ಜಾರ್ಜ್‌ಟೌನ್: ಗಯಾನಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ಕೋರಲಾಗಿದೆ. 56 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ದಕ್ಷಿಣ ಅಮೇರಿಕಾಕ್ಕೆ ನೀಡಿದ ಮೊದಲ ಭೇಟಿಯಾಗಿದ್ದು,ಜಾರ್ಜ್‌ಟೌನ್ ಗೆ ಆಗಮಿಸಿದ ಮೋದಿಯವರನ್ನು ಗಯಾನಾ ಅಧ್ಯಕ್ಷ ಮೊಹಮದ್ ಇರ್ಫಾನ್ ಅಲಿ ಮತ್ತು ಹನ್ನೆರಡು ಕ್ಯಾಬಿನೆಟ್ ಸಚಿವರು ಆತ್ಮೀಯವಾಗಿ ಸ್ವಾಗತಿಸಿದರು. ಅಧ್ಯಕ್ಷ ಮೊಹಮದ್ ಇರ್ಫಾನ್ ಅವರೊಂದಿಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಸಭೆ ನಡೆಸಲಿದ್ದು, ದಕ್ಷಿಣ ಅಮೆರಿಕಾದ ಸಂಸತ್ತಿನ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆ ನಂತರ ಕೆರಿಬಿಯನ್ ಸಮುದಾಯದ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. https://ainlivenews.com/banjara-embroidery-of-vijayapura-attracted-attention-at-the-iitf-fair/
Author: Author AIN
ವಿಜಯಪುರ: ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಆರೋಪಿಸಿದ್ದಾರೆ. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಹಿಂದೂಗಳ ರೇಷನ್ ಕಾರ್ಡ್ ರದ್ದು ಮಾಡಲಾಗುತ್ತಿದೆ. ಅಧಿವೇಶನದಲ್ಲಿ ಇದರ ವಿರುದ್ಧ ಹೋರಾಟ ಮಾಡಲಿದ್ದೇವೆ. ಸಿದ್ದರಾಮಯ್ಯ ಹೇಳಿದ್ದಾರೆ ಹಿಂದೂಗಳ ಮತ ಬೇಡ ಎಂದಿದ್ದಾರೆ. ಹಿಂದೂಗಳ ರೇಷನ್ ಕಡಿತವಾಗ್ತಿದೆ ಎಂದು ನನಗೂ ಮಾಹಿತಿ ಬಂದಿದೆ. ಕಾಂಗ್ರೆಸ್ ನವರು ಹಿಂದೂಗಳನ್ನ ಟಾರ್ಗೆಟ್ ಮಾಡ್ತಿದ್ದಾರೆ. ಯಾರಿಗೆ ಅನ್ಯಾಯವಾಗಿದೆ ಅವರ ಪರ ಸದನದಲ್ಲಿ ಧ್ವನಿ ಎತ್ತುತ್ತೇವೆ. ಮೊದಲು ಮಾಹಿತಿ ಪಡೆಯುತ್ತೇವೆ. ಪಾನ್ ಕಾರ್ಡ್ ಅಪ್ಲಿಕೇಶನ್ ಹಾಕಿದವರ ರೇಷನ್ ಕಾರ್ಡ್ ರದ್ದಾಗಿವೆ. ವೋಟು ಹಾಕಿಲ್ಲ ಎಂದು ಹಿಂದೂಗಳನ್ನ ಟಾರ್ಗೆಟ್ ಮಾಡಲಾಗ್ತಿದೆ ಎಂದು ಆರೋಪಿಸಿದ್ದರು. https://ainlivenews.com/there-is-no-need-to-panic-over-cancellation-of-ration-card-dcm-dk/ ಇನ್ನೂ, ವಕ್ಫ್ ವಿರುದ್ಧ ಅಧಿವೇಶನ ವೇಳೆ ಹೋರಾಟ ವಿಚಾರವಾಗಿ ಮಾತನಾಡಿ, ವಕ್ಫ ನೋಟಿಸ್ ವಾಪಸ್ ತಗೊಂಡರೆ ಸಾಲೋದಿಲ್ಲ. ವಕ್ಫ್ ನೋಟಿಫಿಕೇಶನ್ ರದ್ದಾಗಬೇಕು. ಕರಾಳ ಕಾನೂನು ವಾಪಸ್ ಪಡೆಯಬೇಕು ಎಂದು ಪ್ರಧಾನಿಗಳಿಗೂ ಮನವಿ ಮಾಡಿದ್ದೇವೆ. ಮುಸ್ಲಿಂರಿಗಾಗಿ ವಕ್ಫ್ ಟ್ರಿಬುನಲ್…
ಬೆಂಗಳೂರು: ರಾಜ್ ಕುಮಾರ್ ರಸ್ತೆಯಲ್ಲಿ ಬೈಕ್ ಶೋರೂಂನಲ್ಲಿ ಅಗ್ನಿ ಅವಘಡ ಪ್ರಕರಣ ಸಂಬಂಧ ಇದೀಗ ಬೈಕ್ ಶೋರೂಂ ಮಾಲೀಕ ಪುನೀತ್ ನನ್ನು ಬಂಧಿಸಲಾಗಿದೆ. ನಿರ್ಲಕ್ಷ್ಯ ಆರೋಪದಡಿಯಲ್ಲಿ ಪುನೀತ್ ಬಂಧಿಸಲಾಗಿದ್ದು, ಆರೋಪಿಯನ್ನು ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ. https://ainlivenews.com/jcb-roars-at-midnight-in-raichur/ ರಾಜ್ ಕುಮಾರ್ ರಸ್ತೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಶಾರ್ಟ್ ಸರ್ಕ್ಯೂಟ್‌ನಿಂದ ಸಂಪೂರ್ಣ ಭಸ್ಮವಾಗಿತ್ತು. ಘಟನೆಯಲ್ಲಿ ಶೋರೂಮ್‌ನಲ್ಲಿ ಸೇಲ್ಸ್ ಗರ್ಲ್ ಆಗಿದ್ದ ಪ್ರಿಯಾ ಎಂಬ ಯುವತಿ ಸಾವಿಗೀಡಾಗಿದ್ದಾಳೆ. ಮತ್ತಿಬ್ಬರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಮೃತ ಯುವತಿಯ ಪೋಷಕರು ಶೋರೂಂ ಮಾಲೀಕನ ವಿರುದ್ಧ ದೂರು ನೀಡಿದ್ದು, ಸದ್ಯ ಶೋರೂಂ ಮಾಲೀಕ ಪುನೀತ್ ನನ್ನು ಬಂಧಿಸಿರುವ ರಾಜಾಜಿನಗರ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿ: ಬಿಪಿಎಲ್, ಎಪಿಲ್ ಕಾರ್ಡ್ ರದ್ದು ವಿಚಾರವಾಗಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಕಷ್ಟ ದಿನಗಳ ಕಾಲದಲ್ಲಿ ಏನು ಮಾಡಿತು..? ಸರ್ಕಾರ ಬಂದು ಎರಡು ವರ್ಷಗಳಾಯಿತು. ಈಗ ಯಾಕೆ ರದ್ದು ಮಾಡುವ ವಿಚಾರ ಬಂದಿದೆ. ಕೋಟ್ಯಂತರ ಕಾರ್ಡ್ ರದ್ದು ಮಾಡುವ ಮೂಲಕ ಬಡವರ ಹೊಟ್ಟೆ ಮೇಲೆ ಹೊಡಿತಾ ಇದ್ದೀರಿ. ಗ್ಯಾರಂಟಿ ಕೊಡಲು ಆಗುತ್ತಿಲ್ಲ. ಆದ್ದರಿಂದ ಈಗ ಕಾರ್ಡ ರದ್ದು ಮಾಡುತ್ತಾ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು. ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನದಲ್ಲಿ ಪ್ರಮುಖ ಚರ್ಚೆ ಆಗಬೇಕು ಎಂಬ ವಿಚಾರವಾಗಿ ಮಾತನಾಡಿ, ಬೆಳಗಾವಿ ಚಳಿಗಾಲ ಅಧಿವೇಶನ ಇದೊಂದು ಟೂರಿಂಗ್ ಟಾಕೀಸ್. ಉತ್ತರ ಕರ್ನಾಟಕ ಬಗ್ಗೆ ಕೇವಲ ಕಣ್ಣೀರು ಸುರಿಸುದು ಆಗಿದೆ. ಯಾವುದೇ ಉಪಯೋಗ ಆಗಿಲ್ಲ ಎಂದಿರುವ ಶೆಟ್ಟರ್, ವಕ್ಪ್ ವಿಚಾರ ಚಳಿಗಾಲ ಅಧಿವೇಶನದಲ್ಲಿ ಉಗ್ರ ಸ್ವರೂಪದ ಹೋರಾಟ ಮಾಡುತ್ತೇವೆ ಎಂದರು. https://ainlivenews.com/jcb-roars-at-midnight-in-raichur/ ಇದೇ ವೇಳೆ ಕಾಂಗ್ರೆಸ್ ಶಾಸಕರ ಖರೀದಿಗೆ ಬಿಜೆಪಿ 50 ಕೋಟಿ…
ಬೆಂಗಳೂರು: ನಬಾರ್ಡ್ ನ ನಿಂದ ಕೊಡುವ ಸಾಲ ಕಡಿತ ಮಾಡಿರುವ ವಿಚಾರವಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ್ ಅವರನ್ನು ಭೇಟಿ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಸಿಎಂ, ನಾಳೆ ನಿರ್ಮಲಾ ಸೀತಾರಾಮನ್ ರನ್ನು ಭೇಟಿ ಮಾಡುತ್ತೇನೆ. ನಬಾರ್ಡ್‌ನಿಂದ ಸಾಲ ಕೋಡೋದು ಕಡಿಮೆ ಮಾಡಿದ್ದಾರೆ. ಕಳೆದ ಬಾರಿ ೫೬೦೦ ಕೋಟಿ ಕೊಟ್ಟಿದ್ದರು. ಆದರೆ, ಈ ವರ್ಷ ೨೩೬೦ ಕೋಟಿ ಮಾತ್ರ ನೀಡಿದ್ದಾರೆ. ಸುಮಾರು ೫೮% ಕಡಿಮೆ ಕೊಟ್ಟಿದ್ದಾರೆ. ಹಾಗಾಗಿ ನಿರ್ಮಲಾ ಸೀತಾರಾಮನ್ ಗೆ ಮನವಿ ಮಾಡುತ್ತೇವೆ. ಇದೇ ವೇಳೆ ಹೈಕಮಾಂಡ್ ನಾಯಕರನ್ನ ಭೇಟಿ ಮಾಡುವ ವಿಚಾರವಾಗಿ ಮಾತನಾಡಿ, ನಾಳೆ ಸಾಯಂಕಾಲ ಟೈಮ್ ಸಿಕ್ಕರೆ ಭೇಟಿ ಮಾಡುತ್ತೇನೆ ಎಂದಿದ್ದಾರೆ. https://ainlivenews.com/angai-hunni-needs-a-mirror-jds-hits-back-at-dcm-dk/ ವಿಕ್ರಮ್ ಗೌಡ ಎನ್ ಕೌಂಟರ್ ಕುರಿತು ಶಂಕೆ ವ್ಯಕ್ತವಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಮೊದಲು ಸರೆಂಡರ್ ಆಗಬೇಕು ಎಂದು ಕೇಳಿದ್ದಾರೆ. ಅವರು ಸರೆಂಡರ್ ಆಗಲಿಲ್ಲ. ಕೇರಳ ಸರ್ಕಾರ ಮತ್ತು ನಾವು ಅವರನ್ನು ಹಿಡಿದುಕೊಟ್ಟವರಿಗೆ ಬಹುಮಾನವನ್ನೂ ಘೋಷಿಸಿದ್ದೆವು. ಅವರು ಶರಣಾಗಲೇ…
