Author: Author AIN

ಬೆಂಗಳೂರು: ಚೀನಾದಲ್ಲಿ ಹೆಚ್ಚುತ್ತಿರುವ HMPV ವೈರಸ್ ತಡೆಗಟ್ಟುವ ಮುಂಜಾಗ್ರತಾ ಕ್ರಮದ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಟಾಸ್ಕ್ ಫೋರ್ಸ್ ಸದಸ್ಯರೊಂದಿಗೆ ಆರೋಗ್ಯ ಸೌಧದಲ್ಲಿ ಸಭೆ ನಡೆಸಿದ್ರು. ಸಭೆ ನಂತರ ಸುದ್ದಿಗೋಷ್ಟಿ ನಡೆಸಿದ ದಿನೇಶ್ ಗುಂಡೂರಾವ್ HMPV ವೈರಸ್ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಅಗ್ತಿದೆ ಜನ ಕೂಡ ಅತಂಕ ಪಟ್ಟಿದಾರೆ ಅಂತ ಮಾಹಿತಿ ಬಂದಿದೆ. ಸದ್ಯ ಎರಡು ಕೇಸ್ ನಗರದ ಖಾಸಗಿ ಆಸ್ಪತ್ರೆ ಯಲ್ಲಿ ಪತ್ತೆಯಾಗದೆ, ಈ ವೈರಸ್ ನಮ್ಮ ದೇಶದಲ್ಲಿ ಮೊದಲ್ಲಿನಿಂದ ಇದೆ ಇದು ಮೊದಲು ಅಲ್ಲ. ಉಸಿರಾಟದ ತೊಂದ್ರೆ, ಶ್ವಾಸಕೋಶದ ತೊಂದ್ರೆ, ಹೀಗೆ ಹಲವು ರೀತಿಯಲ್ಲಿ ಬರುತ್ತೆ. https://ainlivenews.com/the-government-is-providing-90-subsidy-for-the-purchase-of-mini-power-tiller-apply-today-2/ ಇದು ಹಾನಿಕರ ವೈರಸ್ ಅಲ್ಲ ಇದು 2001 ರಲ್ಲಿ ಪತ್ತೆ ಅಗಿತ್ತು. ಕೆಲ ತಪಾಸಣೆ ಮಾಡಿದಾಗ ಕೇವಲ ಒಂದು ಪರ್ಸೆಂಜ್ ಬರುತ್ತೆ ಅಂತ ಗೊತ್ತಾಗಿದೆ, ವೈರಸ್ ಬಂದ ಮಕ್ಕಳಲ್ಲಿ ಒಬ್ಬರು ಡಿಸ್ಚಾರ್ಜ್ ಅಗಿದಾರೆ. ಮತ್ತೊಂದು ಮಗು ನಾಳೆ ಡಿಸ್ಚಾರ್ಜ್ ಅಗುತ್ತೆ, ಸದ್ಯ…

Read More

ತೆಲುಗು ನಟ ನಂದ ಮೂರಿ ಬಾಲಕೃಷ್ಣ ನಟನೆಯ ‘ಡಾಕು ಮಹಾರಾಜ್’ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಟ್ರೈಲರ್ ನೋಡಿ ಫ್ಯಾನ್ಸ್ ಫುಲ್ ದಿಲ್ ಖುಷ್ ಆಗಿದ್ದಾರೆ. ಸದ್ಯ ರಿಲೀಸ್ ಆಗಿರೋ ಟ್ರೈಲರ್ ನಲ್ಲಿ ಬಾಲಯ್ಯ ಆ್ಯಕ್ಷನ್ ಸೀಕ್ವೆನ್ಸ್‌ನಲ್ಲಿ ಅಬ್ಬರಿಸಿದ್ದಾರೆ. ಟ್ರೈಲರ್‌ನಲ್ಲಿ ಖಳನಟ ಬಾಬಿ ಡಿಯೋಲ್‌ಗೆ ಠಕ್ಕರ್ ಕೊಟ್ಟು ಬಾಲಯ್ಯ ಮಾಸ್ ಅವತಾರದಲ್ಲಿ ಮಿಂಚಿದ್ದಾರೆ. ವಿಭಿನ್ನ ಪಾತ್ರದಲ್ಲಿ ನಟ ಕಾಣಿಸಿಕೊಂಡಿದ್ದಾರೆ. ಬಾಲಯ್ಯ ಜೊತೆ ಪ್ರಜ್ಞಾ ಜೈಸ್ವಾಲ್, ಊರ್ವಶಿ ರೌಟೇಲಾ ಸೇರಿದಂತೆ ನಟಿಸಿದ್ದಾರೆ. ‘ಡಾಕು ಮಹಾರಾಜ್’ ಚಿತ್ರವನ್ನು ಬಾಬಿ ಕೊಲ್ಲಿ ನಿರ್ದೇಶನ ಮಾಡಿದ್ದು, ಈಗಾಗಲೇ ಊರ್ವಶಿ ಜೊತೆಗಿನ ಬಾಲಯ್ಯ ಸಾಂಗ್ ನೋಡುಗರ ಗಮನ ಸೆಳೆದಿದೆ. ಈ ಸಿನಿಮಾಗಾಗಿ ಫ್ಯಾನ್ಸ್  ಕಾತುರದಿಂದ ಕಾಯ್ತಿದ್ದಾರೆ.

Read More

ಗಾಂಧೀನಗರ: ಚೀನಾದಲ್ಲಿ ಪತ್ತೆಯಾಗಿರುವ ಹೊಸ ವೈರಸ್‌ ಪ್ರಪಂಚದಾದ್ಯಂತ ಭಾರೀ ಸದ್ದು ಮಾಡ್ತಿದೆ. ಕೊರೊನಾ ವೈರಸ್‌ ನಂತರ ಚೀನಾದಲ್ಲಿ ಹೊಸ ವೈರಸ್‌‌ ಪತ್ತೆಯಾಗಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ. ಇದೀಗ ಗುಜರಾತ್‌ನಲ್ಲಿ  ಮೊದಲ ಹೆಚ್‌ಎಮ್‌ಪಿವಿ ಸೋಂಕು ವರದಿಯಾಗಿದೆ. ಚೀನಾದಲ್ಲಿ ಕಾಡುತ್ತಿರುವ ಹ್ಯೂಮನ್ ಮೆಟಾನ್ಯೂಮೋ ವೈರಸ್ ಭಾರತಕ್ಕೂ ಕಾಲಿಟ್ಟಿದ್ದು, ಬೆಂಗಳೂರಿನ ಎರಡು ಮಕ್ಕಳಲ್ಲಿ ವೈರಸ್ ಪತ್ತೆಯಾಗಿದೆ. ಇದೀಗ ಗುಜರಾತ್‌ನಲ್ಲಿ ಮೊದಲ ಸೋಂಕು ವರದಿಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಕರ್ನಾಟಕದಲ್ಲಿ ಎರಡು ಹೆಚ್‌ಎಮ್‌ಪಿವಿ ಪ್ರಕರಣಗಳನ್ನು ದೃಢಪಡಿಸಿದ ಕೆಲವೇ ಗಂಟೆಗಳಲ್ಲಿ ಗುಜರಾತ್‌ನಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದೆ. ಇದು ಗುಜರಾತಿನ ಮೊದಲ ಪ್ರಕರಣವಾಗಿದ್ದು, 2 ವರ್ಷದ ಮಗುವಿನಲ್ಲಿ ವೈರಸ್ ಪತ್ತೆಯಾಗಿದೆ. ರೋಗಿಯನ್ನು ಅಹಮದಾಬಾದ್‌ನ ಚಂದ್‌ಖೇಡಾ ಪ್ರದೇಶದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. https://ainlivenews.com/here-are-some-tips-to-keep-your-cracked-coconut-from-spoiling-doing-so-will-keep-it-fresh-for-a-long-time/ ಈಗಾಗಲೇ ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ ಪತ್ತೆಯಾಗಿದ್ದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ದೃಢಪಡಿಸಿದೆ. 3 ತಿಂಗಳ ಮಗು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೆ, 8 ತಿಂಗಳ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಕೆ ಕಾಣುತ್ತಿದೆ.…

Read More

ಬಿಸಿಲೂರು ಕಲಬುರಗಿಯಲ್ಲಿ ಇವತ್ತು ಬುಲ್ ಬುಲ್ ರಚಿತಾರಾಮ್ ಹವಾ ಜೋರಾಗಿತ್ತು..ನಗರದಲ್ಲಿನ ಖಾಸಗಿ ಶಾಪಿಂಗ್ ಮಾಲ್ ಉದ್ಘಾಟನೆಗೆ ಆಗಮಿಸಿದ್ದ ರಚಿತಾರಾಮ್ ನೋಡಲು ಜನಾ ಜಾತ್ರೆಯಂತೆ ಸೇರಿತ್ತು.. https://ainlivenews.com/here-are-some-tips-to-keep-your-cracked-coconut-from-spoiling-doing-so-will-keep-it-fresh-for-a-long-time/ ವೇದಿಕೆಗೆ ಎಂಟ್ರಿ ಕೊಡ್ತಿದ್ದಂಗೆ ಫ್ಯಾನ್ಸ್ D ಬಾಸ್ D ಬಾಸ್ ಅಂತ ಕೂಗಾಡಿದ್ರು..ಇದೇವೇಳೆ ಮಾತನಾಡಿದ ರಚಿತಾರಾಮ್ ನಿಮಗೆ D ಬಾಸ್ ಮೇಲೆ ಪ್ರೀತಿ ಇದ್ರೆ ನನ್ನ ಮೇಲೆ ಪ್ರೀತಿ ಇದ್ರೆ 10 ನೇ ತಾರೀಕು ಬಿಡುಗಡೆಯಾಗ್ತಿರೋ ಸಂಜೆ ವೆಡ್ಸ್ ಗೀತಾ part-2 ನೋಡಿ ಅಂತ ಮನವಿ ಮಾಡಿದ್ರು…

Read More

ಬೆಂಗಳೂರು, ಜನವರಿ 6 : ರಾಜ್ಯದಲ್ಲಿ ಹೆಚ್ ಎಂ ಪಿ ವಿ ವೈರಸ್ ನ ಎರಡು ಪ್ರಕರಣ ಪತ್ತೆಯಾದ ಹಿನ್ನಲೆಯಲ್ಲಿ , ಸೋಂಕು ಹರಡದಂತೆ ಸರ್ಕಾರ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಚೈನಾ ದೇಶದಲ್ಲಿ ಹೆಚ್ ಎಂ ಪಿ ವಿ ವೈರಸ್ ಕಾಣಿಸಿಕೊಂಡಿದ್ದು, ಕರ್ನಾಟಕದಲ್ಲಿ ಈ ವೈರಸ್ ಪತ್ತೆಯಾಗಿರುವ ಮಾಹಿತಿ ದೊರೆತಿದೆ. ಆದ್ದರಿಂದ ಈ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ. ಆರೋಗ್ಯ ಸಚಿವರು ಈಗಾಗಲೇ ಸಭೆ ನಡೆಸುತ್ತಿದ್ದು, ವೈರಸ್ ತಡೆಗೆ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದರು. https://ainlivenews.com/here-are-some-tips-to-keep-your-cracked-coconut-from-spoiling-doing-so-will-keep-it-fresh-for-a-long-time/ ಸೋಂಕು ತಡೆಯ ಕ್ರಮವಾಗಿ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಪುನ: ಪ್ರಾರಂಭಿಸುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ಆರೋಗ್ಯ ಸಚಿವರು ಸಭೆ ನಡೆಸುತ್ತಿದ್ದು, ರಾಜ್ಯದಲ್ಲಿ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತೀರ್ಮಾನಿಸಲಾಗುವುದು ಎಂದರು. ನಕ್ಸಲರು…

Read More

ಬೆಂಗಳೂರು: ಕೋವಿಡ್ ವೈರಸ್ ಕಾಣಿಸಿಕೊಂಡ ಐದು ವರ್ಷದ ಬಳಿಕ ಮತ್ತೆ ದೇಶದಲ್ಲಿ ವೈರಸ್ ಹಾವಳಿ ಶುರುವಾಗಿದೆ. ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ ಏಕಾಏಕಿ ಚೀನಾದಲ್ಲಿ ಹರಡುತ್ತಿದ್ದು, ಇದೀಗ ಬೆಂಗಳೂರಿಗೂ ಈ ವೈರಸ್ ಎಂಟ್ರಿ ಕೊಟ್ಟಿದೆ. ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ HMPV ವೈರಸ್ ಪತ್ತೆಯಾಗಿದೆ. ಮಗುವಿಗೆ ಜ್ವರ ಬಂದ ಹಿನ್ನೆಲೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿತ್ತು. ಈ ವೇಳೆ ಬ್ಲಡ್ ಟೆಸ್ಟ್ ಮಾಡಿಸಿದಾಗ HMPV ವೈರಸ್ ಪತ್ತೆಯಾಗಿದೆ. ಇನ್ನೂ ಇದರ ಬೆನ್ನಲ್ಲೇ ಆರೋಗ್ಯ ಇಲಾಖೆ ಅಲರ್ಟ್‌ ಆಗಿದ್ದು, ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಅಧಿಕಾರಿಗಳು ತುರ್ತು ವರ್ಚುವಲ್ ಸಭೆ ನಡೆಸುತ್ತಿದ್ದಾರೆ. ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿನ ಮುಂಜಾಗೃತ ಕ್ರಮದ ಕುರಿತು ಸಭೆ ನಡೆಸಲಾಗುತ್ತಿದೆ. ಸಭೆಯಲ್ಲಿ ಇಲಾಖೆ ನಿರ್ದೇಶಕರು, ಜಂಟಿ ನಿರ್ದೇಶರು ಭಾಗಿಯಾಗಿದ್ದಾರೆ. https://ainlivenews.com/here-are-some-tips-to-keep-your-cracked-coconut-from-spoiling-doing-so-will-keep-it-fresh-for-a-long-time/ ಈ ಬಗ್ಗೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಮಾಹಿತಿ ನೀಡಿದ್ದು, HMPV ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. HMPV ವೈರಸ್ ಭಾರತದಲ್ಲೂ ಇದೆ. ಆದ್ರೆ ಅದು ಮ್ಯೂಟೆಷನ್ ಆಗಿದಿಯಾ ಅನ್ನೋ ಬಗ್ಗೆ…

Read More

ಬೆಂಗಳೂರು:  ಬೆಂಗಳೂರಿನಲ್ಲಿ ಇಬ್ಬರು ಶಿಶುಗಳಿಗೆ HMPV ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ವೈರಸ್ ಭಾರತದಲ್ಲಿ ಸಾಮಾನ್ಯವಾಗಿದ್ದು, ಚೀನಾದಲ್ಲಿ ಪತ್ತೆಯಾಗಿರುವ ಮ್ಯುಟೇಟೆಡ್ ವೈರಸ್‌ನೊಂದಿಗೆ ಇದಕ್ಕೆ ಸಂಬಂಧ ಇದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇನ್ನೂ HMPV ವೈರಸ್ ಬಗ್ಗೆ ಬಿಜೆಪಿ ಶಾಸಕ ಡಾ ಸಿಎನ್ ಅಶ್ವಥ್ ನಾರಾಯಣ ಪ್ರತಿಕ್ರಿಯಿಸಿದ್ದಾರೆ. https://ainlivenews.com/here-are-some-tips-to-keep-your-cracked-coconut-from-spoiling-doing-so-will-keep-it-fresh-for-a-long-time/ ಬೆಂಗಳೂರಿನಲ್ಲಿ ಮಾತನಾಡಿದ ಅವರು,  ವೈರಸ್ ಬಗ್ಗೆ ತಾನೇನೂ ಹೇಳಲಾಗಲ್ಲ, ಅದು ಯಾವ ವೇರಿಯಂಟ್ ಮತ್ತು ಕೊರೋನಾ ವೈರಸ್ ರೂಪಾಂತರ ಹೊಂದಿರಬಹುದುದಾದ ಸಾಧ್ಯತೆಯನ್ನು ಪತ್ತೆ ಮಾಡಲು ರಾಜ್ಯದಲ್ಲಿ ಸಾಕಷ್ಟು ವೈರಾಲಜಿ ಸಂಸ್ಥೆಗಳಿವೆ, ಇನ್ನೂ ಗಾಢ ನಿದ್ರೆಯಲ್ಲಿರುವ ಸರ್ಕಾರ ಎಚ್ಚೆತ್ತುಕೊಂಡು ವೈರಸ್ ಹರಡುವುದನ್ನು ತಡೆಯಲು ಮುಂದಾಗಬೇಕು, ಸರ್ಕಾರಕ್ಕೆ ಸೇವಾ ಶುಲ್ಕ ಸಂಗ್ರಹಿಸುವುಷ್ಟೇ ಗೊತ್ತು ಸೇವೆ ಒದಗಿಸುವುದು ಗೊತ್ತಿಲ್ಲ ಎಂದು ಹೇಳಿದರು.  

Read More

ವಾಷಿಂಗ್ಟನ್: ಕಳೆದ ಕೆಲ ದಿನಗಳಿಂದ ದಟ್ಟವಾದ ಹಿಮಪಾತ, ಮಂಜುಗಡ್ಡೆ, ಶೀತಗಾಳಿ ಹಾಗೂ ತಾಪಮಾನ ಗಣನೀಯವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ಕೇಂದ್ರ ಅಮೆರಿಕದ ಬಹುತೇಕ ಕಡೆಗಳಲ್ಲಿ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ. ಶೀತಗಾಳಿಯಿಂದಾಗಿ ದಶಕದಲ್ಲೇ ಅತಿಹೆಚ್ಚು ಹಿಮಪಾತವಾಗುವ ಸಾಧ್ಯತೆ ಇದ್ದು ಈ ಹಿನ್ನೆಲೆಯಲ್ಲಿ 2 ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಕಾನ್ಸಸ್, ಪಶ್ಚಿಮ ನೆಬ್ರಸ್ಕಾ ಮತ್ತು ಇಂಡಿಯಾನಾ ಪ್ರದೇಶದ ಎಲ್ಲ ಪ್ರಮುಖ ಹೆದ್ದಾರಿಗಳಲ್ಲಿ ದಟ್ಟವಾದ ಮಂಜು ಹಾಗೂ ಮಂಜುಗಡ್ಡೆಯ ಹೊದಿಕೆ ಕಂಡುಬರುತ್ತಿದೆ. ಸಂಚಾರದಲ್ಲಿ ಸಿಲುಕಿಕೊಳ್ಳುವ ವಾಹನ ಸವಾರರ ರಕ್ಷಣೆಗಾಗಿ ರಾಷ್ಟ್ರೀಯ ಪಡೆ ಕಾರ್ಯನಿರ್ವಹಿಸುತ್ತಿದೆ. ಕಾನ್ಸಸ್ ಮತ್ತು ಮಿಸ್ಸೋರಿ ಭಾಗದಲ್ಲಿ ಕನಿಷ್ಠ 8 ಇಂಚು ಮಂಜುಗಡ್ಡೆಯ ಪದರ ನಿರ್ಮಾಣವಾಗುವ ಸಾಧ್ಯತೆಯನ್ನು ರಾಷ್ಟ್ರೀಯ ಹವಾಮಾನ ಸೇವೆಗಳ ವಿಭಾಗ ಅಂದಾಜಿಸಿದೆ. ಈ ಮೈಕೊರೆಯುವ ಚಳಿಯ ತೀವ್ರತೆ ಹೆಚ್ಚಲಿದ್ದು, 72 ಕಿ.ಮೀ ವೇಗದ ಶೀತಗಾಳಿ ಬೀಸುವ ನಿರೀಕ್ಷೆ ಇದೆ. ನ್ಯೂಜೆರ್ಸಿಯಲ್ಲಿ ಮಂಗಳವಾರವರೆಗೂ ಈ ಪರಿಸ್ಥಿತಿ ಮುಂದುವರಿಯಲಿದೆ. “ಈ ಭಾಗದ ಹಲವು ಪ್ರದೇಶಗಳು ಭಾರಿ ಹಿಮಪಾತವನ್ನು ಎದುರಿಸುತ್ತಿದ್ದು, ಬಹುಶಃ ಇದು ಕನಿಷ್ಠ…

Read More

ಒಟ್ಟಾವ: ಇಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಲಿಬರಲ್ ಪಾರ್ಟಿ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಜಸ್ಟಿನ್ ಟ್ರೂಡೊ ನಿಖರವಾಗಿ ಯಾವಾಗ ರಾಜೀನಾಮೆ ಸಲ್ಲಿಸುತ್ತಾರೆ ಎಂದು ನಮಗೆ ತಿಳಿದಿಲ್ಲ. ಆದರೆ, ಬುಧವಾರ ನಡೆಯಲಿರುವ ಪಕ್ಷದ ರಾಷ್ಟ್ರೀಯ ಸಭೆಗೂ ಮುನ್ನ ರಾಜೀನಾಮೆ ನಿರ್ಧಾರ ಪ್ರಕಟಿಸುವ ನಿರೀಕ್ಷೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಟ್ರೂಡೋ ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ ನೀಡಲು ಪ್ರಧಾನ ಮಂತ್ರಿ ಕಚೇರಿ ನಿರಾಕರಿಸಿದೆ. ಒಂದು ವೇಳೆ ಟ್ರೂಡೊ ತಮ್ಮ ಹುದ್ದೆಯನ್ನು ತಕ್ಷಣವೇ ತೊರೆಯಲಿದ್ದಾರೆಯೊ ಅಥವಾ ನೂತನ ನಾಯಕನ ಆಯ್ಕೆಯಾಗುವವರೆಗೂ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆಯೊ ಎಂಬುದಿನ್ನೂ ಸ್ಪಷ್ಟವಾಗಿಲ್ಲ ಎಂದೂ ವರದಿಗಳು ಹೇಳಿವೆ. 2013ರಲ್ಲಿ ಲಿಬರಲ್ ಪಾರ್ಟಿಯು ತೀವ್ರ ಬಿಕ್ಕಟ್ಟಿನಲ್ಲಿದ್ದಾಗ ಹಾಗೂ ಹೌಸ್ ಆಫ್ ಕಾಮನ್ಸ್ ನಲ್ಲಿ ಮೂರನೆಯ ಸ್ಥಾನಕ್ಕೆ ಕುಸಿದಿದ್ದಾಗ ಜಸ್ಟಿನ್ ಟ್ರೂಡೊ ಲಿಬರಲ್ ಪಾರ್ಟಿಯ ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದರು. ಪ್ರಸ್ತುತ ಲಿಬರಲ್ ಪಕ್ಷವು ಕೆನಡಾ ಸಂಸತ್ತಿನ ಹೌಸ್ ಆಫ್ ಕಾಮನ್ಸ್‌ನಲ್ಲಿ 153 ಸಂಸದರನ್ನು ಹೊಂದಿದೆ. ಕೆನಡಾದ…

Read More

ರಾಕಿಂಗ್ ಸ್ಟಾರ್ ಯಶ್ ಬರ್ತಡೇಗೆ ಇನ್ನೂ ಎರಡು ದಿನ ಮಾತ್ರವೇ ಭಾಕಿ ಇದೆ. ಜನವರಿ 8ರಂದು ಯಶ್ ಹುಟ್ಟು ಹಬ್ಬವಿದ್ದು ಈ ಹಿನ್ನೆಲೆಯಲ್ಲಿ ಟಾಕ್ಸಿಕ್ ಚಿತ್ರತಂಡ ಏನಾದರು ಅಪ್ ಡೇಟ್ ನೀಡಬಹುದಾ ಎಂದು ಅಭಿಮಾನಿಗಳು ಕಾಯ್ತಿದ್ದಾರೆ. ಅದು ನಿಜವಾಗಿದ್ದು ನಿರ್ಮಾಣ ಸಂಸ್ಥೆ ‘ಕೆವಿಎನ್ ಪ್ರೊಡಕ್ಷನ್ಸ್’ ಈ ಬಗ್ಗೆ ಅಪ್​ಡೇಟ್ ಕೊಟ್ಟಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಕೂಡ ಥ್ರಿಲ್ ಆಗಿದ್ದು ಸದ್ಯ ಚಿತ್ರದ ಪೋಸ್ಟರ್ ಗಮನ ಸೆಳೆಯುತ್ತಿದೆ. ರಾಕಿಂಗ್ ಸ್ಟಾರ್ ಬರ್ತ್​ಡೇ ಪ್ರಯುಕ್ತ ಜನವರಿ 8ರ ಬೆಳಿಗ್ಗೆ 10.25ಕ್ಕೆ ಸಿನಿಮಾದ ತುಣುಕನ್ನು ರಿಲೀಸ್ ಮಾಡುವ ಆಲೋಚನೆಯಲ್ಲಿ ‘ಟಾಕ್ಸಿಕ್’ ತಂಡ ಇದೆ. ಅಂದು ದೊಡ್ಡ ಅಪ್​ಡೇಟ್ ಸಿಗೋದು ಪಕ್ಕಾ ಎಂದು ಟಾಕ್ಸಿಕ್ ಟೀಂ ತಿಳಿಸಿದೆ. ಈ ವಿಚಾರ ಯಶ್ ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿದೆ. ಸದ್ಯ ರಿಲೀಸ್ ಆಗಿರೋ ಪೋಸ್ಟರ್​​ನಲ್ಲಿ ಯಶ್ ಅವರು ಹಳೆಯ ಕಾಲದ ಕಾರಿನ ಮೇಲೆ ನಿಂತಿದ್ದಾರೆ. ಅವರ ಬಾಯಲ್ಲಿ ಸಿಗರೇಟ್ ಇದೆ. ತಲೆಗೆ ಹ್ಯಾಟ್ ಧರಿಸಿದ್ದಾರೆ. ಇದು ಅವರ ಗೆಟಪ್​…

Read More