Author: Author AIN

ಕಿಚ್ಚ ಸುದೀಪ್ ತಮ್ಮ ಮೇಲೆ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ನಿರ್ಮಾಪಕ ಎನ್.ಎಂ.ಸುರೇಶ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಎನ್ ಎಂ ಸುರೇಶ್ ವಿರುದ್ಧ ಕಿಚ್ಚ ಸುದೀಪ್ ಸುಳ್ಳು ಆಸ್ತಿ ಸಂಪಾದನೆ ಮತ್ತು ವಂಚನೆಯ ದೂರು ದಾಖಲಿಸಿದ್ದರು. ಸುದೀಪ್ ಅವರ ವಿರುದ್ಧ ಮಾನಹಾನಿಕರ ಮತ್ತು ಸಮಾಜದಲ್ಲಿ ಅವರ ಹೆಸರನ್ನು ಕೆಡಿಸುವಂತಹ ಆರೋಪದ ಪ್ರಕರಣವನ್ನು ದಾಖಲಿಸಲಾಗಿದೆ. ಸಮನ್ಸ್ ಜಾರಿ ಮಾಡುವ ಕ್ರಮದಲ್ಲಿ ಯಾವುದೇ ಅಕ್ರಮ ಕಂಡು ಬಂದಿಲ್ಲ. ಹಾಗಾಗಿ ರದ್ದು ಮಾಡಲಾಗದು ಎಂದು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಹೇಳಿದ್ದಾರೆ. ಪ್ರಕರಣ ಸಂಬಂಧ ಐಪಿಸಿ 499 ಮತ್ತು 500 ಅಡಿಯಲ್ಲಿ ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆ ಸುರೇಶ್ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ಸುದೀಪ್ ಈ ವಿಚಾರವಾಗಿ ಕೋರ್ಟಿಗೆ ಹಾಜರಾಗಿದ್ದರು. ಸುದೀಪ್ ಅವರ ಹೇಳಿಕೆಯನ್ನು ಆಲಿಸಿದ್ದ 13ನೇ ಎಸಿಎಂಎಂ ಕೋರ್ಟನ ನ್ಯಾ.ವೆಂಕಣ್ಣ ಬಸಪ್ಪ ಹೊಸಮನಿ ಅವರು ಸುದೀಪ್ ಸಲ್ಲಿಸಿದ್ದ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ‌ ಅಂಗೀಕಾರ ಮಾಡಿದ್ದರು. ಜೊತೆಗೆ ನಿರ್ಮಾಪಕರಾದ…

Read More

ತೆಲುಗಿನ ಖ್ಯಾತ ನಟ ಚಿರಂಜೀವಿ ಬೆಂಗಳೂರಿನಲ್ಲಿ ಅತ್ಯಂತ ಸುಸಜ್ಜಿತ ಮನೆ ಹಾಗೂ ಫಾರ್ಮ್ ಹೌಸ್ ಹೊಂದಿದ್ದಾರೆ. ಇಡೀ ಬೆಂಗಳೂರಿನ ಜನತೆ ನೀರಿನ ಸಮಸ್ಯೆ ಎದುರಿಸುತ್ತಿದ್ದರೆ ಚಿರಂಜೀವಿ ಮನೆ ಹಾಗೂ ಫಾರ್ಮ್ ಹೌಸ್ ನಲ್ಲಿ ನೀರಿಗೆ ಯಾವುದೇ ಸಮಸ್ಯೆ ಇಲ್ಲ. ಅಲ್ಲದೆ ನೀರಿನ ಸಮಸ್ಯೆಗೆ ನಟ ಪರಿಹಾರ ಸೂಚಿಸಿದ್ದಾರೆ. ಚಿರಂಜೀವಿ ಮನೆಯಲ್ಲಿ ಸದಾ ನೀರು ಜಿನುಗುವಂತೆ ಮಾಡಲು ವ್ಯವಸ್ಥೆ ಮಾಡಿದ್ದಾರೆ. ಅದನ್ನು ಕನ್ನಡದಲ್ಲೇ ಚಿರಂಜೀವಿ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಜೊತೆಗೆ ನೀರಿನ ಮಹತ್ವವನ್ನು ತಿಳಿಸಿದ್ದಾರೆ. ಈ ಪೋಸ್ಟ್ ಸ್ವಲ್ಪ ಉದ್ದವಾಗಿದ್ದರೂ, ಪಾಯಿಂಟ್ ಚಿಕ್ಕದಾದರೂ… ಬಹಳ ಮುಖ್ಯ. ನಮಗೆಲ್ಲರಿಗೂ ತಿಳಿದಿರುವಂತೆ, ನೀರು ಅತ್ಯಂತ ಅಮೂಲ್ಯವಾದ ವಸ್ತು, ನೀರಿನ ಕೊರತೆಯು ದೈನಂದಿನ ಜೀವನವನ್ನು ಕಷ್ಟಕರವಾಗಿಸುತ್ತದೆ. ಇಂದು ಬೆಂಗಳೂರಿನಲ್ಲಿ ನೀರಿನ ಕೊರತೆ ಎದುರಾಗಬಹುದು. ನಾಳೆ ಎಲ್ಲಿ ಬೇಕಾದರೂ ಸಂಭವಿಸಬಹುದು.ಆದ್ದರಿಂದ ನೀರನ್ನು ಸಂರಕ್ಷಿಸಲು ಸಹಾಯ ಮಾಡುವ ಮನೆಗಳನ್ನು ನಿರ್ಮಿಸುವ ಅಗತ್ಯವನ್ನು ಒತ್ತಿಹೇಳಲು ನಾನು ಈ ಅವಕಾಶವನ್ನು ಬಳಸಲು ಬಯಸುತ್ತೇನೆ. ಬೆಂಗಳೂರಿನ ನನ್ನ ಫಾರ್ಮ್ ಹೌಸ್‌ಗಾಗಿ…

