ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಉಲ್ಲೇಖಿಸಿ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹೌದು ನವದೆಹಲಿ ವಿಧಾನಸಭೆ ಚುನಾವಣೆ ಪ್ರಯುಕ್ತ ಪ್ರಚಾರ ನಡೆಸಿದ ವೇಳೆ ಈ ಹೇಳಿಕೆ ನೀಡಿದ್ದಾರೆ. ಬಿಹಾರದಲ್ಲಿ ಹೇಮಾಮಾಲಿನಿಯ ಕೆನ್ನೆಯಂತೆ ರಸ್ತೆಗಳನ್ನು ಸುಗಮಗೊಳಿಸುವುದಾಗಿ ಲಾಲು ಹೇಳಿದರು. ಆದರೆ ಲಾಲು ಸುಳ್ಳು ಹೇಳಿದ್ದರು. ನಾನು ನಿಮಗೆ ಭರವಸೆ ನೀಡುತ್ತೇನೆ. ಓಖ್ಲಾ ಮತ್ತು ಸಂಗಮ್ ವಿಹಾರ್‌ನಲ್ಲಿ ನಿರ್ಮಿಸಿರುವಂತೆ, ಕಲ್ಕಾಜಿಯಲ್ಲೂ ಪ್ರಿಯಾಂಕ ಗಾಂಧಿಯವರ ಕೆನ್ನಯಂತಹ ರಸ್ತೆಗಳನ್ನು ನಿರ್ಮಿಸುತ್ತೇನೆ ಎಂದರು. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ. https://ainlivenews.com/even-if-you-make-a-mistake-you-should-never-put-your-slippers-upside-down-do-you-know-why/ ಪ್ರಿಯಾಂಕಾ ಗಾಂಧಿ ಬಗ್ಗೆ ರಮೇಶ್ ಬಿಧುರಿ ಅವರ ಹೇಳಿಕೆ ನಾಚಿಕೆಗೇಡಿನ ಸಂಗತಿ ಮಾತ್ರವಲ್ಲದೆ ಮಹಿಳೆಯರ ಬಗ್ಗೆ ಅವರ ಅಸಹ್ಯ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಬಳಿಕ ಮತ್ತೊಮ್ಮೆ ಸ್ಪಷ್ಟನೆ ನೀಡಿದ ಬಿಧುರಿ, ಹೇಮಾ ಮಾಲಿನಿ ಕೂಡ ಮಹಿಳೆಯೇ. ತಪ್ಪು ಮಾಡಿದವರು ಮೊದಲು ಕ್ಷಮೆ ಕೇಳಲಿ. ಅವರು ಸರಳ ಕುಟುಂಬದಿಂದ ಬಂದವರು. ಕಾಂಗ್ರೆಸ್ ಮೊದಲು…
Author: Author AIN
ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ಕೂದಲೆಳೆ ಅಂತರದಲ್ಲಿ ಭಾರೀ ದುರಂತವೊಂದು ತಪ್ಪಿದೆ. ಸುಮಾರು 300 ಮಂದಿ ಪ್ರಯಾಣಿಕರನ್ನು ಹೊತ್ತು ಅಬುಧಾಬಿಗೆ ತೆರಳುತ್ತಿದ್ದ ಎತಿಹಾದ್ ಏರ್‌ವೇಸ್ ವಿಮಾನದ ಎರಡು ಟೈರ್‌ಗಳು ಸ್ಫೋಟಗೊಂಡಿದ್ದು ಇದರಿಂದ ಜನ ಆತಂಕಕ್ಕೆ ಒಳಗಾಗಿದ್ದರು. 289 ಪ್ರಯಾಣಿಕರೊಂದಿಗೆ ಮೆಲ್ಬೋರ್ನ್‌ನಿಂದ ಅಬುಧಾಬಿಗೆ ಹೋಗುತ್ತಿದ್ದ EY 461 ವಿಮಾನದ ಟೈರ್‌ಗಳು ಟೇಕ್‌ಆಫ್ ಆಗುವ ಕೆಲವೇ ಕ್ಷಣಗಳ ಮೊದಲು ಸ್ಫೋಟಗೊಂಡಿದ್ದವು. ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ತುರ್ತು ಸೇವೆಗಳು ಬೋಯಿಂಗ್ 787 ವಿಮಾನವನ್ನು ಸುತ್ತುವರೆದಿದ್ದು ಸುರಕ್ಷತಾ ಕ್ರಮವಾಗಿ ಲ್ಯಾಂಡಿಂಗ್ ಗೇರ್ ಮೇಲೆ ರಕ್ಷಣಾತ್ಮಕ ಫೋಮ್ ಅನ್ನು ಇರಿಸಿದವು. ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಗಿದೆ. ನಮ್ಮ ತಂಡಗಳು ಸಾಧ್ಯವಾದಷ್ಟು ಬೇಗ ಅವರ ಮುಂದಿನ ಪ್ರಯಾಣವನ್ನು ಮುಂದುವರಿಸಲು ಅನುವು ಮಾಡಿಕೊಡಲು ಕೆಲಸ ಮಾಡುತ್ತಿವೆ. ಎತಿಹಾದ್ ಏರ್‌ವೇಸ್ ಯಾವುದೇ ಅನಾನುಕೂಲತೆಗಾಗಿ ಪ್ರಾಮಾಣಿಕವಾಗಿ ವಿಷಾದಿಸುತ್ತದೆ ಎಂದು ಟ್ವೀಟ್ ಮಾಡಿದೆ.
ಪುಷ್ಪ 2 ಸಿನಿಮಾದ ಪ್ರೀಮಿಯರ್ ವೇಳೆ ಹೈದರಾಬಾದ್ ನ ಸಂಧ್ಯಾ ಥಿಯೇಟರ್ ನಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಗಾಯಗೊಂಡಿರುವ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಮಧ್ಯೆ ಗಾಯಗೊಂಡಿರುವ ಬಾಲಕನ ಭೇಟಿಯಾಗಿ ನಟ ಅಲ್ಲು ಅರ್ಜುನ್ ಪ್ರಯತ್ನಿಸಿದ್ದು ಇದಕ್ಕೆ ಪೊಲೀಸರು ಅಡ್ಡಿ ಪಡಿಸಿದ್ದಾರೆ. ಸಂಧ್ಯಾ ಥಿಯೇಟರ್ ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆ ನಿಧನ ಹೊಂದಿದ್ದು ಅವರ ಪುತ್ರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾನೆ. ಘಟನೆ ನಡೆದಾಗಿನಿಂದಲೂ ಐಸಿಯುನಲ್ಲಿಯೇ ಇರುವ ಬಾಲಕ ಇನ್ನೂ ಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಜೈಲಿನಿಂದ ಹೊರಬಂದ ಬಳಿಕ ಅಲ್ಲು ಅರ್ಜುನ್, ಆ ಬಾಲಕನ ಭೇಟಿಯಾಗಲು ಯತ್ನಿಸಿದ್ದಾರೆ ಆದರೆ ಅದಕ್ಕೆ ಪೊಲೀಸರು ನಿರಾಕರಿಸಿದ್ದಾರೆ. ಬಾಲಕ ದಾಖಲಾಗಿರುವ ಆಸ್ಪತ್ರೆಯು ರಾಂಗೊಪಾಲ್ ನಗರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತಿದ್ದು, ರಾಂಗೊಪಾಲ್ ನಗರ ಪೊಲೀಸರು ಅಲ್ಲು ಅರ್ಜುನ್ ಬಾಲಕನ ಭೇಟಿಗೆ ಆಸ್ಪತ್ರೆಗೆ ಬರುಬಾರದು ಎಂದು ನೊಟೀಸ್ ನೀಡಿದ್ದಾರೆ. ಅಲ್ಲು ಅರ್ಜುನ್ ಆಸ್ಪತ್ರೆಗೆ ಬಂದರೆ ಜನ ಜಂಗುಳಿ ಹೆಚ್ಚಾಗುತ್ತದೆ. ನೂಕಾಟ-ತಳ್ಳಾಟ ಉಂಟಾಗಬಹುದು, ಇದರಿಂದ ಇತರೆ ರೋಗಿಗಳಿಗೆ ಸಮಸ್ಯೆ…
‘ಕೊರಗಜ್ಜ’ ಸಿನಿಮಾ ಸೆಟ್ಟೇರಿದ ದಿನದಿಂದಲೂ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿ ಆಗುತ್ತಲೆ ಇದೆ. ಸುಧೀರ್ ಅತ್ತಾವರ್ ನಿರ್ದೇಶನದ ಕೊರಗಜ್ಜ ಸಿನಿಮಾದ ಹಾಡುಗಳಿಗೆ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್, ಶಂಕರ್ ಮಹಾದೇವನ್ ಧ್ವನಿಯಾಗಿದ್ದು ಈ ಮೂಲಕ ಮತ್ತೆ ಸುದ್ದಿಯಾಗಿದೆ. ‘ತ್ರಿವಿಕ್ರಮ ಸಿನಿಮಾಸ್’ ಹಾಗೂ ‘ಸಕ್ಸಸ್ ಫಿಲ್ಮ್ಸ್’ ಬ್ಯಾನರ್ ಮೂಲಕ ಮೂಡಿಬರುತ್ತಿರುವ ಈ ಸಿನಿಮಾಗೆ ಕಳೆದ ವಾರವಷ್ಟೇ ಶ್ರೇಯಾ ಘೋಷಾಲ್ ಅವರು ಎರಡು ಹಾಡುಗಳ ರೆಕಾರ್ಡಿಂಗ್ ಮುಗಿಸಿಕೊಟ್ಟಿದ್ದಾರೆ. ‘ಕೊರಗಜ್ಜ’ ಸಿನಿಮಾದ ಹಾಡಿನ ಸಾಹಿತ್ಯಕ್ಕೆ ಮಾರುಹೋದ ಶ್ರೇಯಾ ಘೋಷಾಲ್ ಅವರು ಕನ್ನಡ ಹಾಡುಗಳ ಸೊಬಗನ್ನು ಸಂಭ್ರಮಿಸಿದರು. ‘ಕನ್ನಡ ಸಿನಿಮಾ ಸಾಹಿತ್ಯ ಉತ್ಕ್ರಷ್ಟ ಮಟ್ಟದಲ್ಲಿ ಇರುತ್ತದೆ . ಆದ್ದರಿಂದ ಕನ್ನಡದ ಸಿನಿಮಾ ಗೀತೆಗಳಿಗೆ ಹೆಚ್ಚು ಆದ್ಯತೆ ನೀಡುತ್ತೇನೆ’ ಎಂದು ಶ್ರೇಯಾ ಘೋಷಾಲ್ ಹೇಳಿರುವುದಾಗಿ ‘ಕೊರಗಜ್ಜ’ ಚಿತ್ರತಂಡದವರು ಹೇಳಿದ್ದಾರೆ. ಈ ಚಿತ್ರದ ‘ಗಾಳಿಗಂಧ’ ಎಂಬ ಹಾಡನ್ನು ಶ್ರೇಯಾ ಅವರ ಜೊತೆ ಅದರ ಸೋನು ನಿಗಮ್ ಮತ್ತು ಶಾನ್ ಹಾಡಲಿದ್ದಾರೆ. ಉಳಿದಂತೆ ‘ಪೋರ್ಕುಳಿ ಪೆರತದಲಿ’ ಎಂಬ ಹಾಡನ್ನು ಸುನಿಧಿ ಚೌಹಾಣ್…
ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ , ತೃಪ್ತಿ ದಿಮ್ರಿ ನಟನೆಯ ಅನಿಮಲ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಆದರೆ ಈ ಸಿನಿಮಾ ಸ್ರೀ ವಿರೋಧಿ ಎಂಬ ಮಾತುಳು ಕೇಳಿ ಬಂದಿತ್ತು. ಇದೀಗ ಆ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ತೃಪ್ತಿ ದಿಮ್ರಿ ಅನಿಮಲ್ ಸ್ತ್ರೀ ವಿರೋಧೀ ಸಿನಿಮಾ ಅಲ್ಲ ಎಂದಿದ್ದಾರೆ. ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ನಟಿ ತೃಪ್ತಿ ದಿಮ್ರಿಗೆ ಮುಖ್ಯವಾದ ಪ್ರಶ್ನೆಯೊಂದು ಎದುರಾಗಿದೆ. ‘ಕಲಾ ರೀತಿಯ ಮಹಿಳಾ ಪ್ರಧಾನ ಸಿನಿಮಾ ಮಾಡಿದ ಬಳಿಕ ಅನಿಮಲ್ ರೀತಿಯ ಮಹಿಳಾ ವಿರೋಧಿ ಸಿನಿಮಾವನ್ನು ನೀವು ಒಪ್ಪಿಕೊಂಡಿದ್ದು ಯಾಕೆ’ ಎಂದು ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಉತ್ತರಿಸಿದ ನಟಿ, ‘ನಾವು ಯಾವುದೇ ಸಿನಿಮಾವನ್ನು ಸ್ತ್ರೀ ವಿರೋಧಿ ಎಂಬ ರೀತಿಯಲ್ಲಿ ನೋಡುವುದಿಲ್ಲ. ಸಿನಿಮಾಗಳಿಗೆ ನಾನು ಅಂತಹ ಹಣೆಪಟ್ಟಿ ನೀಡುವುದಿಲ್ಲ. ಬುಲ್ ಬುಲ್ ಮತ್ತು ಕಲಾ ಸಿನಿಮಾವನ್ನು ಮಾಡುವಾಗ ನಾನು ಸ್ತ್ರೀವಾದಿ ಸಿನಿಮಾ ಮಾಡುತ್ತಿದ್ದೇನೆ ಅಂತ ಯೋಚಿಸಿರಲಿಲ್ಲ. ನಾನು ಪಾತ್ರಗಳ ಜೊತೆ ಕನೆಕ್ಟ್ ಆಗುತ್ತೇನೆ. ನಿರ್ದೇಶಕರ ಮೇಲೆ ನಂಬಿಕೆ…
ಬಿಗ್ ಬಾಸ್ ಕನ್ನಡಸ ಸೀಸನ್ 11ಕ್ಕೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಟ್ಟ ಸಿಂಗರ್ ಹನುಮಂತ ಬೇರೆಲ್ಲಾ ಸ್ಪರ್ಧಿಗಳಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಆರಂಭದಿಂದಲೂ ಪ್ರೇಕ್ಷಕರ ಮನಗೆದ್ದ ಹನುಮಂತ ದೊಡ್ಮನೆಯಲ್ಲಿ ಪ್ರತಿವಾರವೂ ಸೇಫ್ ಆಗ್ತಿದ್ದಾರೆ. ನೋಡುಗರು ಆತನನ್ನು ದೊಡ್ಮನೆಯಲ್ಲಿಯೇ ಉಳಿಸಿಕೊಳ್ಳುತ್ತಿದ್ದಾರೆ. ಆದರೆ ಇದೀಗ ಸಿಂಗರ್ ಹನುಮಂತ ಬಿಗ್ ಬಾಸ್ ಆಟವನ್ನು ತೊರೆಯುವ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಧನರಾಜ್ ಧೈರ್ಯದ ಮಾತುಗಳನ್ನು ಹೇಳಿದ್ದಾರೆ. ‘ಬಿಗ್ ಬಾಸ್ಗೆ ನಾನು ನೇರವಾಗಿ ಹೇಳಿಬಿಡುತ್ತೇನೆ. ಕಷ್ಟ ಆಗುತ್ತಿದೆ ನನ್ನನ್ನು ಕಳಿಸಿ ಬಿಡಿ’ ಎಂದು ಹನುಮಂತ ಅವರು ಹೇಳಿದ್ದಾರೆ. ‘ನೀನು ಯಾಕೆ ಶೋಭಕ್ಕನ ಥರ ಆಡುತ್ತಿದ್ದೀಯ’ ಎಂದು ಧನರಾಜ್ ಅವರು ಹೇಳಿದರು. ಯಾಕೆಂದರೆ, ಶೋಭಾ ಶೆಟ್ಟಿ ಕೂಡ ಇದೇ ರೀತಿ ಮಾತನಾಡಿ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಿದ್ದರು. ತಮ್ಮ ಮನಸ್ಸಿನ ಗೊಂದಲ ಏನು ಎಂಬುದನ್ನು ಹನುಮಂತ ವಿವರಿಸಿದ್ದಾರೆ. ‘ಶೋಭಕ್ಕನ ರೀತಿ ಏನೂ ಇಲ್ಲ. ನಾವು ಬಾಯಿ ಸತ್ತವರ ರೀತಿ ಇರೋಕೆ ಆಗಲ್ಲ. ಮಾತಾಡೋಕೆ ಬರುತ್ತಿಲ್ಲ. ತಲೆ ಸ್ವಿಚ್ ಆಫ್…
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಯಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯಿಂದಾಗಿ ಲಕ್ಷಾಂತರ ಬಡವರು ಅದರ ಪ್ರಯೋಜನ ಪಡೆಯುತ್ತಿದ್ದಾರೆ. ಇನ್ನು ಕಾಂಗ್ರೆಸ್‌ನ ಈ ಯೋಜನೆಯಿಂದ ಬಹುತೇಕರು ಪ್ರಯೋಜನ ಪಡೆದಿದ್ದಾರೆ. ರಾಜ್ಯದೆಲ್ಲೆಡೆ ಗೃಹಲಕ್ಷ್ಮಿ ಯೋಜನೆ ಬಗ್ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಆದರೆ ಕಳೆದ ಎರಡು ತಿಂಗಳಿಂದ ಗೃಹಲಕ್ಷ್ಮಿ ಹಣ ಜನರಿಗೆ ಸಿಕ್ಕಿಲ್ಲ. ಹೌದು, ಕಳೆದ ಎರಡು ತಿಂಗಳಿಂದ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಖಾತೆಗೆ ಬಿದ್ದಿಲ್ಲ. ಹಲವರು ಈ ಬಗ್ಗೆ ಗೊಂದಲಕ್ಕೂ ಒಳಗಾಗಿದ್ದಾರೆ. ಆದರೆ ಇದೀಗ ಗೃಹಲಕ್ಷ್ಮಿ 16ನೇ ಕಂತಿನ ಹಣದ ಬಗ್ಗೆ ಸ್ಪಷ್ಟ ಮಾಹಿತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೀಡಿದ್ದಾರೆ. https://ainlivenews.com/do-you-need-300-units-of-free-electricity-for-your-home-if-so-apply-for-this-scheme/ 16 ನೇ ಕಂತಿನ ಹಣ ಇದೇ ತಿಂಗಳು ಅಂದರೆ ಜನವರಿ 14ನೇ ತಾರೀಖಿನಿಂದ ಗೃಹಲಕ್ಷ್ಮಿ 16ನೇ ಕಂತಿನ 2000 ಹಣವನ್ನು ಜಮಾ ಮಾಡಲು ಪ್ರಾರಂಭ ಮಾಡಲಾಗುತ್ತದೆ ಎಂಬ ಮಾಹಿತಿ ತಿಳಿಸಿದ್ದಾರೆ ಮತ್ತು ಜನವರಿ 30ನೇ ತಾರೀಖಿನ ಒಳಗಡೆ ಪ್ರತಿಯೊಬ್ಬರ ಖಾತೆಗೂ ಕೂಡ 16ನೇ ಕಂತಿನ ಹಣವನ್ನು ಜಮಾ…
ರೈತರ ಆರ್ಥಿಕ ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಹಲವು ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿವೆಯಾದರೂ, ಮಾಹಿತಿಯ ಕೊರತೆಯಿಂದಾಗಿ ರೈತರಿಗೆ ಯೋಜನೆಗಳ ಸೌಲಭ್ಯಗಳು ಸಿಗುತ್ತಿಲ್ಲ. ಕೃಷಿಯಲ್ಲಿ ಆಧುನಿಕತೆ ತರಲು ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ, ಬೀಜ, ಗೊಬ್ಬರ, ಖರೀದಿಗೆ ಪ್ರೋತ್ಸಾಹಧನ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಶೇ.90ರಷ್ಟು ಸಹಾಯಧನ ಕೃಷಿ ಯಾಂತ್ರೀಕರಣ ಯೋಜನೆಯಡಿ ರೈತರಿಗೆ ಶೇ.90ರಷ್ಟು ಸಹಾಯಧನ ಸಿಗುತ್ತದೆ. ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ಲಭ್ಯತೆ ಆಧಾರದ ಮೇಲೆ ಕೃಷಿ. ಯಂತ್ರೋಪಕರಣಗಳನ್ನು ರೈತರಿಗೆ ನೀಡಲಾಗುವುದು. ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್ , ಟ್ರ್ಯಾಕ್ಟರ್ ಚಾಲಿತ ಎಂ.ಬಿ.ಪ್ಲೋ, ರೋಟೋವೇಟರ್,ರೋಟೋವೇಟರ್,ಡಿಸ್ಕ್ ಫ್ಲೋ, ಡಿಸ್ಕ್ ಹ್ಯಾರೋ ಸೇರಿದಂತೆ ಇನ್ನಿತರ ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ ಸಿಗಲಿದೆ. ಸಹಾಯಧನ ಪಡೆಯಲು ಅಗತ್ಯ ದಾಖಲೆಗಳು? ರೈತರ ಜಮೀನಿನ ಪಹಣಿ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಪಹಣಿ ಜಂಟಿಯಾಗಿದ್ದರೆ ಒಪ್ಪಿಗೆ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕು. ರೈತರು ಫ್ರೂಟ್ಸ್ ಐಡಿ ಹೊಂದಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ…
ಬೆಂಗಳೂರು: ವಾಸ್ತು ಪ್ರಕಾರ ನೀವು ಮನೆ ಕಟ್ಟಿದರೆ, ವಾಸ್ತು ಪ್ರಕಾರ ನಡೆದುಕೊಂಡರೆ ನಿಮ್ಮ ಜೀವನದಲ್ಲಿ ಯಶಸ್ಸು ಎನ್ನುವುದು ಕಟ್ಟಿಟ್ಟ ಬುತ್ತಿ. ಮನೆ ಕಟ್ಟಲು ಮಾತ್ರವಲ್ಲದೆ, ನೀವು ಧರಿಸುವ ಬಟ್ಟೆಗಳು, ಪೂಜಾ ಕೋಣೆ, ನಿಮ್ಮ ಪರ್ಸ್‌ಗೆ ಸಂಬಂಧಿಸಿದಂತೆ ಕೂಡಾ ವಾಸ್ತು ನಿಯಮವಿದೆ. ಅಷ್ಟೇ ಅಲ್ಲ ನೀವು ಧರಿಸುವ ಪಾದರಕ್ಷೆ ವಿಚಾರದಲ್ಲಿ ಕೂಡಾ ನೀವು ವಾಸ್ತುವನ್ನು ಪಾಲಿಸಿದರೆ ಸಂತೋಷ ಎನ್ನುವುದು ಸದಾ ಕಾಲ ನಿಮ್ಮ ಪಾಲಿಗೆ ಇರಲಿದೆ. ಚಪ್ಪಲಿಗಳನ್ನು ಅಥವಾ ಬೂಟುಗಳನ್ನು ನಾವೇಕೆ ತಲೆಕೆಳಗಾಗಿ ಇಡಬಾರದು ಎಂಬುದು ನಿಮಗೆ ತಿಳಿದಿದೆಯೇ..? ಅಷ್ಟಕ್ಕೂ ಅದರ ಹಿಂದಿನ ಕಾರಣವೇನು..? ನಾವು ಧರಿಸುವ ಚಪ್ಪಲಿ ಅಥವಾ ಬೂಟುಗಳನ್ನು ತಲೆಕೆಳಗಾಗಿ ಇಡುವುದರಿಂದ ಜೀವನದಲ್ಲಿ ಹಲವಾರು ಸಮಸ್ಯೆಗಳು ಎದುರಿಸಬೇಕಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಚಪ್ಪಲಿ ಅಥವಾ ಬೂಟುಗಳನ್ನು ನಾವೇಕೆ ತಲೆಕೆಳಗಾಗಿ ಇಡಬಾರದು ಗೊತ್ತೇ..? ಮನೆಯಲ್ಲಿ ಅಪಶ್ರುತಿ: ಶೂ ಮತ್ತು ಚಪ್ಪಲಿಯನ್ನು ತಲೆಕೆಳಗಾಗಿ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಕಲಹ ಉಂಟಾಗುವುದರ ಜೊತೆಗೆ ವಿನಾಕಾರಣ ಕುಟುಂಬದ ಸದಸ್ಯರ ನಡುವೆ ಜಗಳಗಳು ಸೃಷ್ಟಿಯಾಗುತ್ತದೆ ಎನ್ನುವ ನಂಬಿಕೆಯಿದೆ. ಈ…
ಪ್ರಧಾನಮಂತ್ರಿ ಆವಾಸ್ ಯೋಜನೆ ಎಂದು ಕರೆಯಲ್ಪಡುವ ಉಚಿತ ವಸತಿ ಯೋಜನೆಯಡಿ ನೀವು ಮನೆಯನ್ನು ಪಡೆಯಲು ಬಯಸಿದರೆ, ನೀವು ಈ ಕೆಳಗಿನವುಗಳನ್ನು ಮಾಡಬೇಕಾಗಿದೆ. ಈ ಪೋಸ್ಟ್‌ನಲ್ಲಿ ನೀವು ಅದರ ಬಗ್ಗೆ ನೋಡಬಹುದು. ಪ್ರಧಾನಮಂತ್ರಿ ಆವಾಸ್ ಯೋಜನೆ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 25 ಜೂನ್ 2015 ರಂದು ಪ್ರಾರಂಭಿಸಿತು. ಈ ಯೋಜನೆಯಡಿಯಲ್ಲಿ ವಸತಿರಹಿತರು ಮನೆ ನಿರ್ಮಿಸಲು ಅಥವಾ ಖರೀದಿಸಲು ಪ್ರಯೋಜನವನ್ನು ಪಡೆಯುತ್ತಾರೆ. ಅದಕ್ಕೆ ಕೆಲವು ಅರ್ಹತೆಗಳಿರಬೇಕು. ನೀವು ಆ ಅರ್ಹತೆಗಳನ್ನು ಹೊಂದಿದ್ದರೆ ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಫಲಾನುಭವಿಗಳ ಪಟ್ಟಿಯನ್ನು rhreporting.nic.in ನಲ್ಲಿ ಕಾಣಬಹುದು. ಈ ಯೋಜನೆಗೆ ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಯೋಜನೆಯ ಉದ್ದೇಶವೇನು? ಬಡತನ ರೇಖೆಗಿಂತ ಕೆಳಗಿರುವ ಮತ್ತು ಸ್ವಂತ ಮನೆ ನಿರ್ಮಿಸಲು ಸಾಧ್ಯವಾಗದ ಜನರು ಈ ಯೋಜನೆಯ ಮೂಲಕ ಸ್ವಂತ ಮನೆ ನಿರ್ಮಿಸಿಕೊಳ್ಳಬಹುದು ಫಲಾನುಭವಿಗಳಿಗೆ ಅರ್ಹತೆ ಅಭ್ಯರ್ಥಿಯು ಈ ಕೆಳಗಿನ ಯಾವುದೇ ಅರ್ಹತೆಗಳನ್ನು ಹೊಂದಿರಬೇಕು. ಒಂದು ಅಥವಾ ಎರಡು ಕೊಠಡಿಗಳು, ಕಚ್ಚಾ ಗೋಡೆಗಳು, ಕಚ್ಚಾ…