ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಕೊನೆಗೂ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಘಟನೆ ನಡೆದು 100 ದಿನ ಕಳೆದಿದ್ರು ದರ್ಶನ್ ಯಾಕೆ ಜಾಮೀನಿಗೆ ಅರ್ಜಿ ಸಲ್ಲಿಸುತ್ತಿಲ್ಲ ಎಂದು ಹಲವರು ಪ್ರಶ್ನಿಸುತ್ತಿದ್ದರು. ಇದೀಗ ಚಾರ್ಜ್ ಶೀಟ್ ಸಲ್ಲಿಸಿ ಕೆಲ ದಿನಗಳ ಬಳಿಕ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಸೇರಿದಂತೆ ಇನ್ನೂ ಕೆಲವು ಆರೋಪಿಗಳು ಈಗಾಗಲೇ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಅರ್ಜಿಗಳು ತಿರಸ್ಕೃತಗೊಂಡಿವೆ. ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ಎರಡನೇ ಬಾರಿಗೆ ಜಾಮೀನು ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಆದರೆ ದರ್ಶನ್ ಮಾತ್ರ ಈವರೆಗೆ ಜಾಮೀನು ಅರ್ಜಿ ಸಲ್ಲಿಸಿರಲಿಲ್ಲ. ಇದೀಗ ಕೊನೆಗೂ ದರ್ಶನ್ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಪ್ರಕರಣದ ಆರೋಪ ಪಟ್ಟಿ ಸಲ್ಲಿಕೆಯಾಗಿ ಎರಡು ವಾರಕ್ಕೂ ಹೆಚ್ಚು ಸಮಯವಾಗಿದ್ದು, ತುಸು ಹೆಚ್ಚೇ ಸಮಯ ತೆಗೆದುಕೊಂಡು ದರ್ಶನ್, ತಮ್ಮ ವಕೀಲರ ಕಡೆಯಿಂದ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಬೆಂಗಳೂರಿನ ಸೆಷನ್ಸ್ ಕೋರ್ಟ್‌ನಲ್ಲಿ…
Author: Author AIN
ಬಾಲಿವುಡ್ ನಟಿ ಕರೀನಾ ಕಪೂರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 44ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೊಸ ಪೋಸ್ಟ್ ಹಾಕಿದ್ದಾರೆ. ಕೆಂಪು ಬಣ್ಣದ ಗೌನ್‌ನಲ್ಲಿ ಸಖತ್ತಾಗಿ ಕರೀನಾ ಕಾಣಿಸಿಕೊಂಡಿದ್ದು ಈಕೆಗೆ 44 ವರ್ಷವಾ ಎಂದು ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ. ಅಂದಹಾಗೆ ಕರೀನಾ ಬರ್ತ್‌ಡೇ ಜೊತೆಗೆ ಮತ್ತೊಂದು ಸಂತೋಷದ ಸುದ್ದಿ ಕೂಡಾ ಅಭಿಮಾನಿಗಳು ಹಬ್ಬ ಮಾಡೋಕೆ ಕಾರಣವಾಗಿದೆ. ಹೌದು, ಕರೀನಾ ಕಪೂರ್ ಬಾಲಿವುಡ್ ಇಂಡಸ್ಟ್ರಿಗೆ ಕಾಲಿಟ್ಟು 25 ವರ್ಷವಾಗಿದೆ. ಈ ಹಿನ್ನೆಲೆ ಬಾಲಿವುಡ್‌ನಲ್ಲಿ ಕೆಕೆಕೆ ಫಿಲ್ಮ್ ಫೆಸ್ಟಿವಲ್ ಮಾಡೋಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಕೆಕೆಕೆ ಫಿಲ್ಮ್ ಫೆಸ್ಟಿವಲ್, 15 ನಗರಗಳಲ್ಲಿ 30 ಚಿತ್ರಮಂದಿರಗಳಲ್ಲಿ ವಿಶೇಷ ಚಲನಚಿತ್ರೋತ್ಸವ ನಡೆಸಲಾಗುತ್ತೆ. `ಜಬ್ ವಿ ಮೇಟ್’, `ಚಮೇಲಿ’, `ಹೀರೋಯಿನ್’ ಸಿನಿಮಾಗಳಲ್ಲಿ ತಮ್ಮ ವಿಭಿನ್ನ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. ಮಾಡೆಲಿಂಗ್ ಹಾಗೂ ಸಿನಿಮಾ ರಂಗದಲ್ಲಿ ಈಗಲೂ ತೊಡಗಿಸಿಕೊಂಡಿರುವ ಕರೀನಾ ಫ್ಯಾಮಿಲಿ ಜೊತೆ ವಿಶೇಷವಾಗಿ ಬರ್ತಡೇ ಸೆಲೆಬ್ರೇಟ್ ಮಾಡಲಿದ್ದಾರೆ.
ಏಕಕಾಲದಲ್ಲಿ ಹಲವುಪೇಜರ್‌ಗಳು, ವಾಕಿ-ಟಾಕಿಗಳು ಸೇರಿದಂತೆ ಹಲವು ಎಲೆಕ್ಟ್ರಾನಿಕ್ ಸಾಧನಗಳ ಸ್ಫೋಟಗೊಂಡ ಪರಿಣಾಮ 20 ಮಂದಿ ಮೃತಪಟ್ಟಿದ್ದು ಸಾಕಷ್ಟು ಜನರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಲೆಬನಾನಿನ ಮಿಲಿಟರಿ ಹಿಜ್ಬುಲ್ಲಾದ ಹಲವಾರು ಸದಸ್ಯರು ಮೃತಪಟ್ಟಿದ್ದಾರೆ. ಈ ಸ್ಫೋಟಗಳ ಹಿಂದೆ ಇಸ್ರೇಲ್ ಕೈವಾಡವಿದೆ ಎಂದು ಹೇಳಲಾಗುತ್ತಿದೆ, ಆದರೆ ಇಸ್ರೇಲಿ ಗುಪ್ತಚರ ಸಂಸ್ಥೆಗಳು ಪೇಜರ್‌ಗಳು ಮತ್ತು ವಾಕಿ ಟಾಕಿಗಳನ್ನು ಹೇಗೆ ಮಾರಣಾಂತಿಕ ಅಸ್ತ್ರಗಳಾಗಿ ಪರಿವರ್ತಿಸಿದವು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಈ ನಡುವೆ ಕೇರಳ ಮೂಲದ ಇದೀಗ ನಾರ್ವೆ ಪ್ರಜೆಯಾಗಿರುವ ವ್ಯಕ್ತಿಯ ಹೆಸರು ಪ್ರಕರಣದಲ್ಲಿ ಕೇಳಿ ಬಂದಿದೆ. ಹಂಗೇರಿಯನ್ ಸುದ್ದಿ ವೆಬ್‌ಸೈಟ್ ಟೆಲೆಕ್ಸ್‌ನ ವರದಿಯ ಪ್ರಕಾರ, ನಾರ್ಟಾ ಗ್ಲೋಬಲ್ ಲಿಮಿಟೆಡ್ ಎಂಬ ಬಲ್ಗೇರಿಯನ್ ಕಂಪನಿಯು ಹಿಜ್ಬುಲ್ಲಾದ ಪೇಜರ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಈ ಕಂಪನಿಯನ್ನು ನಾರ್ವೇಜಿಯನ್ ಪ್ರಜೆ ರಿನ್ಸನ್ ಜೋಸ್ ಸ್ಥಾಪಿಸಿದರು. ಜೋಸ್ ಕೇರಳದ ವಯನಾಡಿನಲ್ಲಿ ಜನಿಸಿದರು ಎಂದು ಹೇಳಲಾಗುತ್ತದೆ. ಅಲ್ಲಿಂದ ಎಂಬಿಎ ಮುಗಿಸಿ ನಾರ್ವೆಗೆ ಹೋದರು. ರಿನ್ಸನ್ ತಂದೆ ಜೋಸ್ ಅಂಗಡಿಯೊಂದರಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದರು, ಅವರನ್ನು ಆ…
ಸೂಪರ್‌ಸ್ಟಾರ್ ರಜನಿಕಾಂತ್ ಸದ್ಯ ಕೂಲಿ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ ಕೂಲಿ ಸಿನಿಮಾದ ಸಿನಿಮಾದ ಕೆಲವು ಪ್ರಮುಖ ದೃಶ್ಯಗಳ ಚಿತ್ರೀಕರಣದಲ್ಲಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗೆ ರಜನಿಕಾಂತ್ ವಿಮಾನ ನಿಲ್ದಾಣದಲ್ಲಿ ಆಗಮಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದರಲ್ಲಿ ನಟನಿಗೆ ರಾಜಕೀಯದ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ ಮಾಧ್ಯಮದ ಮೇಲೆ ವಾಗ್ದಾಳಿ ನಡೆಸಿದ್ದಾರೆ. ವೈರಲ್ ವಿಡಿಯೋದಲ್ಲಿ, ರಜನಿಕಾಂತ್ ಹಗಲು ಹೊತ್ತಿನಲ್ಲಿ ಚೆನ್ನೈ ವಿಮಾನ ನಿಲ್ದಾಣದಿಂದ ಹೊರಬರುವುದನ್ನು ಕಂಡುಬಂದಿದೆ. ಇವತ್ತು ರಾತ್ರಿ ನಡೆಯುವ ವೆಟ್ಟೈಯಾನ್ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಯಾರು ಬರುತ್ತಾರೆ ಎಂದು ಪತ್ರಕರ್ತರೊಬ್ಬರು ಕೇಳಿದರು. ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನನಗೆ ಖಚಿತವಿಲ್ಲ ಸಾರ್’ ಎಂದರು. ಮತ್ತೊಂದೆಡೆ, ಉಪಮುಖ್ಯಮಂತ್ರಿಯಾಗಿ ಉದಯನಿಧಿ ಸ್ಟಾಲಿನ್ ಪ್ರಮಾಣ ವಚನ ಸ್ವೀಕರಿಸುವ ವರದಿಗಳ ಬಗ್ಗೆ ರಜನಿಕಾಂತ್ ಅವರ ಅಭಿಪ್ರಾಯಗಳನ್ನು ಮತ್ತೊಬ್ಬ ವರದಿಗಾರ ಕೇಳಿದರು. ಈ ಪ್ರಶ್ನೆಯನ್ನು ಕೇಳಿದ ತಲೈವಾ ವರದಿಗಾರನ ಮೇಲೆ ಕೋಪಗೊಂಡು, “ರಾಜಕೀಯ ಪ್ರಶ್ನೆಗಳನ್ನು ಕೇಳಬೇಡಿ ಎಂದಿಲ್ವಾ ಎಂದು ಗರಂ ಆದರು. ಅದೇನೇ…
ಖ್ಯಾತ ನಟ ಶಶಿಕುಮಾರ್ ಪುತ್ರ ಆದಿತ್ಯ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟಿದ್ದು ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಆದಿತ್ಯ ನಟನೆಯ ಮೂರನೇ ಸಿನಿಮಾ ಸೆಟ್ಟೇರಿದ್ದು ಚಿತ್ರಕ್ಕೆ ರಾಶಿ ಎಂದು ಟೈಟಲ್ ಇಡಲಾಗಿದೆ. ಧುವನ್ ಫಿಲ್ಮ್ಸ್ ಲಾಂಛನದಲ್ಲಿ ಅಖಿಲೇಶ್ ‘ರಾಶಿ’ ಸಿನಿಮಾ ನಿರ್ಮಾಣ ಆಗುತ್ತಿದ್ದು, ವಿಜಯ್ ಪಾಳೇಗಾರ್ ನಿರ್ದೇಶನ ಮಾಡುತ್ತಿದ್ದಾರೆ. ಲವ್ಸ್ಟೋರಿ ಕಥಾ ಹಂದರದ ಈ ಚಿತ್ರಕ್ಕೆ ಹಲವು ಗಣ್ಯರು ಸಾಥ್ ನೀಡಿದ್ದಾರೆ. ಆದಿತ್ಯ ಅವರ ಹುಟ್ಟುಹಬ್ಬದ ದಿನ ಈ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದ್ದು ಆದಿತ್ಯಗೆ ಜೋಡಿಯಾಗಿ ಸಮೀಕ್ಷಾ ಕಾಣಿಸಿಕೊಳ್ತಿದ್ದಾರೆ. ನಟ ಶಶಿಕುಮಾರ್, ರಾಜ್ಯಸಭಾ ಸದಸ್ಯರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಕಾರ್ಯಾಧ್ಯಕ್ಷರಾದ ಜಿ.ಎಸ್.ಚಂದ್ರಶೇಖರ್, ಬೆಂಗಳೂರು ಪೊಲೀಸ್ ಉಪ ಆಯುಕ್ತ ಸಿದ್ದರಾಜು, ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಸ್. ಚಿದಂಬರ್ ಸೇರಿದಂತೆ ಅನೇಕ ಗಣ್ಯರು ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಆದಿತ್ಯ ಶಶಿಕುಮಾರ್ ಅವರು ಹೀರೋ ಆಗಿ ನಟಿಸುತ್ತಿರುವ ಮೂರನೇ ಸಿನಿಮಾ ಇದು. ಈ ಚಿತ್ರದ…
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿ 100 ದಿನ ಕಳೆದಿದೆ. ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಜೈಲಾಧಿಕಾರಿಗಳ ಬಳಿ ದಿನಕ್ಕೊಂದು ಬೇಡಿಕೆ ಇಡುತ್ತಿದ್ದಾರೆ. ಬಳ್ಳಾರಿ ಜೈಲಿನಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಈಗ ಅವರಿಗೆ ನಿರಂತರವಾಗಿ ಬೆನ್ನನೋವು ಬರುತ್ತಿದೆ. ಹೀಗಾಗಿ ಅವರು ಕುಳಿತುಕೊಳ್ಳಲು ಚೇರ್‌ಗೆ ಮನವಿ ಮಾಡಿದ್ದರು. ಚೇರ್ ಗೆ ಮನವಿ ಮಾಡಿ ವಾರಗಳೇ ಕಳೆದಿವೆ. ಆದಾಗ್ಯೂ ಜೈಲಾಧಿಕಾರಿಗಳು ಕುರ್ಚಿಯನ್ನು ನೀಡಿಲ್ಲ. ಇದರಿಂದ ದರ್ಶನ್ ಗರಂ ಆಗಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಹಾಯಾಗಿ ಇದ್ದರು. ವಿಲ್ಸನ್ ಗಾರ್ಡನ್ ನಾಗ ಅವರಿಗೆ ಸಾಕಷ್ಟು ವ್ಯವಸ್ಥೆ ಮಾಡಿಕೊಟ್ಟಿದ್ದರು. ಈ ವ್ಯವಸ್ಥೆಯಿಂದ ಅವರಿಗೆ ಯಾವುದೇ ತೊಂದರೆ ಆಗಿರಲಿಲ್ಲ. ಈ ವಿಚಾರ ಹೊರ ಬಂದ ನಂತರ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಅಲ್ಲಿ ದರ್ಶನ್ ಅವರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರಂತೆ. ದರ್ಶನ್ ಚೇರ್‌ಗೆ ಬೇಡಿಕೆ ಇಟ್ಟಿದ್ದರು. ಈ ವಿಚಾರವನ್ನು ಅವರು ಕೋರ್ಟ್ ಎದುರು ಪ್ರಸ್ತಾಪ ಮಾಡಿದ್ದರು. ಈ ವೇಳೆ ಜಡ್ಜ್ ಅವರು…
ದಕ್ಷಿಣ ವಜೀರಿಸ್ತಾನದಲ್ಲಿ ಪಾಕಿಸ್ತಾನಿ ಸೇನೆಯ ಮೇಲೆ ನಡೆದ ಭೀಕರ ದಾಳಿಯಲ್ಲಿ ಆರು ಯೋಧರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಕಳೆದ ಜೂನ್ ತಿಂಗಳಿನಿಂದ ಪ್ರತಿ ತಿಂಗಳು ಪಾಕಿಸ್ತಾನದ ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸುತ್ತಿದ್ದಾರೆ. ಪ್ರತಿ ದಾಳಿಯಲ್ಲಿ ಅನೇಕ ಸೈನಿಕರು ಪ್ರಾಣ ಕಳೆದುಕೊಳ್ಳುತ್ತಿದ್ದು ಹಲವರು ಗಾಯಗೊಂಡಿದ್ದಾರೆ. ಇದೀಗ ಮತ್ತೊಮ್ಮೆ ದಾಳಿ ನಡೆಸಿದ್ದಾರೆ. ಇದಕ್ಕೂ ಮುನ್ನ ಆಗಸ್ಟ್ 22ರಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಭಯೋತ್ಪಾದಕರು ಪೊಲೀಸರ ಮೇಲೆ ರಾಕೆಟ್ ದಾಳಿ ನಡೆಸಿದ್ದರು. ಇದರಲ್ಲಿ ಕನಿಷ್ಠ 11 ಸೈನಿಕರು ಸಾವನ್ನಪ್ಪಿದರು. ಲಾಹೋರ್‌ನಿಂದ ಸುಮಾರು 400 ಕಿಲೋಮೀಟರ್ ದೂರದಲ್ಲಿರುವ ರಹೀಮ್ ಯಾರ್ ಖಾನ್ ಜಿಲ್ಲೆಯಲ್ಲಿ ಹಲವಾರು ಯೋಧರನ್ನು ಒತ್ತೆಯಾಳಾಗಿ ಇರಿಸಲಾಗಿತ್ತು. ಉಗ್ರರು ರಾಕೆಟ್‌ಗಳ ಮೂಲಕ ದಾಳಿ ನಡೆಸಿದ್ದಾರೆ ಎಂದು ಪಂಜಾಬ್ ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಏಳು ಸೈನಿಕರು ಮೃತಪಟ್ಟಿದ್ದಾರೆ. ಸೈನಿಕರ ಸಾವಿನ ಸುದ್ದಿಯಿಂದ ಆಘಾತಕ್ಕೊಳಗಾದ ಪ್ರಧಾನಿ ಶಹಬಾಜ್ ಷರೀಫ್ ಅವರು ಭಯೋತ್ಪಾದನೆಯನ್ನು ಕೊನೆಗೊಳಿಸುವುದಾಗಿ ಪಣ ತೊಟ್ಟರು. ಭಾನುವಾರ…
