ಬೆಂಗಳೂರು/ಹಾವೇರಿ:-ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ವಿಧಿವಶರಾಗಿದ್ದು, ರಾಜಕೀಯ ಮುಖಂಡರು ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. https://ainlivenews.com/how-long-has-guru-kidnapping-of-own-children-by-mothers/ ಹಾನಗಲ್ ಕ್ಷೇತ್ರದ ಮಾಜಿ ಶಾಸಕರಾಗಿದ್ದ ಮನೋಹರ್ ತಹಶೀಲ್ದಾರ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು, ಬೆಂಗಳೂರಿನ ಚಾಮರಾಜಪೇಟೆಯ ಶಂಕರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾರೆ. ಮನೋಹರ್ ತಹಶೀಲ್ದಾರ್ ಅವರು ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂದು ಬಳಗವನ್ನ ಅಗಲಿದ್ದಾರೆ. ಹಾನಗಲ್ನ ಎನ್ಸಿಜೆಸಿ ಮಹಾವಿದ್ಯಾಲಯ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ಅವರ ಹುಟ್ಟೂರು ಆದ ಅಕ್ಕಿಹೊಳಿ ಗ್ರಾಮದ ತೋಟದ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. 2015ರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಬಕಾರಿ ಸಚಿವರಾಗಿದ್ದ ಮನೋಹರ್ ತಹಶೀಲ್ದಾರ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ. ಹೀಗಾಗಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿಕೊಂಡಿದ್ದರು. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
Author: AIN Author
ಧಾರವಾಡ:- ಕಾಲ ಕೆಟ್ಟೋಗಿದೆ ಮರ್ರೆ. ತಾಯಿ ಅಂದ್ರೆ ಮಕ್ಕಳು ಹಾಗೂ ಗಂಡನಿಗಾಗಿ ತನ್ನ ಇಡೀ ಜೀವನವನ್ನೇ ಮುಡಿಪಾಗಿಡುತ್ತಿದ್ದ ಆ ಕಾಲ ಎಲ್ಲಿ. ಸ್ವಂತ ಮಕ್ಕಳನ್ನೇ ಕಿಡ್ನ್ಯಾಪ್ ಮಾಡಿ ತಮ್ಮ ಸುಖ ತೀರಿಸಿಕೊಳ್ಳುತ್ತಿರೊ ಈ ಕಾಲ ಎಲ್ಲಿ. https://ainlivenews.com/champions-trophy-2025-team-india-match-dates-fixed-who-will-be-the-first-opponent/ ಎಲ್ಲಾ ತಾಯಂದಿರು ಇಂತವರ ಹಾಗೆ ಇರಲ್ಲ. ಮರ್ರೆ ಕೆಲವೊಂದಿಷ್ಟು ಮಂದಿಯ ಬಗ್ಗೆ ಹೇಳ್ತಿರೋದು. ಎಸ್, ವಿದ್ಯಾಕಾಶಿ ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳ ಕಿಡ್ನ್ಯಾಪ್ ಪ್ರಕರಣ ನಡೆದಿದೆ. ಅಣ್ಣ-ತಮ್ಮಂದಿರ ಹೆಂಡತಿಯರಿಂದಲೇ ಈ ಕೃತ್ಯ ನಡೆದಿದ್ದು, ತಮ್ಮಿಬ್ಬರ ಪ್ರಿಯಕರರೊಂದಿಗೆ ಸೇರಿ ತಮ್ಮದೇ ಆರು ಮಕ್ಕಳ ಕಿಡ್ನ್ಯಾಪ್ ಮಾಡಿದ್ದಾರೆ. ಅಪಹರಣ ಕೇಸ್ ಬೇಧಿಸಿ ಆರು ಮಕ್ಕಳನ್ನು ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು ರಕ್ಷಣೆ ಮಾಡಿದ್ದಾರೆ. ನ. 7ರಿಂದ ಇಬ್ಬರು