ಹಾಸನ:- ಮದುವೆಗೆ ಒಂದು ವಾರ ಇರುವಾಗಲೇ ಭೀಕರವಾಗಿ ಕಾನ್ಸ್‌ಟೇಬಲ್ ಕೊಲೆಯಾದ ಘಟನೆ ಜರುಗಿದೆ. ಹಾಸನ ತಾಲೂಕಿನ ದುದ್ದ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ಹರೀಶ್.ವಿ ಕೊಲೆಯಾದ ಪೊಲೀಸ್ ಕಾನ್ಸ್‌ಟೇಬಲ್. ಹರೀಶ್ ಬೆಂಗಳೂರಿನ KSISFನಲ್ಲಿ ಕಾನ್ಸ್‌ಟೇಬಲ್ ಆಗಿದ್ದರು. https://ainlivenews.com/is-it-torture-to-wake-up-early-in-the-morning-if-so-then-follow-these-tips/ ಇದೇ ತಿಂಗಳು 11 ರಂದು ಹರೀಶ್ ವಿವಾಹ ನಿಶ್ಚಯವಾಗಿತ್ತು. ಸೋಮವಾರ ರಾತ್ರಿ ಮದುವೆ ಆಮಂತ್ರಣ ಪತ್ರ ಹಂಚಿ ಮನೆಗೆ ವಾಪಾಸ್ ಆಗುತ್ತಿದ್ದ ವೇಳೆ ದುದ್ದ ಗ್ರಾಮದ ಹೊರವಲಯದಲ್ಲಿರುವ ಡಾಬಾ ಸರ್ಕಲ್‌ನಲ್ಲಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಸ್ಥಳಕ್ಕೆ ಎಸ್ಪಿ ಮಹಮದ್ ಸುಜೇತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
Author: AIN Author
ಶೀತ, ಕೆಮ್ಮು, ಜ್ವರ, ತಲೆನೋವು, ಆ್ಯಸಿಡಿಟಿ, ಮಲಬದ್ಧತೆ, ಮೈ-ಕೈ ನೋವು ಹೀಗೆ ಏನೇ ಸಮಸ್ಯೆಗಳು ಎದುರಾದರೂ ಜನರು ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಪ್ರಾರಂಭವಾದ ಕೂಡಲೆ ಮಾತ್ರೆಗಳನ್ನು ಸೇವಿಸುತ್ತಾರೆ. ಅದರಲ್ಲೂ ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಭಾರತೀಯ ಬ್ರಾಂಡ್ ಡೋಲೋ 650 ದೇಶದ ಅತ್ಯಂತ ಜನಪ್ರಿಯ ಔಷಧಿಯಾಗಿ ಹೊರಹೊಮ್ಮಿದೆ. ಇದು ದೇಶದಲ್ಲೇ ಹೆಚ್ಚು ಮಾರಾಟವಾಗುವ ಔಷಧಿ ಎನಿಸಿಕೊಂಡಿದೆ. ಡೊಲೊ 650 ಮಾತ್ರ ಒಂದರಿಂದ 5.7 ಶತಕೋಟಿ ರೂಪಾಯಿಗಳ ಆದಾಯ ಗಳಿಸಿದೆ. ಡೋಲೋ 650 ಮಾತ್ರೆ ಹೆಚ್ಚಾಗಿ ಸೇವಿಸುವ ಮುನ್ನ ಎಚ್ಚರ ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಕೊರೊನಾ ಡೋಲೋ 650 ಮಾತ್ರೆ ಸೇವನೆ ಮಾಡುವುದು ಕೂಡ ಆರೋಗ್ಯಕ್ಕೆ ಬಹಳ ಅಪಾಯಕಾರಿಯಾಗಿದೆ.. ಕೊರೊನಾ ರೋಗ ಕಾಣಿಸಿಕೊಂಡವರಿಗೂ ವೈದ್ಯರು ಕೂಡ ಪ್ಯಾರಾಸಿಟಮಾಲ್ ಔಷಧಿಯಾದ ಡೋಲೋ 650 ಮಾತ್ರೆಯನ್ನು ಸೇವಿಸಲು ಸೂಚಿಸಿದರು.. ಹೀಗಾಗಿಯೇ ಜನರು ಸಾಂಕ್ರಮಿಕ ರೋಗದ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಮುಂಜಾಗೃತಾ ಕ್ರಮವಾಗಿ ಪ್ರಾಥಮಿಕ ಚಿಕಿತ್ಸೆ ಎನ್ನುವಂತೆ ಡೋಲೋ 650 ಮಾತ್ರೆಯನ್ನು ತಂದು ಇಟ್ಟು ಕೊಂಡಿದ್ದಾರೆ..…
ದೇಶದ ಹಲವು ರಾಜ್ಯಗಳಲ್ಲಿ ಬೆಳ್ಳುಳ್ಳಿ ಬೆಳೆಯಲಾಗುತ್ತದೆ. ವಾಸ್ತವವಾಗಿ, ಬೆಳ್ಳುಳ್ಳಿ ಕೃಷಿಗೆ ತುಂಬಾ ಉಷ್ಣ ಅಥವಾ ತುಂಬಾ ಶೀತ ಹವಾಮಾನದ ಅಗತ್ಯವಿರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಅಕ್ಟೋಬರ್ ತಿಂಗಳು ಬೆಳ್ಳುಳ್ಳಿ ಕೃಷಿಗೆ ಸೂಕ್ತವೆಂದು ಪರಿಗಣಿಸಲಾಗಿದೆ. ಈ ಋತುವಿನಲ್ಲಿ ಬೆಳ್ಳುಳ್ಳಿ ಟ್ಯೂಬರ್ ರಚನೆಯು ಉತ್ತಮವಾಗಿದೆ. ಲೋಮಿ ಭೂಮಿ ಅದರ ಕೃಷಿಗೆ ಉತ್ತಮವಾಗಿದೆ. ಬೆಳ್ಳುಳ್ಳಿಯಲ್ಲಿ ಪ್ರೊಪೈಲ್ ಡೈಸಲ್ಫೈಡ್ ಇದೆ ಮತ್ತು ಬೆಳ್ಳುಳ್ಳಿಯನ್ನು ಚಟ್ನಿಗಳು, ತರಕಾರಿಗಳು ಮತ್ತು ಉಪ್ಪಿನಕಾಯಿ ಮಾಡಲು ಬಳಸಲಾಗುತ್ತದೆ. ಇದು ಹೊಟ್ಟೆಯ ಕಾಯಿಲೆಗಳು, ಅಜೀರ್ಣ, ಕಿವಿ ನೋವು, ಕಣ್ಣಿನ ಕಾಯಿಲೆಗಳು, ಕೆಮ್ಮು ಇತ್ಯಾದಿಗಳನ್ನು ಗುಣಪಡಿಸುವ ಗುಣಗಳನ್ನು ಹೊಂದಿದೆ. ಬೆಳ್ಳುಳ್ಳಿಯನ್ನು ಹೇಗೆ ಬೆಳೆಸಲಾಗುತ್ತದೆ? ಮಳೆಗಾಲ ಮುಗಿದ ನಂತರ ಬೆಳ್ಳುಳ್ಳಿ ಕೃಷಿ ಆರಂಭಿಸಲಾಗುತ್ತದೆ. ಇದನ್ನು ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಬಿತ್ತಲಾಗುತ್ತದೆ. ಬೆಳ್ಳುಳ್ಳಿ ಕೃಷಿಗಾಗಿ ಸಣ್ಣ ಕ್ವಾರಿಗಳನ್ನು ತಯಾರಿಸಲಾಗುತ್ತದೆ. ಮೊದಲ ಎರಡು ಬಾರಿ ಹೊಲವನ್ನು ಚೆನ್ನಾಗಿ ಉಳುಮೆ ಮಾಡಲಾಗುತ್ತದೆ, ನಂತರ ಸಣ್ಣ ಕ್ವಾರಿಗಳನ್ನು ಜಮೀನಿನಲ್ಲಿ ಬಿತ್ತಲಾಗುತ್ತದೆ. ಮೊಗ್ಗುಗಳಿಂದ ಬೆಳೆ ಬೆಳ್ಳುಳ್ಳಿ ಬೆಳೆಯನ್ನು ಅದರ ಮೊಗ್ಗುಗಳಿಂದ ಬೆಳೆಯಲಾಗುತ್ತದೆ. ಪ್ರತಿ ಮೊಗ್ಗು ಸುಮಾರು 5…
