ಖ್ಯಾತ ಕೋರಿಯೋಗ್ರಾಫರ್ ಜಾನಿ ಮಾಸ್ಟರ್‌ಗೆ ಪೋಕ್ಸೋ ಕೇಸ್ ಬೆನ್ನಲ್ಲೇ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಜಾನಿ ಮಾಸ್ಟರ್ ಗೆ ನೀಡಲಾಗಿದ್ದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ರದ್ದುಗೊಳಿಸಲಾಗಿದೆ. ಇತ್ತೀಚೆಗೆ ಜಾನಿ ಮಾಸ್ಟರ್ ವಿರುದ್ಧ ತಮ್ಮ ಸಹಾಯಕ ನೃತ್ಯ ಸಂಯೋಜಕಿ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪಗಳು ಬಂದ ಹಿನ್ನೆಲೆಯಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ನಿರ್ಧಾರ ತೆಗೆದುಕೊಂಡಿದೆ. ಜಾನಿ ಮಾಸ್ಟರ್ ಅವರಿಗೆ ರಾಷ್ಟ್ರ ಪ್ರಶಸ್ತಿಯನ್ನು ರದ್ದುಗೊಳಿಸಲಾಗಿದೆ ಎಂದು ಘೋಷಿಸಿದೆ. ಆಗಸ್ಟ್ ತಿಂಗಳಲ್ಲಿ 2022ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ತಮಿಳಿನ `ತಿರುಚಿತ್ರಂಬಲಂʼ ಚಿತ್ರದ ʻಮೇಘಂ ಕರುಕಥʼ ಹಾಡಿಗಾಗಿ ಜಾನಿ ಮಾಸ್ಟರ್ ಮತ್ತು ಸತೀಶ್ ಮಾಸ್ಟರ್ ಅವರಿಗೆ ಉತ್ತಮ ನೃತ್ಯ ಸಂಯೋಜನೆ ವಿಭಾಗದಲ್ಲಿ ಜಂಟಿಯಾಗಿ ರಾಷ್ಟ್ರ ಪ್ರಶಸ್ತಿ ಘೋಷಿಸಲಾಗಿತ್ತು. ಈ ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ಅಕ್ಟೋಬರ್ 8 ರಂದು ದೆಹಲಿಯಲ್ಲಿ ಆಯೋಜನೆಯಾಗಿದ್ದು, ರಾಷ್ಟ್ರಪತಿಗಳು ಪ್ರಶಸ್ತಿ ವಿತರಣೆ ಮಾಡಲಿದ್ದಾರೆ. ಪ್ರಶಸ್ತಿ ಪ್ರಧಾನ ಮಾಡಲು ಎರಡು ಮೂರು ದಿನ ಭಾಕಿ ಇರುವಾಗ ಜಾನಿ ಮಾಸ್ಟರ್…
Author: Author AIN
ಗಾಝಾ ಮತ್ತು ಮಧ್ಯ ಪ್ರಾಚ್ಯದಲ್ಲಿ ಮುಂದುವರಿದಿರುವ ರಕ್ತಪಾತ ಕೊನೆಗೊಳ್ಳಬೇಕು ಮತ್ತು ಕದನ ವಿರಾಮ ಒಪ್ಪಂದ ಆಗಬೇಕು ಎಂದು ಆಗ್ರಹಿಸಿ ವಿಶ್ವದಾದ್ಯಂತ ಪ್ರಮುಖ ನಗರಗಳಲ್ಲಿ ಸಾವಿರಾರು ಮಂದಿ ಪ್ರತಿಭಟನಾ ಜಾಥಾ ನಡೆಸಿದರು. ಕಳೆದ ವರ್ಷದ ಅಕ್ಟೋಬರ್ 7ರಂದು ಇಸ್ರೇಲ್-ಹಮಾಸ್ ಯುದ್ಧ ಆರಂಭಗೊಂಡಿದ್ದು ಒಂದು ವರ್ಷ ಕಳೆದಿದೆ. ಘಟನೆಯಲ್ಲಿ ಸಾಕಷ್ಟು ಮಂದಿ ಮೃತಪಟ್ಟಿದ್ದರು ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಮಧ್ಯ ಲಂಡನ್‍ನಲ್ಲಿ ಸುಮಾರು 40,000 ಫೆಲೆಸ್ತೀನ್ ಪರ ಪ್ರತಿಭಟನಾಕಾರರು ಜಾಥಾ ನಡೆಸಿದರೆ, ಬರ್ಲಿನ್, ಪ್ಯಾರಿಸ್, ರೋಮ್, ಜಕಾರ್ತ, ಮನಿಲಾ, ಕೇಪ್‍ಟೌನ್ ಮತ್ತು ನ್ಯೂಯಾರ್ಕ್ ಸಿಟಿಯಲ್ಲಿಯೂ ಫೆಲೆಸ್ತೀನ್ ಪರ ಜಾಥಾ ನಡೆದಿದೆ. ಗಾಝಾ ಮತ್ತು ಲೆಬನಾನ್‍ನಲ್ಲಿ ಇಸ್ರೇಲ್‍ನ ಮಿಲಿಟರಿ ಕಾರ್ಯಾಚರಣೆಗೆ ಅಮೆರಿಕದ ಬೆಂಬಲವನ್ನು ವಿರೋಧಿಸಿ ವಾಷಿಂಗ್ಟನ್‍ನಲ್ಲಿ ಶ್ವೇತಭವನದ ಎದುರು ಪ್ರತಿಭಟನೆ ನಡೆಸಲಾಗಿದೆ. ನ್ಯೂಯಾರ್ಕ್ ಸಿಟಿಯ ಟೈಮ್ಸ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಗಾಝಾ ಮತ್ತು ಲೆಬನಾನ್ ಜನರನ್ನು ಬೆಂಬಲಿಸಿ ಘೋಷಣೆ ಕೂಗಿದ್ದು ಇಸ್ರೇಲ್ ವಿರುದ್ಧ ಶಸ್ತ್ರಾಸ್ತ್ರ ನಿರ್ಬಂಧವನ್ನು ಒತ್ತಾಯಿಸುವ ಬ್ಯಾನರ್ ಪ್ರದರ್ಶಿಸಲಾಗಿದೆ. 2023ರ ಅಕ್ಟೋಬರ್ 7ರಂದು ಹಮಾಸ್ ಸಶಸ್ತ್ರ…
ಮಾದಕ ವಸ್ತು ಹಿಂಸಾಚಾರ ಪ್ರಕರಣದಲ್ಲಿ 15 ವರ್ಷದ ಬಾಲಕನಿಗೆ 50 ಬಾರಿ ಇರಿದು ಆತನನ್ನು ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ಫ್ರಾನ್ಸ್ ನ ದಕ್ಷಿಣ ಪ್ರದೇಶದಲ್ಲಿರುವ ಮಾರ್ಸಿಲ್ಲೆಯಲ್ಲಿ ನಡೆದಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಮಾರ್ಸಿಲ್ಲೆ ಪ್ರಾಸಿಕ್ಯೂಟರ್ ನಿಕೋಲಸ್ ಬೆಸ್ಸೋನ್, 15 ವರ್ಷದ ಬಾಲಕನನ್ನು ಬುಧವಾರ ಹತ್ಯೆ ಮಾಡಲಾಗಿದ್ದು ಪ್ರಕರಣವನ್ನು “ಹಿಂದೆಂದೂ ಕಾಣದ ಅನಾಗರಿಕತೆ” ಎಂದಿದ್ದಾರೆ. ಫ್ರಾನ್ಸ್‌ನ ಎರಡನೇ ಅತಿ ದೊಡ್ಡ ನಗರವಾದ ಮಾರ್ಸೆಲ್ಲೆ, ಅದರ ಅತ್ಯಂತ ಬಡ ನಗರಗಳಲ್ಲಿ ಒಂದಾಗಿದೆ, ಇದು ಮಾದಕ ದ್ರವ್ಯ-ಸಂಬಂಧಿತ ಹಿಂಸಾಚಾರದಿಂದ ಪೀಡಿತವಾಗಿದೆ. ಇಂತಹ ಹಿಂಸಾಚಾರದ ಬಲಿಪಶುಗಳು ಮತ್ತು ಅಪರಾಧಿಗಳ ಪೈಕಿ ಹೆಚ್ಚು ಮಂದಿ ಕಿರಿಯ ವಯಸ್ಸಿನವರಾಗಿದ್ದಾರೆ ಎಂದು ಬೆಸ್ಸೋನ್ ಹೇಳಿದ್ದಾರೆ. ನಗರ ಇತ್ತೀಚಿನ ವರ್ಷಗಳಲ್ಲಿ DZ ಮಾಫಿಯಾ ಸೇರಿದಂತೆ ವಿವಿಧ ಲಾಭದಾಯಕ ಡ್ರಗ್ಸ್ ಮಾರುಕಟ್ಟೆಯ ನಿಯಂತ್ರಣಕ್ಕಾಗಿ ಯುದ್ಧಕ್ಕೆ ಸಾಕ್ಷಿಯಾಗಿದೆ. ಈ ಹದಿಹರೆಯದವರನ್ನು 23 ವರ್ಷದ ಖೈದಿಯೊಬ್ಬ ಸ್ಪರ್ಧಿಯನ್ನು ಬೆದರಿಸಲು ನೇಮಿಸಿಕೊಂಡಿದ್ದರು, ಪ್ರಾಸಿಕ್ಯೂಟರ್ ಪ್ರಕಾರ ಯುವಕನಿಗೆ 2,000 ಯೂರೋಗಳ ಆಮಿಷವೊಡ್ಡಿದ್ದರು ಎಂದು ತಿಳಿದುಬಂದಿದೆ. ಅದೇ ಖೈದಿ ನಂತರ 14…
ದ್ವಿಪಕ್ಷೀಯ ಸಂಬಂಧ ವೃದ್ಧಿ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲು ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ನಾಲ್ಕು ದಿನಗಳ ಕಾಲ ಭಾರತ ಪ್ರವಾಸ ಕೈಗೊಂಡಿದ್ದಾರೆ. ಮೊಹಮ್ಮದ್ ಮುಯಿಝ ಅವರು ಪತ್ನಿ, ಮಾಲ್ದೀವ್ಸ್‌ನ ಮೊದಲ ಮಹಿಳೆ ಸಜೀದಾ ಮೊಹಮ್ಮದ್ ಅವರೊಂದಿಗೆ ದೆಹಲಿಗೆ ಆಗಮಿಸಿದ್ದು ಇವರನ್ನು ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ಅವರು ಸ್ವಾಗತಿಸಿದರು. ಅಕ್ಟೋಬರ್ 6ರಿಂದ 10ರವರೆಗಿನ ಭಾರತ ಭೇಟಿ ವೇಳೆ ಮುಯಿಝು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದ್ದಾರೆ. ದ್ವಿಪಕ್ಷೀಯ ಸಂಬಂಧ, ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಮುಯಿಝು ಅವರು ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಭಾಗಿಯಾಗಲು ಭಾರತಕ್ಕೆ ಭೇಟಿ ನೀಡಿದ್ದರು. ದ್ವಿಪಕ್ಷೀಯ ಸಂಬಂಧ ಮಾತುಕತೆಗೆ ಇದು ಅವರ ಮೊದಲ ಭೇಟಿಯಾಗಿದೆ. ಈ ವೇಳೆ ಮುಯಿಝು ಅವರು ಬೆಂಗಳೂರಿಗೂ ಭೇಟಿ ನೀಡುವ ಸಾಧ್ಯತೆಯಿದೆ ಎಂದು…
ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭವಾಗಿ ವಾರ ಕಳೆದಿದೆ. ಮೊದಲ ವಾರ ಯಾರು ದೊಡ್ಮನೆಯಿಂದ ಹೊರ ಬರುತ್ತಾರೆ ಎಂಬ ಕುತೂಹಲ ಶುರುವಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದ್ದು ಮೊದಲ ವಾರದ ಎಲಿಮಿನೇಷನ್ ನಲ್ಲಿ ಯಮುನಾ ಶ್ರೀನಿಧಿ ಔಟ್ ಆಗುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಮೊದಲ ವಾರವೇ ಯಮುನಾ ಎಲಿಮಿನೇಷನ್ ಆಗುತ್ತಾರೆ ಎಂಬುದನ್ನು ಯಾರು ಊಹಿಸಿರಲಿಲ್ಲ. ವಯಸ್ಸು 45 ದಾಟಿದರೂ ಗಟ್ಟಿಗಿತ್ತಿ ಸಹ ಸ್ಪರ್ಧಿಗಳಿಗೆ ಠಕ್ಕರ್ ಕೊಡುತ್ತಿದ್ದರು. ಇದೀಗ ಅವರು ಔಟ್ ಎನ್ನುತ್ತಿದ್ದಂತೆ ಮನೆ ಮಂದಿಗೂ ಅಚ್ಚರಿ ಆಗಿದೆ. ಇನ್ನೂ ನವರಾತ್ರಿ ಹಬ್ಬದ ಸಂದರ್ಭವಿರುವ ಕಾರಣ, ಎಲಿಮಿನೇಷನ್ ಇರೋದಿಲ್ಲ ಎಂದೇ ಅನೇಕರು ಭಾವಿಸಿದ್ದರು. ಆದರೆ ಈಗ ಯಮುನಾ ಅವರ ದೊಡ್ಮನೆ ಆಟಕ್ಕೆ ಬಿಗ್ ಬಾಸ್ ಅಂತ್ಯ ಹಾಡಿದ್ದಾರೆ. ಅಶ್ವಿನಿ ನಕ್ಷತ್ರ ಸೀರಿಯಲ್ ಮೂಲಕ ಪರಿಚಿತರಾಗಿದ್ದ ಯಮುನಾ ಆ ನಂತರ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಭರತನಾಟ್ಯ ಕಲಾವಿದೆಯಾಗಿಯೂ ಸೈ ಎನಿಸಿಕೊಂಡಿರುವ ಯಮುನಿ ಸಾಕಷ್ಟು ಸೀರಿಯಲ್ ಗಳಲ್ಲಿ ಬ್ಯುಸಿಯಾಗಿದ್ದಾರೆ.
ರೇಣುಕಾಸ್ವಾಮಿ ಕೇಸ್‌ನಲ್ಲಿ ಜೈಲು ಸೇರಿರುವ ದರ್ಶನ್ ಬಿಡುಗಡೆಗಾಗಿ ಅವರ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಆದ್ರೆ ದಿನೇ ದಿನೇ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಲಾಗುತ್ತಿದೆ. ಇದೀಗ ಇದೇ ಮೊದಲ ಭಾರಿಗೆ ದರ್ಶನ್ ಬಂಧನದ ಬಗ್ಗೆ ಸಹೋದರ ಮೌನ ಮುರಿದಿದ್ದಾರೆ. ದಿನಾಕರ್ ಹೇಳಿದ ಮಾತೊಂದು ದರ್ಶನ್ ಅಭಿಮಾನಿಗಳಿಗೆ ಕೊಂಚ ಸಮಾಧಾನ ತಂದಿದೆ. ದರ್ಶನ್ ಸೋದರ ದಿನಕರ್ ತೂಗುದೀಪ್ ತಮ್ಮ ನಿರ್ದೇಶನದ ಐದನೇ ಸಿನಿಮಾ ರಾಯಲ್ ಚಿತ್ರದ ಹಾಡಿನ್ನು ಬಿಡುಗಡೆ ಮಾಡಿದ್ದಾರೆ. ಈ ವೇಳೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಇದೇ ವೇದಿಕೆ ಮೇಲೆ ದಿನಕರ್ ಆಡಿದ ಮಾತು 2011ರ ದರ್ಶನ್ ಸಿನಿ ಬದುಕಿನ ಪುನರ್ಜನ್ಮದ ಹಿಸ್ಟರಿ ರಿಪೀಟ್ ಮಾಡುವಂತಿದೆ. ನಮಗ್ಯಾವುದೇ ಸಮಸ್ಯೆ ಇರಲಿ ಏನೇ ಇರಲಿ ಯಾವಾಗಲೂ ಸಪೋರ್ಟ್ ಮಾಡೋ ಸೆಲೆಬ್ರೆಟೀಸ್‌ಗೆ ನಮ್ಮ ಫ್ಯಾಮಿಲಿ ಮತ್ತು ದರ್ಶನ್ ಮೇಲಿನ ಸಪೋರ್ಟ್ ಹೀಗೆ ಇರಲಿ. ನಿಮ್ಮ ಪ್ರೀತಿಗೆ ನಾವು ಯಾವಾಗಲೂ ಚಿರಋಣಿ. ನಾವೇನೇ ಹೆಸರು ಮಾಡಿದ್ರೂ, ಅದು ನಿಮ್ಮಿಂದ.…
ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಶುಭಾಶ್ರೀ ಪ್ರಯಾಣಿಸುತ್ತಿದ್ದ ಹೋಗುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಚಿತ್ರೀಕರಣಕ್ಕೆಂದು ತೆರಳುತ್ತಿದ್ದ ಸಂದರ್ಭದಲ್ಲಿ ಶುಭಾಶ್ರೀ ಅವರ ಕಾರಿಗೆ ಎದುರಿನಿಂದ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಆಂಧ್ರಪ್ರದೇಶದ ನಾಗಾರ್ಜುನ ಸಾಗರ್ ಬಳಿ ಘಟನೆ ನಡೆದಿದೆ. ಅಪಘಾತದಲ್ಲಿ ಬೈಕ್‌ನಲ್ಲಿ ಬರುತ್ತಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನಟಿಗೆ ಯಾವುದೇ ಸಮಸ್ಯೆಯಾಗಿಲ್ಲ. ಆಂಧ್ರ ಪ್ರದೇಶದ ನಾಗಾರ್ಜುನ ಸಾಗರ್ ಬಳಿ ಭಾನುವಾರ ಮಧ್ಯಾಹ್ನ ಅಪಘಾತ ಅಪಘಾತದ ಪರಿಣಾಮ ನಟಿ ಪ್ರಯಾಣಿಸುತ್ತಿದ್ದ ಕಾರು ಸಂಪೂರ್ಣ ಜಖಂಗೊಂಡಿದೆ. ಆದ್ರೆ ಬೈಕ್ ನಲ್ಲಿ ತೆರಳುತ್ತಿದ್ದವರು ಡ್ರಿಂಕ್ ಆ್ಯಂಡ್ ಡ್ರೈವ್ ಮಾಡಿದ್ದರು ಎಂದು ವರದಿ ತಿಳಿಸಿದೆ. ಶುಭಶ್ರೀ ಅವರ ಕಾರು ಅಪಘಾತಕ್ಕೆ ಸಂಬಂಧಿಸಿದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಬಿಗ್ ಬಾಸ್ ತೆಲುಗು ರಿಯಾಲಿಟಿ ಶೋ ಸೀಸನ್ 7ರ ಮೂಲಕ ಉತ್ತಮ ಜನಪ್ರಿಯತೆ ಗಳಿಸಿದವರಲ್ಲಿ ಶುಭಾಶ್ರೀ ರಾಯಗುರು ಅಲಿಯಾಸ್ ಸುಬ್ಬು ಕೂಡ ಒಬ್ಬರು. ಸದ್ಯ ಶುಭಶ್ರೀ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಇಸ್ರೇಲ್ ಹಾಗೂ ಇರಾನ್ ನಡುವಿನ ದಾಳಿ ದಿನೇ ದಿನೇ ಹೆಚ್ಚುತ್ತಲೆ ಇದೆ. ಬೈರುತ್ ನಲ್ಲಿ ಇಸ್ರೇಲ್ ವಾಯುಸೇನೆ ನಡೆಸುತ್ತಿರುವ ವಾಯುದಾಳಿ ತೀವ್ರವಾಗುತ್ತಿದ್ದು, ಅತ್ತ ಹೆಜ್ಬೊಲ್ಲಾ ಬಂಡುಕೋರ ಸಂಘಟನೆಯ ನಾಯಕರೆಲ್ಲ ಒಬ್ಬರ ಹಿಂದೊಬ್ಬರಂತೆ ಕಣ್ಮರೆಯಾಗುತ್ತಿದ್ದಾರೆ. ಹೆಜ್ಬೊಲ್ಲಾ ನಾಯಕ ಸಯ್ಯದ್ ಹಸನ್ ನಸ್ರಲ್ಲಾಹ್ ಇಸ್ರೇಲ್ ವಾಯುದಾಳಿಯಲ್ಲಿ ಸಾವನ್ನಪ್ಪಿದ ಬೆನ್ನಲ್ಲೇ ಆತನ ಉತ್ತರಾಧಿಕಾರಿಗಳೂ ಕೂಡ ಒಬ್ಬರ ನಂತರ ಒಬ್ಬರು ನಾಪತ್ತೆಯಾಗುತ್ತಿದ್ದಾರೆ. ಈ ಹಿಂದೆ ಹೆಷಜ್ಬೊಲ್ಲಾ ಕಮಾಂಡರ್ ನಬಿಲ್ ಕೌಕ್, ಹೆಜ್ಬೊಲ್ಲಾ ಸಂಘಟನೆಯ ಸಂವಹನ ಘಟಕದ ಕಮಾಂಡರ್ ಮೊಹಮ್ಮದ್ ರಶೀದ್ ಸಕಾಫಿ, ನಸ್ರಲ್ಲಾಹ್ ಉತ್ತರಾಧಿಕಾರಿ ಎಂದೇ ಹೇಳಲಾಗುತ್ತಿದ್ದ ಹಶೆಮ್ ಸಫೀದ್ದೀನ್ ಇಸ್ರೇಲ್ ವಾಯುದಾಳಿಯಲ್ಲಿ ಮೃತಪಟ್ಟಿದ್ದರು. ಒಬ್ಬರ ಹಿಂದೊಬ್ಬರಂತೆ ನಾಯಕರು ಮೃತಪಡುತ್ತಿರುವುದು ಇರಾನ್ ಗೆ ನುಂಗಲಾರದ ತುತ್ತಾಗಿದೆ. ಇದೀಗ ಹಿಜ್ಬುಲ್ಲಾ ಮತ್ತೋರ್ವ ಕಮಾಂಡರ್ ಹಾಗೂ ನಸ್ರಲ್ಲಾನ ಸಂಭಾವ್ಯ ಉತ್ತರಾಧಿಕಾರಿ ಕೂಡ ಕಣ್ಮರೆಯಾಗಿದ್ದು, ಆತ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ವರದಿಯಾಗಿದೆ. ಶುಕ್ರವಾರದಿಂದಲೇ ಅಂದರೆ ಇಸ್ರೇಲಿ ವೈಮಾನಿಕ ದಾಳಿಯ ಆತನ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಲೆಬನಾನಿನ ಭದ್ರತಾ ಮೂಲಗಳು ತಿಳಿಸಿವೆ ಎನ್ನಲಾಗಿದೆ.…
‘ಮಜಾ ಭಾರತ’, ‘ಗಿಚ್ಚಿ ಗಿಲಿ ಗಿಲಿ’ ಶೋಗಳ ಮೂಲಕ ಜನಪ್ರಿಯರಾಗಿದ್ದ ನಟ ಮಂಜು ಪಾವಗಡ ಬಳಿಕ ‘ಬಿಗ್ ಬಾಸ್’ ಗೆ ಎಂಟ್ರಿಕೊಟ್ಟಿದ್ದರು. ಬಿಗ್ ಬಾಸ್ ಸೀಸನ್ 8ರ ವಿನ್ನರ್ ಆಗಿದ್ದ ಮಂಜು ಪಾವಗಡ ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಯೆಸ್. ಬಿಗ್ ಬಾಸ್ ವಿಜೇತ ಮಂಜು ಪಾವಗಡ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಸದ್ದಿಲ್ಲದೇ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಮಂಜು ಪಾವಗಡ ನಂದಿನಿ ಎಂಬುವವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅದರ ಪೂರ್ವಭಾವಿಯಾಗಿ ಈಗ ಎಂಗೇಜ್‌ಮೆಂಟ್ ನಡೆದಿದೆ. ನಂದಿನಿ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಗುರು-ಹಿರಿಯರು ಒಪ್ಪಿಗೆ ಮೇರೆಗೆ ಈ ಮದುವೆ ಮಾತುಕತೆ ನಡೆದಿದೆಯಂತೆ. ಸದ್ಯ ಮಂಜು ಪಾವಗಡ ಮತ್ತು ನಂದಿನಿ ಅವರ ನಿಶ್ಚಿತಾರ್ಥ ಸಮಾರಂಭ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು, ಆಪ್ತರು, ಹಿತೈಷಿಗಳು ಶುಭ ಹಾರೈಸಿದ್ದಾರೆ. ಪಾವಡಡದಲ್ಲಿ ಮಂಜು ಪಾವಗಡ ಮತ್ತು ನಂದಿನಿ ಮದುವೆ ನಡೆಯಲಿದೆ. ನವೆಂಬರ್ 13 ಮತ್ತು 14ರಂದು ಮದುವೆ ನಡೆಯಲಿದೆ ಎಂದು ಆಪ್ತಮೂಲಗಳು ತಿಳಿಸಿವೆ.…
ಬಿಗ್‌ಬಾಸ್ ಕನ್ನಡ ಸೀಸನ್ ಆರಂಭವಾಗಿ 1 ವಾರವಾಗಿದ್ದು, ಈ ಸೀಸನ್ ನ ಮೊದಲ ಪಂಚಾಯಿತಿಗೆ ಕಿಚ್ಚ ಸುದೀಪ್ ಬರಿಗಾಲಲ್ಲಿ ನಿಂತುಕೊಂಡೇ ನಿರೂಪಣೆ ಮಾಡಿದ್ದಾರೆ. ಶನಿವಾರದ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ನವರಾತ್ರಿ ಹಿನ್ನೆಲೆ ಬರಿಗಾಲಲ್ಲಿ ನಿಂತಿರುವುದಾಗಿ ಹೇಳಿದ್ದು, ಅವರು ವೇದಿಕೆಗೆ ನೀಡಿರುವ ಗೌರವಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಟಿವಿಯಲ್ಲಿ ಒಂದೂವರೆ ಗಂಟೆ ಪ್ರಸಾರವಾಗುವ ಬಿಗ್ ಬಾಸ್ ಶೋ ಗೆ ಗಂಟೆಗಟ್ಟಲೆ ನಿಂತುಕೊಂಡೇ ಶೂಟಿಂಗ್ ಮಾಡಬೇಕಿದೆ. ಈ ವೇಳೆ ಸುದೀಪ್ ಚಪ್ಪಲಿ ಹಾಕದೆ ನಿಂತೇ ಶೂಟಿಂಗ್ ಮಾಡಿದ್ದಾರೆ. ದಿನಾಲು ಚಪ್ಪಲಿ ಧರಿಸುವವರಿಗೆ ಬರಿಗಾಲಲ್ಲಿ ಇರುವುದು ಕಷ್ಟವೇ ಆಗುತ್ತದೆ. ಅಂತಹದರಲ್ಲಿ ಗಂಟೆಗಟ್ಟಲೆ ಚಪ್ಪಲಿ ಹಾಕಿದೆ ಶೂಟಿಂಗ್ ನಲ್ಲಿ ಭಾಗಿಯಾಗಿರುವುದು ಕಿಚ್ಚನ ಮೇಲೆ ಅಭಿಮಾನ ಹೆಚ್ಚಿಸಿದೆ. ಇನ್ನು ಕಿಚ್ಚ ಸುದೀಪ್ ಅವರ ಇಂದಿನ ಕಾಸ್ಟ್ಯೂಮ್ ಕೂಡ ಸಿಂಪಲ್ ಆಗಿ ಎಲಿಗೆಂಟ್ ಲುಕ್ ಕೊಡುತ್ತಿತ್ತು. ಕಂದು ಬಣ್ಣದ ಟಾಪ್ , ಬಿಳಿ ಬಣ್ಣದ ಪ್ಯಾಂಟ್ ಮತ್ತು ಕಡು ಕಂದು ಬಣ್ಣದ ಶಾಲು ಧರಿಸಿದ್ದರು. ಅದಕ್ಕೆ ತಕ್ಕನಾದ…