2024ರ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟವನ್ನು ಮಾಡೆಲ್ ರಿಯಾ ಸಿಂಘಾ ಮುಡಿಗೇರಿಸಿಕೊಂಡಿದ್ದಾರೆ. 19 ವರ್ಷದ ಯುವತಿ ರಿಯಾ ರಾಜಸ್ಥಾನದ ಜೈಪುರದಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಿಸಿದ್ದರು. ರಿಯಾ ಸಿಂಘಾ 2024ರ ಇಂಟರ್‌ನ್ಯಾಷನಲ್ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಗುಜರಾತ್ ಮೂಲಕ ರಿಯಾ ಸಿಂಘಾ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟ ಗೆದ್ದ ಬಳಿಕ ಮಾತನಾಡಿದ್ದು, ‘ಇಂದು ಪ್ರಶಸ್ತಿ ಗೆದ್ದ ನಂತರ ನಾನು ಕೃತಜ್ಞನಾಗಿದ್ದೇನೆ. ಈ ಮಟ್ಟಕ್ಕೆ ಬರಲು ತುಂಬಾ ಕಷ್ಟಪಟ್ಟಿದ್ದೇನೆ. ಅಲ್ಲಿ ನಾನು ಕಿರೀಟಕ್ಕೆ ಅರ್ಹನೆಂದು ಪರಿಗಣಿಸಿದೆ. ಹಿಂದಿನ ವಿಜೇತರಿಂದ ನಾನು ತುಂಬಾ ಸ್ಫೂರ್ತಿ ಪಡೆದಿದ್ದೇನೆ’ ಎಂದರು. ಬಾಲಿವುಡ್ ನಟಿ ಊರ್ವಶಿ ರೌಟೇಲರವರು ರಿಯಾರವರಿಗೆ ಕಿರೀಟ ತೊಡಿಸಿದರು. ಬಳಿಕ ಮಾತನಾಡಿದ ಅವರು, ‘ಎಲ್ಲಾ ಹುಡುಗಿಯರ ಭಾವನೆಗಳ ಬಗ್ಗೆ ತಿಳಿದಿದೆ. ವಿಜೇತರು ಅದ್ಭುತವಾಗಿದ್ದಾರೆ. ವಿಶ್ವ ಸುಂದರಿಯ ಜಾಗತಿಕ ವೇದಿಕೆಯಲ್ಲಿ ನಮ್ಮ ದೇಶವನ್ನು ಉತ್ತಮವಾಗಿ ಪ್ರತಿನಿಧಿಸುತ್ತಾರೆ ಎಂದು ಹೇಳಿದ್ದಾರೆ. ಊರ್ವಶಿ ರೌತೆಲಾ ಅವರೇ ಭಾನುವಾರ ರಾಜಸ್ಥಾನದ ಜೈಪುರದಲ್ಲಿ ನಡೆದ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯ…
Author: Author AIN
ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತುಂಬು ಗರ್ಭಿಣಿ ಹರ್ಷಿಕಾ ಪೂಣಚ್ಚ ಅವರ ಬೇಬಿ ಶವರ್ ಪಾರ್ಟಿ ಇತ್ತೀಚೆಗೆ ಅದ್ದೂರಿಯಾಗಿ ನಡೆದಿದ್ದು ಈ ಪಾರ್ಟಿಯಲ್ಲಿ ಸ್ಯಾಂಡಲ್ ವುಡ್ ನ ಸಾಕಷ್ಟು ಸೆಲೆಬ್ರಿಟಿಗಳು ಭಾಗಿಯಾಗಿ ಶುಭ ಹಾರೈಸಿದ್ದಾರೆ. ತುಂಬು ಗರ್ಭಿಣಿಯಾಗಿರುವ ಹರ್ಷಿಕಾ ಪೂಣಚ್ಚಗೆ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಗಣೇಶ್ ಸಪ್ರೈರ್ ಪಾರ್ಟಿ ಆಯೋಜಿಸಿದ್ದರು. ಬೇಬಿ ಶವರ್ ಪಾರ್ಟಿಯಲ್ಲಿ ಹರ್ಷಿಕಾ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಎಂಟು ತಿಂಗಳ ಗರ್ಭಿಣಿಯಾಗಿರುವ ಹರ್ಷಿಕಾ ಪೂಣಚ್ಚಾಗೆ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ದಂಪತಿಗಳು ಅದ್ಧೂರಿಯಾಗಿ ಬೇಬಿ ಶವರ್ ಪಾರ್ಟಿ ಮಾಡಿದ್ದಾರೆ. ಈ ಕಾರ್ಯಕ್ರಮ ಗಣೇಶ್ ಅವರ ಮನೆಯಲ್ಲಿ ನಡೆದಿದೆ. ಗಣೇಶ್ ಮನೆಯನ್ನು ಅದ್ಧೂರಿಯಾಗಿ ಬಲೂನ್ ಗಳಿಂದ ಸಿಂಗರಿಸಿದ್ದು, ಬೇಬಿ ಶವರ್ ಗೆ ಸರಿ ಹೊಂದುವಂತಹ ನೀಲಿ ಮತ್ತು ಪಿಂಕ್ ಬಣ್ಣದ ಬಲೂನ್ ನಿಂದ ಸಿಂಗರಿಸಿದ್ದು, ಮರದ ಕೊಂಬೆಗೆ ಹಾಕಿದ ಜೋಕಾಲಿ ಮೇಲೆ ಮಗು ಮಲಗಿರುವ ಥೀಮ್ ನಲ್ಲಿ…
ತಮಿಳು ನಟ ಜಯಂ ರವಿ ಹಾಗೂ ಅವರ ಪತ್ನಿ ಆರತಿ ಮಧ್ಯೆ ಡಿವೋರ್ಸ್ ಕಾರಣಕ್ಕೆ ಕಿತ್ತಾಟ ಶುರವಾಗಿದೆ. ಜಯಂ ರವಿಗೆ ಗಾಯಕಿಯ ಜೊತೆ ಅಫೇರ್ ಇರುವ ಕಾರಣದಿಂದ ನನ್ನಿಂದ ಅವರು ದೂರ ಆಗಿದ್ದಾರೆ ಎಂದು ಆರತಿ ಆರೋಪ ಮಾಡಿದ್ದಾರೆ. ಅಲ್ಲದೆ, ಜಯಂ ರವಿ ಅವರು ನನ್ನ ಕೇಳದೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದಿದ್ದಾರೆ. ಆರತಿ ಆರೋಪದ ಬಗ್ಗೆ ಜಯಂ ರವಿ ಸ್ಪಷ್ಟನೆ ನೀಡಿದ್ದಾರೆ. ಜಯಂ ರವಿ ಕೆಲ ದಿನಗಳ ಹಿಂದೆ ಆರತಿಗೆ ವಿಚ್ಛೇದನ ನೀಡುತ್ತಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಆರತಿ ಇಂದ ದೂರ ಆಗುತ್ತಿದ್ದೇನೆ ಎಂದು ಜಯಂ ರವಿ ಹೇಳುತ್ತಿದ್ದಂತೆ ಗಾಯಕಿ ಕೆನಿಶಾ ಹೆಸರು ಜಯಂ ರವಿ ಜೊತೆ ಕೇಳಿ ಬಂದಿತ್ತು. ಈ ಕುರಿತು ಜಯಂ ಸ್ಪಷ್ಟನೆ ನೀಡಿದ್ದಾರೆ. ‘ನನಗೆ ವಿಚ್ಛೇದನ ಬೇಕು. ಆರತಿಗೆ ರಾಜಿ ಆಗಬೇಕು ಎನ್ನುವ ಉದ್ದೇಶ ಇದ್ದರೆ ಅವಳು ಏಕೆ ನನ್ನ ಭೇಟಿ ಮಾಡಿಲ್ಲ? ಎರಡು ಲೀಗಲ್ ನೋಟಿಸ್ ಕಳುಹಿಸಿದರೂ ಏಕೆ ಉತ್ತರ ನೀಡಿಲ್ಲ? ಇದು ರಾಜಿ…
ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಜೈಲು ಸೇರಿ ಸಾಕಷ್ಟು ದಿನಗಳೇ ಕಳೆದಿದೆ. ಶನಿವಾರ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ಇಂದು ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ. ಈ ಮೂಲಕ ಇಂದು ದರ್ಶನ್ ಭವಿಷ್ಯ ನಿರ್ಧಾರವಾಗಲಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ಕೆಲವರು ಈಗಾಗಲೇ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಆದರೆ ದರ್ಶನ್ ಮಾತ್ರ ಜಾಮೀನಿಗೆ ಅರ್ಜಿ ಸಲ್ಲಿಸಲು ಸ್ವಲ್ಪ ಹಿಂದೇಟು ಹಾಕಿದ್ರು. ಆದ್ರೆ ಈಗ ಅವರು ಕೂಡ ತಮ್ಮ ವಕೀಲರ ಮೂಲಕ ಕಾನೂನು ಹೋರಾಟ ಶುರು ಮಾಡಿದ್ದು, ಈಗಾಗಲೇ 57ನೇ ಸಿಸಿಹೆಚ್ ಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ವಕೀಲರಾದ ಎಸ್. ಸುನೀಲ್ ದರ್ಶನ್ ಜಾಮೀನು ಅರ್ಜಿಯನ್ನ ಸಲ್ಲಿಸಿದ್ದು, ನ್ಯಾಯಾಧೀಶರಾದ ಜಯಶಂಕರ್ ಅರ್ಜಿ ವಿಚಾರಣೆ ನಡೆಸಿದ್ರು. ಬಳಿಕ ಸರ್ಕಾರದ ಪರ ಎಸ್ಪಿಪಿಗೆ ಆಕ್ಷೇಪಣೆಗೆ ಅವಕಾಶ ಕೊಟ್ಟು ನೋಟಿಸ್ ನೀಡಿದ್ದು, ಇಂದಿಗೆ ವಿಚಾರಣೆ ಮುಂದೂಡಲಾಗಿದೆ. ದರ್ಶನ್ ಬಳ್ಳಾರಿ ಜೈಲಿಗೆ ಹೋದಾಗಿನಿಂದ ಸಾಕಷ್ಟು ತೊಂದರೆ ಅನುಭವಿಸ್ತಿದ್ದಾರೆ. ಪರಪ್ಪನ…
ಇತ್ತೀಚೆಗಷ್ಟೇ ಪದ್ಮ ವಿಭೂಷಣ ಪ್ರಶಸ್ತಿ ಸ್ವೀಕರಿಸಿದ್ದ ನಟ ಮೆಗಾಸ್ಟಾರ್ ಚಿರಂಜೀವಿ ಇದೀಗ ಮತ್ತೊಂದು ದಾಖಲೆ ಬರೆದಿದ್ದಾರೆ. ತೆಲುಗು ಚಿತ್ರರಂಗದ ಖ್ಯಾತ ನಟ ಚಿರಂಜೀವಿ ಗಿನ್ನೆಸ್ ವಿಶ್ವ ದಾಖಲೆ ಪುಟ ಸೇರಿದ್ದಾರೆ. ಭಾರತೀಯ ಸಿನಿಮಾ ರಂಗದಲ್ಲಿ ಅತ್ಯಂತ ಸಮೃದ್ಧ ಚಲನಚಿತ್ರ ನಟ, ನರ್ತಕನೆಂಬ ಹೆಗ್ಗಳಿಕೆಯನ್ನು ಹೊಂದಿದ್ದು, ಇದೇ ವಿಚಾರವಾಗಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಬಾಲಿವುಡ್ ನಟ ಆಮಿರ್ ಖಾನ್ ಕೂಡ ಭಾಗಿಯಾಗಿದ್ದರು. ಚಿರಂಜೀವಿ ಅವರು ಈವರೆಗೂ 156 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕಳೆದ 46 ವರ್ಷಗಳಿಂದ ಅವರು ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಈವರೆಗಿನ ತಮ್ಮ ವೃತ್ತಿ ಜೀವನದಲ್ಲಿ ಚಿರಂಜೀವಿ ಅವರು 537 ಹಾಡುಗಳಲ್ಲಿ ಡ್ಯಾನ್ಸ್ ಮಾಡಿದ್ದಾರೆ. 24 ಸಾವಿರ ಡ್ಯಾನ್ಸ್ ಸ್ಟೆಪ್ಸ್ ಹಾಕಿದ್ದಾರೆ. ಈ ಸಾಧನೆಗಾಗಿ ಅವರ ಹೆಸರು ಗಿನ್ನಿಸ್ ವರ್ಲ್ಡ್ ರೆಕಾರ್ಡ್ನಲ್ಲಿ ಸೇರಿಕೊಂಡಿದೆ. ಹೈದರಾಬಾದ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮೀರ್ ಖಾನ್ ಅವರಿಂದ ಚಿರಂಜೀವಿಯವರು ವಿಶ್ವ ಗಿನ್ನೆಸ್ ದಾಖಲೆಯ ಪ್ರಶಸ್ತಿ ಪಡೆದರು. ಬಳಿಕ ಮಾತನಾಡಿದ ಅಮೀರ್ ಖಾನ್…
ಅಮೆರಿಕದಲ್ಲಿ ಭಾರತ ಇನ್ನೂ ಎರಡು ರಾಯಭಾರ ಕಚೇರಿ ತೆರೆಯಲು ನಿರ್ಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನ್ಯೂಯಾರ್ಕ್ ನ ನಸ್ಸೌ ವೆಟರನ್ಸ್ ಮೆಮೋರಿಯಲ್ ಕೊಲಿಜಿಯಂನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಮೋದಿ, “ಕಳೆದ ವರ್ಷ ಸಿಯಾಟಲ್‌ನಲ್ಲಿ ನಮ್ಮ ಸರ್ಕಾರ ಹೊಸ ಕಾನ್ಸುಲೇಟ್ ತೆರೆಯಲಿದೆ ಎಂದು ನಾನು ಘೋಷಿಸಿದ್ದೆ. ಅದರಂತೆ ಇದೀಗ ಅದನ್ನು ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಅಮೆರಿಕದಲ್ಲಿ ಭಾರತ ಇನ್ನೂ ಎರಡು ರಾಯಭಾರ ಕಚೇರಿ ತೆರೆಯಲು ನಿರ್ಧರಿಸಿದೆ ಎಂದು ಹೇಳಿದರು, ಎರಡು ಹೊಸ ರಾಯಭಾರ ಕಚೇರಿಗಳನ್ನು ತೆರೆಯುವ ಬಗ್ಗೆ ಸಲಹೆಗಳನ್ನು ಕೋರಿದ್ದೇವೆ. ನಿಮ್ಮ ಸಲಹೆಯ ನಂತರ ಭಾರತ, ಬೋಸ್ಟನ್ ಮತ್ತು ಲಾಸ್ ಏಂಜಲೀಸ್‌ನಲ್ಲಿ ಎರಡು ಹೊಸ ಕಾನ್ಸುಲೇಟ್‌ಗಳನ್ನು ತೆರೆಯಲು ನಿರ್ಧರಿಸಿದೆ” ಎಂದು ಮೋದಿ ತಿಳಿಸಿದರು. ಜಗತ್ತಿಗೆ AI ಅಂದ್ರೆ ಕೃತಕ ಬುದ್ಧಿಮತ್ತೆ. ಆದರೆ, ನನಗೆ AI ಎಂದರೆ ಅಮೆರಿಕನ್-ಇಂಡಿಯನ್ ಸ್ಪಿರಿಟ್. ಇದು ವಿಶ್ವದ ಹೊಸ ‘AI’ ಶಕ್ತಿ….” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಐತಿಹಾಸಿಕ ಎರಡನೇ ಸುತ್ತಿನ ಮತ ಎಣಿಕೆಯ ನಂತರ ಮಾರ್ಕ್ಸ್‌ವಾದಿ ನಾಯಕ ಅನುರ ಕುಮಾರ ಡಿಸಾನಾಯಕೆ ಅವರು ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ಏರುವ ಕನಸು ಕಂಡಿದ್ದ ಹಾಲಿ ಅಧ್ಯಕ್ಷರಾಗಿದ್ದ ರನಿಲಾ ವಿಕ್ಸಮಸಿಂಘೆ ಕನಸು ಭಗ್ನವಾಗಿದೆ. ಮಾರ್ಕ್ಸ್‌ವಾದಿ ಜನತಾ ವಿಮುಕ್ತಿ ಪೆರಮುನ ಪಕ್ಷದ ವಿಶಾಲ ರಂಗದ ನ್ಯಾಷನಲ್ ಪೀಪಲ್ಸ್ ಪವರ್ ನಾಯಕ 56 ವರ್ಷದ ಅನುರಾ ಡಿಸ್ಸಾನಾಯಕೆ ತಮ್ಮ ಸಮೀಪದ ಪ್ರತಿಸ್ಪರ್ಧಿ ಸಮಗಿ ಜನ ಬಲವೇಗಯ (SJBಯ ಸಜಿತ್ ಪ್ರೇಮದಾಸ ಅವರನ್ನು ಸೋಲಿಸಿದರು. ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ಮೊದಲ ಸುತ್ತಿನಲ್ಲೇ ಮತಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಿಸುವಲ್ಲಿ ವಿಫಲರಾದರು. ದಿಸಾನಾಯಕ ಅವರು ಇಂದು ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅನುರಾ ಗೆಲುವು, ದೇಶದ ಆರ್ಥಿಕ ಕುಸಿತಕ್ಕೆ ಕಾರಣವಾದ ರಾಜಕೀಯ ವ್ಯವಸ್ಥೆಯ ನಿರಾಕರಣೆಯನ್ನು ಸೂಚಿಸುತ್ತದೆ. 2019 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಕೇವಲ 3 ಪ್ರತಿಶತದಷ್ಟು ಮತಗಳನ್ನು ಪಡೆದಿದ್ದ ಜೆವಿಪಿಗೆ ಈ ಗೆಲುವು ಪ್ರಮುಖ…
ಧನಂಜಯ್ ಒಡೆತನದ ಡಾಲಿ ಪಿಕ್ಚರ್ಸ್‌ನ ನಾಲ್ಕನೇ ಸಿನಿಮಾ ವಿದ್ಯಾಪತಿ ಶೂಟಿಂಗ್ ಕಂಪ್ಲೀಟ್ ಆಗಿದೆ. ಈ ಹಿಂದೆ ಡಾಲಿ ಪಿಕ್ಷರ್ಸ್ ಬ್ಯಾನರ್ ಅಡಿಯಲ್ಲಿ ತೆರೆಕಂಡಿದ್ದ ಟಗರು ಪಲ್ಯ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ನಟ ನಾಗಭೂಷಣ್ ವಿದ್ಯಾಪತಿ ಸಿನಿಮಾದಲ್ಲಿ ಹೀರೋ ಆಗಿ ಮಿಂಚಿದ್ದಾರೆ. ನಾಗಭೂಷಣ್ ಗೆ ಜೋಡಿಯಾಗಿ ಬೆಡಗಿ ಮಲೈಕಾ ವಸೂಪಾಲ್ ಸಾಥ್ ನೀಟ್ಟಿದ್ದಾರೆ. ಕರಾಟೆ ಕಿಂಗ್ ಗೆಟಪ್ ನಲ್ಲಿ ನಾಗಭೂಷಣ್ ಕಾಣಿಸಿಕೊಂಡಿದ್ದು, ಅವರಿಗೆ ಮಾಸ್ಟರ್ ಆಗಿ ರಂಗಾಯಣ ರಘು ಅಭಿನಯಿಸಿದ್ದಾರೆ. ಈ ಹಿಂದೆ ಇಕ್ಕಟ್ ಸಿನಿಮಾ ಮೂಲಕ ಭರವಸೆ ಹುಟ್ಟಿಸಿದ್ದ ಇಶಾಂ ಮತ್ತು ಹಸೀಂ ಖಾನ್ ವಿದ್ಯಾಪತಿ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ. ಜೊತೆಗೆ ಸಿನಿಮಾವನ್ನು ಇವರೆ ಬರೆದು, ಸಂಕಲನದ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದಾರೆ. ಚಿತ್ರಕ್ಕೆ ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆಕ್ಷನ್ ವಿದ್ಯಾಪತಿ ಸಿನಿಮಾಕ್ಕಿದೆ. ಡಾಲಿ ಧನಂಜಯ್ ವಿದ್ಯಾಪತಿ ಚಿತ್ರಕ್ಕೂ ದುಡ್ಡುಹಾಕುತ್ತಿದ್ದಾರೆ. ಟಗರು ಪಲ್ಯ ಸಿನಿಮಾ ಬಳಿಕ ಈ ಸಿನಿಮಾ…
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಸಾಕಷ್ಟು ದಿನಗಳೇ ಕಳೆದು ಹೋಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಲ್ಸನ್ ನಾಗನ ಕಾರಣದಿಂದ ಆರಾಮಾಗಿದ್ದ ದರ್ಶನ್ ಗೆ ಬಳ್ಳಾರಿ ಜೈಲು ನರಕವಾಗಿದೆ. ಹೊರಗಿದ್ದ ವೇಳೆ ಸಾಕಷ್ಟು ಜನರೊಂದಿಗೆ ಅರಾಮಾಗಿದ್ದ ಪಾರ್ಟಿ ಪಬ್ಬು ಅಂತಿದ್ದ ದರ್ಶನ್ ಬಳ್ಳಾರಿ ಜೈಲಿನ ಒಂಟಿತನಕ್ಕೆ ಸೊರಗಿ ಹೋಗಿದ್ದಾರೆ. ಮಾತನಾಡಲು ಯಾರು ಇಲ್ಲದೆ, ಊಟ ತಿಂಡಿ ಸೇರದೆ ನಿದ್ದೆ ಬರದೆ ದರ್ಶನ್ ಸಂಪೂರ್ಣ ಸಪ್ಪಗಾಗಿದ್ದಾರೆ. ಇತ್ತೀಚೆಗೆ ದರ್ಶನ್ ತಾಯಿ ಮೀನಾ ತೂಗುದೀಪ್ ಬಳ್ಳಾರ ಜೈಲಿಗೆ ಆಗಮಿಸಿ ಮಗನನ್ನು ನೋಡಿ ಧೈರ್ಯ ತುಂಬಿ ಹೋಗಿದ್ದಾರೆ. ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾಗಲೂ ಒಮ್ಮೆ ಮೀನಾ ಅವರು ಜೈಲಿಗೆ ಆಗಮಿಸಿದ್ದರು. ಇದೀಗ ಬಳ್ಳಾರಿಗೆ ಬಂದು ದರ್ಶನ್ ಅನ್ನು ನೋಡಿ ಹೋಗಿದ್ದಾರೆ. ತಾಯಿ ಬಂದು ಹೋದಮೇಲೆ ದರ್ಶನ್ ವರ್ತನೆ ಹಾಗೂ ಮಾತುಗಳಲ್ಲಿ ಬದಲಾವಣೆ ಆಗಿದೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೆ ಮಾಧ್ಯಮಗಳಿಗೆ ಅಸಹ್ಯಕರವಾಗಿ ಸಂಜ್ಞೆ ಮಾಡಿದ್ದ ದರ್ಶನ್, ಈಗ ಜೈಲು ಸಿಬ್ಬಂದಿಯ ಮುಂದೆ ಕಣ್ಣೀರು…
ಬ್ರೆಜಿಲ್, ದಕ್ಷಿಣ ಅಮೇರಿಕಾ ಸೇರಿ ಇನ್ನೂ ಹಲವು ಕಡೆ ಭೀಕರ ಬರಗಾಲ ಎದುರಾಗಿದೆ. ಇದರಿಂದ ಜನ ತುತ್ತಿನ ಕೂಳಿಗೂ ಪರದಾಡುತ್ತಿದ್ದಾರೆ. ಮತ್ತೊಂದಡೆ ಜಲ ಮೂಲಗಳು ಬತ್ತಿ ಹೋಗುತ್ತವೆ. ಇದರಿಂದ ಜನ ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ವಿಶ್ವದ ಅತಿದೊಡ್ಡ ನದಿ ಅನ್ನೋ ಹೆಗ್ಗಳಿಕೆ ಪಡೆದಿರುವ ಅಮೆಜಾನ್ ನದಿ ಬರಿದಾಗ್ತಿದೆ. ಅಮೆಜಾನ್ ನದಿಯ ಜಲಾನಯನ ಪ್ರದೇಶವು ಅತ್ಯಂತ ಕೆಟ್ಟ ಬರವನ್ನು ಅನುಭವಿಸುತ್ತಿದ್ದು, ಎಂದೂ ಕಂಡು ಕೇಳರಿಯದ ರೀತಿಯಲ್ಲಿ ನೀರಿನ ಮಟ್ಟವು ಕನಿಷ್ಠ ಮಟ್ಟಕ್ಕೆ ಕುಸಿಯುತ್ತಿದೆ. ಈ ಪರಿಸರದ ಬಿಕ್ಕಟ್ಟು ವನ್ಯಜೀವಿಗಳು ಮತ್ತು ಸ್ಥಳೀಯ ಸಮುದಾಯಗಳ ಮೇಲೆ ವ್ಯಾಪಕವಾದ ಪರಿಣಾಮ ಬೀರುತ್ತಿದೆ ಮತ್ತು ಹವಾಮಾನ ಬದಲಾವಣೆಯ ವೇಗವರ್ಧಿತ ಪರಿಣಾಮಗಳ ಬಗ್ಗೆ ವಿಶ್ವಕ್ಕೆ ಎಚ್ಚರಿಕೆ ನೀಡುತ್ತಿದೆ. ಪೆರುವಿನ ಆಂಡಿಸ್ ಪರ್ವತಗಳಿಂದ ಪೂರ್ವಕ್ಕೆ ದಕ್ಷಿಣ ಅಮೇರಿಕಾದಾದ್ಯಂತ ಅಟ್ಲಾಂಟಿಕ್ ಸಾಗರದವರೆಗೆ ಹರಿಯುವ ಅಮೆಜಾನ್ ನದಿಯು ಸಮುದ್ರ ಮಟ್ಟದಿಂದ 5,598 ಮೀಟರ್‌ಗಳಷ್ಟು ಎತ್ತರದಲ್ಲಿದೆ. ಋತುಮಾನದೊಂದಿಗೆ ನದಿಯ ಗಾತ್ರವು ಬದಲಾಗುತ್ತದೆ. ಉದಾಹರಣೆಗೆ ಶುಷ್ಕ ಋತುವಿನಲ್ಲಿ, ನದಿಯು 4 ರಿಂದ 5…