ಮನುಷ್ಯನಿಗೆ ನಿದ್ದೆ ತುಂಬಾ ಮುಖ್ಯ. ಒಬ್ಬ ಮನುಷ್ಯ 6 ರಿಂದ 8 ತಾಸುಗಳ ಕಾಲ ಆದ್ರೂ ಮಲಗಿ ವಿಶ್ರಾಂತಿ ಮಾಡಬೇಕು. ನಮ್ಮ ದೇಹವು ಒಂದು ಯಂತ್ರವಿದ್ದಂತೆ, ದಿನ ಪೂರ್ತಿ ನಮ್ಮ ಕಣ್ಣು, ಕಾಲು, ಕೈ, ಕಿವಿ, ನಾಲಿಗೆ, ಮೆದುಳು, ಹೃದಯ ಬಡಿತ, ತೀವ್ರ ರಕ್ತ ಸಂಚಲನೆ, ಹೆಚ್ಚು ಉಸಿರಾಡುವ ಶ್ವಾಸಕೋಶ, ಹೀಗೆ ಇತರ ಪ್ರಮುಖ ದೇಹದ ಭಾಗಗಳಿಗೆ ವಿಶ್ರಾಂತಿ ಬಹುಮುಖ್ಯವಾಗಿ ಅವಶ್ಯಕತೆ ಇರುತ್ತದೆ. ನಿದ್ರೆ ಹಾಗೂ ಆರೋಗ್ಯಕ್ಕೆ ನೇರ ಸಂಬಂಧವಿದೆ, ರಾತ್ರಿಯ ನಿದ್ರೆ ಉತ್ತಮವಾಗಿದ್ದರೆ ಇಡೀ ದಿನ ನಿಮ್ಮ ಮನಸ್ಸು ಕೂಡ ಚೈತನ್ಯದಿಂದ ಕೂಡಿರುತ್ತದೆ. ನಿದ್ರಾಹೀನತೆಯು ಹೃದಯಕ್ಕೆ ಹಾನಿಯಾಗುವ ಅನಾರೋಗ್ಯಕರ ಅಭ್ಯಾಸಗಳಿಗೆ ಕಾರಣವಾಗಬಹುದು ಎಂದು ಹೇಳಿದೆ. ಪ್ರತಿ ರಾತ್ರಿ 6 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವ ವಯಸ್ಕರಲ್ಲಿ ಹೃದಯಾಘಾತ ಮತ್ತು ಖಿನ್ನತೆ ಸೇರಿದಂತೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತದೆ. ಇದು ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ. ಇದಲ್ಲದೆ, ನಿಯಮಿತ ನಿದ್ರೆಯ ಕೊರತೆಯು ರಕ್ತದೊತ್ತಡದ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದಯ ವೈಫಲ್ಯ ಮತ್ತು ಮೂತ್ರಪಿಂಡದ…
ಬೆಂಗಳೂರು: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ದೇಶಾದ್ಯಂತ ತನ್ನ ಹಲವು ಶಾಖೆಗಳಲ್ಲಿ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಅದರಂತೆ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಹೌದು ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. https://ainlivenews.com/samsung-galaxy-samsung-users-beware-this-is-a-must-read-story/ ನವೆಂಬರ್ 13, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಅಪ್ಲೈ ಮಾಡಬೇಕು. ಬ್ಯಾಂಕಿಂಗ್ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಕರ್ನಾಟಕದಲ್ಲಿ 300 ಹುದ್ದೆಗಳು ಖಾಲಿ ಇವೆ. ಶೈಕ್ಷಣಿಕ ಅರ್ಹತೆ: ಕರ್ನಾಟಕ ಲೋಕಾಯುಕ್ತ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿರಬೇಕು. ವಯೋಮಿತಿ: ಕರ್ನಾಟಕ ಲೋಕಾಯುಕ್ತ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 20 ವರ್ಷ ಮತ್ತು ಗರಿಷ್ಠ 30 ವರ್ಷ ಮೀರಿರಬಾರದು. ವಯೋಮಿತಿ ಸಡಿಲಿಕೆ: OBC ಅಭ್ಯರ್ಥಿಗಳು: 03 ವರ್ಷಗಳು SC/ST ಅಭ್ಯರ್ಥಿಗಳು: 05 ವರ್ಷಗಳು PwD ಅಭ್ಯರ್ಥಿಗಳು: 10 ವರ್ಷಗಳು…
ಸೂರ್ಯೋದಯ: 06:20, ಸೂರ್ಯಾಸ್ತ : 05:39 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ,ಶರದ ಋತು, ಕಾರ್ತಿಕ್ ಮಾಸ, ತಿಥಿ:ಚೌತಿ ನಕ್ಷತ್ರ: ಜೇಷ್ಠ ರಾಹು ಕಾಲ: 03:00 ನಿಂದ 04:30 ತನಕ ಯಮಗಂಡ: 09:00 ನಿಂದ 10:30 ತನಕ ಗುಳಿಕ ಕಾಲ: 12:00 ನಿಂದ 01:30 ತನಕ ಅಮೃತಕಾಲ: ಬೆ.4:21 ನಿಂದ ಬೆ.6:02 ತನಕ ಅಭಿಜಿತ್ ಮುಹುರ್ತ: ಬೆ.11:37 ನಿಂದ ಮ.12:22 ತನಕ ಮೇಷ ರಾಶಿ ( ಅಶ್ವಿನಿ ಭರಣಿ ಕೃತಿಕ 1) ವಿದೇಶ ಭಾಗ್ಯ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜಯ, ಎಣ್ಣೆ,, ನೀರು, ಮಾರಾಟಗಾರರಿಗೆ ಧನ ಲಾಭ, ಸ್ಯಾರಿ ಸೆಂಟರ್ ಪ್ರಾರಂಭಿಸುವ ಚಿಂತನೆ, ಸಂಗಾತಿಗೆ ನೆನೆದು ಮನದಲ್ಲಿ ಒಯ್ದಾಟ, ಕಮಿಷನ್ ಏಜೆಂಟರಿಗೆ ಧನ ಲಾಭ, ಆರ್ಥಿಕ ಸಲಹೆಗಾರರಿಗೆ ಸಿಹಿ ಸುದ್ದಿ, ಉದ್ಯೋಗದ ಪ್ರಮೋಷನ್ ಪ್ರಯತ್ನದಲ್ಲಿ ಹಿನ್ನಡೆ, ತಾತ್ಕಾಲಿಕ ಸಿಬ್ಬಂದಿ ಉದ್ಯೋಗಿಗಳಿಗೆ ಖಾಯಂ ಸೇವೆ ಆಗುವ ಸಮಯ ಬಂದಿದೆ, ವಕೀಲರಿಗೆ ಉನ್ನತ ಹುದ್ದೆ ದೊರೆಯಲಿದೆ, ಗ್ಲಾಸ್ ಪ್ರೇಮ…