ಭಾರತವನ್ನು ಕ್ವಾಡ್ ಒಕ್ಕೂಟದ ನಾಯಕ ರಾಷ್ಟ್ರವಾಗಿ ಅಮೆರಿಕ ಕಾಣುತ್ತದೆ ಮತ್ತು ನಾಲ್ಕು ರಾಷ್ಟ್ರಗಳ ಒಕ್ಕೂಟ ರಚನೆಗೆ ಭಾರತ ಮಹತ್ವದ ಪಾತ್ರ ವಹಿಸಿರುವುದಕ್ಕೆ ಆಭಾರಿಯಾಗಿದ್ದೇವೆ ಎಂದು ಶ್ವೇತಭವನದ ಉನ್ನತ ಅಧಿಕಾರಿ ಮೀರಾ ರಾಪ್-ಹೂಪರ್ ತಿಳಿಸಿದ್ದಾರೆ. ಶ್ವೇತಭವನದ ಭದ್ರತಾ ಮಂಡಳಿಯಲ್ಲಿ ಪೂರ್ವ ಏಷ್ಯಾ ಮತ್ತು ಒಸಿನಿಯಾದ ಹಿರಿಯ ನಿರ್ದೇಶಕರಾಗಿರುವ ಅವರು, ಕ್ವಾಡ್ ಶೃಂಗಸಭೆಗೆ ಎರಡು ದಿನ ಇರುವ ಮಧ್ಯೆಯೇ ಈ ಹೇಳಿಕೆ ನೀಡಿದ್ದಾರೆ. ಕ್ವಾಡ್ ಒಕ್ಕೂಟವು ಭಾರತ, ಆಸ್ಟ್ರೇಲಿಯಾ ಜಪಾನ್ ಮತ್ತು ಅಮೆರಿಕ ದೇಶಗಳನ್ನು ಒಳಗೊಂಡಿದೆ. ಶನಿವಾರ ನಡೆಯಲಿರುಯ ಶೃಂಗದ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು, ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್, ಜಪಾನ್ ಪ್ರಧಾನಿ ಕಿಶಿದಾ ಫುಮಿನೊ ಅವರಿಗೆ ಆತಿಥ್ಯ ನೀಡಲಿದ್ದಾರೆ.
ನೀರು ಕುಡಿಯಲು ಅಡುಗೆ ಮನೆಗೆ ಹೋದ ಮಹಿಳೆಯನ್ನು ದೈತ್ಯಾಕಾರದ ಹೆಬ್ಬಾವೊಂದು ಸುತ್ತಿಕೊಂಡಿದ್ದು, ಈ ವೇಳೆ ಮಹಿಳೆ ಹಾವಿನೊಂದಿಗೆ ಹೋರಾಟ ಮಾಡಿ ಕೊನೆಗೂ ತನ್ನನ್ನು ತಾನು ರಕ್ಷಿಸಿಕೊಂಡಿರುವ ಘಟನೆಯೊಂದು ಬ್ಯಾಂಕಾಕ್ ನಡೆದಿದೆ. ಥಾಯ್ಲೆಂಡ್ ಅರೋಮ್ ಅರುಣ್ರೋಜ್ ಎಂಬ ಮಹಿಳೆ ನೀರು ಕುಡಿಯಲು ಅಡುಗೆ ಮನೆಗೆ ಹೋಗಿದ್ದಾಳೆ. ಈ ವೇಳೆ ದೈತ್ಯಾಕಾರದ ಹೆಬ್ಬಾವು ಆಕೆಯನ್ನು ಸುತ್ತಿಕೊಂಡಿದೆ. ಸುಮಾರು 4-5 ಮೀಟರ್ ಉದ್ದದ ಹೆಬ್ಬಾವು ಆಕೆಯನ್ನು ಸುತ್ತಿಕೊಂಡಿದೆ. .ಮೈಗೆ ಹೆಬ್ಬಾವು ಸುತ್ತಿಕೊಂಡಿದೆ ಎಂದು ತಿಳಿದರು ಕೊಂಚವು ಹೆದರದ ನಹಿಳೆ ಹಾವಿನಿಂದ ಬಿಡುಗಡೆಯಾಗಲು ಸಾಕಷ್ಟು ಯತ್ನ ನಡೆಸಿದ್ದಾರೆ. ಈ ವೇಳೆ ಹಾವು ಅನೇಕ ಬಾರಿ ಕಚ್ಚಿದೆ. ಬಳಿಕ ಮಹಿಳೆ ಹಾವಿನ ತಲೆಯನ್ನು ಗಟ್ಟಿಯಾಗಿ ಹಿಡಿದುಕೊಂಡು, ರಕ್ಷಣೆಗಾಗಿ ಕೂಗಿದ್ದಾರೆ. ಸುಮಾರು 2 ಗಂಟೆಗಳ ಕಾಲ ಹಾವಿನೊಂದಿಗೆ ಸೆಣೆಸಾಟ ನಡೆಸಿದ್ದಾಳೆ. ಸುಮಾರು ಒಂದೂವರೆ ಗಂಟೆಗಳ ಬಳಿಕ ಆಕೆಯ ಕೂಗಾಟ ಕೇಳಿಸಿಕೊಂಡ ಕೆಲವರು ರಕ್ಷಣೆಗೆ ಧಾವಿಸಿ, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ರಕ್ಷಣೆಗೆ ಬಂದ ಪೊಲೀಸರು ಮತ್ತು ಪ್ರಾಣಿ ನಿಯಂತ್ರಣ…
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್ ಪ್ರಚಾರದ ವೇಳೆ ಯುವತಿಯೊಬ್ಬಳು ತುಂಬಿದ ಸಭೆಯಲ್ಲಿ ತನ್ನ ತೆರೆದ ಎದೆ ಪ್ರದರ್ಶನ ಮಾಡಿರುವ ಘಟನೆ ನಡೆದಿದ್ದು ಇದು ಸಾಕಷ್ಟು ಟೀಕೆಗೆ ಕಾರಣವಾಗಿದೆ. ಅಮೆರಿಕದ ಲಾಂಗ್ ಐಲೆಂಡ್ ನ Nassau Coliseum ವೇದಿಕೆಯಲ್ಲಿ ಡೊನಾಲ್ಡ್ ಟ್ರಂಪ್ ಪ್ರಚಾರದ ಭಾಷಣದಲ್ಲಿ ತೊಡಗಿದ್ದ ವೇಳೆ ಈ ಘಟನೆ ನಡೆದಿದೆ. ಟ್ರಂಪ್ ಭಾಷಣದ ವೇಳೆ ಯುವತಿ ತಾನು ಧರಿಸಿದ್ದ ಟೀ ಶರ್ಟ್ ಎತ್ತಿ ಎದೆಯನ್ನು ಪ್ರದರ್ಶಸಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದ್ದು, ಯುವತಿ ಕೃತ್ಯಕ್ಕೆ ಸಾಕಷ್ಟು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಯುವತಿಯ ಅನುಚಿತ ವರ್ತನೆ ಹಿನ್ನಲೆಯಲ್ಲಿ ಪ್ರಚಾರ ಕಾರ್ಯಕ್ರಮ ಆಯೋಜಕರು ಆಕೆಯನ್ನು ಕಾರ್ಯಕ್ರಮದಿಂದ ಹೊರ ಹಾಕಿದ್ದು, ಹೊರಗೆ ಹೋದ ಮೇಲೂ ಕೂಡ ಆಕೆ ಅದೇ ಕೃತ್ಯವನ್ನು ಮುಂದುವರೆಸಿದ್ದಾಳೆ. ಟ್ರಂಪ್ ಪ್ರಚಾರದ ವೇಳೆ ಅನುಚಿತ ವರ್ತನೆ ತೋರಿದ ಯುವತಿಯನ್ನು 26 ವರ್ಷದ ಅವಾ ಲೂಯಿಸ್ ಎನ್ನಲಾಗುತ್ತಿದೆ. ಈಕೆ ರೂಪದರ್ಶಿಯಾಗಿದ್ದು, ಇಂತಹುದೇ ಕೃತ್ಯಗಳಿಂದ ಕುಖ್ಯಾತಿ…