Author: Author AIN

ದಕ್ಷಿಣ ಕೊರಿಯಾದಲ್ಲಿ ಮುಷ್ಕರ ನಿರತ 4,900 ವೈದ್ಯರ ಲೈಸೆನ್ಸ್ ಗಳನ್ನು ಅಮಾನತುಗೊಳಿಸುವ ಕಾರ್ಯ ವಿಧಾನಗಳನ್ನು ಆರಂಭಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ವೈದ್ಯಕೀಯ ತರಬೇತಿ ಯೋಜನೆಯಲ್ಲಿ ಸುಧಾರಣೆ ತರುವ ಸರಕಾರದ ನಿರ್ಧಾರವನ್ನು ವಿರೋಧಿಸಿ 4,900 ಜೂನಿಯರ್ ವೈದ್ಯರು ರಾಜೀನಾಮೆ ನೀಡಿ ಪ್ರತಿಭಟನೆ ನಡೆಸಿದ್ದಾರೆ. ಇದು ದೇಶದ ವೈದ್ಯಕೀಯ ಕ್ಷೇತ್ರದ ಕಾರ್ಯನಿರ್ವಹಣೆಗೆ ಸಮಸ್ಯೆಯಾಗಿದೆ. ದೇಶದಲ್ಲಿರುವ ವೈದ್ಯರ ಕೊರತೆಯನ್ನು ನೀಗಿಸಲು ವೈದ್ಯರ ತರಬೇತಿ ಯೋಜನೆಯನ್ನು ಹೆಚ್ಚಿಸಲು ಸರಕಾರ ನಿರ್ಧರಿಸಿದೆ. ಇದರಿಂದ ವೈದ್ಯಕೀಯ ಸೇವೆಯ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮವಾಗಲಿದೆ ಎಂದು ಜೂನಿಯರ್ ವೈದ್ಯರು ವಿರೋಧಿಸುತ್ತಿದ್ದಾರೆ. ತಕ್ಷಣ ಸೇವೆಗೆ ಮರಳದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರಕಾರ ಎಚ್ಚರಿಕೆ ನೀಡಿದ್ದರೂ ಸುಮಾರು 12,000 ಜೂನಿಯರ್ ವೈದ್ಯರು ಕೆಲಸಕ್ಕೆ ಹಾಜರಾಗಿಲ್ಲ. ಆದ್ದರಿಂದ ಸೇನೆಯ ವೈದ್ಯಕೀಯ ಸಿಬ್ಬಂದಿಯ ಸೇವೆಯನ್ನು ಬಳಸಲು ಸರಕಾರ ನಿರ್ಧರಿಸಿದೆ. `ಮಾರ್ಚ್ 8ರವರೆಗೆ 49,000ಕ್ಕೂ ಅಧಿಕ ತರಬೇತಿ ವೈದ್ಯರಿಗೆ(ಟ್ರೈನೀ ಡಾಕ್ಟರ್ಸ್) ಆಡಳಿತಾತ್ಮಕ ಅಧಿಸೂಚನೆಯನ್ನು ರವಾನಿಸಲಾಗಿದೆ. ಪ್ರಥಮ ಹಂತದಲ್ಲಿ ಮುಷ್ಕರ ನಿರತ ವೈದ್ಯರ ಲೈಸೆನ್ಸ್ ಗಳನ್ನು ಅಮಾನತುಗೊಳಿಸಲಾಗುವುದು…