ಕೆಲವೊಬ್ಬರಿಗೆ ಬೆಳಿಗ್ಗೆ ಎದ್ದೇಳೋದು ಅಂದ್ರೆ ಒಂಥರ ಹಿಂಸೆ. ರಾತ್ರಿ ಮಲಗುವಾಗ ಬೆಳಿಗ್ಗೆ ಬೇಗ ಏಳಬೇಕು ಎನ್ನುವ ಜನರು, ಬೆಳಿಗ್ಗೆ ಆಗುತ್ತಿದ್ದಂತೆ ಹಿಂಸೆ ಪಡುತ್ತಾರೆ. https://ainlivenews.com/leaders-maneuver-to-take-man-mul-helm-secret-meeting-chaired-by-minister-chaluvarayaswamy/ ಹೀಗಾಗಿ ಬೆಳಗ್ಗೆ ಏಳಲು ಕಷ್ಟಪಡುವವರಿಗಾಗಿಯೇ ಇಂದಿನ ಲೇಖನ ಪ್ರಯೋಜನಕಾರಿಯಾಗಲಿದ್ದು ಈ ಟಿಪ್ಸ್‌ಗಳನ್ನು ಅಳವಡಿಸಿಕೊಂಡರೆ ನೀವು ಕೊಂಚವೂ ಪ್ರಯಾಸವಿಲ್ಲದೆ ಬೇಗ ಏಳಬಹುದಾಗಿದೆ. ನಿಮ್ಮ ಬಳಿ ನೀವು ಅಲರಾಮ್ ಗಡಿಯಾರ ಇರಿಸಿದರೆ ಅದನ್ನು ನಿಲ್ಲಿಸಿ ಪುನಃ ಮಲಗುವುದೇ ಅಭ್ಯಾಸವಾಗಿಬಿಡುತ್ತದೆ. ಆದರೆ ಕೊಂಚ ದೂರದಲ್ಲಿ ಅಲರಾಮ್ ಗಡಿಯಾರ ಇಡುವುದರಿಂದ ನೀವು ಮಲಗ್ಗಿದ್ದಲ್ಲಿಂದ ಎದ್ದು ಬಂದು ಅಲರಾಮ್ ನಿಲ್ಲಿಸಬೇಕು, ಇದರಿಂದ ನೀವು ಎಚ್ಚರಗೊಳ್ಳುತ್ತೀರಿ. ಇನ್ನು ಅಲರಾಮ್ ಸದ್ದನ್ನು ಕೊಂಚ ಗಟ್ಟಿಯಾದ ಹೆಚ್ಚಿನ ಮ್ಯೂಸಿಕ್ ಇರುವುದಕ್ಕೆ ಮಾರ್ಪಡಿಸಿ. ಇದರಿಂದ ನೀವು ಮಲಗಿದ್ದರೂ ಅಲರಾಮ್ ನಿಲ್ಲಿಸುವಂತೆ ಈ ಸದ್ದು ಪ್ರೇರೇಪಿಸುತ್ತದೆ. ಪುನಃ ಹಾಸಿಗೆಗೆ ಹೋಗಿ ಮಲಗುವುದನ್ನು ತಪ್ಪಿಸಿ ಇನ್ನು ಅಲರಾಮ್ ನಿಲ್ಲಿಸಿದ ನಂತರ ಕೂಡ ಮರಳಿ ಹಾಸಿಗೆಗೆ ಹೋಗುವ ನಿಮ್ಮ ಅಭ್ಯಾಸಕ್ಕ ಕಡಿವಾಣ ಹಾಕಿ. ಎದ್ದಾಯಿತು ಇನ್ನು ಮುಂದಿನ ಕೆಲಸಕ್ಕೆ ಮುಂದುವರಿಯುವ ಎಂಬ ಸಂಕೇತವನ್ನು…
ಮಂಡ್ಯ :- ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ (ಮನ್ ಮುಲ್) ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಜಿಲ್ಲೆಯ ಕೈ ನಾಯಕರಿಂದ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ. ಜಿಲ್ಲಾಧಿಕಾರಿ ಡಾ.ಕುಮಾರ ಅವರು ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಫೆ.02 ರಂದು ಚುನಾವಣೆ ನಿಗಧಿಯಾಗಿದೆ. ಈ ಬಾರಿ ಘಟಾನುಘಟಿಗಳು ಸ್ಪರ್ಧೆಗೆ ರಣಕಣ ಸಜ್ಜಾಗಿದ್ದು, ಚುನಾವಣೆ ಮತ್ತಷ್ಟು ರಂಗೇರುವಂತೆ ಮಾಡಿದೆ. ಚುನಾವಣಾ ಸಂಬಂಧ ಸೋಮವಾರ ಶಾಸಕ ಕೆ.