Author: Author AIN

ಉತ್ತರ ಗಾಜಾದ ಶಾಲೆಯೊಂದರ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 13 ಮಕ್ಕಳು ಸೇರಿದಂತೆ ಕನಿಷ್ಠ 22 ಜನ ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ. ಹತ್ಯೆಗೀಡಾದವರಲ್ಲಿ 13 ಮಕ್ಕಳು, ಆರು ಮಹಿಳೆಯರು ಮತ್ತು ಮೂರು ತಿಂಗಳ ಮಗು ಸೇರಿದ್ದಾರೆ ಎಂದು ಗಾಜಾ ಸರ್ಕಾರಿ ಮಾಧ್ಯಮ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಈ ದಾಳಿಯನ್ನು “ಭಯಾನಕ ಹತ್ಯಾಕಾಂಡ” ಎಂದು ಗಾಜಾ ಟೀಕಿಸಿದೆ. ದಾಳಿಯಲ್ಲಿ ಕನಿಷ್ಠ 30 ಜನ ಗಾಯಗೊಂಡಿದ್ದಾರೆ, ಹಲವಾರು ಜನ ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ ಎಂದು ಸಚಿವಾಲಯ ಹೇಳಿದೆ. ಅಲ್ಲದೆ ಇನ್ನೂ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಸಚಿವಾಲಯ ಹೇಳಿದೆ. ಆದರೆ ಹಮಾಸ್‌ನ “ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ ಅನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇಸ್ರೇಲಿ ಸೇನೆ ಹೇಳಿದೆ. ಇದು ಹಿಂದೆ ಶಾಲೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಕಾಂಪೌಂಡ್‌ನೊಳಗೆ ಯುದ್ಧಸಾಮಗ್ರಿಗಳ ಬಳಕೆ ಮತ್ತು ವೈಮಾನಿಕ ಕಣ್ಗಾವಲು ನಡೆಸಲಾಗುತ್ತಿತ್ತು. ಹಮಾಸ್ ಭಯೋತ್ಪಾದಕ ಸಂಘಟನೆಯು ಶಾಲೆಯಲ್ಲಿ ಕಲ್ಪಿಸಲಾಗಿರುವ ಮೂಲಸೌಕರ್ಯಗಳನ್ನು ಮಿಲಿಟರಿ ಉದ್ದೇಶಕ್ಕೆ ಬಳಸುವುದನ್ನು ಮುಂದುವರಿಸಿತ್ತು ಎಂದು…

Read More

ತಮಿಳಿನ ಖ್ಯಾತ ನಟ ಜಯಂ ರವಿ ಪತ್ನಿ ಆರತಿಗೆ ವಿಚ್ಛೇದನ ಘೋಷಿಸಿದ್ದಾರೆ. 15 ವರ್ಷಗಳ ವೈವಾಹಿಕ ಜೀವನಕ್ಕೆ ಫುಲ್​​ ಸ್ಟಾಪ್​​​ ಇಟ್ಟ ಜಯಂ ರವಿ ಹೆಸರು ಬೆಂಗಳೂರು ಮೂಲದ ಗಾಯಕಿ ಕೆನಿಶಾ ಫ್ರಾನ್ಸಿಸ್ ಅವರೊಂದಿಗಿನ ಕೇಳಿ ಬಂದಿದೆ. ಇದೀಗ ವದಂತಿಗಳಿಗೆ ಜಯಂ ರವಿ ಪ್ರತಿಕ್ರಿಯಿಸಿದ್ದಾರೆ. ಚೆನ್ನೈನ ಸತ್ಯಂ ಥಿಯೇಟರ್‌ನ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡಿದ ಜಯಂ ರವಿ, ಗಾಸಿಪ್‌ಗಳ ನಡುವೆ ಕೆನಿಶಾ ಅವರ ಖ್ಯಾತಿಯನ್ನು ಹಾಳು ಮಾಡಬೇಡಿ ಎಂದು ಜನರನ್ನು ಒತ್ತಾಯಿಸಿದರು. “ಬದುಕಿ ಮತ್ತು ಬದುಕಲು ಬಿಡಿ. ಇಲ್ಲಿ ಯಾರ ಹೆಸರನ್ನೂ ಎಳೆಯಬೇಡಿ. ಜನರು ರ್ಯಾಂಡಮ್​ ಆಗಿ ಮಾತನಾಡುತ್ತಿದ್ದಾರೆ. ಅಂತಹ ಕೆಲಸದಲ್ಲಿ ತೊಡಗಬೇಡಿ. ನಿಮ್ಮ ವೈಯಕ್ತಿಕ ಜೀವನವು ವೈಯಕ್ತಿಕವಾಗಿರಲಿ” ಎಂದಿದ್ದಾರೆ. ಈ ವೇಳೆ, ಗಾಯಕಿ ಕೆನಿಶಾ ಫ್ರಾನ್ಸಿಸ್ ಸಾಧನೆಗಳನ್ನು ಒತ್ತಿ ಹೇಳಿದರು. “ಅವರು 600 ಸ್ಟೇಜ್ ಶೋಗಳಲ್ಲಿ ಹಾಡಿರುವ ಜನಪ್ರಿಯ ಗಾಯಕಿ. ಅವರು ತಮ್ಮ ಕಠಿಣ ಪರಿಶ್ರಮದಿಂದ ಉನ್ನತ ಸ್ಥಾನಕ್ಕೇರಿದವರು. ಅವರು ಅನೇಕ ಜೀವಗಳನ್ನು ಗುಣಪಡಿಸಿದವರು. ಅವರು ಪರವಾನಗಿ ಪಡೆದ ಮನಶ್ಶಾಸ್ತ್ರಜ್ಞರು. ದಯವಿಟ್ಟು…

Read More

ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಕಾಲ ಅಮೆರಿಕ ಪ್ರವಾಸ ಕೈಗೊಂಡಿದ್ದು, ಶನಿವಾರ ಡೆಲವೇರ್‌ನ ವಿಲ್ಮಿಂಗ್ಟನ್‌ಗೆ ಆಗಮಿಸಿದರು. ಈ ವೇಳೆ ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಬೈಡನ್ ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದಾರೆ. ಭೇಟಿಯ ವೇಳೆ ಮೋದಿ ಹಾಗೂ ಬೈಡನ್ ಪರಸ್ಪರ ಆಲಿಂಗನ ಮಾಡಿಕೊಂಡರು. ಬಳಿಕ ಮೋದಿಯ ಕೈ ಹಿಡಿದುಕೊಂಡು ಬೈಡನ್ ತಮ್ಮ ನಿವಾಸಕ್ಕೆ ಕರೆದೊಯ್ದರು. ನಂತರ ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳು ಹಾಗು ಜಾಗತಿಕ, ಪ್ರಾದೇಶಿಕ, ಇಂಡೋ-ಫೆಸಿಫಿಕ್ ಮತ್ತು ಅದರ ಹೊರತಾದ ಅನೇಕ ವಿಚಾರಗಳ ವಿನಿಮಯ ಮಾಡಿದರು. ಇದಕ್ಕೂ ಮುನ್ನ ಫಿಲಡೆಲ್ಫಿಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಅವರನ್ನು ಭಾರತೀಯ ಸಮುದಾಯದವರು ಆತ್ಮೀಯವಾಗಿ ಸ್ವಾಗತಿಸಿದರು. ಮೋದಿಯನ್ನು ಸ್ವಾಗತಿಸಲು ಭಾರತೀಯರು ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಿದ್ದರು. ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ‘ಮೋದಿ, ಮೋದಿ’ ಎಂಬ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಪ್ರಧಾನಿ ಕೆಲವರ ಕೈ ಕುಲುಕಿ ಇನ್ನು ಕೆಲವರಿಗೆ ಆಟೋಗ್ರಾಫ್ ನೀಡಿದರು. ನಂತರ ಮೋದಿ ವಿಲ್ಮಿಂಗ್ಟನ್‌ಗೆ ಪ್ರಯಾಣ ಬೆಳೆಸಿದರು. ಮೋದಿ ಭೇಟಿಯ…

Read More

ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಲಿಂಕ್ ಮಾಡುವಂತೆ ಸಾಕಷ್ಟು ಸಮಯದ ಹಿಂದೆಯೇ ಸೂಚನೆ ನೀಡಿದ್ದರು. ಆದರೂ ಸಾಕಷ್ಟು ರೈತರು ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಲಿಂಕ್ ಮಾಡಿಲ್ಲ. ಹೀಗಾಗಿ ಆಧಾರ್ ಲಿಂಕ್ ಮಾಡದವರಿಗೆ ಸಹಾಯಧನ ಕಡಿತಗೊಳ್ಳಲಿದೆ ಎಂಬ ಮಾತು ಕೇಳಿ ಬಂದಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಇಂಧನ ಸಚಿವ ಕೆ.ಜೆ ಜಾರ್ಜ್ ಕೃಷಿ ಪಂಪ್‌ಸೆಟ್ ​​ಗೆ ಆಧಾರ್ ಲಿಂಕ್ ಮಾಡದವರಿಗೆ ಸಹಾಯಧನ ಕಡಿತ ಆಗಲ್ಲ ಎಂದಿದ್ದಾರೆ. ರಾಜ್ಯದಲ್ಲಿ ಒಟ್ಟು 34 ಲಕ್ಷ ಕೃಷಿ ಪಂಪ್‌ ಸೆಟ್​​ಗಳಿದ್ದು ಅವುಗಳಲ್ಲಿ 32 ಲಕ್ಷ ಪಂಪ್‌ಸೆಟ್​​ಗೆ ಆಧಾರ್ ಲಿಂಕ್ ಆಗಿದೆ. ಇದರಿಂದ ಎಷ್ಟು ಸಬ್ಸಿಡಿ ಕೊಡಲಾಗುತ್ತಿದೆ ಎಂಬ ಲೆಕ್ಕ ಹಾಗು ನಿಜವಾದವರಿಗೇ ಸಹಾಯಧನ ಹೋಗುತ್ತಿದೆಯೇ ಎಂಬ ಮಾಹಿತಿ ದೊರೆಯುತ್ತದೆ. ಆಧಾರ್ ಲಿಂಕ್ ಮಾಡದೇ ಇರುವವರಿಗೆ ಏನು ಮಾಡಬೇಕು ಎಂಬುದರ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.‌ ಖಾಸಗಿ ಹೊಟೇಲ್‌ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವರು, ಸಹಾಯಧನ ಕಡಿತ ಬಗೆಗಿನ ಆತಂಕದ ವಿಚಾರವಾಗಿ…

Read More

ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಬಿಗ್ ಬಾಸ್ ಸೀಸನ್ 11 ಆರಂಭಕ್ಕೆ ಇನ್ನೆನ್ನೂ ಕೆಲವೇ ಕೆಲವು ದಿನಗಳ ಮಾತ್ರವೇ ಭಾಕಿ ಇದೆ. ಇದೇ ಸೆಪ್ಟೆಂಬರ್ 29ರಂದು ಬಿಗ್ ​ಬಾಸ್​ ಗ್ರ್ಯಾಂಡ್​ ಓಪನಿಂದ ಆಗಲಿದೆ. ಈ ಮಧ್ಯೆ ಬಿಗ್​ಬಾಸ್​ ಸೀಸನ್​ 11ರ ಮತ್ತೊಂದು ಪ್ರೋಮೋ ರಿಲೀಸ್ ಆಗಿದ್ದು ಪ್ರೋಮೋದಲ್ಲಿ ಬೆನ್ನಿಗೆ ಚೂರಿ ಹಾಕೋರು ಮುಂದೆ ಸ್ನೇಹಿತರಾಗಬಹುದು ಎಂದು ಸುದೀಪ್ ಹೇಳಿದ್ದಾರೆ. ಬಹುನಿರೀಕ್ಷಿತ ಕನ್ನಡದ ಬಿಗ್​ಬಾಸ್ ಸೀಸನ್​ 11ಕ್ಕೆ ದಿನಗಣನೆ ಶುರುವಾಗಿದೆ. ಹೊಸ ಸೀಸನ್ ಪ್ರಾರಂಭಕ್ಕೆ ಬಿಗ್​ಬಾಸ್​ ತಂಡ ತೆರೆ ಮರೆ ಹಿಂದೆ ಎಲ್ಲ ರೀತಿಯಲ್ಲೂ ತಯಾರಿ ನಡೆಯುತ್ತಿದೆ. ಈಗ ಕಲರ್ಸ್​ ಕನ್ನಡ ತನ್ನ ಅಧಿಕೃತ ಖಾತೆಯಲ್ಲಿ ಬಿಗ್​ಬಾಸ್​​ ಪ್ರೋಮೋಗಳನ್ನು ಬಿಡುಗಡೆ ಮಾಡುವ ಮೂಲಕ ವೀಕ್ಷಕರಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸುತ್ತಿದ್ದಾರೆ. ಮೊದಲ ಸೀಸನ್​ನಿಂದ ಹಿಡಿದು ಹತ್ತು ಸೀಸನ್​ಗಳು ಯಶಸ್ವಿಯಾಗಿ ಪ್ರಸಾರ ಕಂಡಿದೆ. ಪ್ರತಿ ಸೀಸನ್​ನಲ್ಲಿ ಭಿನ್ನ ವಿಭಿನ್ನವಾಗಿರೋ ಲೋಗೋಗಳು ಅನಾವರಣ ಆಗುತ್ತಲೇ ಇರುತ್ತೆ. ಆದರೆ ಈ ಬಾರಿಯ ಬಿಗ್​​ಬಾಸ್​ ಲೋಗೋದಲ್ಲಿ ಒಂದು ಕಡೆ ಬೆಂಕಿ, ಮತ್ತೊಂದು…

