ಗದಗ: ವಿಜಯಪುರದಲ್ಲಿ ವಕ್ಫ್ ಆಸ್ತಿ ವಿವಾದ ಬೆನ್ನಲ್ಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ರೈತರ ಜಮೀನನ್ನು ವಕ್ಫ್ ಖಾತೆಗೆ ಸೇರಿಸಲು ತೋರಿದ ಕೈಚಳಕ ಬಯಲಾಗಿತ್ತು. ಇದರಿಂದ ಆಕ್ರೋಶಗೊಂಡ ರೈತರು ಹೋರಾಟಕ್ಕೆ ಇಳಿದಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ, ಪಹಣಿಗಳಲ್ಲಿದ್ದ ವಕ್ಫ್ ಹೆಸರನ್ನು ಡಿಲೀಟ್ ಮಾಡಲಾಗಿದೆ. ಇದರ ಬೆನ್ನಲ್ಲೇ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಅನ್ನದಾನೇಶ್ವರ ಮಠದ ಆಸ್ತಿಯಲ್ಲೂ ವಕ್ಫ್ ಹೆಸರು ನಮೂದಿಸಲಾಗಿದೆ. ಹೌದು ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾರಂಭವಾದ ಶ್ರೀ ಅಮ್ಮದಾನೇಶ್ವರ ವಿದ್ಯಾವರ್ಧಕ ಪ್ರಸಾದ ನಿಲಯ ಸಮಿತಿಯ ಉಚಿತ ಪ್ರಸಾದ ನಿಲಯಕ್ಕೆ ಸೇರಿದ 15.06 ಎಕರೆಯಲ್ಲಿ 11.19 ಎಕರೆ ವಕ್ಫ್ ಆಸ್ತಿ ಎಂದು ನಮೂದು ಆಗಿದೆ. ಕೋಡಿಕೊಪ್ಪ ವೀರಪ್ಪಜ್ಜನವರ ಹಾಗೂ ಬಾಗಲಕೋಟೆ ವೈರಾಗ್ಯದ ಮಲ್ಲಣಾರ್ಯರ ಉಚಿತ ಪ್ರಸಾದ ನಿಲಯದ ಆಸ್ತಿ ಸರ್ವೆ ನಂಬರ್ 410/2ಬಿ ಈಗ ರಹಮಾನ ಶಾವಲಿ ದರ್ಗಾ ವಕ್ಫ್ ಆಸ್ತಿ ಎಂದು ನೋಂದಣಿಯಾಗಿದೆ. https://ainlivenews.com/do-you-sleep-less-at-night-if-so-beware-of-these-diseases/ ಲಿಂಗೈಕ್ಯ ಡಾ. ಅಭಿನವ ಅನ್ನದಾನ ಸ್ವಾಮೀಜಿಗಳು ಶ್ರೀಮಠದ ಪೀಠಾಧಿಪತಿಗಳಾಗಿದ್ದಾಗ ಪಹಣಿಯ ಕಾಲಂ ನಂ. 11ರಲ್ಲಿ…
Author: AIN Author
ಬೆಂಗಳೂರು :- ಪೋಷಕರೇ ಈ ಸುದ್ದಿ ಮಿಸ್ ಮಾಡ್ದೆ ನೋಡಿ. ನಿಮ್ಮ ಮಕ್ಕಳನ್ನು ಹೊರಗೆ ಬೈಕ್ ನಲ್ಲಿ ಕರೆದು ಕೊಂಡು ಹೋಗುವಾಗ, ಶಾಲೆಗೆ ಹೋಗುವಾಗ, ಇನ್ನೂ ಮುಂದೆ ಈ ನಿಯಮ ಪಾಲಿಸೋದು ಕಡ್ಡಾಯ ಆಗಿದೆ. https://ainlivenews.com/snehamai-krishna-expressed-doubt-about-the-lokayukta-investigation/ ವಾಹನ ಸವಾರರ ಸುರಕ್ಷತೆಗಾಗಿ ಸರ್ಕಾರ ಹಾಗೂ ಸಾರಿಗೆ ಇಲಾಖೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇತ್ತೀಚೆಗೆ 4 ವರ್ಷದ ಒಳಗಿನ ಮಕ್ಕಳನ್ನು ಶಾಲೆ ಅಥವಾ ಇತರೆ ಕೆಲಸಗಳಿಗೆ ಹಿಂದೆ, ಮುಂದೆ ಕೂರಿಸಿಕೊಂಡು ಬೈಕ್ ಚಲಾವಣೆ ಮಾಡುವ ವಾಹನ ಸವಾರರಿಗೆ ಬಿಸಿ ಮುಟ್ಟಿಸಲು ಸಾರಿಗೆ ಇಲಾಖೆ ಮುಂದಾಗಿದೆ. 