ಪಿಎಂ ಕುಸುಮ್ ಯೋಜನೆಯಡಿ ಜಾಲಮುಕ್ತ ಸೌರ ಚಾಲಿತ ಕೃಷಿ ಪಂಪ್‍ಸೆಟ್‍ಗಳಿಗಾಗಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ರೈತರು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕಿದೆ. ಕೇಂದ್ರ ಸರ್ಕಾರದ ಪಿಎಂ ಕುಸುಮ್ ಯೋಜನೆಯಡಿ ಜಾಲಮುಕ್ತ ಸೌರ ಶಕ್ತಿ ಚಾಲಿತ ಪಂಪ್‍ಸೆಟ್‍ಗಳನ್ನು ಅಳವಡಿಸಿಕೊಳ್ಳಲು ರೈತರು ಅರ್ಜಿ ಹಾಕಬಹುದು. ಅರ್ಜಿಯನ್ನು ಕೆ. ಆರ್. ಇ. ಡಿ. ಎಲ್. ಅಧಿಕೃತ ಜಾಲತಾಣದ ಮೂಲಕ ಹಾಕಬಹುದು. 2023-24ನೇ ಸಾಲಿನ ನೂತನ ಯೋಜನೆಯಡಿ ಸೋಲಾರ್ ಪಂಪ್‌ಸೆಟ್ ಅಳವಡಿಕೆಗೆ ಹಾಗೂ ಯಂತ್ರೋಪಕರಣಗಳ ಖರೀದಿಗೆ ಉತ್ತಮ ಸಬ್ಸಿಡಿ ದೊರೆಯಲಿದೆ. ಯಂತ್ರೋಪಕರಣಗಳ ಖರೀದಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇಕಡಾ 50 ರಷ್ಟು ಸಹಾಯಧನ ದೊರೆಯಲಿದೆ. ಇತರೆ ವರ್ಗದವರಿಗೆ ಶೇಕಡಾ 40 ರಷ್ಟು ಸಬ್ಸಿಡಿ ದೊರೆಯಲಿದೆ. ಇನ್ನು ಸೋಲಾರ್ ಆಧರಿತ 3 ಹೆಚ್‌ಪಿ ಸೋಲಾರ್ ಪಂಪ್‌ಸೆಟ್‌ಗಳಿಗೆ 2 ಲಕ್ಷವಾದರೆ ಶೇಕಡಾ 50ರಂತೆ ಒಂದು ಲಕ್ಷ ರೂಪಾಯಿ ಸಹಾಯಧನ ಸಿಗಲಿದೆ. ನ್ನು 3 ಹೆಚ್‌ಪಿ ಸೋಲಾರ್ ಗಿಂತ ಮೇಲ್ಪಟ್ಟ ಸೋಲಾರ್ ಪಂಪ್‌ಸೆಟ್‌ಗಳಿಗೆ 3 ಲಕ್ಷ ಖರ್ಚಿಗೆ 1.5ಲಕ್ಷ ರೂಪಾಯಿ ಸಹಾಯಧನ…
Author: Author AIN
ಬೆಂಗಳೂರು: ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ (ಪಿಎಂ ಸೂರ್ಯ ಗೃಹ ಉಚಿತ ವಿದ್ಯುತ್) ಯೋಜನೆ ಯಡಿಯಲ್ಲಿ ಮನೆಗಳ ಛಾವಣಿಯ ಮೇಲೆ ಸೌರ ಫಲಕಗಳನ್ನು ಸ್ಥಾಪಿಸಲು ಅಗತ್ಯವಾದ ಆರ್ಥಿಕ ಸಹಾಯವನ್ನು ಒದಗಿಸಲಾಗುತ್ತದೆ. ಯೋಜನೆಯು ಸೌರ ಫಲಕಗಳನ್ನು ಅಳವಡಿಸಲು ಖರ್ಚಾಗುವ ವೆಚ್ಚದ 40% ವರೆಗೆ ಸಬ್ಸಿಡಿಯನ್ನು ಒಳಗೊಂಡಿರುತ್ತದೆ. ಭಾರತದಲ್ಲಿನ ಮನೆಗಳಿಗೆ ಉಚಿತ ವಿದ್ಯುತ್ ಒದಗಿಸುವ ಗುರಿಯನ್ನು ಈ ಸರ್ಕಾರಿ ಯೋಜನೆ ಹೊಂದಿದ್ದು, ಫೆಬ್ರವರಿ 15, 2024 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. 75,000 ಕೋಟಿಗೂ ಹೆಚ್ಚು ಹೂಡಿಕೆಯ ಈ ಉಪಕ್ರಮವು ಪ್ರತಿ ತಿಂಗಳು 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಅನ್ನು ಒದಗಿಸುತ್ತದೆ ಎಂದು ಅವರು ಹೇಳಿದರು. 2-ಕಿಲೋವ್ಯಾಟ್ ಸಿಸ್ಟಂಗಳನ್ನು ಸ್ಥಾಪಿಸುವವರಿಗೆ, ಹೊಸ ಸಬ್ಸಿಡಿ 60,000 ರೂ. ಆಗಿರುತ್ತದೆ. 3 ಕಿಲೋವ್ಯಾಟ್ ರೂಫ್‌ಟಾಪ್ ಸೋಲಾರ್ ಸಿಸ್ಟಮ್ ಅಳವಡಿಸುವ ಕುಟುಂಬಗಳಿಗೆ ಹಳೆಯ ಯೋಜನೆಯಡಿ 54,000ರೂ .ಬದಲಿಗೆ 78,000ರೂ. ಸಬ್ಸಿಡಿ ಸಿಗುತ್ತದೆ. ನವೆಂಬರ್ 2023 ರ ಹೊತ್ತಿಗೆ, ಯೋಜನೆಯ ಹಂತ-II ಅಡಿಯಲ್ಲಿ…
ಸಿಹಿ ಕುಂಬಳಕಾಯಿ ಸೇವನೆಯಿಂದ ಹಲವು ಲಾಭವಿದೆ. ಕುಂಬಳಕಾಯಿಯಲ್ಲಿರುವ ಪೌಷ್ಟಿಕ ಅಂಶ ಹೊಟ್ಟೆಗೆ ಸಂಬಂಧಿಸಿದ ರೋಗವನ್ನು ದೂರ ಮಾಡುವುದಲ್ಲದೇ ಹೃದಯ ಸಂಬಂಧಿತ ಕಾಯಿಲೆಯನ್ನೂ ದೂರ ಮಾಡುತ್ತದೆ. ಅದಲ್ಲದೆ ಪುರುಷರ ಆರೋಗ್ಯಕ್ಕೆ ಹೆಚ್ಚು ಪ್ರಯೋಜನ ಸಿಗುತ್ತದೆ. ದೇಹಕ್ಕೆ ಪೌಷ್ಟಿಕಾಂಶದ ಜೊತೆ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಕಡಿಮೆ ಕ್ಯಾಲೋರಿ ಹೊಂದಿದ್ದು, ನಿಮ್ಮ ಡಯಟ್ ನಲ್ಲಿ ಸೇರಿಸಿಕೊಳ್ಳಬಹುದು. ಪುರುಷ ಫಲವತ್ತತೆ ಸುಧಾರಿಸುತ್ತದೆ ಸಿಹಿ ಕುಂಬಳಕಾಯಿ ಬೀಜಗಳಲ್ಲಿ ಕಂಡುಬರುವ ಸತುವಿನಿಂದ ಪುರುಷರು ಪ್ರಯೋಜನ ಪಡೆಯಬಹುದು. ಯಾಕೆಂದರೆ ಸತು ಮಟ್ಟ ಕಡಿಮೆಯಿದ್ದರೆ ಪುರುಷರಲ್ಲಿ ವೀರ್ಯದ ಗುಣಮಟ್ಟ ಕಡಿಮೆ ಇರುತ್ತದೆ. ಈ ಬೀಜಗಳನ್ನು ದೈನಂದಿನ ಆಹಾರದಲ್ಲಿ ಸೇರಿಸುವುದರಿಂದ ಒಟ್ಟಾರೆ ವೀರ್ಯದ ಗುಣಮಟ್ಟ ಸುಧಾರಿಸಬಹುದು. ಡಿಕೆ ಪಬ್ಲಿಷಿಂಗ್ ಬರೆದ ‘ಹೀಲಿಂಗ್ ಫುಡ್ಸ್’ ಪುಸ್ತಕದ ಪ್ರಕಾರ ಸಿಹಿ ಕುಂಬಳಕಾಯಿ ಬೀಜಗಳು ಪುರುಷರ ಫಲವತ್ತತೆಯನ್ನು ಉತ್ತೇಜಿಸಲು ಮತ್ತು ಪ್ರಾಸ್ಟ್ರೇಟ್ ಸಮಸ್ಯೆಗಳನ್ನು ತಡೆಗಟ್ಟಲು ಉಪಯುಕ್ತವಾಗಿವೆ. ಪ್ರೋಟೀನ್ ಸಮೃದ್ಧವಾಗಿದೆ ಸಿಹಿ ಕುಂಬಳಕಾಯಿ ಬೀಜಗಳಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಇದು ಸ್ನಾಯುಗಳನ್ನು ಬಲಪಡಿಸಲು ಅವಶ್ಯಕವಾಗಿದೆ. ಯುನೈಟೆಡ್…
ಸೂರ್ಯೋದಯ – 6:51 AM ಸೂರ್ಯಾಸ್ತ – 5:51 PM ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ, ಹೇಮಂತ್ ಋತು, ಪುಷ್ಯಾ ಮಾಸ, ತಿಥಿ – ಪಂಚಮಿ ನಕ್ಷತ್ರ – ಶತಭಿಷೆ ರಾಹು ಕಾಲ – 09:00 ದಿಂದ 10:30 ವರೆಗೆ ಯಮಗಂಡ – 01:30 ದಿಂದ 03:00 ವರೆಗೆ ಗುಳಿಕ ಕಾಲ – 06:00 ದಿಂದ 07:30 ವರೆಗೆ ಬ್ರಹ್ಮ ಮುಹೂರ್ತ – 5:15 AM ದಿಂದ 6:03 AM ವರೆಗೆ ಅಮೃತ ಕಾಲ – 2:31 PM ದಿಂದ 4:04 PM ವರೆಗೆ ಅಭಿಜಿತ್ ಮುಹುರ್ತ – 11:59 AM ದಿಂದ 12:43 PM ವರೆಗೆ ನಿಮ್ಮ ಹೆಸರು, ಜನ್ಮ ದಿನಾಂಕ, ಜನ್ಮ ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು ಅದರ ಜೊತೆಗೆ ಭಾವ ಚಿತ್ರ ಹಾಗೂ ಹಸ್ತಸಾಮುದ್ರಿಕೆ ಕಳಿಸಿದರೆ ಸಂಪೂರ್ಣ ಭವಿಷ್ಯ ತಿಳಿಸಲಾಗುವುದು. ಸೋಮಶೇಖರ್ ಗುರೂಜಿ B.Sc ಜ್ಯೋತಿಷ್ಯ ಶಾಸ್ತ್ರ,ವಾಸ್ತು…
ದೊಡ್ಡಬಳ್ಳಾಪುರ: ಹೊಸಕೋಟೆ ದಾಬಸ್ ಪೇಟೆಯ ಹೆದ್ದಾರಿಯ ದೊಡ್ಡಬಳ್ಳಾಪುರ ತಾಲ್ಲೂಕಿನ ಮೇಷ್ಟ್ರು ಮನೆ ಕ್ರಾಸ್ ಬಳಿ ಹೆದ್ದಾರಿ ಬದಿಯಲ್ಲಿ ಗಿಡಗಳಿಗೆ ನೀರು ಹಾಯಿಸುತ್ತಿದ್ದ ಟ್ಯಾಂಕರ್ʼಗೆ ಟಾಟಾ ಏಸ್ ವಾಹನ ಡಿಕ್ಕಿಯಾಗಿ ಚಾಲಕನಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. https://ainlivenews.com/do-you-know-why-you-feel-like-having-more-sex-in-winter-heres-the-reason/ ತ್ಯಾಮಗೋಂಡ್ಲು ಮೂಲದ ಕಾರ್ತಿಕ್ (30) ಗಂಭೀರ ಗಾಯಗೊಂಡ ಚಾಲಕನಾಗಿದ್ದು, ಹೆದ್ದಾರಿಯಲ್ಲಿ ಗಿಡಗಳಿಗೆ ನೀರು ಹಾಯಿಸುತ್ತಿದ್ದ ಸಂದರ್ಭದಲ್ಲಿ ದಾಬಸ್ ಪೇಟೆ ಕಡೆಯಿಂದ ಬಂದ ಟಾಟಾ ಏಸ್ ಗೂಡ್ಸ್ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟಾಟಾ ಏಸ್ ಗೂಡ್ಸ್ ವಾಹನ ಚಾಲಕನಿಗೆ ಗಂಭೀರ ಗಾಯಗೊಂಡಿದ್ದು ಗಾಯಾಳು ಚಾಲಕನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ, ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ನಾಡಿನ ಜನ ಬೆಲೆ ಏರಿಕೆಗೆ ತಯಾರಾಗಿ ಎಂದು ಈ ಸರ್ಕಾರ ಸಂದೇಶ ಕೊಡುತ್ತಿದೆ ಎಂದು ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬೆಲೆ ಏರಿಕೆ ಅಚ್ಚರಿ ತರೋ ವಿಷಯ ಅಲ್ಲ. ರಾಜ್ಯದ ಜನರು ಟಿಕೆಟ್ ಬೆಲೆ ಏರಿಕೆಯನ್ನು 2-3 ದಿನಗಳಲ್ಲಿ ಮರೆತು ಹೋಗುತ್ತಾರೆ. https://ainlivenews.com/do-you-know-why-you-feel-like-having-more-sex-in-winter-heres-the-reason/ ಎರಡು ದಿನ ಆಕ್ರೋಶ ವ್ಯಕ್ತಪಡಿಸುತ್ತಾರೆ ಅಷ್ಟೇ. ಮೂರನೇ ದಿನ ಜನರೇ ಅಡ್ಜೆಸ್ಟ್ ಆಗುತ್ತಾರೆ. ಇದೇ ಸರ್ಕಾರ ಡೀಸೆಲ್, ಪೆಟ್ರೋಲ್ ಮೇಲೆ ಸೆಸ್ ಹಾಕಿದ್ದರೂ ಪ್ರತಿಭಟನೆ ಮಾಡಿದ್ರಾ? ಅದಕ್ಕೆ ಅಡ್ಜೆಸ್ಟ್ ಆದರು. ಸ್ಟಾಂಪ್ ಡ್ಯೂಟಿ ಜಾಸ್ತಿ ಮಾಡಿದರು. ಗೈಡ್‌ಲೈನ್ಸ್ ವ್ಯಾಲ್ಯೂ, ಮದ್ಯದ ದರ ಏರಿಕೆ ಮಾಡಿದರು. ಈಗ ನೀರಿನ ದರವೂ ಏರಿಕೆ ಆಗುತ್ತಂತೆ. ನೀರಿನ ದರವೂ ಏರಿಕೆ ಆಗುತ್ತೆ. ಹಾಲಿನ ದರ ಏನಾಗಬಹುದು ಎಂದು ಈ ಸರ್ಕಾರ ಹೇಳುತ್ತಿದೆ. ಹೊಸ ವರ್ಷದಲ್ಲಿ ನಾಡಿನ ಜನ ಬೆಲೆ ಏರಿಕೆಗೆ ತಯಾರಾಗಿ ಎಂದು ಈ ಸರ್ಕಾರ ಸಂದೇಶ ಕೊಡುತ್ತಿದೆ…
ನವದೆಹಲಿ: ಈ ದುರಂತ ಸರ್ಕಾರವು ದೆಹಲಿಯ ಅಭಿವೃದ್ಧಿಯನ್ನು ನಿಂತಲ್ಲಿಯೇ ನಿಲ್ಲಿಸಿದೆ ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ ಆಪ್ ರಾಷ್ಟ್ರ ರಾಜಧಾನಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ ಎಂದು ನರೇಂದ್ರ ಮೋದಿ ಟೀಕಿಸಿದ್ದಾರೆ. ಎಎಪಿ ದೆಹಲಿಗೆ ಆಪತ್ತಾಗಿದೆ. ಮೊದಲು ಕಳ್ಳತನ ಮತ್ತು ದುರಹಂಕಾರವು ದೆಹಲಿಯನ್ನು ದುರಂತದಂತಹ ಪರಿಸ್ಥಿತಿಗೆ ತಳ್ಳಿತು. ಕಳೆದ 10 ವರ್ಷಗಳಿಂದ ದೆಹಲಿಯು ದೊಡ್ಡ ದುರಂತದಿಂದ ಸುತ್ತುವರೆದಿದೆ. ಈ ದುರಂತ ಸರ್ಕಾರವು ದೆಹಲಿಯ ಅಭಿವೃದ್ಧಿಯನ್ನು ನಿಂತಲ್ಲಿಯೇ ನಿಲ್ಲಿಸಿದೆ. ನಾವು ದುರಂತವನ್ನು ಸಹಿಸುವುದಿಲ್ಲ, ನಾವು ಅದನ್ನು ಬದಲಾಯಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. https://ainlivenews.com/do-you-know-why-you-feel-like-having-more-sex-in-winter-heres-the-reason/ ಇಂದು ಭಾರತವು ರಾಜಕೀಯ ಮತ್ತು ಆರ್ಥಿಕ ಸ್ಥಿರತೆಯ ಸಂಕೇತವಾಗಿದೆ. ಭಾರತದ ಈ ಪಾತ್ರವು 2025ರಲ್ಲಿ ಇನ್ನಷ್ಟು ಬಲಗೊಳ್ಳಲಿದೆ. ಈ ವರ್ಷ ವಿಶ್ವದಲ್ಲಿ ಭಾರತದ ಸ್ಥಾನವನ್ನು ಬಲಪಡಿಸುವ ವರ್ಷವಾಗಿದೆ. ಭಾರತವು ವಿಶ್ವದ ಅತಿದೊಡ್ಡ ಉತ್ಪಾದನಾ ಕೇಂದ್ರಗಳಲ್ಲಿ ಒಂದಾಗಿದೆ. ನಾನು…
ಬೆಂಗಳೂರು: ಆತ ಮೂರು ವರ್ಷದಿಂದ ಯುವತಿಯೋರ್ವಳನ್ನ ಪ್ರೀತಿಸ್ತಿದ್ದ..ಆದ್ರೆ ಮಧ್ಯದಲ್ಲಿ ಗಲಾಟೆಯಾಗಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು..ಆವತ್ತಿಂದ ಸುಮ್ಮನಿದ್ದವನಿಗೆ ಹೊಸವರ್ಷ ಆಕೆಯನ್ನ ಮರಳಿ ಕೊಡಬಹುದು ಅಂದುಕೊಂಡಿದ್ದ..ಕರೆ ಮಾಡಿ ಮತ್ತೆ ಜೊತೆಯಾಗು ಅಂದಿದ್ದ..ಆದ್ರೆ ಆಕೆಯ ನಿರ್ಧಾರ ಈತನನ್ನ ಸಾವಿನ ಮನೆ ಸೇರುವಂತೆ ಮಾಡಿದೆ. ಹೌದು..