Read More

ಇಂದಿನ ಜೀವನ ಶೈಲಿಯಿಂದ ಸಾಕಷ್ಟು ಮಹಿಳೆಯರು ತಾಯಿತನವನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲ. ಇದನ್ನೆ ಬಂಡವಾಳ ಮಾಡಿಕೊಂಡ ಕೆಲವರು ಮಕ್ಕಳಿಲ್ಲದವರಿಗೆ ಮಕ್ಕಳನ್ನು ಹೆತ್ತು ಕೊಟ್ಟು ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ. ಇದೀಗ ಚೀನಾದ ಕಂಪನಿಯೊಂದು ಮಗುವಿಗೆ ಜನ್ಮ ನೀಡುವ ಮಹಿಳೆಗೆ ಸಖತ್ ಆಫರ್‌ ನೀಡಿದೆ. 28 ರಿಂದ 29 ವರ್ಷ ವಯಸ್ಸಿನ ಯಾವುದೇ ಮಹಿಳೆ ಮಗುವಿಗೆ ಜನ್ಮ ನೀಡುವ ಮೂಲಕ ಹಣವನ್ನು ಗಳಿಸಬಹುದು ಎಂದು ಕಂಪನಿ ಹೇಳಿದೆ. ಇದು ಒಂದು ರೀತಿಯ ವಾಣಿಜ್ಯ ಜಾಹೀರಾತಾಗಿದ್ದು, ಮಕ್ಕಳನ್ನು ಹೊಂದುವ ಮೂಲಕ ಹಣವನ್ನು ಸಂಪಾದಿಸಲು ಮಹಿಳೆಯರನ್ನು ಪ್ರೋತ್ಸಾಹಿಸುತ್ತಿದೆ. ಚೀನಾದ ಹೆನಾನ್ ಪ್ರಾಂತ್ಯದಲ್ಲಿರುವ ಹುಚೆನ್ ಹೌಸ್ ಕೀಪಿಂಗ್, ಮಹಿಳೆಯರು ಬಾಡಿಗೆ ತಾಯಂದಿರಾಗುವ ಮೂಲಕ ಹಣವನ್ನು ಗಳಿಸಬಹುದು ಎಂದು ಆಫರ್ ನೀಡುತ್ತಿದೆ. ಅಷ್ಟೇ ಅಲ್ಲ, ಅವರ ವಯಸ್ಸಿಗೆ ಅನುಗುಣವಾಗಿ ಪ್ಯಾಕೇಜ್ ನೀಡಲಾಗುತ್ತಿದೆ. 28 ವರ್ಷದ ಮಹಿಳೆ ತಾಯಿಯಾದರೆ ಆಕೆಗೆ 220,000 ಯುವಾನ್ ಅಂದರೆ 25,23,783 ರೂಪಾಯಿ ಮತ್ತು 29 ವರ್ಷದ ಮಹಿಳೆ ಮಗುವಿಗೆ ಜನ್ಮ ನೀಡಿದರೆ ಆಕೆಗೆ 210,000 ಯುವಾನ್ ಅಂದರೆ…

Read More

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋಬಾಲ್ ಅವರು ಭೇಟಿಯಾಗಿದ್ದಾರೆ. ಭೇಟಿಯ ವೇಳೆ ಗಾಜಾದ ಬೆಳವಣಿಗೆಗಳು ಮತ್ತು ತುರ್ತು ಮಾನವೀಯ ನೆರವು ಒದಗಿಸುವ ಕುರಿತಂತೆ ಚರ್ಚೆ ನಡೆಸಿದ್ದಾರೆ. ‘ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋಬಾಲ್ ಅವರು, ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು,ಗಾಜಾದ ಬೆಳವಣಿಗೆ ಕುರಿತಂತೆ ಮಾಹಿತಿ ನೀಡಲಾಯಿತು’ಎಂದು ಪ್ರಧಾನಿಗಳ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ‘ಒತ್ತೆಯಾಳುಗಳ ಬಿಡುಗಡೆ ಮತ್ತು ಮಾನವೀಯ ನೆರವು ಕುರಿತಂತೆಯೂ ಚರ್ಚೆ ನಡೆದಿದೆ’ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ. ಇದೇ ವೇಳೆ ಇಸ್ರೇಲ್ ಎನ್‌ಎಸ್‌ಎ ಝಾಕಿ ಹನೆಬಿ ಅವರನ್ನೂ ಡೋಬಾಲ್ ಭೇಟಿಯಾದರು. ಪ್ರಧಾನಿ ನರೇಂದ್ರ ಮೋದಿ ಅವರು ಸಹ ಈ ಭಾಗದ ಯುಎಇ, ಕತಾರ್, ಸೌದಿ ಅರೇಬಿಯಾ, ಈಜಿಪ್ಟ್ ಮತ್ತು ಜೋರ್ಡಾನ್‌ನಂತಹ ಪ್ರಮುಖ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಅಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಉತ್ತೇಜಿಸುವ ಚರ್ಚೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