Read More

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್ 100 ದಿನಗಳ ಬಳಿಕ ಕೊನೆಗೂ ಬೇಲ್ ಗೆ ಅರ್ಜಿ ಸಲ್ಲಿಸಿದ್ದಾರೆ. 57ನೇ ಸಿಸಿಹೆಚ್​ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು ಸೋಮವಾರ ವಿಚಾರಣೆ ನಡೆಯಲಿದೆ. ಈ ಮಧ್ಯೆ ಮೀನಾ ತೂಗುದೀಪರವರು ಬಳ್ಳಾರಿ ಜೈಲಿಗೆ ಕರೆ ಮಾಡಿ ಮಗನೊಂದಿಗೆ ಮಾತಾಡಿದ್ದಾರೆ. ಬಳ್ಳಾರಿ ಜೈಲಿನಲ್ಲಿರುವ ದರ್ಶನ್​ಗೆ ದೂರವಾಣಿ ಕರೆ ಮಾಡುವ ಮೂಲಕ ಮೀನಾ ತೂಗುದೀಪ ಧೈರ್ಯ ತುಂಬಿದ್ದಾರೆ. ಯಾವುದೇ ಆತಂಕ ಬೇಡ ರಾಜರಾಜೇಶ್ವರಿ ಆಶೀರ್ವಾದ ಇದೆ ಎಂದು ಹೇಳಿದ್ದಾರೆ.  ಅಲ್ಲದೆ ನಮ್ಮ ಬಳಿ ಸ್ಟ್ರಾಂಗ್ ವಕೀಲರಿದ್ದಾರೆ ಬೇಲ್ ಸಿಗುತ್ತೆ ಅಂತಾ ದರ್ಶನ್‌ಗೆ ದೈರ್ಯ ತುಂಬಿದ್ದಾರೆ. ಪ್ರಿಸನ್ ಕಾಲ್ ಸಿಸ್ಟಮ್ ಅಡಿಯಲ್ಲಿ 5 ನಿಮಿಗಳ ಕಾಲ ದರ್ಶನ್​​ ತಾಯಿಯೊಂದಿಗೆ ಮಾತನಾಡಿದ್ದಾರೆ. ಕೆಟ್ಟ ಘಳಿಗೆಯಿಂದ ಘಟನೆ ನಡೆದು ಹೋಗಿದೆ ಧೈರ್ಯವಾಗಿರು ಎಂದು ಮೀನ ತೂಗುದೀಪ ಹೇಳಿದ್ದಾರೆ. ಬಳಿಕ ದರ್ಶನ್ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ತಾಯಿಯೊಂದಿಗೆ ದರ್ಶನ್ ಭಾವುಕನಾಗಿ ಮಾತನಾಡಿದ್ದಾರೆ. ಬೇಲ್ ಅರ್ಜಿ ಸಲ್ಲಿಕೆ ಬಳಿಕ ತಾಯಿ ಜೊತೆಗೆ…

