Author: Author AIN

ಬಿಗ್‌ಬಾಸ್ ಕನ್ನಡ ಸೀಸನ್‌ ಆರಂಭವಾಗಿ 1 ವಾರವಾಗಿದ್ದು, ಈ ಸೀಸನ್‌ ನ ಮೊದಲ ಪಂಚಾಯಿತಿಗೆ  ಕಿಚ್ಚ ಸುದೀಪ್ ಬರಿಗಾಲಲ್ಲಿ ನಿಂತುಕೊಂಡೇ ನಿರೂಪಣೆ ಮಾಡಿದ್ದಾರೆ. ಶನಿವಾರದ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ನವರಾತ್ರಿ ಹಿನ್ನೆಲೆ ಬರಿಗಾಲಲ್ಲಿ ನಿಂತಿರುವುದಾಗಿ ಹೇಳಿದ್ದು, ಅವರು ವೇದಿಕೆಗೆ ನೀಡಿರುವ ಗೌರವಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಟಿವಿಯಲ್ಲಿ ಒಂದೂವರೆ ಗಂಟೆ ಪ್ರಸಾರವಾಗುವ ಬಿಗ್ ಬಾಸ್ ಶೋ ಗೆ  ಗಂಟೆಗಟ್ಟಲೆ ನಿಂತುಕೊಂಡೇ ಶೂಟಿಂಗ್ ಮಾಡಬೇಕಿದೆ. ಈ ವೇಳೆ ಸುದೀಪ್ ಚಪ್ಪಲಿ ಹಾಕದೆ ನಿಂತೇ ಶೂಟಿಂಗ್ ಮಾಡಿದ್ದಾರೆ. ದಿನಾಲು ಚಪ್ಪಲಿ ಧರಿಸುವವರಿಗೆ ಬರಿಗಾಲಲ್ಲಿ ಇರುವುದು  ಕಷ್ಟವೇ ಆಗುತ್ತದೆ. ಅಂತಹದರಲ್ಲಿ ಗಂಟೆಗಟ್ಟಲೆ ಚಪ್ಪಲಿ ಹಾಕಿದೆ ಶೂಟಿಂಗ್‌ ನಲ್ಲಿ ಭಾಗಿಯಾಗಿರುವುದು ಕಿಚ್ಚನ ಮೇಲೆ ಅಭಿಮಾನ ಹೆಚ್ಚಿಸಿದೆ. ಇನ್ನು ಕಿಚ್ಚ ಸುದೀಪ್‌ ಅವರ ಇಂದಿನ ಕಾಸ್ಟ್ಯೂಮ್ ಕೂಡ ಸಿಂಪಲ್ ಆಗಿ ಎಲಿಗೆಂಟ್‌ ಲುಕ್ ಕೊಡುತ್ತಿತ್ತು. ಕಂದು ಬಣ್ಣದ ಟಾಪ್ , ಬಿಳಿ ಬಣ್ಣದ ಪ್ಯಾಂಟ್‌ ಮತ್ತು ಕಡು ಕಂದು ಬಣ್ಣದ ಶಾಲು ಧರಿಸಿದ್ದರು. ಅದಕ್ಕೆ ತಕ್ಕನಾದ…

Read More

ಕನ್ನಡದ ಬಿಗ್ ಬಾಸ್ ಸೀಸನ್ 11 ಆರಂಭವಾಗಿ ಒಂದೇ ವಾರಕ್ಕೆ ಸಖತ್ ಸದ್ದು ಮಾಡುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ವೈರಲ್ ಆದವರನ್ನು ತಮ್ಮ ಖಡಕ್ ಮಾತಿನ ಮೂಲಕವೇ ಸುದೀಪ್ ಸೈಲೆಂಟ್ ಮಾಡಿಸಿ ಬಿಡುತ್ತಾರೆ. ಅಂತೆಯೇ ಇದೀಗ ಕಿಚ್ಚ ಸುದೀಪ್ ಲಾಗರ್ ಜಗದೀಶ್ ಗೆ ತಮ್ಮ ಮಾತಿನ ಮೂಲಕವೇ ಬಿಸಿ ಮುಟ್ಟಿಸಿದ್ದಾರೆ. ಯೆಸ್, ಬಿಗ್​ಬಾಸ್​ ಆರಂಭವಾದ ಮೊದಲ ದಿನದಿಂದಲೇ ಸಖತ್​ ಸೌಂಡ್ ಮಾಡುತ್ತಿದ್ದ ಲಾಯರ್​ ಜಗದೀಶ್​ ಮೈಚಳಿ ಬಿಡಿಸಿದ್ದಾರೆ ಕಿಚ್ಚ ಸುದೀಪ್​. ಮೊನ್ನೆ ಪ್ರಸಾರವಾದ ಸಂಚಿಕೆಯಲ್ಲಿ ಲಾಯರ್ ಜಗದೀಶ್ ಅಕ್ಷರಶಃ ಕೆಂಡಕಾರಿದ್ದರು. ನಮ್ಮನ್ನ ಎದುರು ಹಾಕ್ಕೊಂಡು ಕರ್ನಾಟಕದಲ್ಲಿ ಬಿಗ್​ಬಾಸ್ ರನ್ ಮಾಡ್ತೀರಾ ಎಂದು ಗದರಿದ್ದರು. ಅಲ್ಲದೇ ನನಗೆ ಇಲ್ಲಿ ಇರೋಕೆ ಇಷ್ಟ ಇಲ್ಲ. ಇಲ್ಲಿಂದ ಹೊರ ಹೋಗುತ್ತೇನೆ. ನಾ ಮನಸು ಮಾಡಿದರೆ ಹೆಲಿಕಾಪ್ಟರ್ ಇಲ್ಲಿಗೆ ತರಿಸುತ್ತೇನೆ. ಆ ಕೆಪಾಸಿಟಿ ನನ್ನಲ್ಲಿದೆ. ಒಳಗಡೆ ಏನೇನೂ ಮಾಫಿಗಳು ನಡೆಸುತ್ತೀರಾ ಅದೆಲ್ಲ ಎಕ್ಸ್​ಪೋಸ್ ಆಗುತ್ತೆ. ನಾನು ಸರ್ಕಾರಕ್ಕೆ ಇದನ್ನೆಲ್ಲ ಹೇಳುತ್ತೇನೆ ಎಂದಿದ್ದರು. ಇದೀಗ ವಾರದ ಕಥೆ ಕಿಚ್ಚ…

Read More

ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಹಡಗೊಂದು ನೋಡ ನೋಡುತ್ತಿದ್ದಂತೆ ಮಗುಚಿ ಬಿದ್ದ ಘಟನೆ ಪೂರ್ವ ಕಾಂಗೋದ ಕಿವು ಸರೋವರದಲ್ಲಿ ನಡೆದಿದೆ. ಈ ಭೀಕರ ದುರಂತದಲ್ಲಿ ಬರೋಬ್ಬರಿ 78 ಮಂದಿ ಮೃತಪಟ್ಟಿದ್ದಾರೆ. ಪೂರ್ವ ಕಾಂಗೋದ ಕಿವು ಸರೋವರದಲ್ಲಿ ಸುಮಾರು 278 ಪ್ರಯಾಣಿಕರಿದ್ದ ದೋಣಿ ಮಗುಚಿ ಬಿದ್ದ ಪರಿಣಾಮ 78 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಗವರ್ನರ್ ಮಾಹಿತಿ ನೀಡಿದ್ದಾರೆ. ಇನ್ನೂ ಈ ಸಾವಿನ ಸಂಖ್ಯೆ ಇನ್ನೂ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ದಕ್ಷಿಣ ಕಿವು ಪ್ರಾಂತ್ಯದ ಗವರ್ನರ್ ಜೀನ್-ಜಾಕ್ವೆಸ್ ಪುರುಸಿ ಹೇಳಿದ್ದಾರೆ. 278 ಪ್ರಯಾಣಿಕರಿಂದ ತುಂಬಿದ್ದ ದೋಣಿಯು ನೋಡ ನೋಡುತ್ತಲೇ ಟೈಟಾನಿಕ್ ಬೋಟ್ ರೀತಿಯಲ್ಲೇ ಮಗುಚಿ ಬಿದ್ದಿದೆ. ಇದು ದಕ್ಷಿಣ ಕಿವು ಪ್ರಾಂತ್ಯದ ಮಿನೋವಾದಿಂದ ಉತ್ತರ ಕಿವು ಪ್ರಾಂತ್ಯದ ಗೋಮಾಗೆ ಪ್ರಯಾಣ ಮಾಡುತ್ತಿತ್ತು ಎಂದು ಹೇಳಲಾಗುತ್ತದೆ. ಆದರೆ ಈ ಘಟನೆ ನಡೆದಿದ್ದು ಗೋಮಾ ಕಾಂಗೋದಲ್ಲಿ ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಗೋವಾದಲ್ಲಿ ಈ ದುರಂತ ನಡೆದಿದೆ ಎಂದು ವೈರಲ್​ ಮಾಡುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ ಎಂದು…

Read More

ತೆಲುಗು ಚಿತ್ರರಂಗದ ಹಿರಿಯ ನಟ ರಾಜೇಂದ್ರ ಪ್ರಸಾದ್ ಮನೆಯಲ್ಲಿ ಶೋಕ ಮಡುಗಟ್ಟಿದೆ. ರಾಜೇಂದ್ರ ಪ್ರಸಾದ್ ಮಗಳು ಗಾಯತ್ರಿ (38) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಗಾಯತ್ರಿ ನಿಧನಕ್ಕೆ ನಟರಾದ ಚಿರಂಜೀವಿ, ಪವನ್ ಕಲ್ಯಾಣ್, ಜೂನಿಯರ್ ಎನ್​​ಟಿಆರ್, ನಾನಿ ಸೇರಿದಂತೆ ಹಲವರು ಸಂತಾಪ ಸೂಚಿಸುತ್ತಿದ್ದಾರೆ. ಗಾಯತ್ರಿ ಅವರಿಗೆ ಮನೆಯಲ್ಲಿ ಇರುವಾಗ ಎದೆಯಲ್ಲಿ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಹೈದರಾಬಾದ್​ ನ ಗಚ್ಚಿಬೋಲಿನಲ್ಲಿರುವ ಎಐಜಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಗಾಯತ್ರಿ ಅವರು ನಿಧನ ಹೊಂದಿದ್ದಾರೆ. ರಾಜೇಂದ್ರ ಪ್ರಸಾದ್ ಅವರಿಗೆ ಒಬ್ಬ ಮಗ, ಒಬ್ಬ ಮಗಳು ಇದ್ದರು. ಆದರೆ ಇದೀಗ ಮಗಳು ನಿಧನ ಹೊಂದಿರುವುದು ಅವರಿಗೆ ತೀವ್ರ ಸಂಕಷ್ಟ ತಂದೊಡ್ಡಿದೆ. ಮೃತ ಗಾಯತ್ರಿ  ಅವರಿಗೆ ಓರ್ವ ಮಗನಿದ್ದಾನೆ. ಈ ಹಿಂದೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಮಗಳ ಬಗ್ಗೆ ಮಾತನಾಡುವ ವೇಳೆ ರಾಜೇಂದ್ರ ಪ್ರಸಾದ್ ಕಣ್ಣೀರು ಹಾಕಿದ್ದರು. ಹತ್ತು ವರ್ಷಕ್ಕೆ ತಾಯಿಯನ್ನು ಕಳೆದುಕೊಂಡಿದ್ದ ರಾಜೇಂದ್ರ ಪ್ರಸಾದ್ ತಮ್ಮ ತಾಯಿಯನ್ನು ಮಗಳಲ್ಲಿ ಕಾಣುತ್ತಿರುವುದಾಗಿ ಹೇಳಿದ್ದರು. ಮಗಳನ್ನು ಕಳೆದುಕೊಂಡು…

Read More

ಹೈಟಿಯಲ್ಲಿ ನಡೆದ ಸರಣಿ ಸಾಮೂಹಿಕ ದಾಳಿಯಲ್ಲಿ 10 ಮಹಿಳೆಯರು ಹಾಗೂ ಮೂವರು ಶಿಶುಗಳು ಸೇರಿದಂತೆ ಕನಿಷ್ಠ 70 ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ತಿಳಿಸಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆ ಪ್ರಕಟಿಸಿದ ಹೇಳಿಕೆಯಲ್ಲಿ ದಾಳಿಯ ಬಗ್ಗೆ ತನ್ನ ಭಯಾನಕತೆಯನ್ನು ವ್ಯಕ್ತಪಡಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಯುಎನ್ ವಕ್ತಾರ ತಮೀನ್ ಅಲ್-ಖೀತಾನ್ ಮಾತನಾಡಿ, ಗ್ರ್ಯಾನ್ ಗ್ರಿಫ್ ಗ್ಯಾಂಗ್ ನ ಸದಸ್ಯರು ನಾಗರಿಕರ ಮೇಲೆ ಗುಂಡು ಹಾರಿಸಲು ಸ್ವಯಂಚಾಲಿತ ರೈಫಲ್ಗಳನ್ನು ಬಳಸಿದರು. ಇದರ ಪರಿಣಾಮವಾಗಿ ವ್ಯಾಪಕ ಸಾವುನೋವುಗಳು ಸಂಭವಿಸಿವೆ ಮತ್ತು ಅನೇಕ ನಿವಾಸಿಗಳು ಪಲಾಯನ ಮಾಡಬೇಕಾಯಿತು ಎಂದರು.. ಹೈಟಿಯ ಆರ್ಟಿಬೊನೈಟ್ ವಿಭಾಗದ ಪಾಂಟ್ ಸೊಂಡೆ ಪಟ್ಟಣದಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ 16 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ, ಇದರಲ್ಲಿ ಹೈಟಿ ಪೊಲೀಸರೊಂದಿಗಿನ ಗುಂಡಿನ ಚಕಮಕಿಯಲ್ಲಿ ಗಾಯಗೊಂಡ ಇಬ್ಬರು ಗ್ಯಾಂಗ್ ಸದಸ್ಯರು ಸೇರಿದ್ದಾರೆ. ಜನರನ್ನು ಗುಂಡಿಕ್ಕಿ ಕೊಲ್ಲುವುದರ ಜೊತೆಗೆ, ಗ್ಯಾಂಗ್ ಸದಸ್ಯರು ಕನಿಷ್ಠ 45 ಮನೆಗಳು ಮತ್ತು 34…

Read More

ಸುಮಾರು 9 ವರ್ಷಗಳ ಬಳಿಕ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದ್ದಾರೆ. ಜೈ ಅವರಿಗೆ ನಮ್ಮ ಪಕ್ಷದ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಆಹ್ವಾನ ನೀಡಿದ್ದಾರೆ. ಜೈಶಂಕರ್​​​ ಅವರು ಅಕ್ಟೋಬರ್ 15 ಮತ್ತು 16 ರಂದು ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಎಸ್‌ಸಿಒ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಮಯಲ್ಲಿ ನಮ್ಮ ಜತೆಗೆ ನೀವು ನಿಲ್ಲಬೇಕು, ಪಾಕಿಸ್ತಾನ ಪ್ರಜಾಪ್ರಭುತ್ವದ ಬಗ್ಗೆ ವಿಶ್ವ ನಾಯಕರಿಗೆ ತಿಳಿಸುವ ಅಗತ್ಯ ಇದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಪಾಕ್​​ನಲ್ಲಿ ತಮ್ಮ ಪಕ್ಷದ ಪರವಾಗಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಭಾರತದ ವಿದೇಶಾಂಗ ಮಂತ್ರಿ ಎಸ್​​​. ಜೈಶಂಕರ್​​​ ಅವರಿಗೆ ಆಹ್ವಾನ ನೀಡಿದ್ದಾರೆ, ಜೈಶಂಕರ್​​​ ಅವರು ಅಕ್ಟೋಬರ್ 15 ಮತ್ತು 16 ರಂದು ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಎಸ್‌ಸಿಒ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಮಯದಲ್ಲಿ ತಮ್ಮ ಹೋರಾಟದಲ್ಲಿ ಭಾಗವಹಿಸುವಂತೆ ಹಾಗೂ ಭಾಷಣ ಮಾಡುವಂತೆ ಆಹ್ವಾನ ನೀಡಿದ್ದಾರೆ. ಈ ಮೂಲಕ ತಮ್ಮ ಪಕ್ಷದ…

Read More

ಆಗಸ್ಟ್ 24, 2024 ರಂದು ಆಫ್ರಿಕಾ ಖಂಡದ ಪೂರ್ವ ರಾಷ್ಟ್ರವಾದ ಬುರ್ಕಿನಾ ಫಾಸೊದಲ್ಲಿ ನಡೆದಿದ್ದ ಆಲ್ ಖೈದಾ, ಐಸಿಸ್ ಬೆಂಬಲಿತ ಉಗ್ರರ ದಾಳಿ ಬಗ್ಗೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಜಮಾತ್ ನುಸ್ರತ್ ಅಲಾ-ಇಸ್ಲಾಂ ವಾಲ್-ಮುಸ್ಲಿಮೀನ್ ಹೆಸರಿನ ಉಗ್ರ ಸಂಘಟನೆ ಸದಸ್ಯರು ಆ.24ರದುಬುರ್ಕಿನಾ ಫಾಸೊದ ಬರ್ಸಲೋಗೋ ಬಳಿ ಬೈಕ್, ಕಾರುಗಳಲ್ಲಿ ಏಕಾಕಾಲದಲ್ಲಿ ದಾಳಿ ನಡೆಸಿ ಮಹಿಳೆಯರು, ಮಕ್ಕಳು ಸೇರಿದಂತೆ 600 ಮಂದಿ ಗ್ರಾಮಸ್ಥರನ್ನು ಹತ್ಯೆ ಮಾಡಿದ್ದರು. ಈ ಘಟನೆಯಲ್ಲಿ 200 ಜನ ಮೃತಪಟ್ಟಿದ್ದರು ಎಂದು ವಿಶ್ವಸಂಸ್ಥೆ ಅಂದು ಹೇಳಿದ್ದರೆ, 300 ಜನ ಮೃತಪಟ್ಟಿದ್ದರು ಎಂದು JNIM ಹೇಳಿತ್ತು. ಆದರೆ, ಅಂದಿನ ಘಟನೆಯಲ್ಲಿ 600 ಜನ ಮೃತಪಟ್ಟಿದ್ದರು. ಪೂರ್ವ ಆಫ್ರಿಕಾದ ಇತಿಹಾಸದಲ್ಲಿಯೇ ಇದೊಂದು ಅತ್ಯಂತ ಭೀಕರ ಹತ್ಯಾಕಾಂಡ ಎಂದು ಫ್ರೆಂಚ್ ಸರ್ಕಾರದ ಭದ್ರತಾ ಮೌಲ್ಯಮಾಪನ ಘಟಕ ಈಗ ಹೇಳಿದೆ. ಅಲ್ಲದೇ ಉಗ್ರರು ಗುಂಡಿನ ದಾಳಿ ನಡೆಸುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಉಗ್ರರಿಂದ ರಕ್ಷಿಸಿಕೊಳ್ಳಲು ಗ್ರಾಮಸ್ಥರು ಗ್ರಾಮದ ಹೊರವಲಯದ ಸುತ್ತ ಕಂದಕಗಳನ್ನು ನಿರ್ಮಿಸಿದ್ದರು. ಇದರಿಂದ ಸಿಟ್ಟಾಗಿದ್ದ…

Read More

ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ ಮುದ್ದು ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಮಗಳು ಹುಟ್ಟಿದ ಆರು ತಿಂಗಳ ಬಳಿಕ ಇದೀಗ ಮಗಳ ಮುಖವನ್ನು ನಟಿ ರಿವೀಲ್ ಮಾಡಿದ್ದಾರೆ. ಅದಿತಿ ಪ್ರಭುದೇವ ಏಪ್ರಿಲ್‌ 4ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ರು. ಸಿನಿಮಾಗಳಿಂದ ದೂರ ಉಳಿದ  ಅದಿತಿ ಸದ್ಯ ಮಗಳ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ. ಜೊತೆಗೆ ರಿಯಾಲಿಟಿ ಶೋನಲ್ಲೂ ತೊಡಗಿಕೊಂಡಿದ್ದಾರೆ. ಇದೀಗ ಮಗಳಿಗೆ 6 ತಿಂಗಳು ತುಂಬಿದ ಹಿನ್ನೆಲೆ ಮಗಳ ಫೋಟೋ ಹಾಗೂ ಹೆಸರನ್ನು ನಟಿ ರಿವೀಲ್ ಮಾಡಿದ್ದಾರೆ. ನಟಿ ಅದಿತಿ ಪ್ರಭುದೇವ, ಯಶಸ್‌ ಪಾಟ್ಲಾ ದಂಪತಿ ಮಗಳಿಗೆ ನೇಸರ ಎಂಬ ನಾಮಕರಣ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದಿತಿ ಮಗಳ ಫೋಟೋಗಳಿಗೆ ಲೈಕ್​​ಗಳ ಸುರಿಮಳೆ ಆಗಿದೆ. ಮಗಳಿಗೆ ಆರು ತಿಂಗಳಾದ ಸಂಭ್ರಮದಲ್ಲಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ಕೇಕ್ ಮೇಲೆ ಬಾರ್ಬಿ ಎಂದು ಬರೆದಿದ್ದು ಮಗಳ ಡ್ರಸ್ ಗೆ ಮ್ಯಾಚ್ ಆಗುವ ಕಲರ್ ನಲ್ಲಿ ಕೇಕ್ ಡಿಸೈನ್ ಮಾಡಿದ್ದಾರೆ ಅದಿತಿ ಹಾಗೂ…

Read More

ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಪ್ರಾರಂಭವಾಗಿ ಸುಮಾರು ಐದಾರು ವರ್ಷಗಳೆ ಕಳೆದಿದೆ. ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಆಗಿದ್ದು, ಇನ್ನೇನು ಇನ್ನೆನ್ನೂ ಕೊನೆಗೂ ಸಿನಿಮಾ ಕಣ್ಮುಂಬಿಕೊಳ್ಳಬಹುದು ಎಂದು ಅಭಿಮಾನಿಗಳು ಕಾಯ್ತಿದ್ದಾರೆ. ಈ ಮಧ್ಯೆ ಚಿತ್ರದ ನಿರ್ದೇಶಕ ಎಪಿ ಅರ್ಜುನ್ ಹೈಕೋರ್ಟ್ ಮೆಟ್ಟಿಲೇರಿದ್ದು ಕೋರ್ಟ್ ನಲ್ಲಿ ಅವರಿಗೆ ಗೆಲುವು ಸಕ್ಕಿದೆ. ನಿರ್ದೇಶಕ ಎಪಿ ಅರ್ಜುನ್ ಹಾಗೂ ‘ಮಾರ್ಟಿನ್’ ಸಿನಿಮಾ ನಿರ್ಮಾಪಕ ಉದಯ್ ಮೆಹ್ತಾ ಮಧ್ಯೆ ಮನಸ್ತಾಪ ಇದೆ ಎಂಬ ವಿಚಾರ ಆಗಾಗ ಚರ್ಚೆಗೆ ಬರುತ್ತಲೇ ಇದೆ. ಆದರೆ, ಇದನ್ನು ತಂಡ ನೇರವಾಗಿ ಒಪ್ಪಿಕೊಂಡಿಲ್ಲ. ಆದರೆ, ಪ್ರಕರಣಕ್ಕೆ ಸಂಬಂಧಿಸಿ ತಂಡದವರು ಕೋರ್ಟ್ ಮೆಟ್ಟಿಲನ್ನು ಹತ್ತುತ್ತಲೇ ಇದ್ದಾರೆ. ತಮ್ಮ ಹೆಸರನ್ನು ಮಾರ್ಟಿನ್ ಸಿನಿಮಾ ತಂಡ ಕೈಬಿಟ್ಟಿದೆ ಎಂದು ನಿರ್ದೇಶಕ ಎಪಿ ಅರ್ಜುನ್ ಆರೋಪಿಸಿದ್ದರು. ಈಗ ಅವರ ಪರವಾಗಿ ಕೋರ್ಟ್ ಆದೇಶ ನೀಡಿದೆ. ಪ್ರಚಾರ ದಾಖಲೆಗಳಲ್ಲಿ ಎಪಿ ಅರ್ಜುನ್ ಅವರ ಹೆಸರನ್ನು ಸೇರಿಸಬೇಕು ಎಂದು ಕೋರ್ಟ್ ಆದೇಶ ನೀಡಿದೆ. ‘ಮಾರ್ಟಿನ್’ ಸಿನಿಮಾದ ನಿರ್ಮಾಪಕ ಉದಯ್ ಮೆಹ್ತಾ…

Read More

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ದರ್ಶನ್ ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಸಿವಿ ನಾಗೇಶ್ ನಿನ್ನೆಯೇ ದರ್ಶನ್ ಪರವಾಗಿ ಸುದೀರ್ಘವಾದ ವಾದ ಮಂಡನೆ ಮಾಡಿದ್ದರು. ನಿನ್ನೆ ಸಮಯದ ಅಭಾವದಿಂದಾಗಿ ಇಂದಿಗೆ (ಅಕ್ಟೋಬರ್ 05) ಪ್ರಕರಣ ಮುಂದೂಡಲಾಗಿತ್ತು. ಇಂದು ವಾದ ಮುಂದುವರೆಸಿದ ಸಿವಿ ನಾಗೇಶ್ ಅವರು, ದರ್ಶನ್ ಮನೆಯಲ್ಲಿ ಪೊಲೀಸರು ವಶಪಡಿಸಿಕೊಂಡ ಲಕ್ಷಾಂತರ ರೂಪಾಯಿ ಹಣದ ಮೂಲದ ಬಗ್ಗೆ ನ್ಯಾಯಾಲಕ್ಕೆ ಮಾಹಿತಿ ನೀಡಿದರು. ಜೂ 18ರಂದು ದರ್ಶನ್‌ ಮನೆಯಲ್ಲಿ 37.5 ಲಕ್ಷ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಅದಾದ ಬಳಿಕ ವಿಜಯಲಕ್ಷ್ಮಿ ಅವರಿಗೆ ದರ್ಶನ್ ಅದೇ ಸಮಯದಲ್ಲಿ ನೀಡಿದ್ದಾರೆ ಎನ್ನಲಾದ ಹಣವನ್ನು ವಿಜಯಲಕ್ಷ್ಮಿ ಅವರೇ ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಹಣ ಬರ್ಖಾಸ್ತು ಮಾಡಿರುವ ಬಗ್ಗೆ ಇಂದು ವಾದ ಮಂಡಿಸಿದ ಸಿವಿ ನಾಗೇಶ್, ಹಣದ ಮೂಲದ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ‘ಸಾಕ್ಷಿಗಳಿಗೆ ಕೊಡಲೆಂದು ದರ್ಶನ್ ಈ ಹಣ ಇಟ್ಟಿದ್ದಾರೆ ಎಂಬುದಾಗಿ ಪೊಲೀಸರು ಹೇಳಿಕೆ…

Read More