Author: Author AIN

ಹುಬ್ಬಳ್ಳಿ; ಬೆಳಗಾವಿಯ ಅನಗೋಳ ವೃತ್ತದಲ್ಲಿ ಸ್ಥಾಪಿಸಿರುವ ಛತ್ರಪತಿ ಸಂಭಾಜಿ ಅವರ ಪ್ರತಿಮೆಯನ್ನು ನಾಳೆ ಅನಾವರಣಗೊಳಿಸಲು ಎಲ್ಲಾ ಸಿದ್ಧತೆಗಳು ನಡೆದಿರುವಾಗ ರಾಜ್ಯ ಸರ್ಕಾರ ಅಡ್ಡಗಾಲು ಹಾಕಿರುವುದು ಖಂಡನೀಯ.ಈವರೆಗೂ ಯಾವುದೇ ಮೂರ್ತಿಯ ನಿರ್ಮಾಣ & ಅನಾವರಣಕ್ಕೆ ಸ್ಥಳೀಯ ಸಂಸ್ಥೆಯ ಅನುಮತಿಯಷ್ಟೇ ಸಾಕಾಗಿತ್ತು. ಆದರೆ, ಛತ್ರಪತಿ ಸಂಭಾಜಿ ಪ್ರತಿಮೆ ವಿಚಾರದಲ್ಲಿ ರಾಜ್ಯ ಸರ್ಕಾರವು ಅನಗತ್ಯವಾಗಿ ಮೂಗು ತೂರಿಸುವ ಮೂಲಕ ತಮ್ಮದು ಹಿಂದೂ ವಿರೋಧಿ ಸರ್ಕಾರ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದೆ ಎಂದು ಶಾಸಕ ಅರವಿಂದ ಬೆಲ್ಲದ ವಾಗ್ದಾಳಿ ನಡೆಸಿದರು. https://ainlivenews.com/under-this-scheme-you-will-get-a-subsidy-of-1-5-lakhs-for-a-solar-pump-set-apply-today/ ಪ್ರತಿಮೆ ಅನಾವರಣಕ್ಕೆ ಕೆಲವರು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆಂದು, ಪಾಲಿಕೆಯ ಆಯುಕ್ತರ ಮೂಲಕ ಮೇಯರ್‌ಗೆ ಪತ್ರ ಬರೆಸಿರುವ ಸರ್ಕಾರ, ಆಕ್ಷೇಪಣೆ ವ್ಯಕ್ತಪಡಿಸಿರುವವರ ಹೆಸರನ್ನು ಬಹಿರಂಗಗೊಳಿಸಲು ಹಿಂದೇಟು ಹಾಕುತ್ತಿರುವುದು ಏಕೆ? ಯಾರನ್ನು ಮೆಚ್ಚಿಸಲು ಬಹುಸಂಖ್ಯಾತ ಹಿಂದೂಗಳ ಭಾವನೆಯನ್ನು ಘಾಸಿಗೊಳಿಸಲು ಹೊರಟಿದೆ ಈ ಹಿಂದೂ ವಿರೋಧಿ ಸರ್ಕಾರ? ನಿಗದಿಂತ ದಿನದಂದೇ ಸಂಭಾಜಿ ಪ್ರತಿಮೆ ಅನಾವರಣಕ್ಕೆ ಅವಕಾಶ ಮಾಡಿಕೊಡಬೇಕೆಂದು ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದರು.

Read More

ಹುಬ್ಬಳ್ಳಿ: ಇಂದು ತಾಲೂಕು ಆಡಳಿತ ಸೌಧದ ತಾಲೂಕ ಪಂಚಾಯತ ಸಭಾ ಭವನದಲ್ಲಿ ಶಾಸಕರಾದ ಎಮ್.ಆರ್. ಪಾಟೀಲ ಹಾಗೂ ಎನ್.ಎಚ್. ಕೋನರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನವಗ್ರಹ ತೀರ್ಥಂಕರರ ಮಹಾಮಸ್ತಕಾಭಿಕ್ಷೇಕ ಹಾಗೂ 405 ಅಡಿ ಎತ್ತರದ ಸುಮೇರು ಪರ್ವತದ ಪಂಚ ಕಲ್ಯಾಣ ಪ್ರತಿಷ್ಠಾ ಮಹೋತ್ಸವದ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಹುಬ್ಬಳ್ಳಿ ಗ್ರಾಮೀಣ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶಿವಾನಂದ ಭೂಮಣ್ಣವರ, ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾ ಅಧಿಕಾರಿಗಳಾದ ದೀಪಕ ಮಡಿವಾಳರ, ಹುಬ್ಬಳ್ಳಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಯಶವಂತಕುಮಾರ, https://ainlivenews.com/under-this-scheme-you-will-get-a-subsidy-of-1-5-lakhs-for-a-solar-pump-set-apply-today/ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಸದಾನಂದ ಅಮರಾಪುರ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯಾದ ಸಿ.ವಿ.ಕರವೀರಮಠ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಜಗದೀಶ ಪಾಟೀಲ್, ಡಾ.ರಾಮಚಂದ್ರ ಹೊಸಮನಿ, ಅಕ್ಷರ ದಾಸೋಹದ ಸಂಗಮೇಶ ಬಂಗಾರಿಮಠ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Read More

ಬೆಂಗಳೂರು: ಹಳೆಯ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ (HSRP) ಅಳವಡಿಕೆ ಕಡ್ಡಾಯವಾಗಿದೆ. ಈ ನಂಬರ್ ಪ್ಲೇಟ್ ಅಳವಡಿಕೆಗೆ ಸಾರಿಗೆ ಇಲಾಖೆಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಈ ತಿಂಗಳು ಕೊನೆ ಅಂದರೆ ಜನವರಿ 31ರವರೆಗೆ ಹೆಚ್​​ಎಸ್​ಆರ್​ಪಿ ನಂಬರ್​ ಪ್ಲೇಟ್​ ಅಳವಡಿಕೆಗೆ ಸಮಯ ನೀಡಿ ರಾಜ್ಯ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. https://ainlivenews.com/do-you-need-300-units-of-free-electricity-for-your-home-if-so-apply-for-this-scheme/ ಹೈಸೆಕ್ಯೂರಿಟಿ ನಂಬರ್​ ಪ್ಲೇಟ್​ ಅಳವಡಿಕೆಗೆ ಈಗಾಗಲೇ ಅವಧಿ ಮುಗಿದಿದ್ದರೂ ಸಹ ರಾಜ್ಯ ಸಾರಿಗೆ ಇಲಾಖೆ ವಾಹನ ಮಾಲೀಕರಿಗೆ ಮತ್ತೆ ಮತ್ತೆ ಅವಕಾಶ ನೀಡುತ್ತಲೇ ಇದೆ. ಬರೊಬ್ಬರಿ ಆರು ಬಾರಿ ಗಡುವು ವಿಸ್ತರಿಸಿದೆ. 2019ಕ್ಕೂ ಮೊದಲು ನೋಂದಣಿಯಾದ ವಾಹನಗಳಿಗೆ ಹೆಚ್​ಎಸ್​ಆರ್​ಪಿ ನಂಬರ್​ ಪ್ಲೇಟ್​ ಅಳವಡಿಕೆ ಮಾಡಿಕೊಳ್ಳಬೇಕು. ಏನಿದು ಹೆಚ್​ಎಸ್​ಆರ್​ಪಿ ನಂಬರ್​ ಪ್ಲೇಟ್​? ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಮೋಟಾರು ವಾಹನ ಕಾಯ್ದೆ-1989 ಸೆಕ್ಷನ್‌ 50 ಹಾಗೂ 51 ಅನ್ವಯ ಎಲ್ಲಾ ವಾಹನಗಳಿಗೆ ಗರಿಷ್ಠ ಭದ್ರತೆಯ ನಂಬರ್‌ ಪ್ಲೇಟ್‌ಗಳನ್ನು ಅಳವಡಿಸಬೇಕಿದೆ. ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್ ಎಂದರೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್…

Read More

ಬಿಗ್ ಬಾಸ್ ಕನ್ನಡ ಸೀಸನ್ 11 ಫಿನಾಲೆ ಹತ್ತಿರ ಬರುತ್ತಿದ್ದಂತೆಯೇ ಮನೆ ಮಂದಿ ಖುಷ್‌ ಆಗಿದ್ದಾರೆ. ಹೌದು ಮನೆಮಂದಿಗೆ ಕಿಚ್ಚನ ಕೈರುಚಿ ತಿನ್ನುವ ಭಾಗ್ಯ ಸಿಕ್ಕಿದೆ. ಪ್ರತೀ ಸೀಸನ್‌ ನಲ್ಲೂ ಪ್ರೀತಿಯಿಂದ ತಮ್ಮ ಕೈಯಾರೆ ಅಡುಗೆ ಮಾಡಿ ಕಳಿಸಿ ಕೊಡುತ್ತಿದ್ದ ಕಿಚ್ಚ ಈ ಬಾರಿ ಕೂಡ ಮನೆಯವರಿಗೆ ರುಚಿರುಚಿಯಾದ ಅಡುಗೆ ಮಾಡಿ ಜೊತೆಗೆ ಸಂದೇಶ ಬರೆದು ಕಳುಹಿಸಿಕೊಟ್ಟಿದ್ದಾರೆ. ಪ್ರತೀ ಸೀಸನ್‌ ನಲ್ಲೂ ಸುದೀಪ್  ಊಟದ ಜೊತೆಗೆ ಎಲ್ಲಾ ಸ್ಪರ್ಧಿಗಳಿಗೂ  ವಿಶೇಷ ಸಂದೇಶಗಳನ್ನು ಬರೆದು ಕಳುಹಿಸಿಸುತ್ತಿದ್ದರು. ಆ ಒಂದೊಂದು ಸಂದೇಶದಲ್ಲಿ ಒಳಾರ್ಥವಿರುತ್ತದೆ. ಈ ಬಾರಿಯ ಸ್ಪರ್ಧಿಗಳಿಗೆ ಕಿಚ್ಚ ಏನು ಸಂದೇಶ ಕೊಟ್ಟಿರಬಹುದು ಎಂಬ ವಿಚಾರ ಇಂದಿನ ಎಲಿಸೋಡ್‌ ನಲ್ಲಿ ತಿಳಿಯಲಿದೆ. https://ainlivenews.com/lets-increase-male-fertility-this-sweet-pumpkin-to-lose-weight/ ಹಸಿದವರಿಗೆ ಊಟ ಸಿಕ್ಕರೆ ಅದಕ್ಕಿಂತ ಹೆಚ್ಚಿನ ಖುಷಿ ಬೇರೆ  ಇಲ್ಲ. ಅಂತೆಯೇ ಕಿಚ್ಚನ ಸಂದೇಶದ ಜೊತೆಗೆ ಕೈಯಾರೆ ಅಡುಗೆ ತಿನ್ನುವ ಅದೃಷ್ಟ ರಜತ್‌, ಮಂಜು, ಹನುಮಂತ, ತ್ರಿವಿಕ್ರಮ್, ಭವ್ಯಾ, ಮೋಕ್ಷಿತಾ, ಗೌತಮಿ, ಚೈತ್ರಾ, ಧನ್‌ರಾಜ್‌ ಅವರ ಪಾಲಾಗಿದೆ. ಕಿಚ್ಚ ಕಳಿಸಿದ ಕೈರುಚಿಗೆ…

Read More

ಬಳ್ಳಾರಿ:  ಪ್ರೀತಿ ಪ್ರೇಮಕ್ಕೆ ಬ್ರೇಕ್ ಹಾಕೋದಾಗಿ ಪ್ರೇಯಸಿ ಹೇಳಿದ್ದಕ್ಕೆ ಮನನೊಂದ ಭಗ್ನ ಪ್ರೇಮಿ ಯುವತಿ ಮತ್ತವರ ಮನೆಯವರ ಮೇಲೆ ಹಲ್ಲೆ ಮಾಡಿ ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಡೂರಿನ ಚರ್ಚ್ ಶಾಲೆ ರಸ್ತೆಯಲ್ಲಿ ನಡೆದಿದೆ. ಹೊಸಪೇಟೆ ತಾಲೂಕಿನ ಪಿ.ಕೆ.ಹಳ್ಳಿ ಮೂಲದ ನವೀನಕುಮಾರ್‌ ಹಲ್ಲೆ ಆತ್ಮಹತ್ಯೆ ಮಾಡಿಕೊಂಡಿರುವಾತನಾಗಿದ್ದು, ಪ್ರೇಯಸಿ ಸೇರಿ ಕುಟುಂಬದ ಮೂವರ ಮೇಲೆ  ಪ್ರೇಮಿ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಯುವತಿ ಮತ್ತವರ ತಾಯಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯುವತಿಯ ಅಣ್ಣನಿಗೆ ಬಲವಾಗಿ ಮಚ್ಚಿನೇಟು ಬಿದ್ದಿದೆ. ಚಿಕಿತ್ಸೆಗಾಗಿ ಮೂವರನ್ನೂ ತೋರಣಗಲ್ಲು ಜಿಂದಾಲ್ ಸಂಜೀವಿನಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. https://ainlivenews.com/do-you-need-300-units-of-free-electricity-for-your-home-if-so-apply-for-this-scheme/ ಯುವತಿ ಮತ್ತು ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ ಬಳಿಕ ಆರೋಪಿ ನವೀನ್ ಕುಮಾರ್ ಯಶವಂತನಗರದ ಗಂಡಿ ಮಲಿಯಮ್ಮ ದೇಗುಲದ ಬಳಿ ಕಾರು ಬಿಟ್ಟು ಹೋಗಿದ್ದ. ಕಾರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಆರೋಪಿಯ ಪತ್ತೆಗೆ ಜಾಲ ಬೀಸಿದ್ದರು. ಆದರೆ ಇಂದು ಬೆಳಗಿನ ಜಾವ ಆರೋಪಿ ಯಶವಂತ ನಗರ ಬಳಿಯ ರೈಲ್ವೆ ಹಳಿಗೆ ತಲೆ ಕೊಟ್ಟು …

Read More

ಕಾಂಗ್ರೆಸ್ ರಾಜ್ಯ ಸರ್ಕಾರ ಸಾರಿಗೆ ಬಸ್ ಗಳ 15 % ದರ ಏರಿಕೆಯನ್ನು ವಿರೋಧಿಸಿ ನಗರದ ಫ್ರೀಡಂ ಪಾರ್ಕಿನಲ್ಲಿ ಆಮ್ ಆದ್ಮಿ ಪಕ್ಷ ನೂರಾರು ಕಾರ್ಯಕರ್ತರು ಎತ್ತಿನ ಬಂಡಿ ಎಳೆಯುವ ಮೂಲಕ ತೀವ್ರ ಪ್ರತಿಭಟನೆಯನ್ನು ನಡೆಸಿದರು. ಕಾಂಗ್ರೆಸ್ ಸರ್ಕಾರದ “ಎತ್ತಿನ ಬಂಡಿ ಗ್ಯಾರಂಟಿ ” , ” ಸರ್ಕಾರ ಜಾಲಿ ಜಾಲಿ , ಜನರ ಜೇಬು ಖಾಲಿ ಖಾಲಿ ” ಎಂದು ಘೋಷಣೆ ಕೂಗುವ ಮೂಲಕ ಸರ್ಕಾರದ ಕ್ರಮವನ್ನು ತೀವ್ರವಾಗಿ ವಿರೋಧಿಸಿದರು. ಪ್ರತಿಭಟನೆಗೆ ನೇತೃತ್ವವನ್ನು ವಹಿಸಿದ್ದ ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ” ಕಾಂಗ್ರೆಸ್ ಸರ್ಕಾರವು ಆಮ್ ಆದ್ಮಿ ಪಕ್ಷದ ಗ್ಯಾರೆಂಟಿಗಳನ್ನು ನಕಲು ಮಾಡಿ ಅಧಿಕಾರ ಹಿಡಿದಿದೆ. ಆದರೆ ಭ್ರಷ್ಟಾಚಾರ ನಿಲ್ಲಿಸದೆ ಗ್ಯಾರೆಂಟಿ ಯೋಜನೆಗಳನ್ನು ಸಮರ್ಪಕವಾಗಿ ನೀಡಲಾಗುತ್ತಿಲ್ಲ. ಇದಕ್ಕಾಗಿ ದರ ಏರಿಕೆಗಳನ್ನು ಮಾಡುತ್ತಿರುವುದು ಎಂದಿಗೂ ಸಹಿಸಲು ಸಾಧ್ಯವಿಲ್ಲ. https://ainlivenews.com/do-you-need-300-units-of-free-electricity-for-your-home-if-so-apply-for-this-scheme/ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ಎರಡು ಬಜೆಟ್ ಗಳಲ್ಲಿ 2 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಈ…

Read More

ಕಲಬುರಗಿ: ನಾಲ್ಕು ಜನರನ್ನು ನಿಲ್ಲಿಸಿ ಎಳನೀರು ಕೊಡ್ತೀವಿ ಅಂತಿರಲ್ಲ ನಾಚಿಕೆ ಆಗಲ್ವಾ? ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿನ್ ಪಾಂಚಾಳ್​ ಆತ್ಮಹತ್ಯೆ ಕೇಸ್​​ ಸಂಬಂಧ ನ್ಯಾಯ ಕೊಡಿ ಅಂದರೆ ಎಳನೀರು, ಟೀ ಕಾಫಿ ಕೊಡುತ್ತೇವೆ ಅಂತಾರೆ. ನಾವು ನಿಮ್ಮ ಸಂದಾನಕ್ಕೆ ಬಂದಿದ್ದೀವಾ? ನಾಲ್ಕು ಜನರನ್ನು ನಿಲ್ಲಿಸಿ ಎಳನೀರು ಕೊಡ್ತೀವಿ ಅಂತಿರಲ್ಲ ನಾಚಿಕೆ ಆಗಲ್ವಾ ಎಂದು ಕಿಡಿಕಾರಿದ್ದಾರೆ. ಪ್ರಿಯಾಂಕ್ ಖರ್ಗೆ ಕಂಡ್ರೆ ಇಲ್ಲಿ‌ನ ಪೊಲೀಸರು ಗಢಗಢ ನಡುಗುತ್ತಾರೆ. ಪ್ರಿಯಾಂಕ್ ಖರ್ಗೆ​ ಅವರೇ ಎಲ್ಲೆಲ್ಲಿ ಹೋರಾಟ ಮಾಡಿದ್ದೀರಿ ತೋರಿಸಿ. https://ainlivenews.com/do-you-need-300-units-of-free-electricity-for-your-home-if-so-apply-for-this-scheme/ ಸಿಎಂ ಸಿದ್ದರಾಮಯ್ಯ ಒಲ್ಲದ ಮನಸ್ಸಿನಿಂದ ಸಪೋಟ್೯ ಮಾಡುತ್ತಿದ್ದಾರೆ. ಇಲ್ಲಿ ಸಪೋರ್ಟ್ ಮಾಡಿಲ್ಲ ಅಂದರೆ ಅಲ್ಲಿ ತಮ್ಮ ಕುರ್ಚಿ ಅಲುಗಾಡುತ್ತೆ ಎಂದಿದ್ದಾರೆ. ಇನ್ನು ಶೆಡ್​ಗೆ ಹೋಗೋಣ ಬಾ ಅಂತಾ ಸಿ.ಟಿ.ರವಿಯನ್ನು ರಾತ್ರಿ ಸುತ್ತಾಡಿಸಿದರು. ಈ ಪ್ರಕರಣದಲ್ಲಿ ಇನ್ನೂ ಯಾರ ಬಂಧನವಾಗಿಲ್ಲ. ಪೊಲೀಸರೇ ನಿಮ್ಮ ಅಧಿಕಾರ ಚಲಾಯಿಸಿ, ಅವರ ಗುಲಾಮಗಿರಿ ಬೇಡ…

Read More

ಬೀಜಿಂಗ್: ಚೀನಾದಲ್ಲಿ ಹೊಸ ವೈರಸ್‌ ಆರ್ಭಟ ಜೋರಾಗಿದ್ದು, ಸಾವಿರಾರು ಮಂದಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಕೋವಿಡ್‌ ತವರು ದೇಶ ಚೀನಾದಲ್ಲಿ ಹೆಚ್‌ಎಂಪಿವಿ ಹೆಸರಿನ ಹೊಸ ವೈರಸ್ ವಿಜೃಂಭಿಸುತ್ತಿದೆ. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಜಗತ್ತು ಮತ್ತೆ ಆತಂಕಕ್ಕೆ ಒಳಗಾಗಿದೆ. ಇದರ ಬೆನ್ನಲ್ಲೇ ಚೀನಾದಲ್ಲಿಕಂಡು ಬಂದಿರುವ ಹ್ಯೂಮನ್ ಮೆಟಾನ್ಯೂಮೋ ವೈರಸ್ ಹರಡುವ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ ಅಧಿಕಾರಿ ಡಾ ಅತುಲ್ ಗೋಯೆಲ್ ಹೇಳಿದ್ದಾರೆ. ಈ ವೈರಸ್‌ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಎಲ್ಲಾ ಉಸಿರಾಟದ ಸೋಂಕುಗಳ ವಿರುದ್ಧ ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಸಾಕು ಎಂದು ತಿಳಿಸಿದರು. https://ainlivenews.com/cinnamon-leaves-are-not-only-useful-for-cooking-but-also-provide-health-benefits-for-the-body/ ನಾವು ದೇಶದಲ್ಲಿ ಉಸಿರಾಟಕ್ಕೆ ಸಂಬಂಧಿಸಿದಂತೆ ದಾಖಲಾದ ರೋಗಿಗಳ ಡೇಟಾವನ್ನು ವಿಶ್ಲೇಷಿಸಿದ್ದೇವೆ. ಡಿಸೆಂಬರ್ 2024ರ ಡೇಟಾದಲ್ಲಿ ಯಾವುದೇ ಗಣನೀಯ ಹೆಚ್ಚಳ ಕಂಡುಬಂದಿಲ್ಲ. ನಮ್ಮ ಯಾವುದೇ ಸಂಸ್ಥೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೇಸ್‌ ದಾಖಲಾದ ಬಗ್ಗೆ ವರದಿಯಾಗಿಲ್ಲ ಎಂದು ಹೇಳಿದರು. HMPVಗೆ ಯಾವುದೇ ನಿರ್ದಿಷ್ಟ ಆಂಟಿವೈರಲ್ ಚಿಕಿತ್ಸೆ ಇಲ್ಲ, ಆದ್ದರಿಂದ ಅದರ ಹರಡುವಿಕೆಯನ್ನು ನಿಯಂತ್ರಿಸಲು ತಡೆಗಟ್ಟುವಿಕೆ…

Read More

ಅಮೆರಿಕ: ಕರುನಾಡ ಚಕ್ರವರ್ತಿ, ನಟ ಡಾ.ಶಿವರಾಜ್​ ಕುಮಾರ್ ಅವರು ಅಮೆರಿಕದಲ್ಲಿ ಈಗಾಗಲೇ ಚಿಕಿತ್ಸೆ ಪಡೆದು ಆರೋಗ್ಯವಾಗಿದ್ದಾರೆ. ಆದರೆ ಅಮೆರಿಕದಲ್ಲಿ ಶಿವಣ್ಣ ಹೇಗಿದ್ದಾರೆ ಎನ್ನುವುದು ಅವರ ಅಭಿಮಾನಿಗಳನ್ನ ಕಾಡುತ್ತಿತ್ತು. ಇದೀಗ ಅಮೆರಿಕದಲ್ಲಿ ಸರ್ಜರಿ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಟ ಶಿವಣ್ಣಗೆ ಅಮೆರಿಕಾದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್‌ನಲ್ಲಿ ಸರ್ಜರಿ ನಡೆದಿತ್ತು. ಯಶಸ್ವಿ ಸರ್ಜರಿ ಬಳಿಕ ಡಿಸ್ಚಾರ್ಜ್ ಆಗಿದ್ದಾರೆ. ಸರ್ಜರಿ ಬಳಿಕ ಎರಡು ಚೆಕಪ್ ಬಾಕಿ ಇದ್ದು, ನಂತರ ಸಂಪೂರ್ಣ ಗುಣಮುಖರಾಗಿ ಜ.24ರ ಬಳಿಕ ಬೆಂಗಳೂರಿಗೆ ವಾಪಸಾಗಲಿದ್ದಾರೆ. https://ainlivenews.com/do-you-need-300-units-of-free-electricity-for-your-home-if-so-apply-for-this-scheme/ ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಗುಣಮುಖರಾದ ಶಿವಣ್ಣ ಕೆಲ ದಿನಗಳ ಹಿಂದಷ್ಟೇ ಅಭಿಮಾನಿಗಳಿಗೆ ವೀಡಿಯೋ ಸಂದೇಶ ಕಳುಹಿಸಿದ್ದರು. ಕ್ಯಾನ್ಸರ್‌ನಿಂದ ಗುಣಮುಖರಾಗಿರುವ ಬಗ್ಗೆ ಸಂತಸ ಹಂಚಿಕೊಂಡಿದ್ದರು. ಶೀಘ್ರವೇ ಬೆಂಗಳೂರಿಗೆ ವಾಪಸ್‌ ಆಗಿ ಸಿನಿಮಾ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದರು.

Read More

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರೂರು ಕಲಬುರಗಿಯಲ್ಲಿ ಇವತ್ತು ಕೇಸರಿ ಪಡೆಯ ಘರ್ಜನೆ ಜೋರಾಗಿತ್ತು.. ಬಿಜೆಪಿಯ ಘಟಾನುಘಟಿ ಲೀಡರ್ಸ್ಗಳೆಲ್ಲ ಆಗಮಿಸಿ ಬೃಹತ್ ಪ್ರೊಟೆಸ್ಟ್ ಮಾಡಿದ್ರು..ಎಲ್ಲರ ದನಿ ಒಂದೇ ಆಗಿತ್ತು..ಅದುವೇ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡಬೇಕು ಅನ್ನೋದು. .ಅಷ್ಟಕ್ಕೂ ಕಾರಣ ಏನ್ ಗೊತ್ತಾ..ಇಲ್ಲಿದೆ ಫುಲ್ ಡಿಟೇಲ್… ಪ್ರಿಯಾಂಕ್ ಖರ್ಗೆ..ಸದ್ಯ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಪವರ್ ಫುಲ್ ಮಿನಿಸ್ಟರ್..ಅಷ್ಟೇ ಅಲ್ಲ ಕೈ ಪಕ್ಷಕ್ಕೆ ಹೈಕಮಾಂಡ್ ಆಗಿರುವ ಮಾನ್ಯ ಮಲ್ಲಿಕಾರ್ಜುನ ಖರ್ಗೆಯವರ ಸುಪುತ್ರ..ಹೀಗೆ ಶಕ್ತಿಶಾಲಿಯಾಗಿರೋ ಸಚಿವ ಖರ್ಗೆ ವಿರುದ್ಧ ಇವತ್ತು ಖರ್ಗೆ ತವರಲ್ಲಿ ವಿಪಕ್ಷ ಬಿಜೆಪಿ ಸಕತ್ ಧೂಳ್ ಎಬ್ಬಿಸಿತ್ತು.. ಇಡೀ ಕಲಬುರಗಿ ನಗರದ ಎಲ್ಲೆಡೆ ಬೀದಿಗಿಳಿದ ಕೇಸರಿ ಪಡೆ ಪ್ರಿಯಾಂಕ್ ರಾಜೀನಾಮೆ ನೀಡ್ಲೇಬೇಕು ಅಂತ ಬೃಹತ್ ಪ್ರತಿಭಟನೆ ಮಾಡಿತು..‌ https://ainlivenews.com/do-you-need-300-units-of-free-electricity-for-your-home-if-so-apply-for-this-scheme/ ವಿಪಕ್ಷ ನಾಯಕರಾದ ಆರ್ ಅಶೋಕ್ ಛಲವಾದಿ ನಾರಾಯಣಸ್ವಾಮಿ ಸಿ ಟಿ ರವಿ ಸೇರಿದಂತೆ ಇಡೀ ಬಿಜೆಪಿ ಟೀಂ ಖರ್ಗೆ ವಿರುದ್ಧ ರಣಕಹಳೆ ಮೊಳಗಿಸಿತು.. ಜಗತ್ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ…

Read More