ಅರುಣಾಚಲ ಪ್ರದೇಶದ ಪರ್ವತವೊಂದನ್ನು ಏರಿದ ಭಾರತದ ಪರ್ವತಾರೋಹಿಗಳ ತಂಡವು ಪರ್ವತಕ್ಕೆ 6ನೇ ದಲಾಯಿ ಲಾಮಾರ ಹೆಸರನ್ನು ನಾಮಕರಣ ಮಾಡಿದ್ದಾರೆ. ಇದನ್ನು ಬಲವಾಗಿ ಆಕ್ಷೇಪಿಸಿರುವ ಚೀನಾ ಆ ಪ್ರದೇಶದ ಮೇಲೆ ತನ್ನ ಪ್ರಾದೇಶಿಕ ಹಕ್ಕುಗಳನ್ನು ಪುನರುಚ್ಚರಿಸಿದೆ. ಅರುಣಾಚಲ ಪ್ರದೇಶದಲ್ಲಿರುವ 20,942 ಅಡಿ ಎತ್ತರದ ಪರ್ವತವನ್ನು ಯಶಸ್ವಿಯಾಗಿ ಏರಿದ ಪ್ರಥಮ ತಂಡ ಎನಿಸಿರುವ `ಪರ್ವತಾರೋಹಣ ಮತ್ತು ಸಾಹಸ ಕ್ರೀಡೆಗಳ ರಾಷ್ಟ್ರೀಯ ಸಂಸ್ಥೆ’ಯ ತಂಡವು ಈ ಪರ್ವತಕ್ಕೆ 6ನೇ ಲಾಮಾ ತ್ಸಾಂಗ್ಯಾಂಗ್ ಗ್ಯಾಟ್ಸೋ ಅವರ ಹೆಸರನ್ನು ನಾಮಕರಣ ಮಾಡಿತ್ತು. 6ನೇ ದಲಾಯಿ ಲಾಮಾ ಅವರ ಕಾಲಾತೀತ ಪಾಂಡಿತ್ಯ ಮತ್ತು ಮೊನ್ಬಾ ಸಮುದಾಯಕ್ಕೆ ಹಾಗೂ ಇತರ ಸಮುದಾಯಗಳಿಗೆ ಅವರು ನೀಡಿದ ಕೊಡುಗೆಗೆ ಸಲ್ಲಿಸುವ ಗೌರವವಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ` ಝಂಗ್ನಾನ್ ಪ್ರದೇಶ ಚೀನಾದ ಪ್ರದೇಶವಾಗಿದೆ. ಇಲ್ಲಿ ತಥಾಕಥಿತ ಅರುಣಾಚಲ ಪ್ರದೇಶವನ್ನು ಸ್ಥಾಪಿಸುವುದು ಭಾರತದ ಕಾನೂನುಬಾಹಿರ ಕ್ರಮವಾಗಿದ್ದು ಇದು ಅನೂರ್ಜಿತವಾಗಿದೆ’ ಎಂದಿದ್ದಾರೆ.
