Author: Author AIN

ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಪ್ರಾರಂಭವಾಗಿ ಸುಮಾರು ಐದಾರು ವರ್ಷಗಳೆ ಕಳೆದಿದೆ. ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಆಗಿದ್ದು, ಇನ್ನೇನು ಇನ್ನೆನ್ನೂ ಕೊನೆಗೂ ಸಿನಿಮಾ ಕಣ್ಮುಂಬಿಕೊಳ್ಳಬಹುದು ಎಂದು ಅಭಿಮಾನಿಗಳು ಕಾಯ್ತಿದ್ದಾರೆ. ಈ ಮಧ್ಯೆ ಚಿತ್ರದ ನಿರ್ದೇಶಕ ಎಪಿ ಅರ್ಜುನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ‘ಮಾರ್ಟಿನ್’ ಸಿನಿಮಾದ ನಿರ್ಮಾಪಕ ಉದಯ್ ಮೆಹ್ತಾ ಹಾಗೂ ನಿರ್ದೇಶಕ ಎಪಿ ಅರ್ಜುನ್ ನಡುವೆ ಕಳೆದ ಒಂದೆರಡು ವರ್ಷಗಳಿಂದಲೂ ಮುಸುಕಿನ ಗುದ್ದಾಟ ನಡೆಯುತ್ತಲೆ ಇದೆ. ಸಿನಿಮಾದ ಬಜೆಟ್, ಹಣ ದುರ್ಬಳಕೆ ಆರೋಪವನ್ನು ನಿರ್ಮಾಪಕ ಉದಯ್ ಮೆಹ್ತಾ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಿನಿಮಾದ ವಿಎಫ್​ಎಕ್ಸ್​ ಮಾಡಲು ಒಪ್ಪಂದ ಮಾಡಿಕೊಂಡಿದ್ದ ಸಂಸ್ಥೆಯ ವಿರುದ್ಧ ವಂಚನೆ ಪ್ರಕರಣವನ್ನು ಉದಯ್ ಮೆಹ್ತಾ ಈಗಾಗಲೇ ದಾಖಲಿಸಿದ್ದಾರೆ. ಉದಯ್ ಮೆಹ್ತಾ ನೀಡಿದ್ದ ದೂರಿನಲ್ಲಿ ಎಪಿ ಅರ್ಜುನ್ ಹೆಸರು ಸಹ ಇತ್ತು. ವಿವಾದದ ಬಳಿಕ ಇತ್ತೀಚೆಗೆ ನಡೆದ ಪ್ರಚಾರ ಕಾರ್ಯಕ್ರಮಗಳಲ್ಲಿ ಕಂಡು ಬಂದ ಸಿನಿಮಾ ಪೋಸ್ಟರ್​ಗಳಲ್ಲಿ ಸಿನಿಮಾದ ನಿರ್ದೇಶಕ ಎಪಿ ಅರ್ಜುನ್ ಅವರ ಹೆಸರು ನಾಪತ್ತೆಯಾಗಿತ್ತು. ನಿರ್ದೇಶಕರ ಹೆಸರು…