Read More

ಖ್ಯಾತ ಜಯಂ ರವಿ ಇತ್ತೀಚೆಗೆ ಪತ್ನಿ ಆರತಿಗೆ ಡಿವೋರ್ಸ್ ನೀಡ್ತಿರೋದಾಗಿ ಘೋಷಿಸಿದ್ದಾರೆ. ಬೆಂಗಳೂರು ಮೂಲದ ಗಾಯಕಿ ಕೆನಿಶಾ ಫ್ರಾನ್ಸಿಸ್ ಅವರೊಂದಿಗೆ ಜಯಂ ರವಿ ರಿಲೇಶನ್‌‌‌ ಹೊಂದಿದ್ದಾರೆ ಎಂಬ ಊಹಾಪೋಹಗಳ ನಡುವೆ, ನಟಿ ಖುಷ್ಬೂ ಸುಂದರ್ ಇತ್ತೀಚೆಗೆ ಪತಿ- ಪತ್ನಿ ಅನುಬಂಧದ ಬಗ್ಗೆ  ಪೋಸ್ಟ್‌ವೊಂದನ್ನು ಶೇರ್‌ ಮಾಡಿದ್ದಾರೆ. ಖುಷ್ಭೂ ಮಾಡಿರುವ ಪೋಸ್ಟ್ ಪರೋಕ್ಷವಾಘಿ ಜಯಂ ರವಿ ಕುರಿತು ಎನ್ನಲಾಗುತ್ತಿದೆ. ಒಬ್ಬ ನಿಜವಾದ ವ್ಯಕ್ತಿ ಕುಟುಂಬದ ಘನತೆಗೋಸ್ಕರ ಏನು ಬೇಕಾದರೂ ಮಾಡುತ್ತಾನೆ. ತನ್ನ ಕುಟುಂಬವನ್ನು ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾನೆ.  ಪ್ರೀತಿಸಿದವರ ಅವಶ್ಯಕತೆ, ಆಸೆಗಳನ್ನು ಈಡೇರಿಸಲು ಪ್ರಯತ್ನಿಸುತ್ತಾನೆ. ಮದುವೆಯ ಜೀವನದಲ್ಲಿ ಏರಿಳಿತಗಳು ಸಹಜ. ಚಿಕ್ಕ ಚಿಕ್ಕ ತಪ್ಪುಗಳು ನಡೆಯುತ್ತವೆ.  ಜೀವನದ ಪ್ರಯಾಣದಲ್ಲಿ, ಪ್ರತಿ ಮದುವೆಯು ಅದರ ಏರಿಳಿತಗಳನ್ನು ಎದುರಿಸುತ್ತದೆ. ಪ್ರೀತಿ ಆಗಾಗ ಕಮ್ಮಿ ಆಗಬಹುದು. ಆದರೆ ಗೌರವ, ಮರ್ಯಾದೆ ಕಮ್ಮಿ ಆಗಬಾರದು. ಪುರುಷ ತನ್ನ ಪತ್ನಿಗೆ ಸರಿಯಾಗಿ ಗೌರವ ಕೊಡಬೇಕು ಎಂದು ಖುಷ್ಭೂ ಬರೆದುಕೊಂಡಿದ್ದಾರೆ. ನಿಜವಾದ ಪುರುಷನು ತನ್ನ ಮಕ್ಕಳನ್ನು ಹೆರುವ ಮಹಿಳೆಯನ್ನು ಗೌರವಿಸುತ್ತಾನೆ. ಯಾರ…

