ಸಾಮಾಜಿಕ ಮಾಧ್ಯಮದಲ್ಲಿ ಸರಕಾರವನ್ನು ಟೀಕಿಸಿದ ನಿವೃತ್ತ ಶಿಕ್ಷಕನಿಗೆ ಸೌದಿ ಅರೆಬಿಯಾದ ನ್ಯಾಯಾಲಯ 30 ವರ್ಷ ಜೈಲುಶಿಕ್ಷೆ ವಿಧಿಸಿದೆ. ಆರೋಪಿ ಮುಹಮ್ಮದ್ ಅಲ್-ಘಮ್ಡಿಯನ್ನು 2022ರ ಜೂನ್‍ನಲ್ಲಿ ಬಂಧಿಸಲಾಗಿದ್ದು ಸೌದಿ ನಾಯಕತ್ವದ ವಿರುದ್ಧ ಪಿತೂರಿ, ಸರಕಾರಿ ಸಂಸ್ಥೆಗಳನ್ನು ದುರ್ಬಲಗೊಳಿಸುವುದು ಮತ್ತು ಭಯೋತ್ಪಾದಕ ಸಿದ್ಧಾಂತಕ್ಕೆ ಬೆಂಬಲ ಇತ್ಯಾದಿ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು. 2023ರ ಜುಲೈಯಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದು ಶಿಕ್ಷೆಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. 2023ರ ಸೆಪ್ಟಂಬರ್‍ನಲ್ಲಿ ಮಾಧ್ಯಮದವರ ಜತೆ ಮಾತನಾಡಿದ್ದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್, ನ್ಯಾಯಾಲಯ ಶಿಕ್ಷೆಯನ್ನು ಬದಲಾಯಿಸುವ ನಿರೀಕ್ಷೆಯಿದೆ ಎಂದಿದ್ದರು. ಬಳಿಕ ಆರೋಪಿ ಮರಣದಂಡನೆ ಶಿಕ್ಷೆಯ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಆಗಸ್ಟ್‍ನಲ್ಲಿ ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸಿ 30 ವರ್ಷದ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ ಎಂದು ಆರೋಪಿಯ ಸಹೋದರನನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
Author: Author AIN
ಥಾಯ್ಲೆಂಡ್‌ನಲ್ಲಿ ವಿವಾಹ ಸಮಾನತೆಯ ಮಸೂದೆಗೆ ಅಂಗೀಕಾರ ನೀಡಲಾಗಿದೆ. ಈ ಮೂಲಕ ಸಲಿಂಗ ವಿವಾಹ ಕಾನೂನುಬದ್ಧಗೊಂಡಿದೆ. ಇಲ್ಲಿನ ದೊರೆ ಮಹಾ ವಾಜಿರಾಲೊಂಗ್‌ಕೊರ್ನ್ ಅನುಮೋದನೆ ಬಳಿಕ ಈ ಕಾನೂನನ್ನು ರಾಯಲ್ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದ್ದು, ಮುಂದಿನ 120 ದಿನಗಳಲ್ಲಿ ಇದು ಜಾರಿಗೆ ಬರಲಿದೆ. ಮುಂದಿನ ಜನವರಿಯಿಂದ ಸಲಿಂಗ ದಂಪತಿ ತಮ್ಮ ವಿವಾಹ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಸಿಎಂ ಸಿದ್ದರಾಮಯ್ಯ ಬಹಳ ಕ್ಲೀನ್ ನಾಯಕ ಅಂದುಕೊಂಡಿದ್ದೆ. 