Author: Author AIN
ಅಮೇರಿಕಾದಲ್ಲಿ ಸಂಬವಿಸಿದ ಭೀಕರ ಹೆಲೆನ್ ಚಂಡಮಾರುತಕ್ಕೆ 33 ಜನರು ಮೃತಪಟ್ಟಿದ್ದು ಹಲವರು ನಾಪತ್ತೆಯಾಗಿದ್ದಾರೆ. ಭೂಕುಸಿತದ ನಂತರ ಉಷ್ಣವಲಯದ ಚಂಡಮಾರುತವಾಗಿ ದುರ್ಬಲಗೊಂಡಿದೆ, ಜಲಾವೃತಗೊಳಿಸಿದೆ ಮತ್ತು ನಾಲ್ಕು ದಶಲಕ್ಷಕ್ಕೂ ಹೆಚ್ಚು ಮನೆಗಳು ವಿದ್ಯುತ್ ಸಂಪರ್ಕವನ್ನು ಕಳೆದುಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫ್ಲೋರಿಡಾ, ಜಾರ್ಜಿಯಾ, ದಕ್ಷಿಣ ಕೆರೊಲಿನಾ ಮತ್ತು ಉತ್ತರ ಕೆರೊಲಿನಾದಲ್ಲಿ ಸಾವಿನ ಸಂಖ್ಯೆ ಕನಿಷ್ಠ 35 ಕ್ಕೆ ತಲುಪಿದೆ, ಇದರಲ್ಲಿ ದಕ್ಷಿಣ ಕೆರೊಲಿನಾದಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಹೆಲೆನ್ ಚಂಡಮಾರುತವು ಗುರುವಾರ ರಾತ್ರಿ 11:10 ಕ್ಕೆ ಫ್ಲೋರಿಡಾದ ಬಿಗ್ ಬೆಂಡ್ ಪ್ರದೇಶವನ್ನು ಪ್ರಬಲ ವರ್ಗ 4 ಚಂಡಮಾರುತವಾಗಿ ಅಪ್ಪಳಿಸಿತು ಮತ್ತು ಬಂದರುಗಳಲ್ಲಿ ಪಲ್ಟಿಯಾದ ದೋಣಿಗಳು, ಮರಗಳನ್ನು ಕಡಿಯುವುದು, ಕಾರುಗಳು ಮುಳುಗಿದ ಮತ್ತು ಬೀದಿಗಳಲ್ಲಿ ಪ್ರವಾಹಕ್ಕೆ ಸಿಲುಕಿದ ದೋಣಿಗಳ ಗೊಂದಲಮಯ ಭೂದೃಶ್ಯವನ್ನು ಬಿಟ್ಟಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ ಅದರ ಪ್ರಭಾವವು ಜಾರ್ಜಿಯಾ, ದಕ್ಷಿಣ ಕೆರೊಲಿನಾ, ಉತ್ತರ ಕೆರೊಲಿನಾ, ಟೆನ್ನೆಸ್ಸೀ ಮತ್ತು ವರ್ಜೀನಿಯಾ…
ಗಲ್ಲು ಶಿಕ್ಷೆಗೆ ಗುರಿಯಾಗಿ ಅತೀ ಹೆಚ್ಚು ವರ್ಷಗಳ ಕಾಲ ಜೈಲಿನಲ್ಲಿದ್ದ ಕೈದಿಗೆ ಜಪಾನ್‌ನಲ್ಲಿ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. ಬಾಕ್ಸರ್ ಆಗಿದ್ದ ಜಪಾನ್‌ನ ಐವೋ ಹಕ ಮಡಾ ಎಂಬಾತ ತನ್ನ 45ನೇ ವಯಸ್ಸಿನಲ್ಲಿ ಅಂದರೆ 1966ರಲ್ಲಿ ತನ್ನ ಕಂಪೆನಿ ಮಾಲಕ ಆತನ ಪತ್ನಿ ಹಾಗೂ ಇಬ್ಬರು ಚಿಕ್ಕ ಮಕ್ಕಳನ್ನು ಹತ್ಯೆ ಮಾಡಿ ಜೈಲು ಪಾಲಾಗಿದ್ದ. ಈತನ ಮೇಲಿದ್ದ ಆರೋಪ ಸಾಭೀತಾದ ಬಳಿಕ 1968ರಲ್ಲಿ ಈತನಿಗೆ ಜಪಾನ್‌ನ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು. ಆದರೂ ಆತನನ್ನು ಗಲ್ಲಿಗೆ ಏರಿಸಿರಲಿಲ್ಲ. ಈತ ಸುಮಾರು 48 ವರ್ಷ ಕಳೆದ ಬಳಿಕ ತನ್ನ 88ನೇ ವಯಸ್ಸಿನಲ್ಲಿ ಬಿಡುಗಡೆಯಾಗಿದ್ದಾನೆ.