Read More

ಕಡಿಮೆ ಅವಧಿಯಲ್ಲಿ ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ರಿಲಯನ್ಸ್ ಒಡೆತನದ ಜಿಯೋ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದೆ. ಸಾಕಷ್ಟು ಕ್ಷೇತ್ರದಲ್ಲಿ ಯಶಸ್ಸು ಕಂಡಿರುವ ಜಿಯೋ ಇದೀಗ ಯುಪಿಐ ಪಾವತಿ ಮಾರುಕಟ್ಟೆಗೆ ಪ್ರವೇಶ ಮಾಡಲು ಸಿದ್ದವಾಗಿದೆ. ಜಿಯೋ ಪೇ ಆ್ಯಪ್ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ. ಸದ್ಯ ಸೌಂಡ್‌ಬಾಕ್ಸ್ ಸಹಾಯದಿಂದ ಕಂಪನಿಯು ತನ್ನ ವ್ಯವಹಾರವನ್ನು ವಿಸ್ತರಿಸಲು ಒತ್ತು ನೀಡುತ್ತಿದೆ. ಜಿಯೋ ಸೌಂಡ್‌ಬಾಕ್ಸ್‌ನ ಪ್ರಯೋಗ ನಡೆಯುತ್ತಿದ್ದು, ಶೀಘ್ರದಲ್ಲೇ ಅಂಗಡಿಗಳಿಗೆ ಎಂಟ್ರಿಕೊಡಲಿದೆ. ಇದರೊಂದಿಗೆ ಮುಖೇಶ್ ಅಂಬಾನಿ ನೇರವಾಗಿ ಪೇಟಿಎಂ, ಫೋನ್ ಪೇ, ಗೂಗಲ್ ಪೇ ಜೊತೆ ಸ್ಪರ್ಧಿಸಲಿದ್ದಾರೆ. ಇದರೊಂದಿಗೆ ಅಂಗಡಿ ಮಾಲೀಕರಿಗೂ ಭರ್ಜರಿ ಆಫರ್ ಗಳನ್ನು ನೀಡಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಪೇಟಿಎಂ ಪಾವತಿ ಬ್ಯಾಂಕ್‌ಗೆ ಸಂಬಂಧಿಸಿದಂತೆ ದೊಡ್ಡ ಮಾಹಿತಿಯು ಬೆಳಕಿಗೆ ಬಂದಿರುವ ಸಮಯದಲ್ಲಿ ಜಿಯೋದ ಈ ಯೋಜನೆಯು ಇತರ ಕಂಪನಿಗಳಿಗೆ ದೊಡ್ಡ ಹೊಡೆತ ಬೀಳಲಿದೆ. ಸದ್ಯಕ್ಕೆ ಪೇಟಿಎಂ ಪೇಮೆಂಟ್ ಬ್ಯಾಂಕ್ ಅನ್ನು ಬ್ಯಾನ್ ಮಾಡಲಾಗಿದೆ. ಆದಾಗ್ಯೂ, ಇದು ಪೇಟಿಎಂ ಯುಪಿಐ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಬೆಳವಣಿಗೆಯ…

Read More

ತೆಲುಗು ಸಿನಿಮಾ ರಂಗದ ನಿರ್ದೇಶಕ, ಮಾಜಿ ಬಿಗ್ ಬಾಸ್ ಸ್ಪರ್ಧಿ ಸೂರ್ಯ ಕಿರಣ್ ನಿಧನರಾಗಿದ್ದಾರೆ. ಜಾಂಡಿಸ್ ನಿಂದ ಬಳಲುತ್ತಿದ್ದ ಕಿರಣ್ ಚಿಕಿತ್ಸೆ ಫಲಕಾರಿಯಾಗದೆ ಚೆನ್ನೈನಲ್ಲಿ ಮೃತಪಟ್ಟಿದ್ದಾರೆ. 51 ವರ್ಷದ ಸೂರ್ಯ ಕಿರಣ್ ಸಾವನ್ನು ಅವರ ಸ್ನೇಹಿತರು ಖಚಿತಪಡಿಸಿದ್ದಾರೆ. ಸೂರ್ಯ ಕಿರಣ್ ನಿಧನಕ್ಕೆ ಟಾಲಿವುಡ್​ನ ಅನೇಕರು ಕಂಬನಿ ಮಿಡಿದಿದ್ದಾರೆ. ಸಿನಿಮಾದ ಜೊತೆಗೆ ತೆಲುಗು ‘ಬಿಗ್​ ಬಾಸ್​ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುವ ಮೂಲಕ ಸೂರ್ಯ ಕಿರಣ್ ಫೇಮಸ್​ ಆಗಿದ್ದರು. ಸೂರ್ಯ ಕಿರಣ್​ ಅವರ ನಿಧನದ ಸುದ್ದಿಯನ್ನು ಪಿಆರ್​ಒ ಸುರೇಶ್​ ಅವರು ಸೋಶಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ‘ಜಾಂಡಿಸ್​ನಿಂದ ಸೂರ್ಯ ಕಿರಣ್​ ನಿಧನರಾಗಿದ್ದಾರೆ. ತೆಲುಗಿನಲ್ಲಿ ‘ಸತ್ಯಂ’, ‘ರಾಜು ಭಾಯ್​’ ಮುಂತಾದ ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಎಕ್ಸ್​ನಲ್ಲಿ (ಟ್ವಿಟರ್​) ಸುರೇಶ್​ ಅವರು ಪೋಸ್ಟ್​ ಮಾಡಿದ್ದಾರೆ. ಸೂರ್ಯ ಕಿರಣ್ ಕುಟುಂಬದವರು ಮೂಲತಃ ಕೇರಳದ ತಿರುವನಂತಪುರದವರು. ಚೆನ್ನೈನಲ್ಲಿ ​ ಜನಿಸಿದ ಸೂರ್ಯ ಕಿರಣ್ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಅವರು ಬಾಲನಟನಾಗಿ ಅಭಿನಯಿಸಿದ್ದರು. ಆ ಮೂಲಕ…

Read More

ನಟಿ ಕೃತಿ ಕರಬಂಧ ಹಾಗೂ ಆಕೆಯ ಬಾಯ್​ಫ್ರೆಂಡ್ ಪುಲ್ಕಿತ್ ಸಾಮ್ರಾಟ್ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ. ಇದುವರೆಗೂ ಈ ಜೋಡಿ ಎಲ್ಲಿ ಮದುವೆ ಆಗಲಿದೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಇದೀಗ ಇದಕ್ಕೆ ಉತ್ತರ ಸಿಕ್ಕಿದೆ. ದೆಹಲಿಯ ಐಷಾರಾಮಿ ಹೋಟೆಲ್​ನಲ್ಲಿ ಕೃತಿ ಹಾಗೂ ಪುಲ್ಕಿತ್ ಸಾಮ್ರಾಟ್ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ದೆಹಲಿಯಲ್ಲಿರುವ ಐಟಿಸಿ ಗ್ರ್ಯಾಂಡ್ ಭಾರತ್​ನಲ್ಲಿ ಪಕ್ಕಾ ಹಿಂದೂ ಸಂಪ್ರದಾಯದಂತೆ ಕೃತಿ ಹಾಗೂ ಪುಲ್ಕಿತ್ ಹಸೆಮಣೆ ಏರುತ್ತಿದ್ದಾರೆ. 300 ಎಕರೆ ಜಾಗದಲ್ಲಿರುವ ಈ ಹೋಟೆಲ್ ಯುರೋಪ್​ನ ವಾಸ್ತುಶಿಲ್ಪದಲ್ಲಿ ನಿರ್ಮಾಣ ಮಾಡಲಾಗಿದೆ. ಅರಾವಳಿ ಶ್ರೇಣಿಯಲ್ಲಿ ಈ ಹೋಟೆಲ್ ಇದೆ. ಈ ಹೋಟೆಲ್​ನಲ್ಲಿ ನಾಲ್ಕು ವಿಲ್ಲಾ, 100 ಡಿಲಕ್ಸ್ ರೂಮ್, ಸ್ವಿಮ್ಮಿಂಗ್ ಪೂಲ್ಸ್​ಗಳು ಕೂಡ ಇವೆ. ಗಾಲ್ಫ್ ಮೈದಾನ, ಸ್ಪಾ ಮೊದಲಾದ ಸೇವೆಗಳು ಲಭ್ಯವಿದೆ. ಡೆಸ್ಟಿನೇಷನ್ ವೆಡ್ಡಿಂಗ್​ಗೆ ಈ ಜಾಗ ಹೇಳಿ ಮಾಡಿಸಿದಂತೆ ಇದೆ. ಕೃತಿ ಹಾಗೂ ಪುಲ್ಕಿತ್ ದೆಹಲಿಯಲ್ಲಿ ಹುಟ್ಟಿ ಬೆಳೆದವರು. ಈ ಕಾರಣಕ್ಕೆ ದೆಹಲಿಯಲ್ಲೇ ಮದುವೆ ಆಗಬೇಕು ಎಂದು…

Read More

‘ಅಗ್ನಿಸಾಕ್ಷಿ’ ಧಾರವಾಹಿ ಮೂಲಕ ಖ್ಯಾತಿ ಘಳಿಸಿರುವ ನಟ ವಿಜಯ್ ಸೂರ್ಯ ಸದ್ಯ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಈ ಮಧ್ಯೆ ವಿಜಯ್ ಸಿನಿಮಾವೊಂದಕ್ಕೆ ನಾಯಕನಾಗಿ ಎಂಟ್ರಿಕೊಟ್ಟಿದ್ದಾರೆ.  ‘ಸ್ವೀಚ್ ಕೇಸ್ ಎನ್‌’ ಹೆಸರಿನ ಸಿನಿಮಾದಲ್ಲಿ ವಿಜಯ್ ನಟಿಸುತ್ತಿದ್ದು ಸದ್ಯ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ವಿಜಯ್ ಸೂರ್ಯ ಕನ್ನಡದ ಜೊತೆಗೆ ತೆಲುಗು ಕಿರುತೆರೆಯಲ್ಲೂ ಸಕ್ರಿಯರಾಗಿದ್ದಾರೆ. ಇದರ ಜೊತೆಗೆ ಕನ್ನಡ ಸಿನಿಮಾಗಳಲ್ಲಿ ವಿಜಯ್ ಮಿಂಚ್ತಿದ್ದಾರೆ. ಇದೀಗ ‘ಸ್ವೀಚ್ ಕೇಸ್ ಎನ್’ ಚಿತ್ರದ ಟ್ರೈಲರ್ ಮೂಲಕ ವಿಜಯ್ ಗಮನ ಸೆಳೆದಿದ್ದಾರೆ. ‘ಸ್ವೀಚ್ ಕೇಸ್ ಎನ್‌’ ಸಿನಿಮಾವು ಐಟಿ ಕಂಪನಿ ನಡೆಯುವ ಒಬ್ಬ ಹುಡುಗನ ಜರ್ನಿಯ ಕಥೆಯಾಗಿದೆ. ಸಿನಿಮಾ ರಿಯಲ್ ಬದುಕಿಗೆ ಕನೆಕ್ಟ್ ಆಗುವ ಹಾಗೇ ನೈಜವಾಗಿ ಮೂಡಿ ಬಂದಿದೆ. ರಿಯಲ್ ಸ್ಟೋರಿ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ಐಟಿ ಕಂಪನಿಯಲ್ಲಿ ಮ್ಯಾನೇಜರ್ ಜೊತೆ ನಡೆಯುವ ಮಾತುಕತೆ, ಕೆಲಸದಲ್ಲಿ ಎದುರಿಸುವ ಚಾಲೆಂಜ್ ಇವೆಲ್ಲವನ್ನೂ ಸಿನಿಮಾದಲ್ಲಿ ತೋರಿಸಲಾಗಿದೆ ಎಂದು ವಿಜಯ್ ಸೂರ್ಯ ಹೇಳಿದ್ದಾರೆ. ‘ಸ್ವೀಚ್ ಕೇಸ್ ಎನ್’ ಚಿತ್ರಕ್ಕೆ ಚೇತನ್ ಶೆಟ್ಟಿ…