ತಾಯಂದಿರು ಹಾಗೂ ಆರು ಮಕ್ಕಳು ನಾಪತ್ತೆಯಾಗಿದ್ದರು. ಮಕ್ಕಳನ್ನು ಹಾಸ್ಟೆಲ್‌ಗೆ ಸೇರಿಸುವುದಾಗಿ ಕರೆದುಕೊಂಡು ಹೋಗಿದ್ದ ತಾಯಂದಿರು, ನಂತರ ಪತ್ತೇನೇ ಇರಲಿಲ್ಲ. ಧಾರವಾಡ ವಿದ್ಯಾಗಿರಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾದ ಮೇಲೆ ಮಕ್ಕಳ ತಾಯಂದಿರಿಗಾಗಿ ಹುಡುಕಾಟ ನಡೆದಿತ್ತು. ಇವರಿಬ್ಬರು ಮುತ್ತುರಾಜ್…
ಬಿಗ್ ಬಾಸ್ ಕನ್ನಡ ಸೀಸನ್ 11’ ಶೋಗೆ ವೈಲ್ಡ್ ಕಾರ್ಡ್ ಮೂಲಕ ಬಂದಿರುವ ನಟಿ ಶೋಭಾ ಶೆಟ್ಟಿ ಅವರಿಗೆ ಆಘಾತವಾಗಿದೆ. ರಜತ್ ಮತ್ತು ಶೋಭಾ ಶೆಟ್ಟಿ ಅವರು ಈಗ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋಗೆ ಬಂದಿದ್ದಾರೆ. ದೊಡ್ಮನೆಗೆ ಬರುವಾಗ ಶೋಭಾ ಶೆಟ್ಟಿ ಅವರು ಭಾರಿ ಮಾತುಗಳನ್ನು ಆಡಿದ್ದರು. ಜೋರು ಧ್ವನಿಯಲ್ಲಿ ಕಿರುಚಾಡುತ್ತಾ ಎಲ್ಲರಿಗೂ ನಡುಕ ಹುಟ್ಟಿಸಲು ಪ್ರಯತ್ನಿಸಿದ್ದರು. ಆದರೆ ಆಟದಲ್ಲಿ ಅವರಿಗೆ ಹಿನ್ನಡೆ ಆಗಿದೆ. ತಮಗೆ ಸಿಕ್ಕ ಮೊದಲ ಆಟದಲ್ಲಿ ಅವರು ಸೋಲು ಕಂಡಿದ್ದಾರೆ. https://ainlivenews.com/champions-trophy-2025-team-india-match-dates-fixed-who-will-be-the-first-opponent/ ಎರಡು ತಂಡಗಳಾಗಿ ಈ ಆಟ ಆಡಬೇಕಿತ್ತು. ಈ ಟಾಸ್ಕ್ನಲ್ಲಿ ಒಂದು ತಂಡವನ್ನು ಭವ್ಯಾ ಮುನ್ನಡೆಸಿದರೆ, ಇನ್ನೊಂದು ತಂಡವನ್ನು ಶೋಭಾ ಶೆಟ್ಟಿ ಮುನ್ನಡೆಸಿದರು. ಆಟದ ಮಧ್ಯದಲ್ಲಿ ಶೋಭಾ ಶೆಟ್ಟಿ ಅವರು ಎಡವಿ ಬಿದ್ದರು. ಎತ್ತರದಿಂದ ಬಿದ್ದರೂ ಕೂಡ ಅವರು ಆಟ ನಿಲ್ಲಿಸಲಿಲ್ಲ. ದೇವರ ಸ್ಮರಣೆ ಮಾಡುತ್ತಾ ಆಟ ಮುಂದುವರಿಸಿದರು. ಹಾಗಿದ್ದರೂ ಕೂಡ ಅವರಿಗೆ ಗೆಲವು ಸಿಗಲಿಲ್ಲ. ಅಂತಿಮವಾಗಿ ಭವ್ಯಾ ಅವರ ತಂಡ ಈ…
ಭಾರತ ತಂಡವು ಫೆಬ್ರವರಿ 20 ರಿಂದ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭಿಸಲಿದೆ. ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ 2025 ಫೆಬ್ರವರಿ 19 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಮಾರ್ಚ್ 9 ರಂದು ನಡೆಯಲಿದೆ ಎಂದು ವರದಿಯಾಗಿದೆ. https://ainlivenews.com/lokayukta-gave-a-shock-to-the-corrupt-in-the-morning-of-bellam-25-places-attacked-checked/ ಗ್ರೂಪ್-ಎ ನಲ್ಲಿ ಕಾಣಿಸಿಕೊಂಡಿರುವ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವನ್ನು ಎದುರಿಸಲಿದ್ದು, ಎರಡನೇ ಮ್ಯಾಚ್ನಲ್ಲಿ ನ್ಯೂಝಿಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ. ಹಾಗೆಯೇ ಮೂರನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ತಂಡದ ವಿರುದ್ಧ ಸೆಣಸಲಿದೆ. ಅದರಂತೆ ಟೀಮ್ ಇಂಡಿಯಾದ ಕರಡು ವೇಳಾಪಟ್ಟಿ ಈ ಕೆಳಗಿನಂತಿದೆ… ಫೆಬ್ರವರಿ 20, 2025: ಭಾರತ Vs ಬಾಂಗ್ಲಾದೇಶ್ ಫೆಬ್ರವರಿ 23, 2025: ಭಾರತ Vs ನ್ಯೂಝಿಲೆಂಡ್ ಮಾರ್ಚ್ 1, 2025: ಭಾರತ Vs ಪಾಕಿಸ್ತಾನ್. ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯು ಪಾಕಿಸ್ತಾನದಲ್ಲಿ ನಡೆಯಲಿದೆ. ಅಲ್ಲದೆ ಈ ಟೂರ್ನಿಗಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಮೂರು ಸ್ಟೇಡಿಯಂಗಳನ್ನು ಫೈನಲ್ ಮಾಡಿದ್ದು, ಅದರಂತೆ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ಪಂದ್ಯಗಳು ನಡೆಯಲಿದೆ. ಇಲ್ಲಿ…
ಬೆಂಗಳೂರು:- ಆದಾಯಕ್ಕಿಂತ ಅತಿ ಹೆಚ್ಚು ಆಸ್ತಿ ಗಳಿಕೆ ಮಾಡಿದ ಹಿನ್ನೆಲೆ ಇಂದು ಸರ್ಕಾರಿ ಅಧಿಕಾರಿಗಳಿಗೆ ಶಾಕ್ ಕೊಟ್ಟಿದ್ದಾರೆ ಲೋಕಾಯುಕ್ತ ಅಧಿಕಾರಿಗಳು. https://ainlivenews.com/class-10-12-exam-schedule-published/ ಬೆಳ್ಳಂಬೆಳಗ್ಗೆ ಕರ್ನಾಟಕದ ಸುಮಾರು 25 ಕಡೆ ದಾಳಿ ಮಾಡಿದೆ. ರಾಜ್ಯದ ಮಂಡ್ಯ, ಚಿಕ್ಕಬಳ್ಳಾಪುರ ಸೇರಿ 25 ಕಡೆ ಲೋಕಾಯುಕ್ತ ದಾಳಿಯಾಗಿದೆ. ಭ್ರಷ್ಟಾಚಾರ ಆರೋಪ ಹೊತ್ತ ನಾಲ್ವರು ಅಧಿಕಾರಿಗಳಿಗೆ ಸಂಬಂಧಿಸಿ 25 ಕಡೆಗಳಲ್ಲಿ ದಾಳಿ ಮಾಡಲಾಗಿದೆ. ಯಾರ ಮೇಲೆ ದಾಳಿ..? ಚಿಕ್ಕಬಳ್ಳಾಪುರದಲ್ಲಿ ಭೂ ಹಾಗೂ ಗಣಿ ವಿಜ್ಞಾನ ಇಲಾಖೆಯ ಕೃಷ್ಣವೇಣಿ ಮಂಡ್ಯದಲ್ಲಿ ಕಾವೇರಿ ನೀರಾವರಿ ನಿಗಮದ ಎಂಡಿ ಮಹೇಶ್ ಬೆಂಗಳೂರಿನ ಟೌನ್ ಅಂಡ್ ಫ್ಲಾನಿಂಗ್ ಡೈರೆಕ್ಟರ್ ತಿಪ್ಪೇಸ್ವಾಮಿ ಬೆಂಗಳೂರಿನ ಅಬಕಾರಿ ಇಲಾಖೆಯ ಎಸ್ಪಿ ಮಹೇಶ್
ನವದೆಹಲಿ:- 2025 ರ 10, 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟಗೊಂಡಿದೆ. https://ainlivenews.com/a-lonely-bear-that-was-separated-from-its-mother-died/ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷಾ ವೇಳಾಪಟ್ಟಿ ಪ್ರಕಟಗೊಂಡಿದೆ. 2025 ರ ಬೋರ್ಡ್ ಪರೀಕ್ಷೆಗಳು ಫೆ.15 ರಿಂದ ಪ್ರಾರಂಭವಾಗಲಿವೆ. CBSE ಇತ್ತೀಚೆಗೆ 10 ಮತ್ತು 12 ನೇ ತರಗತಿಗಳಿಗೆ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುವುದರ ಕುರಿತು ವಿವರಗಳನ್ನು ಬಿಡುಗಡೆ ಮಾಡಿತ್ತು. 10 ನೇ ತರಗತಿಯ ಪ್ರಾಯೋಗಿಕ ಪರೀಕ್ಷೆಗಳು 2025ರ ಜ.1 ರಿಂದ ನಡೆಯಲಿದೆ. ಆದರೆ 12 ನೇ ತರಗತಿಯ ಪರೀಕ್ಷೆಗಳು ಫೆ.15 ರಂದು ಪ್ರಾರಂಭವಾಗುತ್ತವೆ ಎಂದು ತಿಳಿಸಿತ್ತು. ವೇಳಾಪಟ್ಟಿ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ? ಸ್ಟೆಪ್ 1: cbse.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಕೊಡಿ. ಸ್ಟೆಪ್ 2: ಮುಖಪುಟದಲ್ಲಿ, “Main Website” ಲಿಂಕ್ ಅನ್ನು ಕ್ಲಿಕ್ ಮಾಡಿ. ಸ್ಟೆಪ್ 3: ಹೊಸ ಪುಟ ತೆರೆದುಕೊಳ್ಳುತ್ತದೆ. ಆಗ, ಬೋರ್ಡ್ ಪರೀಕ್ಷೆಗಳಿಗಾಗಿ X ಮತ್ತು XII ತರಗತಿಯ ದಿನಾಂಕದ ವೇಳಾಪಟ್ಟಿ 2025 (7.65 MB)…
