Author: Author AIN

ಕಾಂತಾರ ಸಿನಿಮಾದ ಬಳಿಕ ತುಳು ನಾಡಿನ ದೈವಾರಾಧನೆ ಕುರಿತು ಸಾಕಷ್ಟು ಸುದ್ದಿಯಾಗಿದೆ. ಆದರೆ ಇದೀಗ ‘ಕಾವೇರಿ ಕನ್ನಡ ಮೀಡಿಯಂ’ ಧಾರಾವಾಹಿಯಲ್ಲಿ ದೈವಾರಾಧನೆ ದೃಶ್ಯಗಳನ್ನು ಪ್ರದರ್ಶಿಸಿರುವ ವಿಚಾರವಾಗಿ ಮಂಗಳೂರು, ಪಂಜೇಶ್ವರಗಳಲ್ಲಿ ಕೆಲವರು ಧಾರಾವಾಹಿ ವಿರುದ್ಧ ದೂರು ನೀಡಿದ್ದಾರೆ. ದೈವಾರಾಧನೆಯನ್ನು ಹಣ ಮಾಡುವ ದಂಧೆಯಾಗಿ ಬಳಸಿಕೊಳ್ಳಲಾಗುತ್ತಿದೆ. ಧಾರಾವಾಹಿ, ಸಿನಿಮಾಗಳಲ್ಲಿ ತಮ್ಮ ಆಚರಣೆಗಳ ಅನುಕರಣೆ ಮಾಡುತ್ತಿರುವುದು ತುಳು ನಾಡಿನ ಜನತೆಯ ಭಾವನೆಗೆ ಧಕ್ಕೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೈವದ ದೃಶ್ಯಗಳನ್ನು ಧಾರಾವಾಹಿಯಿಂದ ತೆಗೆದುಹಾಕಬೇಕು, ದೈವಾರಾಧಕರ ಭಾವನೆಗೆ ಧಕ್ಕೆ ತಂದಿರುವ ಧಾರಾವಾಹಿಯ ತಂಡದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಲಾಗಿದೆ. ‘ಕಾವೇರಿ ಕನ್ನಡ ಮೀಡಿಯಂ’ ಧಾರಾವಾಹಿಯನ್ನು ಪ್ರೀತಮ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ದೈವಾರಾಧನೆಯ ದೃಶ್ಯವನ್ನು ಚಿತ್ರೀಕರಿಸಿರುವುದರ ಕುರಿತು ಪ್ರತಿಕ್ರಿಯಿಸಿರುವ ನಿರ್ದೇಶಕ ಪ್ರೀತಮ್ ಶೆಟ್ಟಿ, ‘2019 ಪಿಂಗಾರ ಸಿನಿಮಾನ ನಿರ್ದೆಶನ ಮಾಡಿದ್ದೇ ಅದು ಕಂಪ್ಲೀಟ್ ಆಗಿ ದೈವಾರಾಧನೆ ಬಗ್ಗೆಯೇ ಮಾಡಿದ ಸಿನಿಮವಾಗಿತ್ತು. ಆ ಚಿತ್ರಕ್ಕೆ ನ್ಯಾಷನಲ್ ಅವಾರ್ಡ್ ಜೊತೆ ಸಾಕಷ್ಟು ಪ್ರಶಸ್ತಿಗಳನ್ನ ಪಡೆದಿದ್ದೇನೆ. 2016 ರಲ್ಲಿ ಮೀನಾಕ್ಷಿ ಮದುವೆ…

Read More

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ, ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಲಾಲ್ ಸಲಾಂ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹೇಳಿಕೊಳ್ಳುವ ಮಟ್ಟಿಗೆ ಸದ್ದು ಮಾಡುತ್ತಿಲ್ಲ. ಮೊದಲ ದಿನವೇ ಚಿತ್ರದ ಕಲೆಕ್ಷನ್ ಸಪ್ಪೆಯಾಗಿದ್ದು ಈ ಮಧ್ಯೆ ರಜನಿ ಹೊಸ ಸಿನಿಮಾದ ಅಪ್ ಡೇಟ್ ನೀಡಿದ್ದಾರೆ. ಸದ್ಯ ರಜನಿಕಾಂತ್ ವೆಟ್ಟೈಯನ್ ಚಿತ್ರದ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದು ಈ ಚಿತ್ರದ ಮಾಹಿತಿಯನ್ನು ರಜನಿಕಾಂತ್ ಹಂಚಿಕೊಂಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ರಜನಿಕಾಂತ್ ಲಾಲ್ ಸಲಾಂ ಚಿತ್ರಕ್ಕೆ ‘ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಚಿತ್ರತಂಡದವರು ಹೇಳಿದ್ದಾರೆ. ಇಂಥ ಸಿನಿಮಾವನ್ನು ನಿರ್ಮಾಣ ಮಾಡಿದ ಲೈಕಾ ಪ್ರೊಡಕ್ಷನ್ಸ್​ ಸಂಸ್ಥೆ ಹಾಗೂ ನಿರ್ದೇಶನ ಮಾಡಿದ ಐಶ್ವರ್ಯಾಗೆ ಧನ್ಯವಾದಗಳು’ ಎಂದಿದ್ದಾರೆ. ‘ಲಾಲ್​ ಸಲಾಂ’ ಸಿನಿಮಾ ನಿರ್ಮಾಣ ಮಾಡಿರುವ ‘ಲೈಕಾ ಪ್ರೊಡಕ್ಷನ್ಸ್’ ಸಂಸ್ಥೆಯೇ ‘ವೆಟ್ಟೈಯನ್​’ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ‘ಈ ಸಿನಿಮಾ ಶೂಟಿಂಗ್ ಶೇಕಡ 80ರಷ್ಟು ​ಮುಕ್ತಾಯ ಆಗಿದೆ. ಇನ್ನುಳಿದ ಶೇಕಡ 20ರಷ್ಟು ಕೆಲಸಗಳು ಭರದಿಂದ ಸಾಗುತ್ತಿವೆ’ ಎಂದು ರಜನಿಕಾಂತ್​ ಮಾಹಿತಿ ನೀಡಿದ್ದಾರೆ.

Read More

ನಟ ಡಾರ್ಲಿಂಗ್ ಕೃಷ್ಣ ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಕೃಷ್ಣ ಆರ್ ಚಂದ್ರು ನಿರ್ದೇಶನದ ಫಾದರ್ ಚಿತ್ರಕ್ಕೆ  ಬಣ್ಣ ಹಚ್ಚಲಿದ್ದಾರೆ. ಈ ತಿಂಗಳ ಕೊನೆಯಲ್ಲಿ ಸಿನಿಮಾ ಆರಂಭವಾಗಲಿದ್ದು ಚಿತ್ರಕ್ಕೆ ಫಾದರ್ ಎಂದು ನಾಮಕರಣ ಮಾಡಲಾಗಿದೆ. ಆರ್ ಚಂದ್ರು ನಿರ್ದೇಶನದ ಡಾರ್ಲಿಂಗ್ ಕೃಷ್ಣ ನಟನೆಯ ಫಾದರ್ ಸಿನಿಮಾದಲ್ಲಿ ದೊಡ್ಡ ತಾರಾ ಬಳಗವೇ ಇದೆ. ಇದೀಗ ಚಿತ್ರತಂಡಕ್ಕೆ ಮತ್ತೋರ್ವ ಖ್ಯಾತ ನಟನ ಸೇರ್ಪಡೆಯಾಗಿದೆ. ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣನ ತಂದೆಯ ಪಾತ್ರದಲ್ಲಿ ನಟ ಪ್ರಕಾಶ್ ರೈ ಬಣ್ಣ ಹಚ್ಚಲಿದ್ದಾರೆ. ಫಾದರ್ ಡಾರ್ಲಿಂಗ್ ಕೃಷ್ಣ ಮತ್ತು ಪ್ರಕಾಶ್ ರೈ ಕಾಂಬಿನೇಷನ್ ನ ಮೊದಲ. ಈ ಸಿನಿಮಾ ಪ್ಯಾನ್ ಇಂಡಿಯಾ ಪರಿಕಲ್ಪನೆಯಲ್ಲಿ ಮೂಡಿ ಬರಲಿದೆ.

