ಜೂ ಎನ್ಟಿಆರ್ ನಟನೆಯ ‘ದೇವರ’ಸಿನಿಮಾ ಬಿಡುಗಡೆಗೆ ಇನ್ನೆರಡು ದಿನ ಮಾತ್ರವೇ ಭಾಕಿ ಇದೆ. ದುಬಾರಿ ಬಜೆಟ್ ನಲ್ಲಿ ರೆಡಿಯಾಗಿರುವ ದೇವರ ಈ ಸಿನಿಮಾ ಆಂಧ್ರ, ತೆಲಂಗಾಣ ಮಾತ್ರವೇ ಅಲ್ಲದೆ ಕರ್ನಾಟಕ, ಕೇರಳ, ಉತ್ತರ ಭಾರತದ ರಾಜ್ಯಗಳು, ವಿದೇಶಗಳಲ್ಲಿಯೂ ಒಂದೇ ಬಾರಿಗೆ ತೆರೆಗೆ ಬರುತ್ತಿದೆ. ಆದರೆ ತೆಲಂಗಾಣ ಹಾಗೂ ಆಂಧ್ರದಿಂದ ಬರುವ ಕಲೆಕ್ಷನ್ ಮೇಲೆ ಸಿನಿಮಾ ತಂಡ ಹೆಚ್ಚು ಆಧಾರವಾಗಿದೆ. ಇದೇ ಕಾರಣಕ್ಕೆ ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳಲ್ಲಿ ‘ದೇವರ’ ಸಿನಿಮಾದ ಟಿಕೆಟ್ ದರ ಹೆಚ್ಚಳಕ್ಕೆ ಹಾಗೂ ಹೆಚ್ಚುವರಿ ಶೋ ಹಾಕಲು ಚಿತ್ರತಂಡ ಅನುಮತಿ ಪಡೆದುಕೊಂಡಿತ್ತು. ಆಂಧ್ರ ಸರ್ಕಾರ, ಹೆಚ್ಚುವರಿ ಶೋಗೆ ಅನುಮತಿ ನೀಡುವ ಜೊತೆಗೆ 14 ದಿನಗಳ ಕಾಲ ಟಿಕೆಟ್ ದರ ಹೆಚ್ಚಿಸಿಕೊಳ್ಳುವಂತೆ ಅನುಮತಿ ನೀಡಿತ್ತು. ಅದರ ಜೊತೆಗೆ ಸಿನಿಮಾ ಬಿಡುಗಡೆ ಆದ ದಿನ ಆರು ಶೋ ಮುಂದಿನ ಒಂಬತ್ತು ದಿನಗಳ ಕಾಲ ಐದು ಶೋಗೆ ಅನುಮತಿ ನೀಡಿತ್ತು. ಅದಾದ ಬಳಿಕ ಈ ಹಿಂದಿನ ದರಗಳಿಗೆ ಸಿನಿಮಾ ಟಿಕೆಟ್ ದರವನ್ನು ತಗ್ಗಿಸುವಂತೆ…
Author: Author AIN
ಅನಾರೋಗ್ಯದಿಂದ ಬಳಲುತ್ತಿದ್ದ ಅಮೆರಿಕ ಮೂಲಕ 64 ವರ್ಷದ ಮಹಿಳೆಯೊಬ್ಬರು ಆತ್ಮಹತ್ಯಾ ಯಂತ್ರವನ್ನು ಬಳಸಿಕೊಂಡು ಕೊನೆಯುಸಿರೆಳೆದಿದ್ದಾರೆ. ಈ ಯಂತ್ರವನ್ನು ಬಳಸಿ ಮೃತಪಟ್ಟ ಮೊದಲ ಮಹಿಳೆ ಈಕೆಯಾಗಿದ್ದು ಆತ್ಮಹತ್ಯೆಗೆ ಪ್ರಚೋಧನೆ ನೀಡಿದ ಆರೋಪದ ಮೇಲೆ ಹಲವರನ್ನು ಬಂಧಿಸಲಾಗಿದೆ. ದಿ ಲಾಸ್ಟ್ ರೆಸಾರ್ಟ್ ಆರ್ಗನೈಸೇಶನ್, ಅಸಿಸ್ಟೆಡ್ ಡೈಯಿಂಗ್ ಗ್ರೂಪ್, ಯುಎಸ್‌ನ 64 ವರ್ಷದ ಮಹಿಳೆಯೊಬ್ಬರು ಸೋಮವಾರ “ಸಾರ್ಕೊ ಸಾಧನವನ್ನು ಬಳಸಿಕೊಂಡು ಸಾವನ್ನಪ್ಪಿದ್ದಾರೆ” ಎಂದು ವರದಿಯಾಗಿದೆ. ಕ್ಯಾಪ್ಸುಲ್ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಕಾನೂನು ಮತ್ತು ನೈತಿಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ, ಅಲ್ಲಿ ಸಕ್ರಿಯ ದಯಾಮರಣವನ್ನು ನಿಷೇಧಿಸಲಾಗಿದೆ ಆದರೆ ಸಹಾಯದ ಮರಣವು ದಶಕಗಳಿಂದ ಕಾನೂನುಬದ್ಧವಾಗಿದೆ. 2019 ರಲ್ಲಿ ಮೊದಲು ಅನಾವರಣಗೊಂಡ ಸಾರ್ಕೊ ಕ್ಯಾಪ್ಸುಲ್, ಪೋರ್ಟಬಲ್, ಮಾನವ ಗಾತ್ರದ ಪಾಡ್ ಆಗಿದ್ದು, ಅದರೊಳಗಿನ ಆಮ್ಲಜನಕವನ್ನು ಸಾರಜನಕದಿಂದ ಬದಲಾಯಿಸುತ್ತದೆ, ಇದು ಹೈಪೋಕ್ಸಿಯಾದಿಂದ ಸಾವಿಗೆ ಕಾರಣವಾಗುತ್ತದೆ. ಇದು ಒಳಭಾಗದಲ್ಲಿರುವ ಗುಂಡಿಯಿಂದ ಸ್ವಯಂ-ಚಾಲಿತವಾಗಿದೆ, ವೈದ್ಯಕೀಯ ಮೇಲ್ವಿಚಾರಣೆಯಿಲ್ಲದೆ ಸಾವನ್ನು ಒದಗಿಸುತ್ತದೆ. “ಸಾರ್ಕೊ ಆತ್ಮಹತ್ಯಾ ಕ್ಯಾಪ್ಸುಲ್ ಎರಡು ವಿಷಯಗಳಲ್ಲಿ ಕಾನೂನುಬದ್ಧವಾಗಿ ಬದ್ಧವಾಗಿಲ್ಲ” ಎಂದು ಸ್ವಿಟ್ಜರ್ಲೆಂಡ್ನ ಆಂತರಿಕ ಸಚಿವ ಎಲಿಸಬೆತ್ ಬೌಮ್-ಷ್ನೇಯ್ಡರ್ ಸೋಮವಾರ…
ಮುಂದಿನ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಾಕಷ್ಟು ಕುತೂಹಲ ಮೂಡಿಸದೆ. ಕಮಲಾ ಹ್ಯಾರಿಸ್ ಹಾಗೂ ಡೋನಾಲ್ಡ್ ಟ್ರಂಪ್ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ಮಧ್ಯೆ ಅರಿಝೋನಾದಲ್ಲಿನ ಕಮಲಾ ಹ್ಯಾರಿಸ್ ಅವರ ಚುನಾವಣಾ ಪ್ರಚಾರ ಕಚೇರಿಯ ಮೇಲೆ ಗುಂಡಿನ ದಾಳಿ ನಡೆದಿದ್ದು, ದಾಳಿಯಲ್ಲಿ ಕಚೇರಿಗೆ ಹಾನಿಯಾಗಿದೆ. ಆದರೆ, ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಅರಿಝೋನಾ ರಾಜ್ಯಕ್ಕೆ ಇನ್ನು ಕೆಲವೇ ದಿನಗಳಲ್ಲಿ ಕಮಲಾ ಹ್ಯಾರಿಸ್ ಭೇಟಿ ನೀಡುವವರಿದ್ದರು. ಅದಕ್ಕೂ ಮುನ್ನವೇ ಈ ದಾಳಿ ನಡೆದಿದೆ. ಘಟನೆಯ ತನಿಖೆಯನ್ನು ಟೆಂಪೆ ಪೊಲೀಸರು ನಡೆಸುತ್ತಿದ್ದಾರೆ. ಗುಂಡಿನ ದಾಳಿ ಸಂದರ್ಭದಲ್ಲಿ ಡೆಮಾಕ್ರಟಿಕ್ ಪಕ್ಷದ ಕಚೇರಿಯಲ್ಲಿ ಯಾವುದೇ ಜೀವಹಾನಿ ಸಂಭವಿಸದೆ ಇರುವುದರಿಂದ ಪೊಲೀಸರು ಆಸ್ತಿಪಾಸ್ತಿ ನಷ್ಟ ಪ್ರಕರಣವನ್ನು ಮಾತ್ರ ದಾಖಲಿಸಿಕೊಂಡಿದ್ದಾರೆ. ಸೆಪ್ಟೆಂಬರ್ 16ರಂದೂ ಕೂಡಾ ಈ ಕಚೇರಿಯ ಮೇಲೆ ಪೆಲೆಟ್ ಅಥವಾ ಬಿಬಿ ಗನ್ ಮೂಲಕ ಹಲವು ಸುತ್ತಿನ ಗುಂಡಿನ ದಾಳಿ ನಡೆದಿತ್ತು ಎಂದು Arizona Republic ಸುದ್ದಿ ಸಂಸ್ಥೆ ವರದಿ ಮಾಡಿದೆ. ಗುಂಡಿನ ದಾಳಿಯಲ್ಲಿ ಡೆಮಾಕ್ರಟಿಕ್ ಪಕ್ಷದ ಬಾಗಿಲಿಗೆ…
ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯವು ಮತ್ತಷ್ಟು ಗಟ್ಟಿಯಾಗುತ್ತಿದೆ. ಜೋ ಬೈಡನ್ ಅವಧಿಯಲ್ಲಿ ಭಾರತದೊಂದಿಗಿನ ಸಂಬಂಧ ವೃದ್ಧಿಯಾಗಿರುವುದಕ್ಕೆ ಹೆಮ್ಮೆಯಿದೆ ಎಂದು ಶ್ವೇತಭವನ ತಿಳಿಸಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಅವಧಿಯಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಂವಹನ ಸಲಹೆಗಾರ ಜಾನ್ ಕಿರ್ಬಿ, ‘ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧ ಉತ್ತಮವಾಗಿದೆ’ ಎಂದರು. ‘ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಬೈಡನ್ ತುಂಬಾ ಪ್ರಯತ್ನ ಮಾಡಿದ್ದಾರೆ. ನಮ್ಮ ನಡುವಿನ ಸಂಬಂಧವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದೇವೆ. ರಕ್ಷಣಾ ಕ್ಷೇತ್ರದಲ್ಲಿನ ನಮ್ಮ ಸಂಬಂಧವು ಭಾರತದ ನಾಗರಿಕರನ್ನು ಅಷ್ಟೇ ಅಲ್ಲದೆ, ಇಂಡೋ-ಫೆಸಿಫಿಕ್ ಭಾಗದ ಜನರಿಗೂ ರಕ್ಷಣೆ ನೀಡಲಿದೆ’ ಎಂದು ತಿಳಿಸಿದ್ದಾರೆ. ‘ಇಂಡೋ-ಪ್ಯಾಸಿಫಿಕ್ ಸುರಕ್ಷತೆ ಬಗ್ಗೆ ಚರ್ಚೆ ನಡೆಸಿದ್ದಕ್ಕಾಗಿ ಮೋದಿ ಅವರನ್ನು ಬೈಡನ್ ಶ್ಲಾಘಿಸಿದ್ದಾರೆ. ವಿಶ್ವದ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರದ ನಾಯಕರಾಗಿರುವ ಅವರು ತಮ್ಮ ದೇಶದ ಸುತ್ತ-ಮುತ್ತಲಿನ ಸಮಸ್ಯೆಯನ್ನು…
ಅರಬ್ ಸಂಯುಕ್ತ ಸಂಸ್ಥಾನದಲ್ಲಿ (ಯುಎಇ) ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದು, 9 ಯೋಧರು ಗಾಯಗೊಂಡಿದ್ದಾರೆ. ಯುಎಇನ ಸರ್ಕಾರಿ ಸುದ್ದಿ ವಾಹಿನಿ ಡಬ್ಲ್ಯುಎಎಂ ಈ ಬಗ್ಗೆ ವರದಿ ಮಾಡಿದೆ. ಮಂಗಳವಾರ ರಾತ್ರಿ ನಡೆದ ಅಪಘಾತದಲ್ಲಿ ಕರ್ತವ್ಯನಿರತ ನಾಲ್ವರು ಯೋಧರು ಮೃತಪಟ್ಟಿರುವುದಾಗಿ ಸೇನೆಯು ಪ್ರಕಟಣೆಯಲ್ಲಿ ತಿಳಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಅಪಘಾತದ ಬಗ್ಗೆ ಸೇನೆಯು ತಕ್ಷಣಕ್ಕೆ ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ ಎಂದು ತಿಳಿಸಿದೆ. ಗಲ್ಫ್ ರಾಷ್ಟ್ರಗಳಲ್ಲಿ ಅತ್ಯಂತ ಬಲಶಾಲಿ ಸೇನೆಯನ್ನು ಹೊಂದಿರುವ ದೇಶಗಳ ಪೈಕಿ ಯುಎಇ ಒಂದಾಗಿದೆ.
