ಬಾಲಿವುಡ್ ಖ್ಯಾತ ನಟ ಜಾನ್ ಅಬ್ರಹಾಂ ತಮ್ಮದೇ ಬ್ರಾಂಡ್‌ನ ಮೋಟಾರ್ ಸೈಕಲ್ ಹೆಲ್ಮೆಟ್‌ಗಳನ್ನು ಬಿಡುಗಡೆ ಮಾಡಲು ಮುಂದಾಗಿದ್ದು ಈ ಸುದ್ದಿಯನ್ನು ಸ್ವತಃ ನಟ ಸ್ಪಷ್ಟಪಡಿಸಿದ್ದಾರೆ. ಈ ಪ್ರಾಡಕ್ಟ್ ಮೂಲಕ ಸುರಕ್ಷತೆಗೆ ಆದ್ಯತೆ ನೀಡುವುದು ನನ್ನ ಅಂತಿಮ ಗುರಿಯಾಗಿದೆ ಎಂದು ಹೇಳಿದ್ದಾರೆ. “ನನ್ನ ಉದ್ದೇಶ ತುಂಬಾ ಸರಳವಾಗಿದೆ. ನನ್ನ ಉದ್ದೇಶ ಸುರಕ್ಷತೆಯಾಗಿದೆ. ನಾನು ಉತ್ತಮವಾದ ಹೆಲ್ಮೆಟ್ ಖರೀದಿಸುವುದಕ್ಕಿಂತ ಸುರಕ್ಷಿತ ಹೆಲ್ಮೆಟ್ ಅನ್ನು ಪಡೆಯಲು ಸಾಧ್ಯವಿರುವ ಎಲ್ಲ ಪ್ರಮಾಣೀಕರಣ ನೀಡಲು ಯೋಚಿಸುತ್ತಿದ್ದೇನೆ‘‘ ಎಂದಿದ್ದಾರೆ. ಆಟೋಕಾರ್ ಇಂಡಿಯಾ ವರದಿಯ ಪ್ರಕಾರ, ಜಾನ್ ಅತ್ಯಾಸಕ್ತಿಯ ಮೋಟಾರ್ಸೈಕ್ಲಿಸ್ಟ್ ಮತ್ತು ಹೆಲ್ಮೆಟ್ ಅನ್ನು ತುಂಬಾ ಇಷ್ಟಪಡುತ್ತಾರೆ. ನನಗೆ ಹೆಲ್ಮೆಟ್ ಎಂದರೆ ತುಂಬಾ ಇಷ್ಟವಾಗಿದ್ದು, ಜನರು ಬಟ್ಟೆ ಕೊಳ್ಳುವ ರೀತಿಯಲ್ಲೇ ನಾನೂ ಹೆಲ್ಮೆಟ್ ಖರೀದಿಸುತ್ತೇನೆ ಎಂದಿದ್ದಾರೆ. ಉತ್ಪಾದನಾ ಪ್ರಕ್ರಿಯೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸ್ಪೇನ್ ಮತ್ತು ಇಟಲಿಯ ಕೆಲವು ಉನ್ನತ ಮೋಟಾರ್‌ಸೈಕಲ್ ಹೆಲ್ಮೆಟ್ ಕಾರ್ಖಾನೆಗಳಿಗೆ ಭೇಟಿ ನೀಡಿದ್ದೇನೆ ಎಂದು ಜಾನ್ ತಿಳಿಸಿದ್ದಾರೆ. ಹೆಲ್ಮೆಟ್ ಬಹು ಶೆಲ್ ಗಾತ್ರಗಳ ಬಳಕೆ ಒಳಗೊಂಡಂತೆ ಎಲ್ಲರಿಗೂ ಸೌಕರ್ಯಗಳಿಗೆ…
Author: Author AIN
ಅಮೆರಿಕದ ಆಗ್ನೇಯ ದಿಕ್ಕಿನಲ್ಲಿ ಸಂಭವಿಸಿದ ಹೆಲೆನ್ ಚಂಡಮಾರುತದಿಂದಾಗಿ ಜನ ಜೀವನ ಅಸ್ತವ್ಯಸ್ಥವಾಗಿದೆ. ಲಕ್ಷಾಂತರ ಜನರು ವಿದ್ಯುತ್ ಇಲ್ಲದೆ ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ. ಹಲವು ಕುಟುಂಬಗಳು ಪ್ರವಾಹದಲ್ಲಿ ಸಿಲುಕಿವೆ. ಘಟನೆಯಲ್ಲಿ ಇದುವರೆಗೂ 130 ಮಂದಿ ಮೃತಪಟ್ಟಿದ್ದು ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ದಕ್ಷಿಣ ಕೆರೊಲಿನಾ, ಜಾರ್ಜಿಯಾ, ಫ್ಲೋರಿಡಾ, ಉತ್ತರ ಕೆರೊಲಿನಾ, ವರ್ಜೀನಿಯಾ ಮತ್ತು ಟೆನ್ನೆಸ್ಸಿಯಲ್ಲಿ ಸಾವುಗಳು ಸಂಭವಿಸಿವೆ. ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಉತ್ತರ ಕೆರೊಲಿನಾದಲ್ಲಿ ಕನಿಷ್ಠ 36 ಜನರು ಸಾವನ್ನಪ್ಪಿದ್ದಾರೆ. ಸಲೂಡಾ ಕೌಂಟಿಯ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ದಕ್ಷಿಣ ಕೆರೊಲಿನಾದಲ್ಲಿ ಕನಿಷ್ಠ 25 ಮಂದಿ ಅಸುನೀಗಿದ್ದಾರೆ. ಜಾರ್ಜಿಯಾದಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ. ಇವರಲ್ಲಿ ಇಬ್ಬರು ಅಲಾಮೊದಲ್ಲಿ ಸುಂಟರಗಾಳಿಯಿಂದ ಸಾವನ್ನಪ್ಪಿದ್ದಾರೆ ಎಂದು ಗವರ್ನರ್ ಬ್ರಿಯಾನ್ ಕೆಂಪ್ ಅವರ ವಕ್ತಾರರು ತಿಳಿಸಿದ್ದಾರೆ. ಉತ್ತರ ಕೆರೊಲಿನಾದ ಬಂಕೊಂಬ್ ಕೌಂಟಿಯು ಆನ್‌ಲೈನ್ ಫಾರ್ಮ್ ಮೂಲಕ ಸುಮಾರು 600 ಕಾಣೆಯಾದ ಜನರ ಮಾಹಿತಿ ಪಡೆದಿದೆ ಎಂದು ಕೌಂಟಿ ಮ್ಯಾನೇಜರ್ ಅವ್ರಿಲ್ ಪಿಂಡರ್ ಭಾನುವಾರ…
ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗಿ ಬಂದ ಬಳಿಕ ಸಾಕಷ್ಟು ಜನರ ಜೀವನ ಬದಲಾಗಿದೆ. ಹಲವರಿಗೆ ಖ್ಯಾತಿ ಹೆಚ್ಚಾಗಿದ್ರೆ ಮತ್ತೊಂದಷ್ಟು ಮಂದಿ ಹಾಗೆಯೇ ಉಳಿದುಬಿಟ್ಟಿದ್ದಾರೆ. ಸದ್ಯ ಬಿಗ್ ಬಾಸ್ ಗೆ ಹೋಗಿ ಬಂದಿರೋ ಡ್ಯಾನ್ಸರ್ ಕಿಶನ್ ಬಿಳಗಲಿ ಸ್ಮಾಲ್ ಸ್ಕ್ರೀನ್ ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಡ್ಯಾನ್ಸರ್ ಕಿಶನ್ ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಆಕ್ಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ’ನಿನಗಾಗಿ’ ಧಾರವಾಹಿಯಲ್ಲಿ ವಿಭಿನ್ನ ಕ್ಯಾರೆಕ್ಟರ್ ಮಾಡ್ತಿದ್ದಾರೆ. ತಮ್ಮ ಪಾತ್ರದ ಮೂಲಕ ಜನರಿಗೆ ಹತ್ತಿರವಾಗಿರೋ ಕಿಶನ್ ಇದೀಗ ಡಿಫರೆಂಟ್ ಲುಕ್ ನಲ್ಲಿ ಭರ್ಜರಿ ಫೋಟೋ ಶೂಟ್ ಮಾಡಿಸಿದ್ದಾರೆ. ‘ನಿನಗಾಗಿ’ ಧಾರವಾಹಿಯಲ್ಲಿ ವಿಲನ್ ರೋಲ್ ಮಾಡ್ತಿರುವ ಕಿಶನ್ ಬಿಳಗಲಿ ಫೋಟೋ ಶೂಟ್ ನಲ್ಲಿ ಡಾನ್ ರೀತಿ ಫೋಸ್ ನೀಡಿದ್ದಾರೆ. ಈ ಲುಕ್ ಯಾವ ಸೀರಿಯಲ್‌ಗೆ ಅನ್ನೋದು ಗೊತ್ತಿಲ್ಲ. ಆದರೆ, ಇದು ಸೂಪರ್ ಆಗಿದ್ದು, ರೆಟ್ರೋ ಫೀಲ್ ನೀಡುತ್ತಿದೆ. ಹಾಗೆ ಈ ಲುಕ್ ನೋಡಿದವ್ರು ಇದು ನಿನಗಾಗಿ ಸೀರಿಯಲ್ ಲುಕ್ಕಾ ಅನ್ನೋ ಪ್ರಶ್ನೆ ಕೇಳಿದಂತೇನೂ…
ಇಂದು ಮುಂಜಾನೆ ನಟ ಗೋವಿಂದ್ ಅವರ ಕಾಲಿಗೆ ಅವರದ್ದೆ ಗನ್ ನಿಂದ ಫೈರ್ ಆಗಿದೆ. ಗೋವಿಂದ್ ಪರವಾನಿಗೆ ಹೊಂದಿರುವ ಗನ್ ನಿಂದ ಮಿಸ್ ಫೈಯರ್ ಆಗಿದೆ. ಅವರನ್ನು ಮುಂಬೈನ ಅಂಧೇರಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಘಟನೆ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ಇದ್ದ ಆಂತಕ ದೂರ ಆಗಿದೆ. ‘ನಿಮ್ಮ ಆಶೀರ್ವಾದ, ತಂದೆ ತಾಯಿ ಆಶೀರ್ವಾದ, ದೇವರ ಆಶೀರ್ವಾದದಿಂದ ಆರೋಗ್ಯವಾಗಿದ್ದೇನೆ. ಬೆಳಿಗ್ಗೆ ಗುಂಡು ಬಿದ್ದಿತ್ತು. ಅದನ್ನು ತೆಗೆಯಲಾಗಿದೆ. ಆಸ್ಪತ್ರೆಯ ವೈದ್ಯರಿಗೆ ಧನ್ಯವಾದ ಹೇಳುತ್ತೇನೆ. ನಿಮ್ಮ ಪ್ರಾರ್ಥನೆಗಾಗಿ ಧನ್ಯವಾದ’ ಎಂದಿದ್ದಾರೆ ನಟ ಗೋವಿಂದ. ಗೋವಿಂದ ಅವರು ಇಂದು ಕೋಲ್ಕತ್ತ ತೆರಳುವವರಿದ್ದರು. ಮುಂಜಾನೆ 5 ಗಂಟೆ ಸುಮಾರಿಗೆ ಅವರು ರೆಡಿ ಆಗುವಾಗ ಕೈಯಲ್ಲಿದ್ದ ಗನ್ ಕೈ ಜಾರಿದೆ. ಆಗ ಆಕಸ್ಮಿಕವಾಗಿ ಬುಲೆಟ್ ಫೈಯರ್ ಆಗಿದೆ. ಇದರಿಂದ ಅವರ ಕಾಲಿಗೆ ಬುಲೆಟ್ ತಾಗಿದೆ. ಬುಲೆಟ್ ಶಬ್ದ ವರದಿ ಆದ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ…
ಬಾಲಿವುಡ್ ಖ್ಯಾತ ನಟ ಗೋವಿಂದ್ ತಮ್ಮದೇ ಗನ್ನಿಂದ ಕಾಲಿಗೆ ಶೂಟ್ ಮಾಡಿಕೊಂಡಿದ್ದು ಸದ್ಯ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಟನಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಇದು ಆಕಸ್ಮಿಕವಾಗಿ ನಡೆದಿರೋ ಘಟನೆ. ಗನ್ನಿಂದ ಫೈಯರ್ ಆದ ಬುಲೆಟ್ , ಅವರ ಕಾಲಿಗೆ ತಾಗಿದೆ. ಮುಂಜನೆ 5 