಥೋತ್ಸವವು ಅದ್ದೂರಿಯಾಗಿ ಸಡಗರ ಸಂಭ್ರಮದಿಂದ ನಡೆಯಿತು, ಬನಹಟ್ಟಿ: ನಗರದ ಮಧ್ಯ ಭಾಗದಲ್ಲಿರುವ ಮಂಗಳವಾರ ಪೇಟೆಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜಾತ್ರೆ ನಿಮಿತ್ಯವಾಗಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಭಕ್ತರು ಬೆಳಿಗ್ಗೆಯಿಂದಲೇ ಮಲ್ಲಯ್ಯನ ದರ್ಶನ ಪಡೆದುಕೊಂಡು ಬೆಲ್ಲ ಹಂಚಿದರು. ದಿವಟಗಿ, ಆರುತಿ ಹಿಡಿದುಕೊಂಡು ಮಲ್ಲಿಕಾರ್ಜುನ ದರ್ಶನ ಪಡೆದುಕೊಂಡು ದೇವಸ್ಥಾನದಲ್ಲಿ ಹಬ್ಬದ ವಾತಾವರಣ ನಿರ್ಮಾನ ಮಾಡಿತು. ಅಂದು ಬೆಳಗ್ಗೆ ದೇವಸ್ಥಾನದಲ್ಲಿ ಪೂಜೆಗೈದು, ಭಕ್ತರಿಂದ ತಂಪು ಪಾನೀಯಗಳು ಹಾಗೂ ಪ್ರಸಾದ ಸೇವೆಗಳು ನಡೆದವು. ಸಾವಿರಾರು ಭಕ್ತರು ಕಂಬಿ ಮಲ್ಲಯ್ಯನ್ನು ದರ್ಶನ ಪಡೆದು ಪುನಿತರಾದ್ದರು, ಪ್ರಕಾಶ ಕುಂಬಾರ ಬಾಗಲಕೋಟೆ
ಹುಬ್ಬಳ್ಳಿ : ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಒತ್ತುವರಿಯಾಗಿರುವ ಇಂಚಿಂಚು ವಕ್ಫ್ ಆಸ್ತಿಯನ್ನು ಕಾಪಾಡುವುದಾಗಿ ಹೇಳಿದ್ದರು ಈಗ ರಾಜಕೀಯ ಕಾರಣಕ್ಕಾಗಿ ವಿರುದ್ಧವಾಗಿ ಮಾತನಾಡುತ್ತಾರೆ ಅವರೇ ಹೇಳಿದ್ದ ಮಾತುಗಳಿಗೆ ರಾಜಕೀಯ ಕಾರಣಕ್ಕಾಗಿ ಉಲ್ಟಾ ಹೊಡೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಾಪಕವಾಗಿ ಟೀಕಿಸಿದರು.ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬಿಜೆಪಿ ರಾಜಕಾರಣಕ್ಕಾಗಿ ಈ ವಿಚಾರವನ್ನು ಇಟ್ಟುಕೊಂಡು ಹೋರಾಡುತ್ತಿದ್ದಾರೆ. ವಕ್ಫ್ ಆಸ್ತಿ ವಿಚಾರ ನಿನ್ನೆ ಮೊನ್ನೆಯದಲ್ಲ. ಬಿಜೆಪಿ ಸರ್ಕಾರದ ಕಾಲದಲ್ಲೂ ನೋಟೀಸು ಕೊಟ್ಟಿದ್ದಾರೆ, ಎಲ್ಲಾ ಕಾಲದಲ್ಲಿಯೂ ನೋಟೀಸು ನೀಡಲಾಗಿದೆ ಎಂದು ಜನರಿಗೆ ಅರ್ಥವಾಗಿದೆ. ನಾನು ಸಚಿವರಾದ ಹೆಚ್.ಕೆ ಪಾಟೀಲ್, ಕೃಷ್ಣ ಬೈರೇಗೌಡ ಅವರೊಂದಿಗೆ ಸಭೆ ನಡೆಸಿ ಯಾವುದೇ ನೋಟೀಸು ನೀಡಿದ್ದಲ್ಲಿ ಅದನ್ನು ವಾಪಸ್ಸು ಪಡೆಯಬೇಕು ಅಥವಾ ವಿಚಾರಣೆ ಇಲ್ಲದೆಯೇ ಯಾವುದಾದರೂ ಪಹಣಿ ದಾಖಲೆಬದಲಾವಣೆಯಾಗಿದ್ದರೆ ಅದನ್ನು ರದ್ದು ಮಾಡಬೇಕು ಹಾಗೂ ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಬಾರದು ಎಂದು ಸ್ಪಷ್ಟ ನಿರ್ದೇಶನ ನೀಡಿದ್ದಾಗಿದೆ. ಮುಸ್ಲಿಂ , ಹಿಂದೂ, ಕ್ರಿಶ್ಚಿಯನ್ ಆಗಿರಲಿ, ಒಕ್ಕಲೆಬ್ಬಿಸಬಾರದು ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದೇನೆ ಎಂದರು.…
ಹುಬ್ಬಳ್ಳಿ,: ಅಮೆಜಾನ್ ಇಂಡಿಯಾ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಭಾರತದಲ್ಲಿ ದೀರ್ಘಾವಧಿಯ ಸಾರಿಗೆಗಾಗಿ ಕಡಿಮೆ ಇಂಗಾಲ ಇಂಧನಗಳ(ಎಲ್ಸಿಎಫ್)ಅಭಿವೃದ್ಧಿ ಮತ್ತು ಅಳವಡಿಕೆಗೆ ಕೈಜೋಡಿಸಿವೆ ಎಂದು ಕಂಪನಿಯು ತಿಳಿಸಿದೆ. ಈ ಕುರಿತು ಮಾಹಿತಿ ನೀಡಿದ ಅವರು ಈ ಸಹಭಾಗಿತ್ವವು ಸಾರಿಗೆ ವಲಯದಲ್ಲಿ ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡಲು ಮಹತ್ವದ ಹೆಜ್ಜೆಯನ್ನು ಗುರುತಿಸುತ್ತದೆ. 2040ರ ವೇಳೆಗೆ ತನ್ನ ಕಾರ್ಯಾಚರಣೆಗಳಾದ್ಯಂತ ನಿವ್ವಳ-ಶೂನ್ಯ ಇಂಗಾಲ ಗುರಿ ಸಾಧಿಸುವ ಅಮೆಜಾನ್‌ನ ಜಾಗತಿಕ ಬದ್ಧತೆಗೆ ಇದು ಹೊಂದಿಕೆಯಾಗುತ್ತದೆ, 2070ರ ವೇಳೆಗೆ ಭಾರತದ ರಾಷ್ಟ್ರೀಯ ನಿವ್ವಳ-ಶೂನ್ಯ ಇಂಗಾಲದ ಗುರಿ ಸಾಧನೆಗೆ ಕೊಡುಗೆ ನೀಡುತ್ತದೆ. ಈ ಕುರಿತು ಮಾತನಾಡಿದ ಅಮೆಜಾನ್ ಇಂಡಿಯಾದ ಕಾರ್ಯಾಚರಣೆ ವಿಭಾಗದ ಉಪಾಧ್ಯಕ್ಷ ಅಭಿನವ್ ಸಿಂಗ್ “ಜೈವಿಕ ಇಂಧನಗಳು ಭಾರತದ ಇಂಧನ ಪರಿವರ್ತನೆಗೆ ಪ್ರಮುಖವಾಗಿವೆ, ಅವು ಉದ್ಯೋಗಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಲು ಸಿದ್ಧವಾಗಿವೆ. ಎಚ್‌ಪಿಸಿಎಲ್‌ನೊಂದಿಗೆ ಅಮೆಜಾನ್‌ನ ಈ ಸಹಭಾಗಿತ್ವವು ಇಂಧನ ಪರಿವರ್ತನೆಯ ಬದಲಾವಣೆಯನ್ನು ಸಶಕ್ತಗೊಳಿಸುವತ್ತ ಒಂದು ದಿಟ್ಟ ಹೆಜ್ಜೆಯಾಗಿದೆ, https://ainlivenews.com/good-news-for-farmers-if-you-deposit-%e2%82%b955-in-this-scheme-you-will-get-a-pension-of-%e2%82%b93000-per-month-apply-today/ ಇದರಿಂದ ನಮಗೆ ಸಂತಸ ತಂದಿದೆ.…
ಬೆಂಗಳೂರು:- ಕೇವಲ ಭಾವನಾತ್ಮಕ ವಿಷಯಗಳ ಮೇಲೆ ಮಾತ್ರ ಬಿಜೆಪಿ ಪ್ರತಿಭಟನೆ ಮಾಡುತ್ತದೆ ಎಂದು ಸಚಿವ HC ಮಹದೇವಪ್ಪ ವ್ಯಂಗ್ಯವಾಡಿದ್ದಾರೆ. https://ainlivenews.com/parishad-mla-ta-sharavana-voted-for-nda-candidate-nikhil/ ಈ ಸಂಬಂಧ ಮಾತನಾಡಿದ ಅವರು,ವಕ್ಫ್ ವಿಚಾರದಲ್ಲಿ ಬಿಜೆಪಿ ಪ್ರತಿಭಟನೆ ರಾಜಕೀಯ ಪ್ರೇರಿತ. ಬಿಜೆಪಿ ಪ್ರತಿಭಟನೆ ರಾಜಕೀಯ ಪ್ರೇರಿತ ಪ್ರತಿಭಟನೆ. ಸಿಎಂ ಅವರೇ ನೋಟಿಸ್ ವಾಪಸ್ ಪಡೆಯೋಕೆ ಹೇಳಿದ್ದಾರೆ. ಅಲ್ಲಿಗೆ ವಿಷಯ ಮುಗಿದಿದೆ. ಬಿಜೆಪಿಯವರು ಇದ್ದಾಗಲೇ ನೋಟಿಸ್ ಕೊಟ್ಟಿದ್ದರು. ಬಿಜೆಪಿಯವರಿಗೆ ಇಷ್ಟು ಕಾಳಜಿ ಇದ್ದರೆ ಅವತ್ತೇ ಈ ವಿಷಯ ಸರಿ ಮಾಡಬಹುದಿತ್ತು. ಅವರು ಮಾಡದೇ ಈಗ ಸರಿ ಮಾಡಿ ಎಂದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ. ರೈತರಿಗೆ ಯಾವುದೇ ತೊಂದರೆ ಆಗಬಾರದು. ನಮ್ಮ ಸರ್ಕಾರ ಯಾರಿಗೂ ತೊಂದರೆ ಕೊಡೋದಿಲ್ಲ. ಪಹಣಿಗೆ ಎಲ್ಲಾ ಇತಿಹಾಸ ಇರುತ್ತದೆ. ಅದನ್ನು ನೋಡಿದ್ರೆ ಗೊತ್ತಾಗುತ್ತದೆ. ರೆಕಾರ್ಡ್ ಇರೋ ಪ್ರಕಾರ ಆಗುತ್ತದೆ. ರೈತರನ್ನ ಒಕ್ಕಲು ಎಬ್ಬಿಸಬಾರದು ಎಂದು ಸಿಎಂ ಹೇಳಿದ್ದಾರೆ. ಬಿಜೆಪಿಯವರು ಯಾವತ್ತು ಇಶ್ಯು ಮೇಲೆ ದೇಶದಲ್ಲಿ ಹೋರಾಟ ಮಾಡಿಯೇ ಇಲ್ಲ. ಸೂಕ್ಷ್ಮ ವಿಷಯ, ಭಾವನಾತ್ಮಕ ವಿಷಯಗಳ ಮೇಲೆ ಪ್ರತಿಭಟನೆ…
ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರದ ವಿರುದ್ದ ರಾಜ್ಯಾದ್ಯಂತ ಜನರು ತಿರುಗಿ ಬಿದ್ದಿದ್ದಾರೆ, ಈ ಅಲೆಗೆ ಮೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗುವುದು ಗ್ಯಾರೆಂಟಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರಿಗೆ ವಕ್ಪ್ ಆಸ್ತಿ ಹೆಸರಿನಲ್ಲಿ ನೊಟೀಸ್ ಕೊಟ್ಟಿರುವುದಕ್ಕೆ ರಾಜ್ಯಾದ್ಯಂತ ಜನರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಮುಖ್ಯಮಂತ್ರಿಗಳಿಗೆ ತಮ್ಮ ತಪ್ಪಿನ ಅರಿವಾಗಿ ನೊಟೀಸ್ ವಾಪಸ್ ತೆಗೆದುಕೊಳ್ಳಲು ಹೇಳಿದ್ದಾರೆ. ಸರ್ಕಾರ ತಪ್ಪು ಮಾಡದಿದ್ದರೆ ರೈತರಿಗೆ ನೀಡಿದ್ದ ನೋಟಿಸ್ ಯಾಕೆ ವಾಪಸ್ ಪಡೆಯುತ್ತಿದ್ದರು ಎಂದು ಪ್ರಶ್ನಿಸಿದರು. https://ainlivenews.com/good-news-for-farmers-if-you-deposit-%e2%82%b955-in-this-scheme-you-will-get-a-pension-of-%e2%82%b93000-per-month-apply-today/ ವಕ್ಪ್ ಸಚಿವ ಜಮೀರ್ ಅವರು ಮುಖ್ಯಮಂತ್ರಿಗಳ ಆದೇಶದ ಮೇರೆಗೆ ನೊಟೀಸ್ ನೀಡಲಾಗಿದೆ ಎಂದು ಹೇಳಿದ್ದಾರೆ. ಡಿಸಿಗಳು ಸಚಿವರ ಆದೇಶದ ಮೇರೆಗೆ ನೊಟೀಸ್ ನೀಡಿರುವುದಾಗಿ ಹೇಳಿದ್ದಾರೆ. ಈಗ ಜನ ತಿರುಗಿ ಬೀಳುತ್ತಾರೆ ಎನ್ನುವುದು ಗೊತ್ತಾದ ತಕ್ಷಣ ಯು ಟರ್ನ್ ಹೊಡೆಯುತ್ತಿದ್ದಾರೆ. ಇದೊಂದು ರೀತಿ ಯು ಟರ್ನ್ ಸರ್ಕಾರ ಮುಡಾದಲ್ಲಿ ಸೈಟ್ ಪಡೆದು ವಾಪಸ್ ಕೊಡುತ್ತಾರೆ.…
ಬೆಂಗಳೂರು: 3 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಕಣ ರಂಗೇರಿದ್ದು, ಚನ್ನಪಟ್ಟಣ ಉಪ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಅವರು ಜೆಡಿಎಸ್ನಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಮೂರು ಕ್ಷೇತ್ರಗಳಲ್ಲೂ ಮಳೆ ಬಿಸಿಲು ಎನ್ನದೆ ಪ್ರಚಾರದ ಅಖಾಡದಲ್ಲಿ ನಾಯಕರ ಬೆವರು ಹರಿಸುತ್ತಿದ್ದಾರೆ. ಚನ್ನಪಟ್ಟಣದ ಚದುರಂಗ ಗೆಲ್ಲಲು ನಿಖಿಲ್ ಕುಮಾರಸ್ವಾಮಿಗೆ ವಿಧಾನ ಪರಿಷತ್ ಸದಸ್ಯರಾದ ಟಿ.ಎ ಶರವಣ ಅವರು ಸಾಥ್ ನೀಡಿದ್ದಾರೆ. ಹೌದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂಬಂದಿಸಿದಂತೆ NDA ಅಭ್ಯರ್ಥಿಯಾದ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ವಿಶ್ವಕರ್ಮ ಸಮುದಾಯ ಮುಖಂಡರ ಜೊತೆ ಸಭೆ ನಡೆಸಿ ಮತಯಾಚನೆ ಮಾಡಿದ್ದಾರೆ. ನಂತರ ಶ್ರೀ ಕಾಳಿಕಾಂಬ ಕಮಟೇಶ್ವರ ದೇವಸ್ಥಾನದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ವಿಶ್ವಕರ್ಮ ಸಮುದಾಯ ಮುಖಂಡರು, ಕಾರ್ಯಕರ್ತರು ಜೊತೆಗಿದ್ದರು. ಮಿನಿಸಮರದ ಕಣದಲ್ಲಿ ಪ್ರತಿಷ್ಠೆಯ ಫೈಟ್ ಜೋರಾಗಿದೆ. ಗೆಲುವಿನ ನಗಾರಿ ಬಾರಿಸಲೇಬೇಕು ಅಂತ 3 ಪಕ್ಷಗಳು ಜಿದ್ದಿಗೆ ಬಿದ್ದಿವೆ. ಉಪಯುದ್ಧದ ಸಿಹಿಯನ್ನ ಯಾರಿಗೆ ಉಣಬಡಿಸಲಿದ್ದಾನೆ ಅನ್ನೋದು ನವೆಂಬರ್ 23ರ ಫಲಿತಾಂಶದ ದಿನ ಗೊತ್ತಾಗಲಿದೆ.