‘ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಸಂಪೂರ್ಣವಾಗಿ ಕೊನೆಗೊಳಿಸಲು ನಾವು ಎರಡನೇ ಶಾಂತಿ ಶೃಂಗಸಭೆಯನ್ನು ಆಯೋಜಿಸಲು ಸಿದ್ಧರಿದ್ದೇವೆ. ಈ ಶಾಂತಿ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಎಂದು ಭಾರತ ಸೇರಿದಂತೆ ಇತರ ದೇಶಗಳಿಗೆ ಈಗಾಗಲೇ ಆಹ್ವಾನವನ್ನೂ ನೀಡಿದ್ದೇವೆ’ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ತಿಳಿಸಿದ್ದಾರೆ. ‘ರಷ್ಯಾ, ಯುದ್ಧವನ್ನು ನಿಲ್ಲಿಸಲು ಬಯಸಿದರೆ ಏನು ಮಾಡಬೇಕೆಂಬುದು ನಮಗೆಲ್ಲರಿಗೂ ತಿಳಿದಿದೆ. ಜಗತ್ತಿನಲ್ಲಿ ಹೊಸ ಬಣಗಳು, ಪ್ರಾದೇಶಿಕ ಗುಂಪುಗಳು ರಚನೆಯಾಗದೆ ಎಲ್ಲರೂ ಒಟ್ಟಾಗಿ ಸಾಗಬೇಕಿದೆ’ ಎಂದು ಉಕ್ರೇನ್ ಸಂಘರ್ಷದ ಕುರಿತಂತೆ ನಡೆದ ಭದ್ರತಾ ಮಂಡಳಿಯ ಸಭೆಯಲ್ಲಿ ಝೆಲೆನ್‌ಸ್ಕಿ ಹೇಳಿದ್ದಾರೆ. ‘ವಿಶ್ವಸಂಸ್ಥೆಯನ್ನು ಗೌರವಿಸುವ ಎಲ್ಲ ದೇಶಗಳನ್ನು ಈ ಶಾಂತಿ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತೆ ಕೋರುವೆ. ಈಗಾಗಲೇ ಭಾರತವನ್ನು ಆಹ್ವಾನಿಸಿದ್ದೇವೆ. ಬ್ರೆಜಿಲ್, ಚೀನಾವನ್ನು ಆಹ್ವಾನಿಸುತ್ತೇವೆ. ಆಫ್ರಿಕನ್ ರಾಷ್ಟ್ರಗಳು, ಲ್ಯಾಟಿನ್ ಅಮೆರಿಕ, ಮಧ್ಯ ಪ್ರಾಚ್ಯ, ಮಧ್ಯ ಏಷ್ಯಾ, ಯುರೋಪ್, ಪೆಸಿಫಿಕ್ ಪ್ರದೇಶ ಹಾಗೂ ಉತ್ತರ ಅಮೆರಿಕದೊಂದಿಗೆ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದಿದ್ದಾರೆ. ‘ಇದನ್ನು ಹೇಗೆ ಸಾಧಿಸಬೇಕು ಎಂಬುದು ನಮಗೆಲ್ಲರಿಗೂ…
ಇಟಾಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಜೊತೆ ಎಲಾನ್ ಮಸ್ಕ್ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಕಾರ್ಯಕ್ರಮವೊಂದರಲ್ಲಿ ಜಾರ್ಜಿಯಾ ಜೊತೆ ಮಸ್ಕ್ ಕಾಣಿಸಿಕೊಂಡಿದ್ದೆ ಇದಕ್ಕೆಲ್ಲಾ ಕಾರಣ. ಇದೀಗ ಈ ಬಗ್ಗೆ ಮಸ್ಕ್ ಪ್ರತಿಕ್ರಿಯಿಸಿದ್ದಾರೆ. ಎಲಾನ್ ಮಸ್ಕ್- ಇಟಾಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಡೇಟಿಂಗ್ ನಲ್ಲಿ ತೊಡಗಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ನ್ಯೂ ಯಾರ್ಕ್ ನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಈ ಮಸ್ಕ್ ಹಾಗೂ ಮೆಲೋನಿ ಒಟ್ಟಿಗೆ ಇದ್ದದ್ದು ಕ್ಯಾಮರಾಗಳ ಕಣ್ಣಿಗೆ ಬಿದ್ದಿದೆ. ಸಾಮಾಜಿಕ ಜಾಲಾತಾಣಗಳಲ್ಲಿ ಈ ಇಬ್ಬರು ಜೊತೆಗಿರುವ ಫೋಟೊಗಳಿಗೆ ತರಹೆವಾರಿ ಕಾಮೆಂಟ್ ಗಳು ಬರುತ್ತಿದ್ದು, ತಮ್ಮ ಪ್ರತಿಕ್ರಿಯೆ ಮೂಲಕ ಎಲಾನ್ ಮಸ್ಕ್ ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದಿದ್ದಾರೆ. ಒಂದೇ ಶಬ್ದದಲ್ಲಿ ಡೇಟಿಂಗ್ ಊಹಾಪೋಹಗಳಿಗೆ ಮಸ್ಕ್ ಸ್ಪಷ್ಟನೆ ನೀಡಿದ್ದು, ನಾವು ಡೇಟಿಂಗ್ ನಲ್ಲಿ ತೊಡಗಿಲ್ಲ ಎಂದಿದ್ದಾರೆ. ಜಾರ್ಜಿಯಾ ಮೆಲೋನಿಗೆ ಅಟ್ಲಾಂಟಿಕ್ ಕೌನ್ಸಿಲ್ ಗ್ಲೋಬಲ್ ಸಿಟಿಜನ್ ಪ್ರಶಸ್ತಿಯನ್ನು ನೀಡುತ್ತಾ, ಎಲೋನ್ ಮಸ್ಕ್ “ಬಾಹ್ಯ ಸೌಂದರ್ಯಕ್ಕಿಂತ, ಆಂತರ್ಯದಲ್ಲಿ ಹೆಚ್ಚು ಸುಂದರವಾಗಿರುವ” ಯಾರಿಗಾದರೂ…
ಆಂಧ್ರ ಡಿಸಿಎಂ ಆಗುವ ಮುಂಚಿನ ಪವನ್ ಕಲ್ಯಾಣ್ಗೂ ಆ ನಂತರದ ಪವನ್ ಕಲ್ಯಾಣ್ಗೂ ದೊಡ್ಡ ಅಂತರ ಕಾಣುತ್ತಿದೆ ಎಂದು ಕಳೆದ ಕೆಲ ದಿನಗಳಿಂದಲೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಅದರಲ್ಲೂ ತಿರುಪತಿ ಲಡ್ಡು ವಿವಾದ ಹೊರಬಿದ್ದ ಬಳಿಕವಂತೂ ಪವನ್ ಕಲ್ಯಾಣ್ ಹಿಂದೂ ಧರ್ಮದ ವಿಷಯವಾಗಿ ಆರ್ಎಸ್ಎಸ್ ಕಾರ್ಯಕರ್ತರ ರೀತಿಯೇ ವರ್ತಿಸುತ್ತಿದ್ದಾರೆ. ಮೊದಲೆಲ್ಲ ಜಾತ್ಯಾತೀತತೆ, ಮಾರ್ಕ್ಸ್ ವಾದ, ಕಾರ್ಮಿಕ ಕ್ರಾಂತಿ ಮುಂತಾದ ವಿಷಯಗಳನ್ನೇ ಭಾಷಣಗಳಲ್ಲಿ ಪ್ರತಿಪಾದಿಸುತ್ತಿದ್ದ ಪವನ್ ಕಲ್ಯಾಣ್ ಡಿಸಿಎಂ ಆದ ಬಳಿಕ ಹಠಾತ್ತನೆ ಹಿಂದೂ ಕಾರ್ಯಕರ್ತನಾಗಿ ಬದಲಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ಬೆನ್ನಲ್ಲೆ ಪವನ್ ಕಲ್ಯಾಣ್ ಈ ಹಿಂದೆ ಕ್ರಿಶ್ಚಿಯನ್ ಸಮುದಾಯದ ಸಭೆಯೊಂದರಲ್ಲಿ ಕ್ರಿಶ್ಚಿಯನ್ ಧರ್ಮದ ಬಗ್ಗೆ ಆಡಿದ್ದ ಮಾತುಗಳ ವಿಡಿಯೋ ಒಂದು ವೈರಲ್ ಆಗಿದ್ದು, ಹಿಂದೂ ಧರ್ಮದ ಬಗ್ಗೆ ಮಾತನಾಡಲು ಪವನ್ ಕಲ್ಯಾಣ್ಗೆ ಅಧಿಕಾರವೇ ಇಲ್ಲವೆಂಬ ಒಕ್ಕಣೆಯೊಂದಿಗೆ ಆ ವಿಡಿಯೋ ವೈರಲ್ ಆಗುತ್ತಿದೆ. ತಿರುಪತಿ ಲಡ್ಡು ವಿವಾದ ಶುರುವಾದ ಬಳಿಕ ಸಾಕಷ್ಟು ನಟರು ಪ್ರತಿಕ್ರಿಯಿಸಿದ್ದರು. ಈ ವೇಳೆ ನಟ…
ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಕಿವಿಗಳಿಗೆ ಇಯರ್ ಬಡ್ಸ್ ಗಳನ್ನ ಹಾಕಿಕೊಂಡಿರುತ್ತಾರೆ. ವೈರ್ ಇಯರ್ ಫೋನ್ ಬಳಿಕ ಬ್ಲೂಟೂತ್ ನೆಕ್ ಬ್ಯಾಂಡ್ ಮಾರುಕಟ್ಟೆಗೆ ಬಂದಿದ್ದು ಇವುಗಳನ್ನು ಧರಿಸಲು ಸುಲಭವಾದ ಕಾರಣ ಹೆಚ್ಚಿನವರು ಇವುಗಳ ಮೊರೆ ಹೋಗ್ತಿದ್ದಾರೆ. ಆದರೆ ಇದರಿಂದ ಕಿವಿಗಳಿಗೆ ಹಾಕಿಯೇ ಹೆಚ್ಚು. ಅಂತೆಯೇ ಯುವತಿಯೊಬ್ಬಳು ಇಯರ್ ಬಡ್ನಲ್ಲಿ ಹಾಡು ಕೇಳುತ್ತಿರುವಾಗಲೇ ಕಿವಿಯಲ್ಲಿಯೇ ಸ್ಫೋಟಗೊಂಡ ಘಟನೆ ನಡೆದಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಬಡ್ FE ಇದ್ದಕ್ಕಿದ್ದಂತೆಯೇ ಸ್ಫೋಟಗೊಂಡಿದೆ. ಟರ್ಕಿ ಮೂಲದ ವ್ಯಕ್ತಿ ಈ ಘಟನೆಯನ್ನು ಹಂಚಿಕೊಂಡಿದ್ದು, ಸ್ಫೋಟದಿಂದಾಗಿ ಯುವತಿ ಸಂಪೂರ್ಣವಾಗಿ ಕೇಳುವ ಶಕ್ತಿಯನ್ನೇ ಕಳೆದುಕೊಂಡಿದ್ದಾಳೆ. ಯುವತಿ ಗ್ಯಾಲಕ್ಸಿ ಎಸ್23 