ಚಾಮರಾಜನಗರ:- ತಾಯಿಯಿಂದ ಬೇರ್ಪಟ್ಟಿದ್ದ ಒಂಟಿ ಕರಡಿ ದುರ್ಮರಣ ಹೊಂದಿರುವ ಘಟನೆ ಹನೂರು ಸಮೀಪದ ಅಜ್ಜಿಪುರ ಅರಣ್ಯ ಪ್ರದೇಶದಲ್ಲಿ ಜರುಗಿದೆ. https://ainlivenews.com/a-scam-of-more-than-rs-5000-crore-has-taken-place-in-muda/ ಕಳೆದ ಎರಡು ದಿನಗಳ ಹಿಂದೆ ತಾಯಿ ಕರಡಿಯಿಂದ ಬೇರ್ಪಟ್ಟಿದ್ದ ಆರು ತಿಂಗಳ ಮರಿ ಕರಡಿಯು ಮಲೆಮಹದೇಶ್ವರ ವನ್ಯಧಾಮದ ಅಜ್ಜಿಪುರ ರಸ್ತೆಯಲ್ಲಿ ಅಸ್ವಸ್ಥಗೊಂಡು ಎರಡು ಕಲ್ಲುಗಳ ನಡುವೆ ಸೇರಿಕೊಂಡಿತ್ತು. ನಂತರ ಸ್ಥಳೀಯರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅಧಿಕಾರಿಗಳು ಸಹ ಆಗಮಿಸಿ ತಾಯಿಯ ಜೊತೆ ಸೇರಿಸಲು ಪ್ರಯತ್ನಿಸಿದ್ದರು. ಬಳಿಕ ಮರಣೋತ್ತರ ಪರೀಕ್ಷೆಯನ್ನು ಪಶು ವೈದ್ಯಾಧಿಕಾರಿ ಡಾ. ಸಿದ್ದರಾಜು ನೇತೃತ್ವದಲ್ಲಿ ನಡೆಸಲಾಯಿತು.
ಮೈಸೂರು:- ಮುಡಾದಲ್ಲಿ 5 ಸಾವಿರ ಕೋಟಿ ರೂ.ಗೂ ಹೆಚ್ಚು ಹಗರಣ ನಡೆದಿದೆ ಎಂದು ಆರ್ಟಿಐ ಕಾರ್ಯಕರ್ತ ಗಂಗರಾಜು ಹೇಳಿದ್ದಾರೆ. https://ainlivenews.com/heavy-rain-in-this-district-of-karnataka-since-november-27/ ಈ ಸಂಬಂಧ ಮಾತನಾಡಿದ ಅವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 5 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಅಕ್ರಮ ನಡೆದಿದೆ ಎಂದು ಆರ್ಟಿಐ ಕಾರ್ಯಕರ್ತ ಗಂಗರಾಜು ಗಂಭೀರ ಆರೋಪ ಮಾಡಿದ್ದಾರೆ. ಹಗರಣದ ಬಗ್ಗೆ ಮಾತನಾಡಿದ ಅವರು, 5 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಅಕ್ರಮ ನಡೆದಿರುವ ಬಗ್ಗೆ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡುತ್ತೇನೆ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರದ್ದು 20-30 ಕೋಟಿ ರೂಪಾಯಿ ಹಗರಣ ಇರಬಹುದು ಅಷ್ಟೆ. ಆದರೆ, ಅದನ್ನು ಬಿಟ್ಟು 5 ಸಾವಿರ ಕೋಟಿ ರೂ.ಗೂ ಹೆಚ್ಚು ಅಕ್ರಮ ನಡೆದಿದೆ. ಮುಡಾದ 9 ವಿಭಾಗದ ಎಲ್ಲಾ ಸಿಬ್ಬಂದಿ ಹಾಗೂ ಅಧಿಕಾರಿಗಳ ತನಿಖೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಮುಡಾದ 9 ವಿಭಾಗದ ಎಲ್ಲಾ ಸಿಬ್ಬಂದಿ ಹಾಗೂ ಅಧಿಕಾರಿಗಳ ಬ್ಯಾಂಕ್ ಖಾತೆಗಳು, ಆಸ್ತಿ ಬಗ್ಗೆ ತನಿಖೆಯಾಗಬೇಕು. ಕೇವಲ 50:50 ಅನುಪಾತ ಮಾತ್ರವಲ್ಲ,…