ತಮಿಳು ನಟ ಹಾಗೂ ಪತ್ರಕರ್ತ ಬೈಲ್ವಾನ್ ರಂಗನಾಥನ್ ಕಳೆದ ಕೆಲ ವರ್ಷಗಳಿಂದ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ನಟ ಹಾಗೂ ನಟಿಯರನ್ನು ಗುರಿಯಾಗಿರಿಸಿಕೊಂಡು ಅವರ ವಿರುದ್ಧ ಗಾಸಿಪ್ಗಳನ್ನು ಸೃಷ್ಟಿ ಮಾಡುವ ಮೂಲಕ ಭಾರೀ ಸುದ್ದಿಯಾಗುತ್ತಿದ್ದಾರೆ. ಇದು ಕಲಾವಿದರ ಆಕ್ರೋಶಕ್ಕೂ ಕಾರಣವಾಗಿದ್ದಾರೆ. ಇದೀಗ ಬೈಲ್ವಾನ್ ಮತ್ತೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಅನೇಕ ಕಲಾವಿದರು ರಂಗನಾಥನ್ ವಿರುದ್ಧ ತಮ್ಮ ಧ್ವನಿ ಎತ್ತಿದ್ದಾರೆ. ಆದರೂ ರಂಗನಾಥನ್ ಅವರು ಚಿತ್ರರಂಗದ ಕುರಿತು ಮಾತನಾಡುವುದನ್ನು ನಿಲ್ಲಿಸುವುದಿಲ್ಲ. ಇದೀಗ ನಟಿಯರು ಸಾಮಾಜಿಕ ಜಾಲತಾಣದಲ್ಲಿ ಅರೆಬೆತ್ತಲೆ ಫೋಟೋ ಹಂಚಿಕೊಳ್ಳುವುದರ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ರಂಗನಾಥ್ ಆಡಿರುವ ಮಾತುಗಳು ವಿವಾದ ಸೃಷ್ಟಿಸಿವೆ. ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೊಸದಾಗಿ ಹಂಚಿಕೊಂಡಿರುವ ವಿಡಿಯೋದಲ್ಲಿ ಚಿತ್ರರಂಗದಲ್ಲಿ ನಡೆಯುತ್ತದೆ ಎನ್ನಲಾದ ಅನೇಕ ಸಂಗತಿಗಳನ್ನು ರಂಗನಾಥ್ ಬಹಿರಂಗಪಡಿಸಿದ್ದಾರೆ. ಸಿನಿಮಾದಲ್ಲಿ ವೈಯಕ್ತಿಕ ನೈತಿಕತೆ 100ಕ್ಕೆ 99 ರಷ್ಟು ಕೂಡ ಇಲ್ಲ. ಇಲ್ಲಿ ನಾನು ಹೇಳುತ್ತಿರುವ ಎಲ್ಲ ವಿಷಯಗಳಿಗೂ ನನ್ನ ಬಳಿ ಪುರಾವೆ ಇದೆ. ನಟಿಯರು ಸಿನಿಮಾ…
ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಬಳಿಕ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಆಗಾಗ ಸುದ್ದಿಯಾಗುತ್ತಲೆ ಇರುತ್ತಾರೆ. ಸದ್ಯ ವಿವೆಕ್ ಅಗ್ನಿಹೋತ್ರಿ ಹೊಸ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಒಂದು ಕಹಿ ಸುದ್ದಿ ಕೇಳಿಬಂದಿದೆ. ಕಳೆದ ವಾರ ತಮ್ಮದೇ ಸಿನಿಮಾದ ಹೀರೋಗೆ ವಿವೇಕ್ ಅಗ್ನಿಹೋತ್ರಿ ಗೇಟ್ಪಾಸ್ ನೀಡಿದ್ದಾರಂತೆ. ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ಆದರೆ ಆ ಹೀರೋ ಯಾರು ಎಂಬುದನ್ನು ಮಾತ್ರ ಬಹಿರಂಗಪಡಿಸಿಲ್ಲ. ವಿವೇಕ್ ಅಗ್ನಿಹೋತ್ರಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಕಾಸ್ಟಿಂಗ್ ಡೈರೆಕ್ಟರ್ ಮುಕೇಶ್ ಛಾಬ್ರಾ ಮಾಡಿದ ಒಂದು ‘ಎಕ್ಸ್’ ಪೋಸ್ಟ್ಗೆ ವಿವೇಕ್ ಅಗ್ನಿಹೋತ್ರಿ ಪ್ರತಿಕ್ರಿಯಿಸಿದ್ದಾರೆ. ‘ಚಿತ್ರರಂಗದ ಸದ್ಯದ ಪರಿಸ್ಥಿತಿ: ಒಬ್ಬ ನಟ, 200 ಕಾಸ್ಟಿಂಗ್ ಡೈರೆಕ್ಟರ್ ಮತ್ತು 15,680 ಮ್ಯಾನೇಜರ್ಗಳು’ ಎಂದು ಮುಕೇಶ್ ಛಾಬ್ರಾ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸುವಾಗ ವಿವೇಕ್ ಅಗ್ನಿಹೋತ್ರಿ ಅವರು ತಮ್ಮ ಸಿನಿಮಾ ತಂಡದಲ್ಲಿ ಆದ ವಿಚಾರವನ್ನು ತಿಳಿಸಿದ್ದಾರೆ. ‘ನನ್ನ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸುವ ಒಬ್ಬ ನಟನನ್ನು ಕಳೆದ…
ನಾವು ಎಂದಿಗೂ ‘ಇಂಡಿಯಾ ಔಟ್’ ಅಜೆಂಡಾವನ್ನು ಅನುಸರಿಸಿಲ್ಲ ಎಂದು ಮಾಲ್ಡೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝು ಹೇಳಿದ್ದಾರೆ. ಆದರೆ ತನ್ನ ನೆಲದಲ್ಲಿ ವಿದೇಶಿ ಸೇನೆಯ ಉಪಸ್ಥಿತಿಯು ಗಂಭೀರ ಸಮಸ್ಯೆಯಾಗಿತ್ತು ಎಂದು ಅವರು ಪ್ರತಿಪಾದಿಸಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 79 ನೇ ಅಧಿವೇಶನದಲ್ಲಿ ಭಾಗವಹಿಸಲು ಯುಎಸ್ನಲ್ಲಿರುವ ಮುಯಿಝು, ಪ್ರಿನ್ಸ್ ಟನ್ ವಿಶ್ವವಿದ್ಯಾಲಯದ ಡೀನ್ಸ್ ಲೀಡರ್ ಶಿಪ್ ಸರಣಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಈ ಮೇಲಿನ ಹೇಳಿಕೆ ನೀಡಿದ್ದಾರೆ. “ನಾವು ಯಾವುದೇ ಸಮಯದಲ್ಲಿಯೂ ಯಾವುದೇ ಒಂದು ದೇಶದ ವಿರುದ್ಧವಾಗಿಲ್ಲ. ಅದು ಇಂಡಿಯಾ ಔಟ್ ಆಗಿರಲಿಲ್ಲ. ನಮ್ಮ ನೆಲದಲ್ಲಿ ವಿದೇಶಿ ಮಿಲಿಟರಿಯ ಉಪಸ್ಥಿತಿಯು ಗಂಭೀರ ಸಮಸ್ಯೆಯಾಗಿತ್ತು. ತಮ್ಮ ದೇಶದಲ್ಲಿ ಒಬ್ಬನೇ ಒಬ್ಬ ವಿದೇಶಿ ಸೈನಿಕ ಇರುವುದನ್ನು ಮಾಲ್ಡೀವ್ಸ್ ಜನತೆ ಸಹಿಸುವುದಿಲ್ಲ” ಎಂದು ಹೇಳಿದ್ದಾರೆ. ಚೀನಾ ಪರ ಒಲವುಗಳಿಗೆ ಹೆಸರುವಾಸಿಯಾದ ಮುಯಿಝು ಕಳೆದ ವರ್ಷ ನವೆಂಬರ್ನಲ್ಲಿ ಮಾಲ್ಡೀವ್ಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧಗಳು ತೀವ್ರ ಬಿಗಡಾಯಿಸಿದೆ. ದೇಶವು ಉಡುಗೊರೆಯಾಗಿ ನೀಡಿದ ಮೂರು ವಾಯುಯಾನ…
ಅಮೆರಿಕದಲ್ಲಿ ಇತ್ತೀಚೆಗೆ ಅಪರಾಧಿಗಳಿಗೆ ನೈಟ್ರೋಜನ್ ಗ್ಯಾಸ್ ಮೂಲಕ ಮರಣದಂಡನೆ ವಿಧಿಸಲಾಗುತ್ತಿದೆ. ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದೀಗ ಎರಡನೇ ಬಾರಿಗೆ ಇಂಥದ್ದೇ ಘೋರ ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ. ತಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಮೂವರನ್ನು ಹತ್ಯೆಗೈದ ಮಿಲ್ಲರ್ ಎಂಬ ಅಪರಾಧಿಯನ್ನು ಗುರುವಾರ ಅಮೆರಿಕ ಕಾಲಮಾನ ಪ್ರಕಾರ ಅಲಬಾಮಾದಲ್ಲಿ ನೈಟ್ರೋಜನ್ ಗ್ಯಾಸ್ ಬಳಸಿ ಹತ್ಯೆ ಮಾಡಲಾಗಿದೆ. ದಕ್ಷಿಣ ಅಲಬಾಮಾ ಜೈಲಿನಲ್ಲಿದ್ದ 59 ವರ್ಷದ ಅಪರಾಧಿ ಅಲನ್ ಯುಜೀನ್ ಮಿಲ್ಲರ್ ಮುಖಕ್ಕೆ ಅಧಿಕಾರಿಗಳು ಮುಖವಾಡ ಹಾಕಿ ಸಾರಜನಕ ಅನಿಲ ಕಳುಹಿಸಲು ಪ್ರಾರಂಭಿಸಿದರು. ವಿಷಾನಿಲ ಸೇವಿಸಿದ ಆತ ಎರಡೇ ನಿಮಿಷದಲ್ಲಿ ಕೆಳಗೆ ಬಿದ್ದಿದ್ದು, ಮುಂದಿನ ಆರು ನಿಮಿಷದಲ್ಲಿ ಸಾವನ್ನಪ್ಪಿದ್ದಾನೆ. ಇದರೊಂದಿಗೆ 8 ನಿಮಿಷಗಳಲ್ಲಿ ಮರಣದಂಡನೆ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲಬಾಮಾದಲ್ಲಿ ನೈಟ್ರೋಜನ್ ಅನಿಲದ ಮೂಲಕ ಮರಣದಂಡನೆ ವಿಧಿಸಿರುವ ಎರಡನೇ ಪ್ರಕರಣ ಇದಾಗಿದೆ. ಈ ವರ್ಷದ ಜನವರಿಯಲ್ಲಿ ಕೊಲೆ ಪ್ರಕರಣದ ಅಪರಾದಿ ಕೆನೆತ್ ಸ್ಮಿತ್ (58) ಎಂಬಾತನಿಗೆ ಇದೇ ಶಿಕ್ಷೆ ವಿಧಿಸಿ ಕೊಲ್ಲಲಾಗಿತ್ತು.