Read More

ಹೃದಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ನಟ ರಜನೀಕಾಂತ್ ನಿನ್ನೆ ತಡರಾತ್ರಿ ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆಗಿದ್ದಾರೆ.  ಸೆಪ್ಟೆಂಬರ್ 30 ರಂದು ರಜನಿಕಾಂತ್ ಅವರಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು. ಸೂಕ್ತ ಚಿಕಿತ್ಸೆ ಹಾಗೂ ವಿಶ್ರಾಂತಿಯ ಬಳಿಕ ನಿನ್ನೆ (ಅಕ್ಟೋಬರ್ 03) ರಾತ್ರಿ 11 ಗಂಟೆ ವೇಳೆಗೆ ಮನೆ ಸೇರಿದ್ದಾರೆ. ರಜನೀಕಾಂತ್ ಡಿಸ್​ಚಾರ್ಜ್ ಆಗಿರುವ ಮಾಹಿತಿಯನ್ನು ಚೆನ್ನೈ ಪೊಲೀಸರು ತಿಳಿಸಿದ್ದಾರೆ. ಸೆಪ್ಟೆಂಬರ್ 30 ರಂದು ರಜನೀಕಾಂತ್ ಆಸ್ಪತ್ರೆಗೆ ದಾಖಲಾಗಿದ್ದರು, ಅವರನ್ನು ಪರೀಕ್ಷೆಗೆ ಒಳಪಡಿಸಿದ್ದ ವೈದ್ಯರು, ರಜನೀಕಾಂತ್​ರ ಹೃದಯದಲ್ಲಿ ಸಮಸ್ಯೆ ಉಂಟಾಗಿರುವುದನ್ನು ಪತ್ತೆ ಹಚ್ಚಿದ್ದರು. ರಜನೀಕಾಂತ್​ರ ಹೃದಯದ ದೊಡ್ಡ ನಾಳದಲ್ಲಿ ಊತ ಬಂದಿತ್ತು, ಅದು ಹೆಚ್ಚಾಗಿ ರಕ್ತನಾಳವೇ ಒಡೆಯುವ ಅಪಾಯವಿತ್ತು, ಹಾಗಾಗಿ ಅಪೋಲೊ ಆಸ್ಪತ್ರೆ ವೈದ್ಯರು ಊದಿಕೊಂಡಿದ್ದ ರಕ್ತನಾಳಕ್ಕೆ ಸ್ಟಂಟ್ ಅಳವಡಿಸಿದ್ದರು. ಈ ಕ್ರಿಯೆಯನ್ನು ಶಸ್ತ್ರಚಿಕಿತ್ಸೆ ಇಲ್ಲದೆಯೇ ವೈದ್ಯರು ಮಾಡಿದ್ದರು. ಸ್ಟಂಟ್ ಅಳವಡಿಕೆ ಬಳಿಕ ಐಸಿಯುನಲ್ಲಿರಿಸಿ ಅವರ ಹೃದಯದ ಕಾರ್ಯ, ಒಟ್ಟಾರೆ ದೇಹದ ಆರೋಗ್ಯದ ಮೇಲೆ ನಿಗಾವಹಿಸಿದ್ದ…

Read More

ಬಿಗ್ ಬಾಸ್ ಸೀಸನ್ 11ಕ್ಕೆ ಸ್ಪರ್ಧಿಯಾಗಿ ವಕೀಲ ಜಗದೀಶ್ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಮನೆಗೆ ಕಾಲಿಟ್ಟ ದಿನದಿಂದಲೂ ತಮ್ಮ ಅಗ್ರೆಸೀವ್ ಹೇಳಿಕೆಗಳ ಮೂಲಕವೇ ಸದ್ದು ಮಾಡ್ತಿರುವ ಜಗದೀಶ್ ಇದೀಗ್ ವಕೀಲನೇ ಅಲ್ಲ ಅನ್ನೋದು ಗೊತ್ತಾಗಿದೆ. ಈತ ಮಾಡಿರುವ ವಂಚನೆ ಪ್ರಕರಣ ಇದೀಗ ಬಯಲಾಗಿದೆ. ಬಿಗ್ ಬಾಸ್ ಮನೆಯಲ್ಲಿರುವ ಕೆಎನ್ ಜಗದೀಶ್ ಕುಮಾರ್ ತಾವು ಎಲ್ಲ ಕಡೆಗಳಲ್ಲಿ ವಕೀಲ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದರೆ, ಅವರ ಪರವಾನಿಗೆಯನ್ನು ದೆಹಲಿ ಬಾರ್ ಕೌನ್ಸಿಲ್ ರದ್ದು ಮಾಡಿರೋ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಹೌದು, ಮೇ 7ರಂದು ಜಗದೀಶ್ ಅವರ ಪರವಾನಿಗೆಯನ್ನು ದೆಹಲಿ ಬಾರ್ ಕೌನ್ಸಿಲ್ ರದ್ದು ಮಾಡಿದೆ. ಇದಕ್ಕೆ ಅವರು ಮಾಡಿದ ವಂಚನೆಯೇ ಕಾರಣ ಎನ್ನಲಾಗುತ್ತಿದೆ. ಜಗದೀಶ್ ಕುಮಾರ್ ಅವರ 12ನೇ ತರಗತಿಯ ಮಾರ್ಕ್ಸ್ ಕಾರ್ಡ್​ ನಕಲಿ ಅನ್ನೋದು ದೃಢಪಟ್ಟಿದೆ. ಈ ಕಾರಣದಿಂದ ಅವರ ಡಿಗ್ರೀ ಹಾಗೂ ಎಲ್​ಎಲ್​ಬಿ ಪ್ರಮಾಣಪತ್ರವನ್ನು ಅಮಾನ್ಯಗೊಳಿಸಲಾಗಿದೆ. ಹಿಮಾಂಶು ಭಾಟಿ ಎಂಬುವವರು ಜಗದೀಶ್ ವಿರುದ್ಧ ದೂರು ನೀಡಿದ್ದರು. ಅವರ…

