ಗಾಝಾ ಯುದ್ಧಆರಂಭಗೊಂಡು 1 ವರ್ಷ ಕಳೆದಿದೆ. ಕಳೆದ ಅಕ್ಟೋಬರ್ 7ರಂದು ಆರಂಭವಾದ ಯುದ್ಧ ಇಂದಿಗೂ ನಿಂತಿಲ್ಲ. ಕದನ ವಿರಾಮ ಘೋಷಿಸುವಂತೆ ಸಾಕಷ್ಟು ದೇಶಗಳು ಒತ್ತಾಯಿಸಿವೆ. ಈ ಮಧ್ಯೆ ಗಾಝಾದ ಒಟ್ಟು ಜನಸಂಖ್ಯೆಯ ಶೇ.6 ಕ್ಕೂ ಹೆಚ್ಚು ಜನರು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಕನಿಷ್ಠ 10,000 ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಅಕ್ಟೋಬರ್ 7 ರಂದು ಉತ್ತರ ಗಾಜಾ, ಪ್ಯಾಲೆಸ್ಟೈನ್ ನ ಕೆಲವು ಭಾಗಗಳಿಗೆ ಇಸ್ರೇಲ್ ಸ್ಥಳಾಂತರಿಸುವ ಆದೇಶಗಳು ಸಾವಿರಾರು ಜನರನ್ನು ತಕ್ಷಣವೇ ದಕ್ಷಿಣಕ್ಕೆ ಪಲಾಯನ ಮಾಡಲು ಒತ್ತಾಯಿಸುತ್ತಿವೆ ಎಂದು ಮೆಡೆಸಿನ್ಸ್ ಸ್ಯಾನ್ಸ್ ಫ್ರಾಂಟಿಯರ್ಸ್ ಹೇಳಿದೆ. ಈ ಇತ್ತೀಚಿನ ಬಲವಂತದ ಸಾಮೂಹಿಕ ಸ್ಥಳಾಂತರದಲ್ಲಿ, ಬೀಟ್ ಹನೌನ್, ಜಬಾಲಿಯಾ ಮತ್ತು ಬೀಟ್ ಲಾಹಿಯಾ ನಿವಾಸಿಗಳನ್ನು ಅಲ್-ಮಾವಾಸಿ ಮತ್ತು ದೇರ್ ಅಲ್-ಬಾಲಾಹ್ ನಡುವಿನ ಜನದಟ್ಟಣೆಯ, ಮಾನವೀಯ ವಲಯ ಎಂದು ಕರೆಯಲ್ಪಡುವ ಪ್ರದೇಶಕ್ಕೆ ದಕ್ಷಿಣಕ್ಕೆ ಸ್ಥಳಾಂತರಿಸಲು ಒತ್ತಾಯಿಸಲಾಗಿದೆ, ಅಲ್ಲಿ ಈಗಾಗಲೇ ಒಂದು ಮಿಲಿಯನ್ ಜನರು ಅಮಾನವೀಯ ಪರಿಸ್ಥಿತಿಗಳಲ್ಲಿ…
Author: Author AIN
ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಬರ್ತಡೇ ಖುಷಿಯಲ್ಲಿರೋ ನಿರ್ದೇಶಕನಿಗೆ ಪತ್ನಿ ಸೋನಲ್ ಶುಭ ಹಾರೈಸಿದ್ದಾರೆ. ಇನ್ಸ್ಟಾದಲ್ಲಿ ಇಬ್ಬರ ಫೋಟೋ ಹಂಚಿಕೊಳ್ಳುವ ಮೂಲಕ ‘ಐ ಲವ್ ಯೂ’ ಎಂದು ಬರೆದುಕೊಂಡಿದ್ದಾರೆ. ತರುಣ್ ಸುಧೀರ್ ಮತ್ತು ಸೋನಲ್ ಸಮುದ್ರ ಕಿನಾರೆ ಬಳಿ ನಿಂತು ಫೋಟೋ ಶೂಟ್ ಮಾಡಿಕೊಂಡಿದ್ದಾರೆ. ಜೊತೆಗೆ ಇಬ್ಬರು ಕಣ್ಣು ಕಣ್ಣು ನೋಡಿಕೊಂಡಿರುವ ಫೋಟೋ ಇದಾಗಿದೆ. ಪತಿಯ ಹುಟ್ಟುಹಬ್ಬದಂದು ಸೋನಲ್ ಈ ಫೋಟೋವನ್ನು ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ವಿಶ್ವದ ಅತ್ಯಂತ ಪ್ರೀತಿಯ, ಕಾಳಜಿಯುಳ್ಳ ಮತ್ತು ಕರುಣಾಳು ಹೃದಯದ ಪತಿಗೆ ಜನ್ಮದಿನದ ಶುಭಾಶಯಗಳು. ಪ್ರತಿದಿನ ನನ್ನನ್ನು ಪ್ರೇರೇಪಿಸುವ ನಿಮಗೆ ಹೆಚ್ಚು ಯಶಸ್ಸು ಸಿಗಲಿ ಮತ್ತು ಸಂತೋಷದಿಂದಿರಿ ಎಂದು ಬೇಡಿಕೊಳ್ಳುತ್ತೇನೆ. ಐ ಲವ್ ಯೂ’ ಎಂದು ಸೋನಲ್ ಮೋಂತೆರೋ ಬರೆದುಕೊಂಡಿದ್ದಾರೆ.
ಕಾಂತಾರ ಸಿನಿಮಾದ ನಟನೆಗೆ ನಟ ರಿಷಬ್ ಶೆಟ್ಟಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರಧಾನ ಮಾಡಿದ್ದಾರೆ. ಇದೀಗ ಈ ಸಂಭ್ರಮವನ್ನು ಸೋಶಿಯಲ್ ಮೀಡಿಯಾದಲ್ಲಿ ರಿಷಬ್ ಶೆಟ್ಟಿ ಹಂಚಿಕೊಂಡಿದ್ದಾರೆ. ಕನ್ನಡದ ಚಿತ್ರರಂಗದ ಕೀರ್ತಿಯ ಕ್ಷಣ. ‘ಕಾಂತಾರ’ ಸಿನಿಮಾಗಾಗಿ ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಲು ಖುಷಿಯಿದೆ. ‘ಕಾಂತಾರ’ ಚಿತ್ರದ ಈ ಪ್ರಯಾಣದ ಪ್ರತಿಯೊಂದು ಹಂತವು ಸ್ಪೆಷಲ್ ಆಗಿತ್ತು. ಇನ್ನೂ ನಮ್ಮ ಕೆಲಸವನ್ನು ಗುರುತಿಸಿದ ತೀರ್ಪುಗಾರರಿಗೆ ಧನ್ಯವಾದಗಳು ಎಂದು ರಿಷಬ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ಕಾಂತಾರ’ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ರಿಷಬ್ ಶೆಟ್ಟಿ ಸ್ವೀಕರಿಸಿದ್ದಾರೆ. ಜೊತೆಗೆ ಅತ್ಯುತ್ತಮ ಮನರಂಜನಾ ಸಿನಿಮಾ ವಿಭಾಗದಲ್ಲಿಯೂ ಕಾಂತಾರ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಅಕ್ಟೋಬರ್ 7ರಂದು ಬೈರುತ್‌ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಸಂಘಟನೆಯ ಹಿರಿಯ ಕಮಾಂಡರ್ ಹತ್ಯೆಯಾಗಿರುವುದಾಗಿ ಇಸ್ರೇಲ್ ಮಿಲಿಟರಿ ಮಾಹಿತಿ ನೀಡಿದೆ. ದಾಳಿಯಲ್ಲಿ ಹಿಜ್ಬೊಲ್ಲಾ ಬಂಡುಕೋರ ಸಂಘಟನೆಯ ಲಾಜಿಸ್ಟಿಕ್ಸ್, ಬಜೆಟ್ ಮತ್ತು ನಿರ್ವಹಣೆಯ ಜವಾಬ್ದಾರಿ ಹೊಂದಿದ್ದ ಸುಹೇಲ್ ಹುಸೇನಿ ಹತ್ಯೆಯಾಗಿರುವುದಾಗಿ ಇಸ್ರೇಲ್ ಮಿಲಿಟರಿ ತಿಳಿಸಿದೆ. ಆದ್ರೆ ಘಟನೆಯ ಬಗ್ಗೆ ಹಿಜ್ಬೊಲ್ಲಾದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಹುಸೇನಿ ಇರಾನ್‌ನಿಂದ ಸುಧಾರಿತ ಶಸ್ತ್ರಾಸ್ತ್ರಗಳನ್ನು ವರ್ಗಾಯಿಸುವಲ್ಲಿ ಮತ್ತು ಅವುಗಳನ್ನು ವಿವಿಧ ಹಿಜ್ಬುಲ್ಲಾ ಘಟಕಗಳಲ್ಲಿ ವಿತರಿಸುವಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೇ ಅವರ ಗುಂಪಿನ ಮಿಲಿಟರಿ ಕೌನ್ಸಿಲ್‌ನ ಸದಸ್ಯರಾಗಿದ್ದರು ಎಂದು ಮಿಲಿಟರಿ ಹೇಳಿದೆ. ಇತ್ತೀಚಿನ ದಿನಗಳಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾದ ನಾಯಕ ಹಸನ್ ನಸ್ರಲ್ಲಾ ಸೇರಿದಂತೆ ಹಲವಾರು ಉನ್ನತ ಮಟ್ಟದ ಕಮಾಂಡರ್ ಗಳನ್ನು ಹತ್ಯೆ ಮಾಡಲಾಗಿದೆ. ಕಳೆದ ವಾರ ಇಸ್ರೇಲ್ ದಕ್ಷಿಣ ಲೆಬನಾನ್‌ಗೆ ಸೀಮಿತ ಎಂದು ಹೇಳಿ ದಾಳಿಯನ್ನು ಆರಂಭಿಸಿತ್ತು. ಇಸ್ರೇಲ್ ಹಾಗೂ ಇರಾನ್ ಯುದ್ಧ ಆರಂಭವಾಗಿ ವರ್ಷ ಕಳೆದಿದೆ. ಘಟನೆಯಲ್ಲಿ ಹಲವಾರು ಅಮಾಯಕ ಜೀವಗಳು ಪ್ರಾಣಕಳೆದುಕೊಂಡಿದ್ದಾರೆ. ಜೊತೆಗೆ…
ಕೃತಕ ಬುದ್ದಿಮತ್ತೆ ಅಭಿವೃದ್ಧಿಯಲ್ಲಿ ಮಹತ್ತರ ಸಾಧನೆ ಮಾಡಿದ ಅಮೆರಿಕದ ಜಾನ್ ಜೆ. ಹಾಪ್ ಫೀಲ್ಡ್ ಮತ್ತು ಕೆನಡಾದ ಜೆಫ್ರಿ ಇ. ಹಿಂಟನ್ ಅವರಿಗೆ ಈ ಬಾರಿಯ ಭೌತ ವಿಜ್ಞಾನ ಕ್ಷೇತ್ರದ ನೊಬೆಲ್ ಪುರಸ್ಕಾರ ಸಂದಿದೆ. ಭೌತಶಾಸ್ತ್ರದ ಸಾಧನಗಳನ್ನು ಬಳಸಿಕೊಂಡು ಕೃತಕ ನ್ಯೂರಲ್ ನೆಟ್ ವರ್ಕ್ ನಲ್ಲಿ ಮೆಷಿನ್ ಲರ್ನಿಂಗ್ ಸಕ್ರಿಯಗೊಳಿಸುವಲ್ಲಿ ಈ ಜೋಡಿ ಶ್ರಮಿಸಿದ್ದಾರೆ ಎಂದು ಆಯ್ಕೆ ಸಮಿತಿ ತಿಳಿಸಿದೆ. ನೊಬೆಲ್ ಪ್ರಶಸ್ತಿಯು 11 ಮಿಲಿಯನ್ ಸ್ವೀಡಿಶ್ ಕ್ರೌನ್ (ರೂ. 8.19 ಕೋಟಿ) ನಗದು ಬಹುಮಾನ ಒಳಗೊಂಡಿದೆ. ನಮ್ಮ ಮಿದುಳು ಕೆಲಸ ಮಾಡುವ ರೀತಿಯನ್ನು ಅನುಕರಿಸಿಯೇ ಯಂತ್ರಗಳು ಕಲಿಯುವಂತೆ ಮಾಡುವ ವಿಧಾನಕ್ಕೆ ಕೃತಕ ನ್ಯೂರಲ್ ನೆಟ್ ವರ್ಕ್ ಎನ್ನಲಾಗುತ್ತದೆ. ಕೃತಕ ಬುದ್ಧಿಮತ್ತೆ ಹೆಚ್ಚು ದಕ್ಷವಾಗಿ ಕಾರ್ಯನಿರ್ವಹಿಸಲು ಕೃತಕ ನ್ಯೂರಲ್ ನೆಟ್ ವರ್ಕ್ ಸಹಕಾರಿಯಾಗಿದೆ. ಏನಿದು ನ್ಯೂರಲ್ ನೆಟ್‌ವರ್ಕ್?: ನಮ್ಮ ಮೆದುಳು ಕೆಲಸ ಮಾಡುವ ರೀತಿಯನ್ನು ಅನುಕರಿಸಿ, ಯಂತ್ರಗಳು ಕಲಿಯುವಂತೆ ಮಾಡುವ ವಿಧಾನಕ್ಕೆ ಆರ್ಟಿಫಿಶಿಯಲ್ ನ್ಯೂರಲ್ ನೆಟ್‌ವರ್ಕ್ ಎಂದು ಕರೆಯಲಾಗುತ್ತದೆ. ಕೃತಕ ಬುದ್ಧಿಮತ್ತೆ ಹೆಚ್ಚು…
ಬಿಗ್ ಬಾಸ್ 10 ಸೀಸನ್ ಮುಗಿಸಿ ಇದೀಗ 11ನೇ ಸೀಸನ್ ಶುರುವಾಗಿದೆ. ಪ್ರತಿಯೊಂದು ಸೀಸನ್ ನಲ್ಲೂ ಒಂದೊಂದು ಜೋಡಿಗಳು ಬಿಗ್ ಮನೆಯಲ್ಲಿ ಹುಟ್ಟಿಕೊಂಡಿತ್ತು. ಬಿಗ್ ಬಾಸ್ ಮನೆಯಲ್ಲಿ ಹುಟ್ಟಿಕೊಂಡ ಕೆಲವೊಂದು ಪ್ರೀತಿ ಯಶಸ್ಸು ಕಂಡಿದ್ದು ಇನ್ನೂ ಕೆಲ ಪ್ರೀತಿ ದೊಡ್ಮನೆಯಿಂದ ಹೊರ ಬರುತ್ತಿದ್ದಂತೆ ಸೈಲೆಂಟ್ ಆಗಿ ಬಿಟ್ಟಿದೆ. ಅಂತೆಯೇ ಈ ಬಾರಿಯೂ ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಮೂಡುವ ಸೂಚನೆ ಸಿಕ್ಕಿದ್ದು, ಈ ಬಗ್ಗೆ ಹಲವರು ಪ್ರಶ್ನೆ ಮಾಡ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಏನೇ ಮಾಡಿದ್ರು ಹೈಲೈಟ್ ಆಗಬೇಕು. ಹಾಗಿದ್ರೆ ಮಾತ್ರವೇ ತಾವು ಹೆಚ್ಚು ದಿನ ಇಲ್ಲಿ ಗುರುತಿಸಿಕೊಳ್ಳೋಕೆ ಸಾಧ್ಯ ಅನ್ನೋ ಲೆಕ್ಕಾಚಾರ ಸ್ಪರ್ಧಿಗಳಲ್ಲಿ ಇದ್ದಂತಿದೆ. ಅದೇ ಕಾರಣಕ್ಕೆ ಕೆಲವರು ತಮ್ಮ ಮಾತನ್ನೇ ಬಂಡವಾಳ ಮಾಡಿಕೊಂಡರೆ ಮತ್ತೊಂದಷ್ಟು ಮಂದಿ ತಮ್ಮ ಕೆಲಸಗಳಿಂದ ಅವುಗಳನ್ನು ಪ್ರೂವ್ ಮಾಡ್ತಿದ್ದಾರೆ.ಇನ್ನೂ ಕೆಲವರು ಪ್ರೀತಿ ಗೀತ ಅಂತ ಶುರು ಮಾಡಿಕೊಳ್ತಿದ್ದಾರೆ. ಇನ್ನೂ ಈ ಭಾರಿ ಐಶ್ವರ್ಯಾ ಹಾಗೂ ಧರ್ಮ ಲವ್ ಸ್ಟೋರಿ ಶುರುವಾಗೋ ಎಲ್ಲಾ ಲಕ್ಷಣಗಳು ಕಾಣುತ್ತಿವೆ.…
‘ಬಿಗ್ ಬಾಸ್’ ಮನೆಯಲ್ಲಿ ಅದರದ್ದೇ ಆದ ಕೆಲವೊಂದು ನಿಯಮಗಳಿದ್ದು ಅವುಗಳನ್ನು ಬಿಗ್ ಮನೆಯ ಪ್ರತಿಯೊಬ್ಬರು ಕಟ್ಟು ನಿಟ್ಟಾಗಿ ಪಾಲಿಸಬೇಕು. ಒಂದೊಮ್ಮೆ ನಿಯಮ ಮುರಿದರೆ ಅದರ ಫಲಿತಾಂಶವನ್ನು ಪ್ರತಿಯೊಬ್ಬರು ಅನುಭವಿಸಬೇಕಾಗಿ ಬರುತ್ತದೆ.ಕೆಲವೊಮ್ಮೆ ಸ್ಪರ್ಧಿಗಳು ಗೊತ್ತಿಲ್ಲದೆ ತಪ್ಪು ಮಾಡಿದರೆ ಮತ್ತೆ ಕೆಲವೊಮ್ಮೆ ಗೊತ್ತಿದ್ದು ಗೊತ್ತಿದ್ದು ತಪ್ಪುಗಳನ್ನು ಮಾಡುತ್ತಿದ್ದಾರೆ. ಇದೀಗ ಬಿಗ್ ಬಾಸ್ ಇತಿಹಾಸದಲ್ಲಿ ನಡೆಯದೇ ಇರುವ ಘನಘೋರ ತಪ್ಪೊಂದು ನಡೆದು ಹೋಗಿದೆ. ಇದಕ್ಕೆ ಮನೆಯ ಪ್ರತಿಯೊಬ್ಬರ ಸಮಸ್ಯರಿಗೂ ಶಿಕ್ಷೆ ಆಗಿದೆ. ಆರಂಭದಲ್ಲಿ ಬಿಗ್ ಬಾಸ್ ನಾಮಿನೇಷನ್ಗೆ ಚಟುವಟಿಕೆ ಒಂದನ್ನು ನೀಡಿತ್ತು. ಈ ಚಟುವಟಿಕೆಯಲ್ಲಿ ತ್ರಿವಿಕ್ರಂ, ಅನುಷಾ, ಧನರಾಜ್, ಜಗದೀಶ್, ಐಶ್ವರ್ಯಾ, ಮಾನಸಾ ಹಾಗೂ ರಂಜಿತ್ ನಾಮಿನೇಟ್ ಆದರು. ಉಳಿದ ಸ್ಪರ್ಧಿಗಳು ನಿಟ್ಟುಸಿರು ಬಿಟ್ಟಿದ್ದರು. ಆದರೆ, ಮಾನಸಾ ಸೇರಿ ಕೆಲವರು ಮಾಡಿದ ತಪ್ಪಿನಿಂದ ಇಡೀ ಮನೆ ಶಿಕ್ಷೆಗೆ ಒಳಗಾಗಿದೆ. ಮನೆಯ ಅಷ್ಟೂ ಸದಸ್ಯರನ್ನು ನಾಮಿನೇಟ್ ಮಾಡಿ ಬಿಗ್ ಬಾಸ್ ಆದೇಶ ಹೊರಡಿಸಿದ್ದ್ಆರೆ. ನಿಯಮಗಳ ಪ್ರಕಾರ ‘ಬಿಗ್ ಬಾಸ್’ನಲ್ಲಿ ಬ್ಲೈಂಡ್ಸ್ ಇಳಿಸಿದಾಗ ಯಾರೂ ಹೊರಗೆ ಇಣುಕಿ ನೋಡುವಂತಿಲ್ಲ.…
ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ ತಮ್ಮ ನಟನೆಯ ಹಾಗೂ ಡ್ಯಾನ್ಸ್ ಮೂಲಕವೇ ಸಖತ್ ಖ್ಯಾತಿ ಘಳಿಸಿದ್ದಾರೆ. ಮೊದಲ ಸಿನಿಮಾದಲ್ಲೇ ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದುಕೊಂಡ ಮಿಥುನ್ ಚಕ್ರವರ್ತಿ ಇದೀಗ ಭಾರತೀಯ ಚಿತ್ರರಂಗಕ್ಕೆ ನೀಡಿದ ಗಮನಾರ್ಹ ಕೊಡುಗೆಯನ್ನು ಗುರುತಿಸಿ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ಮಾತನಾಡಿದ ನಟ ಇಂಡಸ್ಟ್ರಿಗೆ ಎಂಟ್ರಿಕೊಟ್ಟ ಆರಂಭದಲ್ಲಿ ತಮ್ಮ ಮೈಬಣ್ಣದಿಂದ ಟೀಕೆಗೆ ಗುರಿಯಾಗಿದ್ದು ಅದರಿಂದ ಹೊರ ಬರಲು ಮಾಡಿದ್ದೇನು ಎಂಬುದನ್ನು ಹೇಳಿದ್ದಾರೆ. ”ಮೊದಲ ರಾಷ್ಟ್ರಪ್ರಶಸ್ತಿ ಗೆದ್ದ ಮೇಲೆ ನಾನು ‘Al Pachino’ ಆಗಿಬಿಟ್ಟೆ ಎಂದು ಯೋಚಿಸತೊಡಗಿದೆ. ಹಾಗಾಗಿ, ಯಾವುದೇ ನಿರ್ಮಾಪಕರ ಕಚೇರಿಗೆ ಹೋದರೂ ಅವರಂತೆಯೇ ವರ್ತಿಸತೊಡಗಿದ್ದೆ. ಈ ಹಿನ್ನೆಲೆಯಲ್ಲಿ ಮೂರನೇ ನಿರ್ಮಾಪಕ ನನ್ನನ್ನು ಆಫೀಸಿನಿಂದ ಹೊರಹಾಕಿದರು. ನಾನು ತಪ್ಪು ಮಾಡಿದೆನೆಂಬುದು ನನಗೆ ಅರ್ಥವಾಯಿತು. ಯಾರೂ ನನ್ನೊಂದಿಗೆ ಕೆಲಸ ಮಾಡಲು ಬಯಸಲಿಲ್ಲ. ನನ್ನ ಮೈಬಣ್ಣದ ಬಗ್ಗೆ ಜನ ಗೇಲಿ ಮಾಡುತ್ತಿದ್ದರು. ಹಾಗಾಗಿ, ನನ್ನ ಮೈಬಣ್ಣವನ್ನು ಜನರು ಮರೆಯುವಂತೆ ಮಾಡಲು ನಾನೇನು ಮಾಡಬಹುದೆಂದು ಯೋಚಿಸಲು ಪ್ರಾರಂಭಿಸಿದೆ.…
ನವದೆಹಲ್ಲಿ ನಡೆದ 2022ನೇ ಸಾಲಿನ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಲಿವುಡ್ ಹಿರಿಯ ನಟ ಹಾಗೂ ರಾಜಕಾರಣಿ ಮಿಥುನ್ ಚಕ್ರವರ್ತಿ ಅವರಿಗೆ ಪ್ರತಿಷ್ಠಿತ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಭಾರತೀಯ ಚಿತ್ರರಂಗಕ್ಕೆ ಮಿಥುನ್ ಚಕ್ರವರ್ತಿ ನೀಡಿರುವ ಜೀವಮಾನದ ಕೊಡುಗೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಮಿಥುನ್ ಚಕ್ರವರ್ತಿ ಅವರ ಸ್ಫೂರ್ತಿದಾಯಕ ಸಿನಿ ಪಯಣ ಮುಂದಿನ ಪೀಳಿಗೆಯನ್ನು ಪ್ರೇರೇಪಿಸಲಿದೆ ಎಂದು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಆಯ್ಕೆಯ ಜ್ಯೂರಿಗಳು ಅಭಿಪ್ರಾಯಪಟ್ಟಿದ್ದಾರೆ. 74ರ ಹರೆಯದ ನಟ 1976ರಲ್ಲಿ ಮೃಗಯಾ ಸಿನಿಮಾದ ಮೂಲಕ ಸಿನಿಪಯಣ ಆರಂಭಿಸಿದರು. ಚೊಚ್ಚಲ ಚಿತ್ರದಲ್ಲೇ ಅಮೋಘ ಅಭಿನಯದಿಂದ ಗಮನ ಸೆಳೆದ ನಟ, ಉತ್ತಮ ನಟ ಪ್ರಶಸ್ತಿ ಪಡೆದರು. ಡಿಸ್ಕೋ ಡ್ಯಾನ್ಸರ್, ಕಸಂ ಪೈದಾ ಕರ್ನೆ ವಾಲೆ ಕಿ, ಕಮ್ಯಾಂಡೋ, ಓ ಮೈ ಗಾಡ್ ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಹಿಂದಿ ಮಾತ್ರವಲ್ಲದೇ ಬೆಂಗಾಳಿ ಚಿತ್ರಗಳಲ್ಲೂ ನಟಿಸಿದ್ದಾರೆ. ಇವರು ಪ್ರಮುಖ ಪಾತ್ರಗಳನ್ನು ಅಭಿನಯಿಸಿದ್ದ 19 ಸಿನಿಮಾಗಳು 1989ರಲ್ಲಿ…
ಕಾಂತಾರಾ, ಕೆಜಿಎಫ್ ನಂತಹ ಸಿನಿಮಾಗಳು ಕನ್ನಡ ಚಿತ್ರರಂಗವನ್ನು ದೊಡ್ಟ ಮಟ್ಟದಲ್ಲಿ ಗುರುತಿಸುವಂತೆ ಮಾಡಿವೆ. ಇದೀಗ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಂತಾರ ಸಿನಿಮಾದ ನಟನೆಗೆ ನಟ ರಿಷಬ್ ಶೆಟ್ಟಿ ಅವರು ಅತ್ಯುತ್ತಮ ನಟ ಗೌರವಕ್ಕೆ ಪಾತ್ರರಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಪ್ರದಾನ ಮಾಡಿದರು. ಕಾಂತಾರ ಸಿನಿಮಾದ ನಟನೆಗಾಗಿ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ. ನ್ಯಾಷನಲ್ ಅವಾರ್ಡ್ ಸ್ವೀಕರಿಸಿದಕ್ಕೆ ನಟ ರಿಷಬ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೆಹಲಿಯಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ. ಅತ್ಯುತ್ತಮ ಮನರಂಜನಾ ಚಿತ್ರ ‘ಕಾಂತಾರ’ ಮತ್ತು ಈ ಚಿತ್ರದ ನಟನೆಗೆ ರಿಷಬ್ ಶೆಟ್ಟಿಗೆ ರಾಷ್ಟ್ರ ಪ್ರಶಸ್ತಿ ನೀಡಲಾಗಿದೆ. ಅದಷ್ಟೇ ಅಲ್ಲ, ಅತ್ಯುತ್ತಮ ಪ್ರಾದೇಶಿಕ ಸಿನಿಮಾ, ಅತ್ಯುತ್ತಮ ಸಾಹಸ ನಿರ್ದೇಶನ ವಿಭಾಗದಲ್ಲಿ…