Read More

ಜೊತೆ ಜೊತೆಯಲಿ ಧಾರವಾಹಿ ಮೂಲಕ ಖ್ಯಾತಿ ಘಳಿಸಿದ ನಟಿ ಮೇಘಾ ಶೆಟ್ಟಿ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗಳ ಜೊತೆಗೆ ಜಾಹೀರಾತಿಯಲ್ಲೂ ತೊಡಗಿಕೊಂಡಿರುವ ನಟಿ ಆಗಾಗ ಫೋಟೋ ಶೂಟ್ ಗಳ ಮೂಲಕವು ಹೆಚ್ಚು ಸುದ್ದಿಯಾಗುತ್ತಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟೀವ್ ಆಗಿರುವ ನಟಿ ಮೇಘಾ ಶೆಟ್ಟಿ ಆಗಾಗ ತಮ್ಮ ಫೋಟೋ ಶೂಟ್ ಮೂಲಕವು ಸದ್ದು ಮಾಡ್ತಿರ್ತಾರೆ. ಇದೀಗ ಮೇಘಾ ಶೆಟ್ಟಿ ಕೇರಳ ಕುಟ್ಟಿಯಂತೆ ಸೀರೆಯುಟ್ಟು ಭರ್ಜರಿ ಫೋಟೋ ಶೂಟ್ ಮಾಡಿಸಿದ್ದಾರೆ. ಗೋಲ್ಡ್ ಬಾರ್ಡರ್ ಇರುವ ಕೇರಳ ಸೀರೆಯುಟ್ಟು ನಟಿ ಮೇಘಾ ಶೆಟ್ಟಿ ಮಿಂಚಿದ್ದಾರೆ. ಇತ್ತೀಚಿಗಷ್ಟೇ ಓಣಂ ಹಬ್ಬ ಕೂಡ ಮುಗಿದೆ.  ಈಗ ಕೇರಳ ಸ್ಟೈಲ್ ಸೀರೆಯುಟ್ಟ ಫೋಟೋವನ್ನು ಶೇರ್​ ಮಾಡಿದ್ದಾರೆ. ಚೆಂದದ ಸೀರೆಯುಟ್ಟ ಮೇಘಾ ಶೆಟ್ಟಿ ಗೊಂಬೆಯಂತೆ ಕಾಣುತ್ತಿದ್ದು, ಫೋಟೋ ನೋಡಿದ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಮೇಘಾ ಶೆಟ್ಟಿ, ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ಲೇಟೆಸ್ಟ್​ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಮೇಘಾ ಶೆಟ್ಟಿ ಕೇರಳ…

Read More

ತಿರುಪತಿಯಲ್ಲಿ ನೀಡುವ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು, ಹಂದಿ ಕೊಬ್ಬು, ಮೀನಿನ ಎಣ್ಣೆ ಪತ್ತೆಯಾಗಿದ್ದು ಭಕ್ತರಿಗೆ ತೀವ್ರ ಆತಂಕ ಎದುರಾಗಿದೆ. ತಿರುಪತಿ ಲಡ್ಡು ಮಾಡಲು ಬಳಸುವ ತುಪ್ಪದಲ್ಲಿ ದನದ ಕೊಬ್ಬು ಪತ್ತೆಯಾಗಿರುವ ವಿಷಯ ರಾಷ್ಟ್ರದಾದ್ಯಂತ ದೊಡ್ಡ ಸುದ್ದಿಯಾಗಿದೆ. ಆಂಧ್ರ ಸರ್ಕಾರ ಈಗಾಗಲೇ ತನಿಖೆ ನಡೆಸುತ್ತಿದ್ದು, ದೂರು ದಾಖಲಾಗಿದೆ. ಇದರ ನಡುವೆ ಆಂಧ್ರ ಡಿಸಿಎಂ, ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ತಿರುಪತಿ ವೆಂಕಟೇಶ್ವರ ಸ್ವಾಮಿಯ ಕ್ಷಮೆ ಕೋರಿ 11 ದಿನದ ಪ್ರಾಯಶ್ಚಿತ ದೀಕ್ಷೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಪವನ್ ಕಲ್ಯಾಣ್, ‘ತಿರುಪತಿ ಲಡ್ಡು ಅಂದರೆ, ಅಮೃತ ಸಮವಾಗಿ, ಪರಮ ಪವಿತ್ರವಾಗಿ ಭಾವಿಸಲ್ಪಡುತ್ತದೆ. ಅದು, ಹಿಂದಿನ ಪಾಲಕರ ವಿಕೃತ ಚೇಷ್ಠೆಗಳ ಫಲವಾಗಿ ಅಪವಿತ್ರವಾಗಿದೆ. ಜಂತು ಅವಶೇಷಗಳಿಂದ ಮಲಿನವಾಗಿದೆ. ಮನುಷ್ಯತ್ವವನ್ನು ಕಳೆದುಕೊಂಡವರು ಮಾತ್ರ ಇಂಥಹ ಪಾಪಕಾರ್ಯವನ್ನು ಮಾಡಬಲ್ಲರು. ಈ ಪಾಪವನ್ನು ಮೊದಲೇ ಕಂಡು ಹಿಡಿಯಲಾಗದ್ದು ನಮ್ಮ ದುರಾದೃಷ್ಟವೆಂದು ಹೇಳಬಹುದು. ಲಡ್ಡು ಪ್ರಸಾದದಲ್ಲಿ ಜಂತು ಅವಶೇಷಗಳಿವೆಯೆಂದು ಗೊತ್ತಾದ ತಕ್ಷಣ ನನ್ನ ಮನಸ್ಸು ವ್ಯಾಕುಲಗೊಂಡಿತು.…

Read More

ಆರ್ಥಿಕ ಬಿಕಟ್ಟಿನಿಂದ ತತ್ತರಿಸಿ ಹೋಗಿದ್ದ ಶ್ರೀಲಂಕಾ ಇದೀಗ ಕೊಂಚ ಸುಧಾರಿಸಿಕೊಂಡಿದೆ. ಈ ಬೆನ್ನಲ್ಲೇ ಹೊಸ ಅಧ್ಯಕ್ಷರ ಆಯ್ಕೆ ಸಂಬಂಧ ನಡೆದ ಚುನಾವಣೆಯಲ್ಲಿ ಶೇ 75ಕ್ಕೂ ಹೆಚ್ಚು ಮತದಾನವಾಗಿದೆ.2022ರಲ್ಲಿ ಎದುರಾದ ಆರ್ಥಿಕ ಸಂಕಷ್ಟದ ಬಳಿಕ ಇದೇ ಮೊದಲ ಸಲ ನಡೆದ ಅಧ್ಯಕ್ಷೀಯ ಚುನಾವಣೆ ಮುಗಿದಿದ್ದು ಮತ ಎಣಿಕೆ ಆರಂಭವಾಗಿದೆ. ಆರ್ಥಿಕ ಚೇತರಿಕೆಯ ಹಾದಿಯಲ್ಲಿ ದೇಶವನ್ನು ಮುನ್ನಡೆಸುತ್ತಿರುವುದಾಗಿ ಹೇಳಿಕೊಂಡಿರುವ ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ (75) ಅವರು 5 ವರ್ಷದ ಅವಧಿಗೆ ಮರು ಆಯ್ಕೆಯ ನಿರೀಕ್ಷೆಯಲ್ಲಿದ್ದಾರೆ. ಶನಿವಾರ ನಡೆದ ಮತದಾನದ ಪ್ರಕ್ರಿಯೆಯಲ್ಲಿ ದೇಶದ 1.7 ಕೋಟಿ ಅರ್ಹ ಮತದಾರರಲ್ಲಿ ಮಧ್ಯಾಹ್ನ 2ರ ಹೊತ್ತಿಗೆ ಶೇ 60ರಷ್ಟು ಜನ ಹಕ್ಕು ಚಲಾಯಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ‘ಸಂಜೆ 4ರ ನಂತರ ಅಂಚೆ ಮತಗಳ ಎಣಿಕೆ ಮತ್ತು ಸಂಜೆ 6ರ ನಂತರ ಸಾಮಾನ್ಯ ಮತಗಳ ಎಣಿಕೆ ಆರಂಭಿಸುತ್ತೇವೆ. ಮತ ಎಣಿಕೆ ಆರಂಭವಾದ 2 ಅಥವಾ 3 ಗಂಟೆ ಬಳಿಕ ಫಲಿತಾಂಶ ಪ್ರದರ್ಶಿಸಲು ಸಾಧ್ಯ’ ಎಂದು ಕೊಲಂಬೊ ನಗರ ಉಪ…

Read More