Read More

ರಾಷ್ಟ್ರೀಯ ಡೇಟಾಬೇಸ್ ಮತ್ತು ನೋಂದಣಿ ಪ್ರಾಧಿಕಾರ (NADRA) ನಾಗರಿಕರ ಡೇಟಾವನ್ನು ಸೋರಿಕೆ ಮಾಡಿರುವ ಬಗ್ಗೆ ಪಾಕಿಸ್ತಾನದ ಜಂಟಿ ತನಿಖಾ ತಂಡ (ಜೆಐಟಿ) ಆಂತರಿಕ ಸಚಿವಾಲಯಕ್ಕೆ ವರದಿ ನೀಡಿದೆ. ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ (ಪಿಟಿಎ), ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎಫ್‌ಐಎ) ಮತ್ತು ಮಿಲಿಟರಿ ಇಂಟೆಲಿಜೆನ್ಸ್ ಸಹಯೋಗದೊಂದಿಗೆ ಡೇಟಾ ಸೋರಿಕೆಯ ಬಗ್ಗೆ ತನಿಖೆ ನಡೆಸುವಂತೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಆಂತರಿಕ ಸಚಿವಾಲಯಕ್ಕೆ ನಿರ್ದೇಶನಗಳನ್ನು ನೀಡಿದೆ. ಮುಲ್ತಾನ್, ಪೇಶಾವರ್ ಮತ್ತು ಕರಾಚಿಯ ನಾದ್ರಾ ಕಚೇರಿಗಳ ಸಹಾಯದಿಂದ 2019 ರಿಂದ 2023 ರವರೆಗೆ 2.7 ಮಿಲಿಯನ್ ಪಾಕಿಸ್ತಾನಿಗಳ ಡೇಟಾವನ್ನು ಕಳವು ಮಾಡಲಾಗಿದೆ ಎಂದು ವರದಿ ತಿಳಿಸಿದೆ. ಮುಲ್ತಾನ್ ನಿಂದ ಪೇಶಾವರಕ್ಕೆ ಮತ್ತು ನಂತರ ದುಬೈಗೆ ಡೇಟಾವನ್ನು ಪಡೆಯಲಾಗಿದೆ ಮತ್ತು ಅರ್ಜೆಂಟೀನಾ ಮತ್ತು ರೊಮೇನಿಯಾದಲ್ಲಿಯೂ ಮಾರಾಟ ಮಾಡಲಾಗಿದೆ ಎಂದು ಜೆಐಟಿ ವರದಿಯಲ್ಲಿ ತಿಳಿಸಲಾಗಿದೆ. ಎನ್‌ಎಡಿಆರ್‌ಎಯ ಹಲವಾರು ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ್ದು, ಮಾರ್ಚ್ 2023 ರ ಸೈಬರ್ ದಾಳಿಯ ತನಿಖೆಗಾಗಿ ಎಫ್‌ಐಎ ನಿರ್ದೇಶಕ ಸೈಬರ್ ಕ್ರೈಮ್…

Read More

ದೊಡ್ಡ ಸರಕು ಹಡಗು ಡಿಕ್ಕಿ ಹೊಡೆದ ಪರಿಣಾಮ ಅಮೆರಿಕದ ಬಾಲ್ಟಿಮೋರ್‌ನ ಅತಿ ಉದ್ದದ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆ ಕುಸಿದು ಬಿದ್ದಿದೆ. ಡಿಕ್ಕಿ ಹೊಡೆದ ಕಂಟೇನರ್ ಹಡಗಿನಲ್ಲಿ 22 ಸಿಬ್ಬಂದಿ ಭಾರತೀಯರಿದ್ದು ಎಲ್ಲರು ಸುರಕ್ಷಿತವಾಗಿದ್ದಾರೆ ಎಂದು ಹಡಗು ನಿರ್ವಹಣಾ ಘಟಕ ತಿಳಿಸಿದೆ. ಅಪಘಾತಕ್ಕೀಡಾದ ಹಡಗು ಡಾಲಿ ಹೆಸರಿನ ಕಂಟೈನರ್ ಹಡಗಾಗಿದ್ದು, ಬಾಲ್ಟಿಮೋರ್‌ನಿಂದ ಶ್ರೀಲಂಕಾದ ರಾಜಧಾನಿ ಕೊಲಂಬೊಗೆ ಹೋಗುತ್ತಿತ್ತು. ಮಂಗಳವಾರ ಮುಂಜಾನೆ 1:30ರ ಸುಮಾರಿಗೆ ಹಡಗು ಸೇತುವೆಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತು. ಇದರ ನಂತರ ಹಡಗು ನೀರಿನಲ್ಲಿ ಮುಳುಗಿದ್ದು, ಸೇತುವೆಯೂ ಮುರಿದು ನದಿಗೆ ಬಿದ್ದಿದೆ. ರಕ್ಷಕರು ಇಬ್ಬರನ್ನು ಹೊರತೆಗೆಯಲಾಗಿದ್ದು ಇನ್ನೂ ಆರು ಮಂದಿ ಇನ್ನೂ ಪತ್ತೆಯಾಗಿಲ್ಲ. ಇಬ್ಬರು ಪೈಲಟ್‌ಗಳು ಸೇರಿದಂತೆ ಸಿಬ್ಬಂದಿಯನ್ನು ಪರಿಗಣಿಸಲಾಗಿದ್ದು, ಯಾವುದೇ ಗಾಯಗಳ ವರದಿಯಾಗಿಲ್ಲ. ಯಾವುದೇ ಮಾಲಿನ್ಯವೂ ಇಲ್ಲ ಎಂದು ಚಾರ್ಟರ್ ಮ್ಯಾನೇಜರ್, ಸಿನರ್ಜಿ ಮೆರೈನ್ ಗ್ರೂಪ್ ಹೇಳಿದ್ದಾರೆ . ಕಂಟೈನರ್ ಹಡಗು ಸುಮಾರು ಎಂಟು ಗಂಟುಗಳ ತುಲನಾತ್ಮಕವಾಗಿ ವೇಗದಲ್ಲಿ ಚಲಿಸುತ್ತಿತ್ತು ಮತ್ತು ಸೇತುವೆಯನ್ನು ಅಪ್ಪಳಿಸುವ ಮೊದಲು ಕ್ಷಣಗಳಲ್ಲಿ ವಿದ್ಯುತ್…

Read More

ಮೋಹಕ ತಾರೆ ರಮ್ಯಾರನ್ನು ಮತ್ತೆ ತೆರೆ ಮೇಲೆ ನೋಡ್ಬೇಕು ಎಂದು ಕಾದು ಕೂತಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿದೆ. ಡಾಲಿ ಧನಂಜಯ್ ನಟನೆಯ ಉತ್ತರಕಾಂಡ ಚಿತ್ರದಲ್ಲಿ ರಮ್ಯಾ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇದೀಗ ರಮ್ಯಾ ಚಿತ್ರತಂಡದಿಂದ ಹೊರ ನಡೆದಿದ್ದಾರೆ. ಡೇಟ್ಸ್ ಹೊಂದಾಣಿಕೆ ಆಗದ ಕಾರಣ, ನಾನು ಉತ್ತರಕಾಂಡ ಸಿನಿಮಾದಲ್ಲಿ ನಟಿಸುತ್ತಿಲ್ಲ. ನನ್ನ ಸಿನಿಮಾ ಮತ್ತು ರಾಜಕೀಯ ಕೆಲಸಗಳನ್ನು ಸದ್ಯ ಕಾಯ್ದಿರಿಸಿದ್ದೇನೆ. ಆದರೆ ಚಿತ್ರತಂಡಕ್ಕೆ ಶುಭವಾಗಲಿ ಎಂದು ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಉತ್ತರಕಾಂಡ ಚಿತ್ರದಲ್ಲಿ ಡಾಲಿ ಧನಂಜಯ್‌ಗೆ ನಾಯಕಿಯಾಗಿ ರಮ್ಯಾ ಕಾಣಿಸಿಕೊಳ್ಳುವುದಾಗಿ ಕಳೆದ ವರ್ಷ ಘೋಷಣೆಯಾಗಿತ್ತು. ಅದ್ಧೂರಿಯಾಗಿ ಮುಹೂರ್ತ ಕೂಡ ನೆರವೇರಿತ್ತು. ಚಿತ್ರದಲ್ಲಿ ಶಿವಣ್ಣ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಈಗ ರಮ್ಯಾ ಚಿತ್ರದಿಂದ ಹೊರನಡೆದಿದ್ದು ಅಭಿಮಾನಿಗಳಿಗೆ ಹಾಗೂ ಚಿತ್ರತಂಡಕ್ಕೆ ಬೇಸರ ಮೂಡಿಸಿದೆ. ಉತ್ತರಕಾಂಡ ಚಿತ್ರದ ಚಿತ್ರೀಕರಣ ಈಗಾಗಲೇ ಶುರುವಾಗಿದೆ. ಚಿತ್ರಕ್ಕೆ ‘ರತ್ನನ್‌ ಪ್ರಪಂಚ’ ಖ್ಯಾತಿಯ ರೋಹಿತ್‌ ಪದಕಿ ನಿರ್ದೇಶನ ಮಾಡುತ್ತಿದ್ದು, ಕೆಆರ್‌ಜಿ ಸಂಸ್ಥೆ ಬಂಡವಾಳ ಹೂಡಿದೆ.…

Read More

ನಟಿ ತ್ರಿಶಾ ಕೃಷ್ಣನ್ ಸದ್ಯ ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 40 ವರ್ಷದ ಈ ನಟಿಗೆ ಸಾಕಷ್ಟು ಡಿಮ್ಯಾಂಡ್ ಇದ್ದು ಟಾಪ್ ಹೀರೋಗಳ ಜೊತೆ ತ್ರಿಶಾ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ. ಹೀಗಿರುವಾಗ ಬಾಲಿವುಡ್ ಚಿತ್ರಗಳಲ್ಲಿ ನಟಿಸದಿರಲು ಕಾರಣವೇನು ಎಂಬುದನ್ನು ತ್ರಿಶಾ ತಿಳಿಸಿದ್ದಾರೆ.  ಅಕ್ಷಯ್ ಕುಮಾರ್ ನಟನೆಯ ‘ಖಟ್ಟಾ ಮಿಟ್ಟಾ’ ಸಿನಿಮಾದಲ್ಲಿ ತ್ರಿಶಾ ನಟಿಸಿದ್ದರು. ಖಟ್ಟಾ ಮಿಟ್ಟಾ ಸಿನಿಮಾ ಹೀನಾಯವಾಗಿ ಸೋತಿತ್ತು. ಹಿಂದಿ ಅಭಿಮಾನಿಗಳ ಮನಸ್ಸಿನಲ್ಲಿ ಜಾಗ ಪಡೆಯೋದ್ರಲ್ಲಿ ನಾನು ಸೋತೆ ಎಂದಿದ್ದಾರೆ. ಹಾಗಾಗಿ ಅದೇ ನನ್ನ ಮೊದಲ ಮತ್ತು ಕೊನೆಯ ಚಿತ್ರವಾಗಿದೆ. ಹಾಗಾಗಿ ನಾನು ಬಾಲಿವುಡ್‌ನಲ್ಲಿ ಸಿನಿಮಾ ಮಾಡುವುದು ಬಿಟ್ಟೆ ಎಂದು ತ್ರಿಶಾ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ‘ಪೊನ್ನಿಯನ್ ಸೆಲ್ವನ್’ ಚಿತ್ರದ ಸಕ್ಸಸ್ ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ತ್ರಿಶಾ ತೊಡಗಿಸಿಕೊಂಡಿದ್ದಾರೆ. ಈ ಮಧ್ಯೆ ಬಾಲಿವುಡ್ ಸಿನಿಮಾಗಳಿಂದಲೂ ಆಫರ್ ಬರ್ತಿವೆ. ಆದರೆ ತ್ರಿಶಾ ಅವುಗಳನ್ನು ನಯವಾಗಿಯೇ ತಿರಸ್ಕರಿಸಿದ್ದಾರೆ. ಸದ್ಯ ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಾಂಭರ’ ಸಿನಿಮಾದಲ್ಲಿ ತೊಡಗಿಕೊಂಡಿದ್ದು ಚಿತ್ರದ ಶೂಟಿಂಗ್ ನಡೆಯುತ್ತಿದೆ.

Read More

ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ ಅಮ್ಮನಾಗುವ ಖುಷಿಯಲ್ಲಿದ್ದಾರೆ. ಇತ್ತೀಚೆಗೆ ಅದ್ದೂರಿಯಾಗಿ ಸೀಮಂತ ಮಾಡಿಸಿಕೊಂಡಿದ್ದ ನಟಿ ಇದೀಗ ಮನದಾಸೆಯಂತೆ ಫೋಟೋ ಶೂಟ್ ಮಾಡಿಸಿದ್ದಾರೆ. ಪತಿ ಜೊತೆ ಅದಿತಿ ಸಖತ್ ಆಗಿ ಪೋಸ್ ಕೊಟ್ಟಿದ್ದು ಅದ್ಭುತವಾಗಿ ಫೋಟೋ ಶೂಟ್ ಮಾಡಿಸಿದ್ದಾರೆ. ಸದ್ಯ ಅದಿತಿಯ ಬೇಬಿ ಬಂಪ್ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತುಂಬು ಗರ್ಭೀಣಿಯಾಗಿರುವ ನಟಿ ಅದಿತಿ ಪ್ರಭುದೇವ ಅವರು ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಇತ್ತೀಚೆಗೆ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ಆಚರಿಸಲಾಗಿತ್ತು. ಈ ಬೆನ್ನಲ್ಲೇ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿ. ಕೊನೆಗೂ ನನ್ನ ಪುಟ್ಟ ನೆರವೇರಿದೆ ಎಂದಿದ್ದಾರೆ. ಕೆಂಪು ಹಾಗೂ ಹಸಿರು ಬಣ್ಣದ ಸೀರೆ ಉಂಟು ಅದಿತಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ನಟಿಯ ಮುಖದಲ್ಲಿ ತಾಯ್ತನದ ಕಳೆ ಎದ್ದು ಕಾಣುತ್ತಿದೆ. ಬಿಳಿ ಬಣ್ಣದ ಶೆರ್ವಾನಿಯಲ್ಲಿ ಅದಿತಿ ಪತಿ ಕಾಣಿಸಿಕೊಂಡಿದ್ದಾರೆ. ಕೊಡಗು ಮೂಲದ ಬ್ಯುಸಿನೆಸ್ ಮ್ಯಾನ್ ಯಶಸ್ ಪಾಟ್ಲಾ ಜೊತೆ 2022ರಲ್ಲಿ ಅದಿತಿ ಪ್ರಭುದೇವ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿ ಅದ್ಧೂರಿಯಾಗಿ…