ಬೆಂಗಳೂರು:- ನವೆಂಬರ್ 27ರಿಂದ ಕರ್ನಾಟಕದ ಈ ಜಿಲ್ಲೆಯಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. https://ainlivenews.com/government-gave-good-news-to-poor-students/ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರಿನಲ್ಲಿ ಮಳೆಯಾಗಲಿದೆ. ದಕ್ಷಿಣ ಅಂಡಮಾನ್ನಲ್ಲಿ ಇಂದು ಚಂಡಮಾರುತ ಪರಿಚಲನೆ ಉಂಟಾಗಲಿದೆ, ಎರಡು ದಿನಗಳಲ್ಲಿ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಲಿದೆ. ಕಾರವಾರದಲ್ಲಿ 35.8 ಡಿಗ್ರಿ ಸೆಲ್ಸಿಯಸ್ ಅತ್ಯಂತ ಗರಿಷ್ಠ ಉಷ್ಣಾಂಶ, ಬೀದರ್ ಹಾಗೂ ವಿಜಯಪುರದಲ್ಲಿ 12.05 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿದೆ, ಎಚ್ಎಎಲ್ನಲ್ಲಿ 27.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 27.4ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 27.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 27.2ಡಿಗ್ರಿ ಸೆಲ್ಸಿಯಸ್…
ಬೆಂಗಳೂರು:- ಬಡ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಕೊಟ್ಟಿರುವ ಶಿಕ್ಷಣ ಇಲಾಖೆಯು, ಉಚಿತ ನೀಟ್ ಕೋಚಿಂಗ್ ನೀಡಲು ಮುಂದಾಗಿದೆ. https://ainlivenews.com/devanahalli-rescue-of-a-giant-python-a-sighing-farmer/ ಈ ವರ್ಷದಿಂದ ಪಿಯುಸಿ ಒದುತ್ತಿರುವ 25 ಸಾವಿರ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಟ್ ತರಬೇತಿ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ. ವಿದ್ಯಾರ್ಥಿಗಳಿಗೆ ಉಚಿತ CET, NEET, JEE, ತರಬೇತಿ ಕಾರ್ಯಕ್ರಮಕ್ಕೆ ಬುಧವಾರ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಧಾನಸೌಧದಲ್ಲಿ ಚಾಲನೆ ನೀಡಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ನೀಟ್ ಕೋಚಿಂಗ್ ಪಡೆಯಲು ಟ್ಯೂಷನ್ ಸೆಂಟರ್ಗೆ ಹೋಗಿ ಲಕ್ಷ ಲಕ್ಷ ಹಣ ಖರ್ಚು ಮಾಡಬೇಕಿಲ್ಲ. ಬಡ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸು ಪೂರ್ತಿ ಮಾಡಲು ಸರ್ಕಾರ ಮುಂದಾಗಿದೆ. ಉತ್ತರ ಭಾರತದ ವಿದ್ಯಾರ್ಥಿಗಳಿಗೆ ಹೆಚ್ಚು ಹಂಚಿಕೆಯಾಗುತ್ತಿರುವ ವೈದ್ಯಕೀಯ ಸೀಟ್ಗೆ ಸೆಡ್ಡು ಹೊಡೆಯಲು ಶಾಲಾ ಶಿಕ್ಷಣ ಇಲಾಖೆ ಈ ತಂತ್ರ ರೂಪಿಸಿದೆ. ಈ ವರ್ಷದಿಂದ ಶಾಲಾ ಶಿಕ್ಷಣ ಇಲಾಖೆ, ಪಿಯುಸಿ ಓದುತ್ತಿರುವ ವೈದ್ಯಕೀಯ ಶಿಕ್ಷಣ ಪಡೆಯುವ ಕನಸು ಕಂಡಿರುವ ಪ್ರಥಮ ವರ್ಷದ 12500 ಪಿಯು ವಿದ್ಯಾರ್ಥಿಗಳು…