40 ವರ್ಷಗಳ ರಾಜಕಾರಣದಲ್ಲಿ ಒಂದೇ ಒಂದು ಕಪ್ಪು ಚುಕ್ಕಿ ಇರಲಿಲ್ಲ. ಈಗ ಇಡೀ ಬಟ್ಟೆ ಕಪ್ಪು ಇಂಕ್‍ನಲ್ಲಿ ತುಂಬಿ ಹೋಗಿದೆ. ದೊಡ್ಡ ಮನಸು ಮಾಡಿ ರಾಜಾರೋಷವಾಗಿ ರಾಜೀನಾಮೆ ಕೊಡಿ ಎಂದು ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಗ್ಗೇಶ್, ಸಿದ್ದರಾಮಯ್ಯ ಮಾಡಿದ್ದು ತಪ್ಪು ಎಂದು ನ್ಯಾಯಾಲಯ ಕೂಡ ಹೇಳಿದೆ. ಆದರೂ ಸಿದ್ದರಾಮಯ್ಯ ಸಮರ್ಥಿಸಿಕೊಳ್ಳುತ್ತಿರುವುದು ಸರಿಯಲ್ಲ. ಮುಡಾ ಹಗರಣ ಮೂಲಕ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕಕ್ಕೆ ಸಿದ್ದರಾಮಯ್ಯ ಘನವಾದ ಹೆಸರು ತಂದುಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ತಾವು ಹಿಡಿದಿದ್ದ ಸಂವಿಧಾನಕ್ಕೆ ಎಷ್ಟು ಪುಟ ಇದೆ ಎಂದು ಹೇಳಲು ಆಗಲಿಲ್ಲ. ಅಂತಹವರನ್ನು ಪ್ರಧಾನಿ ಮಾಡಲು ಹೊರಟಿದ್ದಾರೆ. ಅಂತಹ ನಾಯಕನ ಕೆಳಗೆ ಇರುವ ಸಿದ್ದರಾಮಯ್ಯ ಘನವಾದ ಕೆಲಸ ಮಾಡಿದ್ದಾರೆ. ರಾಜ್ಯದ ಮಾನ ಮರ್ಯಾದೆ ಈಗಾಗಲೆ ಹರಾಜಾಗಿದೆ. ರಾಜೀನಾಮೆ ಕೊಡಿ, ನಿರ್ದೋಷಿಯಾಗಿ ಹೊರಗೆ ಬನ್ನಿ ಎಂದು ಆಗ್ರಹಿಸಿದ್ದಾರೆ.
ಕನ್ನಡ, ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುವ ಖ್ಯಾತ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ನಿಧನರಾಗಿ ನಾಲ್ಕು ವರ್ಷ ಕಳೆದಿದೆ. ಇದೀಗ ಎಸ್ ಪಿಬಿ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ವಿಶೇಷ ಗೌರವ ನೀಡಿದ್ದಾರೆ. ಎಸ್ ಪಿಬಿ ಅವರ ನಾಲ್ಕನೇ ಪುಣ್ಯತಿಥಿಯಂದು ಚೆನ್ನೈನ ರಸ್ತೆ ಒಂದಕ್ಕೆ ಎಸ್ಪಿಬಿ ಅವರ ಹೆಸರನ್ನು ಇಟ್ಟಿದ್ದಾರೆ. ನಾಲ್ಕನೇ ಪುಣ್ಯತಿಥಿ ಸಂದರ್ಭದಲ್ಲಿ ಈ ಘೋಷಣೆ ಮಾಡಿದ್ದಾರೆ. ಐದು ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸುರವ ಎಸ್ ಪಿಬಿ ಅವರು 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. 16 ಭಾಷೆಗಳ ಹಾಡಿಗೆ ಅವರು ಧ್ವನಿ ಆಗಿದ್ದಾರೆ. ಅವರ ಧ್ವನಿಗೆ ಮಾರು ಹೋಗದವರೇ ಇಲ್ಲ. ಒಂದೇ ದಿನ ಹಲವು ಹಾಡುಗಳನ್ನು ರೆಕಾರ್ಡ್ ಮಾಡಿ ದಾಖಲೆ ಬರೆದಿದ್ದಾರೆ. ಸೆಪ್ಟೆಂಬರ್ 25ರಂದು ಅವರು ಮೃತಪಟ್ಟು ನಾಲ್ಕು ವರ್ಷ ಕಳೆದಿದೆ. ಹೀಗಾಗಿ ಈ ಘೋಷಣೆ ಮಾಡಲಾಗಿದೆ. ‘ಹಲವು ಭಾಷೆಗಳಲ್ಲಿ ಎಸ್ಪಿಬಿ ಅವರು 40 ಸಾವಿರ ಹಾಡುಗಳನ್ನು ಹಾಡಿದ್ದಾರೆ. ಅರ್ಧ ಶತಮಾನಗಳ…
