ವಿಚಿತ್ರ ಉಡುಪು ಧರಿಸಿ ಪ್ರೀಮಿಯರ್ ಶೋಗೆ ಬಂದ ‘ಸ್ಪೈಡರ್ ಮ್ಯಾನ್’ ನಟಿ ಜೆಂಡೆಯಾ ಇಂಗ್ಲಿಷ್ ನ ‘ಸ್ಪೈಡರ್ಮ್ಯಾನ್’ ಸಿನಿಮಾದಿಂದ ಖ್ಯಾತಿ ಗಳಿಸಿದ ನಟಿ ಜೆಂಡೆಯಾ ಇದೀಗ ವಿಚಿತ್ರ ಉಡುಗೆ ಧರಿಸಿಕೊಂಡು ಸದ್ದು ಮಾಡುತ್ತಿದ್ದಾರೆ. ‘ಜೆಂಡೆಯಾ’ ಡ್ಯೂನ್ ಹೆಸರಿನ ಹಾಲಿವುಡ್ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ಎರಡನೇ ಭಾಗ ಇದೀಗ ಬಿಡುಗಡೆಗೆ ರೆಡಿಯಾಗಿದೆ. ಡ್ಯೂನ್ 2 ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಇದರ ಪ್ರೀಮಿಯರ್ ಶೋ ಲಂಡನ್ ನಲ್ಲಿ ಆಯೋಜಿಸಲಾಗಿದ್ದು ಈ ವೇಳೆ ಜೆಂಡೆಯಾ ವಿಚಿತ್ರ ಉಡುಪು ಧರಿಸಿ ಆಗಮಿಸಿದ್ದಾರೆ. ಭವಿಷ್ಯ, ಭೂತಕಾಲಗಳ ವಿಚಿತ್ರ ಕತೆಯನ್ನು ‘ಡ್ಯೂನ್’ ಸಿನಿಮಾ ಒಳಗೊಂಡಿದ್ದು, ಸಿನಿಮಾದ ನಾಯಕಿಯ ಪಾತ್ರದಲ್ಲಿ ಜೆಂಡೆಯಾ ಕಾಣಿಸಿಕೊಂಡಿದ್ದಾರೆ. ಜೆಂಡೆಯಾರ ವಿಚಿತ್ರ ಉಡುಪಿನ ಚಿತ್ರ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಜೊತೆಗೆ ಜೆಂಡೆಯಾ ಧರಿಸಿದ್ದ ಉಡುಪನ್ನು ಟ್ರೋಲ್ ಮಾಡಲಾಗುತ್ತಿದೆ. ‘ಡ್ಯೂನ್ 2’ ಸಿನಿಮಾ ಪ್ರೀಮಿಯರ್ ಶೋ ಲಂಡನ್ನಲ್ಲಿ ನಡೆದಿದ್ದು ಕೆಲವೇ ದಿನಗಳಲ್ಲಿ ಭಾರತ ಸೇರಿದಂತೆ ವಿಶ್ವದಾದ್ಯಂತ ತೆರೆಗೆ ಬರಲಿದೆ.
Author: Author AIN
ಭಾರತದ ವಿರುದ್ಧ ತಿರುಗಿಬಿದ್ದ ಮಾಲ್ಡೀವ್ಸ್ಗೆ ಮರ್ಮಾಘಾತವಾಗಿದೆ. ತೀರಾ ಅರ್ಥಿಕ ದುಸ್ಥಿತಿಗೆಮಾಲ್ಡೀವ್ಸ್ ತಲುಪಿದ್ದು, ದಿವಾಳಿ ಎಂದು ಘೋಷಣೆ ಮಾಡಲಾಗಿದೆ. ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ‘ಇಂಡಿಯಾ ಔಟ್’ ಅಭಿಯಾನದಿಂದ ಉಲ್ಬಣಗೊಂಡ ವಿವಾದವು ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಬೇಲ್ಔಟ್ ಸಾಲಕ್ಕಾಗಿ ಮಾಲ್ಡೀವ್ಸ್ ಸರ್ಕಾರ IMF ಮೊರೆ ಹೋಗಿದೆ. ಭಾರತ- ಮಾಲ್ಡೀವ್ಸ್ ನಡುವಿನ ತಿಕ್ಕಾಟಕ್ಕೆ ಅಧ್ಯಕ್ಷ ಮುಯಿಝು ಕಾರಣವಾಗಿದ್ದರು. ಇಂಡಿಯಾ ಔಟ್ ಅಭಿಯಾನವನ್ನು ಅಧ್ಯಕ್ಷ ಮುಯಿಝು ಪ್ರಾರಂಭಿಸಿದ್ದರು. ಭಾರತ ವಿರೋಧಿ ಹೇಳಿಕೆ ನೀಡಿ ಭಾರತೀಯರ ಕೆಂಗಣ್ಣಿಗೆ ಮಾಲ್ಡೀವ್ಸ್ ಗುರಿಯಾಗಿತ್ತು. ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ಪ್ರಾರಂಭಿಸಿದ್ದ ಭಾರತೀಯರು. ಮಾಲ್ಡೀವ್ಸ್ಗೆ ಹೋಗುವ ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲೂ ಭಾರೀ ಕುಸಿತವಾಗಿದೆ. ಆರ್ಥಿಕ, ರಾಜತಾಂತ್ರಿಕ ಕ್ಷೇತ್ರಗಳೆರಡರಲ್ಲೂ ಮಾಲ್ಡೀವ್ಸ್ಗೆ ಭಾರೀ ಸವಾಲು ಎದುರಾಗಿದೆ. ಇದು ದ್ವೀಪ ರಾಷ್ಟ್ರವು ಎದುರಿಸುತ್ತಿರುವ ಆರ್ಥಿಕ ಸವಾಲುಗಳನ್ನು ಇನ್ನಷ್ಟು ಉಲ್ಬಣಗೊಳಿಸಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಲಕ್ಷದ್ವೀಪ ಭೇಟಿಯ ಸಂದರ್ಭದಲ್ಲಿ ಮಾಲ್ಡೀವ್ಸ್ನ ಮೂವರು ಸಚಿವರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ನಂತರದ ಮೂವರು ಮಂತ್ರಿಗಳ ಉಚ್ಚಾಟನೆಯ ಹೊರತಾಗಿಯೂ,…
ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಸಿನಿಮಾದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಈ ಮಧ್ಯೆ ಯಶ್ ಕುಟುಂಬಸ್ಥರೊಂದಿಗೆ ಟೆಂಪಲ್ ರನ್ ಮಾಡುತ್ತಿದ್ದು ನಿನ್ನೆಯಷ್ಟೇ ಭಟ್ಕಳದ ಶಿರಾಲಿಯ ಚಿತ್ರಾಪುರ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಭಟ್ಕಳಕ್ಕೆ ತೆರಳಿದ ಯಶ್ ದೇವರ ದರ್ಶನವಾದ ಬಳಿಕ ಸ್ಥಳೀಯ ಅಂಗಡಿಗೆ ತೆರಳಿ ಪತ್ನಿಗೆ ಐಸ್ ಕ್ಯಾಂಡಿ ಹಾಗೂ ಮಕ್ಕಳಿಗೆ ಚಾಕೋಲೇಟ್ ಕೊಡಿಸಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲಾ ತಾಣದಲ್ಲಿ ವೈರಲ್ ಆಗಿದೆ. ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವ ಯಶ್ ಟಾಕ್ಸಿಕ್ ಸಿನಿಮಾ ಸದ್ಯದಲ್ಲೇ ಶುರುವಾಗಲಿದೆ ಎಂದಿದ್ದಾರೆ. ದೊಡ್ಡ ಮಟ್ಟದ ಪ್ಲಾನ್ ನಡೆಯುತ್ತಿದ್ದು ‘ಟಾಕ್ಸಿಕ್’ ಚಿತ್ರ ಯಾವುದೇ ಕಾಂಪ್ರಮೈಸ್ ಇಲ್ಲದೇ ಮಾಡುತ್ತಿರುವ ಸಿನಿಮಾ ಆಗಿದೆ ಎಂದಿದ್ದಾರೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.
ಸಿನಿಮಾ ಹಾಗೂ ನಾಟಕಗಳಲ್ಲಿ ದೈವಾರಾಧನೆಗೆ ಅಪಮಾನ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವಂತೆ ಮಂಗಳೂರಿನ ದೈವಾರಾಧಕರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. `ಕಾಂತಾರ’ ಚಿತ್ರದಲ್ಲಿ ದೈವದ ಅಣುಕು ವೇಷ ಹಾಕಿರುವ ನಟ ರಿಷಬ್ ಶೆಟ್ಟಿ, `ಶಿವದೂತೆ ಗುಳಿಗೆ’ ನಾಟಕದಲ್ಲಿ ದೈವದ ಅಣುಕು ವೇಷ ಧರಿಸಿದ ಸ್ವರಾಜ್ ಹಾಗೂ `ಕಾವೇರಿ’ ಧಾರಾವಾಹಿಯ ಸಿ.ಕೆ ಪ್ರಶಾಂತ್ ವಿರುದ್ಧ ದಲಿತ ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ತುಳುನಾಡ ದೈವಾರಾಧನಾ ಸಂರಕ್ಷಣಾ ವೇದಿಕೆ ಮನವಿ ಮಾಡಿದೆ. ದೈವಾರಾಧಕರ ಹೋರಾಟಕ್ಕೆ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ಸಾಥ್ ನೀಡಿದ್ದಾರೆ. ಇನ್ನು ಮುಂದೆ ಟಿವಿ, ಸಿನೆಮಾ ನಾಟಕಗಳಲ್ಲಿ ದೈವಾರಾಧನೆಯ ಪ್ರದರ್ಶನವಾಗಬಾರದು. ಕಂಡ ಕಂಡಲ್ಲಿ ದೈವಾರಾಧನೆ ಪ್ರದರ್ಶನವಾದ್ರೆ ಮುತ್ತಿಗೆ ಹಾಕುತ್ತೇವೆ. ಈ ಬಗ್ಗೆ ರಿಷಬ್ ಶೆಟ್ಟಿಗೂ ಎಚ್ಚರಿಕೆ ನೀಡುತ್ತೇವೆ ಎಂದು ಬಜರಂಗದಳದ ಮುಖಂಡ ಶರಣ ಪಂಪ್ವೆಲ್ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಳ್ತಂಗಡಿ ನಳಿಕೆ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಾಭಾಕರ್, ತುಳುನಾಡಿನಲ್ಲಿ ಹುಟ್ಟಿ ತುಳುನಾಡು ದೈವಕ್ಕೆ…
ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆದು 10 ದಿನ ಕಳೆದಿದ್ದರು ಇಂದಿಗೂ ಸರ್ಕಾರ ರಚನೆ ಮಾಡುವ ಪ್ರಯತ್ನಗಳು ವಿಫಲವಾಗಿದೆ. ಇದೀಗ ಚುನಾವಣೆಯಲ್ಲಿ ಅಕ್ರಮವೆಸಗಿರುವ ಆರೋಪದ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಜೈಲು ವಾಸದಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷವು ವಿರೋಧ ಪಕ್ಷದಲ್ಲಿರಲು ನಿರ್ಧರಿಸಿದೆ. ಫೆಬ್ರವರಿ 8 ರ ಚುನಾವಣೆಗಳು ವಿಭಜನೆಯ ತೀರ್ಪು ನೀಡಿದ ನಂತರ ಪಾಕಿಸ್ತಾನದ ಪ್ರಮುಖ ರಾಜಕೀಯ ಪಕ್ಷಗಳು ಫೆಡರಲ್ ಸರ್ಕಾರವನ್ನು ರಚಿಸಲು ಪ್ರಯತ್ನಗಳನ್ನು ಹೆಚ್ಚಿಸಿವೆ. ಖಾನ್ ಅವರ ಪಾಕಿಸ್ತಾನ್ ತೆಹ್ರೀಕ-ಎ-ಇನ್ಸಾಫ್ (ಪಿಟಿಐ) ಪಕ್ಷ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು ಚುನಾವಣಾ ಫಲಿತಾಂಶಗಳಲ್ಲಿ ಪ್ರಾಬಲ್ಯ ಸಾಧಿಸಿದರೆ, ಪಾಕಿಸ್ತಾನ್ ಮುಸ್ಲಿಂ ಲೀಗ್ -ನವಾಜ್ (ಪಿಎಂಎಲ-ಎನ) ಕೆಲವು ಸ್ವತಂತ್ರರು ನವಾಜ್ ಷರೀಫ್ ನೇತೃತ್ವದ ಪಕ್ಷಕ್ಕೆ ಸೇರಿದ್ದರಿಂದ ಸರ್ಕಾರ ರಚಿಸಲು ಸಾಕಷ್ಟು ಸಂಖ್ಯೆಯಿದೆ ಎಂದು ಹೇಳಿಕೊಂಡಿದೆ. ಪಿಟಿಐ ಸಂಸ್ಥಾಪಕ ಖಾನ್ ಅವರ ಸೂಚನೆಗಳನ್ನು ಅನುಸರಿಸಿ, ಕೇಂದ್ರದಲ್ಲಿ ಮತ್ತು ಪಂಜಾಬ್ನ ಪ್ರಮುಖ ಪ್ರಾಂತ್ಯದಲ್ಲಿ ಪ್ರತಿಪಕ್ಷದಲ್ಲಿ ಕುಳಿತುಕೊಳ್ಳಲು ಪಕ್ಷವು ನಿರ್ಧರಿಸಿದೆ ಎಂದು ಪಿಟಿಐ ನಾಯಕ ಬ್ಯಾರಿಸ್ಟರ್…
ವಾಷಿಂಗ್ಟನ್: ದೀರ್ಘಾವಧಿಯಿಂದ ರಶ್ಯದ ಜೈಲಿನಲ್ಲಿ ಬಂಧನದಲ್ಲಿದ್ದ ಅಲೆಕ್ಸಿ ನವಾಲ್ನಿ ಜೈಲಿನಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರುವ ಬಗ್ಗೆ ಅಂತರಾಷ್ಟ್ರೀಯ ಸಮುದಾಯದಿಂದ ವ್ಯಾಪಕ ಖಂಡನೆ ಹಾಗೂ ವಿರೋಧ ವ್ಯಕ್ತವಾಗಿದೆ. ರಶ್ಯ ಅಧ್ಯಕ್ಷ ಪುಟಿನ್ ಅವರ ಕ್ರೂರತೆಗೆ ಇದು ಮತ್ತಷ್ಟು ಪುರಾವೆಯಾಗಿದೆ ಎಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಖಂಡಿಸಿದ್ದಾರೆ. ನವಾಲ್ನಿ ಸಾವಿನ ಸುದ್ಧಿಯಿಂದ ತೀವ್ರ ವಿಚಲಿತಗೊಂಡಿದ್ದು ಅತೀವ ದುಃಖವಾಗಿದೆ. ತನ್ನದೇ ದೇಶದ ಜನರ ಭಿನ್ನಾಭಿಪ್ರಾಯವನ್ನು ಎದುರಿಸಲು ಪುಟಿನ್ ಹೆದರುತ್ತಾರೆ. ಪುಟಿನ್ ನಿರಂಕುಶ ಅಧಿಕಾರದ ವಿರುದ್ಧ ಧ್ವನಿ ಎತ್ತುವವರಿಗೆ ರಕ್ಷಣೆ ಮತ್ತು ಭದ್ರತೆ ಖಾತರಿಪಡಿಸಲು ನಾವೆಲ್ಲಾ ಒಂದಾಗಬೇಕಿದೆ ಎಂದು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ಡೆರ್ ಲೆಯೆನ್ ಅಸಮಾಧಾನ ಹೊರ ಹಾಕಿದ್ದಾರೆ. ವಿರೋಧಿಗಳನ್ನು ಹತ್ತಿಕ್ಕುವ ಪುಟಿನ್ ಆಡಳಿತ ನೀತಿಯನ್ನು ವಿರೋಧಿಸಿದ್ದ ನವಾಲ್ನಿ ಅದಕ್ಕಾಗಿ ತಮ್ಮ ಪ್ರಾಣ ತೆತ್ತಿದ್ದಾರೆ. ಇದು ಪುಟಿನ್ ಅವರ ಮತ್ತೊಂದು ಮುಖದ ಅನಾವರಣವಾಗಿದೆ ಎಂದು ಫ್ರಾನ್ಸ್ ಸರಕಾರ ಖಂಡಿಸಿದೆ. ನವಾಲ್ನಿ ಅವರ ಸಾವಿಗೆ ಪುಟಿನ್ ಅವರನ್ನು ಹೊಣೆಗಾರರನ್ನಾಗಿಸಬೇಕು. ಭ್ರಷ್ಟಾಚಾರದ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ್ದ…
ರಾಕಿಂಗ್ ಸ್ಟಾರ್ ಯಶ್ , ರಾಧಿಕಾ ಪಂಡಿತ್ ದಂಪತಿ ಮಕ್ಕಳು ಹಾಗೂ ಕುಟುಂಬಸ್ಥರೊಂದಿಗೆ ಭಟ್ಕಳ ತಾಲ್ಲೂಕಿನ ಖ್ಯಾತ ಚಿತ್ರಾಪುರ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಯ ಆಶೀರ್ವಾದ ಪಡೆದರು. ಮಠದ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಅವರ ದರ್ಶನವನ್ನು ಪಡೆದ ಯಶ್ ದಂಪತಿ ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಸ್ವಾಮೀಜಿಯವರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮಠದ ಆಡಳಿತಾಧಿಕಾರಿ, ಸಿಬ್ಬಂದಿ ಹಾಜರಿದ್ದರು. ಯಶ್ ಬಂದಿರುವ ಸುದ್ದಿ ತಿಳಿದ ನೂರಾರು ಅಭಿಮಾನಿಗಳು ಚಿತ್ರಾಪುರ ಮಠದ ಸುತ್ತಲೂ ನೆರೆದಿದ್ದರು. ಅಭಿಮಾನಿಗಳನ್ನು ಕಂಡ ಯಶ್ ಸಂತಸದಿಂದ ಅವರತ್ತ ಕೈಬೀಸಿದರು. ಮಠದ ಅತಿಥಿಗೃಹದಲ್ಲಿಯೇ ಯಶ್ ಕುಟುಂಬ ವಾಸ್ತವ್ಯ ಹೂಡಿದ್ದು, ಶುಕ್ರವಾರ ಬೆಳಿಗ್ಗೆ ಇಲ್ಲಿಂದ ಬೆಂಗಳೂರಿಗೆ ಹೊರಟರು.
ಸ್ಪೈಡರ್ ಮ್ಯಾನ್ ಸಿನಿಮಾದ ಮೂಲಕ ಜಗತ್ತಿನಾದ್ಯಂತ ಸುದ್ದಿಯಾದ ಹಾಲಿವುಡ್ ನಟಿ ಜೆಂಡೆಯಾ ಇದೀಗ ತಮ್ಮ ವಿಚಿತ್ರ ಉಡುಗೆಯ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಜೆಂಡೆಯಾ ಈ ಹಿಂದೆ ಡ್ಯೂನ್ ಚಿತ್ರದಲ್ಲಿ ನಟಿಸಿದ್ದರು. ಇದೀಗ ಡ್ಯೂನ್ 2 ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು ನಟಿ ಚಿತ್ರದ ಪ್ರೀಮಿಯರ್ ಶೋನಲ್ಲಿ ಭಾಗವಹಿಸಿದ್ದರು. ಈ ವೇಳೆ ವಿಚಿತ್ರ ಉಡುಗೆ ತೊಟ್ಟು ಬರುವ ಮೂಲಕ ಸುದ್ದಿಯಾಗಿದ್ದಾರೆ. ಭವಿಷ್ಯ, ಭೂತಕಾಲಗಳ ವಿಚಿತ್ರ ಕತೆಯನ್ನು ‘ಡ್ಯೂನ್’ ಸಿನಿಮಾ ಒಳಗೊಂಡಿದ್ದು, ಚಿತ್ರದ ನಾಯಕಿಯಾಗಿ ಜೆಂಡೆಯಾ ಕಾಣಿಸಿಕೊಂಡಿದ್ದಾರೆ ‘ಡ್ಯೂನ್ 2’ ಸಿನಿಮಾ ಪ್ರೀಮಿಯರ್ ಶೋ ಲಂಡನ್ನಲ್ಲಿ ನಡೆದಿದ್ದು ಕೆಲವೇ ದಿನಗಳಲ್ಲಿ ಭಾರತ ಸೇರಿದಂತೆ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಜೆಂಡೆಯಾರ ವಿಚಿತ್ರ ಉಡುಪಿನ ಚಿತ್ರ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಜೆಂಡೆಯಾರ ಉಡುಪನ್ನು ಟ್ರೋಲ್ ಮಾಡಲಾಗುತ್ತಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ. ಬರ್ತಡೇ ಹಿನ್ನೆಲೆಯಲ್ಲಿ ಅಭಿಮಾನಿಗಳು ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ. ದಾಸನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಆನೇಕಲ್ ತಾಲೂಕಿನ ಅತ್ತಿಬೆಲೆ ಗಡಿಭಾಗದಲ್ಲಿ ಡಿಬಾಸ್ ಅಭಿಮಾನಿಗಳ ಸಂಘದಿಂದ 1800 ಮಕ್ಕಳಿಗೆ ಪರೀಕ್ಷಾ ಸಾಮಗ್ರಿಗಳನ್ನು ವಿತರಣೆ ಮಾಡುವುದರ ಮೂಲಕ ಅರ್ಥಪೂರ್ಣವಾಗಿ ದರ್ಶನ್ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. ಡಿಬಾಸ್ ಅಭಿಮಾನಿಗಳ ಸಂಘದ ಅಧ್ಯಕ್ಷ ಮಂಜುನಾಥ್ ಹಾಗೂ ಸಂಗಡಿಗರ ಸಹಕಾರದಿಂದ ಅತ್ತಿಬೆಲೆಯ ಶಿಡ್ಲಬಸಪ್ಪ ಕಲ್ಯಾಣ ಮಂಟಪದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಪೆನ್ನು, ಬುಕ್ಸ್ ದರ್ಶನ್ ಫೋಟೋ ಇರುವ ಪರೀಕ್ಷೆಯ ಪ್ಯಾಡ್ ಸೇರಿದಂತೆ ಹಲವು ಕಲಿಕಾ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು. ಮಕ್ಕಳೊಂದಿಗೆ ಡಿಬಾಸ್ ಹೆಸರಿನ ಕೇಕ್ ಕಟ್ ಮಾಡಿ ದರ್ಶನ್ ಅಭಿನಯದ ಚಿತ್ರದ ಹಾಡುಗಳನ್ನು ಹಾಕಿ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ್ದರು. ಅಲ್ಲದೇ ಕಲ್ಯಾಣ ಮಂಟಪ ಸುತ್ತಲೂ ದರ್ಶನ್ ಫೋಟೋ ಮತ್ತು ಕಟೌಟ್ಗಳನ್ನು ಹಾಕಿ ಸಂಭ್ರಮಾಚರಣೆಯನ್ನು ಮಾಡಲಾಯಿತು. ಸುಮಾರು 2000ಕ್ಕೆ ಹೆಚ್ಚು ಮಕ್ಕಳಿಗೆ ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು.…
ಕಿರುತೆರೆಯ ಖ್ಯಾತ ನಟಿ, ಜಾಹೀರಾತು ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಕವಿತಾ ಚೌಧರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತ ಕವಿತಾ 80-90ರ ದಶಕದಲ್ಲಿ ಡಿಟರ್ಜೆಂಟ್ ಪೌಡರ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು. ಬಳಿಕ ಸರ್ಫ್ ಎಕ್ಸೆಲ್ ಕಂಪೆನಿ ಜಾಹೀರಾತಿನಲ್ಲಿ ನಟಿಸುವ ಮೂಲಕ ಸಾಕಷ್ಟು ಗಮನ ಸೆಳೆದಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕವಿತಾ ಅವರಿಗೆ 67 ವರ್ಷ ವಯಸ್ಸಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ, ಹೃದಯಾಘಾತದಿಂದ ಅಮೃತಸರದಲ್ಲಿ ನಿಧನರಾಗಿದ್ದಾರೆ. ತೊಂಬತ್ತರ ದಶಕದಲ್ಲಿ ಪ್ರಸಾರವಾಗುತ್ತಿದ್ದ ಉಡಾನ್ ಧಾರಾವಾಹಿಯಲ್ಲಿ ಕವಿತಾ ಐಪಿಎಸ್ ಅಧಿಕಾರಿಯಾಗಿ ಅಭಿನಯಿಸುತ್ತಿದ್ದರು. ಈ ಪಾತ್ರ ಅವರಿಗೆ ಸಾಕಷ್ಟು ಹೆಸರು ತಂದು ಕೊಟ್ಟಿತ್ತು. ಐಪಿಎಸ್ ಅಧಿಕಾರಿ ಕಾಂಚನಾ ಚೌಧರಿ ಭಟ್ಟಾಚಾರ್ಯ ಅವರ ಜೀವನವನ್ನು ಆಧರಿಸಿದ ಕಥೆಯಾಗಿತ್ತು.