Read More

ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ನಟಿ ಹರ್ಷಿಕಾ ಪೂಣಚ್ಚ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸೆಪ್ಟೆಂಬರ್ 3ರಂದು ಬೆಳಗಿನ ಜಾವ 3ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗಳ ಆಗಮನದಿಂದ ಸಂತಸಗೊಂಡಿರೋ ಹರ್ಷಿಕಾ ಹಾಗೂ ಭುವನ್ ಕುಟುಂಬಸ್ಥರು ಈ ಬಗ್ಗೆ ಖುಷಿ ಶೇರ್ ಮಾಡಿದ್ದಾರೆ, ನಟಿ ಸುಂದರವಾದ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೊನ್ನಣ್ಣ, ಎಲ್ಲರಿಗೂ ನಮಸ್ಕಾರ, ನಮ್ಮ “ಚೈಕಾರ್ತಿ ಮೂಡಿ” ಜನಿಸಿದ್ದನ್ನು ತಿಳಿಸಲು ಸಂತೋಷ ಪಡುತ್ತಿದ್ದೇವೆ. ಹರ್ಷಿ ಮತ್ತು ಮಗಳು ಆರೋಗ್ಯವಾಗಿದ್ದಾರೆ. ನನ್ನ ಪ್ರಕಾರ ಮಗಳು ಹರ್ಷಿಕಾಳಂತೆ ಇದ್ದರೆ ಅವಳ ಪ್ರಕಾರ ಮಗು ನನ್ನ ಕಾಪಿ ಎನ್ನುತ್ತಿದ್ದಾಳೆ.ಎಲ್ಲರಿಗೂ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

Read More

‘ಬಿಗ್ ಬಾಸ್ ಕನ್ನಡ ಸೀಸನ್ 11’ ಆರಂಭವಾಗಿ ಇನ್ನೂ ವಾರ ಕಳೆದಿಲ್ಲ ಆಗಲೇ ದುರ್ಷಟನೆಯೊಂದು ನಡೆದು ಹೋಗಿದೆ. ಟಾಸ್ಕ್​ ವೇಳೆ ಅವಘಡ ಸಂಭವಿಸಿದ್ದು ಪತಿಣಾಮ ತ್ರಿವಿಕ್ರಂಗೆ ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ಟಾಸ್ಕ್ ವೇಳೆ ಆದ ಅವಘಡದಿಂದ ಇಡೀ ಬಿಗ್ ಬಾಸ್ ಮನೆ ಆತಂಕಕ್ಕೆ ಒಳಗಾಗಿದೆ. ತ್ರಿವಿಕ್ರಂ ಆದಷ್ಟು ಬೇಗ ಚೇತರಿಕೆ ಕಂಡು ಬರಲಿ ಎಂದು ಎಲ್ಲರೂ ಆಶಿಸುತ್ತಿದ್ದಾರೆ. ಇದೇ ವೇಳೆ ಗೋಲ್ಡ್ ಸುರೇಶ್​ಗೂ ಪೆಟ್ಟಾಗಿದೆ ಎನ್ನಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಸ್ವರ್ಗ ಹಾಗೂ ನರಕ ಎನ್ನುವ ಕಾನ್ಸೆಪ್ಟ್ ಮಾಡಲಾಗಿದೆ. ಸ್ವರ್ಗದಲ್ಲಿ ಇರುವವರಿಗೆ ಎಲ್ಲಾ ಸೌಕರ್ಯ ಸಿಗುತ್ತಿದೆ. ನರಕದಲ್ಲಿ ಇರುವವರಿಗೆ ಸಾಮಾನ್ಯ ಸೌಲಭ್ಯ ಮಾತ್ರ ಒದಗಿಸಲಾಗುತ್ತಿದೆ. ಎರಡೂ ಗುಂಪಿಗೆ ಒಂದು ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ ಆಡುವಾಗ ಅವಘಡ ಸಂಭವಿಸಿದೆ. ಟಾಸ್ಕ್ ಆಡುವಾಗ ಚೆಂಡು ಹಿಡಿದು ಓಡುತ್ತಿದ್ದ ತ್ರಿವಿಕ್ರಂ ಅವರು ಬಿದ್ದಿದ್ದಾರೆ. ಇದರಿಂದ ಅವರಿಗೆ ಪೆಟ್ಟಾಗಿದೆ. ಅವರನ್ನು ಕನ್ಫೆಷನ್​ ರೂಂಗೆ ಕರೆತರುವಂತೆ ಬಿಗ್ ಬಾಸ್ ಸೂಚನೆ…