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಜೇನ ಧನಿಯೋಳೆ ಮೀನಾ ಕಣ್ಣೋಳೆ ಹಾಡಿಗೆ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಟಿ ಪ್ರಿಯಾಂಕ ಉಪೇಂದ್ರ ಡ್ಯಾನ್ಸ್ ಮಾಡಿದ್ದಾರೆ. ಪ್ರಿಯಾಂಕ ಅವರಿಗೆ ಗಣೇಶ್ ಸ್ಟೆಪ್ ಹೇಳಿಕೊಟ್ಟಿದ್ದು ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಮನೆಯಲ್ಲಿ ಕಳೆದ ಮೂರು ನಾಲ್ಕು ದಿನಗಳ ಹಿಂದೆ ನಟಿ ಹರ್ಷಿಕ ಪೂಣಚ್ಚ ಅವರ ಬೇಬಿ ಶವರ್ ಪಾರ್ಟಿ ಆಯೋಜಿಸಲಾಗಿತ್ತು. ಇದನ್ನು ಸ್ವತಃ ಗಣೇಶ್ ಮತ್ತು ಶಿಲ್ಪಾ ಗಣೇಶ್ ಆಯೋಜನೆ ಮಾಡಿದ್ದರು. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ನ ಹಲವು ನಟಿಯರು ಭಾಗಿಯಾಗಿದ್ದರು. ಎಲ್ಲರಿಗೂ ಗೊತ್ತಿರೋ ಹಾಗೆ ಕೃಷ್ಣಂ ಪ್ರಣಯ ಸಖಿ ಚಿತ್ರದ ದ್ವಾಪರ ಹಾಡು ಸೂಪರ್ ಹಿಟ್ ಆಗಿದೆ. ಅಷ್ಟೇ ವೈರಲ್ ಕೂಡ ಆಗಿದೆ. ಇದೇ ಹಾಡನ್ನ ಈಗಲೂ ಅನೇಕರು ರೀಲ್ಸ್ ಮಾಡುತ್ತಾರೆ. ಅಷ್ಟೇ ಎಂಜಾಯ್ ಕೂಡ ಮಾಡುತ್ತಾರೆ. ಹಾಗೆ ಇದೀಗ ಇದೇ ಹಾಡಿಗೆ ಗೋಲ್ಡನ್ ಸ್ಟಾರ್ ಗಣೇಶ್…
ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಇತ್ತೀಚೆಗೆ ಗಿನ್ನೆಸ್ ಪುಸ್ತಕದಲ್ಲಿ ಸೇರಿಕೊಂಡಿದ್ದಾರೆ. ಚಿರಂಜೀವಿ ಅವರನ್ನು ಭಾರತೀಯ ಚಿತ್ರರಂಗದ ಅತ್ಯಂತ ಕ್ರಿಯಾತ್ಮಕ ಚಲನಚಿತ್ರ ತಾರೆ ಎಂಬ ಬಿರುದಿನೊಂದಿಗೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಗೌರವಿಸಿದೆ. ಅಣ್ಣನಿಗೆ ಸಿಕ್ಕ ಈ ಗೌರವದ ಬಗ್ಗೆ ಸಹೋದರ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸಂತೋಷ ವ್ಯಕ್ತಪಡಿಸಿದ್ದಾರೆ. ದಾಖಲೆ ಎಂಬುದು ಒಬ್ಬರ ಪ್ರಯಾಣದ ಸಾಕ್ಷಿಯಾಗಿದೆ. ಅವರ ಏನನ್ನು ಸಾಧಿಸಿದ್ದಾರೆ ಎಂಬುದಕ್ಕೆ ಗುರುತಾಗಿದೆ ಎಂದು ತಿಳಿಸಿದ್ದು, ಈ ಸಾಧನೆಗೆ ಸಹೋದರನನ್ನು ನಾನು ಅಭಿನಂದಿಸಿದ್ದೇನೆ ಎಂದು ತಿಳಿಸಿದ್ದಾರೆ. ಮಂಗಳಗಿರಿಯ ಜನಸೇನಾ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಪವನ್ ಕಲ್ಯಾಣ್ ಅವರು ತಮ್ಮ ನಿವಾಸದಲ್ಲಿ ದೊಡ್ಡ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಇದ್ದಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ತಮ್ಮ ಅಣ್ಣನ ಸಾಧನೆ, ಸಮಾಜಕ್ಕೆ ಏನಾದರೂ ಕೊಡುಗೆ ನೀಡಲು ಬಯಸುವ ಅನೇಕರಿಗೆ ಸ್ಫೂರ್ತಿ ನೀಡುತ್ತದೆ ಹಾಗೂ ಯುವಕರಿಗೆ ಸ್ಫೂರ್ತಿದಾಯಕವಾಗಿದೆ ಎಂದಿದ್ದಾರೆ. ಅವರಿಗೆ ನೀಡಿದ ಪ್ರಶಸ್ತಿಯು ಹೊಸ ಪೀಳಿಗೆಗೆ ಸ್ಫೂರ್ತಿ…
ತೆಲುಗು ಚಿತ್ರರಂಗದ ಹಿರಿಯ ನಟ ಮೋಹನ್ ಬಾಬು ಮನೆಯಲ್ಲಿ ಕಳ್ಳತನವಾಗಿದೆ. ಮನೆಯಲ್ಲಿ ಕೆಲಸ ಮಾಡುವವರೇ ಕಳ್ಳತನ ಮಾಡಿದ್ದಾರೆ ಎನ್ನಲಾಗಿದ್ದು, ಲಕ್ಷ ಲಕ್ಷ ಹಣ ದೋಚಿ ಎಸ್ಕೇಪ್ ಆಗಿದ್ದಾರೆ. ಹೈದರಾಬಾದ್‌ನ ಉಪನಗರವಾದ ಜಾಲ್ ಪಲ್ಲಿಯಲ್ಲಿರುವ ಮೋಹನ್ ಬಾಬು ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ನಟನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನಾಯಕ್ ಎಂಬುವರು ಹಣ ಕದ್ದಿದ್ದಾರೆ ಎನ್ನಲಾಗ್ತಿದೆ. 10 ಲಕ್ಷ ರೂಪಾಯಿ ಕದ್ದು ಕದೀಮರು ಎಸ್ಕೇಪ್ ಆಗಿದ್ದಾರೆ. ಕಳ್ಳತನವಾಗಿರುವ ಬಗ್ಗೆ ಮೋಹನ್ ಬಾಬು ಪೊಲೀಸರಿಗೆ ದೂರು ನೀಡಿದ್ದಾರೆ. ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ನಟ ಮೋಹನ್ ಬಾಬು ಸೆಪ್ಟೆಂಬರ್ 25 ರಂದು ಸಿಪಿ ರಾಚಕೊಂಡ ಅವರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತಕ್ಷಣ ತನಿಖೆ ನಡೆಸಿದ್ದು ಬಳಿಕ ತಿರುಪತಿಯಲ್ಲಿ ತಲೆಮರೆಸಿಕೊಂಡಿದ್ದ ಮನೆ ಕೆಲಸ ಮಾಡ್ತಿದ್ದ ನಾಯಕ್ ರಾಚಕೊಂಡನನ್ನು ಬಂಧಿಸಿದ್ದಾರೆ. ತಿರುಪತಿಯಿಂದ ಆತನನ್ನು ಹೈದರಾಬಾದ್‌ಗೆ ಕರೆದುಕೊಂಡು ಬರಲಾಗಿದೆ. ಮೋಹನ್ ಬಾಬು ಸದ್ಯ ಕಣ್ಣಪ್ಪ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಕೂಡ ಮೋಹನ್ ಬಾಬು ನಿರ್ಮಾಣವಾಗುತ್ತಿದೆ. ಈ…
