ಮಲಯಾಳಂ ಚಿತ್ರರಂಗದ ಖ್ಯಾತ ನಟ ಬಾಲ ಅವರನ್ನು ಇಂದು ಬೆಳ್ಳಂಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ. ಬಾಲ ಅವರ ಮಾಜಿ ಪತ್ನಿ ನೀಡಿದ ದೂರಿನ ಮೇರೆಗೆ ಕಡವಂತರಾ ಪೊಲೀಸರು ಬಂಧಿಸಿದ್ದಾರೆ. ಬಾಲ ಅವರ ಜೊತೆಗೆ ಅವರ ಮ್ಯಾನೇಜರ್ ರಾಜೇಶ್ ಮತ್ತು ಮತ್ತೊಬ್ಬ ಆರೋಪಿ ಅನಂತಕೃಷ್ಣನ್ ಅವರನ್ನೂ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ನಿಂದನೆ ಮತ್ತು ಕಿರುಕುಳ ನೀಡಿದ ಆರೋಪ ಮೇಲೆ ಬಂಧಿಸಲಾಗಿದೆ. ಬಾಲಾ ಅವರನ್ನು ಜಾಮೀನು ರಹಿತ ಸೆಕ್ಷನ್ ಅಡಿಯಲ್ಲಿ ಬಂಧಿಸಲಾಗಿದೆ. ಇಂದು ಬೆಳಗ್ಗೆ ಈ ಬಂಧನ ನಡೆದಿದೆ. ಕೆಲವು ತಿಂಗಳುಗಳಿಂದ ಬಾಲಾ ಮತ್ತು ಅವರ ಮಾಜಿ ಪತ್ನಿ ಅಮೃತಾ ಸುರೇಶ್ ನಡುವಿನ ಭಿನ್ನಾಭಿಪ್ರಾಯ ಉಂಟಾಗಿದೆ. ಅಮೃತಾ ತನ್ನ ಮದುವೆಯ ಸಂದರ್ಭದಲ್ಲಿ ಎದುರಿಸಿದ ಕೌಟುಂಬಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ್ದರು. ಏತನ್ಮಧ್ಯೆ, ಬಾಲಾ ಮತ್ತು ಅಮೃತಾರ ಮಾಜಿ ಡ್ರೈವರ್ ಗಂಭೀರ ಆರೋಪ ಮಾಡಿದ್ದಾರೆ. ನಟನ ಬಳಿ ನಾನು ಕೆಲಸ ಮಾಡುವಾಗ ತನ್ನ ಹೆಂಡತಿಯೊಂದಿಗೆ ಅನುಚಿತವಾಗಿ ವರ್ತಿಸುವುದನ್ನು ನೋಡಿದ್ದೇನೆ ಎಂದು ಆರೋಪಿಸಿದ್ದಾರೆ.
Author: Author AIN
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಚಿ.ದತ್ತರಾಜ್ ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ದತ್ತರಾಜ್ ಅವರಿಗೆ 87 ವರ್ಷ ವಯಸ್ಸಾಗಿತ್ತು. ಚಿ.ದತ್ತರಾಜ್, ಖ್ಯಾತ ಸಾಹಿತಿ ಚಿ.ಉದಯಶಂಕರ್ ಸಹೋದರ. ರಾಜ್ ಕುಮಾರ್ ಕುಟುಂಬದ ಜೊತೆ ಆತ್ಮೀಯ ಸಂಬಂಧ ಹೊಂದಿದ್ದ ದತ್ತರಾಜ್ ರಾಜ್ ಕುಮಾರ್ ನಟನೆಯ ಕೆರಳಿದ ಸಿಂಹ, ಕಾಮನಬಿಲ್ಲು, ಅದೇ ಕಣ್ಣು, ಶೃತಿ ಸೇರಿದಾಗ, ಶಿವರಾಜಕುಮಾರ್ ಅಭಿನಯದ ಮೃತ್ಯುಂಜಯ, ಆನಂದ ಜ್ಯೋತಿ ಹಾಗೂ ಮಂಜುಳ ಅವರು ನಟಿಸಿದ್ದ ‘ರುದ್ರಿ’ ಮುಂತಾದ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಇಂದು ಮಧ್ಯಾಹ್ನ 1.30ಕ್ಕೆ ಹರಿಶ್ಚಂದ್ರ ಘಾಟ್ನಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ಹಿಂದೆ ಎರಡು ಬಾರಿ ಟ್ರಂಪ್ ಹತ್ಯೆಗೆ ಯತ್ನ ನಡೆದಿತ್ತು. ಇದೀಗ ಮೂರನೇ ಭಾರಿ ಮತ್ತೆ ದುಷ್ಕರ್ಮಿಗಳು ಡೋನಾಲ್ಡ್ ಟ್ರಂಪ್ ಹತ್ಯೆಗೆ ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಭಾನುವಾರ ಕ್ಯಾಲಿಪೋರ್ನಿಯಾದ ಕೋಚೆಲ್ಲಾ ವ್ಯಾಲಿಯಲ್ಲಿ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ನಕಲಿ ಪಾಸ್‌ನೊಂದಿಗೆ ಗನ್ ಇಟ್ಟುಕೊಂಡು ಬಂದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಗುಂಡುಗಳಿಂದ ತುಂಬಿಕೊಂಡಿದ್ದ ಶಾಟ್‌ಗನ್ ಹಾಗೂ ಹ್ಯಾಂಡ್‌ಗನ್ ಅನ್ನು ಬಂಧಿತನಿಂದ ವಶಪಡಿಸಿಕೊಳ್ಳಲಾಗಿದೆ. ನಾವು ಭಾಗಶಃ ಟ್ರಂಪ್ ಅವರ ಮತ್ತೊಂದು ಹತ್ಯೆ ಯತ್ನವನ್ನು ತಡೆದಿದ್ದೇವೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ. ಬಂಧಿತನನ್ನು 49 ವರ್ಷದ ಲಾಸ್ ವೇಗಾಸ್ ಮೂಲದ ವೆಮ್ ಮಿಲ್ಲರ್ ಎಂದು ಗುರುತಿಸಲಾಗಿದ್ದು ಈತ ನಕಲಿ ಪ್ರೆಸ್ ಪಾಸ್ ಇಟ್ಟುಕೊಂಡು ರ್ಯಾಲಿ ಪ್ರವೇಶಿಸಿದ್ದ. ಆತನನ್ನು ಆರಂಭದಲ್ಲೇ ತಡೆಯಲಾಯಿತು ಎಂದು ಪೊಲೀಸರು ಹೇಳಿದ್ದಾರೆ. ಕಳೆದ ಜುಲೈ ಹಾಗೂ ಸೆಪ್ಟೆಂಬರ್‌ನಲ್ಲಿ ಎರಡು ಬಾರಿ ಟ್ರಂಪ್ ಅವರ ಹತ್ಯೆ ಯತ್ನ ನಡೆದಿತ್ತು.…
ಭಾರತದ ಮೋಸ್ಟ್ ವಾಂಟೆಡ್ ಇಸ್ಲಾಮಿಕ್ ಬೋಧಕ ಜಾಕಿರ್ ನಾಯ್ಕ್ ಸದ್ಯ ಭಾರತದಿಂದ ಪರಾರಿಯಾಗಿ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ. ಅತಿಥಿಯಾಗಿ ತಮ್ಮ ದೇಶಕ್ಕೆ ಭೇಟಿ ನೀಡುವಂತೆ ಪಾಕಿಸ್ತಾನ ಸರ್ಕಾರ ಝಾಕಿರ್ ನಾಯ್ಕ್‌ನನ್ನು ಆಹ್ವಾನಿಸಿತ್ತು.ಕಳೆದ ಕೆಲ ದಿನಗಳಿಂದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುವ ಜಾಕಿರ್ ನಾಯ್ಕ್ ತಮ್ಮ ವಿವಾದಾತ್ಮಕ ಹೇಳಿಕೆಗಳ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾನೆ. ಮೂಲಭೂತವಾದಿ ವಿಚಾರಗಳನ್ನು ಮಂಡಿಸೋದು ಮಾತ್ರವಲ್ಲದೇ ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದಂತೆಯೂ ಕೀಳು ಮಟ್ಟದ ಹೇಳಿಕೆ ನೀಡಿ ವ್ಯಾಪಕ ಆಕ್ರೋಶಕ್ಕೆ ಜಾಕಿರ್ ನಾಯ್ಕ್ ಗುರಿಯಾಗುತ್ತಿದ್ದಾನೆ. ಈತನ್ಮಧ್ಯೆ ಮಹಿಳೆಯರ ಬಗ್ಗೆ ನೀಡಿರುವ ಝಾಕಿರ್ ನಾಯ್ಕ್ ಹೇಳಿಕೆ ವ್ಯಾಪಕ ಟೀಕೆಗೆ ಕಾರಣವಾಗಿದೆ. ಪಾಕಿಸ್ತಾನದಲ್ಲಿ ಇರುವ ಝಾಕಿರ್ ನಾಯ್ಕ್ ಅಲ್ಲಿನ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದಾನೆ. ಮಹಿಳೆ ನಡೆಸುತ್ತಿದ್ದ ಸಂದರ್ಶನದಲ್ಲಿ ಝಾಕಿರ್ ನಾಯ್ಕ್ ಮಹಿಳೆಯರ ಬಗ್ಗೆಯೇ ತುಚ್ಛವಾಗಿ ಮಾತನಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲಾ ತಾಣದಲ್ಲಿ ವೈರಲ್ ಆಗುತ್ತಿದೆ. ಇಸ್ಲಾಂ ಧರ್ಮದಲ್ಲಿ ಮಹಿಳೆಯರು ಪ್ರಧಾನಿ ಮತ್ತು ಸಿಎಂ ಆಗುವ ಬಗ್ಗೆ ಮಾತನಾಡಿದ ಜಾಕಿರ್ ನಾಯ್ಕ್, ‘ಮಹಿಳೆಯರು ಪ್ರಧಾನಿ…
ಕಳೆದ 11 ವರ್ಷಗಳಿಂದ ಬಿಗ್ ಬಾಸ್ ನಿರೂಪಣೆ ಮಾಡುತ್ತ ಬಂದಿರುವ ಕಿಚ್ಚ ಸುದೀಪ್ ಇದೀಗ ಏಕಾಏಕಿ ಬಿಗ್ ಬಾಸ್ ನಿರೂಪಣೆ ತೊರೆಯುವ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಸುದೀಪ್ ಅಧಿಕೃತ ಹೇಳಿಕೆ ನೀಡಿದ್ದು ಇದು ಪ್ರತಿಯೊಬ್ಬರಿಗೂ ಆಕ್ ಆಗಿದೆ. ಸುದೀಪ್ ಅವರ ಏಕಾಏಕಿ ನಿರ್ಧಾರದ ಹಿಂದೆ ದೊಡ್ಡ ಕಾರಣ ಇದೆ ಎನ್ನಲಾಗುತ್ತಿದ್ದು ಈ ಬಗ್ಗೆ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಟ್ವೀಟ್ ಮಾಡಿದ್ದಾರೆ. ಬಿಗ್ ಬಾಸ್ 10 ಸೀಸನ್ಗಳನ್ನು ಯಶಸ್ವಿಯಾಗಿ ನಿರೂಪಣೆ ಮಾಡಿದ್ದ ಕಿಚ್ಚ ಸುದೀಪ್ ಇದೀಗ 11ನೇ ಸೀಸನ್ ನಿರೂಪಣೆ ಮಾಡುತ್ತಿದ್ದಾರೆ. 11ನೇ ಸೀಸನ್ ನಿರೂಪಣೆಯಿಂದಲೇ ಸುದೀಪ್ ಹೊರ ಬರುತ್ತಾರೆ ಎಂದು ಹೇಳಲಾಗಿತ್ತು. ಆದ್ರೆ ವಾಹಿನಿಯವರು ಮನ ವೊಲಿಸಿ ಮತ್ತೆ ನಿರೂಪಣೆ ಮಾಡುವಂತೆ ಮಾಡಿದ್ದರು. ಆದರೆ ಇದೀಗ ಸುದೀಪ್ ನಿರೂಪಣೆಯಿಂದ ಹೊರ ಬರಲು ನಿರ್ಧಾರ ಮಾಡಿದ್ದಾರೆ. ಸುದೀಪ್ ಈ ಘೋಷಣೆ ಮಾಡುವುದರ ಹಿಂದೆ ಯಾವುದೋ ಒಂದು ಬಲವಾದ ಕಾರಣವೇ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ರೂಪೇಶ್ ರಾಜಣ್ಣ…
ಉತ್ತರ ಕೊರಿಯಾದ ರಾಜಧಾನಿ ಪ್ಯೊಂಗ್‌ಯಾಂಗ್ ನ ಆಕಾಶದಲ್ಲಿ ದಕ್ಷಿಣ ಕೊರಿಯಾದ ಡ್ರೋನ್‌ಗಳು ಕಾಣಿಸಿಕೊಂಡಿವೆ. ಇದರಿಂದ ಆಕ್ರೋಶಗೊಂಡ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್-ಉನ್ ಸಹೋದರಿ ಕಿಮ್ ಯೋ ಜೊಂಗ್, ‘ದಕ್ಷಿಣ ಕೊರಿಯಾದ ಡ್ರೋನ್‌ಗಳು ಉತ್ತರ ಕೊರಿಯಾದ ಮೇಲೆ ಹಾರಾಡುವುದು ಕಂಡುಬಂದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ರಾಜ್ಯ ಮಾಧ್ಯಮ KCNA ಮೂಲಕ ಪ್ರತಿಕ್ರಿಯಿಸಿರುವ ಕಿಮ್ ಯೋ ಜೊಂಗ್, ಇತ್ತೀಚಿನ ಡ್ರೋನ್ ಒಳನುಗ್ಗುವಿಕೆ ಗಂಭೀರ ಘಟನೆಯಾಗಿದೆ ಎಂದು ಹೇಳಿದ್ದಾರೆ. ಡ್ರೋನ್ ಒಳನುಗ್ಗುವಿಕೆಯನ್ನು ಗುರುತಿಸುವಲ್ಲಿ ಅವರು ವಿಫಲರಾಗಿದ್ದಾರೆ ಎಂದು ಕಿಮ್ ದಕ್ಷಿಣ ಕೊರಿಯಾದ ಮಿಲಿಟರಿಯನ್ನು ಸಹ ಕಿಮ್ ಯೋ ಜೊಂಗ್ ಟೀಕಿಸಿದ್ದು, ಇದಕ್ಕೆ ಶತ್ರು ದೇಶದ ಸೇನೆಯೇ ಹೊಣೆ. ಉತ್ತರ ಕೊರಿಯಾ ವಿರೋಧಿ ಕರಪತ್ರಗಳು (ಡ್ರೋನ್ ಮೂಲಕ ಕಳುಹಿಸಲಾಗಿದೆ) ಘಟನೆಯ ಗಂಭೀರತೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. ಉತ್ತರ ಕೊರಿಯಾದ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು, ಈ ಆರೋಪಗಳನ್ನು ಖಚಿತಪಡಿಸಲು ಸಾಧ್ಯವಿಲ್ಲ. ಆದರೆ ಇಡೀ ವಿಷಯದ…
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ 4 ತಿಂಗಳೇ ಕಳೆದು ಹೋಗಿದೆ. ಈಗಾಗ್ಲೇ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಹಲವು ಬಾರಿ ಮುಂದೂಡಲಾಗಿದೆ. ಇಂದು ಮತ್ತೆ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು ದರ್ಶನ್ ಭವಿಷ್ಯ ಏನಾಗಲಿದೆ ಎಂಬ ಪ್ರಶ್ನೆ ಮೂಡಿದೆ. ಇಂದಾದ್ರು ದರ್ಶನ್ ಗೆ ಜಾಮೀನು ಸಿಗುತ್ತಾ?, ಬಳ್ಳಾರಿ ಕಾರಾಗೃಹದಿಂದ ಬಿಡುಗಡೆ ಆಗುತ್ತಾರಾ? ಎಂಬ ಚರ್ಚೆಗಳು ಶುರುವಾಗಿವೆ. ದರ್ಶನ್‌ಗೆ ಬೇಲ್ ಸಿಗಬಹುದು ಎನ್ನುವುದಾದರೆ ಯಾವೆಲ್ಲಾ ಕಾರಣಗಳಿಗಾಗಿ ಸಿಗಬಹುದು? ಬೇಲ್ ಸಿಗೋದು ಡೌಟ್ ಎನ್ನಲು ಕಾರಣಗಳೇನು? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದೆ. ದರ್ಶನ್ ಅವರ ಜಾರ್ಮಿನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 57 ನೇ ಸಿಸಿಎಚ್ ನ್ಯಾಯಾಲಯ ಸುದೀರ್ಘ ವಾದ – ಪ್ರತಿವಾದ ಆಲಿಸಿರುವ ನ್ಯಾಯಾಧೀಶರು ಇಂದಿಗೆ ಅಂತಿಮ ಆದೇಶ ಕಾಯ್ದಿರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಡೀ ಸ್ಯಾಂಡಲ್ ವುಡ್ ಸಿನಿಮಾ ರಂಗದ ಚಿತ್ತ ಜೊತೆಗೆ ದರ್ಶನ್ ಅಭಿಮಾನಿಗಳ ಗಮನ ನ್ಯಾಯಾಲಯದ ಮೇಲಿದೆ. ದರ್ಶನ್ ಪರ ವಕೀಲ ಸಿವಿ ನಾಗೇಶ್ ಅವರು ದರ್ಶನ್‌ಗೆ…
‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಸ್ವರ್ಗ ಮತ್ತು ನರಕ ಎಂಬ ಕಾನ್ಸೆಪ್ಟ್ ಪರಿಚಯಿಸಲಾಗಿತ್ತು. ನರಕದಲ್ಲಿ ಇದ್ದ ಮಹಿಳಾ ಸ್ಪರ್ಧಿಗಳಿಗೆ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಕೆಲವು ಮೂಲ ಸೌಕರ್ಯಗಳನ್ನು ನೀಡಿಲ್ಲ ಎಂಬ ಆರೋಪ ಕೆಲವರಿಂದ ಕೇಳಿಬಂದಿತ್ತು. ಅಲ್ಲದೇ, ಈ ಬಗ್ಗೆ ಮಹಿಳಾ ಆಯೋಗಕ್ಕೂ ದೂರು ನೀಡಲಾಗಿತ್ತು. ಇದೀಗ ಈ ಆರೋಪಕ್ಕೆ ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ಅವರು ಮಹಿಳಾ ಸ್ಪರ್ಧಿಗಳಿಂದ ಉತ್ತರ ಕೊಡಿಸಿದ್ದಾರೆ. ‘ಸೂಪರ್ ಸಂಡೇ ವಿತ್ ಸುದೀಪ’ ಸಂಚಿಕೆಯನ್ನು ಆರಂಭಿಸುವಾಗಲೇ ಸುದೀಪ್ ಅವರು ಒಂದು ಪ್ರಶ್ನೆ ಕೇಳಿದರು. ‘ನರಕದಲ್ಲಿ ಇದ್ದಾಗ ಎಷ್ಟು ಖುಷಿ ಇತ್ತು? ಇದು ತುಂಬ ಮುಖ್ಯವಾದ ಪ್ರಶ್ನೆ. ಮಹಿಳಾ ಆಯೋಗದವರು ಆರೋಪ ಮಾಡಿದ್ದಾರೆ. ಅನ್ಯಾಯ, ಅನಾನುಕೂಲ ಆಗಿದೆ ಅಂತ ಹೇಳಿದ್ದಾರೆ. ಈ ಬಗ್ಗೆ ಉತ್ತರ ನೀವು ನೀಡಿ’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಬಿಗ್ ಬಾಸ್ ಮನೆಗೆ ಕಾಲಿಟ್ಟ ಮಹಿಳಾ ಸ್ಪರ್ಧಿಗಳ ಪೈಕಿ ಚೈತ್ರಾ ಕುಂದಾಪುರ, ಮಾಸನಾ, ಮೋಕ್ಷಿತಾ ಪೈ,…
ಅದೆಷ್ಟೋ ಜನ ಬಿಗ್ ಬಾಸ್ ಕಾರ್ಯಕ್ರಮ ನೋಡುತ್ತಿರುವುದು ಸುದೀಪ್ ಕಾರಣದಿಂದ. ಅವರು ಸ್ಟೇಜ್ ಮೇಲೆ ಬಂದ್ರೆ ಅಭಿಮಾನಿಗಳ ಹೃದಯ ಹಕ್ಕಿಯಂತೆ ಹಾರಾಡುತ್ತೆ. ಇನ್ನೂ ಸ್ಪರ್ಧಿಗಳು ಸುದೀಪ್ ಬಂದ್ರು ಅಂದ್ರೆ ಫುಲ್ ಸೈಲೆಂಟ್ ಆಗಿ ಬಿಡ್ತಾರೆ. ಆದರೆ ಇದೀಗ ಕಿಚ್ಚನ ಅಭಿಮಾನಿಗಳಿಗೆ ಬಿಗ್ ಶಾಕ್ ಎದುರಾಗಿದೆ. ಯೆಸ್. ಸುದೀಪ್ ಬಿಗ್ ಬಾಸ್ ನಿರೂಪಣೆಯಿಂದ ಹೊರ ಬರಲು ನಿರ್ಧರಿಸಿದ್ದು ಅಧಿಕೃತ ಘೋಷಣೆ ಮಾಡಿದ್ದಾರೆ. ಯೆಸ್. ಕಿಚ್ಚ ಸುದೀಪ್ ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮದ ನಿರೂಪಕನ ಸ್ಥಾನದಿಂದ ಕೆಳಗೆ ಇಳಿಯುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟ ಕಿಚ್ಚ ಇದೀಗ ಶೋ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಪ್ರಸ್ತುತ ಸುದೀಪ್ ಬಿಗ್ ಬಾಸ್ ಕನ್ನಡ ಸೀಸನ್ 11 ನಡೆಸಿಕೊಡುತ್ತಿದ್ದಾರೆ. ಆದರೆ ಮುಂದಿನ ಸೀಸನ್ಗೆ ತಾವು ನಿರೂಪಣೆ ಮಾಡುವುದಿಲ್ಲ ಎಂದು ಸೋಶಿಯಲ್ ಮೀಡಿಯಾ ಮೂಲಕ ಅಧಿಕೃತಪಡಿಸಿದ್ದಾರೆ. ಸುದೀಪ್ ಈ ಪೋಸ್ಟ್ ಪ್ರತಿಯೊಬ್ಬರಿಗೂ ಅಚ್ಚರಿ ಮೂಡಿಸಿದೆ. ‘ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಕ್ಕೆ ನಿಮಗೆಲ್ಲ…
ಎನ್‌ಸಿಪಿ ಹಿರಿಯ ಮುಖಂಡ, ಡಿಸಿಎಂ ಅಜಿತ್ ಪವಾರ್ ಆಪ್ತ ಹಾಗೂ ಬಾಲಿವುಡ್ ತಾರೆಯರ ಜೊತೆಗೆ ಉತ್ತಮ ಸ್ನೇಹ ಹೊಂದಿದ್ದ ರಾಜಕಾರಣಿ ಬಾಬಾ ಸಿದ್ದಿಕಿ ಅವರನ್ನು ಸುಪಾರಿ ಹಂತಕರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಇವರ ಹತ್ಯೆಗೆ ಬಾಲಿವುಡ್ ಮಂದಿ ಬೆಚ್ಚಿ ಬಿದ್ದಿದ್ದಾರೆ. ಸಲ್ಮಾನ್ ಖಾನ್ ಗೆ ಹೆಚ್ಚು ಆಪ್ತರಾಗಿದ್ದ ಬಾಬಾ ಸಿದ್ದಿಕಿ ಕೊಲೆಯಿಂದ ಸಲ್ಮಾನ್ ಖಾನ್ ಕಂಗಲಾಗಿದ್ದಾರೆ. ಪೊಲೀಸರು ಈ ಘಟನೆಯ ತನಿಖೆ ನಡೆಸುತ್ತಿರುವಾಗಲೇ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನವರು ಈ ಹತ್ಯೆಯ ಹೊಣೆ ಹೊತ್ತುಕೊಂಡಿದ್ದಾರೆ. ಈ ಮಧ್ಯೆ ಮತ್ತೊಂದು ಪೋಸ್ಟ್ ವೈರಲ್ ಆಗಿದೆ. ಲಾರೆನ್ಸ್ ಬಿಷ್ಣೋಯ್ಸ್ ಗ್ಯಾಂಗ್ನವರು ಎನ್ನಲಾದ ವ್ಯಕ್ತಿಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಅದರ ಸ್ಕ್ರೀನ್ ಶಾಟ್ ವೈರಲ್ ಆಗುತ್ತಿದೆ. ಎಲ್ಲರಿಗೂ ತಿಳಿದಿರುವಂತೆ ಬಾಬಾ ಸಿದ್ಧಿಕಿ ಮತ್ತು ಸಲ್ಮಾನ್ ಖಾನ್ ನಡುವೆ ಆಪ್ತ ಒಡನಾಟ ಇತ್ತು. ಅನೇಕ ಸಂದರ್ಭಗಳಲ್ಲಿ ಬಾಬಾ ಸಿದ್ಧಿಕಿ ಮನೆಗೆ ಸಲ್ಲು ತೆರಳಿದ್ದರು. ಸಲ್ಮಾನ್ ಖಾನ್ಗೆ ಸಹಾಯ ಮಾಡಿದ್ದಕ್ಕಾಗಿ ಸಿದ್ಧಿಕಿಯ ಹತ್ಯೆ ನಡೆದಂತಿದೆ. ಫೇಸ್ಬುಕ್ ಪೋಸ್ಟ್ ಮೂಲಕ…