ಅಲ್ಟ್ರಾ ಸ್ಮಾರ್ಟ್ಫೋನ್ನೊಂದಿಗೆ ಬಳಸಲು ಹೊಸ ಸ್ಯಾಮ್ಸಂಗ್ ಗ್ಯಾಲಕ್ಸಿ ಬಡ್ಸ್ FE ಖರೀದಿಸುತ್ತಾಳೆ. ಇಯರ್ ಬಡ್ 36%ಚಾರ್ಜ್ನಲ್ಲಿತ್ತು. ಅದನ್ನು ಕಂಡು ಸ್ನೇಹಿತೆ ಬಳಿಯಿಂದ ಚಾರ್ಜ್ ಮಾಡದೆ ಇರುವ ಇಯರ್ಬಡ್ ತೆಗೆದುಕೊಳ್ಳುತ್ತಾಳೆ ಬಳಿಕ ಬಳಕೆ ಮಾಡುತ್ತಾಳೆ. ದುರಾದೃಷ್ಟಕರ ಸಂಗತಿ ಎಂದರೆ ಯುವತಿ ಸ್ಯಾಮ್ಸಂಗ್ ಗ್ಯಾಲಕ್ಸಿ ಬಡ್ಸ್ FE ಇಯರ್ ಬಡ್ಸ್ ಕಿವಿಯಲ್ಲಿ ಇರಿಸಿದ್ದಾಗ ಸ್ಫೋಟಗೊಂಡಿದೆ. ಇದರಿಂದ…
ರೇಣುಕಾಸ್ವಾಮಿ ಪ್ರಕರಣದ ಮೂವರು ಆರೋಪಿಗಳಿಗೆ ಕೋರ್ಟ್ ಜಾಮೀನು ನೀಡಿದೆ. ಪ್ರಕರಣದ ಎ15 ಆರೋಪಿ ಕಾರ್ತಿಕ್, ಎ16 ಕೇಶವಮೂರ್ತಿ ಹಾಗೂ ಎ17 ನಿಖಿಲ್ ನಾಳೆ ತುಮಕೂರು ಕಾರಾಗೃಹದಿಂದ ಬಿಡುಗಡೆ ಆಗುವ ಸಾಧ್ಯತೆ ಇದೆ. ರೇಣುಕಾಸ್ವಾಮಿ ಕೇಸ್ನಲ್ಲಿ ಆರೋಪಿಗಳಾದ ಕೇಶವಮೂರ್ತಿ, ಕಾರ್ತಿಕ್, ಹಾಗೂ ನಿಖಿಲ್ ಈ ಮೂವರಿಗೂ ಹೈಕೋರ್ಟ್ ಜಾಮೀನು ನೀಡಿತ್ತು. ಆರೋಪಿಗಳಿಗೆ ಸೆಪ್ಟೆಂಬರ್ 23 ರಂದು ಜಾಮೀನು ನೀಡಿದ್ದರು ಜೈಲಿನಿಂದ ಇನ್ನು ಬಿಡುಗಡೆ ಆಗಿರಲಿಲ್ಲ. ಇದಕ್ಕೆ ಕಾರಣ ನ್ಯಾಯಾಲಯದ ಆದೇಶ ಪ್ರತಿಯು ತುಮಕೂರು ಕಾರಾಗೃಹದ ಜೈಲು ಅಧಿಕಾರಿಗಳನ್ನ ತಲುಪಿರಲಿಲ್ಲ. ಹೀಗಾಗಿ ಮೂವರು ಇನ್ನು ಜೈಲಿನಲ್ಲೇ ಉಳಿದುಕೊಂಡಿದ್ದಾರೆ. ಮೂವರು ಆರೋಪಿಗಳು ಇಂದು ಜೈಲಿನಿಂದ ಬಿಡುಗಡೆ ಆಗುವುದು ಬಹುತೇಕ ಅನುಮಾನವಾಗಿದೆ. ಹೀಗಾಗಿ ಎಲ್ಲ ಪ್ರಕ್ರಿಯೆ ಮುಗಿಸಿ ಬಿಡುಗಡೆ ಆಗಬೇಕಿದೆ. ಸದ್ಯ 17 ಆರೋಪಿಗಳ ಪೈಕಿ ಮೂವರಿಗೆ ಮಾತ್ರ ಜಾಮೀನು ನೀಡಲಾಗಿದೆ. ಎ16 ಆರೋಪಿ ಕೇಶವಮೂರ್ತಿಗೆ ಹೈಕೋರ್ಟ್ನಿಂದ ಬೇಲ್ ಸಿಕ್ಕರೇ, ಎ15 ಆರೋಪಿ ಕಾರ್ತಿಕ್ ಹಾಗೂ ಎ17 ಆರೋಪಿ ನಿಖಿಲ್ಗೆ 57ನೇ ಸಿಸಿಹೆಚ್ ನ್ಯಾಯಾಲಯ ಜಾಮೀನು ಮಂಜೂರು…