ತಮಿಳು ಚಿತ್ರರಂಗದ ಖ್ಯಾತ ಜಯಂ ರವಿ ಜೀವನ ಬಿದಿಗೆ ಬಿದ್ದಿದೆ. ಕೆಲವು ದಿನಗಳ ಹಿಂದಷ್ಟೆ ಜಯಂ ರವಿ ಪತ್ನಿ ಆರತಿಯಿದ ದೂರಾಗುತ್ತಿರುವುದಾಗಿ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದರು. ಆದರೆ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಜಯಂ ರವಿ ಪತ್ನಿ ಆರತಿ, ನನ್ನ ಒಪ್ಪಿಗೆ ಇಲ್ಲದೆ ಜಯಂ ರವಿ ವಿಚ್ಛೇದನ ಪ್ರಕಟಿಸಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಅದಾದ ಬಳಿಕ ಜಯಂ ರವಿ ಹಾಗೂ ಆರತಿ ನಡುವೆ ಕಾನೂನು ಹೋರಾಟ ಶುರುವಾಗಿದೆ. ಜಯಂ ರವಿಯ ಇನ್ಸ್ಟಾಗ್ರಾಂ ಖಾತೆಯನ್ನು ಆರತಿ ‘ಹೈಜಾಕ್’ ಮಾಡಿದ್ದರು. ಈ ವಿಷಯವನ್ನು ಹೇಳಿಕೊಂಡಿದ್ದ ಜಯಂ ರವಿ ಬಳಿಕ ತಮ್ಮ ಇನ್ಸ್ಟಾಗ್ರಾಂ ಖಾತೆಯನ್ನು ತಮ್ಮ ಸುಪರ್ಧಿಗೆ ಪಡೆದು ಮಾಜಿ ಪತ್ನಿಯ ಚಿತ್ರಗಳನ್ನು ಡಿಲೀಟ್ ಮಾಡಿದರು. ಆ ಬಳಿಕ ನೀಡಿದ್ದ ಹೇಳಿಕೆಯಲ್ಲಿ ತಮ್ಮ ಇಬ್ಬರು ಮಕ್ಕಳನ್ನು ತಮ್ಮ ವಶಕ್ಕೆ ಪಡೆಯಲು ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದರು. ಎಷ್ಟೇ ವರ್ಷಗಳಾದರೂ ಸಹ ನಾನು ಮಕ್ಕಳಿಗಾಗಿ ಹೋರಾಟ ಮಾಡುತ್ತೇನೆ ಎಂದಿದ್ದರು. ಇದೀಗ ಜಯಂ ರವಿ ತಮ್ಮ ಮಾಜಿ ಪತ್ನಿ…
ಕಿರಣ್ ರಾವ್ ನಿರ್ದೇಶನದ ‘ಲಾಪತಾ ಲೇಡಿಸ್’ ಸಿನಿಮಾ ಆಸ್ಕರ್ ಗೆ ಎಂಟ್ರಿಕೊಟ್ಟಿದೆ. ಈ ಬೆನ್ನಲ್ಲೇ ಬಾಲಿವುಡ್ ನಟ ರಣ್‌ದೀಪ್ ಹೂಡಾ ನಟಿಸಿ, ನಿರ್ದೇಶಿಸಿರುವ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಚಿತ್ರವು ಅಧಿಕೃತವಾಗಿ 2025ರ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ‘ಸ್ವಾತಂತ್ರ್ಯ ವೀರ್ ಸಾವರ್ಕರ್’ಚಿತ್ರವು ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಅವರ ಜೀವನಗಾಥೆಯನ್ನು ಹೊಂದಿದೆ. ಈ ಸಿನಿಮಾದಲ್ಲಿ ರಣ್‌ದೀಪ್ ಹೂಡಾ ಜೊತೆ ಬಾಲಿವುಡ್ ನಟಿ ಅಂಕಿತಾ ಲೋಖಂಡೆ ನಟಿಸಿದ್ದರು. ಈ ಚಿತ್ರ ಕಳೆದ ವರ್ಷ 2024ರಲ್ಲಿ ತೆರೆಕಂಡಿತ್ತು. ಆಸ್ಕರ್‌ಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರು ಚಿತ್ರದ ನಿರ್ಮಾಪಕ ಸಂದೀಪ್ ಈ ಖುಷಿಯ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಂತಸದ ಜೊತೆ ಹೆಮ್ಮೆ ಹಾಗೂ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಗೌರವ ಹಾಗೂ ವಿನಮ್ರತೆ, ನಮ್ಮ ಸಿನಿಮಾ ‘ಸ್ವಾತಂತ್ರ‍್ಯ ವೀರ್ ಸಾವರ್ಕರ್’ ಅಧಿಕೃತವಾಗಿ ಆಸ್ಕರ್‌ಗೆ ಆಯ್ಕೆಯಾಗಿದೆ. ಈ ಚಿತ್ರವನ್ನು ಗುರುತಿಸಿದ ‘Film Federation Of India’ ತಂಡಕ್ಕೆ ಧನ್ಯವಾದಗಳು. ನಮ್ಮನ್ನು ಬೆಂಬಲಿಸಿದವರಿಗೂ ಧನ್ಯವಾದಗಳು ಎಂದಿದ್ದಾರೆ.
ಬಿಗ್ ಬಾಸ್ ಗೆ ಹೋಗಿ ಬಂದ ಬಳಿಕ ಸಾಕಷ್ಟು ಜನರ ಜನಪ್ರಿಯತೆ ಕೂಡ ಹೆಚ್ಚಾಗಿದೆ. ಅದರಂತೆ ನಿರೂಪಕಿ ಚೈತ್ರಾ ವಾಸುದೇವನ್ ಕೂಡ ನಿರೂಪಣೆಯಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ನಿರೂಪಕಿ ಜಿಮ್ ನಲ್ಲಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ನಲ್ಲಿ ಆ್ಯಕ್ಟೀವ್ ಆಗಿರುವ ಚೈತ್ರಾ ವಾಸುದೇವರನ್ ಅವರು ಸಾಕಷ್ಟು ಹಿಂಬಾಲಕರನ್ನು ಪಡೆದಿದ್ದಾರೆ. ಅವರ ಹೊಸ ಫೋಟೋಗಳು ಗಮನ ಸೆಳೆದಿವೆ. ನಿತ್ಯ ಜಿಮ್ ನಲ್ಲಿ ಬೆವರಿಳಿಸುವ ಚೈತ್ರಾ ವಾಸುದೇವನ್ ಅಲ್ಲಿನ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜಿಮ್ ನಲ್ಲಿ ವರ್ಕೌಟ್ ಮಾಡುವ ವೇಳೆ ತೆಗೆದ ಫೋಟೋಗಳನ್ನು ಸಾಮಾಜಿಕ ಜಾಲಾ ತಾಣದಲ್ಲಿ ಶೇರ್ ಮಾಡಿದ್ದಾರೆ. ಚೈತ್ರಾ ಅವರು ಬೈಸೆಪ್ಸ್ ತೋರಿಸುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರು ಬಾಡಿ ಬಿಲ್ಡರ್ ರೀತಿಯಲ್ಲಿ ದೇಹವನ್ನು ಶೇಪ್ ಮಾಡಲು ಹೊರಟಿದ್ದಾರಾ ಎನ್ನುವ ಪ್ರಶ್ನೆ ಅಭಿಮಾನಿಗಳು ಕಾಡಿದೆ. ಈ ಫೋಟೋ ಗಮನ ಸೆಳೆದಿದೆ. ‘ಪವರ್ ವುಮನ್’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ನೀವು ನಿಜಕ್ಕೂ ಸ್ಫೂರ್ತಿದಾಯಕ ಮಹಿಳೆ’ ಎಂದು ಕೆಲವರು…