ತಾಂತ್ರಿಕ ದೋಷದ ಕಾರಣದಿಂದ ಕಾರು ಸುಟ್ಟು ಹೋದ ಪರಿಣಾಮ ಕಾರಿನ ಸಂಪೂರ್ಣ ಹಣವನ್ನು ಕಾರು ಮಾಲಿಕನಿಗೆ ನೀಡುವಂತೆ ಹೈದರಾಬಾದ್‌ನ ಗ್ರಾಹಕ ನ್ಯಾಯಾಲಯ ಟಾಟಾ ಮೋಟಾರ್ಸ್‌ಗೆ ಕೋರ್ಟ್‌ನಲ್ಲಿ ಆದೇಶಿಸಿದೆ. ಜೋನಾಥನ್ ಬ್ರೈನಾರ್ಡ್ ಎಂಬ ವ್ಯಕ್ತಿ 2022ರಲ್ಲಿ ಟಾಟಾ ಮೋಟಾರ್ಸ್‌ನ ಜನಪ್ರಿಯ ಮತ್ತು ಹೆಚ್ಚು ಮಾರಾಟವಾದ ಎಲೆಕ್ಟ್ರಿಕ್ ಕಾರು ಟಾಟಾ ನೆಕ್ಸಾನ್ ಖರೀದಿಸಿದ್ದರು. ಆದರೆ ಖರೀದಿಸಿದ ಕೆಲವು ತಿಂಗಳ ನಂತರ ಕಾರು ಚಲಿಸುತ್ತಿರುವಾಗಲೇ ದೊಡ್ಡ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿತ್ತು. ಆ ಸಮಯದಲ್ಲಿ ನಾನು ಕಾರನ್ನು ಗಂಟೆಗೆ 38 ಕಿಮೀ ವೇಗದಲ್ಲಿ ಅಂದ್ರೆ ಕಡಿಮೆ ವೇಗದಲ್ಲಿ ಓಡಿಸುತ್ತಿದ್ದೆ ಎಂದು ಬ್ರೈನಾರ್ಡ್ ನ್ಯಾಯಾಲಯಕ್ಕೆ ತಿಳಿಸಿದ್ದರು. ಜೂನ್ 1, 2023ರಂದು ನಡೆದ ಈ ಘಟನೆಯಲ್ಲಿ, ಕಾರು ಬೆಂಕಿಯಿಂದ ಸಂಪೂರ್ಣ ಸುಟ್ಟುಹೋಗಿತ್ತು. ಕಾರಿಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಬ್ರೈನ್ಡ್ ಕೂಡಲೇ ಇಳಿದು ತಮ್ಮ ಪ್ರಾಣ ಉಳಿಸಿಕೊಂಡಿದ್ದರು. ಬೆಂಕಿ ವೇಗವಾಗಿ ಹರಡುತ್ತಿದ್ದಂತೆ ಕಾರಿನ ಬಾಗಿಲುಗಳು ಜಾಮ್ ಆಗಿದ್ದವು. ಅಷ್ಟರಲ್ಲಿ ಪಕ್ಕದ ಬಾಗಿಲಿನಿಂದ ಹೊರಬಂದು ಪ್ರಾಣ ಉಳಿಸಿಕೊಂಡೆ ಎಂದು ಕೋರ್ಟ್ಗೆ ಹೇಳಿದ್ದರು. ಕಾರಿಗೆ…
ಸೌತ್ ಸುಂದರಿ ನಟಿ ಸಮಂತಾ ರುತ್ ಪ್ರಭು ಸದ್ಯ ಪ್ಯಾನ್ ಇಂಡಿಯಾ ನಟಿಯಾಗಿಯೇ ಗುರುತಿಸಿಕೊಂಡಿದ್ದಾರೆ. ಫ್ಯಾಮಿಲಿ ಮ್ಯಾನ್ 2 ವೆಬ್ ಸಿರೀಸ್ನಲ್ಲಿ ನಟಿಸಿದ ನಂತರ ಸಮಂತಾ ಖ್ಯಾತಿ ಮತ್ತಷ್ಟು ಹೆಚ್ಚಾಗಿದೆ. ಸದ್ಯ ಸಮಂತ ಲಂಡನ್ಗೆ ಭೇಟಿ ನೀಡಿದ್ದು ಅವುಗಳ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಡಾರ್ಕ್ ಬ್ಲೂ ಆಫ್ ಶೋಲ್ಡರ್ ಗೌನ್ ಧರಿಸಿದ್ದ ಸಮಂತ ಇದಕ್ಕೆ ಸಿಲ್ವರ್ ನೆಕ್ಲೆಸ್ ಧರಿಸಿದ್ದರು. ಸಿಂಪಲ್ ಆಗಿ ಮೇಕಪ್ ಮಾಡಿಕೊಂಡಿದ್ದ ಸಮಂತಾ ತುಂಬಾ ಆಕರ್ಷಣೀಯವಾಗಿ ಕಾಣಿಸಿಕೊಂಡಿದ್ದಾರೆ. ನಟಿ ತಮ್ಮ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ಸಮಂತ ತಮ್ಮ ವೆಬ್ ಸರಣಿಯ ಪ್ರೀಮಿಯರ್ ನಲ್ಲಿ ಭಾಗಿಯಾಗಲು ಲಂಡನ್ ಗೆ ತೆರಳಿದ್ದರು.