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಅವರನ್ನು ಅಂಧೇರಿಯ ಕೃತಿ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಗುಂಡಿನ ಶಬ್ದ ಕೇಳಿದ ಬಳಿಕ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಸದ್ಯ ಗೋವಿಂದ ಅವರ ಗನ್ನ ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ. ‘ನಟ ಹಾಗೂ ಶಿವಸೇನಾ ಮುಖ್ಯಸ್ಥ ಗೋವಿಂದ ಕೋಲ್ಕತ್ತಾ ತೆರಳಲು ರೆಡಿ ಆಗುತ್ತಿದ್ದರು. ಅವರು ತಮ್ಮ ಪರವಾನಗಿ ಗನ್ನ ಇಟ್ಟುಕೊಳ್ಳುತ್ತಿದ್ದರು. ಅದು ಅವರ ಕೈ ತಪ್ಪಿದ್ದು, ಬುಲೆಟ್ ಸಿಡಿದಿದೆ. ಅವರ ಕಾಲಿಗೆ ಗುಂಡು ತಾಗಿದೆ. ವೈದ್ಯರು ಬುಲೆಟ್ನ ತೆಗೆದಿದ್ದಾರೆ.…
ಪಾಕಿಸ್ತಾನಕ್ಕೆ ಭೇಟಿ ನೀಡುವ ಭಾರತೀಯ ಸಿಖ್ಖರಿಗೆ ಭಾರತದ ಕರೆನ್ಸಿ ಬದಲಿಗೆ ಅಮೆರಿಕದ ಡಾಲರ್ ಬಳಸುವಂತೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಕಾರವು ಸಲಹೆ ನೀಡಿದೆ. ‘ಪಾಕಿಸ್ತಾನದಲ್ಲಿರುವ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಭಾರತೀಯ ಸಿಖ್ಖರಿಗೆ ಪ್ರಸ್ತುತ ವಿನಿಮಯ ದರಕ್ಕಿಂತ ಕಡಿಮೆ ಕರೆನ್ಸಿ ನೀಡುವ ಮೂಲಕ ಶೋಷಣೆ ಮಾಡಲಾಗುತ್ತಿದೆ ಎಂದು ನಮಗೆ ಹಲವು ದೂರುಗಳು ಬಂದಿವೆ’ ಎಂದು ಪಂಜಾಬ್‌ನ ಮೊದಲ ಸಿಖ್ ಮಂತ್ರಿ ರಮೇಶ್ ಸಿಂಗ್ ಅರೋರಾ ಹೇಳಿದರು. ಅರೋರಾ ಅವರು ‘ಪಾಕಿಸ್ತಾನದ ಸಿಖ್ ಗುರುದ್ವಾರ ಪ್ರಬಂಧಕ ಕಮಿಟಿ’ಯ ಅಧ್ಯಕ್ಷರೂ ಆಗಿದ್ದು, ಪಾಕಿಸ್ತಾನಕ್ಕೆ ಭೇಟಿ ನೀಡುವ ಭಾರತೀಯ ಸಿಖ್ಖರು ಸೌಲಭ್ಯಗಳಿಗಾಗಿ ಯಾವುದೇ ಹೆಚ್ಚುವರಿ ಹಣವನ್ನು ನೀಡುವ ಅಗತ್ಯವಿಲ್ಲ ಎಂದಿದ್ದಾಎರ. ‘ಗುರುನಾನಕ್ 555ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ನವೆಂಬರ್ 14ರಂದು ಹೆಚ್ಚಿನ ಸಂಖ್ಯೆಯ ಭಾರತೀಯರು ಪಾಕಿಸ್ತಾನಕ್ಕೆ ಆಗಮಿಸಲಿದ್ದಾರೆ’ ಎಂದು ಅವರು ಹೇಳಿದರು.
ಪ್ರವಾಸಿಗರು, ನುರಿತ ಕೆಲಸಗಾರರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಭಾರತೀಯರಿಗೆ ಅಮೆರಿಕವು ಹೆಚ್ಚುವರಿಯಾಗಿ 2.5 ಲಕ್ಷ ಮಂದಿಗೆ ವೀಸಾ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗೆ ಬಿಡುಗಡೆ ಮಾಡಲಾದ ವೀಸಾ ವಿತರಣೆಯ ಹೊಸ ಸ್ಲಾಟ್‌ಗಳು ಭಾರತೀಯ ಅರ್ಜಿದಾರರಿಗೆ ಸಕಾಲಿಕವಾಗಿ ಸಂದರ್ಶನಕ್ಕೆ ಹಾಜರಾಗಲು ನೆರವಾಗಲಿವೆ. ಅಲ್ಲದೆ, ಉಭಯ ದೇಶಗಳ ಬಾಂಧವ್ಯ ವೃದ್ಧಿಯನ್ನು ಸುಗಮಗೊಳಿಸಲಿದೆ ಎಂದು ಅಮೆರಿಕದ ರಾಯಭಾರ ಕಚೇರಿ ತಿಳಿಸಿದೆ. ‘ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಜೋ ಬೈಡನ್ ಅವರು ಉಭಯ ದೇಶಗಳ ನಡುವಿನ ವೀಸಾ ಪ್ರಕ್ರಿಯೆಯನ್ನು ಸುಧಾರಿಸಲು ಮತ್ತು ಚುರುಕುಗೊಳಿಸಲು ಮಹತ್ವಾಕಾಂಕ್ಷೆಯ ಗುರಿ ಹೊಂದಿದ್ದಾರೆ. ರಾಯಭಾರ ಕಚೇರಿಯಲ್ಲಿನ ನಮ್ಮ ಕಾನ್ಸುಲರ್ ತಂಡಗಳು ಮತ್ತು ನಾಲ್ಕು ದೂತಾವಾಸಗಳು, ಹೆಚ್ಚುತ್ತಿರುವ ವೀಸಾ ಬೇಡಿಕೆಯನ್ನು ಈಡೇರಿಸಲು ಅವಿರತವಾಗಿ ಕೆಲಸ ಮಾಡುತ್ತಿವೆ’ ಎಂದು ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಹೇಳಿದ್ದಾರೆ.
ಬೈರುತ್ ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಮುಖಂಡ ಹಸನ್ ನಸ್ರುಲ್ಲಾರನ್ನು ಹತ್ಯೆ ಮಾಡಲಾಗಿದೆ. ನಸ್ರುಲ್ಲಾ ಹತ್ಯೆಗೆ ಅಮೆರಿಕ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಇಸ್ರೇಲ್ ಬಳಸಿದೆ ಎಂದು ಅಮೆರಿಕದ ಸೆನೆಟರ್ ಮಾರ್ಕ್ ಕೆಲ್ಲಿಯನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ. ಬಂಕರ್ ಬಸ್ಟರ್ಸ್(ಬಂಕರ್ ಸ್ಫೋಟಿಸುವ) ಮಾರ್ಕ್ 84 ಶ್ರೇಣಿಯ 900 ಕಿ.ಗ್ರಾಂ. ಬಾಂಬ್‍ಗಳನ್ನು ಕಳೆದ ವಾರ ಇಸ್ರೇಲ್ ವಾಯುಪಡೆ ಹಿಜ್ಬುಲ್ಲಾ ಪ್ರಧಾನ ಕಚೇರಿಯ ಮೇಲೆ ಹಾಕಿದೆ. ಈಗ ನಡೆಯುತ್ತಿರುವ ಸಂಘರ್ಷದಲ್ಲಿ ನಿರ್ದೇಶಿತ ಶಸ್ತ್ರಾಸ್ತ್ರಗಳು, ಜೆಡಿಎಎಂಗಳನ್ನು ಹೆಚ್ಚು ಬಳಸಲಾಗುತ್ತಿರುವುದರಿಂದ ಈ ಶಸ್ತ್ರಾಸ್ತ್ರ ಪೂರೈಕೆಯನ್ನು ನಾವು ಮುಂದುವರಿಸುತ್ತೇವೆ ಎಂದು ಶಸ್ತ್ರಾಸ್ತ್ರ ಸೇವೆಗಳಿಗೆ ಸಂಬಂಧಿಸಿದ ಅಮೆರಿಕ ಸಂಸತ್‍ನ ಉಪಸಮಿತಿ ಅಧ್ಯಕ್ಷ ಮಾರ್ಕ್ ಕೆಲ್ಲಿ ಹೇಳಿದ್ದಾರೆ. ಜೆಡಿಎಎಂಗಳು ಅನಿರ್ದೇಶಿತ ಬಾಂಬ್‍ಗಳನ್ನು ನಿರ್ದೇಶಿತ ಬಾಂಬ್‍ಗಳಾಗಿ ಪರಿವರ್ತಿಸುತ್ತದೆ. ದೀರ್ಘಕಾಲದಿಂದಲೂ ಇಸ್ರೇಲ್‍ನ ಮಿತ್ರನಾಗಿರುವ ಅಮೆರಿಕ ಆ ದೇಶಕ್ಕೆ ಅತೀ ಹೆಚ್ಚು ಶಸ್ತ್ರಾಸ್ತ್ರ ಪೂರೈಸುತ್ತಿದೆ. ನಸ್ರುಲ್ಲಾ ಹತ್ಯೆಗೆ ದಾಳಿ ನಡೆಸುವುದಕ್ಕೂ ಮುನ್ನ ಇಸ್ರೇಲ್ ಮಾಹಿತಿ ನೀಡಿಲ್ಲ. ಬಾಂಬ್ ದಾಳಿಗೆ ಕೆಲ ಕ್ಷಣಗಳ ಮೊದಲು ಅಧ್ಯಕ್ಷ ಬೈಡನ್‍ಗೆ…
‘ಬಿಗ್ ಬಾಸ್ ಕನ್ನಡ ಸೀಸನ್ 11’ ಆರಂಭಗೊಂಡು ಒಂದು ದಿನವೂ ಕಳೆದಿಲ್ಲ. ಅಷ್ಟರಲ್ಲಿ ಮನೆ ಮಂದಿ ಕಿತ್ತಾಡಿಕೊಳ್ಳಲು ಶುರುಮಾಡಿದ್ದಾರೆ. ಬಿಸಿನೀರು ಹಾಗೂ ತಣ್ಣೀರಿನ ವಿಚಾರಕ್ಕೆ ಮನೆ ಮಂದಿ ಕಿತ್ತಾಡಿಕೊಂಡಿದ್ದು ಇದನ್ನ ನೋಡಿದರೆ ಕಳೆದ ಸೀಸನ್ ಮತ್ತೆ ರಿಪೀಟ್ ಆಗುತ್ತಾ ಎಂಬ ಅನುಮಾನ ಶುರುವಾಗಿದೆ. ‘ಬಿಗ್ ಬಾಸ್’ ಸೀಸನ್ 11ಗೆ 17 ಸ್ಪರ್ಧಿಗಳು ಎಂಟ್ರಿ ಪಡೆದಿದ್ದಾರೆ. ಅನುಷಾ ರೈ, ಧರ್ಮಕೀರ್ತಿರಾಜ್, ಲಾಯರ್ ಜಗದೀಶ್, ಭವ್ಯಾ ಗೌಡ, ಯಮುನಾ ಶ್ರೀನಿಧಿ, ಧನರಾಜ್ ಆಚಾರ್, ಗೌತಮಿ ಜಾಧವ್, ಶಿಶಿರ್, ತ್ರಿವಿಕ್ರಂ, ಹಂಸ, ಮಾನಸಾ, ಗೋಲ್ಡ್ ಸುರೇಶ್, ಐಶ್ವರ್ಯಾ ಸಿಂಧೋಗಿ, ಚೈತ್ರಾ ಕುಂದಾಪುರ್, ಉಗ್ರಂ ಮಂಜು, ರಂಜಿತ್ ಕುಮಾರ್, ಮೋಕ್ಷಿತಾ ಪೈ, ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಇದರಲ್ಲಿ ಒಂದಷ್ಟು ಮಂದಿ ಸ್ವರ್ಗದಲ್ಲಿದ್ದರೆ ಮತ್ತೊಂದಷ್ಟು ಮಂದಿ ನರಕದಲ್ಲಿ ಇದ್ದಾರೆ. ನರಕದಲ್ಲಿ ಇರೋರಿಗೆ ಬಿಸಿನೀರು ಬೇಕಾಗಿದೆ. ಇದನ್ನು ಸೌಕರ್ಯ ಎಂದು ಸ್ವರ್ಗ ನಿವಾಸಿಗಳು ಪರಿಗಣಿಸಿದ್ದಾರೆ. ಹೀಗಾಗಿ, ಬಿಸಿ ನೀರನ್ನು ಕೊಡೋಕೆ ಅವರು ಇಷ್ಟಪಡುತ್ತಿಲ್ಲ. ಇದರಿಂದ ಇಬ್ಬರ ಮಧ್ಯೆ ಕಿತ್ತಾಟ…
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಲೈವ ಆರೋಗ್ಯ ಸ್ಥಿತಿ ಸದ್ಯ ಸ್ಥಿರವಾಗಿದೆ ಎಂಬ ಆಸ್ಪತ್ರೆ ಮೂಲಗಳು ತಿಳಿಸಿವೆ. ನೆಲ್ಸನ್ ದಿಲೀಪ್ಕುಮಾರ್ ಅವರ ‘ಜೈಲರ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ವೆಟ್ಟೈಯನ್ ಸಿನಿಮಾದ ಬಿಡುಗಡೆಯ ಹಂತದಲ್ಲಿದ್ದಾರೆ. ಸದ್ಯ ರಜನಿಕಾಂತ್ಗೆ ಹೊಟ್ಟೆ ನೋವು ಕಾಡಿದೆ. ಅದರಿಂದ ಬಳಲುತ್ತಿದ್ದ ನಟ ಆಸ್ಪತ್ರೆ ಸೇರಿದ್ದಾರೆ. ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ ಸಾಯಿ ಸತೀಶ್ ಅವರ ಮಾರ್ಗದರ್ಶನದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಜನಿಕಾಂತ್ಗೆ ಕಾರ್ಡಿಯಾಕ್ ಕ್ಯಾಥ್ ಕ್ಯಾಬ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗುತ್ತಿದೆ. ಸದ್ಯ ತಲೈವಾ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಆಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಆಸ್ಪತ್ರೆಗೂ ದಾಖಲಾಗುವುದಕ್ಕೂ ಮುನ್ನ ರಜನಿಕಾಂತ್ ಮುಂಬರುವ ವೆಟ್ಟೈಯನ್ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಅಂದಹಾಗೆಯೇ ಇದು ಆ್ಯಕ್ಷನ್ ಪ್ಯಾಕ್ಡ್ ಮನರಂಜನೆಯ ಸಿನಿಮಾವಾಗಿದ್ದು, ಅಕ್ಟೋಬರ್ 10ರಂದು ರಿಲೀಸ್ ಆಗಲಿದೆ.