ಫ್ರಾನ್ಸ್ ಈಗ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಸಾರ್ವಜನಿಕ ಕೊರತೆಯನ್ನು ಎದುರಿಸುತ್ತಿದೆ ಎಂದು ಹೊಸದಾಗಿ ನೇಮಕ ಗೊಂಡಿರುವ ಆರ್ಥಿಕ ಸಚಿವ ಆಂಟೊಯಿನ್ ಅರ್ಮಾಂಡ್ ಹೇಳಿದ್ದಾರೆ. ಈ ಹೇಳಿಕೆಯ ಮೂಲಕ ಹೊಸ ವಿತ್ತ ಸಚಿವರು, ಫ್ರಾನ್ಸ್ ನ ಆರ್ಥಿಕ ಸ್ಥಿತಿಯನ್ನು ಮರಳಿ ಹಳಿಗೆ ತರುವುದಕ್ಕೆ ಸಂಪತ್ಭರಿತ ಹಾಗೂ ದೊಡ್ಡ ಉದ್ಯಮಿಗಳಿಗೆ ಹೆಚ್ಚಿನ ತೆರಿಗೆ ವಿಧಿಸುವ ಸಾಧ್ಯತೆಗಳ ಸುಳಿವನ್ನು ನೀಡಿದ್ದಾರೆ. ಆಂಟೊಯಿನ್ ಅರ್ಮಾಂಡ್ ಅವರು ಸರ್ಕಾರದ ಮಿತಿಮೀರಿದ ವೆಚ್ಚವನ್ನು ಕಡಿತಗೊಳಿಸುವ ಪ್ರಯತ್ನದಲ್ಲಿ ಒಕ್ಕೂಟಗಳು ಮತ್ತು ಮೇಲಧಿಕಾರಿಗಳ ಸಂಸ್ಥೆಗಳನ್ನು ಒಳಗೊಂಡಂತೆ ಆರ್ಥಿಕತೆಗೆ ಸಂಬಂಧಪಟ್ಟವರೊಂದಿಗೆ ಮಾತನಾಡುವುದಾಗಿ ಹೇಳಿದ್ದಾರೆ. ಸರ್ಕಾರದ ಮಿತಿಮೀರಿದ ವೆಚ್ಚ ರಾಷ್ಟ್ರೀಯ ಉತ್ಪಾದನೆಯ ಶೇ.5.6ರಷ್ಟು ಅಥವಾ ಅದಕ್ಕಿಂತಲೂ ಹೆಚ್ಚು ತಲುಪುವ ಸಾಧ್ಯತೆ ಇದ್ದು, ಇದು ಯುರೋಪಿಯನ್ ಯೂನಿಯನ್ ಮಿತಿಯ 2 ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. “ಕಳೆದ 50 (ವರ್ಷಗಳಲ್ಲಿ) ಒಂದು ಅಥವಾ ಎರಡು ಬಿಕ್ಕಟ್ಟಿನ ವರ್ಷಗಳನ್ನು ಹೊರತುಪಡಿಸಿ, ನಮ್ಮ ಇತಿಹಾಸದಲ್ಲಿ ನಾವು ಅತ್ಯಂತ ಕೆಟ್ಟ ಕೊರತೆಯನ್ನು ಹೊಂದಿದ್ದೇವೆ” ಎಂದು ಅರ್ಮಾಂಡ್ ಬ್ರಾಡ್‌ಕಾಸ್ಟರ್ ಫ್ರಾನ್ಸ್…
Author: Author AIN
ಬಾಲಿವುಡ್ ನಟಿ ಐಶ್ವರ್ಯ ರೈ ಇಂದಿಗೂ ಸಿನಿಮಾ ರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಐಶ್ವರ್ಯಾಗೆ ಸಾಕಷ್ಟು ಆಫರ್ ಗಳು ಬರ್ತಿದ್ದು ಅಳೆದು ತೂಗಿ ಅವುಗಳನ್ನು ಸೆಲೆಕ್ಟ್ ಮಾಡುತ್ತಿದ್ದಾರೆ. ಸದ್ಯ ಐಶ್ವರ್ಯಾ ಪ್ಯಾರಿಸ್ ಫ್ಯಾಷನ್ ವೀಕ್ ನಲ್ಲಿ ಕೆಂಪು ಬಣ್ಣದ ಬಟ್ಟೆ ತೊಟ್ಟು ಬೆಕ್ಕಿನ ನಡಿಗೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಪ್ಯಾರಿಸ್ ನಲ್ಲಿ ನಡೆದ ಫ್ಯಾಷನ್ ವೀಕ್ ನಲ್ಲಿ ಅಮ್ಮನ ಜೊತೆ ಆರಾಧ್ಯ ಕೂಡ ತೆರಳಿದ್ದರು. ಆರಾಧ್ಯ ಜೊತೆಗೆ ಐಶ್ವರ್ಯ ರೈ ಹಾಗೂ ಇತರರು ಫೋಟೋ ತೆಗೆಸಿಕೊಂಡು ಖುಷಿಪಟ್ಟಿದ್ದಾರೆ. ತಮ್ಮ ವೈವಾಹಿಕ ಜೀವನದ ಕೆಲವೊಂದು ಸುದ್ದಿಗಳ ನಡುವೆಯೂ ಐಶ್ವರ್ಯಾ ಪ್ಯಾರಿಸ್ ಫ್ಯಾಷನ್ ವೀಕ್ ನಲ್ಲಿ ಮಿಂಚಿದ್ದಾರೆ. ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ನಡುವೆ ಏನೂ ಸರಿಯಿಲ್ಲ. ಇನ್ನೇನು ಇಬ್ಬರೂ ಡಿವೋರ್ಸ್ ಪಡೆಯುತ್ತಾರೆ. ಎಲ್ಲವೂ ಮುಗಿಯಿತು. ಹೀಗೆ ಹಲವು ತಿಂಗಳುಗಳಿಂದಲೂ ಸುದ್ದಿ ಹಬ್ಬುತ್ತಲೇ ಇದೆ. ಆದರೆ, ಈಗ ನೋಡಿದ್ರೆ, ಐಶ್ವರ್ಯ ರೈ ತಮ್ಮ ವೆಡ್ಡಿಂಗ್ ರಿಂಗ್ ಧರಿಸಿಕೊಂಡೇ ಫ್ಯಾಷನ್ ವೀಕ್‌ನಲ್ಲಿ ವಾಕ್ ಮಾಡಿರೋದು ಸಾಕಷ್ಟು ಕುತೂಹಲಕ್ಕೆ…
ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ನೀಡಲಾಗುವ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು ಪತ್ತೆಯಾಗಿರುವುದು ಕೋಲಾಹಲ ಎಬ್ಬಿಸಿದೆ. ಲಡ್ಡು ಮಾಡಲು ಬಳಸಲಾದ ತುಪ್ಪದಲ್ಲಿ ದನದ ಕೊಬ್ಬು ಪತ್ತೆಯಾಗಿದೆ. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿತರಣೆಯಾಗುತ್ತಿರುವ ಪ್ರಸಾದದ ಸ್ವಚ್ಛತೆ ಬಗ್ಗೆ ಸ್ಥಳೀಯ ಸರ್ಕಾರ ಹಾಗೂ ದೇವಾಲಯದ ಆಡಳಿತ ಮಂಡಳಿಗಳು ಜಾಗೃತೆಯಾಗಿವೆ. ಇನ್ನು ಕೆಲವರು ಈ ವಿಷಯವಾಗಿ ತಮಗೆ ತೋಚಿದಂತೆ ಹೇಳಿಕೆಗಳನ್ನು ನೀಡುತ್ತಿದ್ದು, ತಿರುಪತಿ ಮಾತ್ರವೇ ಅಲ್ಲ, ಬೇರೆ ಕೆಲವು ದೇವಾಲಯಗಳ ಪ್ರಸಾದಗಳಲ್ಲಿಯೂ ಇಂಥಹಾ ಕಲಬೆರೆಕೆ ಸಾಮಾನ್ಯ ಎಂಬ ಹೇಳಿಕೆಗಳು ಕೇಳಿ ಬರ್ತಿದೆ. ಇದೀಗ ನಿರ್ದೇಶಕ ಮೋಹನ್ ಜಿ ನೀಡಿದ ಹೇಳಿಕೆ ಆಧರಿಸಿ ಅವರನ್ನು ಅರೆಸ್ಟ್ ಮಾಡಲಾಗಿದೆ. ಇದೀಗ ತಮಿಳು ನಿರ್ದೇಶಕರೊಬ್ಬರನ್ನು ದೇವಾಲಯದ ಪ್ರಸಾದದ ಕುರಿತಾಗಿನ ಹೇಳಿಕಗೆ ತಿರುಚಿ ಪೊಲೀಸರು ಬಂಧಿಸಿದ್ದಾರೆ. ‘ಬಕಾಸುರನ್’, ‘ದ್ರೌಪದಿ’ ಇನ್ನೂ ಕೆಲವು ಸಿನಿಮಾಗಳನ್ನು ನಿರ್ದೇಶಿಸಿ ಚರ್ಚೆಯಲ್ಲಿರುವ ನಿರ್ದೇಶಕ ಮೋಹನ್ ಜಿ ಕ್ಷತ್ರಿಯನ್ ಅವರನ್ನು ತಿರುಚಿ ಪೊಲೀಸರು ಬಂಧಿಸಿದ್ದಾರೆ. ಪಳನಿ ದೇವಾಲಯದ ಪ್ರಸಾದದ ಕುರಿತಾದ ಹೇಳಿಕೆ ನೀಡಿದ್ದಕ್ಕಾಗಿ…
