70ನೇ ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭ ಇಂದು ದೆಹಲಿಯಲ್ಲಿ ನಡೆಯಲಿದೆ. ದಾದಾ ಸಾಹೇಬ್ ಫಾಲ್ಕೆ ಹಾಗೂ ರಾಷ್ಟ್ರ ಪ್ರಶಸ್ತಿಗಳ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. 70ನೇ ಸಾಲಿನ ರಾಷ್ಟ್ರ ಪ್ರಶಸ್ತಿಯನ್ನು ಆಗಸ್ಟ್ 16ರಂದು ಘೋಷಣೆ ಮಾಡಲಾಗಿದ್ದು, ಇಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ದೆಹಲಿಯ ವಿಜ್ಞಾನ್ ಭವನದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಅವಾರ್ಡ್ ವಿನ್ನರ್ಗಳ ಜೊತೆ ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಈ ಅವಾರ್ಡ್ ಕಾರ್ಯಕ್ರಮ ಆರಂಭ ಆಗಲಿದೆ. ಡಿಡಿ ನ್ಯೂಸ್ ಚಾನೆಲ್ನ ಈ ಕಾರ್ಯಕ್ರಮದ ಲೈವ್ ಪ್ರಸಾರವಾಗಲಿದೆ. ಕನ್ನಡದ ಪಾಲಿಗೆ ಈ ಬಾರಿಯ ರಾಷ್ಟ್ರೀಯ ಪ್ರಶಸ್ತಿ ವಿಶೇಷ ಎನಿಸಿಕೊಂಡಿದೆ. ರಿಷಬ್ ಶೆಟ್ಟಿ ಅವರಿಗೆ ‘ಕಾಂತಾರ’ ಸಿನಿಮಾದ ನಟನೆಗೆ ‘ಅತ್ಯುತ್ತಮ ನಟ’ ಅವಾರ್ಡ್ ಸಿಕ್ಕಿದೆ. ಅದೇ ರೀತಿ ‘ಕಾಂತಾರ’ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಸಿಕ್ಕಿದೆ. ರಿಷಬ್ ಶೆಟ್ಟಿ ಸಮಾರಂಭದಲ್ಲಿ ಭಾಗಿ ಆಗಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಉಳಿದಂತೆ ಮಾನಸಿ…
Author: Author AIN
ಕಳೆದ ವರ್ಷ ಅಕ್ಟೋಬರ್ 7ರಂದು ಗಾಝಾದಲ್ಲಿ ಆರಂಭಗೊಂಡ ಹತ್ಯಾಕಾಂಡ ಇಂದಿಗೂ ಮುಂದುವರೆದಿದೆ. ಯುದ್ಧಕ್ಕೆ ಕದನ ವಿರಾಮ ಘೋಷಿಸಲು ವಿಶ್ವಾದ್ಯಂತ ಕರೆ ನೀಡಲಾಗಿದೆ. ಇದೀಗ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಹಮಾಸ್ ನ ಮಾಜಿ ಮುಖಂಡ ಖಲೀದ್ ಮಶಾಲ್, ಎಲ್ಲಾ ರಾಜಕೀಯ ಕ್ಷಿತಿಜಗಳು ಮುಚ್ಚಿಹೋದ ಬಳಿಕ ಅಕ್ಟೋಬರ್ 7ರ ದಾಳಿ ನಡೆದಿದೆ ಮತ್ತು ಇದು ಕಾರ್ಯತಂತ್ರದ ಫಲಿತಾಂಶವನ್ನು ಸಾಧಿಸಿದೆ ಎಂದಿದ್ದಾರೆ. ಹಮಾಸ್ ಗೆ ಬೆಂಬಲ ನೀಡಿದ ಹಿಜ್ಬುಲ್ಲಾ, ಹೌದಿ ಮತ್ತು ಇರಾನ್ಗೆ ಧನ್ಯವಾದ ಅರ್ಪಿಸಿದ ಅವರು ಗಾಝಾಕ್ಕೆ ಆರ್ಥಿಕ ನೆರವು ಒದಗಿಸುವಂತೆ ಅರಬ್ ದೇಶಗಳನ್ನು ವಿನಂತಿಸಿದರು. `ಗಾಝಾದಲ್ಲಿ ಗುರಿ ಸಾಧನೆಗೆ ವಿಫಲವಾದ ಬಳಿಕ ಇಸ್ರೇಲ್ ಲೆಬನಾನ್ ನಲ್ಲಿ ಯುದ್ಧದ ಕ್ಷೇತ್ರವನ್ನು ತೆರೆದಿದೆ ಮತ್ತು ಜೋರ್ಡಾನ್ ಹಾಗೂ ಈಜಿಪ್ಟ್ ವಿರುದ್ಧ ಪಿತೂರಿ ನಡೆಸುತ್ತಿದೆ. ಗಾಝಾದ ಜನರು ಹತಾಶರಾಗಬಾರದು. ಶೀಘ್ರದಲ್ಲೇ ಗೆಲುವು ನಿಮ್ಮದಾಗಲಿದೆ’ ಎಂದು ಭರವಸೆ ನೀಡಿದರು.
ಕಳೆದ ವರ್ಷ ಇಸ್ರೇಲ್ ನಡೆಸಿದ್ದ ಫೆಲೆಸ್ತೀನಿಗಳ ಮಾರಣ ಹೋಮ ಸೋಮವಾರಕ್ಕೆ ಒಂದು ವರ್ಷ ಪೂರ್ಣಗೊಳಿಸಿದೆ. ಯುದ್ಧದಲ್ಲಿ ಈಗಾಗಲೇ ಹಲವಾರು ಅಮಾಯಕ ಜೀವಗಳು ಬಲಿಯಾಗಿದ್ದು ಇದರಿಂದ ಜನ ಮತ್ತಷ್ಟು ಕಂಗಾಲಾಗಿದ್ದಾರೆ. ಇದೇ ವೇಳೆ ವಿಶ್ವಾದ್ಯಂತ ಸಾವಿರಾರು ಜನ ಬೃಹತ್ ರ್ಯಾಲಿಗಳಲ್ಲಿ ಭಾಗಿಯಾಗಿ ಗಾಝಾ ಮತ್ತು ಲೆಬನಾನ್‌ಗಳಲ್ಲಿ ಕದನ ವಿರಾಮಕ್ಕೆ ಆಗ್ರಹಿಸಿದರು. ಇಸ್ರೇಲ್ ಮೇಲೆ ಹಮಾಸ್ ನೇತೃತ್ವದ ದಾಳಿಯ ಮೊದಲ ವರ್ಷಾಚರಣೆಯ ಅಂಗವಾಗಿ ಸೋಮವಾರ ಹಲವು ನಗರಗಳಲ್ಲಿ ಪ್ರತಿಭಟನಾಕಾರರು ಸಮಾವೇಶ ನಡೆಸಿದರು. ಇಸ್ರೇಲ್ ಗಾಝಾ ಮತ್ತು ಲೆಬನಾನ್‌ಗಳಲ್ಲಿ ತನ್ನ ದಾಳಿಗಳನ್ನು ಮುಂದುವರಿಸಿದ್ದು,ಇದು ವ್ಯಾಪಕ ಪ್ರಾದೇಶಿಕ ಯುದ್ಧದ ಭೀತಿಯನ್ನು ಹೆಚ್ಚಿಸಿದೆ. ಸೋಮವಾರ ನ್ಯೂಜಿಲಂಡ್‌ನ ಆಕ್ಲಂಡ್‌ನಲ್ಲಿ ಸರಕಾರಿ ಟಿವಿಎನ್‌ಝಡ್ ಟಿವಿ ಕೇಂದ್ರದ ಎದುರು ಸೇರಿ ಕದನ ವಿರಾಮಕ್ಕೆ ಆಗ್ರಹಿಸಿದ ಫೆಲೆಸ್ತೀನ್ ಪರ ಪ್ರತಿಭಟನಾಕಾರರು ತೀವ್ರ ಬಲಪಂಥೀಯ ಮೂಲಭೂತವಾದಿ ಕ್ರಿಶ್ಚಿಯನ್ ಗುಂಪು ಡೆಸ್ಟಿನ ಚರ್ಚ್‌ನ ಅನುಯಾಯಿಗಳೊಂದಿಗೆ ಘರ್ಷಣೆ ನಡೆಸಿದರು. ಎದುರಾಳಿ ಗುಂಪುಗಳನ್ನು ಪ್ರತ್ಯೇಕಿಸಲು 35 ಪೋಲಿಸ್ ಅಧಿಕಾರಿಗಳು ಸ್ಥಳದಲ್ಲಿದ್ದರು. ಟಿವಿಎನ್‌ಝಡ್ ಸಮೀಪದ ರಸ್ತೆಗೂ ಹಬ್ಬಿದ ಗಲಭೆಯನ್ನು ನಿಯಂತ್ರಿಸಲು ಪೋಲಿಸರು…
ಸ್ಯಾಂಡಲ್ ವುಡ್ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂಥೆರೋ ಮದುವೆಯಾಗಿ ಎರಡು ತಿಂಗಳು ಕಳೆದಿದೆ. ಇದೀಗ ಈ ಜೋಡಿ ಹನಿಮೂನ್ ಗೆ ಮಾಲ್ಡೀವ್ಸ್ ಗೆ ತೆರಳಿದ್ದಾರೆ. ಕಪಲ್ಸ್ ಗಳ ಫೇವರೆಟ್ ಸ್ಪಾಟ್ ಮಾಲ್ಡೀವ್ಸ್ ನಲ್ಲಿ ಸೋನಲ್ ಹಾಗೂ ತರುಣ್ ಕೈ ಕೈ ಹಿಡಿದು ಸುತ್ತಾಡಿದ್ದಾರೆ. ಮಾಲ್ಡೀವ್ಸ್ ನಲ್ಲಿ ಪತಿಯೊಂದಿಗೆ ಎಂಜಾಯ್ ಮಾಡುತ್ತಿರುವ ಫೋಟೋವನ್ನು ಸೋನಲ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ಸೋನಲ್. ನನ್ನ ವ್ಯಕ್ತಿಯೊಂದಿಗೆ ಸ್ವರ್ಗವನ್ನು ಹುಡುಕುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ತರುಣ್ಸುಧೀರ್ ಹಾಗೂ ಸೋನಲ್ ಮೊಂಥೆರೋ ಆಗಸ್ಟ್ 11ರಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಬಳಿಕ ಮಂಗಳೂರಿನ ಚರ್ಚ್ ನಲ್ಲಿ ಕ್ರೈಸ್ತ ಸಂಪ್ರದಾಯದಂತೆ ಉಗುರು ಬದಲಾಯಿಸಿಕೊಂಡಿದ್ದರು. ಹಿರಿಯರ ಸಮ್ಮುಖದಲ್ಲಿ ನಡೆದ ಮದುವೆ ಸಮಾರಂಭಕ್ಕೆ ಅನೇಕ ಗಣ್ಯರು ಸಾಕ್ಷಿಯಾಗಿದ್ದರು. ಸೋನಲ್ ಹಾಗೂ ತರುಣ್ ಹನಿಮೂನ್ ಗೆ ಎಲ್ಲಿಗೆ ಹೋಗ್ತಾರೆ ಎಂಬ ಪ್ರಶ್ನೆ ಫ್ಯಾನ್ಸ್ ಕಾಡಿತ್ತು. ಅದಕ್ಕೆ ಮಾಲ್ಡೀವ್ಸ್ ಎನ್ನುವ ಉತ್ತರ ಸಿಕ್ಕಿದ್ರೂ, ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡು…
ಮೆಗಾಸ್ಟಾರ್ ಚಿರಂಜೀವಿ ಕಳೆದ 30 ವರ್ಷಗಳಿಂದಲೂ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಚಿರಂಜೀವಿ ವಾಲ್ಟೇರ್ ವೀರಯ್ಯ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ವಿಶ್ವಂಭರ ಚಿತ್ರದೊಂದಿಗೆ ಮತ್ತೆ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಅದೇ ವೇಳೆ ನಟ ತಮ್ಮ ಆದಾಯವನ್ನು ಹೂಡಿಕೆ ಮಾಡುತ್ತಿದ್ದಾರೆ. ರಿಯಲ್ ಎಸ್ಟೇಟ್‌ನಲ್ಲಿ ಗಣನೀಯ ಹೂಡಿಕೆಗಳನ್ನು ಮಾಡುತ್ತಿರುವ ಚಿರಂಜೀವಿ ಹೈದರಾಬಾದ್‌ನಲ್ಲಿರುವ ಅತ್ಯಂತ ದುಬಾರಿ ಆಸ್ತಿಗಳನ್ನು ಹೊಂದಿದ್ದಾರೆ. ಇದೀಗ ಊಟಿಯಲ್ಲಿ 5.5 ಎಕರೆಯ ಬರೋಬ್ಬರಿ 16 ಕೋಟಿ ಮೌಲ್ಯದ ಆಸ್ತಿ ಖರೀದಿ ಮಾಡಿದ್ದಾರೆ. ಚಿರಂಜೀವಿ ಅವರು ಈಗಾಗಲೇ ಹೈದರಾಬಾದ್, ಬೆಂಗಳೂರು ಸೇರಿದಂತೆ ಹಲವೆಡೆ ಆಸ್ತಿ ಹೊಂದಿದ್ದಾರೆ. ಇದೀಗ ಊಟಿಯ ಗುಡ್ಡದ ಪ್ರದೇಶದಲ್ಲಿ 5.5 ಎಕರೆ ಜಾಗವನ್ನು ಖರೀದಿಸಿದ್ದು, ನೋಂದಣಿ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ. ಈ ಜಾಗಕ್ಕೆ ಅವರು 16 ಕೋಟಿ ರೂ. ನೀಡಿದ್ದಾರೆ ಎನ್ನಲಾಗುತ್ತಿದೆ. ಚಿರಂಜೀವಿ ಖರೀದಿಸಿದ ಊಟಿಯ ಪ್ರಾಪರ್ಟಿಗೆ ಇತ್ತೀಚೆಗೆ ರಾಮ್ ಚರಣ್ ಮತ್ತು ಉಪಾಸನಾ ಕೂಡ ಭೇಟಿ ನೀಡಿದರು. ಅವರು…
ನಟಿ ಪ್ರಿಯಾಮಣಿ ಮತ್ತು ಮುಸ್ತಫಾ ರಾಜ್ 2017 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪ್ರಿಯಾಮಣಿ ಮದುವೆಯಾದ ಬಳಿಕವೂ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಹಿಂದಿ, ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲಿ ಭೇಡಿಕೆ ಕಾಯ್ದುಕೊಂಡಿರುವ ಪ್ರಿಯಾಮಣಿ ಮದುವೆ ಸಂದರ್ಭದಲ್ಲಿ ಸಾಕಷ್ಟು ಟ್ರೋಲ್ ಗೆ ಗುರಿಯಾಗಿದ್ದರು. ಪ್ರಿಯಾಮಣಿ ಮದುವೆಯಾಗಿರುವುದು ಮುಸ್ಲಿಂ ಹುಡುಗ ಮುಸ್ತಫಾ ರಾಜ್ ಅವರನ್ನು. ಬೆಂಗಳೂರಿನಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ಭೇಟಿಯಾದ ಇವರಿಬ್ಬರು ಸ್ನೇಹಿತರಾಗಿ ಪ್ರೇಮಿಗಳಾಗಿ ಕೊನೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಿಂದೂ ಯುವತಿ ಮುಸ್ಲಿಂ ಯುವಕನ್ನು ಮದುವೆಯಾಗುತ್ತಿದ್ದಾರೆ ಎಂದು ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಇದೀಗ ಪ್ರಿಯಾಮಣಿ ಮದುವೆಯ ನಂತರ ತಾನು ಎದುರಿಸಿದ ಸೈಬರ್ ದಾಳಿಯ ಬಗ್ಗೆ ಮಾತನಾಡಿದ್ದಾರೆ. ತನಗೂ ಮತ್ತು ಮುಸ್ತಫಾಗೂ ಹುಟ್ಟುವ ಮಕ್ಕಳು “ಭಯೋತ್ಪಾದಕರು” ಆಗುತ್ತಾರೆ ಎಂದು ಕೆಲವರು ಹೇಳಿದ್ದರು. ಟ್ರೋಲ್ ಮಾಡಿದ್ದರು ಎಂದು ಪ್ರಿಯಾಮಣಿ ಹೇಳಿದ್ದಾರೆ. ಮದುವೆ ಘೋಷಣೆಯಾದಾಗಿನಿಂದಲೂ ಪ್ರಾರಂಭವಾದ ಈ ದ್ವೇಷ ಅಭಿಯಾನ ಮದುವೆಯ ನಂತರವೂ ಮುಂದುವರೆಯಿತು ಎಂದು ಪ್ರಿಯಾಮಣಿ ಬೇಸರ ಹೊರ ಹಾಕಿದ್ದಾರೆ. ಇತ್ತೀಚೆಗೆ ನೀಡಿದ…
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಜಾಮೀನಿಗಾಗಿ ಎದುರು ನೋಡ್ತಿದ್ದಾರೆ. ದರ್ಶನ್ ಜಾಮೀನು ಅರ್ಜಿ ವಿಚಾರಣೆ ಪದೇ ಪದೇ ಮುಂದೂಡಲಾಗುತ್ತಿದೆ. ಈ ಮಧ್ಯೆ ದರ್ಶನ್ ಗೆ ಬೆನ್ನು ನೋವಿನ ಸಮಸ್ಯೆ ಹೆಚ್ಚಾಗಿದ್ದು ಈ ಹಿನ್ನೆಲೆಯಲ್ಲಿ ಪತ್ನಿ ವಿಜಯಲಕ್ಷ್ಮಿ ಪತಿಯನ್ನು ನೋಡಲು ಜೈಲಿಗೆ ಆಗಮಿಸಿದ್ದಾರೆ. ದರ್ಶನ್ ಭೇಟಿಗೆ ಬಂದ ವಿಜಯಲಕ್ಷ್ಮಿ ಜೊತೆ ಸುಶಂತ್ ನಾಯ್ಡು,ಅನುಷಾ ಶೆಟ್ಟಿ, ರೋಹಿತ್ ಗ್ರೇಸ್ ಮರ್ಸಿ ಕೂಡಾ ಆಗಮಿಸಿದ್ದಾರೆ. ಸುಶಾಂತ್ ನಾಯ್ಡು ಅವರು ಎರಡು ಬ್ಯಾಗ್ ತೆಗೆದುಕೊಂಡು ಬಂದಿದ್ದರು. ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್ ಅವರಿಗೆ ಬೇಕಾದ ಬಟ್ಟೆ, ಡ್ರೈ ಫ್ರೂಟ್ಸ್, ಬೇಕರಿ ತಿನಿಸು ತಂದಿದ್ದರು. ಸಂದರ್ಶಕರ ಕೊಠಡಿಗೆ ವಿಜಯಲಕ್ಷ್ಮಿ ಹಾಗೂ ಇತರರು ತೆರಳಿದ್ದಾರೆ. ದರ್ಶನ್ ಗೆ ಬೆನ್ನುನೋವು ಹಿನ್ನಲೆ ಆರೋಗ್ಯ ವಿಚಾರಣೆ ಮಾಡಲು ಪತ್ನಿ ವಿಜಯಲಕ್ಷ್ಮಿ ಅವರು ಜೈಲಿಗೆ ಭೇಟಿ ನೋಡಿ ವಾಪಾಸಾಗಿದ್ದಾರೆ. ದರ್ಶನ್ ಜೈಲು ಸೇರಿದಾಗಿನಿಂದಲೂ ಅವರ ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಲೆ ಇದ್ದಾರೆ. ಇದಕ್ಕಾಗಿಯೇ ನಟನಿಗೆ ಸರ್ಜಿಕಲ್ ಚೇರ್ ವ್ಯವಸ್ಥೆಯನ್ನು ಮಾಡಲಾಗಿತ್ತು. ತೀವ್ರ…
ಇರಾನಿನ ಕುಡ್ಸ್ ಫೋರ್ಸ್‌ನ ಬ್ರಿಗೇಡಿಯರ್-ಜನರಲ್ ಮತ್ತು ಖಾಸೆಮ್ ಸೊಲೈಮಾನಿ ಅವರ ಉತ್ತರಾಧಿಕಾರಿ ಇಸ್ಮಾಯಿಲ್ ಖಾನಿ ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದಾರೆ. ಇಸ್ರೇಲ್ ನ ವೈಮಾನಿಕ ದಾಳಿಗೆ ಖಾನಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾಹ್ ಅವರ ಸಂಭಾವ್ಯ ಉತ್ತರಾಧಿಕಾರಿಯಾದ ಹಶೆಮ್ ಸಫಿಯುದ್ದೀನ್ ಜೊತೆ ಇಸ್ಮಾಯಿಲ್ ಖಾನಿ ಕಾಣಿಸಿಕೊಂಡಿದ್ದರು. ನಸ್ರಲ್ಲಾ ಅವರ ಉತ್ತರಾಧಿಕಾರಿ ಹಶೆಮ್ ಸಫಿಯುದ್ದೀನ್ ಇತ್ತೀಚೆಗೆ ಬೈರುತ್‌ನಲ್ಲಿ ಇಸ್ರೇಲಿ ನಡೆಸಿದ ದಾಳಿಯಲ್ಲಿ ಹತ್ಯೆಯಾಗಿದ್ದನು. ಇಸ್ರೇಲಿ ಮಾಧ್ಯಮ ವರದಿಗಳ ಪ್ರಕಾರ, ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾಹ್ ಅವರ ಸಂಭಾವ್ಯ ಉತ್ತರಾಧಿಕಾರಿಯಾದ ಹಶೆಮ್ ಸಫಿಯುದ್ದೀನ್ ಅವರನ್ನು ಗುರಿಯಾಗಿಸಿ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಇಸ್ಮಾಯಿಲ್ ಖಾನಿ ಗಾಯಗೊಂಡಿರಬಹುದು ಎನ್ನಲಾಗಿದೆ. ಕಾಣೆಯಾಗುವ ಮುನ್ನ ಖಾನಿ ಕೊನೆಯದಾಗಿ ಹೆಜ್ಬುಲ್ಲಾದ ಟೆಹ್ರಾನ್ ಕಚೇರಿಯಲ್ಲಿ ಕಾಣಿಸಿಕೊಂಡಿದ್ದರು ಎಂದು ವರದಿಯಾಗಿದೆ. ನಸ್ರಲ್ಲಾ ಮರಣದ ನಂತರ ನಡೆದ ಸಂಸ್ಮರಣಾ ಸಮಾರಂಭದಲ್ಲಿ ಸೊಲೈಮಾನಿ ಅವರ ಉತ್ತರಾಧಿಕಾರಿ ಇಸ್ಮಾಯಿಲ್ ಖಾನಿ ಭಾಗವಹಿಸಿಲ್ಲ. ಈ ಕಾರಣದಿಂದಾಗಿ ಅವರ ಸಾವಿನ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಖಾನಿ ಜೀವಂತ ಇರುವಿಕೆಯ…
9 ವರ್ಷಗಳ ಬಳಿಕ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಎರಡು ದಿನಗಳ ಕಾಲ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದ್ದಾರೆ. ಇದೇ ವೇಳೆ ಪಾಕಿಸ್ತಾನದಲ್ಲಿ ತಮ್ಮ ಪಕ್ಷ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಜೈಶಂಕರ್ ರನ್ನು ಆಹ್ವಾನಿಸಲಾಗಿದೆ ಎಂಬ ಸುದ್ದಿ ಕೇಳಿ ಬಂದಿತ್ತು. ಇದೀಗ ಇದಕ್ಕೆ ಸ್ಪಷ್ಟನೆ ನೀಡಿರುವ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಪಕ್ಷ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಜೈಶಂಕರ್ ಅವರನ್ನು ಆಹ್ವಾನಿಸಿಲ್ಲ ಎಂದಿದೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಅವರ ಪಿಟಿಐ ಪಕ್ಷ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ರನ್ನು ಆಹ್ವಾನಿಸುವುದಾಗಿ ಪಕ್ಷದ ಮುಖಂಡ ನೀಡಿರುವ ಹೇಳಿಕೆಯಿಂದ ಪಿಟಿಐ ಪಕ್ಷ ಅಂತರ ಕಾಯ್ದುಕೊಂಡಿದ್ದು, ತಮ್ಮ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಜೈ ಶಂಕರ್ ರನ್ನು ಆಹ್ವಾನಿಸಿಲ್ಲ ಎಂದು ಹೇಳಿದೆ. ಜೈಲಿನಲ್ಲಿರುವ ಇಮ್ರಾನ್‍ಖಾನ್ ಅವರ ಬಿಡುಗಡೆಗೆ ಆಗ್ರಹ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಇಸ್ಲಮಾಬಾದ್ ಹಾಗೂ ಲಾಹೋರ್ ನಲ್ಲಿ ಬ್ರಹತ್ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಪ್ರತಿಭಟನೆಯಲ್ಲಿ ಭಾಗಿಯಾಗುವಂತೆ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್…
ಜನಪದ ಕಲಾವಿದ, ಚಿತ್ರನಟ ಗುರುರಾಜ ಹೊಸಕೋಟೆ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಸೋರಗಾವಿ ಬಳಿ ನಡೆದಿದೆ. ಗುರುರಾಜ್ ಪ್ರಯಾಣಿಸುತ್ತಿದ್ದ ಕಾರು ಎದುರು ಬಂದ ವಾಹನ ತಪ್ಪಿಸಲು ಹೋಗಿ ರಸ್ತೆ ಪಕ್ಕದಲ್ಲಿದ್ದ ಕಲ್ಲಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಇನ್ನು ಕಾರಿನಲ್ಲಿದ್ದ ಗುರುರಾಜ ಹೊಸಕೋಟೆ ಅವರು ಪ್ರಾಣಾಪಾದಿಂದ ಪಾರಾಗಿದ್ದು, ಯಾರಿಗೂ ಯಾವುದೇ ಗಾಯ ಹಾಗೂ ಪ್ರಾಣಹಾನಿ ಉಂಟಾಗಿಲ್ಲ. ಸಿಂಧನೂರಿನಿಂದ ಮಹಾಲಿಂಗಪುರಕ್ಕೆ ಹೊರಟಿದ್ದ ಸಂದರ್ಭ ಅಪಘಾತ ಸಂಭವಿಸಿದೆ. ಗುರುರಾಜ ಹೊಸಕೋಟೆ ಕರ್ನಾಟಕ ಜನಪದ ಗಾಯನ, ರಂಗಭೂಮಿ ಮತ್ತು ಸಿನಿಮಾ ಲೋಕದಲ್ಲಿ ಮಹತ್ವದ ಪ್ರತಿಭೆ. ಜನಪದ ಶೈಲಿಯ ಸಮೂಹ ಗೀತೆಗಳನ್ನು ರಚಿಸಿ ಮಾಡುತ್ತಿದ್ದ ನೃತ್ಯ, ಹಾಡಿನ ಸಂಯೋಜನೆ, ಜನಪದ ಶೈಲಿಯ ಹಾಡುಗಳ ರಚನೆ ಮತ್ತು ಹಾಡುಗಾರಿಕೆಯಿಂದ ಅಪಾರ ಪ್ರಸಿದ್ಧಿ ಗಳಿಸಿದ್ದಾರೆ.