Read More

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಟಿಕೇಟ್ ನೀಡಿದರೆ ಚುನಾವಣೆ ಎದುರಿಸಲು ಸಿದ್ದ ಎಂದು ನಟ ಸಾಧುಕೋಕಿಲಾ ಹೇಳಿದ್ದಾರೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಲು ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲಾ ಅವರಿಗೆ ಟಿಕೆಟ್ ನೀಡುವಂತೆ ಪಕ್ಷದ ವರಿಷ್ಠರಿಗೆ ಕ್ರಿಶ್ಚಿಯನ್ ಸಮುದಾಯ ಒತ್ತಾಯಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಶ್ಚಿಯನ್ ಸಮುದಾಯ ಈ ಭಾಗದಲ್ಲಿ ಇರುವುದರಿಂದ ಸಾಧು ಕೋಕಿಲಾ ಅವರಿಗೇ ಟಿಕೆಟ್ ನೀಡುವಂತೆ ಮನವಿ ಮಾಡಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿರುವ ಸಾಧು ಕೋಕಿಲಾ , ನಾನು ಒಂದು ಧರ್ಮಕ್ಕೆ ಸೀಮಿತಿ ಆಗಿಲ್ಲ. ಬೆಂಗಳೂರಿನಲ್ಲಿ ನಾನು ಜನರಲ್ ಕಂಪಾರ್ಟಮೆಂಟ್. ನನ್ನನ್ನು ಎಲ್ಲಾ ಜಾತಿ ಧರ್ಮದವರು ಗುರುತಿಸುತ್ತಾರೆ. ನನ್ನ ಹಿನ್ನಲೆ ಜನರಿಗೆ ಗೊತ್ತಿದೆ. ನನನ್ನು ಯಾವ ಜಾತಿಗೂ ಸೇರಿಸಬೇಡಿ. ನಾನು ಎಲ್ಲರಿಗೂ ಸೇರಿದವನು. ಬೆಂಗಳೂರು 15 ಲಕ್ಷ ಜನ ಕ್ರಿಶ್ಚಿಯನ್ ಸಮುದಾಯದವರು ಇದ್ದಾರೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಹೆಚ್ಚು ಕ್ರಿಶ್ಚಿಯನ್ ಸಮುದಾಯದವರು ಇದ್ದಾರೆ. ಕ್ರಿಶ್ಚಿಯನ್ ಸಮುದಾಯದಿಂದ ಸಾಧು ಕೋಕಿಲಗೆ ಟಿಕೆಟ್ ಕೊಡಿ ಅಂತ ಕೇಳಿದ್ದಾರೆ. ನನಗೆ…

Read More

ವಿಮಾನವೊಂದರ ಇಬ್ಬರು ಪೈಲಟ್ ಗಳು ನಿದ್ದೆಗೆ ಜಾರಿದ ಪರಿಣಾಮ ವಿಮಾನ ದಿಕ್ಕು ತಪ್ಪಿದ ಘಟನೆ ಇಂಡೋನೇಷ್ಯಾದಲ್ಲಿ ಬಾಟಿಕ್ ನಲ್ಲಿ ನಡೆದಿದ್ದು ತಡವಾಗಿ ಘಟನೆ ಬೆಳಕಿಗೆ ಬಂದಿದೆ. ಈ ವರ್ಷದ ಜನವರಿ ತಿಂಗಳಲ್ಲಿ ಘಟನೆ ನಡೆದಿದ್ದು ಇದೀಗ ಪ್ರಕರಣ ಬೆಳಕಿಗೆ ಬಂದಿದೆ. ಅರ್ಧ ಗಂಟೆಯ ನಂತರ ನಿದ್ರೆಗೆ ಜಾರಿದ ಪೈಲಟ್ ಎಚ್ಚರಗೊಂಡಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಈ ಬಗ್ಗೆ ತನಿಖೆ ನಡೆಸಲಾಗಿದ್ದು, ಪೈಲಟ್ ಮತ್ತು ಸಹ ಪೈಲಟ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಪೈಲಟ್‌ಗಳು ನಿದ್ರೆಗೆ ಜಾರಿದಾಗ ವಿಮಾನದಲ್ಲಿ ಸುಮಾರು 153 ಪ್ರಯಾಣಿಕರಿದ್ದರು. ಸುಲವೇಸಿಯಿಂದ ಜಕಾರ್ತಕ್ಕೆ ಈ ವಿಮಾನ ಹೊರಡುವ ವೇಳೆ ಈ ಘಟನೆ ನಡೆದಿದೆ. ಆದರೆ, ಈ ಘಟನೆಯ ಹಿಂದಿನ ರಾತ್ರಿ ಕರ್ತವ್ಯದಲ್ಲಿದ್ದ ಸಹ ಪೈಲಟ್ ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳಲಿಲ್ಲ ಎಂದು ಹೇಳಲಾಗುತ್ತಿದೆ. ಮರುದಿನ ಸುಲವೇಸಿ ಏರ್ಪೋರ್ಟ್ ನಿಂದ ವಿಮಾನ ಟೇಕ್ ಆಫ್ ಆದ ಅರ್ಧ ಗಂಟೆಯ ನಂತರ ಫ್ಲೈಟ್ ಕ್ಯಾಪ್ಟನ್ ಸಹ ಪೈಲಟ್‌ ಬಳಿ ವಿಶ್ರಾಂತಿ ಪಡೆಯಲು ಅನುಮತಿ…

Read More

ಕನ್ನಡದ ಹಾಸ್ಯ ನಟ ಕೋಮಲ್ ಇದೀಗ ತಮಿಳು ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ತಮಿಳಿನ ಖ್ಯಾತ ನಟನ ಜೊತೆ ಕೋಮಲ್ ತೆರೆಹಂಚಿಕೊಳ್ಳುತ್ತಿದ್ದು ಈ ಬಗ್ಗೆ ಕೋಮಲ್ ಮಾಹಿತಿ ಹಂಚಿಕೊಂಡಿದ್ದಾರೆ. ಹಾಸ್ಯ ನಟನಾಗಿ ಸ್ಯಾಂಡಲ್ ವುಡ್ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ಕೋಮಲ್ ಇದೀಗ ನಾಯಕನಾಗಿ ಸದ್ದು ಮಾಡ್ತಿದ್ದಾರೆ. ಈ ಮಧ್ಯೆ ಕಾಲಿವುಡ್ ಸಿನಿಮಾದಲ್ಲಿ ನಟಿಸುವ ಆಫರ್ ಸಿಕ್ಕಿದೆ. ಚಿತ್ರವೊಂದರಲ್ಲಿ ತಮಿಳು ಲೆಜೆಂಡರಿ ಆ್ಯಕ್ಟರ್ ಶಿವಾಜಿ ಗಣೇಶನ್ ಪುತ್ರ ಪ್ರಭು ಜೊತೆ ಕೋಮಲ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ನಟ ಪ್ರಭು ಜೊತೆ ಮಾತನಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿ ಪ್ರಭು ಜೊತೆ ತೆರೆಹಂಚಿಕೊಳ್ತಿರೋದು ಖುಷಿ ಕೊಟ್ಟಿದೆ ಎಂದು ಕೋಮಲ್ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಇದು ನನ್ನ ಮೊದಲ ತಮಿಳು ಸಿನಿಮಾ ಎಂದು ಕೋಮಲ್ ಹೇಳಿದ್ದಾರೆ. ತಮಿಳು ಸಿನಿಮಾ ಜೊತೆ ಕನ್ನಡದ ‘ಕುಟೀರ’ ಸಿನಿಮಾದಲ್ಲಿ ಕೋಮಲ್ ಬ್ಯುಸಿಯಾಗಿದ್ದಾರೆ. ಕೋಮಲ್‌ಗೆ ನಾಯಕಿಯಾಗಿ ಪ್ರಿಯಾಂಕಾ ತಿಮ್ಮೇಶ್ ನಟಿಸುತ್ತಿದ್ದಾರೆ. ಇದರ ಜೊತೆಗೆ ‘ಗಿಚ್ಚಿ ಗಿಲಿ ಗಿಲಿ’ 3 ಶೋಗೆ ಕೋಮಲ್‌…

Read More