ಎಂ.ಉದಯ್ ಅವರ ಸ್ವಗ್ರಾಮದ ನಿವಾಸದಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಮುಖಂಡರು ಮತ್ತು ಆಕಾಂಕ್ಷಿಗಳ ಸಭೆ ನಡೆಸಿ ಮನ್ಮುಲ್ ಅಧಿಕಾರದ ಚುಕ್ಕಾಣಿ ಹಿಡಿಯಲು ರಣತಂತ್ರ ರೂಪಿಸಿದ್ದಾರೆ. ಈ ಚುನಾವಣೆಯಲ್ಲಿ ಯಾವುದೇ ಪಕ್ಷ, ಚಿಹ್ನೆ ಹೆಸರಿನಲ್ಲಿ ಚುನಾವಣೆ ನಡೆಯದಿದ್ದರೂ ರಾಜಕೀಯ ನಂಟು ಬೆಸೆದುಕೊಂಡಿದೆ. ಎಲ್ಲವೂ ರಾಜಕೀಯ ಲೆಕ್ಕಾಚಾರದ ಮೇಲೆ ನಡೆಯಲಿದೆ. ಈಗಾಗಲೇ 6 ಮಂದಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದ್ದು, ಈಗಿನಿಂದಲೇ ಚುನಾವಣಾ ತಯಾರಿ ಮಾಡಿಕೊಂಡು ಗ್ರಾಮೀಣ ಭಾಗದಲ್ಲಿ ಮತದಾನಕ್ಕೆ ನೇಮಕಗೊಂಡಿರುವ ಡೇರಿಗಳ ಪ್ರತಿನಿಧಿಯನ್ನು ಮನವೊಲಿಸಿ, ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ…
ಧಾರ್ಮಿಕ ದೃಷ್ಟಿಯಿಂದ ಕಾರ್ತಿಕ ಮಾಸ ತುಂಬಾ ವಿಶೇಷವಾದ ಮಾಸವಾಗಿದೆ. ಕಾರ್ತಿಕ ಮಾಸ ನವೆಂಬರ್ 2ರಿಂದ ಶುರು. ಈ ಮಾಸ ಧಾರ್ಮಿಕ ಕಾರ್ಯಗಳಿಗೆ ತುಂಬಾನೇ ಶ್ರೇಷ್ಠ ಮಾಸವಾಗಿದೆ. ಕಾರ್ತಿಕ ಮಾಸದಲ್ಲಿ ಕಾರ್ತಿಕ ಸೋಮಾವಾರ ತುಂಬಾ ವಿಶೇಷವಾದ ದಿನವಾಗಿದೆ. ಈ ವರ್ಷ ಕಾರ್ತಿಕ ಮಾಸ ಡಿಸೆಂಬರ್ 1ಕ್ಕೆ ಮುಗಿಯಲಿದೆ. ಈ 30 ದಿನಗಳು ದೇವಾಲಯಗಳಲ್ಲಿ ದೀಪಗಳನ್ನು ಬೆಳಗಿಸಿ ವಿಶೇಷ ಪೂಜೆ ಸಲ್ಲಿಸಲಾಗುವುದು. ಕಾರ್ತಿಕ ಮಾಸದಲ್ಲಿ ದೇವರನ್ನು ಪೂಜಿಸುವುದು ಮತ್ತು ದೀಪಗಳನ್ನು ಹಚ್ಚುವುದು ಪ್ರತಿದಿನದ ಪ್ರಮುಖ ಆಚರಣೆಗಳು. ಇಡೀ ಕಾರ್ತಿಕ ಮಾಸವು ಭಕ್ತಿ ಮತ್ತು ಪೂಜೆಯ ಮಾಸವಾಗಿರುತ್ತದೆ. ಅನೇಕ ಹಬ್ಬಗಳನ್ನು ಸಹ ಆಚರಿಸಲಾಗುತ್ತದೆ. ಹಿಂದೂ ಧಾರ್ಮಿಕ ಸಂಪ್ರದಾಯದಲ್ಲಿ ಈ ಹಬ್ಬಗಳಿಗೆ ವಿಶೇಷ ಸ್ಥಾನವಿದೆ. ಕಾರ್ತಿಕ ಮಾಸವು ಭಗವಾನ್ ಶಿವ ಮತ್ತು ವಿಷ್ಣು ದೇವರಿಗೆ ಅತ್ಯಂತ ಪ್ರಶಸ್ತವಾದ ಸಮಯವಾಗಿದ್ದು, ಈ ಮಾಸದಲ್ಲಿ ಪೂಜಿಸುವುದು ಭಕ್ತರಿಗೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಹೇಳಲಾಗುತ್ತದೆ. ಕಾರ್ತಿಕ ಮಾಸದಲ್ಲಿ ದಾನ ಮಾಡುವುದು ಶ್ರೇಷ್ಠ ಕಾರ್ಯವಾಗಿದೆ. ಕಾರ್ತಿಕ ಮಾಸದಲ್ಲಿ ಬಡವರಿಗೆ ಅನ್ನವನ್ನು ದಾನ ಮಾಡಬೇಕು.…
ರಾಮನಗರ: ಉಪ ಕದನದ ಅಖಾಡ ರಂಗೇರಿದೆ. ಅಭ್ಯರ್ಥಿಗಳು ಕಣಕ್ಕಿಳಿದಾಗಿದೆ.. ಗೆಲುವಿನ ಲೆಕ್ಕಾಚಾರವೂ ಜೋರಾಗಿದೆ. ಮೂರು ದಿಕ್ಕು, ಮೂರು ಕ್ಷೇತ್ರದ ಉಪ ಕದನ.. ಕಾಂಗ್ರೆಸ್ಗೆ ಅಗ್ನಿಪರೀಕ್ಷೆ, ಬಿಜೆಪಿಗೆ ಪ್ರತಿಷ್ಠೆ, ದಳಕ್ಕೆ ಅಸ್ತಿತ್ವದ ಹೋರಾಟ. ಈ ಮಧ್ಯೆ ಮೂರು ಕ್ಷೇತ್ರಗಳ ಅಖಾಡಕ್ಕೆ ಅಭ್ಯರ್ಥಿಗಳ ರಂಗಪ್ರವೇಶ ಆಗಿದ್ದು, ಚುನಾವಣೆಯನ್ನ ರಂಗೇರಿಸಿದೆ. ಹೌದು ನಿಖಿಲ್ 15 ಹಳ್ಳಿಗಳಲ್ಲಿ ಪ್ರಚಾರ ಕಾರ್ಯ ಹಮ್ಮಿಕೊಂಡಿದ್ದಾರೆ. ಚನ್ನಪಟ್ಟಣದ ಹೆಚ್.ಬ್ಯಾಡರಳ್ಳಿ, ಬೊಮ್ಮನಾಯಕನಹಳ್ಳಿ ಹಾಗೂ ಬೇವೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಮತಯಾಚನೆ ನಡೆಸುತ್ತಿದ್ದಾರೆ. ಇದರೊಂದಿಗೆ ಪತ್ನಿ ರೇವತಿ ಕೂಡ ನಿಖಿಲ್ ಪರವಾಗಿ ಮತಬೇಟೆಗಿಳಿದಿದ್ದಾರೆ. ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಬೆಳ್ಳಂ ಬೆಳಗ್ಗೆಯಿಂದಲೇ ಪತ್ನಿ ರೇವತಿ ಪ್ರಚಾರ ಶುರು ಮಾಡಿದ್ದಾರೆ. ಚನ್ನಪಟ್ಟಣದ ಮಹಿಳಾ ಕಾಲೇಜು ಮುಂಭಾಗ ವಿದ್ಯಾರ್ಥಿಗಳಿಗೆ ಕರಪತ್ರ ಹಂಚಿ ನಿಖಿಲ್‌ಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ. ನಿಖಿಲ್ ಪತ್ನಿ ರೇವತಿ ಅವರಿಗೆ ಜೆಡಿಎಸ್ ಮಹಿಳಾ ಕಾರ್ಯಕರ್ತರು ಸಾಥ್ ನೀಡಿದ್ದಾರೆ. https://ainlivenews.com/good-news-for-farmers-if-you-deposit-%e2%82%b955-in-this-scheme-you-will-get-a-pension-of-%e2%82%b93000-per-month-apply-today/ ಇನ್ನೂ ಪ್ರಚಾರದ ವೇಳೆ ಮಾತನಾಡಿರುವ ನಿಖಿಲ್, ಕುಮಾರಸ್ವಾಮಿ ಎರಡು ಬಾರಿ ಈ ಕ್ಷೇತ್ರದಲ್ಲಿ ಗೆದ್ದಿದ್ದಾರೆ.…