Read More

ಮೈಕ್ರೋಸಾಫ್ಟ್ ವಿಂಡೋಸ್ ಮತ್ತು ಸರ್ಫೇಸ್ ನ ಹೊಸ ಮುಖ್ಯಸ್ಥರಾಗಿ ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿ ಪವನ್ ದಾವುಲುರಿ ಅವರನ್ನು ನೇಮಿಸಲಾಗಿದೆ. ಈ ಹಿಂದೆ ಪನೋಸ್ ಪನಯ್ ಇದ್ದ ಜಾಗಕ್ಕೆ ಇದೀಗ ಪವನ್ ದಾವುಲುರಿ ಅವರನ್ನು ನೇಮಿಸಲಾಗಿದೆ. “ಕಂಪನಿಯಲ್ಲಿ 19 ವರ್ಷಗಳ ನಂತರ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದೇನೆ” ಎಂದು ಪನಾಯ್ ಅವರು ಟ್ವೀಟ್‌ನಲ್ಲಿ ಮೈಕ್ರೋಸಾಫ್ಟ್‌ನಿಂದ ನಿರ್ಗಮಿಸುವುದನ್ನು ದೃಢಪಡಿಸಿದರು. ಅಲೆಕ್ಸಾ ಮತ್ತು ಎಕೋ ಉತ್ಪನ್ನಗಳಿಗೆ ಜವಾಬ್ದಾರರಾಗಿರುವ ಘಟಕವನ್ನು ನಡೆಸಲು Amazon.com ನಿಂದ ಪನಾಯ್ ಅವರನ್ನು ನೇಮಿಸಿಕೊಳ್ಳುತ್ತಿದೆ ಎಂದು ಹೇಳಿತ್ತು. ಇದೀಗ ಪನಯ್ ಜಾಗಕ್ಕೆ ಪವನ್ ಎಂಟ್ರಿಕೊಟ್ಟಿದ್ದಾರೆ. ಈ ಹಿಂದೆ, ದಾವುಲುರಿ ಸರ್ಫೇಸ್ ಸಿಲಿಕಾನ್ ಕೆಲಸವನ್ನು ಮೇಲ್ವಿಚಾರಣೆ ಮಾಡಿದರೆ, ಮಿಖಾಯಿಲ್ ಪರಖಿನ್ ವಿಂಡೋಸ್ ವಿಭಾಗವನ್ನು ಮುನ್ನಡೆಸಿದರು. ಆದಾಗ್ಯೂ, “ಹೊಸ ಪಾತ್ರಗಳನ್ನು” ಅನ್ವೇಷಿಸುವ ಪರಖಿನ್ ಅವರ ಬಯಕೆಯೊಂದಿಗೆ, ಪವನ್ ದಾವುಲುರಿ ವಿಂಡೋಸ್ ಮತ್ತು ಸರ್ಫೇಸ್ ಎರಡರ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಮೈಕ್ರೋಸಾಫ್ಟ್ ಅನುಭವ ಮತ್ತು ಸಾಧನಗಳ ಮುಖ್ಯಸ್ಥ ರಾಜೇಶ್ ಝಾ ಅವರ ಆಂತರಿಕ ಪತ್ರದಲ್ಲಿ, ಪರಖಿನ್ ಅವರ ನಿರ್ಗಮನವನ್ನು ಘೋಷಿಸಿದ್ದು…

Read More

ಬಾಲಿವುಡ್ ನಟಿ ತಾಪ್ಸಿ ಪನ್ನು ಇತ್ತೀಚೆಗೆ ಮದುವೆಯ ವಿಚಾರವಾಗಿ ಸಖತ್ ಸುದ್ದಿಯಾಗಿದ್ದಾರೆ. ತಾಪ್ಸಿ  ಬ್ಯಾಡ್ಮಿಂಟನ್​ ಆಟಗಾರ ಮಥಾಯಸ್​ ಬೋ ಜೊತೆ ವಿವಾಹ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಉದಯಪುರದಲ್ಲಿ ತಾಪ್ಸಿ ಮದುವೆ ಗುಟ್ಟಾಗಿ ನೆರವೇರಿದೆ ಎಂದು ಹೇಳಲಾಗುತ್ತಿದೆ.  ತಾಪ್ಸಿ ಪನ್ನು ಆಪ್ತರು ಹಂಚಿಕೊಂಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಮೂಲಕ ತಾಪ್ಸಿ ಪನ್ನು ಮದುವೆ ವಿಚಾರ ರಿವೀಲ್ ಆಗಿದೆ. ತಾಪ್ಸಿ ಪನ್ನು ಅವರ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿರುವ ಎವಾನಿಯಾ ಪನ್ನು ಇನ್​ಸ್ಟಾಗ್ರಾಮ್​ನಲ್ಲಿ ತಾಪ್ಸಿಗೆ ಮೇಕಪ್ ಮಾಡಿದ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಅವರು ಹಂಚಿಕೊಂಡ ಫೋಟೋ ಎಲ್ಲರ ಕಣ್ಣು ಕುಕ್ಕಿತ್ತು. ಸ್ಟೇಟಸ್​ನಲ್ಲಿ ಅವರು ಬ್ಯಾಕ್ ಟು ಬ್ಯಾಕ್ ಮದುವೆ ಸಂಭ್ರಮದ ಫೋಟೋ ಹಂಚಿಕೊಳ್ಳುತ್ತಿದ್ದಾರೆ. ಎಲ್ಲರ ಜೊತೆಗೂಡಿ ಪೋಸ್​ ಕೊಟ್ಟ ಫೋಟೋ ವೈರಲ್ ಆಗಿದೆ. ಇದು ತಾಪ್ಸಿ ಪನ್ನು ಮದುವೆಯಲ್ಲಿ ಕ್ಲಿಕ್ಕಿಸಿದ ಫೋಟೋ ಎಂದು ಅನೇಕರು ಊಹಿಸಿದ್ದಾರೆ. ಈ ಮೊದಲು ಮದುವೆ ವಿಚಾರದ ಬಗ್ಗೆ ತಾಪ್ಸಿ ಪನ್ನು…

Read More

ಭಾರತೀಯ ಚಿತ್ರರಂಗದ ಅತ್ಯುತ್ತಮ ನಟ ಪ್ರಕಾಶ್ ರಾಜ್ ಇಂದು ಹುಟ್ಟುಹಬ್ಬದ ಲಡಾಕ್ ನಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ತಮ್ಮ ಅದ್ಬುತ ನಟನೆಯ ಜೊತೆಗೆ ಪ್ರಕಾಶ್​ ರಾಜ್​ ವಿವಾದಗಳಿಂದಲೂ ಭಾರೀ ಸದ್ದು ಮಾಡುತ್ತಿರುತ್ತಾರೆ. ತಮಗೆ ತಮ್ಮ ಅನಿಸಿದ್ದನ್ನು ನೇರಾ ನೇರವಾಗಿ ಹೇಳುವ ಮೂಲಕ ಪ್ರಕಾಶ್ ರಾಜ್ ಸಾಕಷ್ಟು ಭಾರಿ ವಿವಾದಕ್ಕೆ ಈಡಾಗಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಪ್ರಕಾಶ್​ ರಾಜ್​, ಹಣಕ್ಕಾಗಿಯೇ ಕೆಲವು ಸ್ಟುಪಿಡ್ ಸಿನಿಮಾ ಮಾಡಿದ್ದಾಗಿ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಫಿಲ್ಮ್ ಕಂಪಾನಿಯನ್ ಸೌತ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಪ್ರಕಾಶ್ ರಾಜ್​, ಹಣಕ್ಕಾಗಿ ಸ್ಟುಪಿಡ್ ಸಿನಿಮಾಗಳನ್ನೂ ಕೂಡ ಮಾಡಿದ್ದೇನೆ ಎಂದು ಹೇಳಿದ್ದಾರೆ. ಈ ಸಿನಿಮಾ ಮಾಡಿದ್ರೆ ನನಗೆ ಹೆಚ್ಚು ಸಿಗುತ್ತೆ ಅಂತ ಯಾವಾಗಲಾದ್ರೂ ಯೋಚನೆ ಮಾಡಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್​ ರಾಜ್​, ನಾನು ಹಣಕ್ಕಾಗಿ ಸ್ಟುಪಿಡ್ ಸಿನಿಮಾಗಳನ್ನು ಮಾಡಿದ್ದೂ ಇದೆ. ನನಗೆ ಬ್ಯಾಲೆನ್ಸ್ ಮಾಡುವ ಅಗತ್ಯವಿಲ್ಲ. ಕಮರ್ಷಿಯಲ್ ಚಿತ್ರಗಳನ್ನು ನಾನು ಹೇಟ್ ಮಾಡೋದಿಲ್ಲ. ಅವುಗಳಿಗೂ ದೊಡ್ಡ ಪ್ರೇಕ್ಷಕ…

Read More