ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನೆ ಯಶಸ್ವಿಯಾಗುವುದಿಲ್ಲ. ಆ ದೇಶವು ದುಷ್ಕೃತ್ಯಗಳ ಪರಿಣಾಮವಾಗಿ ತನ್ನದೇ ಸಮಾಜವನ್ನು ಬಲಿ ಪಡೆಯುವ ಸ್ಥಿತಿ ತಲುಪಿರುವುದು ‘ಕರ್ಮದ ಫಲ’ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಹೇಳಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 79ನೇ ಅಧಿವೇಶನದಲ್ಲಿ ಮಾತನಾಡಿರುವ ಜೈಶಂಕರ್, ‘ಪಾಕಿಸ್ತಾನವು ಅತಿಕ್ರಮಿಸಿರುವ ಭಾರತದ ಭೂಪ್ರದೇಶವನ್ನು ತೊರೆದರೆ ಹಾಗೂ ಭಯೋತ್ಪಾದನೆಯೊಂದಿಗೆ ದೀರ್ಘಾವಧಿಯಿಂದ ಹೊಂದಿರುವ ಬಾಂಧವ್ಯವನ್ನು ಕಡಿದುಕೊಂಡರಷ್ಟೇ ಉಭಯ ದೇಶಗಳ ನಡುವಣ ಬಿಕ್ಕಟ್ಟು ಶಮನಗೊಳ್ಳಲು ಸಾಧ್ಯ’ ಎಂದರು. ‘ಕೆಲವು ದೇಶಗಳು ನಿಯಂತ್ರಣಕ್ಕೆ ಸಿಗದ ಪರಿಸ್ಥಿತಿಯಿಂದಾಗಿ ಹಿಂದುಳಿದಿವೆ. ಆದರೆ, ಇನ್ನೂ ಕೆಲವು ಪ್ರಜ್ಞಾಪೂರ್ವಕವಾಗಿ ಮಾಡಿಕೊಂಡ ಆಯ್ಕೆಗಳಿಂದಾಗಿ ಹಿಂದೆ ಉಳಿದಿವೆ. ನಮ್ಮ ನೆರೆಯ ಪಾಕಿಸ್ತಾನವೇ ಅದಕ್ಕೆ ಉದಾಹರಣೆ’ ಎಂದು ಚಾಟಿ ಬೀಸಿದ್ದಾರೆ. ‘ಅದು (ಪಾಕಿಸ್ತಾನ) ಇತರ ದೇಶಗಳ ಮೇಲೆ ಉಂಟುಮಾಡಲು ಪ್ರಯತ್ನಿಸಿದ ದುಷ್ಪರಿಣಾಮಗಳನ್ನು ತಾನೇ ಅನುಭವಿಸುತ್ತಿದೆ. ಅದರಿಂದಾಗಿ ಅದರದ್ದೇ ಸಮಾಜ ನಾಶವಾಗುತ್ತಿದೆ. ಇದಕ್ಕಾಗಿ ಜಗತ್ತನ್ನು ದೂರಲು ಸಾಧ್ಯವಿಲ್ಲ. ಅದು ಕರ್ಮ ಫಲ’ ಎಂದು ತಿವಿದಿದ್ದಾರೆ. ಪಾಕಿಸ್ತಾನ ನಡೆಸುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆ ಎಂದಿಗೂ ಯಶಸ್ಸು ಕಾಣಲಾರದು ಹಾಗೂ…
Author: Author AIN
ಇರಾನ್ ಬೆಂಬಲಿತ ಪ್ರತಿರೋಧ ಗುಂಪುಗಳು ತನ್ನ ಬೆಂಬಲದೊಂದಿಗೆ ಇಸ್ರೇಲ್ ವಿರುದ್ಧದ ಹೋರಾಟವನ್ನು ಮುಂದುವರಿಸಲಿವೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಕೀರ್ ಕಲಿಬಫ್ ಹೇಳಿದ್ದಾರೆ. ಈ ಕುರಿತು ಸರ್ಕಾರಿ ಮಾಧ್ಯಮಗಳು ವರದಿ ಮಾಡಿದ್ದು, ಹಿಜ್ಬುಲ್ಲಾ ನಾಯಕ ಸಯ್ಯದ್ ಹಸನ್ ನಸ್ರಲ್ಲಾ ಹತ್ಯೆಗೆ ಸಂಬಂಧಿಸಿದಂತೆ ಮೊಹಮ್ಮದ್ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗುತ್ತಿದೆ. ಏತನ್ಮಧ್ಯೆ, ಲೆಬನಾನ್ ಸಾರ್ವಭೌಮತೆಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗುವುದನ್ನು ವಿರೋಧಿಸುವುದಾಗಿ ಚೀನಾ ಹೇಳಿದೆ. ಹಿಜ್ಬುಲ್ಲಾ ಸಂಘಟನೆಯ ಹಲವು ನಾಯಕರು ಲೆಬನಾನ್‌ನ ದಕ್ಷಿಣ ಬೈರೂತ್‌ನ ದಾಹಿಯಾ ಪ್ರದೇಶದಲ್ಲಿ ಶುಕ್ರವಾರ (ಸೆಪ್ಟೆಂಬರ್ 17ರಂದು) ಸಭೆ ಸೇರಿದ್ದರು. ಈ ಸಭೆಯಲ್ಲಿ ನಸ್ರಲ್ಲಾ ಭಾಗವಹಿಸಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಇಸ್ರೇಲ್ ಸೇನೆ, ವಾಯುದಾಳಿ ನಡೆಸಿತ್ತು. ನಸ್ರಲ್ಲಾ ಮಾತ್ರವಲ್ಲದೆ, ಸಂಘಟನೆಯ ಕಮಾಂಡರ್ ಅಲಿ ಕರ್ಕಿ ಸಹ ಮೃತಪಟ್ಟಿದ್ದರು.
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಅಂದ ಹಾಗೆ ದರ್ಶನ್ ಜೈಲಿಗೆ ಹೋಗುವ ಮುನ್ನ ತೆರೆಕಂಡ ಕಾಟೇರ ಸಿನಿಮಾ ಸೂಪರ್ ಹಿಟ್ ಆಗಿದೆ. ಬ್ಯಾಕ್ ಟು ಬ್ಯಾಕ್ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿದೆ. ಇದೀಗ ಅಬುಧಾಬಿಯಲ್ಲಿ ನಡೆದ ಫಿಫಾ 2025 ಕಾರ್ಯಕ್ರಮದಲ್ಲಿ ಕಾಟೇರ ಪ್ರಶಸ್ತಗಳ ಸುರಿಮಳೆಯನ್ನೇ ಬಾಚಿಕೊಂಡಿದೆ. ಕಾಟೇರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿ ಕರೀಯರ್ನಲ್ಲೇ ಅತ್ಯುತ್ತಮ ಸಿನಿಮಾ ಎನಿಸಿಕೊಂಡಿದೆ. ಹೋದ ಕಡೆಗಳಲ್ಲೆ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿದೆ. ಕರ್ನಾಟಕದಲ್ಲೇ ಮಾತ್ರ ರಿಲೀಸ್ ಆಗಿದ್ದ ಕಾಟೇರ 200 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿ ದಾಖಲೆ ಮಾಡಿತ್ತು. ದರ್ಶನ್ ಜೈಲಿನಲ್ಲಿದ್ದರು ತರುಣ್ ಸುದೀರ್ ನಿರ್ದೇಶನದ ಈ ಸಿನಿಮಾಕ್ಕೆ ಪ್ರಶಸ್ತಿಗಳು, ಬಹುಮಾನಗಳು ಹರಿದು ಬರುತ್ತಿವೆ. ಇತ್ಥೀಚೆಗೆ ದುಬೈನಲ್ಲಿ ನಡೆದಿದ್ದ ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬರೋಬ್ಬರಿ 4 ಪ್ರಶಸ್ತಿಗಳನ್ನು ಕಾಟೇರಗೆ ಬಂದಿದ್ದವು. ಇದರ ಬೆನ್ನಲ್ಲೇ ಕಾಟೇರ ಮತ್ತೆ ನಾಲ್ಕು ಆವಾರ್ಡ್ಗಳನ್ನು ಪಡೆದುಕೊಂಡಿದೆ. ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ (ಐಐಎಫ್ಎ) ಕಾರ್ಯಕ್ರಮದಲ್ಲಿ ದರ್ಶನ್ ಅಭಿನಯಿಸಿದ್ದ…
ಕಿರುತೆರೆ ನಟಿ ನೇಹಾ ಗೌಡ ಅಮ್ಮನಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ನೇಹಾ ಹಾಗೂ ಚಂದನ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತುಂಬು ಗರ್ಭಿಣಿಯಾಗಿರುವ ನೇಹಾ ಗೌಡ ಇದೀಗ ಸ್ಪೆಷಲ್ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋ ಶೂಟ್‌ನಲ್ಲಿ ನೇಹಾ ಗೌಡ ಸ್ವರ್ಗದಿಂದ ಧರೆಗಿಳಿದ ಅಪ್ಸರೆ ರೀತಿ ಕಾಣಿಸುತ್ತಿದ್ದಾರೆ. ಗರ್ಭಿಣಿ ಅಪ್ಸರೆ ಧರೆಗೆ ಇಳಿದ್ರೆ ಹೇಗಿರುತ್ತದೆಯೋ ಆ ರೀತಿಯ ಒಂದು ಕಲ್ಪನೆಯಲ್ಲಿಯ ಇಡೀ ಫೋಟೋ ಶೂಟ್ ಮಾಡಲಾಗಿದೆ. ನೇಹಾ ಗೌಡ ಇಲ್ಲಿ ಬಿಳಿ ಸೀರೆಯಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದು ಅದಕ್ಕೆ ಸಿಂಪಲ್ ಅನಿಸೋ ಆಭರಣಗಳನ್ನ ಧರಿಸಿದ್ದಾರೆ. ರಾಣಿ ರೀತಿ ಕಂಗೊಳಿಸಿದ್ದಾರೆ. ಕಮಲಗಳೇ ಇರೋ ಕೊಳದ ಪಕ್ಕ ಕುಳಿತು ನೇಹಾ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ನಟಿ ನೇಹಾ ಗೌಡ ತುಂಬು ಗರ್ಭಿಣಿಯಾಗಿದ್ದು, ಇತ್ತೀಚೆಗೆ ಅದ್ಧೂರಿಯಾಗಿ ಸೀಮಂತ ಸಮಾರಂಭವನ್ನೂ ಸಹ ಮಾಡಲಾಗಿತ್ತು, ಚಂದನ್ ಗೌಡ ಮತ್ತು ನೇಹಾ ಗೌಡ ದಂಪತಿಗಳು ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದು, ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಶೇಷ ಫೋಟೊಗಳನ್ನು ಹಾಕಿ ಸಂಭ್ರಮಿಸುತ್ತಿದ್ದಾರೆ. ನೇಹಾ ಗೌಡ ಶಾಕುಂತಲೆ ಫೋಟೋ…
ಲೆಬನಾನ್‌ನಲ್ಲಿ ಇಸ್ರೇಲ್ ನಡೆಸಿದ ವಾಯು ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಜೊತೆಗೆ ಇರಾನ್‌ನ ಡೆಪ್ಯೂಟಿ ಕಮಾಂಡರ್ ಕೂಡ ಹತ್ಯೆ ಗೀಡಾಗಿದ್ದಾರೆ. ಬೈರುತ್‌ನಲ್ಲಿ ಇಸ್ರೇಲ್ ದಾಳಿಯಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ನ ಡೆಪ್ಯೂಟಿ ಕಮಾಂಡರ್ ಅಬ್ಬಾಸ್ ನಿಲ್ಫೊರೊಶನ್ ಕೂಡ ಸಾವನ್ನಪ್ಪಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಅಬ್ಬಾಸ್ ನಿಲ್ಫೊರೊಶನ್ ಬ್ರಿಗೇಡಿಯರ್ ಜನರಲ್ ಆಗಿದ್ದರೂ ಲೆಬನಾನ್‌ನಲ್ಲಿ ಕುಡ್ಸ್ ಫೋರ್ಸ್‌ನ ಕಮಾಂಡರ್ ಆಗಿದ್ದರು. ನಿಲ್ಫೊರೊಶನ್ ಅವರು IRGC ಯ ಕಾರ್ಯಾಚರಣೆಗಳ ಕಮಾಂಡ್ ಅನ್ನು ನೋಡಿಕೊಳ್ಳುತ್ತಿದ್ದರು. ಇದು ವಿವಿಧ ಮಿಲಿಟರಿ ಮತ್ತು ಭದ್ರತಾ ಕಾರ್ಯಾಚರಣೆಗಳಲ್ಲಿ ನೇರವಾಗಿ ತೊಡಗಿಸಿಕೊಂಡಿದೆ. ಇದು ವಿಶೇಷವಾಗಿ ಸಿರಿಯಾದಲ್ಲಿ ಮಿಲಿಟರಿ ಚಟುವಟಿಕೆಯನ್ನು ನಡೆಸಿತ್ತು. ಇಸ್ರೇಲಿ ವೈಮಾನಿಕ ದಾಳಿ ನಡೆದಾಗ ಅವರು ಶುಕ್ರವಾರ ನಸ್ರಲ್ಲಾ ಅವರೊಂದಿಗೆ ಬೈರುತ್‌ನಲ್ಲಿದ್ದರು. ನಸ್ರಲ್ಲಾ ಜೊತೆ ಅಬ್ಬಾಸ್ ಕೂಡ ಹತ್ಯೆಗೀಡಾಗಿದ್ದಾರೆ. ಲೆಬನಾನ್‌ನಲ್ಲಿ ಇಸ್ರೇಲ್ ಸೇನೆಯ ದಾಳಿಗೆ ಇರಾನ್ ಪ್ರತಿಕ್ರಿಯಿಸಿದ್ದು,. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಇಸ್ರೇಲ್ ಎಂದಿಗೂ ಹೆಜ್ಬುಲ್ಲಾವನ್ನು ತೊಡೆದುಹಾಕಲು ಸಾಧ್ಯವಾಗುವುದಿಲ್ಲ. ಆದಾಗ್ಯೂ, ಖಮೇನಿ ಹೇಳಿಕೆಯಲ್ಲಿ ಹಸನ್…
ಭಾರಿ ಮಳೆಯಿಂದ ಉಂಟಾದ ಪ್ರವಾಹ ಹಾಗೂ ಭೂಕುಸಿತದಿಂದ ನೇಪಾಳ ರಾಷ್ಟ್ರ ತತ್ತರಿಸಿ ಹೋಗಿದೆ. ಘಟನೆಯಲ್ಲಿ ಇದುವರೆಗೂ 112 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆ ಮುಂದುವರೆದಿದೆ. ನಿರಂತರ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಿಂದ ನೇಪಾಳದಲ್ಲಿ ಕನಿಷ್ಠ 112 ಜನ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದು, ನಿರಂತರವಾಗಿ ಮಳೆ ಸುರಿಯುತ್ತಿದ್ದು, ನೇಪಾಳದ ಕೆಲವು ಭಾಗಗಳು ಜಲಾವೃತಗೊಂಡಿವೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈವರೆಗೂ 112 ಮಂದಿ ಸಾವಿಗೀಡಾಗಿದ್ದಾರೆ. ಅವರಲ್ಲಿ 34 ಮಂದಿ ರಾಜಧಾನಿ ಕಠ್ಮಂಡು ಕಣಿವೆಯಲ್ಲಿಯೇ ಮೃತಪಟ್ಟಿದ್ದಾರೆ. 36 ಜನ ಗಾಯಗೊಂಡಿದ್ದಾರೆ’ ಎಂದು ನೇಪಾಳ ಪೊಲೀಸರ ಉಪ ವಕ್ತಾರ ಬಿಷ್ಣೋ ಅಧಿಕಾರಿ ತಿಳಿಸಿದ್ದಾರೆ. ಪ್ರವಾಹದಲ್ಲಿ ಒಟ್ಟು 44 ಮಂದಿ ನಾಪತ್ತೆಯಾಗಿದ್ದು, ಸಾವಿರಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ದೇಶದಾದ್ಯಂತ 44 ಸ್ಥಳಗಳಲ್ಲಿ ಪ್ರಮುಖ ಹೆದ್ದಾರಿಗಳನ್ನು ಬಂದ್ ಮಾಡಲಾಗಿದೆ. ಕಠ್ಮಂಡುವಿನಲ್ಲಿ ಸುಮಾರು 226 ಮನೆಗಳು ಮುಳುಗಡೆಯಾಗಿವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸುಮಾರು 3,000 ಭದ್ರತಾ ಸಿಬ್ಬಂದಿಯ…
ಲೆಬನಾನ್‌ನ ಹಮಾಸ್ ಬೆಂಬಲಿಸ್ತಿರೋ ಹಿಜ್ಬುಲ್ಲಾ ಉಗ್ರರ ಮೇಲೆ ಇಸ್ರೇಲ್ ಬಾಂಬ್ ದಾಳಿ ನಡೆಸಿದ್ದು ದಾಳಿಯಲ್ಲಿ ಹಿಜ್ಬುಲ್ಲಾದ ದೀರ್ಘಕಾಲದ ಮುಖ್ಯಸ್ಥ ಶೇಖ್ ಹಸನ್ ನಸ್ರಲ್ಲಾ ಮೃತಪಟ್ಟಿದ್ದಾಗಿ ಇಸ್ರೇಲ್ ಘೋಷಿಸಿದೆ. ನಸ್ರಲ್ಲಾ ಜೊತೆ ಆತನ ಪುತ್ರಿ ಝೈನಾಬ್ ನಸ್ರಲ್ಲಾ ಕೂಡ ಹತ್ಯೆಗೀಡಾಗಿದ್ದಾರೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕಳೆದ 32 ವರ್ಷಗಳಿಂದ ಉಗ್ರ ಹಿಜ್ಬುಲ್ಲಾ ಸಂಘವನ್ನು ಶೇಖ್ ಹಸನ್ ನಸ್ರಲ್ಲಾ ನಡೆಸುತ್ತಿದ್ದಾರೆ. ಇದೀಗ ಹತ್ಯೆಗೀಡಾಗಿದ್ದು ಮುಂದೆ ಹಿಜ್ಬುಲ್ಲಾ ಗುಂಪಿನ ಮುಂದಾಳತ್ವ ಯಾರು ವಹಿಸುತ್ತಾರೆ ಎಂಬ ಆತಂಕ ಶುರುವಾಗಿದೆ. ಈ ಬಗ್ಗೆ ಇಸ್ರೇಲ್ ಸೇನೆ ಟ್ವೀಟ್ ಮಾಡಿದ್ದು, `ಹಸನ್ ನಸ್ರಲ್ಲಾ ಇನ್ನು ಮುಂದೆ ಜಗತ್ತನ್ನು ಭಯಭೀತಗೊಳಿಸಲು ಸಾಧ್ಯವಾಗುವುದಿಲ್ಲʼ ಅಂದಿದೆ. ಲೆಬನಾನ್ ರಾಜಧಾನಿ ಬೈರೂತ್‌ನ ದಕ್ಷಿಣದ ದಹಿಯೆಹ್‌ನಲ್ಲಿರುವ ಹಿಜ್ಬುಲ್ಲಾ ಕೇಂದ್ರ ಕಚೇರಿ ಮೇಲೆ ಇಸ್ರೇಲ್ 5 ಗಂಟೆಗಳ ವೈಮಾನಿಕ ದಾಳಿಯಲ್ಲಿ ಸುಮಾರು ಟನ್‌ಗಳಷ್ಟು ಸ್ಫೋಟಕ ಬಾಂಬ್‌ಗಳನ್ನು ಬಳಸಿದೆ. ಕಟ್ಟರ್ ಮೂಲಭೂತವಾದಿಯಾಗಿದ್ದ ನಸ್ರಲ್ಲಾ.. 