ಪ್ರೀತಿ ಮಾಯೆ ಹುಷಾರು ಅಂತಾರೆ. ಈ ಪ್ರೀತಿಗಾಗಿ ಪ್ರೇಮಿಗಳು ಕೆಲವೊಮ್ಮೆ ಯಾವ ಹಂತಕ್ಕೂ ಬೇಕಾದರು ಹೋಗುತ್ತಾರೆ. ಇಲ್ಲೊಬ್ಬ ಯುವತಿ ಕೂಡ ಪ್ರೀತಿಗಾಗಿ ಹೆತ್ತು ಹೊತ್ತು ಸಾಕಿದ ತಂದೆ ತಾಯಿ ಸೇರಿದಂತೆ ಮನೆಯ 13 ಮಂದಿಗೆ ವಿಷಯ ಹಾಕಿ ಕೊಲೆ ಮಾಡಿದ್ದಾರೆ. ಅಪ್ಪ, ಅಮ್ಮ ಎನ್ನದೆಯೇ ಪ್ರಿಯಕರ ಜೊತೆ ಸೇರಿ 13 ಜನರು ಉಸಿರು ನಿಲ್ಲಿಸಿದ್ದಾರೆ. ಪಾಕಿಸ್ತಾನದ ಸಿಂದ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. 13 ಜನರನ್ನು ಕೊಂದ ಪಾಪಿಯ ಹೆಸರು ಸೈಯಿಷ್ಟಾ. ಈಕೆಯ ಮನೆಯವರಿಗೆ ಊಟದಲ್ಲಿ ವಿಷ ಹಾಕಿ ಕೊಲೆ ಮಾಡಿರುವುದು ಬಯಲಾಗಿದೆ. ಆಕೆ ಹೇಳುವ ಪ್ರಕಾರ ಆಕೆ ಇಷ್ಟಪಟ್ಟವನ್ನು ಮದುವೆಯಾಗಲು ಮನೆಯವರು ಒಪ್ಪಿರಲಿಲ್ಲ, ತನ್ನ ಇಷ್ಟದ ಹುಡುಗನನ್ನು ಮದುವೆಯಾಗಲು ಮನೆಯವರು ಒಪ್ಪದ ಕಾರಣ ಯುವತಿ ಕೋಪಗೊಂಡಿದ್ದಳು. ನಂತರ ತನ್ನ ಪ್ರಿಯಕರನೊಂದಿಗೆ ಸಂಚು ರೂಪಿಸಿ, ಆಕೆಯ ಪೋಷಕರು ಸೇರಿದಂತೆ ಕುಟುಂಬ ಸದಸ್ಯರಿಗೆ ವಿಷ ಉಣಿಸಿ ಹತ್ಯೆ ಮಾಡಿದ್ದಾಳೆ. ಆಹಾರ ಸೇವಿಸಿದ ನಂತರ ಎಲ್ಲಾ 13 ಸದಸ್ಯರು ಅಸ್ವಸ್ಥಗೊಂಡರು ಮತ್ತು ಅವರನ್ನು ಆಸ್ಪತ್ರೆಗೆ…
Author: Author AIN
ಜನ ಸಾಮಾನ್ಯರ ಹಣಕ್ಕೆ ಕಿಡಿಗೇಡಿಗಳು ನಾನಾ ರೀತಿಯಲ್ಲಿ ಕನ್ನ ಹಾಕುತ್ತಾರೆ. ಅದರಲ್ಲೂ ಇತ್ತಿಚೆಗೆ ಸೈಬರ್ ವಂಚಕರ ಹಾವಾಳಿ ಹೆಚ್ಚಾಗಿದೆ. ಒಂದಲ್ಲ ಒಂದು ರೀತಿಯಲ್ಲಿ ಜನರ ಹಣಕ್ಕೆ ನಾಮ ಹಾಕಲು ಖದೀಮರು ಕಾಯುತ್ತಿರುತ್ತಾರೆ. ಇದೀಗ ಯುವತಿಯೊಬ್ಬಳು ಸೈಬರ್ ವಂಚಕರಿಂದ ಬರೋಬ್ಬರಿ 1.6 ಕೋಟಿ ರೂಪಾಯಿ ಕಳೆದುಕೊಂಡುಕೊಂಡಿದ್ದಾರೆ. ಮುಂಬೈನ ವ್ಯಕ್ತಿ ಐಟಿ ಉದ್ಯೋಗಿ ಒಬ್ಬರು ಬರೋಬ್ಬರಿ 1.6 ಕೋಟಿ ರೂಪಾಯಿ ಹಣವನ್ನು ಕಳ್ಕೊಂಡಿದ್ದಾರೆ. ಯುವತಿ ಇಂಟರ್ನೆಟ್ ಬ್ರೌಸ್ ಮಾಡ್ತಿದ್ದರು. ಅಲ್ಲಿ ಷೇರು ಮಾರುಕಟ್ಟೆ ಹೂಡಿಕೆಗಳನ್ನು ಉತ್ತೇಜಿಸುವ ಜಾಹೀರಾತು ನೋಡಿದ್ದಾಳೆ. ಜಾಹೀರಾತು ಹೂಡಿಕೆಯ ಮೇಲೆ ಗಣನೀಯ ಲಾಭದ ಭರವಸೆ ನೀಡ್ತಿತ್ತು. ಇದರ ಮೇಲೆ ಆಸಕ್ತಿ ಹೆಚ್ಚಿ ಅಲ್ಲೇ ಇದ್ದ ಜಾಹೀರಾತಿನ ಅಡಿಯಲ್ಲಿರುವ ಲಿಂಕ್ ಕ್ಲಿಕ್ ಮಾಡಿದರು. ಲಿಂಕ್ ಕ್ಲಿಕ್ ಮಾಡಿದ ತಕ್ಷಣ, 125 ಸದಸ್ಯರನ್ನು ಹೊಂದಿರುವ ವಾಟ್ಸ್ಆ್ಯಪ್ ಗುಂಪಿಗೆ ಸೇರಿಸಲಾಯಿತು. ಇಲ್ಲಿ ತಜ್ಞರು ನೀಡಿದ ಸಲಹೆಯಿಂದ ಅನೇಕ ಸದಸ್ಯರು ಗಮನಾರ್ಹ ಲಾಭ ಗಳಿಸಿದ್ದಾರೆ ಎಂದು ಕಿಡಿಗೇಡಿಗಳು ವಿವರಿಸಿದರು. ಇದು ಹೌದೆಂದು ನಂಬಿದ ಸಂತ್ರಸ್ತೆ ತಮ್ಮ ಖಾತೆಯ…
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ದೊಡ್ಡ ದೊಡ್ಡ ತಾರಾ ಬಳಗವೇ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದೆ. ಕಳೆದ 30 ದಿನಗಳಿಂದ ಬೆಂಗಳೂರಿನ ಹೊರವಲಯದಲ್ಲಿ ಬೃಹತ್ ಸೆಟ್ ಹಾಕಿ ಚಿತ್ರೀಕರಣ ಮಾಡಿತ್ತು ಚಿತ್ರತಂಡ. ಈ ವೇಳೆ ನಯನತಾರಾ, ಬಾಲಿವುಡ್ ನಟ, ಹಾಲಿವುಡ್ ನಟರುಗಳು ಬೆಂಗಳೂರಿಗೆ ಬಂದು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಇದೀಗ ಟಾಕ್ಸಿಕ್ ಟೀಂ ಮುಂಬೈನತ್ತ ಮುಖ ಮಾಡಿದೆ. ನಟ ಯಶ್ ಹಾಗೂ ‘ಟಾಕ್ಸಿಕ್’ ಚಿತ್ರತಂಡ ಬೆಂಗಳೂರಿನಲ್ಲಿ ಚಿತ್ರೀಕರಣ ಮುಗಿಸಿದ್ದು, ಇದೀಗ ಇಡೀ ಚಿತ್ರತಂಡ ಮುಂಬೈಗೆ ಶಿಫ್ಟ್ ಆಗುತ್ತಿದ್ದು, ಮುಂಬೈನಲ್ಲಿ 45 ದಿನಗಳ ಕಾಲ ಸತತವಾಗಿ ಚಿತ್ರೀಕರಣ ನಡೆಸಲಿದೆ. ಕೆಲವು ವಿಎಫ್ಎಕ್ಸ್ ಭಾಗದ ಚಿತ್ರೀಕರಣ ಸೇರಿದಂತೆ ಆನ್ ಲೊಕೇಶನ್ ಚಿತ್ರೀಕರಣವೂ ಸಹ ಮುಂಬೈ ನಲ್ಲಿ ನಡೆಯಲಿದೆಯಂತೆ. ಮುಂಬೈನಲ್ಲಿ ಕೆಲವು ನಟ-ನಟಿಯರು ‘ಟಾಕ್ಸಿಕ್’ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಅದರಲ್ಲೂ ವಿಶೇಷವಾಗಿ ಸಿನಿಮಾದ ನಾಯಕಿ ಕಿಯಾರಾ ಅಡ್ವಾಣಿ, ‘ಟಾಕ್ಸಿಕ್’ ಚಿತ್ರತಂಡವನ್ನು ಸೇರಿಕೊಳ್ಳಲಿದ್ದು, ಕಿಯಾರಾ ಅವರು 45 ದಿನವೂ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಕಿಯಾರಾ ನಟಿಸಲಿರುವ ಎಲ್ಲ…
ಗಿಚ್ಚಿ ಗಿಲಿ ಗಿಲಿ ಮೂರನೇ ಶೋ ವಿನ್ನರ್ ಹಾಸ್ಯ ನಟ ಹುಲಿ ಕಾರ್ತಿಕ್ ಸಖತ್ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಮಧ್ಯೆ ಹುಲಿ ಕಾರ್ತಿಕ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಬೋವಿ ಸಮುದಾಯವನ್ನ ಹೀಗಳೆಯುವ ರೀತಿಯಲ್ಲಿ ಹುಲಿ ಕಾರ್ತಿಕ್ ಮಾತನಾಡಿದ್ದರು. ಬೋವಿ ಸಮುದಾಯದ ಹೆಸರನ್ನು ನೆಗೆಟಿವ್ ಆಗಿ ಬಳಸಿದ್ದರು. ಈ ಕಾರಣದಿಂದಲೇ ಹುಲಿ ಕಾರ್ತಿಕ್ ವಿರುದ್ಧ ದೂರು ದಾಖಲಾಗಿದೆ ಎಂದು ಹೇಳಲಾಗಿದೆ. ಕಲರ್ಸ್ ಕನ್ನಡ ವಾಹಿನಿಯ ‘ಅನುಬಂಧ ಅವಾರ್ಡ್’ ಕಾರ್ಯಕ್ರಮದಲ್ಲಿ ಬಳಕೆ ಮಾಡಿದ ಪದವು ಬೋವಿ ಜನಾಂಗಕ್ಕೆ ನೋವುಂಟು ಮಾಡಿದೆ. ಹೀಗಾಗಿ ಜಾತಿ ನಿಂದಿಸಿ ಮಾತನಾಡಿದ ನಟನ ಮೇಲೆ ಕ್ರಮ ಕೈಗೊಳ್ಳಲು ದೂರು ನೀಡಲಾಗಿದೆ. ಹುಲಿ ಕಾರ್ತಿಕ್ ಅಲ್ಲದೆ ‘ಅನುಬಂಧ’ ಅವಾರ್ಡ್ಸ್ನ ಸಂಭಾಷಣೆಕಾರ, ಕಾರ್ಯಕ್ರಮದ ನಿರ್ಮಾಪಕ, ನಿರ್ದೇಶಕರ ಮೇಲೂ ಕೇಸ್ ದಾಖಲಾಗಿದೆ. ಜಾತಿ ನಿಂದನೆ ಪ್ರಕರಣದಲ್ಲಿ ಆರೋಪಿಯಾಗಿ A-1 ಹುಲಿ ಕಾರ್ತಿಕ್, A-2 ಅನುಬಂಧ ಸ್ಕ್ರಿಪ್ಟ್ ರೈಟರ್, A-3 ಅನುಬಂಧ ಡೈರೆಕ್ಟರ್, A-4 ನಿರ್ಮಾಪಕನ ವಿರುದ್ದ…
ಭಾರತದ ಮೋಸ್ಟ್ ವಾಂಟೆಡ್ ಇಸ್ಲಾಮಿಕ್ ಬೋಧಕ ಜಾಕಿರ್ ನಾಯ್ಕ್ ಮತ್ತೊಮ್ಮೆ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಪಾಕಿಸ್ತಾನ ಪ್ರವಾಸದಲ್ಲಿರುವ ಜಾಕಿರ್ ನಾಯ್ಕ್ ಮತ್ತು ಯುವತಿಯ ನಡುವೆ ಕಾರ್ಯಕ್ರಮವೊಂದರಲ್ಲಿ ಮಾತಿನ ಚಕಮಕಿ ನಡೆದಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಾಕೀರ್ ನಾಯ್ಕ್ ಅವರಿಗೆ ಯುವತಿಯರು ಇಸ್ಲಾಂ ಸಮಾಜದಲ್ಲಿ ಬೇರೂರಿರುವ ಶಿಶುಕಾಮ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದರಿಂದ ಕೋಪಗೊಂಡ ಜಾಕೀರ್ ನಾಯ್ಕ್ ಆಕೆಯನ್ನು ತಕ್ಷಣ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಏನಿದು ಘಟನೆ? ಸೆ.28ರಿಂದ ಪಾಕಿಸ್ತಾನ ಪ್ರವಾಸದಲ್ಲಿರುವ ಜಾಕೀರ್ ನಾಯ್ಕ್, ಕರಾಚಿಯಲ್ಲಿ ನಡೆದ ಧಾರ್ಮಿಕ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ. ಪಶ್ತೂನ್ ಹುಡುಗಿಯೊಬ್ಬಳು, ನಾನು ಸಂಪೂರ್ಣವಾಗಿ ಇಸ್ಲಾಮಿಕ್ ಹಿನ್ನೆಲೆಯಿಂದ ಬಂದವಳು. ಅಲ್ಲಿ ಮಹಿಳೆಯರು ಯಾವುದೇ ಕಾರಣವಿಲ್ಲದೆ ಮನೆಯಿಂದ ಹೊರಗೆ ಬರುವಂತಿಲ್ಲ. ಪ್ರತಿ ಜುಮ್ಮಾ (ಶುಕ್ರವಾರ) ತಬ್ಲೀಘಿ ಜಮಾತ್‌ನ ಜನರ ಹೇಳಿಕೆ ಇರುತ್ತದೆ. ಸ್ವಲ್ಪ ಸಮಯದ ಹಿಂದೆ ದೊಡ್ಡ ತಬ್ಲೀಘಿ ಇಜ್ತಿಮಾ ಕೂಡ ಅಲ್ಲಿ ನಡೆಯಿತು. ನಮ್ಮ ಪ್ರದೇಶದ ಜನರು…
ಇರಾನ್ ಹಾಗೂ ಇಸ್ರೇಲ್ ನಡುವಿನ ದಾಳಿ ಮುಂದುವರೆದಿದೆ. ದಾಳಿಯಲ್ಲಿ ಈಗಾಗಲೇ ಸಾಕಷ್ಟು ಮಂದಿ ಮೃತಪಟ್ಟಿದ್ದಾರೆ. ಒಬ್ಬರ ಹಿಂದೊಬ್ಬರಂತೆ ಹೆಜ್ಬೊಲ್ಲಾ ನಾಯಕರು ಕೊನೆಯುಸಿರೆಳೆಯುತ್ತಿದ್ದಾರೆ. ಇದೀಗ ಹೆಜ್ಬೊಲ್ಲಾ ನಾಯಕ ನೆಮ್ ಖಾಸಿಮ್ ತನಗೆ ಒಲಿದು ಬಂದ ಸಂಘಟನೆಯ ಸರ್ವೋಚ್ಛ ನಾಯಕನ ಸ್ಥಾನ ತೊರೆದಿದ್ದು ಮಾತ್ರವಲ್ಲದೇ ತನಗೆ ಹೆಜ್ಬೊಲ್ಲಾ ಸಂಘಟನೆಯ ಸಹವಾಸವೇ ಬೇಡ ಎಂದಿದ್ದಾರೆ. ಹೆಜ್ಬೊಲ್ಲಾ ನಾಯಕ ಸಯ್ಯದ್ ಹಸನ್ ನಸ್ರಲ್ಲಾಹ್ ಇಸ್ರೇಲ್ ವಾಯುದಾಳಿಯಲ್ಲಿ ಸಾವನ್ನಪ್ಪಿದ ಬೆನ್ನಲ್ಲೇ ಆತನ ಉತ್ತರಾಧಿಕಾರಿಗಳೂ ಕೂಡ ಒಬ್ಬರ ನಂತರ ಒಬ್ಬರು ನಾಪತ್ತೆಯಾಗುತ್ತಿದ್ದಾರೆ. ಈ ಹಿಂದೆ ಹೆಜ್ಬೊಲ್ಲಾ ಕಮಾಂಡರ್ ನಬಿಲ್ ಕೌಕ್, ಹೆಜ್ಬೊಲ್ಲಾ ಸಂಘಟನೆಯ ಸಂವಹನ ಘಟಕದ ಕಮಾಂಡರ್ ಮೊಹಮ್ಮದ್ ರಶೀದ್ ಸಕಾಫಿ, ನಸ್ರಲ್ಲಾಹ್ ಉತ್ತರಾಧಿಕಾರಿ ಎಂದೇ ಹೇಳಲಾಗುತ್ತಿದ್ದ ಹಶೆಮ್ ಸಫೀದ್ದೀನ್ ಇಸ್ರೇಲ್ ವಾಯುದಾಳಿಯಲ್ಲಿ ಹತರಾಗಿದ್ದರು. ಇದೀಗ ಹೆಜ್ಬೊಲ್ಲಾದ ಮತ್ತೋರ್ವ ಕಮಾಂಡರ್ ಹಾಗೂ ನಸ್ರಲ್ಲಾಹ್ ನ ಸಂಭಾವ್ಯ ಉತ್ತರಾಧಿಕಾರಿ ಕೂಡ ಕಣ್ಮರೆಯಾಗಿದ್ದು, ಆತ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ವರದಿಯಾಗಿದೆ. ಶುಕ್ರವಾರದಿಂದಲೇ ಅಂದರೆ ಇಸ್ರೇಲಿ ವೈಮಾನಿಕ ದಾಳಿಯ ಆತನ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಲೆಬನಾನಿನ ಭದ್ರತಾ…
70ನೇ ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭ ಇಂದು ದೆಹಲಿಯಲ್ಲಿ ನಡೆಯಲಿದೆ. ದಾದಾ ಸಾಹೇಬ್ ಫಾಲ್ಕೆ ಹಾಗೂ ರಾಷ್ಟ್ರ ಪ್ರಶಸ್ತಿಗಳ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. 70ನೇ ಸಾಲಿನ ರಾಷ್ಟ್ರ ಪ್ರಶಸ್ತಿಯನ್ನು ಆಗಸ್ಟ್ 16ರಂದು ಘೋಷಣೆ ಮಾಡಲಾಗಿದ್ದು, ಇಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ದೆಹಲಿಯ ವಿಜ್ಞಾನ್ ಭವನದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಅವಾರ್ಡ್ ವಿನ್ನರ್ಗಳ ಜೊತೆ ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಈ ಅವಾರ್ಡ್ ಕಾರ್ಯಕ್ರಮ ಆರಂಭ ಆಗಲಿದೆ. ಡಿಡಿ ನ್ಯೂಸ್ ಚಾನೆಲ್ನ ಈ ಕಾರ್ಯಕ್ರಮದ ಲೈವ್ ಪ್ರಸಾರವಾಗಲಿದೆ. ಕನ್ನಡದ ಪಾಲಿಗೆ ಈ ಬಾರಿಯ ರಾಷ್ಟ್ರೀಯ ಪ್ರಶಸ್ತಿ ವಿಶೇಷ ಎನಿಸಿಕೊಂಡಿದೆ. ರಿಷಬ್ ಶೆಟ್ಟಿ ಅವರಿಗೆ ‘ಕಾಂತಾರ’ ಸಿನಿಮಾದ ನಟನೆಗೆ ‘ಅತ್ಯುತ್ತಮ ನಟ’ ಅವಾರ್ಡ್ ಸಿಕ್ಕಿದೆ. ಅದೇ ರೀತಿ ‘ಕಾಂತಾರ’ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಸಿಕ್ಕಿದೆ. ರಿಷಬ್ ಶೆಟ್ಟಿ ಸಮಾರಂಭದಲ್ಲಿ ಭಾಗಿ ಆಗಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಉಳಿದಂತೆ ಮಾನಸಿ…
ಕಳೆದ ವರ್ಷ ಅಕ್ಟೋಬರ್ 7ರಂದು ಗಾಝಾದಲ್ಲಿ ಆರಂಭಗೊಂಡ ಹತ್ಯಾಕಾಂಡ ಇಂದಿಗೂ ಮುಂದುವರೆದಿದೆ. ಯುದ್ಧಕ್ಕೆ ಕದನ ವಿರಾಮ ಘೋಷಿಸಲು ವಿಶ್ವಾದ್ಯಂತ ಕರೆ ನೀಡಲಾಗಿದೆ. ಇದೀಗ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಹಮಾಸ್ ನ ಮಾಜಿ ಮುಖಂಡ ಖಲೀದ್ ಮಶಾಲ್, ಎಲ್ಲಾ ರಾಜಕೀಯ ಕ್ಷಿತಿಜಗಳು ಮುಚ್ಚಿಹೋದ ಬಳಿಕ ಅಕ್ಟೋಬರ್ 7ರ ದಾಳಿ ನಡೆದಿದೆ ಮತ್ತು ಇದು ಕಾರ್ಯತಂತ್ರದ ಫಲಿತಾಂಶವನ್ನು ಸಾಧಿಸಿದೆ ಎಂದಿದ್ದಾರೆ. ಹಮಾಸ್ ಗೆ ಬೆಂಬಲ ನೀಡಿದ ಹಿಜ್ಬುಲ್ಲಾ, ಹೌದಿ ಮತ್ತು ಇರಾನ್ಗೆ ಧನ್ಯವಾದ ಅರ್ಪಿಸಿದ ಅವರು ಗಾಝಾಕ್ಕೆ ಆರ್ಥಿಕ ನೆರವು ಒದಗಿಸುವಂತೆ ಅರಬ್ ದೇಶಗಳನ್ನು ವಿನಂತಿಸಿದರು. `ಗಾಝಾದಲ್ಲಿ ಗುರಿ ಸಾಧನೆಗೆ ವಿಫಲವಾದ ಬಳಿಕ ಇಸ್ರೇಲ್ ಲೆಬನಾನ್ ನಲ್ಲಿ ಯುದ್ಧದ ಕ್ಷೇತ್ರವನ್ನು ತೆರೆದಿದೆ ಮತ್ತು ಜೋರ್ಡಾನ್ ಹಾಗೂ ಈಜಿಪ್ಟ್ ವಿರುದ್ಧ ಪಿತೂರಿ ನಡೆಸುತ್ತಿದೆ. ಗಾಝಾದ ಜನರು ಹತಾಶರಾಗಬಾರದು. ಶೀಘ್ರದಲ್ಲೇ ಗೆಲುವು ನಿಮ್ಮದಾಗಲಿದೆ’ ಎಂದು ಭರವಸೆ ನೀಡಿದರು.
ಕಳೆದ ವರ್ಷ ಇಸ್ರೇಲ್ ನಡೆಸಿದ್ದ ಫೆಲೆಸ್ತೀನಿಗಳ ಮಾರಣ ಹೋಮ ಸೋಮವಾರಕ್ಕೆ ಒಂದು ವರ್ಷ ಪೂರ್ಣಗೊಳಿಸಿದೆ. ಯುದ್ಧದಲ್ಲಿ ಈಗಾಗಲೇ ಹಲವಾರು ಅಮಾಯಕ ಜೀವಗಳು ಬಲಿಯಾಗಿದ್ದು ಇದರಿಂದ ಜನ ಮತ್ತಷ್ಟು ಕಂಗಾಲಾಗಿದ್ದಾರೆ. ಇದೇ ವೇಳೆ ವಿಶ್ವಾದ್ಯಂತ ಸಾವಿರಾರು ಜನ ಬೃಹತ್ ರ್ಯಾಲಿಗಳಲ್ಲಿ ಭಾಗಿಯಾಗಿ ಗಾಝಾ ಮತ್ತು ಲೆಬನಾನ್‌ಗಳಲ್ಲಿ ಕದನ ವಿರಾಮಕ್ಕೆ ಆಗ್ರಹಿಸಿದರು. ಇಸ್ರೇಲ್ ಮೇಲೆ ಹಮಾಸ್ ನೇತೃತ್ವದ ದಾಳಿಯ ಮೊದಲ ವರ್ಷಾಚರಣೆಯ ಅಂಗವಾಗಿ ಸೋಮವಾರ ಹಲವು ನಗರಗಳಲ್ಲಿ ಪ್ರತಿಭಟನಾಕಾರರು ಸಮಾವೇಶ ನಡೆಸಿದರು. ಇಸ್ರೇಲ್ ಗಾಝಾ ಮತ್ತು ಲೆಬನಾನ್‌ಗಳಲ್ಲಿ ತನ್ನ ದಾಳಿಗಳನ್ನು ಮುಂದುವರಿಸಿದ್ದು,ಇದು ವ್ಯಾಪಕ ಪ್ರಾದೇಶಿಕ ಯುದ್ಧದ ಭೀತಿಯನ್ನು ಹೆಚ್ಚಿಸಿದೆ. ಸೋಮವಾರ ನ್ಯೂಜಿಲಂಡ್‌ನ ಆಕ್ಲಂಡ್‌ನಲ್ಲಿ ಸರಕಾರಿ ಟಿವಿಎನ್‌ಝಡ್ ಟಿವಿ ಕೇಂದ್ರದ ಎದುರು ಸೇರಿ ಕದನ ವಿರಾಮಕ್ಕೆ ಆಗ್ರಹಿಸಿದ ಫೆಲೆಸ್ತೀನ್ ಪರ ಪ್ರತಿಭಟನಾಕಾರರು ತೀವ್ರ ಬಲಪಂಥೀಯ ಮೂಲಭೂತವಾದಿ ಕ್ರಿಶ್ಚಿಯನ್ ಗುಂಪು ಡೆಸ್ಟಿನ ಚರ್ಚ್‌ನ ಅನುಯಾಯಿಗಳೊಂದಿಗೆ ಘರ್ಷಣೆ ನಡೆಸಿದರು. ಎದುರಾಳಿ ಗುಂಪುಗಳನ್ನು ಪ್ರತ್ಯೇಕಿಸಲು 35 ಪೋಲಿಸ್ ಅಧಿಕಾರಿಗಳು ಸ್ಥಳದಲ್ಲಿದ್ದರು. ಟಿವಿಎನ್‌ಝಡ್ ಸಮೀಪದ ರಸ್ತೆಗೂ ಹಬ್ಬಿದ ಗಲಭೆಯನ್ನು ನಿಯಂತ್ರಿಸಲು ಪೋಲಿಸರು…
ಸ್ಯಾಂಡಲ್ ವುಡ್ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂಥೆರೋ ಮದುವೆಯಾಗಿ ಎರಡು ತಿಂಗಳು ಕಳೆದಿದೆ. ಇದೀಗ ಈ ಜೋಡಿ ಹನಿಮೂನ್ ಗೆ ಮಾಲ್ಡೀವ್ಸ್ ಗೆ ತೆರಳಿದ್ದಾರೆ. ಕಪಲ್ಸ್ ಗಳ ಫೇವರೆಟ್ ಸ್ಪಾಟ್ ಮಾಲ್ಡೀವ್ಸ್ ನಲ್ಲಿ ಸೋನಲ್ ಹಾಗೂ ತರುಣ್ ಕೈ ಕೈ ಹಿಡಿದು ಸುತ್ತಾಡಿದ್ದಾರೆ. ಮಾಲ್ಡೀವ್ಸ್ ನಲ್ಲಿ ಪತಿಯೊಂದಿಗೆ ಎಂಜಾಯ್ ಮಾಡುತ್ತಿರುವ ಫೋಟೋವನ್ನು ಸೋನಲ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ಸೋನಲ್. ನನ್ನ ವ್ಯಕ್ತಿಯೊಂದಿಗೆ ಸ್ವರ್ಗವನ್ನು ಹುಡುಕುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ತರುಣ್ಸುಧೀರ್ ಹಾಗೂ ಸೋನಲ್ ಮೊಂಥೆರೋ ಆಗಸ್ಟ್ 11ರಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಬಳಿಕ ಮಂಗಳೂರಿನ ಚರ್ಚ್ ನಲ್ಲಿ ಕ್ರೈಸ್ತ ಸಂಪ್ರದಾಯದಂತೆ ಉಗುರು ಬದಲಾಯಿಸಿಕೊಂಡಿದ್ದರು. ಹಿರಿಯರ ಸಮ್ಮುಖದಲ್ಲಿ ನಡೆದ ಮದುವೆ ಸಮಾರಂಭಕ್ಕೆ ಅನೇಕ ಗಣ್ಯರು ಸಾಕ್ಷಿಯಾಗಿದ್ದರು. ಸೋನಲ್ ಹಾಗೂ ತರುಣ್ ಹನಿಮೂನ್ ಗೆ ಎಲ್ಲಿಗೆ ಹೋಗ್ತಾರೆ ಎಂಬ ಪ್ರಶ್ನೆ ಫ್ಯಾನ್ಸ್ ಕಾಡಿತ್ತು. ಅದಕ್ಕೆ ಮಾಲ್ಡೀವ್ಸ್ ಎನ್ನುವ ಉತ್ತರ ಸಿಕ್ಕಿದ್ರೂ, ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡು…