ಹೃದಯ ಸಂಬಂಧಿ ಸಮಸ್ಯೆಯಿಂದ ‘ಸೂಪರ್ ಸ್ಟಾರ್’ ರಜನಿಕಾಂತ್ ಇತ್ತೀಚೆಗೆ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ತಲೈವನ ಆರೋಗ್ಯ ಸುಧಾರಿಸಿದ್ದು ಮನೆಗೆ ಮರಳಿದ್ದಾರೆ. ರಜನಿಕಾಂತ್ ಆಸ್ಪತ್ರೆಗೆ ಸೇರಿದಾಗ ಅವರ ಆರೋಗ್ಯಕ್ಕಾಗಿ ಅನೇಕರು ಪ್ರಾರ್ಥಿಸಿದ್ದರು. ಅವರೆಲ್ಲರಿಗೂ ಈಗ ರಜನಿ ಧನ್ಯವಾದ ತಿಳಿಸಿದ್ದಾರೆ. ನರೇಂದ್ರ ಮೋದಿ, ಅಮಿತಾಭ್ ಬಚ್ಚನ್ ಸೇರಿದಂತೆ ಹಲವರಿಗೆ ತಲೈವ ಧನ್ಯವಾದ ತಿಳಿಸಿದ್ದಾರೆ. ಅ.3 ರಂದು ರಾತ್ರಿ ರಜನಿಕಾಂತ್ ಅವರ ಡಿಸ್ಚಾರ್ಜ್ ಆಗಿದೆ. ಮನೆಗೆ ಮರಳಿದ ಬಳಿಕ ಸ್ವಲ್ಪ ಚೇತರಿಸಿಕೊಂಡ ಅವರು ಸೋಶಿಯಲ್ ಮೀಡಿಯಾದಲ್ಲಿ ಸರಣಿ ಪೋಸ್ಟ್ ಮಾಡಿದ್ದಾರೆ. ತಮ್ಮ ಬಗ್ಗೆ ಕಾಳಜಿ ತೋರಿಸಿ ರಾಜಕೀಯದ ಗಣ್ಯರು, ಅಭಿಮಾನಿಗಳು, ಮಾಧ್ಯಮದವರು, ಸಿನಿಮಾದ ಸೆಲೆಬ್ರಿಟಿಗಳು ಹಾಗೂ ಆಪ್ತರಿಗೆ ಧನ್ಯವಾದ ಎಂದು ತಮಿಳಿನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಶೇಷವಾಗಿ ನರೇಂದ್ರ, ಅಮಿತಾಭ್ ಬಚ್ಚನ್, ಚಂದ್ರಬಾಬು ನಾಯ್ಡು, ತಮಿಳುನಾಡು ಗವರ್ನರ್ ರವಿ ಅವರಿಗೆ ರಜನಿಕಾಂತ್ ಧನ್ಯವಾದ ತಿಳಿಸಿದ್ದಾರೆ. ‘ನನ್ನ ಆರೋಗ್ಯದ ಬಗ್ಗೆ ಕಾಳಜಿ ತೋರಿಸಿದ್ದಕ್ಕೆ ಮತ್ತು ವೈಯಕ್ತಿಕವಾಗಿ ವಿಚಾರಿಸಿದ್ದಕ್ಕಾಗಿ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು’…
Author: Author AIN
ಥಿಯೇಟರ್ ನಲ್ಲಿ ಹಿಟ್ ಆದ ಸಿನಿಮಾಗಳು ಬಳಿಕ ಒಟಿಟಿಯಲ್ಲೂ ಕಮಾಲ್ ಮಾಡ್ತಾರೆ. ಕೆಲವೊಂದು ಸಿನಿಮಾಗಳು ನೇರವಾಗಿಯೇ ಒಟಿಟಿಗೆ ಎಂಟ್ರಿಕೊಡ್ತಾವೆ. ಕೆಲವೊಮ್ಮೆ ಒಟಿಟಿಯವರು ಕೂಡ ಸಿನಿಮಾನ ಖರೀದಿಸುವುದಿಲ್ಲ. ಆದರೆ, ಖ್ಯಾತ ನಿರ್ದೇಶಕ ಶಂಕರ್ ಅವರ ಚಿತ್ರವೊಂದು ನೇರವಾಗಿ ಒಟಿಟಿಗೆ ಬರುತ್ತಿದ್ದು ಇದು ಖ್ಯಾತ ನಿರ್ದೇಶಕನಿಗೆ ದೊಡ್ಡ ಅವಮಾನವಾಗಿದೆ. ‘ಇಂಡಿಯನ್ 2’ ಸೋಲಿನ ಬಳಿಕ ‘ಇಂಡಿಯನ್ 3’ ಚಿತ್ರವನ್ನು ಥಿಯೇಟರ್ಲ್ಲಿ ರಿಲೀಸ್ ಮಾಡದೆ ಒಟಿಟಿಯಲ್ಲಿ ಬಿಡುಗಡೆ ಮಾಡುವ ನಿರ್ಣಯ ಕೈಗೊಳ್ಳಲಾಗಿದೆ. ತಮಿಳು ಚಿತ್ರ ನಿರ್ದೇಶಕ ಶಂಕರ್ ಗರಂ ಆಗಿದ್ದಾರೆ. ಸೂಪರ್ ಹಿಟ್ ಸಿನಿಮಾಗಳ ಸರದಾರ ಇದೀಗ ಸೋಲಿನ ಸುಳಿಗೆ ಸಿಲುಕಿದ್ದಾರೆ. ತಾನಾಯ್ತು ತನ್ನ ಸಿನಿಮಾ ಆಯ್ತು ಎಂದು ಇರುವ ಶಂಕರ್ ಗೆ ಇಂಡಿಯನ್ ಸಿನಿಮಾದ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.ಭಾರೀ ನಿರೀಕ್ಷೆ ಮೂಡಿಸಿದ್ದ ‘ಇಂಡಿಯನ್-2’ ಸಿನಿಮಾ ನೆಲಕಚ್ಚಿತ್ತು. ಸದ್ಯ ‘ಇಂಡಿಯನ್-3’ ಹಾಗೂ ತೆಲುಗಿ ‘ಗೇಮ್ ಚೇಂಜರ್’ ಸಿನಿಮಾಗಳನ್ನು ತೆರೆಗೆ ತರುವ ಸನ್ನಾಹದಲ್ಲಿದ್ದಾರೆ. ‘ಇಂಡಿಯನ್ 2’ ಸಿನಿಮಾದಲ್ಲಿ ಖ್ಯಾತ ನಟ ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು…
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಸದ್ಯದ ಮಟ್ಟಿಗೆ ಹೊರ ಬರುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ನಿನ್ನೆ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮತ್ತೆ ಮುಂದೂಡಿದೆ. ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದರು. ಪೊಲೀಸರ ತನಿಖೆಯನ್ನು ತೀವ್ರವಾಗಿ ಟೀಕಿಸಿದ ನಾಗೇಶ್, ಪ್ರಕರಣದಲ್ಲಿ ಪೊಲೀಸರೇ ಸಾಕ್ಷ್ಯಗಳನ್ನು ಸೃಷ್ಟಿಸಿದ್ದಾರೆಂದು ವಾದಿಸಿದರು. ಆರೋಪ ಪಟ್ಟಿಯಲ್ಲಿ ದಾಖಲಿಸಿರುವ ಪ್ರಕರಣದ ಮಾಹಿತಿಗೂ, ಸಾಕ್ಷ್ಯಗಳು ನೀಡಿರುವ ಹೇಳಿಕೆಗೂ ಸಾಕಷ್ಟು ವ್ಯತ್ಯಾಸ ಇದೆಯೆಂದು ವಾದಿಸಿದ ಸಿವಿ ನಾಗೇಶ್, ರಸ್ತೆ ಬದಿ ಮ್ಯಾಜಿಕ್ ಮಾಡುವವರು ಖಾಲಿ ಡಬ್ಬ ತೋರಿಸಿ ಮೊಲ ಇದೆ ಎನ್ನುತ್ತಾರಲ್ಲ, ಪೊಲೀಸರ ಈ ತನಿಖೆ ಸಹ ಹಾಗೆಯೇ ಇದೆ ಎಂದರು. ದರ್ಶನ್ ಮನೆಯಿಂದ ವಶಪಡಿಸಿಕೊಳ್ಳಲಾದ ಬಟ್ಟೆ, ಶೂಗಳ ವಿಷಯವಾಗಿ ನ್ಯಾಯಾಲಯದ ಗಮನ ಸೆಳೆದ ಸಿವಿ ನಾಗೇಶ್, ‘ನಾನು ಕೃತ್ಯ ನಡೆದ ದಿನದಂದು ಧರಿಸಿದ್ದ ವಸ್ತುಗಳನ್ನು ತೋರಿಸುತ್ತೇನೆ’, ಹೀಗೆಂದು ದರ್ಶನ್ ಹೇಳಿದ್ದಾಗಿ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಆದರೆ ಪಂಚನಾಮೆಯಲ್ಲಿ ದರ್ಶನ್ ಚಪ್ಪಲಿ ಧರಿಸಿದ್ದರೆಂದು ಹೇಳಿದ್ದಾಗಿ ಉಲ್ಲೇಖಿಸಿದ್ದಾರೆ.…
ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಆರಂಭವಾಗಿ ಕೆಲ ದಿನಗಳು ಮಾತ್ರವೇ ಆಗಿದೆ. ಆದರೆ ಆಗಲೆ ಬಿಗ್ ಬಾಸ್ ವಿರುದ್ಧ ದೂರು ದಾಖಲಾಗಿದೆ. ಬಿಗ್ ಬಾಸ್ ಸೀಸನ್ 11 ಓಪನಿಂಗ್ ಪಡೆದುಕೊಂಡಿದ್ದು ಒಟ್ಟು 17 ಸ್ಪರ್ಧಿಗಳು ದೊಡ್ಮನೆ ಒಳಿಗೆ ಎಂಟ್ರಿ ಕೊಟ್ಟಿದ್ದಾರೆ. ಅದರಲ್ಲೂ ಹೊಸ ಅಧ್ಯಾಯದೊಂದಿಗೆ ಶುರುವಾದ ಈ ಶೋನಲ್ಲಿ ಸ್ವರ್ಗ ಹಾಗೂ ನರಕ ಎಂಬ ಎರಡು ಕಾನ್ಸೆಪ್ಟ್ ಇಟ್ಟುಕೊಂಡಿದೆ. ಆದರೆ ಶುರುವಾಗಿ ಒಂದೇ ವಾರಕ್ಕೆ ಬಿಗ್ಬಾಸ್ ಶೋ ವಿರುದ್ಧ ವಕೀಲೆಯೊಬ್ಬರು ರಾಜ್ಯ ಮಹಿಳಾ ಆಯೋಗಕ್ಕೆ ವಕೀಲೆ ದೂರು ನೀಡಿದ್ದಾರೆ. ಬಿಗ್ಬಾಸ್ 11ರ ಕಾರ್ಯಕ್ರಮದಲ್ಲಿ ಸ್ವರ್ಗ ಮತ್ತು ನರಕ ಎಂಬ ಎರಡು ವಿಚಾರದ ಮೇಲೆ ಸ್ಪರ್ಧಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಭಾರತದ ನಾಗರಿಕರನ್ನು ಖಾಸಗಿ ವ್ಯಕ್ತಿಗಳು ಬಂಧನದಲ್ಲಿರಿಸುವ ಹಕ್ಕನ್ನು ಹೊಂದಿರುವುದಿಲ್ಲ. ಪ್ರಸ್ತುತ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮದಲ್ಲಿ ಪುರುಷ ಮತ್ತು ಮಹಿಳೆಯರನ್ನು ಒಂದು ಜೈಲಿನ ರೂಪದಲ್ಲಿರುವ ಬಂದಿಖಾನೆಯಂತಹ ಕೊಠಡಿಯಲ್ಲಿ ನೂರಾರು ಕ್ಯಾಮೆರಾಗಳಲ್ಲಿ ರೆಕಾರ್ಡ್ ಆಗುವಂತೆ ಅಕ್ರಮ ಬಂಧನದಲ್ಲಿ ಇರಿಸಲಾಗಿದೆ. ಆ ಸ್ಪರ್ಧಿಗಳಿಗೆ…
ಭಾರತದಲ್ಲಿ ಪುಣೆ, ಬೆಂಗಳೂರು, ದೆಹಲಿ-ಎನ್‌ಸಿಆರ್ ಮತ್ತು ಮುಂಬೈನಂತಹ ನಗರಗಳಲ್ಲಿ ಇನ್ನೂ ನಾಲ್ಕು ರಿಟೇಲ್ ಸ್ಟೋರ್‌ಗಳನ್ನು ತೆರೆಯುವುದಾಗಿ ಆಪಲ್ ಸಂಸ್ಥೆ ಘೋಷಿಸಿದೆ. ಭಾರತದಲ್ಲಿ ನಮ್ಮ ಗ್ರಾಹಕರ ಸೃಜನಶೀಲತೆ ಮತ್ತು ಉತ್ಸಾಹದಿಂದ ನಾವು ಪ್ರೇರಿತರಾಗಿರುವುದರಿಂದ ಭಾರತದಲ್ಲಿ ಹೆಚ್ಚಿನ ಸ್ಟೋರ್‌ಗಳನ್ನು ತೆರೆಯಲು ನಾವು ಯೋಜನೆ ರೂಪಿಸಿದ್ದೇವೆ. ನಮ್ಮ ತಂಡಗಳನ್ನು ನಿರ್ಮಿಸಲು ನಾವು ಉತ್ಸಾಹಿತರಾಗಿದ್ದೇವೆ” ಎಂದು ಆಪಲ್‌ನ ರಿಟೇಲ್ ವ್ಯವಹಾರದ ಹಿರಿಯ ಉಪಾಧ್ಯಕ್ಷ ಡೀರ್ಡ್ರೆ ಒ’ಬ್ರಿಯಾನ್ ತಿಳಿಸಿದ್ದಾರೆ. ನಮ್ಮ ಅದ್ಭುತ ಉತ್ಪನ್ನಗಳು ಮತ್ತು ಸೇವೆಗಳನ್ನು ಅನ್ವೇಷಿಸಲು ಮತ್ತು ಶಾಪಿಂಗ್ ಮಾಡಲು ಮತ್ತು ನಮ್ಮ ಅಸಾಧಾರಣ, ಜ್ಞಾನವುಳ್ಳ ತಂಡದ ಸದಸ್ಯರೊಂದಿಗೆ ಸಂಪರ್ಕ ಸಾಧಿಸಲು ಇನ್ನೂ ಹೆಚ್ಚಿನ ಅವಕಾಶಗಳನ್ನು ಹೊಂದಲು ನಾವು ಇನ್ನೂ ಕಾಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. 2023ರ ಏಪ್ರಿಲ್‌ನಲ್ಲಿ ದೆಹಲಿ ಹಾಗೂ ಮುಂಬೈನಲ್ಲಿ ಆಪಲ್ ತನ್ನ ಎರಡು ಅಧಿಕೃತ ಸ್ಟೋರ್‌ಗಳನ್ನು ಅನಾವರಣ ಮಾಡಿದ ಬಳಿಕ ಈ ಘೋಷಣೆ ಹೊರಬಿದ್ದಿದೆ. ಹೊಸ ನಾಲ್ಕು ಸ್ಟೋರ್‌ಗಳು ಮುಂದಿನ ವರ್ಷ ತೆರೆಯಲಿದೆ ಎಂದು ಹೇಳಿದ್ದಾರೆ. ಬೆಂಗಳೂರಿನ ಯಾವ ಪ್ರದೇಶದಲ್ಲಿ ಆಪಲ್ ಸ್ಟೋರ್…
ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ಸಿನಿಮಾ ರಂಗಕ್ಕೆ ಗುಡ್ ಬಾಯ್ ಹೇಳ್ತಿದ್ದಾರೆ. ರಾಜಕೀಯಕ್ಕೆ ಎಂಟ್ರಿಕೊಡ್ತಿರುವ ಹಿನ್ನೆಲೆಯಲ್ಲಿ ನಟನೆಯಿಂದ ದೂರ ಉಳಿಯಲು ಮುಂದಾಗಿದ್ದಾರೆ. ಸದ್ಯ ವಿಜಯ್ ನಟನೆಯ ಕೊನೆಯ ಸಿನಿಮಾದ ಮುಹೂರ್ತ ಅದ್ದೂರಿಯಾಗಿ ನಡೆದಿದೆ. ಬಾಲಿವುಡ್ನ ಸ್ಟಾರ್ ನಟ ಬಾಬಿ ಡಿಯೋಲ್ ಈ ಸಿನಿಮಾದ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಾಬಿಗೆ ಇದು ಎರಡನೇ ತಮಿಳು ಸಿನಿಮಾ ಆಗಿದೆ. ಇದೇ ಸಿನಿಮಾದಲ್ಲಿ ಕನ್ನಡತಿ ಪ್ರಿಯಾಮಣಿ ಸಹ ನಟಿಸಲಿದ್ದಾರೆ. ಭಾರಿ ಬಜೆಟ್ ಸಿನಿಮಾ ಇದಾಗಿದ್ದು, ಕೆಲವೇ ದಿನಗಳಲ್ಲಿ ಶೂಟಿಂಗ್ ಪ್ರಾರಂಭ ಆಗಲಿದೆ. ವಿಜಯ್ ಇದೀಗ ತಮ್ಮ ಕೊನೆಯ ಸಿನಿಮಾದಲ್ಲಿ ನಟಿಸಲಿದ್ದು, ಆ ಸಿನಿಮಾವನ್ನು ಕರ್ನಾಟಕದ ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡಲಿದೆ. ಇದು ವಿಜಯ್ರ 69ನೇ ಸಿನಿಮಾ ಆಗಿರಲಿದೆ. ಕೆವಿಎನ್ ನಿರ್ಮಿಸಿ, ವಿಜಯ್ ನಟಿಸಲಿರುವ 69ನೇ ಸಿನಿಮಾದ ಮುಹೂರ್ತ ಅದ್ಧೂರಿಯಾಗಿ ನೆರವೇರಿದ್ದು, ಸಿನಿಮಾದ ನಿರ್ಮಾಪಕರು, ನಟ, ನಿರ್ದೇಶಕರು, ನಟಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮುಹೂರ್ತ ಕಾರ್ಯಕ್ರಮದಲ್ಲಿ ವಿಜಯ್, ಬಾಬಿ ಡಿಯೋಲ್, ಪೂಜಾ ಹೆಗ್ಡೆ, ನಟಿ…
ಲೆಬನಾನ್‌ನ ಬೈರುತ್ ಮೇಲೆ ಇಸ್ರೇಲ್ ನಡೆಸಿರುವ ದಾಳಿಯಲ್ಲಿ 30 ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಲೆಬನಾನ್‌ನ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ರಾಜಧಾನಿಯಲ್ಲಿರುವ ಕಟ್ಟಡದ ಮೇಲೆ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ 9ಕ್ಕೂ ಅಧಿಕ ಜನರು ಮೃತಪಟ್ಟೊದ್ದಾರೆ.. ಸೆಪ್ಟೆಂಬರ್ ತಿಂಗಳ ಕೊನೆಯಿಂದ ಲೆಬನಾನ್ ದೇಶದಲ್ಲಿ ಹಿಜ್ಬುಲ್ಲಾ ಉಗ್ರಗಾಮಿ ಗುಂಪುಗಳು ಪ್ರಬಲವಾಗಿ ಇರುವ ಪ್ರದೇಶಗಳ ಮೇಲೆ ಇಸ್ರೇಲ್ ದಾಳಿ ನಡೆಸುತ್ತಿದೆ. ಬುಧವಾರ ಯಾವುದೇ ಎಚ್ಚರಿಕೆ ನೀಡದೇ ಇಸ್ರೇಲ್ ದಾಳಿ ನಡೆಸಿದ್ದು ವಿಶ್ವಸಂಸ್ಥೆಯ ಪ್ರಧಾನ ಕಚೇರಿ, ಪ್ರಧಾನ ಮಂತ್ರಿ ಕಚೇರಿ ಮತ್ತು ಸಂಸತ್ತಿನ ಸಮೀಪದಲ್ಲಿರುವ ಕಟ್ಟಡಕ್ಕೆ ಅಪ್ಪಳಿಸಿದೆ. ಹಿಜ್ಬುಲ್ಲಾದ ನಾಗರಿಕ ರಕ್ಷಣಾ ಘಟಕದ ಏಳು ಸದಸ್ಯರು ಈ ದಾಳಿಯಲ್ಲಿ ಕೊಲ್ಲಲ್ಪಟ್ಟರು ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ. ನಿರಂತರವಾಗಿ ಇಸ್ರೇಲ್ ಮತ್ತು ಹಿಜ್ಬುಲ್ಲಾಗಳ ನಡುವೆ ಲೆಬನಾನ್‌ನ ಗಡಿಯಾದ್ಯಂತ ಪ್ರತಿದಿನ ಯುದ್ಧ ನಡೆಯುತ್ತಿದೆ. ಅಕ್ಟೋಬರ್ 7, 2023 ರಂದು ಹಮಾಸ್‌ನ ಗಡಿಯಾಚೆಗೆ ನಡೆದ ದಾಳಿಯಲ್ಲಿ 1,200 ಇಸ್ರೇಲಿಗಳು ಮೃತಪಟ್ಟಿದ್ದರು.…
2019ರ ಈಸ್ಟರ್ ಭಾನುವಾರ ನಡೆದ ಬಾಂಬ್ ದಾಳಿ ಹಾಗು ಮತ್ತಿತರ ಅಹಿತಕರ ಘಟನೆಗಳಿಂದಾಗಿ ಶ್ರೀಲಂಕಾದ ಪ್ರವಾಸೋದ್ಯಮ ಗಮನಾರ್ಹ ಕುಸಿತ ಕಂಡಿತ್ತು. ಸದ್ಯ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಈ ಮಧ್ಯೆ ಭಾರತ ಸೇರಿದಂತೆ 35 ದೇಶಗಳಿಗೆ ವೀಸಾಮುಕ್ತ ಪ್ರವಾಸಕ್ಕೆ ಅವಕಾಶ ಕಲ್ಪಿಸಿದೆ. ಕಳೆದ ತಿಂಗಳು ಶ್ರೀಲಂಕಾ ತನ್ನ ಪೋರ್ಟಲ್ ಸಮಸ್ಯೆಯಿಂದಾಗಿ ಆನ್ಲೈನ್ ವೀಸಾ ಸೇವೆಯನ್ನು ನಿಲ್ಲಿಸಿತ್ತು. ಇದರ ಪರಿಣಾಮ, ಅನೇಕರು ವೀಸಾ ಪಡೆಯಲು ಸಾಕಷ್ಟು ಸಮಯ ಕಾಯಬೇಕಾದಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ದ್ವೀಪರಾಷ್ಟ್ರಕ್ಕೆ ಭೇಟಿ ನೀಡಲು ಕಡ್ಡಾಯ ವೀಸಾ ನಿರ್ಬಂಧವನ್ನು ತೆಗೆದುಹಾಕಿದೆ. ಭಾರತೀಯರು ವೀಸಾಕ್ಕೆ ಕಾಯದೇ ವರ್ಷದ ಯಾವುದೇ ಸಮಯದಲ್ಲೂ ಪ್ರವಾಸ ಕೈಗೊಳ್ಳಬಹುದಾಗಿದೆ. ಭಾರತದ ಜೊತೆಗೆ ಯುಕೆ, ಯುಎಸ್ಎ, ಕೆನಡಾ, ಜರ್ಮನಿ, ಆಸ್ಟ್ರೇಲಿಯಾ, ಸೌದಿ ಅರೇಬಿಯಾ, ಚೀನಾ, ರಷ್ಯಾ, ದಕ್ಷಿಣ ಕೋರಿಯಾ ಮತ್ತು ಜಪಾನ್ ಸೇರಿದಂತೆ ಒಟ್ಟು 35 ದೇಶಗಳಿಗೆ ವೀಸಾಮುಕ್ತ ಅವಕಾಶಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಬ್ರೆ ತಿಳಿಸಿದ್ದಾರೆ. ಇದರಿಂದಾಗಿ, ಪ್ರವಾಸಿಗರು ಈ ಹಿಂದೆ…
ಪೂರ್ವ ಕಾಂಗೋದ ಕಿವು ಸರೋವರದಲ್ಲಿ 278 ಪ್ರಯಾಣಿಕರಿದ್ದ ದೋಣಿ ಮುಳುಗಿದ ಪರಿಣಾಮ ಕನಿಷ್ಠ 78 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಗವರ್ನರ್ ತಿಳಿಸಿದ್ದಾರೆ. ಈ ದೋಣಿ ದುರಂತದಲ್ಲಿ ಸಾವಿನ ಸಂಖ್ಯೆ ಇನ್ನೂ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ದಕ್ಷಿಣ ಕಿವು ಪ್ರಾಂತ್ಯದ ಗವರ್ನರ್ ಜೀನ್-ಜಾಕ್ವೆಸ್ ಪುರುಸಿ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ಹೇಳಿದೆ. ಪ್ರಯಾಣಿಕರಿಂದ ತುಂಬಿದ್ದ ದೋಣಿಯು ಕಿಟುಕು ಬಂದರಿನಿಂದ ಕೇವಲ ಮೀಟರ್ (ಗಜ) ದೂರದಲ್ಲಿ ಡಾಕ್ ಮಾಡಲು ಪ್ರಯತ್ನಿಸುತ್ತಿರುವಾಗ ಮುಳುಗಿತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಇದು ದಕ್ಷಿಣ ಕಿವು ಪ್ರಾಂತ್ಯದ ಮಿನೋವಾದಿಂದ ಉತ್ತರ ಕಿವು ಪ್ರಾಂತ್ಯದ ಗೋಮಾಗೆ ಪ್ರಯಾಣ ಮಾಡುತ್ತಿತ್ತು ಎನ್ನಲಾಗಿದೆ. ದೋಣಿ ಮುಳುಗಿದ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ರಕ್ಷಣಾ ಸಿಬ್ಬಂದಿ ಸುಮಾರು 10 ಮಂದಿಯನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಇನ್ನು ಮುಳುಗಿದ ದೋಣಿಯಿಂದ ಕನಿಷ್ಠ 50 ಶವಗಳನ್ನು ಹೊರತೆಗೆಯಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. 10 ಮಂದಿ ಬದುಕುಳಿದಿದ್ದು, ಅವರೆನ್ನಲ್ಲ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.…
ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಸೂಪರ್ ಸ್ಟಾರ್ ರಜನಿಕಾಂತ್ ನಿನ್ನೆಯಷ್ಟೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ಈ ಬೆನ್ನಲ್ಲೇ ರಜನಿಕಾಂತ್ ಅಭಿಮಾನಿಗಳಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಎದುರಾಗಿದೆ. ರಜನೀಕಾಂತ್ ರ ಹೊಸ ಸಿನಿಮಾ ‘ವೆಟ್ಟೆಯಾನ್’ ವಿರುದ್ಧ ದೂರು ದಾಖಲಾಗಿದೆ. ‘ವೆಟ್ಟೆಯಾನ್’ ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಟ್ರೈಲರ್ನಲ್ಲಿ ಕೇಳಿ ಬರುವ ಕೆಲ ಸಂಭಾಷಣೆಗಳ ವಿರುದ್ಧ ವಕೀಲರೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲು ಮಾಡಿದ್ದಾರೆ. ಟ್ರೈಲರ್ ನಲ್ಲಿ ಬಳಸಲಾಗಿರುವ ಕೆಲವು ಸಂಭಾಷಣೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಲನಿವೇಲುಸ್ವಾಮಿ ಎಂಬುವರು ಹೈಕೋರ್ಟ್ನ ಮಧುರೈ ಬೆಂಚ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದು, ‘ವೆಟ್ಟೆಯಾನ್’ ಸಿನಿಮಾದಲ್ಲಿ ಬಳಸಲಾಗಿರುವ ಎನ್ಕೌಂಟರ್ ಕುರಿತಾದ ಸಂಭಾಷಣೆಗಳ ಬಗ್ಗೆ ಆಕ್ಷೇಪಣೆ ಎತ್ತಿದ್ದು, ಸಿನಿಮಾದ ಬಿಡುಗಡೆಗೆ ತಾತ್ಕಾಲಿಕ ತಡೆ ನೀಡಬೇಕೆಂದು ಮನವಿ ಮಾಡಿದ್ದರು. ಸಿನಿಮಾದ ಟ್ರೈಲರ್ನಲ್ಲಿ ನಾಯಕ ಎನ್ಕೌಂಟರ್ ಕುರಿತಾಗಿ ಹೀರೋಯಿಕ್ ಸಂಭಾಷಣೆಗಳನ್ನು ಹೇಳುವ ದೃಶ್ಯಗಳಿವೆ. ಈ ದೃಶ್ಯಗಳು ಹಾಗೂ ಸಂಭಾಷಣೆಗಳ ಬಗ್ಗೆ ಪಲನಿವೇಲುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಸಿನಿಮಾದಲ್ಲಿ ಅಕ್ರಮ ಚಟುವಟಿಕೆಯಾದ…