ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ ಸಿನಿಮಾ ಸೂಪರ್ ಹಿಟ್ ಆಗಿದೆ. ಇದೀಗ ಪುಷ್ಪ 2 ಸಿನಿಮಾ ಚಿತ್ರೀಕರಣ ಹಂತದಲ್ಲಿದ್ದು ಸಾಕಷ್ಟು ಕ್ರೇಜ್ ಕ್ರಿಯೇಟ್ ಮಾಡಿದೆ. ಸಿನಿಮಾದ ಚಿತ್ರೀಕರಣ ಮುಗಿಯುವ ಮುನ್ನವೇ ವಿಶ್ವದ ಮೂಲೆ ಮೂಲೆಗಳಲ್ಲೂ ಹವಾ ಕ್ರಿಯೇಟ್ ಮಾಡಿದೆ. ಈ ಮಧ್ಯೆ ಪುಷ್ಪ 2ಚಿತ್ರದ ಚಿತ್ರೀಕರಣವನ್ನು ನಟಿ ಶ್ರೀಲೀಲಾ ರಿಜೆಕ್ಟ್ ಮಾಡಿದ್ದಾರೆ. ಟಾಲಿವುಡ್ ಸಿನಿಮಾಗಳಲ್ಲಿ ಸಖತ್ ಆಗಿ ಮಿಂಚುತ್ತಿರುವ ಕರ್ನಾಟಕದ ನಟಿ ಶ್ರೀಲೀಲಾ ಅವರು ‘ಪುಷ್ಪ 2’ ಸಿನಿಮಾದ ಅವಕಾಶ ನಿರಾಕರಿಸಿದ್ದಾರೆ. ತೆಲುಗು ಸಿನಿಮಾಗಳಲ್ಲಿ ಮಿಂಚುತ್ತಿರುವ ನಟಿ ಶ್ರೀಲೀಲಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಮಹೇಶ್ ಬಾಬು, ನಂದಮೂರಿ ಬಾಲಕೃಷ್ಣ, ರವಿತೇಜ ಅಂಥಹಾ ದೊಡ್ಡ ನಟರ ಜೊತೆ ತೆರೆ ಹಂಚಿಕೊಂಡಿರುವ ಶ್ರೀಲೀಲಾಗೆ, ‘ಪುಷ್ಪ 2’ ಸಿನಿಮಾದ ಭಾಗವಾಗುವ ಅವಕಾಶ ಅರಸಿ ಬಂದಿತ್ತು. ಆದರೆ ಶ್ರೀಲೀಲಾ ಅವಕಾವನ್ನು ನಿರಾಕರಿಸಿದ್ದಾರೆ. ‘ಪುಷ್ಪ’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ. ಈ ಹಿಂದೆ ಬಿಡುಗಡೆ ಆಗಿದ್ದ ‘ಪುಷ್ಪ’ ಸಿನಿಮಾನಲ್ಲಿ ಸಮಂತಾ…
Author: Author AIN
ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ 2023ರ ಮಾರ್ಚ್ 4ರವರೆಗೆ 41,054 ಭಾರತೀಯ ಪ್ರವಾಸಿಗರು ಮಾಲ್ದೀವ್ಸ್‍ಗೆ ಭೇಟಿ ನೀಡಿದ್ದರು. ಆದರೆ ಈ ವರ್ಷ ಮಾರ್ಚ್ 2ರವರೆಗೆ 27,224 ಭಾರತೀಯ ಪ್ರವಾಸಿಗರು ಮಾಲ್ದೀವ್ಸ್‍ಗೆ ಭೇಟಿ ನೀಡಿದ್ದು ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ 13,830 ಕುಸಿತ ಕಂಡುಬಂದಿದೆ. ಲಕ್ಷದ್ವೀಪಕ್ಕೆ ಭಾರತೀಯ ಪ್ರವಾಸಿಗರನ್ನು ಆಕರ್ಷಿಸಲು ಭಾರತದ ಸರಕಾರ ಕೈಗೊಂಡ ಅಭಿಯಾನವೇ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 2023ರ ಮಾರ್ಚ್‍ವರೆಗೆ ಭಾರತವು ಮಾಲ್ದೀವ್ಸ್‍ಗೆ ಪ್ರವಾಸೋದ್ಯಮದ ಎರಡನೇ ಅತೀ ದೊಡ್ಡ ಮೂಲವಾಗಿದ್ದು ಆ ದೇಶ ಪ್ರವಾಸೋದ್ಯಮದಿಂದ ಗಳಿಸುವ ಆದಾಯದಲ್ಲಿ 10% ಭಾರತೀಯ ಪ್ರವಾಸಿಗರಿಂದ ಬರುತ್ತಿತ್ತು. 2021, 2022 ಮತ್ತು 2023ರಲ್ಲಿ ಭಾರತ ಅಗ್ರಸ್ಥಾನದಲ್ಲಿತ್ತು. ಆದರೆ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ವಿವಾದ ಉಲ್ಬಣಿಸಿದ ಬಳಿಕ ಭಾರತ 6ನೇ ಸ್ಥಾನಕ್ಕೆ ಕುಸಿಯಿತು. ಭಾರತದ ಪ್ರವಾಸಿಗರ ಸಂಖ್ಯೆಯಲ್ಲಿ ಕುಸಿತ ದಾಖಲಾದರೆ ಚೀನಾದ ಪ್ರವಾಸಿಗರ ಪ್ರಮಾಣದಲ್ಲಿ ದಿಢೀರನೆ ಏರಿಕೆಯಾಗಿದೆ. ಚೀನಾ-ಮಾಲ್ದೀವ್ಸ್ ನಡುವಿನ ದ್ವಿಪಕ್ಷೀಯ ಬಾಂಧವ್ಯ ಬಲಗೊಳ್ಳುತ್ತಿದ್ದಂತೆಯೇ 2024ರ ಮಾರ್ಚ್ 4ರ ವೇಳೆಗೆ ಚೀನಾದ…
ನಟಿ ಮಲಾಶ್ರೀ ಪುತ್ರಿ, ಕಾಟೇರನ ಚೆಲುವೆ ಆರಾಧನಾ ರಾಮ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಸದ್ಯ ನಟಿ ಸುಂದರವಾದ ಟ್ರಾನ್ಸರೆಂಟ್ ಕಪ್ಪು ಸೀರೆ ಧರಿಸಿ ಫೋಟೋ ಶೂಟ್ ಮಾಡಿಸಿದ್ದಾರೆ. ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ನಟಿ ಮುದ್ದಾಗಿ ಫೋಟೋ ಶೂಟ್ ಮಾಡಿಸಿದ್ದು ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ದರ್ಶನ್ ನಟನೆಯ ಕಾಟೇರ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಸಿನಿ ಇಂಡಸ್ಟ್ರಿಗೆ ಎಂಟ್ರಿಕೊಟ್ಟ ಆರಾಧನಾ ರಾಮ್ ಕನ್ನಡದ ಭರವಸೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ದರ್ಶನ್ ತೂಗ್ ದೀಪ್ ಗೆ ನಾಯಕಿಯಾಗಿ ಕಾಟೇರ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಭರ್ಜರಿ ಎಂಟ್ರಿ ಕೊಟ್ಟ ಖ್ಯಾತ ನಟಿ ಮಾಲಾಶ್ರೀ ಮಗಳು ಆರಾಧನಾ ರಾಮ್ ಅಂದ, ಚೆಂದ, ಸ್ಟೈಲ್ ಕಂಡು ಹುಡುಗರು ಫಿದಾ ಆಗಿದ್ದಾರೆ. ಮುಂಬೈನಲ್ಲಿ ಆ್ಯಕ್ಟಿಂಗ್ ತರಬೇತಿ ಪಡೆದ ಆರಾಧನಾ ತಮ್ಮ ಮೊದಲ ಸಿನಿಮಾದಲ್ಲಿ ಕನ್ನಡಿಗರ ಮನಗೆದ್ದರು. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಇವರು ಸಿಕ್ಕಾಪಟ್ಟೆ ಫೋಟೊ ಶೇರ್ ಮಾಡುತ್ತಿರುತ್ತಾರೆ. ಕಾಟೇರ ಸಿನಿಮಾದಲ್ಲಿನ ಆರಾಧನಾ ಅಭಿನಯಕ್ಕಾಗಿ ಉತ್ತಮ…