ಸತೀಶ್ ಬೆಳ್ಳಂದೂರಿನ ಖಾಸಗಿ ಐಟಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ…ತಂದೆ ತಾಯಿಗೆ ಒಬ್ಬನೇ ಮಗ..ಬಾಣಸವಾಡಿಯ ಕನಕದಾಸ ಲೇಔಟ್ ನಲ್ಲಿ ವಾಸವಾಗಿದ್ದ..ಜನವರ 2 ಅಂದ್ರೆ ನಿನ್ನೆ ಸಂಜೆ ಸ್ವಲ್ಪ ಸುಸ್ತಾಗ್ತಿದೆ ಅಂತಾ ರೂಮಿಗೆ ಹೋದವನಿಗೆ ಅದ್ಯಾವ ನೆನಪು ಕಾಡಿತ್ತೋ ಏನೊ..ರೂಮಿನಲ್ಲಿದ್ದ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ..ಇವನ ಈ ನಿರ್ಧಾರಕ್ಕೆ ಕಾರಣ ಈತನ ಪಕ್ಕದಲ್ಲಿ ನಿಂತು ಫೋಟೊ ಕ್ಲಿಕ್ಕಿಸಿಕೊಂಡಿರೊ ಇದೇ ಯುವತಿ ಅನ್ನೋದೇ ನಿಜಕ್ಕೂ ವಿಪರ್ಯಾಸ.. ಹೌದು ಸತೀಶ್ ಮತ್ತು ಯುವತಿ ಒಂದೇ ಕಾಲೇಜಿನಲ್ಲಿ ಓದ್ತಾ ಇದ್ರು ಆದ್ರೆ ಬ್ರಾಂಚ್ ಮಾತ್ರ ಬೇರೆ ಬೇರೆಯಾಗಿತ್ತು..ಒಂದೇ ಹಾಲ್ ನಲ್ಲಿ ಪರೀಕ್ಷೆ ಬರೆಯುವ ವೇಳೆ ಇಬ್ಬರಿಗೂ ಪರಸ್ಪರ ಪರಿಚಯವಾಗಿದ್ದು..ನಂತರ ಸ್ನೇಹ ಪ್ರೀತಿಗೆ ತಿರುಗಿತ್ತು..ಮೂರು ವರ್ಷದಿಂದ ಇಬ್ಬರು…
ಕೊಪ್ಪಳ: ಗ್ಯಾರಂಟಿ ಯೋಜನೆಗಳಿಗೆ ಜನರ ತೆರಿಗೆ ಹಣವನ್ನೇ ನಾವು ಕೊಡುತ್ತಿದ್ದೇವೆ ಎಂದು ಸಚಿವ ಎನ್.ಎಸ್ ಬೋಸರಾಜು ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದಾಗಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಿರುವುದು ಸುಳ್ಳು ಆರೋಪ. ಗ್ಯಾರಂಟಿ ಯೋಜನೆಗಳಿಗೆ ಕೂಡಾ ಜನರ ತೆರಿಗೆ ಹಣವನ್ನೇ ನಾವು ಕೊಡುತ್ತಿದ್ದೇವೆ. ಕಳ್ಳತನ ಮಾಡಿ ಹಣ ಕೊಡೋಕೆ ಆಗುತ್ತಾ? ಡೀಸೆಲ್ ಬೆಲೆ ಹೆಚ್ಚಳವಾಗಿದೆ, ಖರ್ಚು ವೆಚ್ಚ ಹೆಚ್ಚಾಗಿದೆ. ಹೀಗಾಗಿ ಬಸ್ ದರ ಹೆಚ್ಚಳ ಮಾಡುತ್ತಿದ್ದಾರೆ ಎಂದು ಹೇಳಿದರು. https://ainlivenews.com/do-you-know-why-you-feel-like-having-more-sex-in-winter-heres-the-reason/ ಸಂಪುಟ ಪುನಾರಚನೆ ವಿಚಾರವಾಗಿ, ಖಾಲಿ ಇರುವ ಹುದ್ದೆ ಮಾತ್ರ ಭರ್ತಿ ಎಂದು ಸಿಎಂ ಹೇಳಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಡಿನ್ನರ್ ಮೀಟಿಂಗ್ ಬಗ್ಗೆ ಅಪಾರ್ಥ ಕಲ್ಪಿಸೋದು ಬೇಡ. ನಿನ್ನೆ ಕ್ಯಾಬಿನೆಟ್ ನಂತರ ಎಲ್ಲರನ್ನು ಊಟಕ್ಕೆ ಕರೆದಿದ್ದರು. ಬೆಂಗಳೂರಿನಲ್ಲಿ ಇದ್ದವರು ಊಟ ಮಾಡಿ ಬಂದಿದ್ದಾರೆ. ಇನ್ನೂ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ. ಪ್ರಹ್ಲಾದ್ ಜೋಶಿ ಸಹೋದರನ ಮೇಲೆ ಆರೋಪ ಬಂದಿತ್ತು. ಹಾಗಂತ ಪ್ರಹ್ಲಾದ್ ಜೋಶಿ ರಾಜೀನಾಮೆ…
ಶಿವಮೊಗ್ಗ: ಸುಮಾರು 16 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ ಹುಟ್ಟೂರಿಗೆ ಆಗಮಿಸಿದ ಯೋಧನಿಗೆ ಅದ್ದೂರಿಯಾಗಿ ಸ್ವಾಗತ ಕೋರಲಾಗಿದೆ.ಭಾರತೀಯ ಸೇನೆಯಲ್ಲಿ ಕಳೆದ 16 ವರ್ಷಗಳಿಂದ ಸೇವೆ ಸಲ್ಲಿಸಿ ಇಂದು ಹುಟ್ಟೂರಾದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಡಗಂಟಿಗೆ ಆಗಮಿಸಿದ ಸೈನಿಕನಿಗೆ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳು ಸೇರಿ ಸಾರ್ವಜನಿಕರು ತೆರೆದ ವಾಹನದಲ್ಲಿ 20 ಕಿ. ಲೋ ಮೀಟರ್ ಗೂ ಹೆಚ್ಚು ಮೆರವಣಿಗೆ ಮಾಡುವ ಮೂಲಕ ಅದ್ದೂರಿ ಸ್ವಾಗತ ಕೋರಿದ್ದಾರೆ. https://ainlivenews.com/do-you-know-why-you-feel-like-having-more-sex-in-winter-heres-the-reason/ ಶಿರಾಳಕೊಪ್ಪದ ಖಾಸಗಿ ಬಸ್ ನಿಲ್ದಾಣದಿಂದ ಶುರುವಾದ ಮೆರವಣಿಗೆ ಅಡಗಂಟಿಯ ವರೆಗೆ ನಡೆದಿದೆ ರಸ್ತೆ ಉದ್ದಕ್ಕೂ ವಿದ್ಯಾರ್ಥಿಗಳು ಸಾರ್ವಜನಿಕರು ದೇಶ ಸೇವೆ ಸಲ್ಲಿಸಿ ಮರಳಿದ ಯೋಧನಿಗೆ ಹೂಮಳೆ ಸುರಿದು ಸ್ವಾಗಸಿದ್ದಾರೆ.ಯೋಧ ಪ್ರವೀಣ್ ಅಡಗಂಟಿ ಸೇನೆಯಲ್ಲಿ 47 ಮೆಡಲ್ ಗಳನ್ನು ಪಡೆದಿದ್ದಾರೆ.ಇವರಿಗೆ ಸ್ವಾಗತ ಕೋರಿದ ರೀತಿ ಸೇನೆಗೆ ಸೇರುವ ಯುವಕರಿಗೆ ಪ್ರೇರಣೆಯಾಗಲಿದೆ.