Author: Author AIN

ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಪತ್ನಿ ಸೈರಾ ಬಾನುಗೆ ವಿಚ್ಚೇದನ ಘೋಷಿಸಿದ್ದಾರೆ. ಈ ಮೂಲಕ 29 ವರ್ಷಗಳ ವೈವಾಹಿಕ ಜೀವನ ಕೊನೆಯಾಗಿಸಿದ್ದಾರೆ. 1995ರ ಜನವರಿಯಲ್ಲಿ ರೆಹಮಾನ್ ಹಾಗೂ ಸೈರಾ ಮದುವೆ ನಡೆದಿದ್ದು. ಇದೀಗ ತಮ್ಮ 57ನೇ ವರ್ಷದಲ್ಲಿ ರೆಹಮಾನ್ ಪತ್ನಿಯಿಂದ ವಿಚ್ಛೇದನ ಪಡೆದಿದ್ದಾರೆ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಹೆಣ್ಣು ಮಕ್ಕಳ ಹೆಸರು ಖತೀಜಾ ಮತ್ತು ರಹೀಮಾ. ಮಗನ ಹೆಸರು ಅಮೀನ್ ರೆಹಮಾನ್. ಸೈರಾ ಬಾನು ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡುವ ಮೂಲಕ ಡಿವೋರ್ಸ್ ವಿಚಾರ ತಿಳಿಸಿದ್ದಾರೆ. ಎಆರ್ ರೆಹಮಾನ್ ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿದ್ದಾರೆ. ಭಾರತ ಚಿತ್ರರಂಗದಲ್ಲಿ ಬಹುಬೇಡಿಕೆ ಮ್ಯೂಸಿಕ್ ಡೈರೆಕ್ಟರ್ ಆಗಿರುವ ಎ. ಆರ್ ರೆಹಮಾನ್ ಗಾಯಕರು ಕೂಡ ಆಗಿದ್ದಾರೆ. ರೆಹಮಾನ್ ಒಂದು ಹಾಡಿಗೆ ಸುಮಾರು 3 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಾರೆ. ರೆಹಮಾನ್ ಕೆಲವೇ ಹಾಡುಗಳಿಗೆ ಹಾಡಿದ್ದಾರೆ. ಅನೇಕ ಸಿನಿಮಾಗಳಿಗೆ ಮ್ಯೂಸಿಕ್ ನೀಡಿದ್ದಾರೆ. ಎಆರ್ ರೆಹಮಾನ್ ಅವರ ಒಟ್ಟು ಸಂಪತ್ತು 2100 ಕೋಟಿ ಎನ್ನಲಾಗ್ತಿದೆ. ಸ್ಟಾರ್ಟಪ್ಸ್…

Read More

ಬೆಂಗಳೂರು: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರನ್ನಾಗಿ ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ರಾಜ್ಯಾಧ್ಯಕ್ಷ ಡಾ. ಮಹೇಶ್‌ ಜೋಶಿ ಅಧ್ಯಕ್ಷತೆಯಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಯಿತು. ಸಭೆಯಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೊ ರು ಚನ್ನಬಸಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಮಂಡ್ಯದಲ್ಲಿ ಡಿ.20,21 ಮತ್ತು 22ರಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳ ನಡೆಯಲಿದೆ. https://ainlivenews.com/prosperous-capital-flow-to-the-state-cm-siddaramaiah/ ಮೂಲತಃ ಗೊ. ರು. ಚೆನ್ನಬಸಪ್ಪನವರು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಗೊಂಡೇದಹಳ್ಳಿಯವರು. 1930ರ ಮೇ 18ರಂದು ಚೆನ್ನಬಸಪ್ಪ ಜನಿಸಿದರು.  ಮಹಾದೇವಿ, ಸದಾಶಿವ ಶಿವಾಚಾರ್ಯ, ಕರ್ನಾಟಕ ಪ್ರಗತಿಪಥ, ಚೆಲುವಾಂಬಿಕೆ, ಕುನಾಲ, ಸಾಕ್ಷಿ ಕಲ್ಲು, ಬೆಳ್ಳಕ್ಕಿ ಹಿಂಡು ಬೆದರ್ಯಾವೊ, ಬಾಗೂರು ನಾಗಮ್ಮ, ಗ್ರಾಮ ಗೀತೆಗಳು, ವಿಭೂತಿ, ಗೊರೂಚ ಅವರ ಪ್ರಮುಖ ಕೃತಿಗಳಾಗಿವೆ. ಜಾನಪದ ತಜ್ಞರೂ ಆಗಿರುವ ಚನ್ನಬಸಪ್ಪ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರೂ ಆಗಿದ್ದರು. ಭಾರತದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯವನ್ನು…