ಬೆಂಗಳೂರು: ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಹೆಚ್ ಡಿಕುಮಾರಸ್ವಾಮಿ ಯಾವ ಯೋಜನೆ ಕೊಟ್ಟಿದ್ದಾರೆ ಎಂಬ ಡಿಸಿಎಂ ಡಿಕೆಶಿವಕುಮಾರ್ ಹೇಳಿಕೆಗೆ ಜೆಡಿಎಸ್ ತಿರುಗೇಟು ನೀಡಿದೆ. ಎಕ್ಸ್ ಖಾತೆಯಲ್ಲಿ ಪೋಸ್ಟ್ ಮೂಲಕ ಡಿಕೆಶಿಗೆ ದಳಪತಿಗಳು ಉತ್ತರ ನೀಡಿದ್ದಾರೆ. ಹೆಚ್ ಡಿ ಕುಮಾರಸ್ವಾಮಿ ಅವರ ಅಧಿಕಾರದ ಅವಧಿಯಲ್ಲಿ ಬಂದಂತಹ ಯೋಜನೆಗಳ ಪಟ್ಟಿ ಹಾಕಿ ಡಿಕೆಶಿ ವಿರುದ್ಧ ಕಿಡಿಕಾರಿದ್ದಾರೆ. https://ainlivenews.com/finding-stones-in-yoghurt-hdk-vs-dk/ ಜೆಡಿಎಸ್ ಟ್ವೀಟ್ ನಲ್ಲೇನಿದೆ..? ತಮ್ಮ ಎಕ್ಸ್ ಖಾತೆಯಲ್ಲಿ ಮಿಸ್ಟರ್ ಡಿಕೆಶಿವಕುಮಾರ್, ಹೆಚ್ ಡಿ ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಗಳಾಗಿ ರಾಜ್ಯಕ್ಕೆ ನೀಡಿರುವ ಕೊಡುಗೆಗಳು ಇವು. ಅಲ್ಪಾವಧಿಯಲ್ಲೇ ಅವರು ಮಾಡಿರುವ ಜನಪರ ಯೋಜನೆಗಳು ನಾಡಿನ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತಹ ಯೋಜನೆಗಳಾಗಿ ಮೆಚ್ಚುಗೆ ಪಡೆದಿವೆ. ಆದರೆ ನೀವು ಕನಕಪುರದಲ್ಲಿ ಕಲ್ಲು ಬಂಡೆಗಳನ್ನು ಕರಗಿಸಿ, ನಿಮ್ಮ ಕುಟುಂಬದವರ ಹೆಸರಲ್ಲಿ ಅಕ್ರಮವಾಗಿ ಸಾವಿರಾರು ಕೋಟಿಗೆ ಆಸ್ತಿಯನ್ನು ರಾಕೆಟ್ ವೇಗದಲ್ಲಿ ಏರಿಕೆ ಮಾಡಿಕೊಂಡಿರುವುದೇ ಇದುವರೆಗಿನ ನಿಮ್ಮ ಸಾಧನೆ. ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಮಂತ್ರಿಯಾದಾಗ ನಿಮ್ಮ ಆಸ್ತಿ ಎಷ್ಟಿತ್ತು ? ಈಗ ಸಾವಿರಾರು ಕೋಟಿ…
ಆಫ್ರಿಕಾದ ಬಡದೇಶಗಳಲ್ಲೊಂದಾದ ಕಾಂಗೋದಲ್ಲಿ ಪರ್ವತದ ಭಾಗವೊಂದು ಕುಸಿದು ಬಿದ್ದಿದೆ. ಈ ವೇಳೆ ಪ್ರತಿಯೊಬ್ಬರಿಗೂ ಅಚ್ಚರಿ ಕಾದಿದ್ದು ಕುಸಿದ ಬಿದ್ದ ಪರ್ವದಲ್ಲಿ ಭಾರೀ ಪ್ರಮಾಣದ ತಾಮ್ರದ ನಿಕ್ಷೇಪ ಪತ್ತೆಯಾಗಿದೆ. ಪರ್ವತ ಕುಸಿಯುರುವ ವಿಡಿಯೋ ವೈರಲ್ ಆಗಿದ್ದು, ಇಷ್ಟೊಂದು ತಾಮ್ರ ಇದ್ದರೂ ಕಾಂಗೋ ಬಡ ದೇಶವಾಗಿಯೇ ಉಳಿದುಕೊಂಡಿರುವುದಕ್ಕೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ನಿಕ್ಷೇಪದ ವಿಚಾರದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು ಮಧ್ಯಪ್ರವೇಶ ಮಾಡಬಾರದು ಎಂದು ಹಲವರು ಒತ್ತಾಯಿಸಿದ್ದಾರೆ. ಕಾಂಗೋ ದೇಶ ತನ್ನಲ್ಲಿರುವ ನೈಸರ್ಗಿಕ ಸಂಪನ್ಮೂಲದಿಂದಲೇ ಖ್ಯಾತಿ ಪಡೆದುಕೊಂಡಿದೆ. ಸುಮಾರು ಶತಮಾನಗಳ ಕಾಲದಿಂದ ಇಲ್ಲಿ ತಾಮ್ರದ ಗಣಿಗಾರಿಕೆ ನಡೆಯುತ್ತಿದೆ. ಆಫ್ರಿಕಾದ ತಾಮ್ರದ ಬೆಲ್ಟ್ನಲ್ಲಿರುವ ಕಾಂಗೋ ವಿಶ್ವದಲ್ಲಿರುವ ತಾಮ್ರದ ಶೇ.10ರಷ್ಟನ್ನು ಪೂರೈಕೆ ಮಾಡುತಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಪ್ರವಾಸದ ಭಾಗವಾಗಿ ಗಯಾನಾದ ಜಾರ್ಜ್‌ಟೌನ್‌ಗೆ ಭೇಟಿ ನೀಡಿದ್ದಾರೆ. ಇದರೊಂದಿಗೆ 56 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಈ ದೇಶಕ್ಕೆ ಭೇಟಿ ನೀಡಿದಂತಾಗಿದೆ. ಬ್ರೆಜಿಲ್‌ನಲ್ಲಿ ನಡೆದ 2 ದಿನಗಳ ಜಿ20 ಶೃಂಗಸಭೆಯಲ್ಲಿ ಭಾಗವಹಿಸಿದ್ದ ಮೋದಿ ಅವರು ಇಂದು ಗಯಾನಾದ ಜಾರ್ಜ್‌ಟೌನ್‌ಗೆ ಬಂದಿಳಿದಿದ್ದಾರೆ. ಇದೇ ಸಂದರ್ಭದಲ್ಲಿ ಗಯಾನಾ ಅಧ್ಯಕ್ಷ ಮೊಹಮದ್ ಇರ್ಫಾನ್ ಅಲಿ ಸೇರಿದಂತೆ ಇತರೆ ನಾಯಕರು ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಭಾರತ- ಕೆರಿಕಮ್ (ಕೆರಿಬಿಯನ್ ಕಮ್ಯುನಿಟಿ) ಶೃಂಗಸಭೆಯಲ್ಲಿ ಭಾಗಿಯಾಗಲಿರುವ ಮೋದಿ ಅವರು ಮೊಹಮದ್ ಇರ್ಫಾನ್ ಅಲಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಬಳಿಕ ಗಯಾನಾ ಸಂಸತ್ತಿನ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೋವಿಡ್- 19 ಸಾಂಕ್ರಾಮಿಕದ ಅವಧಿಯಲ್ಲಿ ಮೋದಿ ಅವರು ಡೊಮಿನಿಕಾಕ್ಕೆ ನೀಡಿದ ನೆರವು ಮತ್ತು ಉಭಯ ದೇಶಗಳ ಬಾಂಧವ್ಯವನ್ನು ಬಲಪಡಿಸುವಲ್ಲಿ ಅವರು ತೋರಿದ ಬದ್ಧತೆಯನ್ನು ಗುರುತಿಸಿ ಡೊಮಿನಿಕಾ ದೇಶವು ‘ಡೊಮಿನಿಕಾ ಅವಾರ್ಡ್ ಆಫ್ ಆನರ್’ ನೀಡಲು ನಿರ್ಧರಿಸಿದೆ ಎಂದು ಅಲ್ಲಿನ ಸರ್ಕಾರ…
ಬೆಂಗಳೂರು: ಬಡವರಿಗೆ ರೇಷನ್ ಕಾರ್ಡ್ ಸಿಕ್ಕೇ ಸಿಗುತ್ತೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ. ಸದಾಶಿವನಗರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಯಾರು ಗಾಬರಿ ಬೀಳುವ ಅವಶ್ಯಕತೆ ಇಲ್ಲ. ಸೆಂಟ್ರಲ್ ಗೌರ್ಮೆಂಟ್ ಕ್ರೈಟೀರಿಯಾ ಇದೆ. ಅದರಂತೆ ಪರಿಶೀಲನೆ ಮಾಡುತ್ತಿದ್ದಾರೆ. ಯಾರು ಬಡವರಿದ್ದಾರೆ ಅವರಿಗೆ ಸಿಗುತ್ತೆ. ನಮ್ಮ ಸರ್ಕಾರ ಇರೋದೇ ಬಡವರಿಗಾಗಿ, ಸ್ವಲ್ಪ ಕಾರ್ಡ್ ನಲ್ಲಿ ಹೆಚ್ಚು ಕಡಿಮೆ ಆಗಿರಬಹುದು. ಇದಕ್ಕೆ ಎಲ್ಲರು ಸಹಕಾರ ಕೊಡಬೇಕು ಎಂದರು. https://ainlivenews.com/jcb-roars-at-midnight-in-raichur/ ಇನ್ನೂ, ಗಾಡಿ ಇರುವವರು, 7.5 ಎಕರೆ ಜಮೀನು ಇರುವವರು. ಇಂತವರಿಗೆ ಬಿಪಿಎಲ್ ಕಾರ್ಡ್ ಕೊಡುವಂತಿಲ್ಲ. ಒಂದೊಂದು ಊರಲ್ಲಿ ಇಂತಹ ಹತ್ತಿಪ್ಪತ್ತು ಆಗಿರಬಹುದು. ಇನ್ ಕಂ ಟ್ಯಾಕ್ಸ್ ಕಟ್ಟುವವರು ಇದ್ದಾರೆ. ಅಧಿಕಾರಿಗಳು ಇದ್ದಾರೆ ಅಂತವರಿಗೆ ಬೇಕಿಲ್ಲ. ಮನೆಗೆ ಹೋಗಿ ನೋಡಿ ರದ್ಧು ಮಾಡಬೇಕಿಲ್ಲ. ನಾವು ಶಾಸಕರಿಗೆ ಡಿಟೇಲ್ಸ್ ಕಳಿಸುತ್ತೇವೆ. ಅವರು ಒಂದು ಟೀಂ ಮಾಡ್ತಾರೆ. ನಮ್ಮ ಗ್ಯಾರೆಂಟಿ ಟೀಂಗೆ ಜವಾಬ್ದಾರಿ ಕೊಟ್ಟಿದ್ದೇವೆ. ಅವರೆಲ್ಲರು ಮನೆಮನೆಗೆ ಹೋಗ್ತಾರೆ. ಯಾರಿಗೆ ಅನ್ಯಾಯ ಆಗಿದೆ ಸರಿಪಡಿಸಿ ಎಂದಿದ್ದೇವೆ.…
ರಾಯಚೂರು: ರಾಯಚೂರಿನಲ್ಲಿ ಮಧ್ಯರಾತ್ರಿ ಜೆಸಿಬಿಗಳು ಘರ್ಜಿಸಿದ್ದು, ಅಕ್ರಮವಾಗಿ ಸಿ.ಎ. ಸೈಟ್ ನಲ್ಲಿ ನಿರ್ಮಿಸಿದ್ದ ಶಿವ ಮತ್ತು ಗಣೇಶನ ದೇಗುಲ ತೆರವುಗೊಳಿಸಿದ್ದಾರೆ. ರಾಯಚೂರು ಎಸಿ ಗಜಾನನ ಬಾಳೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಸಂತೋಷ ನಗರದಲ್ಲಿನ ದೇಗುಲ ತೆರವುಗೊಳಸಿದ್ದಾರೆ. ಮನೆ ಕಟ್ಟುವ ವೇಳೆ ಸಿಮೆಂಟ್ ಹಾಗೂ ಇತರೆ ಸಾಮಾಗ್ರಿಗಳು ಇಡಲು ಶೆಡ್ ನಿರ್ಮಿಸಿದ್ದಾರೆ. ಆದರೆ ಬಡಾವಣೆ ನಿವಾಸಿಗಳು ಅದೇ ಶೆಡ್‌ನ್ನು ದೇಗುಲ ಮಾಡಿಕೊಂಡು ಪೂಜೆ ಮಾಡುತ್ತಿದ್ದರು. https://ainlivenews.com/naxal-leader-encounter-postmortem-today/ 2022ಜೂನ್ 1ರಂದು ಸಿ.ಎ. ಸೈಟ್ ಪ್ರೌಢಶಾಲೆ ಕಟ್ಟಡಕ್ಕೆ ಮಂಜೂರಾಗಿತ್ತು. ಆದರೆ ಬಡಾವಣೆ ಜನರು ಶಾಲಾ ಕಟ್ಟಡ ನಿರ್ಮಾಣಕ್ಕೆ ವಿರೋಧಿಸಿದ್ದರು. ಜಾಗ ಮಂಜೂರು ಆದ ಬಳಿಕ ನಾಲ್ಕು ಕೊಠಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಆದರೆ ಶಾಲೆ ಕಟ್ಟಡಕ್ಕೆ ಅನುದಾನ ಬಿಡುಗಡೆ ಆಗಿದ್ರೂ ಸ್ಥಳೀಯರು ದೇಗುಲ ತೆರವಿಗೆ ವಿರೋಧಿಸಿದ್ದು, ಸ್ಥಳೀಯರ ವಿರೋಧದ ನಡುವೆಯೂ ಪೊಲೀಸರ ಭದ್ರತೆಯಲ್ಲಿ ದೇಗುಲ ತೆರವು ಮಾಡಲಾಯಿತು.