4 ವರ್ಷ ಒಳಗಿನ ಮಕ್ಕಳನ್ನು ಬೈಕ್‌ಗಳಲ್ಲಿ ಕರೆದುಕೊಂಡು ಹೋಗುವಾಗ ಶಿಶು ಕವಚ ಹಾಕದಿದ್ದರೆ ಕೇಸ್ ಹಾಗೂ ದಂಡವನ್ನು ಸಾರಿಗೆ ಇಲಾಖೆ ಹಾಕುತ್ತಿದೆ. ಮಕ್ಕಳಿಗೆ ಸೇಫ್ಟಿ ಬೆಲ್ಟ್ ಹಾಕದ ಪೋಷಕರಿಗೆ 1,000 ರೂ. ದಂಡ ಹಾಕುತ್ತಿದೆ. ಕೇಂದ್ರ ಮೋಟಾರು ವಾಹನ ಕಾಯ್ದೆ 2019ರ ಅನ್ವಯ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವ ಮಕ್ಕಳು ಸೇಫ್ಟಿ ಧಾರಣೆ ಮಾಡುವುದು ಕಡ್ಡಾಯ. ಈ ಬಗ್ಗೆ…
ಬೆಂಗಳೂರು:- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆ ಬಗ್ಗೆ ದೂರುದಾರ ಸ್ನೇಹಮಯಿ ಕೃಷ್ಣ ಅನುಮಾನ ವ್ಯಕ್ತಪಡಿಸಿದ್ದಾರೆ. https://ainlivenews.com/rohit-unavailable-for-test-series-from-next-year/ ಮುಡಾ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸುವ ಮೊದಲು ತನಿಖೆ ನಡೆಯುವ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದ ದೂರುದಾರ ಸ್ನೇಹಮಯಿ ಕೃಷ್ಣ ಈಗ ಲೋಕಾಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದರೂ ಸೂಕ್ತ ತನಿಖೆ ನಡೆಯುವ ಬಗ್ಗೆ ಅನುಮಾನಿಸುತ್ತಿದ್ದಾರೆ. ಕಾನೂನಿನ ಮುಂದೆ ಎಲ್ಲರೂ ಒಂದೇ ಕಾರಣಕ್ಕೆ ಸಿಎಂರನ್ನು ವಿಚಾರಣೆಗೆ ಕರೆಸಲಾಗುತ್ತಿದೆ, ಆದರೆ ವಿಚಾರಣೆ ಸರಿಯಾದ ನಿಟ್ಟಿನಲ್ಲಿ ಸಾಗುತ್ತದೆಯೇ ಎಂಬ ಸಂಶಯ ಕಾಡುತ್ತಿದೆ ಎಂದು ಕೃಷ್ಣ ಹೇಳಿದರು.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಸೋಲಿನ ನಂತರ ರೋಹಿತ್ ಶರ್ಮಾ ಅವರು ಮುಂದಿನ ವರ್ಷದಿಂದ ತಂಡದಿಂದ ಇರುವುದಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ. https://ainlivenews.com/at-dcc-banks-branches-crores-of-rs-allegation-of-embezzlement-3-managers-suspended/ ಟೀಂ ಇಂಡಿಯಾ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದರಷ್ಟೇ ಫೈನಲ್ಗೆ ಸುಗಮವಾಗಿ ಅರ್ಹತೆ ಪಡೆಯಲ್ಲಿದೆ. ಇಲ್ಲದಿದ್ದರೆ, ಸತತ ಮೂರನೇ ಬಾರಿಗೆ ಫೈನಲ್ ಆಡುವ ಟೀಂ ಇಂಡಿಯಾ ಕನಸು ಭಗ್ನಗೊಳ್ಳಲಿದೆ. ಇನ್ನು ಕಿವೀಸ್ ವಿರುದ್ಧದ ಸೋಲಿನ ನಂತರ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ನಾಯಕತ್ವದ ಮೇಲೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಈ ಸರಣಿಯಲ್ಲಿ ಅವರ ಬ್ಯಾಟ್ ಸಾಕಷ್ಟು ಮೌನವಾಗಿತ್ತು. ಹೀಗಾಗಿ ರೋಹಿತ್ರನ್ನು ಟೆಸ್ಟ್ ನಾಯಕತ್ವದಿಂದ ಕೆಳಗಿಳಿಸಬೇಕು ಎಂಬ ಕೂಗು ಜೋರಾಗಿದೆ. ಈ ನಡುವೆ ಟೀಂ ಇಂಡಿಯಾದ ಅನುಭವಿ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ರೋಹಿತ್ ಶರ್ಮಾ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ ಇತ್ತೀಚಿನ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಅವರ ಸಾಧನೆ ವಿಶೇಷವೇನಿಲ್ಲ. ಕಳೆದ 10 ಇನ್ನಿಂಗ್ಸ್‌ಗಳಲ್ಲಿ ರೋಹಿತ್…
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ DCC ಬ್ಯಾಂಕ್‌ನ ಶಾಖೆಗಳಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ಆರೋಪ ಕೇಳಿಬಂದಿತ್ತು. ಈ ಸಂಬಂಧ ಕೋಲಾರ, ಕೆಜಿಎಫ್ ಹಾಗೂ ಚಿಂತಾಮಣಿ ತಾಲೂಕುಗಳ ವ್ಯವಸ್ಥಾಪಕರನ್ನು ಅಮಾನತು ಮಾಡಲಾಗಿದೆ. ತನಿಖೆ ವೇಳೆ ಬ್ಯಾಂಕ್‌ನ ಮೂರು ಶಾಖೆಗಳಲ್ಲಿ 9.86 ಕೋಟಿ ಲೂಟಿ ಸಾಬೀತು ಆಗಿದೆ. ಕೋಲಾರ ಶಾಖೆಯಲ್ಲಿ 1.50 ಕೋಟಿ,ಕೆಜಿಎಫ್ ಶಾಖೆಯಲ್ಲಿ 4.17 ಕೋಟಿ,ಚಿಂತಾಮಣಿ ಶಾಖೆಯಲ್ಲಿ 2.23 ಕೋಟಿ ದುರುಪಯೋಗ ಮಾಡಲಾಗಿದೆ. https://ainlivenews.com/do-you-sleep-less-at-night-if-so-beware-of-these-diseases/ ಕೋಲಾರ ಶಾಖೆಯಲ್ಲಿ 1.50 ಕೋಟಿ ರೂ., ಕೆಜಿಎಫ್ ಶಾಖೆಯಲ್ಲಿ 4.17 ಕೋಟಿ ರೂ. ಹಾಗೂ ಚಿಂತಾಮಣಿ ಶಾಖೆಯಲ್ಲಿ 2.23 ಕೋಟಿ ರೂ. ಹಣ ದುರುಪಯೋಗವಾಗಿರುವುದು ಆಂತರಿಕ ತನಿಖೆಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ವ್ಯವಸ್ಥಾಪಕರಾದ ಎಂ ಅಮರೇಶ್, ಜಿಎನ್ ಗಿರೀಶ್ ಹಾಗೂ ಜಿ ನಾಗರಾಜ್ ಎಂಬುವರ ವಿರುದ್ಧ ವಿಚಾರಣೆಯನ್ನು ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಚಿಂತಾಮಣಿ ಹಾಗೂ ಗುಡಿಬಂಡೆ ಶಾಖೆಗಳಲ್ಲಿರುವ ಡಿಸಿಸಿ ಬ್ಯಾಂಕಿನ ಹಣ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ಬ್ಯಾಂಕಿನ ಸಿಇಒ ಸೇರಿದಂತೆ 17 ಜನರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ರನ್ ಮಷಿನ್ ವಿರಾಟ್ ಕೊಹ್ಲಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕಳೆದ 16 ವರ್ಷಗಳಿಂದ ಕ್ರಿಕೆಟ್ ಜಗತ್ತಿನಲ್ಲಿ ಮಿಂಚುತ್ತಿರುವ ಕೊಹ್ಲಿ, ಹಲವಾರು ದಾಖಲೆಗಳನ್ನು ಬರೆದಿದ್ದಾರೆ ಮತ್ತು ಮುರಿದಿದ್ದಾರೆ. ಈ ದಾಖಲೆ ಯಾರು ಮುರಿಯಲು ಅಸಾಧ್ಯ. https://ainlivenews.com/suspicion-surrounding-guruprasads-death-explosive-truth-revealed-in-preliminary-report/ ಏಕದಿನ ಕ್ರಿಕೆಟ್‌ನಲ್ಲಿ 50 ಶತಕ:ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿ ದಾಖಲೆ ಬರೆದಿದ್ದಾರೆ. ಈ ಹಿಂದೆ ಸಚಿನ್ ತೆಂಡೂಲ್ಕರ್ 463 ಏಕದಿನ ಪಂದ್ಯಗಳಲ್ಲಿ 49 ಶತಕಗಳನ್ನು ಬಾರಿಸಿದ್ದರೆ, ವಿರಾಟ್ ಕೇವಲ 295 ಪಂದ್ಯಗಳಲ್ಲೇ 50 ಶತಕಗಳನ್ನು ಪೂರೈಸಿದ್ದಾರೆ. 80 ಅಂತಾರಾಷ್ಟ್ರೀಯ ಶತಕ:ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಸರಲ್ಲಿದೆ. ಅವರು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 100 ಶತಕಗಳನ್ನು ಪೂರೈಸಿದ್ದಾರೆ. ನಂತರದ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದಾರೆ. ಇವರು ಇದುವರೆಗೆ ಒಟ್ಟು 80 ಅಂತಾರಾಷ್ಟ್ರೀಯ ಶತಕಗಳನ್ನು ಸಿಡಿಸಿದ್ದಾರೆ. ಶೂನ್ಯ ಎಸೆತಕ್ಕೆ ವಿಕೆಟ್:ವಿರಾಟ್ ಕೊಹ್ಲಿ ಹೆಸರಲ್ಲಿ ಅಪರೂಪದ ದಾಖಲೆಯೊಂದಿದೆ. ಇದು ಈವರೆಗೂ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ. 2011ರಲ್ಲಿ ಟೀಂ…
ಹುಬ್ಬಳ್ಳಿ: ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನ ಸಭೆ ಉಪ ಚುನಾವಣೆಯ ಪ್ರಚಾರ ಕಾರ್ಯಕ್ರಮ ಮುಗಿಸಿಕೊಂಡು ಭಾನುವಾರ ರಾತ್ರಿ ಹುಬ್ಬಳ್ಳಿ ಗೆ ಮರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕ, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ನಿವಾಸದಲ್ಲಿ ಭೋಜನ ಸವಿದರು. ಸಂತೋಷನಗರ ಮಧುರಾ ಪಾರ್ಕ್ ನಲ್ಲಿರುವ ತಮ್ಮ ಮನೆಗೆ ಆಗಮಿಸುತ್ತಿದ್ದಂತೆ ಸಿದ್ದರಾಮಯ್ಯ ಅವರನ್ನು ಅಬ್ಬಯ್ಯ ಹಾಗೂ ಅವರ ಪತ್ನಿ, ಮಕ್ಕಳು, ಕುಟುಂಬದ ಸದಸ್ಯರು ಸ್ವಾಗತಿಸಿದರು. ಶಿಗ್ಗಾಂವ ಉಪ ಚುನಾವಣಾ ಪ್ರಚಾರ ಮುಗಿಸಿ ನೇರವಾಗಿ ಹುಬ್ಬಳ್ಳಿಗೆ ಆಗಮಿಸಿದ ಅವರು ಮುಖ ್ಯ ಮಂತ್ರಿ ಸಿದ್ಧರಾಮಯ್ಯ ನವರು ನಾಟಿ ಕೋಳಿ ಸಾರು,ಮಟನ್ ಬಿರಿಯಾನಿ,ಖಡಕ್ ಜೋಳದ ರೊಟ್ಟಿ ಊಟ ಸವಿದರು. ಒಂದು ಕಡೆ ಸಸ್ಯಹಾರಿ ಇನ್ನೊಂದು ಕಡೆ ಮಾಂಸಹಾರಿ ಭರ್ಜರಿ ಬಗೆ ಬಗೆಯ ಉತ್ತರ ಕರ್ನಾಟಕ ಭಾಗದ ವಿಶೇಷ ಖಾದ್ಯದ ರುಚಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯಾ ನವರು ಸವಿದರು. https://ainlivenews.com/do-you-sleep-less-at-night-if-so-beware-of-these-diseases/ ಹುಬ್ಬಳ್ಳಿಯಲ್ಲಿರುವ ಶಾಸಕ ಪ್ರಸಾದ ಅಬ್ಬಯ್ಯ ಅವರ ಮನೆಗೆ ತೆರಳಿದ ಸಿಎಂ ಸಿದ್ಧರಾಮಯ್ಯಗೆ ಶಾಸಕ ಪ್ರಸಾದ…
ತುಮಕೂರು: ಅನುಮಾನಸ್ಪದವಾಗಿ ಏಕಲವ್ಯ ವಸತಿ ಶಾಲೆಯ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಬಜ್ಜನಹಳ್ಳಿ ಬಳಿಯಿರುವ ಏಕಲವ್ಯ ವಸತಿ ಶಾಲೆಯಲ್ಲಿ ನಡೆದಿದೆ. 8ನೇ ತರಗತಿಯಲ್ಲಿ ಓದುತ್ತಿದ್ದ ಅಭಿಲಾಷ್(13) ಮೃತ ವಿದ್ಯಾರ್ಥಿ. https://ainlivenews.com/do-you-sleep-less-at-night-if-so-beware-of-these-diseases/ ಸದ್ಯ ಸಾವಿಗೆ ಕಾರಣ ತಿಳಿದುಬಂದಿಲ್ಲ. ವಸತಿ ಶಾಲೆ ಪ್ರಿನ್ಸಿಪಾಲ್, ವಾರ್ಡನ್ ನಿರ್ಲಕ್ಷ್ಯದಿಂದ ಸಾವನ್ನಪ್ಪಿರುವುದಾಗಿ ಆರೋಪಿಸಲಾಗಿದೆ. ಮೃತ ವಿದ್ಯಾರ್ಥಿ ಅಭಿಲಾಷ್, ಶಕುನಿ ತಿಮ್ಮನಹಳ್ಳಿಯ ನಿವಾಸಿ. ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಹುಬ್ಬಳ್ಳಿ: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ ತೋರಿದ ಆರೋಪದ ಮೇರೆಗೆ ಮುಖ್ಯ ಪೇದೆಯೊಬ್ಬರ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದೆ. ಕೇಶ್ವಾಪುರ ಠಾಣೆ ವ್ಯಾಪ್ತಿಯ ಶಬರಿ ನಗರದ ಎಂ.ಎ. ಖಾದಿರನವರ ಎಂಬಾತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಈತನು ರವಿವಾರ ಮಧ್ಯಾಹ್ನ 9 ವರ್ಷದ ಬಾಲಕಿ ಪುಸಲಾಯಿಸಿ ಮನೆಗೆ ಕರೆಯಿಸಿ ಅನುಚಿತ ವರ್ತನೆ ತೋರಿದ್ದಾನೆ. ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಹೆಡ್ ಕಾನ್ಸಟೇಬಲ್ ಆಗಿರುವ ಈತನು ಮೂರು ಮಕ್ಕಳ ತಂದೆಯಾಗಿದ್ದರೂ ಇಂತಹ ದುವರ್ತನೆ ತೋರಿದ್ದಾನೆ. ಬಾಲಕಿಯ ಪೋಷಕರು ಅನುಚಿತ ವರ್ತನೆ ತೋರಿರುವ ಎಚ್‌ಸಿಗೆ ಧರ್ಮದೇಟು ನೀಡಿದ್ದಾರೆ. ಅಲ್ಲದೇ ಕೇಶ್ವಾಪುರ ಪೊಲೀಸರಿಗೆ ಅವನನ್ನು ಒಪ್ಪಿಸಿದ್ದಾರೆ. https://ainlivenews.com/do-you-sleep-less-at-night-if-so-beware-of-these-diseases/ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿ ಹು-ಧಾ. ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಈಗಾಗಲೇ ಆತನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕಾನ್ಪುರ: ಖಾಸಗಿ ಆಸ್ಪತ್ರೆಯೊಂದರ ನಿರ್ದೇಶಕ 22 ವರ್ಷದ ನರ್ಸ್ ಮೇಲೆ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಅತ್ಯಾಚಾರವೆಸಗುವ ಮುನ್ನ ನರ್ಸ್‌ಗೆ ಅಮಲು ಬೆರೆಸಿದ ತಂಪು ಪಾನೀಯವನ್ನು ನೀಡಲಾಗಿತ್ತು ಎಂದು ಶಂಕಿಸಲಾಗಿದೆ. ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಕಲ್ಯಾಣಪುರದ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಅಭಿಷೇಕ್ ಪಾಂಡೆ ಮಾತನಾಡಿ, ಮಹಿಳೆ ಕಳೆದೆರಡು ತಿಂಗಳುಗಳಿಂದ ಕಲ್ಯಾಣಪುರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. https://ainlivenews.com/do-you-sleep-less-at-night-if-so-beware-of-these-diseases/ ಭಾನುವಾರ ಸಂಜೆ, ಆಸ್ಪತ್ರೆಯಲ್ಲಿ ನಿರ್ದೇಶಕ ಆಯೋಜಿಸಿದ್ದ ಪಾರ್ಟಿಯಲ್ಲಿ ನರ್ಸ್ ಪಾಲ್ಗೊಂಡಿದ್ದಳು. ಕೆಲಸದ ನೆಪದಲ್ಲಿ ಆಕೆಯನ್ನು ರಾತ್ರಿ ಸಮಯದಲ್ಲಿ ಆಸ್ಪತ್ರೆಯಲ್ಲಿ ಇರುವಂತೆ ನಿರ್ದೇಶಕ ಹೇಳಿದ್ದು, ಮಧ್ಯರಾತ್ರಿ ಆಕೆಯನ್ನು ಕೋಣೆಗೆ ಕರೆದು ಬಲವಂತವಾಗಿ ಒಳಗೆ ಎಳೆದುಕೊಂಡು ಹೋಗಿ ಬಾಗಿಲು ಹಾಕಿ ಕೃತ್ಯವೆಸಗಿದ್ದಾನೆ ಎಂದು ತಿಳಿಸಿದ್ದಾರೆ. ಈ ಘಟನೆಯನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ನರ್ಸ್‌ಗೆ ನಿರ್ದೇಶಕ ಬೆದರಿಕೆ ಹಾಕಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆರೋಪಿಯ ಗುರುತನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ. ಬಂಧನದ ನಂತರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸಂತ್ರಸ್ತೆಯ…