Read More

ಬೆಂಗಳೂರು: ಕೈಗಾರಿಕಾ ಕ್ಷೇತ್ರದ ಬಂಡವಾಳ ಹೂಡಿಕೆಯಲ್ಲಿ ರಾಜ್ಯವು ಸದ್ಯಕ್ಕೆ ದೇಶದಲ್ಲಿ ಮೂರನೇ ಸ್ಥಾನದಲ್ಲಿದ್ದು, 2025ರ ಜೂನ್ ವೇಳೆಗೆ ದ್ವಿತೀಯ ಸ್ಥಾನಕ್ಕೆ ಏರಲಿದೆ. ಈಗ ಆಗಿರುವ 54,427 ಕೋಟಿ ರೂ. ಹೂಡಿಕೆಯ ಜತೆಗೆ ಮುಂದಿನ ಆರೇಳು ತಿಂಗಳಲ್ಲಿ ಇನ್ನೂ 19,059 ಸಾವಿರ ಕೋಟಿ ರೂ. ಬಂಡವಾಳ ಹರಿದು ಬರುವುದು ಖಾತ್ರಿಯಾಗಿದೆ. ಈ ಮೂಲಕ ರಾಜ್ಯವು 73 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಹೂಡಿಕೆಯನ್ನು ಕಾಣಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ಜಿಕೆವಿಕೆ ಆವರಣದಲ್ಲಿ ಆಯೋಜನೆಗೊಂಡಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಟಲ್ಸ್ ಸಂಸ್ಥೆಯ 78ನೇ ವಾರ್ಷಿಕ ತಾಂತ್ರಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯವು ಈ ವರ್ಷ ಈಗಾಗಲೇ 21 ವಿವಿಧ ಉದ್ಯಮಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಇದರಿಂದ 46,375 ಕೋಟಿ ರೂ. ಬಂಡವಾಳ ಹರಿದು ಬರಲಿದ್ದು, 27 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ. ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿಗಳ ಮೂಲಕ 90 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಹೂಡಿಕೆ ಆಗಲಿರುವಂತಹ ಒಟ್ಟು 669 ಕೈಗಾರಿಕಾ…

Read More

ಬೆಳಗಾವಿ: ಬೆಳಗಾವಿಯಿಂದ ಬೆಂಗಳೂರಿಗೆ ಜೀವಂತ ಲಿವರ್ ರವಾನೆ ಮಾಡಲಾಗಿದೆ. ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರಿಗೆ ಇಂಡಿಗೋ ವಿಮಾನದಲ್ಲಿ‌ ತೆಗೆದುಕೊಂಡು ಹೋಗಲಾಗಿದೆ. ಬೆಳಗಾವಿಯಿಂದ ಹುಬ್ಬಳ್ಳಿವರೆಗೂ ರಸ್ತೆ ಮೂಲಕ ತೆರಳಿ ಅಲ್ಲಿಂದ ವಿಮಾನದಲ್ಲಿ ಬೆಂಗಳೂರಿಗೆ ಲಿವರ್ ರವಾನಿಸಲಾಗಿದೆ. ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಲಿವರ್ ಕಸಿ ಅಥವಾ ಲಿವರ್ ಅಗತ್ಯವಿದ್ದ ರೋಗಿಗೆ ಅಂಗಾಗ ಜೋಡಣೆಗೆ ಬಳಸಿಕೊಳ್ಳಲಾಗಿದೆ.  ಯಶವಂತಪುರದಲ್ಲಿರುವ ಸ್ಪರ್ಶ ಆಸ್ಪತ್ರೆಗೆ ಜೀರೋ ಟ್ರಾಫಿಕ್ ಮೂಲಕ ಏರ್ ಪೋರ್ಟ್ ನಿಂದ ರವಾನಿಸಲಾಗಿದೆ. https://ainlivenews.com/lawyer-was-killed-in-the-court-premises/

Read More

ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧ ತೀವ್ರಗೊಳ್ಳುತ್ತಿದ್ದಂತೆ “ಯುದ್ಧಕ್ಕೆ ಸನ್ನದ್ಧರಾಗಿ’ ಎಂದು ಸ್ವೀಡನ್‌, ಫಿನ್‌ಲ್ಯಾಂಡ್‌ ತಮ್ಮ ದೇಶದ ನಾಗರಿಕರಿಗೆ ಮನವಿ ಮಾಡಿವೆ. ಸ್ವೀಡನ್‌ನಲ್ಲಿ 50 ಲಕ್ಷ ಕೈಪಿಡಿಗಳನ್ನು ಸಿದ್ಧಗೊಳಿಸಿ ಹಂಚಲಾಗುತ್ತಿದೆ. ಅಲ್ಲದೆ ಇದೇ ಉದ್ದೇಶಕ್ಕೆ ಫಿನ್‌ ಲ್ಯಾಂಡ್‌ ಸರ್ಕಾರ ಪ್ರತ್ಯೇಕ ವೆಬ್‌ಸೈಟ್‌ ಅನ್ನು ಶುರು ಮಾಡಿದೆ. 2022ರಲ್ಲಿ ಉಕ್ರೇನ್‌ ವಿರುದ್ಧ ರಷ್ಯಾ ದಾಳಿ ನಡೆಸಿದ ಸಂದರ್ಭದಿಂದಲೇ ಸ್ವೀಡನ್‌ನಲ್ಲಿ “ತುರ್ತಾಗಿ ಯುದ್ಧದ ಸಂದರ್ಭ ಬಂದರೆ ಮಾಡಬೇಕಾಗಿರುವುದೇನು?’ ಎಂಬ ಶೀರ್ಷಿಕೆ ಇರುವ ಕರಪತ್ರ ಸಿದ್ಧಗೊಳಿಸಿತ್ತು. 2ನೇ ಪ್ರಪಂಚ ಮಹಾಯುದ್ಧ ವೇಳೆ ಮೊದಲ ಬಾರಿಗೆ ಅದನ್ನು ಸಿದ್ಧಪಡಿಸಲಾಗಿತ್ತು. ಮುಂದಿನ 2 ವಾರಗಳಲ್ಲಿ ಸ್ವೀಡನ್‌ ನಿವಾಸಿಗಳಿಗೆ 32 ಪುಟಗಳ ಪರಿಷ್ಕೃತ ಕೈಪಡಿ ಮನೆಗಳಿಗೆ ತಲುಪಿಸಲು ಮುಂದಾಗಿದ್ದಾರೆ.

Read More

ತಮಿಳುನಾಡು: ಕೋರ್ಟ್ ಆವರಣದಲ್ಲಿಯೇ ವಕೀಲನ ಮೇಲೆ ಕೊಲೆ ಮಾಡಲಾಗಿದೆ. ತಮಿಳುನಾಡಿನ ಹೊಸೂರು ಕೋರ್ಟ್ ಬಳಿ ಘಟನೆ ನಡೆದಿದೆ. ಕಣ್ಣನ್(30) ಮೃತ ವಕೀಲರಾಗಿದ್ದಾರೆ. ಕೋರ್ಟ್‌ ನ ಆವರಣದಲ್ಲೇ ವಕೀಲನ ಮೇಲೆ ಕೊಲೆ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ವಕೀಲನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಅಷ್ಟರಲ್ಲಾಗಲೇ ವಕೀಲ ಕಣ್ಣನ್‌ ಸಾವನ್ನಪ್ಪಿದ್ದಾರೆ.  ಮಚ್ಚಿನಿಂದ ಹಲ್ಲೆ ಮಾಡಿದ ಬಳಿಕ ಆರೋಪಿ ಆನಂದ್ ಕೋರ್ಟ್‌ ಗೆ ಶರಣಾಗಿದ್ದಾನೆ.  ಘಟನಾ ಸ್ಥಳಕ್ಕೆ ಹೊಸೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. https://ainlivenews.com/shock-for-the-workers-after-the-cancellation-of-the-ration-card/

Read More

ಬೆಂಗಳೂರು: ರಾಜ್ಯದಲ್ಲಿ ಬಿಪಿಎಲ್, ಎಪಿಎಲ್ ಕಾರ್ಡ್ ರದ್ದು ವಿಚಾರ ಭಾರೀ ಸುದ್ದಿ ಮಾಡುತ್ತಿದೆ. ವಿಪಕ್ಷಗಳು ಇದೇ ವಿಚಾರವನ್ನು ಅಸ್ತ್ರವಾಗಿಸಿಕೊಂಡು ಸರ್ಕಾರದ ವಿರುದ್ಧ ಕಿಡಿಕಾರುತ್ತಿವೆ. ಇದೀಗ ಸರ್ಕಾರ ಮತ್ತೊಂದು ಆಪರೇಷನ್‌ ಗೆ ಇಳಿದಂತಿದೆ. ಹೌದು, ರಾಜ್ಯದಲ್ಲಿ ರೇಷನ್‌ ಕಾರ್ಡ್‌ ರದ್ದತಿಯ ಬೆನ್ನಲ್ಲೇ ಕಾರ್ಮಿಕರ ಕಾರ್ಡ್ ರದ್ದು ಮಾಡಿದೆ. ರಾಜ್ಯದಲ್ಲಿ 2.46 ಲಕ್ಷ ಕಾರ್ಮಿಕರ ಕಾರ್ಡ್ ಅಮಾನತು ಮಾಡಲಾಗಿದೆ. https://ainlivenews.com/young-womans-death-in-fire-accident-bike-showroom-owner-arrested/ ಕಾರ್ಮಿಕ ಇಲಾಖೆಯು 2,46,951 ಕಾರ್ಡ್‌ ನ್ನು ನಕಲಿ ಎಂದು ರದ್ದು ಮಾಡಿದೆ.  ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಬರೋಬ್ಬರಿ 38 ಲಕ್ಷದ 42 ಸಾವಿರ ಕಾರ್ಮಿಕರು ನೋಂದಣಿ ಮಾಡಲಾಗಿದೆ. 38.42 ಲಕ್ಷದ ಪೈಕಿ 2.46 ಲಕ್ಷ ಕಾರ್ಡ್ ಅಮಾನತು ಮಾಡಲಾಗಿದ್ದು, ಹಾವೇರಿಯಲ್ಲಿ ಅತೀ ಹೆಚ್ಚು ಎಂದರೆ 1,69,180 ಕಾರ್ಡ್ ಗಳು ರದ್ದು ಮಾಡಲಾಗಿದೆ.

Read More

ಬೀದರ್‌ : ವಕ್ಫ್‌ ವಿವಾದವನ್ನು ಪ್ರಾರಂಭ ಮಾಡಿದ್ದೆ ಬಿಜೆಪಿಯವರು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ ಸಚಿವ ಈಶ್ವರ್ ಖಂಡ್ರೆ ಕಿಡಿಕಾರಿದ್ದಾರೆ.  ಬೀದರ್ ನಲ್ಲಿ ಮಾತನಾಡಿದ ಅವರು,  ನಾವು ಅಧಿಕಾರಕ್ಕೆ ಬಂದ ಮೇಲೆ ರೈತರಿಗೆ ನೋಟಿಸ್ ನೀಡಿಲ್ಲ. ನಿಮ್ಮಲ್ಲಿ ದಾಖಲೆ ಇವೆಯಾ..? ನಾನು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ, ನಾವು ಯಾವ ರೈತರಿಗೂ ನೋಟಿಸ್ ನೀಡಿಲ್ಲ, ಒಂದು ಪಹಣಿಯನ್ನು ತಿದ್ದುಪಡಿ ಮಾಡಿಲ್ಲ. ವಕ್ಫ್ ವಿವಾದಕ್ಕೆ ಹಿಂದಿನ ಬಿಜೆಪಿ ಸರ್ಕಾರವೇ ಹೊಣೆ ಎಂದು ಕಿಡಿಕಾರಿದರು. ಮುಖ್ಯಮಂತ್ರಿಗಳು ಹೇಳಿದ್ದಾರೆ ಯಾವ ರೈತರಿಗೂ ಅನ್ಯಾಯವಾಗಲು ಬಿಡುವುದಿಲ್ಲ, ಯಾವ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ. ಒಂದುವೇಳೆ ಬಿಜೆಪಿ ಅವಧಿಯಲ್ಲಿ ರೈತರ ಪಹಣಿಯಲ್ಲಿ ವಕ್ಫ್ ಹೆಸರು ಬಂದಿದ್ದರೆ ಸೂಕ್ತ ತನಿಖೆಯೊಂದಿಗೆ ರೈತರಿಗೆ ಹಿಂತಿರುಗಿಸುತ್ತೇವೆ ಎಂದರು. https://ainlivenews.com/finally-the-reason-for-the-divorce-of-aa-rahman-and-saira-banu-has-come-to-light/ ಇದೇ ವೇಳೆ ಸಂಪುಟ ವಿಸ್ತರಣೆಯ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಹಾಗೂ ವರಿಷ್ಠರು ಸಂಪುಟ ವಿಸ್ತರಣೆಯ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡ್ತಾರೆ. ಸರ್ಕಾರ ಸುಭದ್ರವಾಗಿದೆ, ಉತ್ತಮ ಆಡಳಿತ ಕೊಡತಿದ್ದೇವೆ. ಬಿಜೆಪಿ ಯವರು ಹೊಟ್ಟೆ ಕಿಚ್ಚಿನಿಂದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ…

Read More

ಖ್ಯಾತ ಸಂಗೀತ ಸಂಯೋಜಕ ಎಆರ್ ರೆಹಮಾನ್ ಹಾಗೂ ಅವರ ಪತ್ನಿ ಸೈರಾ ಬಾನು 29 ವರ್ಷಗಳ ದಂಪತ್ಯ ಜೀವನ ಅಂತ್ಯಗೊಳಿಸಿದ್ದಾರೆ. ರೆಹಮಾನ್ ಹಾಗೂ ಸೈರಾ ಬಾನು ವಿಚ್ಛೇದನ ಘೋಷಿಸಿರೋದು ಅನೇಕರಿಗೆ ಶಾಕಿಂಗ್ ಎನಿಸಿದೆ. ಈ ಘೋಷಣೆ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಇದೀಗ ವಿಚ್ಛೇದನಕ್ಕೆ ಕಾರಣ ಏನು ಎಂಬುದು ಬಯಲಾಗಿದೆ. ಕೈತುಂಬ ಕೆಲಸ ಇರುವ ರೆಹಮಾನ್ ವರ್ಷದ ಎಲ್ಲಾ ದಿನಗಳಲ್ಲೂ ಸಖತ್ ಬ್ಯುಸಿಯಾಗಿರ್ತಾರೆ ಅವರು ತಂಡದ ಜೊತೆ ಕಾನ್ಸರ್ಟ್ ನಡೆಸುತ್ತಾರೆ. ಒಂದೊಮ್ಮೆ ಕಾನ್ಸರ್ಟ್ ಇಲ್ಲ ಎಂದಾದರೆ ಹಾಡಿನ ಕಂಪೋಸ್​ನಲ್ಲಿ ಬ್ಯುಸಿ ಆಗುತ್ತಾರೆ. ಈ ಕಾರಣಕ್ಕೆ ಅವರು ನಿದ್ರಿಸೋದು ಮುಂಜಾನೆ ವೇಳೆಗೆ. ಅವರು ನಿದ್ದೆಯಿಂದ ಎದ್ದೇಳುವಾಗ ಮಧ್ಯಾಹ್ನ ಆಗುತ್ತದೆ. ಇದು ಅವರ ದಿನಚರಿ. ಈ ಕಾರಣಕ್ಕೆ ಕುಟುಂಬಕ್ಕೆ ಅವರು ಹೆಚ್ಚು ಸಮಯ ನೀಡಲು ಸಾಧ್ಯವಾಗುತ್ತಿರಲಿಲ್ಲ. ಇದು ವಿಚ್ಛೇದನಕ್ಕೆ ಕಾರಣ ಆಗಿರಬಹುದು ಎಂಬುದು ಕೆಲವರ ವಾದ. ಸೈರಾ ಬಾನು ಅವರು ವಿಚ್ಛೇದನಕ್ಕೆ ಕಾರಣ ಏನು ಎಂಬ ಬಗ್ಗೆ ಮಾತನಾಡಿದ್ದಾರೆ ಎಂದು ವರದಿ ಆಗಿದೆ. ‘ಸಂಬಂಧದಲ್ಲಿನ ಭಾವನಾತ್ಮಕ…

Read More

ಕೋಲಾರ : ಅರ್ಹರಲ್ಲದ ಬಿಪಿಎಲ್ ಕಾರ್ಡ್ ಮಾತ್ರ ರದ್ದಾಗುವುದು ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಸ್ಪಷ್ಟನೆ ನೀಡಿದ್ದಾರೆ. ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಪಿಎಲ್ಗೆ ಅರ್ಹರಲ್ಲದ ಕಾರ್ಡ್ ಗಳು ಮಾತ್ರ ಬದಲಾವಣೆ ಆಗುತ್ತೆ. BPL ಕಾರ್ಡ್ ರದ್ದು ಮಾಡಲ್ಲ, ಅವರನ್ನು APL ಕಾರ್ಡ್ ಗೆ ಬದಲಾವಣೆ ಮಾಡ್ತೇವೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಶೇ.50ಕ್ಕೂ ಹೆಚ್ಚು BPL ಕಾರ್ಡ್ ಇಲ್ಲ. ಕರ್ನಾಟಕ ಆರ್ಥಿಕವಾಗಿ ಸುಭದ್ರವಿರುವ ರಾಜ್ಯ, ತೆರಿಗೆ ಪಾವತಿಯಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ಕರ್ನಾಟಕದಲ್ಲಿ 75 ರಿಂದ 80 ಪರ್ಸೆಂಟ್ ಬಿಪಿಎಲ್ ಕಾರ್ಡ್ ಇರೋದಕ್ಕೆ ಸಾಧ್ಯನ ಅನ್ನೋದಉ ಪ್ರಶ್ನೆ. 10 ವರ್ಷಗಳಿಂದ ಎಲ್ಲಾ ಸರ್ಕಾರಗಳಲ್ಲಿ ಕಾರ್ಡ್ ನೀಡಲಾಗಿದೆ. ಐಟಿ ಪಾವತಿದಾರರು, ಸರ್ಕಾರಿ ಕೆಲಸದವರು,1ಲಕ್ಷ 20 ಸಾವಿರ ಆದಾಯ ಮೀರಿದವರನ್ನು ಎಪಿಎಲ್ ಕಾರ್ಡ್ ಗೆ ಬದಲಾವಣೆ ಮಾಡ್ತೇವೆ. ಅಂಕಿ ಅಂಶಗಳ ಜೊತೆ ನಾಳೆ ಪತ್ರಿಕಾಗೋಷ್ಠಿ ಮಾಡ್ತೇನೆ. ಎಂದರು. https://ainlivenews.com/grand-welcome-for-prime-minister-modi-in-guyana/ ಅಕಸ್ಮಾತ್ ಬಡವರ ಕಾರ್ಡ್ ರದ್ದಾಗಿದ್ರೆ ತಹಶೀಲ್ದಾರ್ ಗೆ ಅರ್ಜಿ ಹಾಕಲಿ, ಕಾರ್ಡ್ ಸಿಗುತ್ತೆ.ಅಪ್ಪಿತಪ್ಪಿ ಬಿಪಿಎಲ್ ಕಾರ್ಡ್…

Read More