ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ಕುಟುಂಬದ ಕಲಹ ಇದೀಗ ಬೀದಿಗೆ ಬಂದಿದೆ. ಟೆಲಿವಿಷನ್ ನಟಿ ಮುಸ್ಕಾನ್ ನ್ಯಾನ್ಸಿ ಜೇಮ್ಸ್ ತನ್ನ ಪತಿ ಪ್ರಶಾಂತ್ ಮೋಟ್ವಾನಿ ವಿರುದ್ಧ ದೂರು ನೀಡಿದ್ದಾರೆ. ದೂರಿನಲ್ಲಿ ಪ್ರಶಾಂತ್ ತಾಯಿ ಮೋನಾ ಮೋಟ್ವಾನಿ ಹಾಗೂ ಸಹೋದರಿ ಹನ್ಸಿಕಾ ಮೋಟ್ವಾನಿ ಹೆಸರನ್ನು ಕೂಡ ಉಲ್ಲೇಖಿಸಿದ್ದಾರೆ. ಕೌಟುಂಬಿಕ ಕಿರುಕುಳ ನೀಡಿದ ಆರೋಪ ಮಾಡಿರುವ ಮುಸ್ಕಾನ್, ಆಸ್ತಿ ವಿಚಾರದಲ್ಲೂ ನನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.ಈ ಬಗ್ಗೆ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ ಕಾಯ್ದೆ 498-ಎ, 323, 504, 506, ಮತ್ತು 34ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ನನ್ನ ಪತಿ ನನಗೆ ಕಿರುಕುಳ ನೀಡುತ್ತಾರೆ. ದುಬಾರಿ ಗಿಫ್ಟ್ಗಳನ್ನು ನೀಡುವಂತೆ ಹಾಗೂ ಹಣವನ್ನು ನೀಡುವಂತೆ ಪೀಡಿಸುತ್ತಾರೆ ಎಂದು ಆರೋಪಿಸಿದ್ದಲ್ಲದೇ ಆಸ್ತಿ ವಿಚಾರದಲ್ಲಿ ನನಗೆ ಮೋಸ ಮಾಡಿದ್ದಾರೆ ಎಂದು ಕೂಡ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಮುಸ್ಕಾನ್ ನಾನು ಕಾನೂನು ಹೋರಾಟ ಮಾಡುತ್ತಿದ್ದೇನೆ. ಪ್ರಕರಣ ದಾಖಲಾಗಿದೆ ಹೀಗಾಗಿ…
Author: Author AIN
ಮಾರ್ಚ್ 1ರಿಂದ ಮಾರ್ಚ್ 8ರವರೆಗೆ 16ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಗೃಹ ಕಚೇರಿ ಕೃಷ್ಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಚಲನಚಿತ್ರೋತ್ಸವ ನಡೆಯುತ್ತಿದೆ. ಮಾರ್ಚ್1ರಿಂದ ಪ್ರಾರಂಭವಾಗಿ ಮಾರ್ಚ್ 8ರಂದ ಸಮಾರಂಭ ನಡೆಯಲಿದೆ. ಈ ವರ್ಷ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಥೀಮ್‌ನಲ್ಲಿ ಚಲನಚಿತ್ರೋತ್ಸವ ನಡೆಯುತ್ತಿದೆ ಎಂದರು. 60 ಕ್ಕೂ ಹೆಚ್ಚು ದೇಶಗಳ 200 ಚಲನಚಿತ್ರಗಳು 13 ಚಿತ್ರಮಂದಿರದಲ್ಲಿ ಪ್ರದರ್ಶನ ಆಗಲಿವೆ. ಒಟ್ಟು 400 ಶೋಗಳು ಇರಲಿವೆ. ಬೆಂಗಳೂರು ನಾಗರಿಕರಿಗೆ ಬೇರೆ ಬೇರೆ ದೇಶ, ಭಾಷೆ ನೋಡೋ ಅವಕಾಶ ಸಿಗಲಿದೆ. ಬೆಂಗಳೂರು ನಾಗರೀಕರಿಗೆ ಸುವರ್ಣ ಅವಕಾಶ ಅಂತ ತಿಳಿಸಿದರು. ಕಳೆದ ವರ್ಷ 7 ಕೋಟಿ ರೂ. ಚಲನಚಿತ್ರೋತ್ಸವಕ್ಕೆ ನೀಡಲಾಗಿತ್ತು. ಈ ವರ್ಷ 9 ಕೋಟಿ ರೂ. ನೀಡಲಾಗುತ್ತದೆ ಎಂದು ಸಿಎಂ ಮಾಹಿತಿ ನೀಡಿದರು. ಚಿತ್ರೋತ್ಸವಕ್ಕೆ ಯಾರು ಮುಖ್ಯ ಅತಿಥಿಗಳು (ರಾಯಭಾರಿ) ಆಗಬೇಕು ಅಂತ ಸಮಿತಿಯೇ ತೀರ್ಮಾನಿಸುತ್ತದೆ. ರಾಜ್ಯಪಾಲ ಗೆಹ್ಲೋಟ್ ಸಮಾರೋಪ…
ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಸಿನಿಮಾದ ಪ್ರೀಮಿಯರ್ ವೇಳೆ ನಡೆದ ಕಾಲ್ತುಳಿತದಲ್ಲಿ ಮಹಿಳೆ ಸಾವು ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಘಟನೆಯ ಬಳಿಕ ಚಿತ್ರತಂಡಕ್ಕೆ ಭಯ ಶುರುವಾಗಿದೆ. ಅಭಿಮಾನಿಗಳ ಸಾವನ್ನು ನಿರ್ಮಾಪಕರು ಹಾಗೂ ತಂಡದವರು ಗಂಭೀರವಾಗಿ ಸ್ವೀಕರಿಸುತ್ತಿದೆ. ಇದೀಗ ಗೇಮ್ ಚೇಂಜರ್ ಸಿನಿಮಾ ತಂಡ ಅಭಿಮಾನಿಗಳ ಸಾವಿಗೆ ಪರಿಹಾರ ಘೋಷಿಸಿದೆ. ಆಂಧ್ರ ಪ್ರದೇಶದ ರಾಜಮಹೇಂದ್ರವರಂನಲ್ಲಿ ಶನಿವಾರ (ಜನವರಿ 4) ಗೇಮ್ ಚೇಂಜರ್ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ನಡೆದಿತ್ತು. ಈ ಇವೆಂಟ್ಗೆ ಬಂದಿದ್ದ ಕಾಕಿನಾಡ ಜಿಲ್ಲೆಯ ಮಣಿಕಂಠ (23) ಮತ್ತು ಚರಣ್ (22) ಕಾರ್ಯಕ್ರಮ ಮುಗಿಸಿ ವಾಪಸ್ ಆಗುವ ವೇಳೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ವಿಚಾರ ತಿಳಿದ ತಕ್ಷಣ ನಿರ್ಮಾಪಕ ದಿಲ್ ರಾಜು ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ್ದು ಪರಿಹಾರ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ದಿಲ್ ರಾಜು, ‘ಗೇಮ್ ಚೇಂಜರ್ ಪ್ರೀ ರಿಲೀಸ್ ಈವೆಂಟ್ ತುಂಬಾ ಅದ್ಧೂರಿಯಾಗಿ ನಡೆಯಿತು ಎಂದು ಸಂತಸ ಪಡುತ್ತಿರುವ ಹೊತ್ತಿನಲ್ಲಿ…
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಅವರ ಗ್ಯಾಂಗ್ ನ 17 ಸದಸ್ಯರು ಏಳು ತಿಂಗಳು ಜೈಲು ವಾಸ ಅನುಭವಿಸಿ ಹೊರ ಬಂದಿದ್ದಾರೆ. ಈ ಮಶ್ಯೆ ದರ್ಶನ್ ಅವರಿಗೆ ಹೊಸ ಸಂಕಷ್ಟ ಎದುರಾಗುವ ಸಾಧ್ಯತೆ ಇದ್ದು , ದರ್ಶನ್ಗೆ ನೀಡಿರುವ ಬೇಲ್ ರದ್ದು ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ಒಟ್ಟು 7 ಆರೋಪಿಗಳ ಜಾಮೀನು ರದ್ದು ಮಾಡುವಂತೆ ಕೋರಿ ಪೊಲೀಸರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮುಂದಿನ ವಾರ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆ ಇದ್ದು ಇದು ದರ್ಶನ್ ಗೆ ಮತ್ತಷ್ಟು ತಲೆನೋವು ತಂದೊಡ್ಡಿದೆ. ನಟಿ ಹಾಗೂ ದರ್ಶನ್ ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದಾನೆ ಎಂಬ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್ ಎಂಡ್ ಗ್ಯಾಂಗ್ ಸದಸ್ಯರನ್ನು ಬಂಧಿಸಲಾಗಿತ್ತು. ಈ ಮಧ್ಯೆ…
ಎಲ್ಲರ ಬಳಿಯೂ ಆಧಾರ್ ಕಾರ್ಡ್ ಹೊಂದಿರುವುದನ್ನು ಕಡ್ಡಾಯಗೊಳಿಸಿತ್ತು ಸರ್ಕಾರ. ಪ್ಯಾನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಸೇವೆಗಳೊಂದಿಗೆ ಸರ್ಕಾರದ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಇರಬೇಕು. ಅದಕ್ಕಾಗಿಯೇ ಇದು ಬಹಳ ಮುಖ್ಯವಾದ ದಾಖಲೆಯಾಗಿದೆ. ಆಧಾರ್ ಕಾರ್ಡ್ ಅನ್ನು ಗುರುತಿನ ಚೀಟಿಯಾಗಿಯೂ ಬಳಸಲಾಗುತ್ತದೆ. ಅಂತಹ ಆಧಾರ್ ಕಾರ್ಡ್‌ನಲ್ಲಿ ಹೆಸರು, ಹುಟ್ಟಿದ ದಿನಾಂಕ, ಕುಟುಂಬದ ಹೆಸರು, ವಿಳಾಸ, ಲಿಂಗ ಇತ್ಯಾದಿ ತಪ್ಪುಗಳಿದ್ದರೆ ನೀವು ತೊಂದರೆಗೆ ಸಿಲುಕುತ್ತೀರಿ. ಇದನ್ನು ಸರಿಪಡಿಸಬಹುದು ಆದರೆ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಹೆಸರು, ಹುಟ್ಟಿದ ದಿನಾಂಕ ಅಥವಾ ಇತರ ವಿವರಗಳನ್ನು ಪದೇ ಪದೇ ಬದಲಾಯಿಸಬಹುದು ಎಂದು ನೀವು ಭಾವಿಸಿದರೆ ನೀವು ತಪ್ಪು, ಏಕೆಂದರೆ ಆಧಾರ್ ಕಾರ್ಡ್‌ನಲ್ಲಿ ಯಾವುದೇ ಬದಲಾವಣೆಗೆ ಒಂದು ಮಿತಿ ಇದೆ, ಅದರ ನಂತರ ಅದನ್ನು ಬದಲಾಯಿಸಲಾಗುವುದಿಲ್ಲ. ಆಧಾರ್ ಕಾರ್ಡ್‌ನಲ್ಲಿ ಯಾವ ಮಾಹಿತಿಯನ್ನು ಎಷ್ಟು ಬಾರಿ ಬದಲಾಯಿಸಬಹುದು ಎಂದು ತಿಳಿಯೋಣ. https://ainlivenews.com/the-government-is-providing-90-subsidy-for-the-purchase-of-mini-power-tiller-apply-today-2/ ಆಧಾರ್ ಕಾರ್ಡ್‌ನಲ್ಲಿ ಬದಲಾವಣೆಗೆ ಒಂದು ಮಿತಿ: 2019 ರ ಮೊದಲು ಆಧಾರ್ ಕಾರ್ಡ್‌ನಲ್ಲಿ ಯಾವುದೇ ಮಾಹಿತಿಯನ್ನು ಬದಲಾಯಿಸಲು…
ಬೆಂಗಳೂರು : ರಾಜ್ಯದ ಗ್ರಾಮೀಣ ಭಾಗದಲ್ಲಿ ಕುರಿ, ಮೇಕೆ ಸಾಕಾಣಿಕೆ ಒಂದು ಮುಖ್ಯವಾದ ಆದಾಯ ತರುವ ಕಸುಬಾಗಿದೆ. ಸಾಮಾನ್ಯವಾಗಿ ಆಡು ಸಾಕಾಣಿಕೆ ಕಸುಬನ್ನು ಭೂರಹಿತ, ಹಿಂದುಳಿದ ವರ್ಗದವರು ಮತ್ತು ಬಡ ಕೃಷಿಕರು ಸಾಕಣೆ ಮಾಡುವುದನ್ನು ಕಾಣುತ್ತೇವೆ. ರಾಜ್ಯವು ತನ್ನಲ್ಲಿರುವ ವಾತಾವರಣ ಹಾಗೂ ಭೂಪ್ರದೇಶಗಳಿಂದಾಗಿ ಒಂದು ಆದರ್ಶಮಯ ಕುರಿ ಸಾಕಣೆ ಪ್ರದೇಶವಾಗಿ ಗಮನಸೆಳೆಯುತ್ತದೆ. ನೀವು ಕುರಿಗಳ ಫಾರಂ ಗಳನ್ನು ಮಾಡುವ ಮೂಲಕ ಒಂದು ಫಾರಂ ನಲ್ಲಿ ನೂರಕ್ಕಿಂತ ಹೆಚ್ಚು ಕುರಿಗಳನ್ನು ಸಾಕಣೆ ಮಾಡಿ ಪೋಷಣೆ ಮಾಡಬಹುದಾಗಿದೆ. ಇನ್ನು ನೀವು ಕೃಷಿ ಮಾಡ್ತಾ ಇದ್ದರೆ ಆಹಾರ ವೆಚ್ಚವು ಕಡಿಮೆಯೇ, ಕುರಿಗಳ ಆಹಾರದಲ್ಲಿ ಅವುಗಳಿಗೆ ಬೇಕಾದ ಸೊಪ್ಪುಗಳು ಕೂಡ ನೀಡುವುದರಿಂದ ಕುರಿಗಳು ಬಲಿಷ್ಠ ವಾಗಿ ಬೆಳೆಯುತ್ತದೆ. ಇನ್ನು ಕುರಿಗಳನ್ನು ಸಾಕುವಾಗ ಹೈಬ್ರಿಡ್ ತಳಿ ಅಥವಾ ಕುಳ್ಳ ಜಾತಿ ಅಂತಹ ಕುರಿಗಳನ್ನು ನೀವು ಸಾಕಣೆ ಮಾಡಿದ್ರೆ ಉತ್ತಮ ಬೇಡಿಕೆಯು ಕೂಡ ಇರಲಿದೆ. ಅದೇ ರೀತಿ ಇಂದು ಸರ್ಕಾರವು ಕೂಡ ಕುರಿ ಸಾಕಾಣಿಕೆಯಲ್ಲಿ ತೊಡಗಿ ಕೊಂಡಿರುವ ರೈತರಿಗೆ ವಿವಿಧ ರೀತಿಯ ಪ್ರೋತ್ಸಾಹದ…
ತುಳಸಿಯು ಹಿಂದೂಗಳಿಗೆ ಅತ್ಯಂತ ಪೂಜ್ಯನೀಯವಾಗಿದ್ದು, ಇದನ್ನು ಬಹಳ ಪವಿತ್ರವೆಂದು ಕರೆಯಲಾಗುತ್ತದೆ. ಮನೆಯಲ್ಲಿ ತುಳಸಿ ಬೆಳೆಯುವುದರಿಂದ ಸೌಂದರ್ಯದ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ತುಳಸಿಯಲ್ಲಿರುವ ಆರೊಮ್ಯಾಟಿಕ್ ಎಲೆಗಳು ಅವುಗಳ ಆಧ್ಯಾತ್ಮಿಕ ಮಹತ್ವ ಮತ್ತು ಅವುಗಳ ಔಷಧೀಯ ಗುಣಗಳಿಂದಾಗಿಯೂ ಬಹಳ ಪ್ರಸಿದ್ಧಿ ಪಡೆದಿದೆ. ತುಳಸಿ ಗಿಡವು ವಿಷ್ಣುವಿಗೆ ಇಷ್ಟವಾಗುತ್ತದೆ ಎಂದು ನಂಬಲಾಗಿದೆ. ಈ ಪವಿತ್ರ ಸಸ್ಯದಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಎಂಬ ನಂಬಿಕೆಯೂ ಇದೆ. ಅದಕ್ಕಾಗಿಯೇ ಬೆಳಿಗ್ಗೆ ಮತ್ತು ಸಂಜೆ ಈ ಗಿಡದ ಬಳಿ ದೀಪ ಹಚ್ಚಿ ಪೂಜೆ ಮಾಡಲಾಗುತ್ತದೆ. ತುಳಸಿ ಪೂಜೆಗೆ ಕೆಲವು ನಿಯಮಗಳನ್ನು ಪಾಲಿಸಬೇಕು. ಅವುಗಳನ್ನು ಅನುಸರಿಸಲು ವಿಫಲವಾದರೆ ಜೀವನದಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದಕ್ಕಾಗಿಯೇ ತುಳಸಿಯನ್ನು ಪೂಜಿಸುವಾಗ ಕೆಲವು ವಿಷಯಗಳನ್ನು ಮರೆಯಬಾರದು. ತುಳಸಿಯು ತನ್ನ ಹಿಂದಿನ ಜನ್ಮದಲ್ಲಿ ಜಲಂಧರನ ಹೆಂಡತಿಯಾಗಿದ್ದಳು ಎಂದು ನಂಬಲಾಗಿದೆ. ಪರಮೇಶ್ವರನು ಜಲಂಧರನ ಹೆಂಡತಿಯನ್ನು ಕೊಲ್ಲುತ್ತಾನೆ. ಹಾಗಾಗಿ ತುಳಸಿ ಬಳಿ ಶಿವಲಿಂಗವನ್ನು ಯಾವುದೇ ಸಂದರ್ಭದಲ್ಲೂ ಇಡಬಾರದು. ಹಾಗೆಯೇ ತಪ್ಪಾಗಿ ತುಳಸಿ ಗಿಡದ ಬಳಿ ಚಪ್ಪಲಿಗಳನ್ನು ಇಡಬೇಡಿ. ಹೀಗೆ ಮಾಡಿದರೆ ಸಂಪತ್ತಿನ…