ಈ ವೇಳೆ ನಟಿ ಧರಿಸಿದ್ದ ದುಭಾರಿ ವಸ್ತ್ರ ಕಾರ್ಯಕ್ರಮದಲ್ಲಿ ಹಾಜರಿದ್ದ ಪ್ರತಿಯೊಬ್ಬರ ಮನ ಸೆಳೆದಿತ್ತು. ಸಮಂತಾ ಧರಿಸಿದ್ದ ವಸ್ತ್ರವನ್ನು ಖ್ಯಾತ ವಿನ್ಯಾಸಕಿ ಡಿಸೈನ್ ಮಾಡಿದ್ದಾರೆ. ಅಂದ ಹಾಗೆ ಈಕೆ ಧರಿಸಿದ್ದು ಟಸ್ಸೆಲ್ ಪ್ಯಾಂಡ್ ಹಾಗೂ ಟಾಪ್. ನಟಿ ಧರಿಸಿದ್ದು ಗೌನ್ನಂತೆ ಕಂಡರೂ ಇದು ಗೌನ್ ಅಲ್ವಂತೆ. ಬದಲಾಗಿ…
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ವಿಚಾರಣೆ ಇಂದು ಬೆಂಗಳೂರು ಸೆಷನ್ಸ್ ನ್ಯಾಯಾಲಯದಲ್ಲಿ ನಡೆದಿದ್ದು, ವಿಚಾರಣೆಯನ್ನು ಮತ್ತೊಮ್ಮೆ ಮುಂದೂಡಲಾಗಿದೆ. ಮುಂದಿನ ವಿಚಾರಣೆ ಸೆಪ್ಟೆಂಬರ್ 30ಕ್ಕೆ ನಡೆಯಲಿದೆ. ಇದೇ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆಯೂ ಸಹ ಸೆಪ್ಟೆಂಬರ್ 30ರಂದೇ ನಡೆಯಲಿದೆ. ಇಂದು ಪವಿತ್ರಾ ಗೌಡ ಪರ ವಕೀಲರಾದ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿದರು. ಪವಿತ್ರಾ ಅವರಿಗೆ ಕೊಲ್ಲುವ ಉದ್ದೇಶವೇ ಇರಲಿಲ್ಲ, ಆಕೆ ಈ ಪ್ರಕರಣದಲ್ಲಿ ಷಡ್ಯಂತ್ರವನ್ನೂ ಮಾಡಿರಲಿಲ್ಲ ಎಂದು ವಾದಿಸಿದರು. ಪವಿತ್ರಾ ಅವರ ಜಾಮೀನು ಅರ್ಜಿಗೆ ಎಸ್ಪಿಪಿ ಪ್ರಸನ್ನ ಕುಮಾರ್ ಆಕ್ಷೇಪಣೆ ಸಲ್ಲಿಸಿದ ಬಳಿಕ ವಾದ ಮಂಡನೆ ಮಾಡಿದ ಟಾಮಿ ಸೆಬಾಸ್ಟಿಯನ್, ಮೊದಲಿಗೆ ಆಕ್ಷೇಪಣೆಯಲ್ಲಿನ ಅಂಶಗಳನ್ನು ಓದಿದರು. ರೇಣುಕಾ ಸ್ವಾಮಿಯನ್ನು ಷೆಡ್ಗೆ ಕರೆದೊಯ್ದು ಇತರರೊಂದಿಗೆ ಸೇರಿ ಹಲ್ಲೆ ನಡೆಸಿದ ಆರೋಪವಿದೆ, ಹಲ್ಲೆಯಿಂದಾಗಿ ರೇಣುಕಾಸ್ವಾಮಿ ಮೃತಪಟ್ಟಿದ್ದಾರೆಂದು ಹೇಳಲಾಗಿದೆ. ತುಂಬಾ ಕ್ರೂರವಾಗಿ ಹಲ್ಲೆ ನಡೆಸಿದ್ದರೆಂದು ಆರೋಪಿಸಲಾಗಿದೆ. ನಾಲ್ಕು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ…