ಬಾಲಿವುಡ್ ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ಮದುವೆ ವಿಚಾರಕ್ಕೆ ಮತ್ತೆ ಸುದ್ದಿಯಾಗಿದ್ದಾರೆ. ಈಗಾಗಲೇ ಎರಡು ಮದುವೆಯಾಗಿ ಡಿವೋರ್ಸ್ ಪಡೆದುಕೊಂಡಿರುವ ರಾಖಿ ಇದೀಗ ಮೂರನೇ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ ರಾಖಿ ಸಾವಂತ್ ತಮ್ಮ ಮೂರನೇ ಮದುವೆಯ ಬಗ್ಗೆ ಸುದ್ದಿಯಲ್ಲಿದ್ದಾರೆ. ಪಾಕಿಸ್ತಾನಿ ವ್ಯಕ್ತಿಯನ್ನು ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ರಾಖಿ ಸಂದರ್ಶನವೊಂದರಲ್ಲಿ ತಾನು ಮದುವೆಗೆ ಸಿದ್ಧ ಎಂದು ಹೇಳಿದ್ದರು. ರಾಖಿಗೆ ಪಾಕಿಸ್ತಾನದಿಂದ ಮದುವೆ ಪ್ರಸ್ತಾಪಗಳು ಬರುತ್ತಿವೆ. ದೋಡಿ ಖಾನ್ ಮೊದಲು ಅವಳನ್ನು ಮದುವೆಯಾಗುವಂತೆ ಕೇಳಿದನು. ಆದರೆ ಆ ಬಳಿಕ ನಿರಾಕರಿಸಿದ್ದನು. ಇದೀಗ ರಾಖಿ ಸಾವಂತ್ ಗೆ ಪಾಕಿಸ್ತಾನಿ ಧರ್ಮಗುರು ಅಬ್ದುಲ್ ಕ್ವಾವಿ ಪ್ರಪೋಸ್ ಮಾಡಿದ್ದಾರಂತೆ. ಆದರೆ ಅಬ್ಲುಲ್ ಕ್ವಾವಿ ಅವರನ್ನು ಮದುವೆಯಾಗಲು ರಾಖಿ ಸಾವಂತ್ ಕೆಲವು ಷರತ್ತುಗಳನ್ನು ಹಾಕಿದ್ದಾರಂತೆ. ನಾನು 7-8 ಕೋಟಿ ಸಾಲ ಮಾಡಿದ್ದೇನೆ.. ಯಾವುದೇ ಷರತ್ತುಗಳಿಲ್ಲದೆ ಈ ಸಾಲವನ್ನು ತೀರಿಸಿದರೆ ಮದುವೆಗೆ ಸಿದ್ಧ ಅಂತ ರಾಖಿ ಒಪ್ಪಿಕೊಂಡಿದ್ದಾಳೆ.. ಮುಫ್ತಿ ಅಬ್ದುಲ್ ಅವರಿಗೆ 58 ವರ್ಷ ವಯಸ್ಸು. ಅವರು ವಿವಾಹಿತರು…
Author: Author AIN
ಅವರಿಬ್ಬರೂ ಪ್ರೀತಿ ಮಾಡ್ತಿದ್ರು ಹುಡುಗಿಯ ಪ್ರೀತಿ ವಿಚಾರ ಮನೆಯವರಿಗೆ ಗೊತ್ತಾಗಿತ್ತು, ಹಾಗಾಗಿ ಹುಡುಗನ ಕುಟುಂಬವನ್ನು ಕರೆದು ರಾಜಿ ಪಂಚಾಯಿತಿ ಮಾಡಿದ್ರು ,ರಾಜಿ ಪಂಚಾಯಿತಿಯಲ್ಲಿ ಅದೇ ಹುಡುಗನನ್ನ ಮದುವೆ ಅಗುವುದಾಗಿ ಹಠ ಹಿಡಿದಿದ್ಲು,ರಾಜಿ ಪಂಚಾಯಿತಿ ಮುಗಿಸಿ ಮಗಳನ್ನ ಬೈಕ್ ನಲ್ಲಿ ಮನಗೆ ಕರೆದುಕೊಂಡು ಹೋಗುವಾಗ ಕೆರೆಯಲ್ಲಿ ಬಿದ್ದಿದ್ದಾರೆ .ಅದರೆ ಮಗಳನ್ನು ರಕ್ಷಣೆ ಮಾಡಬೇಕಾದ ತಂದೆ ನೇರವಾಗಿ ಪೊಲೀಸ್ ಠಾಣೆಗೆ ಹೋಗಿದ್ದಾರೆ ಆದ್ರೆ ಮಗಳು ಸಾವಿನ ಮನೆಗೆ ಸೇರಿದ್ದಾಳೆ, ಹೀಗಾಗಿ ಸಾವಿನ ಸುತ್ತಾ ಅನುಮಾನದ ಹುತ್ತ ಶುರುವಾಗಿದೆ ,ಅಷ್ಟಕ್ಕೂ ಏನು ಈಸ್ಟೋರಿ ಅಂತೀರಾ ನೀವೇ ನೋಡಿ.. ಹೀಗೆ ಫೋಟೋದಲ್ಲಿ ಕಾಣ್ತಿದ್ದಾಳಲ್ಲ ಈಕೆಯ ಹೆಸರು ಸಹನ ಅಂತ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹುಸ್ಕೂರು ಗ್ರಾಮದ ಹಾರೋಹಳ್ಳಿ ನಿವಾಸಿ.. ರಾಮಮೂರ್ತಿ ಮತ್ತು ಕಲ್ಪನಾ ದಂಪತಿಗಳ ಪುತ್ರಿ. ಇನ್ನು ಮೃತ ಸಹನ ಮಹೇಂದ್ರ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ತಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ತಾಯಿ ಮನೇಲಿದ್ದರೂ ಇತ್ತೀಚೆಗೆ ಒಂದು ವರ್ಷದ ಹಿಂದೆ ಸ್ನೇಹಿತರ ಪರಿಚಯದ ಮೂಲಕ…
ಮಂಡ್ಯ : ಮರಕ್ಕೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ 20 ಕ್ಕೂ ಹೆಚ್ಚು ಜನರಿಗೆ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಗೇಟ್ ಬಳಿ ನಡೆದಿದೆ. ಆಲೇನಹಳ್ಳಿ ಗ್ರಾಮದಿಂದ ಕೆ.ಆರ್.ಪೇಟೆಗೆ ತೆರಳುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. https://ainlivenews.com/padma-shri-awardee-sukri-bommagowda-passes-away/ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 25ಕ್ಕೂ ಹೆಚ್ಚು ಜನರು, ಶಾಲಾ ಮಕ್ಕಳು ಪ್ರಯಾಣಿಸುತ್ತಿದ್ದು, ಹಲವು ಮಕ್ಕಳ ಕೈ ಕಾಲು ಮುರಿದಿದ್ದು, ಐವರ ಸ್ಥಿತಿ ಚಿಂತಾಜನಕವಾಗಿದೆ. ಹಲವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆಸಿದೆ.
ಮಲಯಾಳಂ ಚಿತ್ರರಂಗದಲ್ಲಿ ನಿರ್ಮಾಪಕರಿಯಾಗಿ ಗುರುತಿಸಿಕೊಂಡಿರುವ ಸಾಂಡ್ರಾ ಥಾಮಸ್ ತಮ್ಮ ಹೇಳಿಕೆಗಳ ಮೂಲಕವೇ ಹೆಚ್ಚು ಹೆಚ್ಚು ಸುದ್ದಿಯಾಗುತ್ತಿರುತ್ತಾರೆ. ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಹಿಂಜರಿಯದ ಸಾಂಡ್ರಾ, ಪ್ರಸ್ತುತ ನಿರ್ಮಾಪಕರ ಸಂಘದ ಜೊತೆ ವಿವಾದದಲ್ಲಿದ್ದಾರೆ. ಇದೇ ವೇಳೆ ‘ನಾನು ನಿರ್ಮಾಪಕಿ. ನನ್ನ ಸಿನಿಮಾ ಸೆಟ್‌ನಲ್ಲಿ ಎಲ್ಲವನ್ನೂ ನಾನೇ ನಿರ್ಧರಿಸುತ್ತೇನೆ. ನಾನು ಆ ಸೆಟ್‌ನಲ್ಲಿ ದುಡ್ಡು ಕೊಟ್ಟು ಆಹಾರವನ್ನು ತರಿಸುತ್ತೇವೆ. ಅದನ್ನೇ ಎಲ್ಲರೂ ತಿನ್ನುತ್ತಾರೆ. ಕಳೆದ ಸಿನಿಮಾದ ಕ್ಯಾಮೆರಾಮನ್ ಒಬ್ಬರು ನಿನ್ನೆ ಗೋಮಾಂಸ ತುಂಬಾ ರುಚಿಯಾಗಿತ್ತು ಅಂತ ಸೆಟ್‌ನಲ್ಲಿ ಮಾತನಾಡುತ್ತಿದ್ದರು. ಆ ವಿಚಾರ ನನಗೆ ಅರ್ಥವಾಗಲಿಲ್ಲ. ನಾನು ನಿರ್ದೇಶಕರನ್ನು ಕೇಳಿದಾಗ, ಅವರಿಗೂ ಒಂದು ರೀತಿಯ ಸನ್ನೆ ಮಾಡಿದರು. ಇದರರ್ಥ ಸೆಟ್‌ನಲ್ಲಿ ಎಲ್ಲಾ ಪುರುಷರು ಗೋಮಾಂಸವನ್ನು ತಿಂದಿದ್ದಾರೆ ಎಂದು ಅರ್ಥವಾಯಿತು. ಒಬ್ಬ ನಿರ್ಮಾಪಕನಾಗಿ ನನಗೆ ಕೊಟ್ಟಿಲ್ಲ.. ಕೊನೆಗೆ, ನಾನು ಮೆಸ್ ನಡೆಸುತ್ತಿದ್ದ ವ್ಯಕ್ತಿಗೆ ಕರೆ ಮಾಡಿ ಎಚ್ಚರಿಕೆ ನೀಡಿದೆ ಎಂದು ಹೇಳಿದ್ದಾರೆ. ‘ನಾನು 23ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಬಂದವಳು. ಇದು ನಾನು ಮಾಡಿದ ಮೊದಲ ವ್ಯವಹಾರವಾಗಿತ್ತು. ಅದೃಷ್ಟವಶಾತ್,…
ಖ್ಯಾತ ಕಾಮಿಡಿಯನ್ ಹಾಗೂ ಯೂಟ್ಯೂಬರ್ ಸಮಯ್ ರೈನಾ ಇತ್ತೀಚೆಗೆ ವಿವಾದಕ್ಕೆ ಸಿಲುಕಿದ್ದಾರೆ. ‘ಇಂಡಿಯಾಸ್ ಗಾಟ್ ಲೇಟೆಂಟ್’ ಶೋ ಮೂಲಕ ಎಲ್ಲರನ್ನೂ ನಗಿಸುವ ಕೆಲಸ ಮಾಡುತ್ತಿದ್ದ ರಣವೀರ್ ಅಲಾಹಾಬಾದಿಯಾ ಅವರಿಂದ ಸಂಕಷ್ಟಕ್ಕೆ ಈಡಾಗಿದ್ದಾರೆ. ಅತಿಥಿಯಾಗಿ ಶೋಗೆ ಬಂದಿದ್ದ ರಣವೀರ್ ಅಲಾಹಾಬಾದಿಯಾ ಅಶ್ಲೀಲ ಕಮೆಂಟ್ನಿಂದ ಇಡೀ ಶೋ ಮೇಲೆ ಪರಿಣಾಮ ಬೀರಿದ್ದು ಇದರಿಂದ ಕಂಗಾಲಾಗಿರುವ ಸಮಯ್ ರೈನಾ ‘ಇಂಡಿಯಾಸ್ ಗಾಟ್ ಲೇಟೆಂಟ್’ನ ಎಲ್ಲಾ ವಿಡಿಯೋಗನ್ನು ಡಿಲೀಟ್ ಮಾಡಿದ್ದಾರೆ. ಇತ್ತೀಚೆಗೆ ಸಮಯ್ ರೈನಾ ಅವರ ‘ಇಂಡಿಯಾಸ್ ಗಾಟ್ ಲೇಟೆಂಟ್’ನ ಹೊಸ ಎಪಿಸೋಡ್ ಪ್ರಸಾರ ಕಂಡಿತ್ತು. ಇದರಲ್ಲಿ ಯೂಟ್ಯೂಬರ್ ರಣವೀರ್ ಅವರು ಪೋಷಕರ ಲೈಂಗಿಕತೆ ಬಗ್ಗೆ ಅಶ್ಲೀಲ ಕಮೆಂಟ್ ಮಾಡಿದ್ದರು. ಇದು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಈ ಸಂಬಂಧ ಕೇಸ್ ಕೂಡ ದಾಖಲಾಯಿತು. ಇದಾದ ಬಳಿಕ ಆಗುತ್ತಿರುವ ಬೆಳವಣಿಗೆಯನ್ನು ಸಮಯ್ ರೈನಾ ಬಳಿ ಹ್ಯಾಂಡಲ್ ಮಾಡಲು ಸಾಧ್ಯ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರು ಎಲ್ಲಾ ಎಪಿಸೋಡ್ ಗಳನ್ನು ಡಿಲೀಟ್ ಮಾಡಿದ್ದಾರೆ. ‘ಈಗ ನಡೆಯುತ್ತಿರುವ ಬೆಳವಣಿಗೆಯನ್ನು ನನ್ನಿಂದ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ.…
‘ಬಿಗ್ ಬಾಸ್’ ಶೋನಿಂದ ಹೊರ ಬಂದ ಬಳಿಕ ಹಲವರಿಗೆ ಹಲವು ಆಫರ್ ಗಳು ಸಿಕ್ಕಿವೆ. ಬಿಗ್ ಬಾಸ್ ಬಳಿಕವೇ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡವರು ಹಲವರಿದ್ದಾರೆ. ಇದೀಗ ಆ ಸಾಲಿಗೆ ಬಿಗ್ ಬಾಸ್ ಸೀಸನ್ ೧೧ರ ಸ್ಪರ್ಧಿ ಉಗ್ರಂ ಮಂಜು ಸೇರ್ಪಡೆಯಾಗಿದಸ್ದಾರೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕೊನೆಯವರೆಗೂ ಇದ್ದು ಫೈನಲ್ ನಲ್ಲಿ ಹೊರ ಬಂದಿರುವ ಉಗ್ರಂ ಮಂಜು ಅವರಿಗೆ ಇದೀಗ ದೊಡ್ಡ ಬಜೆಟ್ ನ ಸಿನಿಮಾವೊಂದರಲ್ಲಿ ಆಫರ್ ಸಿಕ್ಕಿದೆ. ಸುಮಾರು 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಉಗ್ರಂ ಮಂಜು ಬಿಗ್ ಬಾಸ್ನಲ್ಲಿ ಟಾಪ್ ಐದರಲ್ಲಿ ಇದ್ದರು. ಬಿಗ್ ಬಾಸ್ನಿಂದ ಅವರ ನಿಜವಾದ ವ್ಯಕ್ತಿತ್ವ ಏನು ಎಂಬುದು ಎಲ್ಲರಿಗೂ ತಿಳಿದಿದೆ. ಈ ಕಾರಣದಿಂದ ಅವರಿಗೆ ಆಫರ್ಗಳು ಹುಡುಕಿ ಬರುತ್ತಿವೆ. ಅವರು ಸುದೀಪ್ ಅಳಿಯನ ‘ಮ್ಯಾಂಗೋ ಪಚ್ಚ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸುದೀಪ್ ಅಳಿಯ ಸಂಚಿತ್ ಸಂಜೀವ್ ಅವರು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರ ಮೊದಲ ಸಿನಿಮಾ ‘ಜಿಮ್ಮಿ’ ಕೆಲಸಗಳು ವಿಳಂಬ ಆಗಿದೆ. ಹೀಗಾಗಿ, ‘ಮ್ಯಾಂಗೋ ಪಚ್ಚ’ ಅವರ…
ದೇಹವನ್ನು ಆರೋಗ್ಯಕರವಾಗಿಡಲು ಹಸಿರು ತರಕಾರಿಗಳನ್ನು ಸೇವಿಸಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಅದರಲ್ಲಿ ಹಾಗಲಕಾಯಿಯು ಒಂದು. ಇದರಲ್ಲಿರುವ ಕಹಿ ಅಂಶದಿಂದಾಗಿ ಹೆಚ್ಚಿನವರು ಈ ತರಕಾರಿಯನ್ನು ಸೇವಿಸಲು ಇಷ್ಟಪಡುವುದಿಲ್ಲ. ಹಾಗಲಕಾಯಿ ರುಚಿಯಲ್ಲಿ ಕಹಿಯಾಗಿದ್ದರೂ ಸಹ ಅದರಲ್ಲಿ ಅನೇಕಾರು ಆರೋಗ್ಯ ಪ್ರಯೋಜನಗಳು ಅಡಗಿವೆ. ಆದರೆ ಹಾಗಲಕಾಯಿಯನ್ನು ಸೇವಿಸಿದ ನಂತರ ನೀವು ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವುದನ್ನು ಮರೆಯಬಾರದು ಎಂದು ನಿಮಗೆ ತಿಳಿದಿದೆಯೇ? ಹೀಗೆ ಮಾಡುವುದರಿಂದ ನೀವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹಾಗಲಕಾಯಿಯನ್ನು ಸೇವಿಸಿದ ನಂತರ ನೀವು ಯಾವ ಯಾವ ವಸ್ತುಗಳನ್ನು ಸೇವಿಸಬಾರದು ಎಂಬುದನ್ನು ಇಲ್ಲಿ ಹೇಳುತ್ತೇವೆ. ಹಾಗಲಕಾಯಿ ತಿಂದ ನಂತರ ಈ ಪದಾರ್ಥಗಳನ್ನು ಸೇವಿಸಬೇಡಿ ಹಾಲು ಹಾಗಲಕಾಯಿ ಸೇವಿಸಿದ ನಂತರ ಹಾಲು ಸೇವಿಸಬೇಡಿ. ಇದು ನಿಮಗೆ ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಲಕಾಯಿಯ ನಂತರ ಹಾಲು ಕುಡಿಯುವುದರಿಂದ ಮಲಬದ್ಧತೆ, ನೋವು ಮತ್ತು ಹೊಟ್ಟೆಯಲ್ಲಿ ಉರಿ ಕೂಡ ಉಂಟಾಗುತ್ತದೆ. ಮತ್ತೊಂದೆಡೆ, ನೀವು ಈಗಾಗಲೇ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯನ್ನು ಹೊಂದಿದ್ದರೆ, ಆ ಸಮಸ್ಯೆ ಹೆಚ್ಚಾಗಬಹುದು. ಮೂಲಂಗಿ ಹಾಗಲಕಾಯಿ ತಿಂದ ನಂತರ ಮೂಲಂಗಿ ಅಥವಾ ಮೂಲಂಗಿಯಿಂದ…
ಅತಿ ಹೆಚ್ಚು ಸ್ಮಾರ್ಟ್ಫೋನ್ಗಳನ್ನುಬಿಡುಗಡೆ ಮಾಡಿದ್ದ ಕಂಪನಿ ಎಂದರೆ ಅದು ವಿವೋ ಎನ್ನಬಹುದು. ತಿಂಗಳಿಗೆ ಎರಡು ಅಥವಾ ಮೂರು ಮೊಬೈಲ್ಗಳನ್ನು ವಿವೋ ಬಿಡುಗಡೆ ಮಾಡುತ್ತಲೇ ಇತ್ತು. ಇದೀಗ ವಿವೋ ತನ್ನ ಹೊಸ 5G ಸ್ಮಾರ್ಟ್‌ಫೋನ್ ಬಿಡುಗಡೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಸ್ಮಾರ್ಟ್‌ಫೋನ್ ಅಮಲೋಡ್ ಡಿಸ್‌ಪ್ಲೇ ಸ್ಕ್ರೀನ್ ಜೊತೆಯಲ್ಲಿ , 6500mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿಯನ್ನು ಒಳಗೊಂಡಿರಲಿದೆ. https://ainlivenews.com/great-job-opportunity-in-the-postal-department-for-10th-puc-passers-apply-today/ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡಲಿದ್ದು, ಇದು ಬ್ಯಾಟರಿ ದೀರ್ಘ ಸಮಯದವರೆಗೆ ಬಾಳಿಕೆ ಬರಲಿದೆ. ಪದೇ ಪದೇ ಬ್ಯಾಟರಿ ಚಾರ್ಜ್ ಖಾಲಿಯಾಗುತ್ತೆ ಅನ್ನೋರಿಗೆ ಈ ಸ್ಮಾರ್ಟ್‌ಫೋನ್ ಒಳ್ಳೆಯ ಆಯ್ಕೆಯಾಗಲಿದೆ. ಕೆಲ ವರದಿಗಳ ಪ್ರಕಾರ ವಿವೋ ಕಂಪನಿಯ ಹೊಸ ಸ್ಮಾರ್ಟ್‌ಫೋನ್ 250MP ಸಾಮರ್ಥ್ಯದ ಕ್ಯಾಮೆರಾ ಹೊಂದಿರಲಿದೆ. ಡಿಸ್ಪ್ಲೇ : ವಿವೋ T4x 5G ಸ್ಮಾರ್ಟ್‌ಫೋನ್ 6.67 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆಯಂತೆ ಹಾಗೂ ಅತ್ಯಂತ ಸ್ಟ್ರಾಂಗ್ ಸ್ಕ್ರೀನ್‌ನೊಂದಿಗೆ ಗ್ರಾಹಕರಿಗೆ ಸಿಗಲಿದೆ. Amoled ಡಿಸ್‌ಪ್ಲೇ ಸ್ಕ್ರೀನ್ 1080×2400 ಪಿಕ್ಸೆಲ್ ಇರಲಿದ್ದು, 120Hz ರಿಫ್ರೆಶ್ ರೇಟ್‌ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಕ್ಯಾಮೆರಾ:ಮಾರುಕಟ್ಟೆಯಲ್ಲಿ…
ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುವಲ್ಲಿ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ. ಅದು ಚಹಾ, ಕಾಫಿ, ಮಿಲ್ಕ್ಶೇಕ್ ಅಥವಾ ಯಾವುದೇ ಪಾನೀಯವಾಗಿರಲಿ, ನಾವು ಪ್ರತಿದಿನ ಕೆಲವು ಚಮಚ ಸಕ್ಕರೆಯನ್ನು ಬೆರೆಸಲು ಇಷ್ಟಪಡುತ್ತೇವೆ. ಈ ಪಾನೀಯಗಳು ನಮ್ಮ ದಿನವನ್ನು ತಂಪಾಗಿಸಲು ಅಥವಾ ಪ್ರಾರಂಭಿಸಲು ನಮಗೆ ಶಕ್ತಿಯನ್ನು ನೀಡಲು ಸಹಾಯ ಮಾಡುತ್ತವೆ ಎಂಬುದು ನಮ್ಮ ನಂಬಿಕೆ. ಇದರ ಜೊತೆಗೆ ಈ ಕೆಳಗೆ ತಿಳಿಸಿರುವ ಕೆಲವೊಂದು ಆಹಾರ ಪದಾರ್ಥಗಳನ್ನು ಸಹ ಸೇವನೆ ಮಾಡುವುದರಿಂದ ಅತ್ಯುತ್ತಮ ಆರೋಗ್ಯ ವ್ಯವಸ್ಥೆಯನ್ನು ಜೊತೆಗೆ ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಬಹುದು. ಸಿಟ್ರಸ್ ಹಣ್ಣುಗಳು ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಅಂಶದ ಪ್ರಮಾಣ ತುಂಬಾ ಹೆಚ್ಚಾಗಿ ಕಂಡುಬರುತ್ತದೆ. ಸಿಟ್ರಸ್ ಹಣ್ಣುಗಳಿಗೆ ಉದಾಹರಣೆಯೆಂದರೆ ಕಿತ್ತಳೆ ಹಣ್ಣು, ಮೋಸಂಬಿ ಹಣ್ಣು, ನಿಂಬೆಹಣ್ಣು, ದ್ರಾಕ್ಷಿ ಹಣ್ಣು ಇತ್ಯಾದಿಗಳು. ಹುಳಿ ಮತ್ತು ಸಿಹಿ ಮಿಶ್ರಣದ ಈ ಹಣ್ಣುಗಳು ನಮ್ಮ ದೇಹದಲ್ಲಿ ಸೋಂಕುಗಳ ವಿರುದ್ಧ ಹೋರಾಡುವ ಗುಣವನ್ನು ಪಡೆದುಕೊಂಡಿರುತ್ತದೆ. ನಮಗೆ ಕೆಮ್ಮು, ಕಫ, ಶೀತ, ನೆಗಡಿ ಆದಂತಹ ಸಂದರ್ಭದಲ್ಲಿ ಅಥವಾ ಮಳೆಗಾಲ ಜೊತೆಗೆ ಚಳಿಗಾಲದ ಸಮಯದಲ್ಲಿ…
ಸೂರ್ಯೋದಯ – 6:47 AM ಸೂರ್ಯಾಸ್ತ – 6:13 PM ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ಉತ್ತರ ಅಯಣ, ಶುಕ್ಲ ಪಕ್ಷ, ಶಿಶಿರ ಋತು, ಮಾಘ ಮಾಸ, ತಿಥಿ – ಪಾಡ್ಯ ನಕ್ಷತ್ರ – ಮಖೆ ಯೋಗ – ಶೋಭನ ಕರಣ – ಬಾಲವ ರಾಹು ಕಾಲ -01:30 ದಿಂದ 03:00 ವರೆಗೆ ಯಮಗಂಡ – 06:00 ದಿಂದ 07:30 ವರೆಗೆ ಗುಳಿಕ ಕಾಲ – 09:00 ದಿಂದ 10:30 ವರೆಗೆ ಬ್ರಹ್ಮ ಮುಹೂರ್ತ – 5:11 ಬೆ.ದಿಂದ 5:59 ಬೆ.ವರೆಗೆ ಅಮೃತ ಕಾಲ – 6:32 ಸಂಜೆ.ದಿಂದ 8:14 ರಾ.ವರೆಗೆ ಅಭಿಜಿತ್ ಮುಹುರ್ತ – 12:07 ಮ.ದಿಂದ 12:53 ಮ.ವರೆಗೆ ಮೇಷ ರಾಶಿ ( ಅಶ್ವಿನಿ ಭರಣಿ ಕೃತಿಕ 1) ನಿರ್ವಹಣಾ ಅಧಿಕಾರಿಗಳಿಗೆ ಧನ ಲಾಭ ಮತ್ತು ಜಾಗ್ರತೆ ಇರಲಿ, ಪುರೋಹಿತರಿಗೆ ಧನ ಲಾಭ, ತಾತ್ಕಾಲಿಕ ಸಿಬ್ಬಂದಿ ಉದ್ಯೋಗಿಗಳಿಗೆ ಖಾಯಂ ಸೇವೆ ಆಗುವ ಸಮಯ ಬಂದಿದೆ,…