ಬೆಂಗಳೂರು: ಎಸ್‌ಬಿಐ ATM ಫ್ರಾಂಚೈಸಿ ತೆಗೆದುಕೊಂಡು ತಿಂಗಳಿಗೆ 60,000 ರೂಪಾಯಿಯಿಂದ 70,000 ರೂಪಾಯಿ ಆದಾಯ ಗಳಿಸಲು ಸಾಧ್ಯವಿದೆ. ಎಸ್‌ಬಿಐ ಬ್ಯಾಂಕ್ ಯಾವತ್ತೂ ಎಟಿಎಂ ಮಶೀನ್‌ಗಳನ್ನು ಇನ್‌ಸ್ಟಾಲ್ ಮಾಡುವುದಿಲ್ಲ. ಇದನ್ನು ಇತರ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ.ಕೆಲ ಕಂಪನಿಗಳು ಎಟಿಎಂ ಇನ್‌ಸ್ಟಾಲೇಶನ್ ಫ್ರಾಂಚೈಸಿ ಪಡೆದುಕೊಂಡಿದೆ. ಈ ಕಂಪನಿಗಳು ದೇಶದೆಲ್ಲೆಡೆ ಎಟಿಎಂ ಕೇಂದ್ರಗಳನ್ನು ಗುರುತಿಸಿ ಎಟಿಎಂ ಮಶೀನ್ ಇನ್‌ಸ್ಟಾಲ್ ಮಾಡುತ್ತದೆ. ಇದರಲ್ಲಿ ಆದಾಯಗಳಿಸುವ ಬಗೆ ಹೇಗೆ ಅನ್ನೋದು ಇಲ್ಲಿದೆ. https://ainlivenews.com/the-government-is-providing-90-subsidy-for-the-purchase-of-mini-power-tiller-apply-today-2/ ಆಸಕ್ತರು ಹಾಗೂ ಅರ್ಹರು, ಫ್ರಾಂಚೈಸಿ ಅನುಮತಿ ಪಡೆದಿರುವ ಖಾಸಗಿ ಕಂಪನಿಗಳಿಗೆ ಅರ್ಜಿ ಸಲ್ಲಿಸಿ ಎಟಿಎಂ ಮಶೀನ್ ಸ್ಥಾಪಿಸಬಹುದು. ಎಲ್ಲಾ ದಾಖಲೆ ಪರಿಶೀಲಿಸಿದ ಬಳಿಕ ಕಂಪನಿಗಳು ನೀವು ಗುರಿತಿಸಿದ ಜಾಗದಲ್ಲಿ ಎಟಿಂಎ ಮಶಿನ್ ಇನ್‌ಸ್ಟಾಲ್ ಮಾಡಲಿದೆ. ಬಳಿಕ ತಿಂಗಳಿಗೆ 60 ರಿಂದ 70 ಸಾವಿರ ರೂಪಾಯಿ ಆದಾಯ ಗಳಿಸಲು ಸಾಧ್ಯವಿದೆ. ಬೇಕಾದ ಅರ್ಹತೆ ಹಾಗೂ ಸೌಲಭ್ಯ ನಿಮ್ಮ ಮನವಿ ಪುರಸ್ಕರಿಸುವಾಗ ಎಟಿಎಂ ಮಶಿನ್ ಇನ್‌ಸ್ಟಾಲ್ ಮಾಡಬೇಕಾದ ಸ್ಥಳ ಎಲ್ಲವನ್ನೂ ಗುರುತಿಸಿ ದಾಖಲೆ ನೀಡಬೇಕು. ಕನಿಷ್ಠ 50 ರಿಂದ…
ಸೂರ್ಯೋದಯ – 6:51 ಬೆ ಸೂರ್ಯಾಸ್ತ – 5:53 ಸಂ ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ, ಹೇಮಂತ್ ಋತು, ಪುಷ್ಯ ಮಾಸ, ತಿಥಿ – ಅಷ್ಟಮಿ ನಕ್ಷತ್ರ – ರೇವತಿ ರಾಹು ಕಾಲ – 03:00 ದಿಂದ 04:30 ವರೆಗೆ ಯಮಗಂಡ -09:00 ದಿಂದ 10:30 ವರೆಗೆ ಗುಳಿಕ ಕಾಲ – 12:00 ದಿಂದ 01:30 ವರೆಗೆ ಬ್ರಹ್ಮ ಮುಹೂರ್ತ – 5:15 ಬೆ ದಿಂದ 6:03 ಬೆ ವರೆಗೆ ಅಮೃತ ಕಾಲ – 3:32 ಮ ದಿಂದ 5:03 ಸಂಜೆ ವರೆಗೆ ಅಭಿಜಿತ್ ಮುಹುರ್ತ – 12:00 ಮ ದಿಂದ 12:44 ಮ ವರೆಗೆ ಸಮಾಲೋಚನೆಗಾಗಿ ಕರೆ ಮಾಡಿರಿ. ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ ರಾಶಿ: ಹೈನುಗಾರಿಕೆ ,ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ ಫಾರ್ಮ್ ಹೌಸ್ ಪ್ರಾರಂಭಿಸಬಹುದು. ಸಹೋದರ…
ಬೆಂಗಳೂರು: ಗಂಡ, ಹೆಂಡತಿ ಜೊತೆಗೆ ಇಬ್ಬರು ಮುದ್ದಾದ ಮಕ್ಕಳ ಚಂದದ ಕುಟುಂಬ.ಅದೇನಾಯ್ತೋ ಏನೋ,ಇಂದು ಬೆಳಿಗ್ಗೆ ನಾಲ್ಕೂ ಜನರು ಹೆಣವಾಗಿದ್ದರು.ಇಬ್ಬರೂ ಮಕ್ಕಳಿಗೆ ವಿಷ ಕೊಟ್ಟು,ತವೂ ನೇಣಿಗೆ ಶರಣಾದ ದುರಂತ ಘಟನೆ ನಡೆದಿದೆ ಇದರ ಕಂಪ್ಲೀಟ್ ಡಿಟೇಲ್ಸ್ ಈ ಸ್ಟೋರಿ ನೋಡಿ. ಈ ದೃಶ್ಯದಲ್ಲಿ ಕಾಣ್ತಿರುವ ಮನೆ ಸದಾಶಿವನಗರದಲ್ಲಿರುವ ಮನೆ.ಈ ಮನೆಯಲ್ಲಿ ಉತ್ತರಪ್ರದೇಶ ಮೂಲದ ನಾಲ್ಕು ಜನರ ಒಂದು ಕುಟುಂಬ ವಾಸ ಮಾಡ್ತಿತ್ತು.ಈ ಮನೆಗೆ ಮೂರು ಜನ ಮನೆ ಕೆಲಸದವರು ಅಂದ ಮೇಲೆ ಕೊಂಚ ಮಟ್ಟಿಗೆ ಸ್ಥಿತಿವಂತ ಕುಟುಂಬವೇ, ಎಂದಿನಂತೆ ಇಂದೂ ಕೂಡ ಮನೆ ಕೆಲಸದವರು ಮನೆ ಕೆಲಸಕ್ಕೆಂದು ಮನೆ ಬಳಿ ಬಂದಾಗ ಬಾಗಿಲು ತೆರೆದೇ ಇತ್ತು.ಮನೆ ಒಳಗೆ ಹೋದ ಮನೆ ಕೆಲಸದವರಿಗೆ ಶಾಕ್ ಕಾದಿತ್ತು. ಹೌದು,ಮನೆ ಕೆಲಸದವರು ಮನೆ ಒಳಗೆ ಹೋಗ್ತಿದ್ದಂತೆ ಕಂಡಿದ್ದು ಭಯಾನಕ ದೃಶ್ಯ.ಮನೆಯಲ್ಲಿ ವಾಸವಿದ್ದ ಅನೂಪ್ ಕುಮಾರ್ ಹಾಗೂ ಆತನ ಪತ್ನಿ ರಾಖಿ ನೇಣಿಗೆ ಶರಣಾಗಿದ್ದರು.ಸ್ವಲ್ಪ ಮುಂದುವರೆದರೆ ಮೇಲ್ಮಹಡಿಯ ಬೆಡ್ ಮೇಲೆ ಎರಡು ಮುದ್ದಾದ ಮಕ್ಕಳು ಶವವಾಗಿದ್ದರು. ಅಂದ್ಹಾಗೆ ನಿನ್ನೆಯ…