ತಿರುಪತಿಯಲ್ಲಿ ನೀಡಲಾಗುವ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಸೇರಿಸಲಾಗಿದೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಇದನ್ನು ಪ್ರತಿಯೊಬ್ಬರು ಖಂಡಿಸುತ್ತಿದ್ದಾರೆ. ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ತಿರುಪತಿಯ ಲಡ್ಡುಗಳನ್ನು ತಯಾರಿಸಲು ಕಳಪೆ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಿತ್ತು ಎಂದು ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದರು. ಸರ್ಕಾರದ ನಿರ್ಧಾರಗಳ ಬಗ್ಗೆ ಟೀಕೆ ಮಾಡಿದ ನಟ ಪ್ರಕಾಶ್ ರಾಜ್ಗೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ವಾರ್ನಿಂಗ್ ಕೊಟ್ಟಿದ್ದಾರೆ. ಲಡ್ಡು ವಿವಾದದ ಕುರಿತು ಮಾತನಾಡಿದ್ದ ಪ್ರಕಾಶ್ ರಾಜ್ ಹೇಳಿಕೆಗೆ ಆಂಧ್ರ ಉಪ ಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಆಕ್ರೋಶ ವ್ಯಕ್ತಪಡಿಸಿದ್ರು. ವಿಜಯವಾಡ ದುರ್ಗಾ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಪವನ್ ಕಲ್ಯಾಣ್ ನಾನು ಯಾವ ಧರ್ಮವನ್ನು ದೂಷಿಸಿಲ್ಲ ಎಂದಿದ್ದಾರೆ. ಹಿಂದೂ, ಸನಾತನ ಧರ್ಮದ ಬಗ್ಗೆ ಮಾತನಾಡಿದ್ರೆ ನಟ ಪ್ರಕಾಶ್ ರಾಜ್ ಆಕ್ಷೇಪ ವ್ಯಕ್ತಪಡಿಸೋದು ಯಾಕೆ? ಇಲ್ಲಿ ನಾನು ಯಾವುದೇ ಧರ್ಮವನ್ನು ದೂಷಿಸಿಲ್ಲ, ದೇವರ ಮೂರ್ತಿಗಳ ಶಿರಚ್ಛೇದ ಮಾಡಿದ್ರೆ…
ವಿಶ್ವಸಂಸ್ಥೆಯ ಶೃಂಗಸಭೆಯಲ್ಲಿ ಭಾಗಿಯಾಗಲು ಅಮೆರಿಕಕ್ಕೆ ತೆರಳಿದ್ದ ಪ್ರಧಾನಿ ಮೋದಿ ನ್ಯೂಯಾರ್ಕ್‌ನಲ್ಲಿ ನೇಪಾಳದ ಪ್ರಧಾನಿ ಕೆ ಪಿ ಶರ್ಮಾ ಒಲಿ ಮತ್ತು ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಸೇರಿದಂತೆ ವಿಶ್ವ ನಾಯಕರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ದ್ವಿಪಕ್ಷೀಯ ಒಲಿ ಹಾಗೂ ಮಹಮೂದ್ ಅಬ್ಬಾಸ್ ಅವರೊಂದಿಗೆ ಬಾಂಧವ್ಯದ ವಿವಿಧ ಅಂಶಗಳನ್ನು ಚರ್ಚಿಸಿದ್ದಾರೆ. ಪ್ಯಾಲೆಸ್ತೀನ್ ಜನರಿಗೆ ಭಾರತದ ಬೆಂಬಲವನ್ನು ಪ್ರಧಾನಿ ಮೋದಿ ಪುನರುಚ್ಛರಿಸಿದರು. ಮೂರು ದಿನಗಳ ಅಮೇರಿಕಾ ಪ್ರವಾಸದ ಎರಡನೇ ದಿನ ಪ್ರಧಾನಿ ಮೋದಿಯವರು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನೇಪಥ್ಯದಲ್ಲಿ ಹಲವು ನಾಯಕರನ್ನು ಭೇಟಿ ಮಾಡಿದರು. ನ್ಯೂಯಾರ್ಕ್‌ನಲ್ಲಿ ಪ್ರಧಾನ ಮಂತ್ರಿ ಕೆಪಿ ಓಲಿ ಅವರೊಂದಿಗೆ ಫಲಪ್ರದ ಮಾತುಕತೆ ನಡೆದಿದೆ. ಭಾರತ-ನೇಪಾಳ ಸ್ನೇಹವು ತುಂಬಾ ದೃಢವಾಗಿದೆ. ನಮ್ಮ ಸಂಬಂಧಗಳಿಗೆ ಇನ್ನಷ್ಟು ವೇಗ ಹೆಚ್ಚಿಸಲು ನಾವು ಎದುರು ನೋಡುತ್ತಿದ್ದೇವೆ. ನಮ್ಮ ಮಾತುಕತೆಗಳು ಇಂಧನ, ತಂತ್ರಜ್ಞಾನ ಮತ್ತು ವ್ಯಾಪಾರದಂತಹ ವಿಷಯಗಳ ಮೇಲೆ ಕೇಂದ್ರೀಕೃತವಾಗಿವೆ ಎಂದು ಹೇಳಿದರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 79 ನೇ ಅಧಿವೇಶನದಲ್ಲಿ ಪಾಲ್ಗೊಳ್ಳಲು ಒಲಿ ಅವರು…
ಲೆಬನಾನ್‌ನ ರಾಜಧಾನಿ ಬೈರುತ್ ಪ್ರದೇಶವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದೆ. ನಿನ್ನೆ ದೊಡ್ಡ ಮಟ್ಟದಲ್ಲಿ ವೈಮಾನಿಕ ದಾಳಿ ನಡೆಸಿದ್ದು, ಪರಿಣಾಮ 492 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಮತ್ತು ಪೂರ್ವ ಲೆಬನಾನ್‌ನಲ್ಲಿ 300ಕ್ಕೂ ಹೆಚ್ಚು ಹೆಜ್ಬೊಲ್ಲಾ ಉಗ್ರರ ಕೇಂದ್ರವನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಹೆಜ್ಬೊಲ್ಲಾ ಸುಮಾರು 200 ರಾಕೆಟ್ಗಳನ್ನು ಉಡಾಯಿಸಿದೆ. ದಕ್ಷಿಣ ಲೆಬನಾನ್ ಮತ್ತು ಬೆಕಾ ಕಣಿವೆಯಲ್ಲಿ ದಾಳಿಗಳು ಕೇಂದ್ರೀಕೃತವಾಗಿವೆ. ಇಲ್ಲಿಯವರೆಗೆ ಮೃತರ ಸಂಖ್ಯೆ ಸುಮಾರು 2006ಕ್ಕೆ ಏರಿಕೆ ಆಗಿದೆ ಎಂದು ವರದಿಯಾಗಿದೆ. ಇಸ್ರೇಲ್ ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ವಿರುದ್ಧ ಮಿಲಿಟರಿ ಕ್ರಮ ತೆಗೆದುಕೊಳ್ತಿರುವುದಾಗಿ ಪ್ರಧಾನಿ ನೆತನ್ಯಾಹು ಹೇಳಿದ್ದಾರೆ. ಲೆಬನಾನ್‌ನ ಸಾಮಾನ್ಯ ಜನರು ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಮನವಿಯನ್ನು ಗಂಭೀರವಾಗಿ ಪರಿಗಣಿಸುವಂತೆ ಕೇಳಿಕೊಂಡಿದ್ದಾರೆ. ಇಸ್ರೇಲ್‌ನ ಹೋರಾಟ ನಿಮ್ಮ ವಿರುದ್ಧ ಅಲ್ಲ, ಅದು ಹೆಜ್ಬೊಲ್ಲಾ ವಿರುದ್ಧ ಎಂದು ನೆತನ್ಯಾಹು ಲೆಬನಾನ್ ಜನರಿಗೆ ತಿಳಿಸಿದ್ದಾರೆ. ಇಸ್ರೇಲ್ ಗುರಿ ಲೆಬನಾನ್‌ನ ರಾಜಧಾನಿಯಾಗಿದೆ. ದಕ್ಷಿಣ ಲೆಬನಾನ್‌ನಿಂದ ಕನಿಷ್ಠ…
ಇನ್ನೇನೂ ಕೆಲವೇ ಕೆಲವು ದಿನಗಳಲ್ಲಿ ಬಿಗ್ ಬಾಸ್ ಸೀಸನ್ 11 ಆರಂಭವಾಗಲಿದೆ. ಈ ಬಗ್ಗೆ ಕಿಚ್ಚ ಸುದೀಪ್ ನಿನ್ನೆಯಷ್ಟೆ ಸುದ್ದಿಗೋಷ್ಠಿ ನಡೆಸಿ ಸಾಕಷ್ಟು ಮಾಹಿತಿ ನೀಡಿದ್ದಾರೆ. ಈ ಬಾರಿ ಬಿಗ್ಬಾಸ್ ಸ್ಪರ್ಧಿಗಳ ಆಯ್ಕೆ ಭಿನ್ನವಾಗಿರಲಿದೆ, ಕಳೆದ ಬಾರಿ ವೋಟಿಂಗ್ ಆಧಾರದಲ್ಲಿ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿತ್ತು. ಇಬ್ಬರು ಸ್ಪರ್ಧಿಗಳನ್ನು ವೇದಿಕೆ ಮೇಲಿಂದಲೇ ವಾಪಸ್ ಕಳಿಸಲಾಗಿತ್ತು. ಕಡಿಮೆ ಮತ ಪಡೆದ ಕೆಲವರನ್ನು ಹೋಲ್ಡ್ನಲ್ಲಿ ಇಡಲಾಗಿತ್ತು. ಈ ಬಾರಿ ವೋಟಿಂಗ್ ಇರಲಿದೆಯಾದರೂ ಕಳೆದ ಬಾರಿಗಿಂತಲೂ ಭಿನ್ನವಾಗಿರಲಿದೆ ಎನ್ನಲಾಗುತ್ತಿದೆ. ಇನ್ನು ಈ ಬಾರಿ ಯಾವ ಸೆಲೆಬ್ರಿಟಿಗಳು ಬಿಗ್ಬಾಸ್ ಮನೆಗೆ ಹೋಗಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ಈಗಾಗಲೇ ಕೆಲವು ಹೆಸರುಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿವೆ. ಅದರಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವುದು ನಟ ಸುನಿಲ್ ಹೆಸರು. ‘ಎಕ್ಸ್ಕ್ಯೂಸ್ ಮೀ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ ಸುನಿಲ್ ಈ ಬಾರಿ ಬಿಗ್ಬಾಸ್ ಮನೆಗೆ ಹೋಗಲಿದ್ದಾರೆ ಎಂಬ ಮಾತುಗಳು ಜೋರಾಗಿಯೇ ಕೇಳಿ ಬರುತ್ತಿದೆ. ನಟ ಸುನೀಲ್ ಸಾಕಷ್ಟು ಸಮಯದಿಂದ…
ಕಿರಣ್ ರಾವ್ ನಿರ್ದೇಶನದ, ಆಮಿರ್ ಖಾನ್ ನಿರ್ಮಾಣದ ಲಾಪತಾ ಲೇಡೀಸ್ ಸಿನಿಮಾ ಅಧಿಕೃತವಾಗಿ 2024ರ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಆಯ್ಕೆಯಾಗಿದೆ. ಈ ವರ್ಷ ಮಾರ್ಚ್ 1ರಂದು ತೆರೆಕಂಡ ಈ ಚಿತ್ರದಲ್ಲಿ ಸ್ಪರ್ಶ್ ಶ್ರೀವಾಸ್ತವ್, ನಿತಾಂಶಿ ಗೋಯಲ್, ಪ್ರತಿಭಾ ರಂಟಾ, ರವಿ ಕಿಶನ್ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಆಸ್ಕರ್ ಸ್ಪರ್ಧೆಗೆ ಆಯ್ಕೆ ಆಗಿರುವುದಕ್ಕೆ ‘ಲಾಪತಾ ಲೇಡೀಸ್’ ನಿರ್ದೇಶಕಿ ಕಿರಣ್ ರಾವ್ ಪ್ರತಿಕ್ರಿಯೆ ನೀಡಿದ್ದಾರೆ. ‘ನಮ್ಮ ಸಿನಿಮಾ ಆಸ್ಕರ್ ಸ್ಪರ್ಧೆಗೆ ಆಯ್ಕೆ ಆಗಿರುವುದು ಇಡೀ ತಂಡದ ಪರಿಶ್ರಮ ಮತ್ತು ಪ್ಯಾಷನ್ಗೆ ಸಾಕ್ಷಿಯಾಗಿದೆ. ಸಿನಿಮಾ ಎಂಬುದು ಯಾವಾಗಲೂ ಹೃದಯಗಳನ್ನು ಬೆಸೆಯುವ, ಅರ್ಥಪೂರ್ಣ ಸಂವಹನ ನಡೆಸುವ ಹಾಗೂ ಗಡಿಗಳನ್ನು ಮೀರುವ ಮಾಧ್ಯಮವಾಗಿದೆ. ಭಾರತೀಯರಿಗೆ ಇಷ್ಟ ಆದ ರೀತಿಯೇ ಜಗತ್ತಿನಾದ್ಯಂತ ಇರುವ ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟ ಆಗಲಿದೆ ಅಂತ ನಾನು ನಂಬಿದ್ದೇನೆ’ ಎಂದು ಕಿರಣ್ ರಾವ್ ಹೇಳಿದ್ದಾರೆ. ‘ಲಾಪತಾ ಲೇಡೀಸ್ ಸಿನಿಮಾ ಮೇಲೆ ನಂಬಿಕೆ ಇಟ್ಟ ಎಲ್ಲರಿಗೂ ಮತ್ತು ಆಯ್ಕೆ ಸಮಿತಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ.…
ವಿಶ್ವಸಂಸ್ಥೆಯ ಶೃಂಗಸಭೆಯಲ್ಲಿ ಭಾಗಿಯಾಗಲು ಅಮೆರಿಕಕ್ಕೆ ತೆರಳಿದ್ದ ಪ್ರಧಾನಿ ಮೋದಿ ನ್ಯೂಯಾರ್ಕ್‌ನಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನ ಭೇಟಿ ಮಾಡಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಇದು ಮೋದಿ-ಝಲೆನ್ಸ್ಕಿ ನಡುವಿನ 3ನೇ ಭೇಟಿಯಾಗಿದೆ. ಸದ್ಯ ಶೃಂಗ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಕೂಡ ಉಪಸ್ಥಿತರಿದ್ದು, ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಮಾರ್ಗಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಗುತ್ತಿದೆ. ಇದೇ ವೇಳೆ ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಆದಷ್ಟು ಬೇಗನೇ ಇತ್ಯರ್ಥಗೊಳಿಸಲು, ಪ್ರದೇಶದಲ್ಲಿ ಶಾಂತಿ ನೆಲೆಸಲು ಮತ್ತು ಸ್ಥಿರತೆ ಕಾಪಾಡಲು ಮಾಡುತ್ತಿರುವ ಭಾರತದ ಪ್ರಯತ್ನಗಳನ್ನು ಝಲೆನ್ಸ್ಕಿ ಶ್ಲಾಘಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿರುವ ಪ್ರಧಾನಿ ಮೋದಿ, ನ್ಯೂಯಾರ್ಕ್‌ನಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್‌ಸ್ಕಿ ಅವರನ್ನು ಭೇಟಿಯಾಗಿದ್ದೇನೆ. ಉಭಯ ದೇಶಗಳ ನಡುವಣ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಳೆದ ತಿಂಗಳ ಉಕ್ರೇನ್ ಭೇಟಿಯ ವೇಳೆ ನಡೆದ ಮಾತುಕತೆಯನ್ನು ಫಲಪ್ರದವಾಗಿ ಜಾರಿಗೊಳಿಸಲು ಬದ್ಧರಾಗಿದ್ದೇವೆ. ಉಕ್ರೇನ್‌ನಲ್ಲಿ ಸಂಘರ್ಷಕ್ಕೆ ಆದಷ್ಟು ಬೇಗನೇ ಪರಿಹಾರ ಕಂಡುಕೊಳ್ಳುವುದು ಮತ್ತು ಶಾಂತಿ ಹಾಗೂ ಸ್ಥಿರತೆಯ…
ಕೊನೆಗೂ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಬಿಗ್ ಬಾಸ್ ಸೀಸನ್ 11 ಆರಂಭವಾಗಲಿದೆ. ಇದೇ ಸೆ.28ರಂದು ಸಂಜೆ 6 ಗಂಟೆಗೆ ಗ್ರ್ಯಾಂಡ್ ಓಪನಿಂಗ್ ಇರಲಿದೆ. ಅಂದ ಹಾಗೆ ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮವನ್ನು ಸುದೀಪ್ ನಿರೂಪಣೆ ಮಾಡುತ್ತಾರಾ? ಇಲ್ವಾ? ಎಂಬ ಪ್ರಶ್ನೆ ಚರ್ಚೆಗೆ ಗ್ರಾಸವಾಗಿತ್ತು. ಆ ನಂತರ ಬಿಗ್ ಬಾಸ್ ಪ್ರೋಮೋ ಮೂಲಕ ಎಲ್ಲಾ ವದಂತಿಗಳಿಗೂ ಉತ್ತರ ಸಿಕ್ಕಿತ್ತು. ಆದರೆ ಅಸಲಿಗೆ ಏನಾಗಿತ್ತು ಎಂದು ಸುದೀಪ್ ತಿಳಿಸಿದ್ದಾರೆ. ಈ ಸೀಸನ್ ನಿರೂಪಣೆ ಮಾಡೋದು ಬೇಡ ಅಂತ ಯೋಚನೆ ಮಾಡಿದ್ದು ನಿಜ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಕಳೆದ 10 ವರ್ಷಗಳಿಂದ `ಬಿಗ್ ಬಾಸ್’ ಶೋ ನಿರೂಪಣೆ ಮಾಡುತ್ತಲೇ ಬಂದಿದ್ದೇನೆ. ಈ ಬಾರಿ ಬೇರೆಯವರು ನಿರೂಪಣೆ ಮಾಡಲಿ ಎಂದೇ ನಿರ್ಧರಿಸಿದ್ದೆ. ಹಾಗಂತ ವಾಹಿನಿಯ ಜೊತೆ ಒಡನಾಟ ಚೆನ್ನಾಗಿರಲಿಲ್ಲ ಅಂತ ಅಲ್ಲ. ತಂಡ ನನ್ನನ್ನು ತಂಬಾ ಚೆನ್ನಾಗಿ ನೋಡಿಕೊಂಡಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಪ್ರತಿ ಬಾರಿ ಬಿಗ್ ಬಾಸ್ ಶುರು ಆಗ್ತಿದ್ದಂತೆ ನನ್ನ ಲೈಫ್…