1992ರಿಂದ ಹಿಜ್ಬುಲ್ಲಾದ ಮುಖ್ಯಸ್ಥನಾಗಿದ್ದು, ವಿಶ್ವದಲ್ಲಿ ಭಯೋತ್ಪಾದನೆಯನ್ನು ಪೋಷಿಸುತ್ತಿದ್ದ. ಹಿಜ್ಬುಲ್ಲಾ ಸಂಘಟನೆ ಸೇರಿದವರಿಗೆ…
ಅಬುಧಾಬಿಯಲ್ಲಿ ನಡೆಯುತ್ತಿರುವ ಐಫಾ ಅವಾರ್ಡ್ಸ್ 2024ಕ್ಕೆ ಇಂದು ತೆರೆ ಬೀಳಲಿದೆ. ಸೆಪ್ಟೆಂಬರ್ 27ರಿಂದ ಪ್ರಾರಂಭವಾಗಿರುವ ಐಫಾ ಅವಾರ್ಡ್ಸ್ 29ರ ವರೆಗೆ ನಡೆಯಲಿದೆ. ಭಾರತದ ಐದು ಪ್ರಮುಖ ಚಿತ್ರರಂಗಳ ಗಣ್ಯರು ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದ ಅತ್ಯುತ್ತಮ ಸಿನಿಮಾ, ತಂತ್ರಜ್ಞರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಆದರೆ ಕನ್ನಡದ ಎರಡೇ ಎರಡು ಸಿನಿಮಾಗಳಿಗೆ ಮಾತ್ರವೇ ಐಫಾ ಪ್ರಶಸ್ತಿ ನೀಡಲಾಗಿದೆ. ಎಲ್ಲ ವಿಭಾಗದ ಪ್ರಶಸ್ತಿಯನ್ನೂ ಕನ್ನಡದ ಕೇವಲ ಎರಡೇ ಸಿನಿಮಾಗಳಿಗೆ ಕೊಟ್ಟು ಐಫಾ ಕೈತೊಳೆದುಕೊಂಡಿದೆಯಾ ಎಂಬ ಅನುಮಾನ ಶುರುವಾಗಿದೆ. ಯಾಕೆಂದರೆ 2023 ರಲ್ಲಿ ಕನ್ನಡದಲ್ಲಿ ಸಾಕಷ್ಟ ಸಿನಿಮಾಗಳು ಬಿಡುಗಡೆ ಆಗಿದ್ದು ಹಿಟ್ ಆಗಿವೆ. ಆದ್ರೆ ಅದ್ಯಾವುದಕ್ಕೂ ಪರಿಗಣನೆಗೆ ತೆಗೆದುಕೊಳ್ಳದ ಐಫಾ ಕಾಟೇರಾ ಹಾಗೂ ಸಪ್ತ ಸಾಗರದಾಚೆ ಸಿನಿಮಾವನ್ನು ಮಾತ್ರ ಪರಿಗಣಿಸಿದೆಯಾ. ಇಲ್ಲಿದೆ ನೋಡಿ ಐಫಾ ನೀಡಿರುವ ಪ್ರಶಸ್ತಿಗಳ ಪಟ್ಟಿ ಅತ್ಯುತ್ತಮ ಸಿನಿಮಾ: ಕಾಟೇರ ಅತ್ಯುತ್ತಮ ನಟ: ರಕ್ಷಿತ್ ಶೆಟ್ಟಿ (ಸಪ್ತ ಸಾಗರದಾಚೆ…
ಬಿಗ್ ಬಾಸ್ ಸೀಸನ್ 11ಕ್ಕೆ ಇನ್ನೆನ್ನೂ ಕೆಲವೇ ಗಂಟೆಗಳು ಮಾತ್ರವೇ ಭಾಕಿ ಇದೆ. ಇಂದು ಸಂಜೆ 6 ಗಂಟೆಗೆ ಗ್ರ್ಯಾಂಡ್ ಓಪನಿಂಗ್ ಆಗಲಿದೆ. ಈ ಮಧ್ಯೆ ಬಿಗ್ ಬಾಸ್ ಮನೆಗೆ ಹೋಗುವ ಐವರು ಸ್ಪರ್ಧಿಗಳ ಹೆಸರು ರಿವೀಲ್ ಆಗಿದೆ. ಅವರ್ಲಿ 4ನೇ ಸ್ಪರ್ಧಿಯಾಗಿ ಗೋಲ್ಡ್ ಸುರೇಶ್ ದೊಡ್ಮನೆ ಒಳಗೆ ಎಂಟ್ರಿಕೊಡ್ತಿದ್ದಾರೆ. ಮೂಲತಃ ಉತ್ತರ ಕರ್ನಾಟಕದವರಾದ ಗೋಲ್ಡ್ ಸುರೇಶ್ ಉದ್ಯಮಿ ಹಾಗೂ ರೈತರಾಗಿ ಗುರುತಿಸಿಕೊಂಡಿದ್ದಾರೆ. ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಇರುವ ಗೋಲ್ಡ್ ಸುರೇಶ್ ಚಿನ್ನದ ವ್ಯಾಪಾರಿಯಾಗಿಯೂ ಹೌದು. ಇದೀಗ ಮೊದಲ ಕ್ಯಾಮೆರಾ ಮುಂದೆ ಸುರೇಶ್ ಬಂದಿದ್ದಾರೆ. ಈ ವಿಚಾರ ರಾಜ ರಾಣಿ ಫಿನಾಲೆಯಲ್ಲಿ ರಿವೀಲ್ ಆಗಿದೆ. ಇಂದು ಸಂಜೆ ದೊಡ್ಮನೆಗೆ ಕಾಲಿಡಲಿದ್ದಾರೆ. ಕಳೆದ ಬಾರಿ ಮೈತುಂಬಾ ಚಿನ್ನ ಧರಿಸಿ ಬಿಗ್ಬಾಸ್ ಮನೆಗೆ ಹೋಗಿದ್ದ ವರ್ತೂರು ಸಂತೋಷ್, ಬಿಗ್ಬಾಸ್ ಮನೆಗೆ ಹೋದ ಬಳಿಕ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದರು. ಈಗ ಅದೇ ಮಾದರಿಯ ಸ್ಪರ್ಧಿಯೊಬ್ಬರನ್ನು ಆಯೋಜಕರು ಹುಡುಕಿ ತಂದಿದ್ದಾರೆ. ವರ್ತೂರು ಸಂತೋಷ್ ಮಾದರಿಯಲ್ಲಿಯೇ ಮೈಮೇಲೆ…
ಡ್ರಾಮಾ ಮಾಡ್ಕೊಂಡು, ವಿವಾದಗಳ ಮೂಲಕವೇ ಸದ್ದು ಮಾಡೋ ನಟಿ ರಾಖಿ ಸಾವಂತ್ ಬಿಗ್ ಬಾಸ್ ಮನೆಗೆ ಎಂಟ್ರಿಕೊಡ್ತಿದ್ದಾರೆ. ಈ ಹಿಂದೆ ಹಿಂದಿ ಬಿಗ್ ಬಾಸ್ ಶೋಗೆ ಆಗಮಿಸಿದ್ದ ರಾಖಿ ಸಾವಂತ್ ಈ ಭಾರಿ ಮರಾಠಿ ‘ಬಿಗ್ ಬಾಸ್ ಸೀಸನ್ 5’ಕ್ಕೆ ಆಗಮಿಸಿದ್ದಾರೆ. ರಿತೇಶ್ ದೇಶ್‌ಮುಖ್ ನಿರೂಪಣೆಯ ಮರಾಠಿ ಬಿಗ್ ಬಾಸ್‌ಗೆ ರಾಖಿ ಆಗಮಿಸಿದ್ದಾರೆ. ಈ ಕುರಿತ ಪ್ರೋಮೋವೊಂದನ್ನು ವಾಹಿನಿ ಹಂಚಿಕೊಂಡಿದೆ. ಇದರಲ್ಲಿ ನಟಿ ಡ್ಯಾನ್ಸ್ ಮಾಡುತ್ತಾ ಎಂಟ್ರಿ ಕೊಟ್ಟಿದ್ದು, ಹಲೋ ಬಿಗ್ ಬಾಸ್ ನಾನು ಮತ್ತೆ ಬಂದಿದ್ದೇನೆ ಎಂದಿದ್ದಾರೆ. ಬಳಿಕ ಸ್ಪರ್ಧಿ ನಿಕ್ಕಿ ತಂಬೋಲಿಗೆ ರಾಖಿ ಕ್ವಾಟ್ಲೆ ಕೊಟ್ಟಿದ್ದಾರೆ. ರಾಖಿ ಮಾತಿಗೆ ನಿಕ್ಕಿ ಮುಖ ಕಿವುಚಿಕೊಂಡಿದ್ದಾರೆ. ಒಟ್ನಲ್ಲಿ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರೋದು ಫ್ಯಾನ್ಸ್‌ಗೆ ಕುತೂಹಲ ಕೆರಳಿಸಿದೆ.