ನಟ, ನಟಿಯರು ರಾಜಕೀಯಕ್ಕೆ ಎಂಟ್ರಿಕೊಡೋದು ಹೊಸದೇನು ಅಲ್ಲ. ಈಗಾಗಲೇ ಸಾಕಷ್ಟು ಕಲಾವಿಧರು ರಾಜಕೀಯಕ್ಕೆ ಎಂಟ್ರಿಕೊಟ್ಟು ಸದ್ದು ಮಾಡಿದ್ದಾರೆ. ಅಂತೆಯೇ ನಟ ಡಾಲಿ ಧನಂಜಯ್ ಕೂಡ ರಾಜಕೀಯಕ್ಕೆ ಬರ್ತಾರೆ ಎಂದು ಹೇಳಲಾಗಿತ್ತು. ಈ ಬಗ್ಗೆ ಡಾಲಿ ಸ್ಪಷ್ಟನೆ ನೀಡಿದ್ದಾರೆ. ಚಲನಚಿತ್ರವೇ ನನ್ನ ಜೀವನ, ನನಗೆ ಅದರಲ್ಲೇ ಆಸಕ್ತಿ, ರಾಜಕೀಯದಲ್ಲಿ ನನಗೆ ಆಸಕ್ತಿ ಇಲ್ಲ, ಚುನಾವಣೆ ಪ್ರಚಾರದಲ್ಲಿ ಭಾಗವಹಿಸುವ ಸಾಧ್ಯತೆಗಳಿಲ್ಲ ರಾಜಕೀಯ ಎಂಟ್ರಿಯ ಕುರಿತು ಸ್ಪಷ್ಟನೆ ನೀಡಿದ್ದಾರೆ. ಶಿವರಾತ್ರಿ ಪ್ರಯುಕ್ತ ಮಂಡ್ಯ ಜಿಲ್ಲೆಯ ಕೆರೆಗೋಡಿನ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿಯವರನ್ನು ವೈಯಕ್ತಿಕವಾಗಿ ಭೇಟಿ ಮಾಡುವ ಸಂದರ್ಭಗಳು ಬಂದಿಲ್ಲ. ಇತ್ತೀಚೆಗೆ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ್ದೇನೆ. ಅದನ್ನು ಹೊರತುಪಡಿಸಿ ವೈಯಕ್ತಿಕವಾಗಿ ಭೇಟಿ ಮಾಡಿಲ್ಲ ಎಂದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲೂ ಪ್ರಚಾರಕ್ಕಾಗಿ ನನಗೆ ಆಹ್ವಾನವಿತ್ತು. ಆದರೆ ನಾನು ಭಾಗವಹಿಸಿರಲಿಲ್ಲ. ಈ ಬಾರಿ ಲೋಕಸಭೆ ಚುನಾವಣೆಯಲ್ಲೂ ಪ್ರಚಾರದಲ್ಲಿ ಭಾಗವಹಿಸುವ ನಿರೀಕ್ಷೆಗಳು ಕಡಿಮೆ ಇದೆ ಎಂದಿದ್ದಾರೆ.
ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯಲ್ಲಿ, 13,700 ಅಡಿ ಎತ್ತರದಲ್ಲಿ ನಿರ್ಮಿಸಿರುವ ಸೆಲಾ ಸುರಂಗಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು (ಮಾರ್ಚ್ 9) ಚಾಲನೆ ನೀಡಿದ್ದಾರೆ. ಜಗತ್ತಿನಲ್ಲೇ ಅತಿ ಉದ್ದದ ಅವಳಿ ಸುರಂಗ ಎಂಬ ಖ್ಯಾತಿಗೆ ಭಾಜನವಾಗಿರುವ ಈ ಸುರಂಗ ಮಾರ್ಗವು ಸಂಪರ್ಕ, ಸಾಗಣೆ ಸೇರಿ ವ್ಯೂಹಾತ್ಮಕವಾಗಿಯೂ ಪ್ರಾಮುಖ್ಯತೆ ಪಡೆದಿದೆ. ಕಮೆಂಗ್ ಜಿಲ್ಲೆಯ 13,700 ಅಡಿ ಎತ್ತರದಲ್ಲಿ ನಿರ್ಮಿಸಿರುವ ಸುರಂಗಕ್ಕೆ 825 ಕೋಟಿ ರೂ. ವೆಚ್ಚ ಮಾಡಲಾಗಿದೆ. ಕೇಂದ್ರ ಸರ್ಕಾರದ ಗಡಿ ರಸ್ತೆ ಸಂಘಟನೆಯು ಸುರಂಗ ನಿರ್ಮಿಸಿದೆ. ಸೆಲಾ ಸುರಂಗ ಯೋಜನೆ ಅಡಿಯಲ್ಲಿ ಎರಡು ಸುರಂಗಗಳನ್ನು ನಿರ್ಮಿಸಲಾಗಿದ್ದು, ಒಂದು ಸುರಂಗವು 980 ಮೀಟರ್ ಉದ್ದವಾಗಿದೆ. ಮತ್ತೊಂದು ಸುರಂಗವು 1,550 ಮೀಟರ್ ಉದ್ದ ಇದೆ. ಇದು ತೇಜ್‌ಪುರದಿಂದ ತವಾಂಗ್‌ಗೆ ಸಂಪರ್ಕ ಕಲ್ಪಿಸಲಿದೆ. ಎರಡೂ ಸುರಂಗಗಳ ನಡುವೆ 1,200 ಮೀಟರ್ ಉದ್ದದ ಲಿಂಕ್ ರೋಡ್ ಕೂಡ ಇದೆ. ಅರುಣಾಚಲ ಪ್ರದೇಶದಲ್ಲಿ ಗಡಿ ತಂಟೆ ಮಾಡುವ ಚೀನಾಗೆ ಸೆಲಾ ಸುರಂಗವು ವ್ಯೂಹಾತ್ಮಕವಾಗಿ ಪ್ರಮುಖವಾಗಿದೆ. ಅದರಲ್ಲೂ, ತಮ್ಮ…
ಬಾಲಿವುಡ್ ಸೆಲೆಬ್ರಿಟಿಗಳು ಎಲ್ಲೇ ಹೋದರೂ ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ಅವರ ಫೋಟೋಗಳನ್ನು ತೆಗೆದು ಶೇರ್ ಮಾಡುತ್ತಾರೆ. ಸೆಲೆಬ್ರಿಟಿಗಳು ಯಾವಾಗ ಎಲ್ಲಿ ಹೋಗುತ್ತಾರೆ ಅನ್ನೋದು ಪಾಪರಾಜಿಗಳಿಗೆ ಹೇಗೆ ಗೊತ್ತಾಗುತ್ತೆ ಅನ್ನೋದು ಹಲವರ ಪ್ರಶ್ನೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಟ, ನಟಿಯರು ಸಿನಿಮಾಗಳಲ್ಲಿ ನಟಿಸುತ್ತಿಲ್ಲ ಎಂದರೂ ಅವರ ಮಾರ್ಕೆಟ್ ಹಾಗೆಯೇ ಇರಬೇಕು ಎಂದರೆ ಯಾವಾಗಲು ಪ್ರಚಲಿತದಲ್ಲಿ ಇರಬೇಕು. ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಸಲೂನ್ಗೆ ಹೋಗಿದ್ದು ಹೀಗೆ ಪ್ರತಿ ವಿಚಾರ ಸುದ್ದಿ ಆಗಬೇಕು ಎಂದು ಬಯಸುತ್ತಾರೆ. ಈ ರೀತಿ ಆಗುವಂತೆ ಮಾಡೋದು ಪಾಪರಾಜಿಗಳ ಕೆಲಸ. ನಟ, ನಟಿಯರು ಎಲ್ಲಿ ಹೋಗ್ತಿದ್ದಾರೆ? ಏನುನು ಮಾಡ್ತಿದ್ದಾರೆ ಎನ್ನುವುದನ್ನು ಪಾಪರಾಜಿಗಳಿಗೆ ತಿಳಿಸಿ ಅವರು ಅಲ್ಲಿಗೆ ಬರುವಂತೆ ನೋಡಿಕೊಳ್ಳುವುದು ಸೆಲೆಬ್ರಿಟಿಗಳ ಪಿಆರ್ ತಂಡದವರು. ಈ ವಿಚಾರವನ್ನು ಪ್ರಿಯಾಮಣಿ ತಿಳಿಸಿದ್ದಾರೆ. ‘ಜವಾನ್ ಸಿನಿಮಾ ಬಳಿಕ ಎಲ್ಲರೂ ಏರ್ಪೋರ್ಟ್ನಲ್ಲಿ, ಜಿಮ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾನು ಏಕೆ ಕಾಣಿಸುತ್ತಿಲ್ಲ ಎನ್ನುವ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಆಗ ಒಬ್ಬರು ಹೇಳಿದರು ಅವರನ್ನು ನೀವು ಕರೆಯಬೇಕು. ಅವರಿಗೆ ಹಣ ನೀಡಬೇಕು. ಈ…
ಕಾರ್ಯಕ್ರಮವೊಂದರಲ್ಲಿ ಪತ್ರಕರ್ತೆ ಜೊತೆ ಸೌದಿ ಅರೇಬಿಯಾದ ಮೊದಲ ರೋಬೋ ಅನುಚಿತ ವರ್ತನೆ ತೋರಿದ ಆರೋಪ ಕೇಳಿ ಬಂದಿದೆ. ಸದ್ಯ ರೋಬೋ ಪತ್ರಕರ್ತೆ ಜೊತೆ ಅನುಚಿತವಾಗಿ ವರ್ತಿಸಿರುವ ವಿಡಿಯೋ ವೈರಲ್ ಆಗಿದೆ. ರೋಬೋವನ್ನು ಪರಿಚಯಿಸುವ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. 8 ಸೆಕೆಂಡ್ ಗಳ ಅವಧಿಯ ಈ ವೀಡಿಯೋದಲ್ಲಿ ಪತ್ರಕರ್ತೆ ರವಿಯಾ ಅಲ್ ಕಾಸಿಮಿ ಹಿಂದೆ ನಿಲ್ಲಿಸಲಾಗಿದ್ದ ರೋಬೋ ಕೈಗಳು ಆಕೆಯನ್ನು ಮುಟ್ಟಲು ಯತ್ನಿಸುತ್ತಿರುವುದು ಸೆರೆಯಾಗಿದೆ. ರೋಬೋ ಕೈಗೆ ಸಿಗದಂತೆ ತಪ್ಪಿಸಿಕೊಳ್ಳುವುದಕ್ಕಾಗಿ ಅಲ್-ಖಾಸಿಮಿ ಕ್ಷಣಕಾಲ ತನ್ನ ಕೈಯನ್ನು ಎತ್ತಬೇಕಾಯಿತು. ಈ ಘಟನೆಯು ಆಕಸ್ಮಿಕ ಸ್ಪರ್ಶಕ್ಕೆ ಕಾರಣವಾಗುವ ಪ್ರೋಗ್ರಾಮ್ ಮಾಡಿದ ಕೈ ಚಲನೆಯ ಪರಿಣಾಮವಾಗಿದೆ ಎಂದು ಕೆಲವರು ವಾದಿಸಿದರೆ, ಇತರರು ರೋಬೋಟ್‌ನ ಕ್ರಮಗಳು ಕಿರುಕುಳವನ್ನು ತೋರುತ್ತದೆ ಎಂದು ವಾದಿಸಿದ್ದಾರೆ. ಈ ಘಟನೆ ನಡೆದಾಗ ಪತ್ರಕರ್ತೆ ಮುಖದಲ್ಲಿ ವ್ಯಕ್ತವಾದ ಅಹಿತಕರ ಭಾವನೆ ರೋಬೋ ಕಿರುಕುಳ ನೀಡಲು ಯತ್ನಿಸಿತ್ತು ಎಂಬುದಕ್ಕೆ ಸಾಕ್ಷಿ ಎಂದು ಅನೇಕರು ಹೇಳಿದ್ದಾರೆ. ಕ್ಯೂಎಸ್‌ಎಸ್ ಸಿಸ್ಟಮ್ಸ್ ಸೌದಿ ಅರೇಬಿಯಾದಲ್ಲಿ ಮುಹಮ್ಮದ್ ಎಂಬ…
ಕೆನಡಾದ ರಾಜಧಾನಿ ಒಟ್ಟಾವದಲ್ಲಿನ ಮನೆಯೊಂದರಲ್ಲಿ 19 ವರ್ಷದ ವಿದ್ಯಾರ್ಥಿಯೋರ್ವ 4 ಮಕ್ಕಳ ಸಹಿತ 6 ಮಂದಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬರ್ಹಾವೆನ್‍ನ ನೈಋತ್ಯದಲ್ಲಿರುವ ಪ್ರದೇಶದಲ್ಲಿನ ಮನೆಯಲ್ಲಿ ನಡೆದಿದೆ. 19 ವರ್ಷದ ವಿದ್ಯಾರ್ಥಿ ಫೆಬ್ರಿಯೊ ಡಿಝೊಯ್ಸಾ ಆರೋಪಿ ಎಂದು ಗುರುತಿಸಲಾಗಿದೆ. ಈತ ಶ್ರೀಲಂಕಾದ ಪ್ರಜೆಯಾಗಿದ್ದು ಸಂತ್ರಸ್ತ ಕುಟುಂಬದವರು ಇತ್ತೀಚೆಗೆ ಕೆನಡಾಕ್ಕೆ ಆಗಮಿಸಿದ್ದರು ಎನ್ನಲಾಗುತ್ತಿದೆ. ಆರೋಪಿ ಸಂತ್ರಸ್ತ ಕುಟುಂಬದವರ ಪರಿಚಯಸ್ಥನಾಗಿದ್ದು ಅವರ ಮನೆಯಲ್ಲೇ ವಾಸವಿದ್ದ. ಇತ್ತೀಚೆಗೆ ಯಾವುದೋ ಕಾರಣಕ್ಕೆ ಮನೆಯವರೊಂದಿಗೆ ಆರೋಪಿಯು ಜಗಳವಾಡಿದ್ದು ಬಳಿಕ ಈತ ಹರಿತವಾದ ಆಯುಧದಿಂದ ಮನೆಯಲ್ಲಿದ್ದ 6 ಮಂದಿಯನ್ನು ಇರಿದು ಹತ್ಯೆ ಮಾಡಿದ್ದಾನೆ. 35 ವರ್ಷದ ಮಹಿಳೆ, 7 ವರ್ಷದ ಬಾಲಕ, 4 ವರ್ಷದ ಬಾಲಕಿ, ಎರಡೂವರೆ ವರ್ಷದ ಹೆಣ್ಣು ಮಗು ಮತ್ತು ಕುಟುಂಬದ ಪರಿಚಯಸ್ಥನಾಗಿರುವ 40 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಕುಟುಂಬದ ಯಜಮಾನ ಚೂರಿ ಇರಿತದಿಂದ ಗಾಯಗೊಂಡಿದ್ದರೂ ಹೊರಗೆ ಓಡಿ ತಪ್ಪಿಸಿಕೊಂಡಿದ್ದು ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ವರದಿಯಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು ಕೊಲೆ ಮತ್ತು…
ಪಾಕಿಸ್ತಾನದ ಅಡಿಯಾಲ ಜೈಲಿನ ಮೇಲೆ ದಾಳಿ ನಡೆಸುವ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದಾರೆ ಎಂಬ ವರದಿಯ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷ, ಪಕ್ಷದ ಸ್ಥಾಪಕ(ಇಮ್ರಾನ್)ರಿಗೆ ಏನಾದರೂ ಸಂಭವಿಸಿದರೆ ಅದಕ್ಕೆ ಸರಕಾರ ಮತ್ತು ಪ್ರಬಲ ಮಿಲಿಟರಿ ವ್ಯವಸ್ಥೆಯೇ ಹೊಣೆಯಾಗಲಿದೆ ಎಂದಿದ್ದಾರೆ `ತನ್ನ ಸಿದ್ಧಾಂತಗಳು ಹಾಗೂ ನಿಲುವಿನ ಜತೆಗೆ ಎಂದಿಗೂ ರಾಜಿ ಮಾಡಿಕೊಳ್ಳದ ಇಮ್ರಾನ್ ಖಾನ್ ಅವರನ್ನು ಸೇನಾಪಡೆ ಅಪಾಯಕಾರಿ ಎಂದು ಭಾವಿಸಿದೆ. ಇದು ಕೇವಲ ಮೂವರು ಶಂಕಿತ ಅಫ್ಘಾನ್ ಭಯೋತ್ಪಾದಕರಿಗೆ ಸಂಬಂಧಿಸಿದ ವಿಷಯವಲ್ಲ. ಇನ್ನೂ ಹಲವು ಉಗ್ರರನ್ನು ಜೈಲಿನೊಳಗೆ ರವಾನಿಸಿರುವ ಭೀತಿಯಿದೆ. ಇಮ್ರಾನ್ ಪ್ರಾಣ ಯಾವಾಗಲೂ ಅಪಾಯದಲ್ಲಿದ್ದು, ಇದು ಇಮ್ರಾನ್‍ರನ್ನು ಹತ್ಯೆ ಮಾಡಲು ನಡೆದ ಐಎಸ್‍ಐ ಪ್ರಾಯೋಜಿತ ಕೃತ್ಯವಾಗಿದೆ ಎಂದು ಪಿಟಿಐ ಆರೋಪಿಸಿದೆ. ಜೈಲಿನ ಮೇಲೆ ಭಯೋತ್ಪಾದಕರ ದಾಳಿ ಎಂದು ಹೇಳುತ್ತಿದ್ದಾರೆ. ಆದರೆ ಮಾಜಿ ಪ್ರಧಾನಿ ಇಮ್ರಾನ್ ಖಾನ್‍ರನ್ನು ಬಂಧನದಲ್ಲಿ ಇಟ್ಟಿರುವ ಜೈಲನ್ನು ಹೊರತುಪಡಿಸಿ ದೇಶದಲ್ಲಿ ಬೇರೆ ಜೈಲುಗಳಿಲ್ಲವೇ ? ಎಂದು ಪಿಟಿಐ ವಕ್ತಾರ ಶೋಯಬ್ ಶಹೀನ್ ಸುದ್ಧಿಗೋಷ್ಠಿ ಯಲ್ಲಿ ಪ್ರಶ್ನೆ…
ಬಾಲಿವುಡ್ ಬ್ಯೂಟಿ ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಮದುವೆಯಾಗಿ 15 ವರ್ಷ ಕಳೆದಿದೆ. 2021 ರಲ್ಲಿ ನೀಲಿ ಚಿತ್ರ ನಿರ್ಮಾಣ ಹಾಗೂ ವಿತರಣೆ ಪ್ರಕರಣದಲ್ಲಿ ರಾಜ್ ಕುಂದ್ರಾ ಬಂಧನವಾಗಿದ್ದು ಸದ್ಯ ಅವುಗಳಿಂದ ಹೊರ ಬಂದಿರುವ ದಂಪತಿ ನೆಮ್ಮದಿಯಾಗಿದ್ದಾರೆ. ಶಿಲ್ಪಾ ಶೆಟ್ಟಿ, ಹಣಕ್ಕಾಗಿ ರಾಜ್ ಕುಂದ್ರಾ ಅವರನ್ನು ವಿವಾಹವಾಗಿದ್ದಾರೆ ಎಂಬ ಮಾತು ಆಗಾಗ ಕೇಳಿ ಬರುತ್ತಲೆ ಇರುತ್ತದೆ. ಈ ರೀತಿ ಆರೋಪ ಮಾಡುವವರಿಗೆ ನಟಿ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ. ಇತ್ತೀಚೆಗೆ ಬಾಲಿವುಡ್ ಮ್ಯಾಗಜೀನ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ಹಾಗೂ ರಾಜ್ ಕುಂದ್ರಾ ಬಗ್ಗೆ ಮಾತನಾಡಿರುವ ಶಿಲ್ಪಾ ಶೆಟ್ಟಿ, ‘ನಾನು ರಾಜ್ ಕುಂದ್ರಾ ಅವರನ್ನು ವಿವಾಹವಾದಾಗ ಕುಂದ್ರಾ 108ನೇ ಶ್ರೀಮಂತ ಬ್ರಿಟೀಷ್ ಭಾರತೀಯ ಎನಿಸಿಕೊಂಡಿದ್ದರು. ಆದರೆ ಕೆಲವರು ನನ್ನ ಬಗ್ಗೆ ಗೂಗಲ್ ಮಾಡುವುದು ಮರೆತು ಬಿಡುತ್ತಾರೆ. ಶಿಲ್ಪಾ ಶೆಟ್ಟಿ ಆದ ನಾನು ಈ ಹಿಂದೆಯೂ ಶ್ರೀಮಂತಳಾಗಿದ್ದೆ, ಈಗಲೂ ಶ್ರೀಮಂತಳಾಗಿದ್ದೇನೆ. ನನ್ನ ಎಲ್ಲ ಅವಶ್ಯಕತೆಗಳನ್ನು ನಾನೇ ಪೂರೈಸಿಕೊಳ್ಳುತ್ತೇನೆ. ಎಲ್ಲ ತೆರಿಗೆಗಳನ್ನು…