ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಸ್ ಸೀಸನ್ 11 ಆರಂಭವಾಗಿದೆ. ದೊಡ್ಮನೆ ಒಳಗೆ 17 ಮಂದಿ ಹೊಸ ಕಂಟೆಸ್ಟೆಂಟ್‌ಗಳು ಎಂಟ್ರಿ ಕೊಟ್ಟಿದ್ದಾರೆ. 17 ಸ್ಪರ್ಧಿಗಳಲ್ಲಿ ಒಬ್ಬೊಬ್ಬರದ್ದು ಒಂದೊಂದು ಇಂಟ್ರೆಸ್ಟಿಂಗ್ ಕಥೆ ಇದೆ.ದೊಡ್ಮನೆ ಒಳಗೆ ಕಾಲಿಟ್ಟಿರೋ ಪ್ರತಿಯೊಬ್ಬರಿಗೂ ನಾನೇ ವಿನ್ನರ್ ಆಗ್ಬೇಕು ಅನ್ನೋ ಆಸೆ ಇದೆ. ಈ ಮಧ್ಯೆ ಈ ಬಾರಿ ಬಿಗ್ ಬಾಸ್ ಮನೆಗೆ ಮೈತುಂಬ ಚಿನ್ನ ಸುರಿದುಕೊಂಡು ಬಂದಿರೋ ಗೋಲ್ಡ್ ಸುರೇಶ್ ಕುತೂಹಲ ಮೂಡಿಸಿದ್ದಾರೆ ಬಿಗ್ ಬಾಸ್ ಸೀಸನ್ 11ಕ್ಕೆ ಗೋಲ್ಡ್ ಸುರೇಶ್ ಎಂಟ್ರಿ ಕೊಟ್ಟ ಮೇಲೆ ಸಖತ್ ಟ್ರೋಲ್ ಆಗುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಂಗಾರದ ಮನುಷ್ಯನ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ತಮ್ಮ ಮೈ ಮೇಲಿನ ಬಂಗಾರದಿಂದಲೇ ಸುರೇಶ್ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದಾರೆ. ಮೈಮೇಲೆ ಕೋಟಿ ಕೋಟಿ ಚಿನ್ನದ ಒಡವೆಗಳನ್ನು ಹಾಕಿಕೊಂಡಿರೋ ಸುರೇಶ್ ಬಿಗ್ ಬಾಸ್ ಮನೆಯಲ್ಲಿ ಕೇವಲ 50 ಲಕ್ಷ ರೂಪಾಯಿ ಗೆಲ್ಲೋಕೆ ಬಂದಿದ್ದಾರೆ. ಉತ್ತರ ಕರ್ನಾಟಕ ಮೂಲದವರಾದ ಸುರೇಶ್…
Author: Author AIN
ತಿರುಪತಿ ಲಡ್ಡುಗೆ ಬಳಸಲಾಗುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿದೆ ಎಂಬ ವಿಚಾರ ಇಡೀ ದೇಶವನ್ನೇ ಬೆಚ್ಚಿ ಬೀಳಿಸುತ್ತಿದೆ. ತಿರುಮಲ ಲಡ್ಡು ವಿಚಾರದಲ್ಲಿ ಆಂಧ್ರ ಹಿಂದಿನ ಸರ್ಕಾರ ದೊಡ್ಡ ತಪ್ಪು ಮಾಡಿದೆ. ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಇರೋದು ಸಾಭೀತಾಗಿದೆ. ಈ ಮಧ್ಯೆ ತಿರುಮಲ ಲಡ್ಡು ಬಗ್ಗೆ ಮಾತನಾಡಿದ ಪ್ರತಿಯೊಬ್ಬರ ಮೇಲೂ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ವಾಗ್ದಾಳಿ ನಡೆಸ್ತಿದ್ದಾರೆ. ಇದ್ರೊಂದಿಗೆ ಲಡ್ಡು ವಿವಾದ ಸಂಪೂರ್ಣ ರಾಜಕೀಯ ಸ್ವರೂಪ ಪಡೆದುಕೊಂಡಿತ್ತು. ಈ ವಿಚಾರವಾಗಿ ನಾಯ್ಡು ಸರ್ಕಾರದ ವಿರುದ್ಧ ಸುಪ್ರೀಂ ಚಾಟಿ ಬೀಸಿತ್ತು. ಇದೀಗ ನಟ ಪ್ರಕಾಶ್ ರಾಜ್ ಕೂಡ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು. ಆಂದ್ರ ಪ್ರದೇಶದ ರಾಜ್ಯ ಸರ್ಕಾರದ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ತುಪ್ಪ ತಿರಸ್ಕೃತವಾಗಿದೆ ಎಂದು ಟಿಟಿಡಿ ಹೇಳಿಲ್ಲವೇ? ತಿರಸ್ಕರಿಸಿದ ನಂತರ ಅದನ್ನು ಬಳಸಲು ಸಾಧ್ಯವಿಲ್ಲವೇ ಎಂದು ಪೀಠವು ಸರ್ಕಾರದ ಪರವಾಗಿ ವಕೀಲರನ್ನು ಕೇಳಿತು. NDDB ಮಾತ್ರ ಏಕೆ?…
ಸ್ಯಾಂಡಲ್ ವುಡ್ ಸ್ಟಾರ್ ನಟ ಡಾಲಿ ಧನಂಜಯ ಸದ್ಯ ಮೈಸೂರಿನಲ್ಲಿ ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಬಿಡುವು ಮಾಡಿಕೊಂಡ ನಟ ದಸರಾದಲ್ಲಿ ಭಾಗಿ ಆಗಿರುವ ಮಾವುತರಿಗೆ ಲಿಡ್ಕರ್ ಚಪ್ಪಲಿಗಳನ್ನ ನೀಡಿದ್ದಾರೆ. ಧನಂಜಯ ಲಿಡ್ಕರ್‌ನ ರಾಯಭಾರಿಯಾಗಿದ್ದು, ಅದೇ ಕಾರಣದಿಂದ ಈ ಬಾರಿ ಮಾವುತರಿಗೆ ಲಿಡ್ಕರ್ ಬ್ರ್ಯಾಂಡ್ ನ ಚಪ್ಪಲಿ ಉಡಗೊರೆಯಾಗಿ ನೀಡಿದ್ದಾರೆ. ಇದೇ ವೇಳೆ ಡಾಲಿ ಆನೆಯ ಬಳಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಕೆಲ ಕಾಲ ಮಾವುತರು ಹಾಗೂ ಅರಣ್ಯ ಅಧಿಕಾರಿಗಳ ಬಳಿ ಆನೆಯ ಬಗ್ಗೆ ಕುತೂಹಲಕಾರಿ ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ. ತನ್ನದೇ ಹೆಸರಿನ ಆನೆಯನ್ನ ಕಂಡು ಧನಂಜಯ ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನೂ ಡಾಲಿ ಅರಸಿಕೆರೆ ಮೂಲದವರಾಗಿದರು ಕೂಡ ಮೈಸೂರಿನ ನಂಟನ್ನು ಹೆಚ್ಚಾಗಿ ಬೆಳಸಿಕೊಂಡಿದ್ದಾರೆ. ಅಂದ ಹಾಗೆ ಡಾಲಿ ಧನಂಜಯ್ ನಟನೆಯ ಜೊತೆಗೆ ನಿರ್ಮಾಣದಲ್ಲೂ ತೊಡಗಿಕೊಂಡಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆಯ ಮೂಲಕ ಹೊಸ ಹೊಸ ಪ್ರತಿಭೆಗಳಿಗೆ ಸಾಥ್ ನೀಡ್ತಿದ್ದಾರೆ.
ಇಸ್ರೋದ ಮಹತ್ವಾಕಾಂಕ್ಷೆಯ ‘ವೀನಸ್ ಆರ್ಬಿಟರ್ ಮಿಷನ್’ಗೆ ಅಧಿಕೃತವಾಗಿ ಸ್ವೀಡನ್ ಸೇರಿದೆ. ಕಳೆದ ವಾರ ಕೇಂದ್ರ ಸಚಿವ ಸಂಪುಟ ಈ ಕಾರ್ಯಾಚರಣೆಗೆ ಅನುಮೋದನೆ ನೀಡಿತ್ತು. ಸ್ವೀಡಿಷ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಫಿಸಿಕ್ಸ್ ಇಸ್ರೋಗೆ ವೀನಸ್ ನ್ಯೂಟ್ರಲ್ಸ್ ವಿಶ್ಲೇಷಕ ಉಪಕರಣಗಳನ್ನು ಒದಗಿಸಲಿದೆ ಎಂದು ವರದಿಯಾಗಿದೆ. ನ್ಯೂಟ್ರಲ್ಸ್ ವಿಶ್ಲೇಷಕ ಉಪಕರಣಗಳು ಹಗುರವಾದ, ಕಡಿಮೆ-ಶಕ್ತಿ ಹೊಂದಿವೆ. ಆದರೆ ಹೆಚ್ಚು ಸಾಮರ್ಥ್ಯದ ಎನರ್ಜಿಟಿಕ್ ನ್ಯೂಟ್ರಲ್ ಆಯ್ಟಮ್ ವಿಶ್ಲೇಷಕವಾಗಿದೆ. ಸೂರ್ಯ ಮತ್ತು ಶುಕ್ರನ ವಾತಾವರಣ ಮತ್ತು ಎಕ್ಸೋಸ್ಪಿಯರ್‌ನಿಂದ ಬರುವ ಚಾರ್ಜ್ಡ್ ಕಣಗಳ ನಡುವಿನ ಪರಸ್ಪರ ಕ್ರಿಯೆಯನ್ನು VNA ಅಧ್ಯಯನ ಮಾಡುತ್ತದೆ. ಶುಕ್ರದ ವಾತಾವರಣ ಮತ್ತು ಭೂವಿಜ್ಞಾನವನ್ನು ಅರ್ಥಮಾಡಿಕೊಳ್ಳಲು ಯೋಜನೆ ಸಹಾಯ ಮಾಡುತ್ತದೆ. ಮತ್ತು ಅದರ ದಟ್ಟ ವಾತಾವರಣವನ್ನು ತನಿಖೆ ಮಾಡುವ ಮೂಲಕ ಹೆಚ್ಚಿನ ಪ್ರಮಾಣದ ವೈಜ್ಞಾನಿಕ ಡೇಟಾ ಸಂಗ್ರಹಿಸುತ್ತದೆ. VOMಗಾಗಿ ಕೇಂದ್ರ ಸರ್ಕಾರ 1,236 ಕೋಟಿ ರೂಪಾಯಿ ನಿಧಿ ಮೀಸಲಿರಿಸಿದೆ. ಇದರಲ್ಲಿ 824 ಕೋಟಿ ರೂಪಾಯಿಯನ್ನು ಬಾಹ್ಯಾಕಾಶ ನೌಕೆಗಾಗಿ ಖರ್ಚು ಮಾಡಲಾಗುತ್ತದೆ. IRF 2004ದಿಂದ 2014ರವರೆಗೆ ಯುರೋಪಿಯನ್ ಸ್ಪೇಸ್ ಏಜೆನ್ಸಿಯ…
ದರ್ಶನ್ ಆದಷ್ಟು ಬೇಗ ಹೊರ ಬರಲಿ.ಮತ್ತೆ ಸಿನಿಮಾಗಳಲ್ಲಿ ತೊಡಗಿಕೊಳ್ಳಲಿ ಎಂದು ಅಭಿಮಾನಿಗಳು ಕಾಯ್ತಿದ್ದಾರೆ. ಇತ್ತ ಪತ್ನಿ ವಿಜಯಲಕ್ಷ್ಮಿ ಹೇಗಾದರು ಮಾಡಿ ಗಂಡನನ್ನು ಹೊರ ತರಬೇಕು ಎಂದು ಪ್ರಯತ್ನಿಸ್ತಿದ್ದಾರೆ. ಆದರೆ ಅಭಿಮಾನಿಗಳ ಹರಕೆ, ವಿಜಯಲಕ್ಷ್ಮಿ ಪ್ರಯತ್ನ ಯಾವುದು ಕೈಗೂಡುತ್ತಿಲ್ಲ. ದರ್ಶನ್ ಗೆ ಮತ್ತೆ ನಿರಾಸೆಯಾಗಿದ್ದು ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಲಾಗಿದೆ. ಬಳ್ಳಾರಿ ಜೈಲಿನಲ್ಲಿರುವ ದರ್ಶನ್ಗೆ ಇಂದು (ಸೆಪ್ಟೆಂಬರ್ 30) ಬೇಲ್ ಸಿಗಬಹುದು ಎಂದು ಆಪ್ತರು ನಿರೀಕ್ಷಿಸಿದ್ದರು. ಆದರೆ ಅವರ ಜಾಮೀನು ಅರ್ಜಿ ವಿಚಾರಣೆ ದಿನಾಂಕವನ್ನು ಮುಂದೂಡಲಾಗಿದೆ. ಅಕ್ಟೋಬರ್ 4ರಂದು ಬೇಲ್ ಅರ್ಜಿ ವಿಚಾರಣೆ ನಡೆಯಲಿದೆ. ವಾದ ಮಂಡನೆಗೆ ಕಾಲಾವಕಾಶ ಬೇಕು ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ 57ನೇ ಸಿಟಿ ಸಿವಿಲ್ ಕೋರ್ಟ್ ಅರ್ಜಿ ವಿಚಾರಣೆಯನ್ನು ಮುಂದೂಡಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಅಂತ್ಯವಾಗಿದೆ. ಚಾರ್ಜ್ಶೀಟ್ ಸಲ್ಲಿಕೆ ಆದ ಬಳಿಕ ಜಾಮೀನಿಗಾಗಿ ಅರ್ಜಿ ಸಲ್ಲಿಸಲಾಯಿತು. ಕೇಸ್ಗೆ ಸಂಬಂಧಿಸಿದಂತೆ ಕೆಲವು ಅನುಮಾನಗಳು ಇದ್ದಿದ್ದರಿಂದ ದರ್ಶನ್ ಪರ ವಕೀಲರು…
ನೇಪಾಳದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿದ ಭಾರಿ ಮಳೆಗೆ ಜನ ಜೀವನ ಅಸ್ತ ವ್ಯಸ್ಥವಾಗಿದೆ. ಸದ್ಯ ಮಳೆ ಕೊಂಚ ಕಡಿಮೆಯಾಗಿದ್ದು ಅವಶೇಷಗಳಿಂದ 192 ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಪರಿಹಾರ ಕಾರ್ಯಾಚರಣೆ ತಂಡ ತಿಳಿಸಿದೆ.. ಪೂರ್ವ ಹಾಗೂ ಮಧ್ಯ ನೇಪಾಳದ ಹಲವು ಪ್ರದೇಶಗಳು ಶುಕ್ರವಾರ ದಿಂದಲೂ ಮುಳುಗಡೆಯಾಗಿವೆ. ಕಳೆದ ಎರಡು ದಶಕದಲ್ಲಿ ನೇಪಾಳ ಎದುರಿಸಿದ ಅತಿದೊಡ್ಡ ಪ್ರಾಕೃತಿಕ ವಿಕೋಪ ಇದಾಗಿದೆ. ನೇಪಾಳದ ಹಲವು ಭಾಗಗಳಲ್ಲಿ ಪ್ರವಾಹ ಉಲ್ಬಣಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳು ಹಾನಿಗೀಡಾಗಿದ್ದು, ಸಂಪರ್ಕ ಕಡಿತದಿಂದಾಗಿ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದಾರೆ. ಪ್ರವಾಹ, ಭೂಕುಸಿತ, ತಗ್ಗು ಪ್ರದೇಶಗಳ ಮುಳುಗಡೆಯಿಂದಾಗಿ 31 ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ. 200 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯಾಡಳಿತ ಹೇಳಿದೆ. ಕಠ್ಮಂಡು ಕಣಿವೆಯಲ್ಲಿ ಒಟ್ಟು 43 ಮಂದಿ ಮೃತಪಟ್ಟಿದ್ದಾರೆ. ಕನಿಷ್ಠ 322 ಮನೆಗಳು ಹಾಗೂ 16 ಸೇತುವೆಗಳು ಹಾನಿಗೊಳಗಾಗಿವೆ. ಭದ್ರತಾ ಸಿಬ್ಬಂದಿಯು 4000 ಜನರನ್ನು ರಕ್ಷಿಸಿದ್ದಾರೆ. 20 ಸಾವಿರ ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ನೇಪಾಳದಂತಹ ದಕ್ಷಿಣ…
ಶ್ರೀಲಂಕಾ ಜಲ ಗಡಿಯಲ್ಲಿ ಮೀನುಗಾರಿಕೆ ಮಾಡಿದ ಆರೋಪದ ಮೇಲೆ 17 ಭಾರತೀಯ ಮೀನುಗಾರರನ್ನು ಅಲ್ಲಿನ ನೌಕಾಪಡೆ ಬಂಧಿಸಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ‘ಮನ್ನಾರ್ ದ್ವೀಪದ ಉತ್ತರ ಭಾಗದಲ್ಲಿ ಮೀನುಗಾರನ್ನು ಬಂಧಿಸಲಾಗಿದ್ದು, ಎರಡು ಮೀನುಗಾರಿಕಾ ದೋಣಿಯನ್ನು ವಶಕ್ಕೆ ಪಡೆಯಲಾಗಿದೆ. ಇದಕ್ಕಾಗಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು’ ಎಂದು ಶ್ರೀಲಂಕಾ ನೌಕಾಪಡೆ ಪ್ರಕಣೆಯಲ್ಲಿ ತಿಳಿಸಿದೆ. ಬಂಧಿತ 17 ಮೀನುಗಾರರನ್ನು ತಲೈಮನ್ನಾರ್‌ಗೆ ಕರೆದೊಯ್ಯಲಾಗಿದ್ದು, ಮುಂದಿನ ಕ್ರಮಕ್ಕಾಗಿ ಮನ್ನಾರ್ ಮೀನುಗಾರಿಕಾ ನಿರೀಕ್ಷಕರಿಗೆ ಹಸ್ತಾಂತರಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ವರ್ಷದ ಪ್ರಾರಂಭದಿಂದ ಇಲ್ಲಿಯವರೆಗೆ 413 ಭಾರತೀಯ ಮೀನುಗಾರರನ್ನು ಬಂಧಿಸಿರುವ ಶ್ರೀಲಂಕಾ ನೌಕಾಪಡೆ, 55 ದೋಣಿಗಳನ್ನು ವಶಕ್ಕೆ ಪಡೆದಿದೆ.
ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಗೆ ಅಂತ್ಯ ಹಾಡಿರುವ ಬ್ರಿಟನ್, ಇಂಗ್ಲೆಂಡ್‌ನ ಮಿಡ್‌ಲ್ಯಾಂಡ್ಸ್‌ನಲ್ಲಿರುವ ಕೊನೆಯ ಕಲ್ಲಿದ್ದಲು ವಿದ್ಯುತ್ ಸ್ಥಾವರವನ್ನು ಮುಚ್ಚಿದೆ. ಆ ಮೂಲಕ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯನ್ನು ಕೊನೆಗೊಳಿಸಿದ ಮೊದಲ ಜಿ7 ರಾಷ್ಟ್ರ ಎಂಬ ಹೆಗ್ಗಳಿಕೆಗೆ ಬ್ರಿಟನ್ ಪಾತ್ರವಾಗಿದೆ. 2015ರಲ್ಲಿ ಬ್ರಿಟನ್ ಹವಾಮಾನ ಬದಲಾವಣೆ ನಿಯಂತ್ರಿಸುವ ಗುರಿಯ ಮುಂದಿನ ಭಾಗವಾಗಿ ಕಲ್ಲಿದ್ದಲು ಸ್ಥಾವರಗಳನ್ನು ಮುಚ್ಚುವ ಯೋಜನೆಯನ್ನು ಘೋಷಿಸಿತ್ತು. ಆ ಸಮಯದಲ್ಲಿ ದೇಶದ ಸುಮಾರು ಶೇ 30ರಷ್ಟು ವಿದ್ಯುತ್ ಅನ್ನು ಕಲ್ಲಿದ್ದಲು ಸ್ಥಾವರಗಳಿಂದ ಉತ್ಪಾದನೆ ಮಾಡಲಾಗುತ್ತಿತ್ತು. ಆದರೆ ಕಳೆದ ವರ್ಷ ಕಲ್ಲಿದ್ದಲು ವಿದ್ಯುತ್ ಮೇಲಿನ ಅವಲಂಬನೆ ಶೇ1ಕ್ಕೆ ಕುಸಿದಿತ್ತು. 2035ರ ಒಳಗೆ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸುವ ಬಗ್ಗೆ ಈ ವರ್ಷ ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಸದಸ್ಯ ರಾಷ್ಟ್ರಗಳ ಇಂಧನ ಸಚಿವರು ಚರ್ಚಿಸಿದ್ದಾರೆ.
ತನ್ನನ್ನು ತಾನೇ ಮದುವೆಯಾಗುವ ಮೂಲಕ ಸುದ್ದಿಯಾಗಿದ್ದ ಟರ್ಕಿಶ್ ಟಿಕ್‌ಟಾಕ್ ಇನ್ಫ್ಲೂಯೆನ್ಸರ್ ಕುಬ್ರಾ ಆಯ್ಕುತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 26ರ ಹರೆಯದ ಕುಬ್ರಾ ಇಸ್ತಾನ್ ಬುಲ್ನ ಸುಲ್ತಾನ್‌ಬೇಲಿ ಜಿಲ್ಲೆಯ ಐಷಾರಾಮಿ ಅಪಾರ್ಟ್‌ಮೆಂಟ್ ಕಟ್ಟಡದ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಕೆಯ ಆತ್ಮಹತ್ಯೆಗೆ ಮುಂಚಿನ ದಿನಗಳಲ್ಲಿ, ಕುಬ್ರಾ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಬಗ್ಗೆ ಅನೇಕ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದರು. ಅವಳ ಸಾವಿಗೆ ಕೆಲವೇ ಗಂಟೆಗಳ ಮೊದಲು, ಆಕೆ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ತನ್ನ ತೂಕ ಕಡಿಮೆ ಆಗುತ್ತಿರುವ ಬಗ್ಗೆ, ಅದನ್ನು ನಿಯಂತ್ರಿಸಲು ತಾನು ಯಾವ ರೀತಿ ಕಷ್ಟಪಡುತ್ತಿದ್ದೇನೆ ಎಂಬುದರ ಬಗ್ಗೆ ಪೋಸ್ಟ್ ಮಾಡಿಕೊಂಡಿದ್ದರು. “ನಾನು ನನ್ನಿಂದಾದ ಶಕ್ತಿ ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ತೂಕ ಹೆಚ್ಚಾಗಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನಾನು ಪ್ರತಿದಿನ ಒಂದು ಕೆಜಿ ತೂಕ ಕಳೆದುಕೊಳ್ಳುತ್ತಿದ್ದೇನೆ. ನನಗೆ ಏನು ಮಾಡಬೇಕೆಂದು ತಿಳಿದಿಲ್ಲ. ನಾನು ತುರ್ತಾಗಿ ತೂಕವನ್ನು ಹೆಚ್ಚಿಸಬೇಕಾಗಿದೆ ಎಂದು ಅವರು ತಮ್ಮ ಕೊನೇ ಪೋಸ್ಟ್ ನಲ್ಲಿ ಹೇಳಿದ್ದಾರೆ. ತನ್ನ ಕೊನೆಯ ಟಿಕ್‌ಟಾಕ್…
ಕಂಗನಾ ರಣಾವತ್ ನಟನೆಯ ‘ಎಮರ್ಜೆನ್ಸಿ’ ಸಿನಿಮಾಗೆ ಸದ್ಯದಲ್ಲೇ ತೆರೆ ಕಾಣುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಪರಿಷ್ಕರಣಾ ಸಮಿತಿ ಸೂಚಿಸಿದ ಬದಲಾವಣೆಗಳನ್ನು ಮಾಡಲು ಎಮರ್ಜೆನ್ಸಿ ಸಿನಿಮಾದ ನಿರ್ಮಾಣ ಸಂಸ್ಥೆ ಒಪ್ಪಿಗೆ ಸೂಚಿಸಿದೆ. ಈ ಬಗ್ಗೆ ತಂಡದವರು ಬಾಂಬೆ ಹೈಕೋರ್ಟ್ಗೆ ಮಾಹಿತಿ ನೀಡಿದ್ದಾರೆ. ಸೋಮವಾರ ಎಮರ್ಜೆನ್ಸಿ ತಂಡ ಕೋರ್ಟ್ಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಗುರುವಾರ (ಅಕ್ಟೋಬರ್ 3) ಮುಂದಿನ ವಿಚಾರಣೆ ನಡೆಯಲಿದೆ. ಸೆನ್ಸಾರ್ ಮಂಡಳಿಯವರು ‘ಎಮರ್ಜೆನ್ಸಿ’ ನೋಡಿ ನಂತರ ಅದನ್ನು ಪರಿಷ್ಕರಣಾ ಸಮಿತಿಗೆ ವರ್ಗಾಯಿಸಿತ್ತು. ಅವರು ಸಿನಿಮಾಗೆ ಸೆನ್ಸಾರ್ ಪ್ರಮಾಣಪತ್ರ ನೀಡಲು ನಿರಕಾರಿಸಿದ್ದರು. ಜೊತೆಗೆ ಒಂದಷ್ಟು ಬದಲಾವಣೆ ಮಾಡಲು ಸೂಚನೆ ನೀಡಿದ್ದರು. ಆದರೆ, ಇದಕ್ಕೆ ತಂಡ ಸಿದ್ಧ ಇರಲಿಲ್ಲ. ಕೊನೆಗೆ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಈಗ ಕೋರ್ಟ್ಗೆ ತಂಡದವರು ಮಾಹಿತಿ ನೀಡಿದ್ದು, ಬದಲಾವಣೆಗೆ ಒಪ್ಪಿರೋದಾಗಿ ಹೇಳಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈಗಾಗಲೇ ಸಿನಿಮಾ ರಿಲೀಸ್ ಆಗಿರಬೇಕಿತ್ತು. ಆದರೆ, ಸೆನ್ಸಾರ್ ಪ್ರಮಾಣಪತ್ರ ಸಿಗದ ಕಾರಣ ಸಿನಿಮಾ ರಿಲೀಸ್ ದಿನಾಂಕ ವಿಳಂಬವಾಗಿದೆ. ಕೊನೆಗೂ ಸಿನಿಮಾ…