Read More

ವಿಶ್ವದ ಎಲ್ಲ ರಾಷ್ಟ್ರಗಳು ಪೋಲಿಯೊ ರೋಗದಿಂದ ಮುಕ್ತವಾಗಿದ್ದರೆ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಮಾತ್ರ ಇನ್ನೂ ಈ ರೋಗದಿಂದ ಹೊರಬಂದಿಲ್ಲ. ಎರಡು ರಾಷ್ಟ್ರಗಳಲ್ಲಿ ಪೋಲಿಯೊ ಪ್ರಕರಣಗಳು ಹಠಾತ್​ ಏರಿಕೆ ಕಾಣುತ್ತಿದ್ದು ಇದರಿಂದ ಪೋಷಕರು ಕಂಗಾಲಾಗಿದ್ದಾರೆ. ಸದ್ಯ ಪಾಕ್​​ನಲ್ಲಿ 26, ಅಫ್ಘಾನಿಸ್ತಾನದಲ್ಲಿ​ 20ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿದೆ. ಇತ್ತೀಚೆಗೆ ಪಾಕಿಸ್ತಾನದ ಕಂದಹಾರ್ ಪ್ರಾಂತ್ಯದಲ್ಲಿ ಎರಡು ಮತ್ತು ಅಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತ್ಯದಲ್ಲಿ ಎರಡು ಪೋಲಿಯೊ ಪ್ರಕರಣಗಳು ವರದಿಯಾಗಿವೆ. ರೋಗವನ್ನು ನಿರ್ಮೂಲನೆ ಮಾಡುವ ಜಾಗತಿಕ ಪ್ರಯತ್ನಗಳಿಗೆ ಇದು ಸವಾಲಾಗಿದೆ. ಇತ್ತ, ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯೂಎಚ್​​ಒ) ಎರಡು ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಪೋಲಿಯೊ ಪ್ರಕರಣಗಳ ಬಗ್ಗೆ ಎಚ್ಚರಿಕೆ ನೀಡಿದೆ. ಅಫ್ಘಾನಿಸ್ತಾನದಲ್ಲಿ ಪೋಲಿಯೊ ಉಲ್ಬಣಿಸುತ್ತಿದ್ದರೂ, ಅಲ್ಲಿನ ತಾಲಿಬಾನ್ ಸರ್ಕಾರ ಲಸಿಕೆ ನೀಡುವುದನ್ನು ನಿಷೇಧಿಸಿದೆ. ಹೀಗಾಗಿ ಪೋಲಿಯೊ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೆ ಇದೆ. ಪಾಕಿಸ್ತಾನದಲ್ಲಿ ಇತ್ತೀಚೆಗೆ ಮೂರು ಹೊಸ ಪೋಲಿಯೊ ಪ್ರಕರಣಗಳನ್ನು ಡಬ್ಲ್ಯುಎಚ್‌ಒ ದೃಢಪಡಿಸಿದೆ. ದೇಶಾದ್ಯಂತ ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. WHOದ ಪ್ರಾದೇಶಿಕ ನಿರ್ದೇಶಕ ಡಾ.ಅಹ್ಮದ್ ಅಲ್-ಮಂಧಾರಿ ಪ್ರತಿಕ್ರಿಯಿಸಿ, “ಅಫ್ಘಾನಿಸ್ತಾನ…

Read More

ವಿಶ್ವದ ಎಲ್ಲ ರಾಷ್ಟ್ರಗಳು ಪೋಲಿಯೊ ರೋಗದಿಂದ ಮುಕ್ತವಾಗಿದ್ದರೆ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಮಾತ್ರ ಇನ್ನೂ ಈ ರೋಗದಿಂದ ಹೊರಬಂದಿಲ್ಲ. ಎರಡು ರಾಷ್ಟ್ರಗಳಲ್ಲಿ ಪೋಲಿಯೊ ಪ್ರಕರಣಗಳು ಹಠಾತ್​ ಏರಿಕೆ ಕಾಣುತ್ತಿದ್ದು ಇದರಿಂದ ಪೋಷಕರು ಕಂಗಾಲಾಗಿದ್ದಾರೆ. ಸದ್ಯ ಪಾಕ್​​ನಲ್ಲಿ 26, ಅಫ್ಘಾನಿಸ್ತಾನದಲ್ಲಿ​ 20ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿದೆ. ಇತ್ತೀಚೆಗೆ ಪಾಕಿಸ್ತಾನದ ಕಂದಹಾರ್ ಪ್ರಾಂತ್ಯದಲ್ಲಿ ಎರಡು ಮತ್ತು ಅಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತ್ಯದಲ್ಲಿ ಎರಡು ಪೋಲಿಯೊ ಪ್ರಕರಣಗಳು ವರದಿಯಾಗಿವೆ. ರೋಗವನ್ನು ನಿರ್ಮೂಲನೆ ಮಾಡುವ ಜಾಗತಿಕ ಪ್ರಯತ್ನಗಳಿಗೆ ಇದು ಸವಾಲಾಗಿದೆ. ಇತ್ತ, ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯೂಎಚ್​​ಒ) ಎರಡು ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಪೋಲಿಯೊ ಪ್ರಕರಣಗಳ ಬಗ್ಗೆ ಎಚ್ಚರಿಕೆ ನೀಡಿದೆ. ಅಫ್ಘಾನಿಸ್ತಾನದಲ್ಲಿ ಪೋಲಿಯೊ ಉಲ್ಬಣಿಸುತ್ತಿದ್ದರೂ, ಅಲ್ಲಿನ ತಾಲಿಬಾನ್ ಸರ್ಕಾರ ಲಸಿಕೆ ನೀಡುವುದನ್ನು ನಿಷೇಧಿಸಿದೆ. ಹೀಗಾಗಿ ಪೋಲಿಯೊ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೆ ಇದೆ. ಪಾಕಿಸ್ತಾನದಲ್ಲಿ ಇತ್ತೀಚೆಗೆ ಮೂರು ಹೊಸ ಪೋಲಿಯೊ ಪ್ರಕರಣಗಳನ್ನು ಡಬ್ಲ್ಯುಎಚ್‌ಒ ದೃಢಪಡಿಸಿದೆ. ದೇಶಾದ್ಯಂತ ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. WHOದ ಪ್ರಾದೇಶಿಕ ನಿರ್ದೇಶಕ ಡಾ.ಅಹ್ಮದ್ ಅಲ್-ಮಂಧಾರಿ ಪ್ರತಿಕ್ರಿಯಿಸಿ, “ಅಫ್ಘಾನಿಸ್ತಾನ…

Read More

ಇಸ್ರೋ ಹೊಸ ಹೊಸ ತಂತ್ರಜ್ಞಾನದ ಮೂಲಕ ದೇಶ ವಿದೇಶಿಗರು ಕೂಡ ಭಾರತವನ್ನು ತಿರುಗಿ ನೋಡುವಂತಾಗಿದೆ. ಚಂದ್ರಯಾನ 3 ಯಶಸ್ಸಿನ ನಂತರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಶುಕ್ರಗ್ರಹಕ್ಕೆ ಹೋಗಲು ಸಿದ್ಧತೆ ನಡೆಸುತ್ತಿದೆ. ಈ ಕಾರ್ಯಾಚರಣೆಯಲ್ಲಿ ಬಾಹ್ಯಾಕಾಶ ನೌಕೆಯು ಶುಕ್ರನನ್ನು ತಲುಪಲು 112 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ಇಸ್ರೋ ತಿಳಿಸಿದೆ. ಇದಕ್ಕೆ ವೀನಸ್ ಆರ್ಬಿಟರ್ ಮಿಷನ್ ಎಂದು ನಾಮಕರಣ ಮಾಡಿದ್ದು ಇಸ್ರೋ ಈ ನೌಕೆಯ ಉಡಾವಣೆ ದಿನಾಂಕವನ್ನು ಪ್ರಕಟಿಸಿದೆ. ಇದು ಶುಕ್ರವನ್ನು ತಲುಪುವ ಭಾರತದ ಮೊದಲ ಮಿಷನ್ ಆಗಿದೆ. ಮಿಷನ್ ಶುಕ್ರನ ವಾತಾವರಣ, ಮೇಲ್ಮೈ ಮತ್ತು ಭೂವೈಜ್ಞಾನಿಕ ಲಕ್ಷಣಗಳನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿದೆ. ಈ ಮಿಷನ್‌ಗಾಗಿ ಭಾರತ ಸರ್ಕಾರವು 1,236 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ. ಶುಕ್ರಯಾನ್-1 ಅನ್ನು ಮಾರ್ಚ್ 29, 2028 ರಂದು ಉಡಾವಣೆ ಮಾಡಲಾಗುವುದು ಎಂದು ಇಸ್ರೋ ಹೇಳಿದೆ. ಈ ಮಿಷನ್ ಶುಕ್ರನನ್ನು ಅಧ್ಯಯನ ಮಾಡಲು ವಿನ್ಯಾಸಗೊಳಿಸಲಾಗಿದೆ. ಇದು ಶುಕ್ರಗ್ರಹಕ್ಕೆ ಹೋಗಲು ಭಾರತದ ಮೊದಲ ಪ್ರಯತ್ನವಾಗಿದೆ. ಇಸ್ರೋದ ಶಕ್ತಿಶಾಲಿ…

Read More

ಸ್ಯಾಂಡಲ್‌ವುಡ್‌ ನ ಬುಲ್ ಬುಲ್ ಬೆಡಗಿ ನಟಿ ರಚಿತಾ ರಾಮ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕಳೆದ ಎರಡು ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಈ ಬಾರಿ ಬರ್ತಡೇ ಸೆಲೆಬ್ರೇಟ್ ಮಾಡಲ್ಲ ಎಂದು ರಚಿತಾ ರಾಮ್ ತಿಳಿಸಿದ್ದರು. ಆದ್ರೆ ಕಲ್ಟ್ ಸಿನಿಮಾ ತಂಡದ ಒತ್ತಾಯಕ್ಕೆ ಮಣಿದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಉಡುಪಿಯಲ್ಲಿ ಕಲ್ಟ್ ಚಿತ್ರದ ಸೆಟ್‌ನಲ್ಲಿಯೇ ಇಡೀ ತಂಡ ರಚಿತಾ ರಾಮ್ ಹುಟ್ಟುಹಬ್ಬವನ್ನ ಸೆಲೆಬ್ರೇಟ್ ಮಾಡಿದೆ. ಅದ್ಧೂರಿಯಾಗಿಯೇ ಈ ಸೆಲೆಬ್ರೇಷನ್ ನಡೆದಿದೆ. ರಚ್ಚು ಬರ್ತಡೇ ಸಂಭ್ರಮದಲ್ಲಿ ಕಲ್ಟ್ ಸಿನಿಮಾದ ನಟ ಝೈದ್ ಖಾನ್ ರಚಿತಾ ರಾಮ್ ಅವರಿಗೆ ಕೇಕ್ ತಿನಿಸಿದ್ದಾರೆ. ರಚಿತಾ ಕೂಡ ಝೈದ್ ಖಾನ್‌ಗೆ ಕೇಕ್ ತಿನ್ನಿಸಿದ್ದಾರೆ. ರಚ್ಚು ಬರ್ತಡೇ ಸೆಲೆಬ್ರೇಷನ್ ನಲ್ಲಿ ಕ್ಯಾಮರಾಮನ್ ಜೆ.ಎಸ್.ವಾಲಿ, ಆಲ್ ಓಕೆ ಅಲೋಕ್, ಡೈರೆಕ್ಷರ್ ಅನಿಲ್ ಕುಮಾರ್ ಸೇರಿದಂತೆ ಇನ್ನು ಅನೇಕರು ಭಾಗಿ ಆಗಿದ್ದರು. ಕಲ್ಟ್ ಸಿನಿಮಾದ 20 ದಿನದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಉಡುಪಿಯಲ್ಲಿಯೇ ಸದ್ಯ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಬಿರುಸಿನ ಚಿತ್ರೀಕರಣದ…

Read More

ಬಾಂಗ್ಲಾದೇಶದ ಮುಹಮ್ಮದ್ ಯೂನುಸ್ ನೇತೃತ್ವದ ಸರ್ಕಾರವು ಭಾರತದಲ್ಲಿನ ತನ್ನ ರಾಯಭಾರಿ ಸೇರಿದಂತೆ ಐದು ರಾಯಭಾರಿಗಳಿಗೆ ತಮ್ಮ ಹುದ್ದೆಗಳನ್ನು ತ್ಯಜಿಸಿ ತಕ್ಷಣ ಢಾಕಾಗೆ ಮರಳುವಂತೆ ಆದೇಶಿಸಿದೆ ಎಂದು ಬಾಂಗ್ಲಾ ದಿನಪತ್ರಿಕೆ ವರದಿ ಮಾಡಿದೆ ಮಧ್ಯಂತರ ಸರ್ಕಾರವು ಬ್ರಸೆಲ್ಸ್, ಕ್ಯಾನ್ಬೆರಾ, ಲಿಸ್ಬನ್, ನವದೆಹಲಿಯಲ್ಲಿರುವ ತನ್ನ ರಾಯಭಾರಿಗಳನ್ನು ಮತ್ತು ನ್ಯೂಯಾರ್ಕ್ ನಲ್ಲಿರುವ ವಿಶ್ವಸಂಸ್ಥೆಯ ಖಾಯಂ ನಿಯೋಗವನ್ನು ವಾಪಸ್ ಕರೆಸಿಕೊಂಡಿದೆ. ಇವರಲ್ಲಿ ಮುಸ್ತಾಫಿಜುರ್ ರೆಹಮಾನ್, ಭಾರತದ ಹೈಕಮಿಷನರ್; ಮುಹಮ್ಮದ್ ಅಬ್ದುಲ್ ಮುಹಿತ್, ನ್ಯೂಯಾರ್ಕ್ನಲ್ಲಿ ವಿಶ್ವಸಂಸ್ಥೆಯ ರಾಯಭಾರಿ ಮತ್ತು ಖಾಯಂ ಪ್ರತಿನಿಧಿ; ಮೆಹಬೂಬ್ ಹಸನ್ ಸಲೇಹ್, ಬೆಲ್ಜಿಯಂ ರಾಯಭಾರಿ * ಅಲ್ಲಮ ಸಿದ್ದಿಕಿ, ಆಸ್ಟ್ರೇಲಿಯಾದ ಹೈಕಮಿಷನರ್ ಮತ್ತು ಪೋರ್ಚುಗಲ್ ನ ರಾಯಭಾರಿ ರೆಜಿನಾ ಅಹ್ಮದ್. ಬ್ರಿಟನ್ ನ ಹೈಕಮಿಷನರ್ ಸೈದಾ ಮುನಾ ತಸ್ನೀಮ್ ಅವರನ್ನು ಇದೇ ರೀತಿ ಮರಳುವಂತೆ ಕೇಳಿಕೊಳ್ಳಲಾದ ನಂತರ ಪ್ರಮುಖ ರಾಜತಾಂತ್ರಿಕ ಪುನರ್ರಚನೆ ನಡೆದಿದೆ. ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ಭಾರತದೊಂದಿಗಿನ ಬಾಂಗ್ಲಾದೇಶದ ಸಂಬಂಧವು ಹದಗೆಟ್ಟಿದೆ. ಆಗಸ್ಟ್ 5 ರಂದು…

Read More