Read More

ಮುಂಬೈ: ಸಾಕಷ್ಟು ಮಂದಿ ತಮ್ಮ ಮೂಲ ಹೆಸರನ್ನು ಬದಿಗಿಟ್ಟು ಚಿತ್ರರಂಗದಲ್ಲಿ ಬೇರೆಯದ್ದೇ ಹೆಸರಿನಲ್ಲಿ ಸಖತ್ ಖ್ಯಾತಿ ಘಳಿಸಿದ್ದಾರೆ. ಇದೀಗ ಚಿತ್ರರಂಗಕ್ಕೆ ಎಂಟ್ರಿಕೊಟ್ಟು 64 ವರ್ಷಗಳಾದ ಬಳಿಕ ಸ್ಟಾರ್ ನಟ ಧರ್ಮೇಂದ್ರ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. 1960 ರಲ್ಲಿ ದಿಲ್ ಭಿ ತೇರಾ ಹಮ್ ಭಿ ತೇರೆ ಚಿತ್ರದ ಮೂಲಕ ನಟನೆಗೆ ಎಂಟ್ರಿಕೊಟ್ಟ ನಟ ಧರ್ಮೇಂದ್ರ ಇಂದಿಗೂ ಪೋಷಕ ಪಾತ್ರಗಳಲ್ಲಿ ನಟಿಸುವ ಮೂಲಕ ಸದ್ದು ಮಾಡ್ತಿದ್ದಾರೆ. ಇದೀಗ ಚಿತ್ರರಂಗ ಪ್ರವೇಶಿಸಿ 64 ವರ್ಷಗಳಾದ ಮೇಲೆ ನಟ ಧರ್ಮೇಂದ್ರ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ಇದಕ್ಕೆ ಕಾರಣ ಶಾಹಿದ್​ ಕಪೂರ್ ಹಾಗೂ ಕೃತಿ ಸನೋನ್​ ನಟನೆಯ ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ ಎಂದು ಹೇಳಲಾಗ್ತಿದೆ. ಫೆಬ್ರವರಿ 09ರಂದು ಬಿಡುಗಡೆಯಾದ ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ ಚಿತ್ರವು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದ್ದು, ಈ ಸಿನಿಮಾದಲ್ಲಿ ಧರ್ಮೇಂದ್ರ ನಾಯಕ ನಟ ಶಾಹಿದ್​ ಕಪೂರ್​ ಅವರ ತಾತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ,…

Read More

ಬಿಗ್ ಬಾಸ್ ಮನೆಗೆ ಹೋಗಿ ಬಂದ ಬಳಿಕ ವರ್ತೂರು ಸಂತೋಷ್ ಗೆ ಅಭಿಮಾನಿಗಳ ಸಂಖ್ಯೆ ಮತ್ತಷ್ಟು ಜಾಸ್ತಿಯಾಗಿದೆ. ಇದೀಗ ವರ್ತೂರು ಸಂತೋಷ್ ಅವರನ್ನು ಸನ್ಮಾನ ಮಾಡಿದ್ದ ವರ್ತೂರು ಠಾಣೆಯ ಎಸ್.ಐ ತಿಮ್ಮರಾಯಪ್ಪ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ತಿಮ್ಮರಾಯಪ್ಪ ಅವರನ್ನು ವರ್ತೂರು ಠಾಣೆಯಿಂದ ಆಡುಗೋಡಿ ಠಾಣೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ವರ್ತೂರು ಸಂತೋಷ್ ಮನೆಗೆ ತೆರಳಿದ್ದ ತಿಮ್ಮರಾಯಪ್ಪ ಈ ವೇಳೆ ಸಂತೋಷ್ ಸನ್ಮಾನ ಮಾಡಿದ್ದರು. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಎಸ್ಐ ತಿಮ್ಮರಾಯಪ್ಪ ಜೊತೆ ಠಾಣೆಯ ಸಿಬ್ಬಂದಿ ಕೂಡ ಈ ಸನ್ಮಾನ ಸಮಾರಂಭದಲ್ಲಿ ಭಾಗಿಯಾಗಿದ್ದರು. ಇದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಇತ್ತೀಚಿಗೆ ಕೆಲ ತಿಂಗಳ ಹಿಂದೆ ವರ್ತೂರು ಸಂತೋಷ್ ಹುಲಿ ಉಗುರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿಗೆ ಹೋಗಿ ಬಂದಿದ್ದ. ಹುಲಿ ಉಗುರಿನ ಪೆಂಡೆಟ್ ಧರಿಸಿದ್ದ ಕಾರಣಕ್ಕೆ ಬಿಗ್ ಬಾಸ್ ಮನೆಯಲ್ಲಿದ್ದ ವೇಳೆ ವರ್ತೂರು ಸಂತೋಷ್ ಜೈಲಿಗೆ ಹೋಗಿ ಬಂದಿದ್ದರು. ಇದೆಲ್ಲಾ ಗೊತ್ತಿದ್ದರು ಪೊಲೀಸರು ಸಂತೋಷ್ ಅವರನ್ನು ಸನ್ಮಾನಿಸಿದ್ದು ಸಾಕಷ್ಟು…

Read More

ರಾವಲ್ಪಿಂಡಿ: ಪಾಕಿಸ್ತಾನದಲ್ಲಿ ಗುರುವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್ ಖಾನ್ ಬೆಂಬಲಿತರು 100 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ “ಏಕೀಕೃತ” ಸರ್ಕಾರಕ್ಕೆ ಕರೆ ನೀಡಿದ್ದಾರೆ. ಸಾರ್ವತ್ರಿಕ ಚುನಾವಣೆಗೆ ಮತದಾನ ನಡೆದ ಎರಡು ದಿನಗಳ ನಂತರ ದೇಶ ಅತಂತ್ರ ಸಂಸತ್ ಹೊಂದುವ ಹಾದಿಯಲ್ಲಿದೆ ಎಂಬ ಅಂಶದ ಹಿನ್ನೆಲೆಯಲ್ಲಿ ಮುನೀರ್ ಈ ರೀತಿಯ ಹೇಳಿಕೆ ನೀಡಿದ್ದಾರೆ. ಗುರುವಾರ ನಡೆದ ಚುನಾವಣೆಯಲ್ಲಿ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷ ಬೆಂಬಲಿತ ಸ್ವತಂತ್ರರು 101 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) 73 ಸ್ಥಾನಗಳನ್ನು, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) 54, ಮುತಾಹಿದಾ ಕ್ವಾಮಿ ಮೂವ್‌ಮೆಂಟ್ (ಎಂಕ್ಯೂಎಂ) 17 ಮತ್ತು ಇತರ ಸ್ಥಾನಗಳನ್ನು ಸಣ್ಣ ಪಕ್ಷಗಳಿಗೆ ನೀಡಲಾಗಿದೆ. 265 ಸ್ಥಾನಗಳ ಪೈಕಿ 255 ಸ್ಥಾನಗಳ ಫಲಿತಾಂಶವನ್ನು ಪಾಕಿಸ್ತಾನದ ಚುನಾವಣಾ ಆಯೋಗ ಘೋಷಿಸಿದೆ.…

Read More

ಬಾಲಿವುಡ್ ನ ಖ್ಯಾತ ಹಿರಿಯ ನಟ ಮಿಥುನ್ ಚಕ್ರವರ್ತಿಗೆ ಎದೆನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.  ಸದ್ಯ ಮಿಥುನ್ ಚಕ್ರವರ್ತಿ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇದೀಗ ವೈದ್ಯರು ನಟನ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದಾರೆ. ನಟ ಮಿಥುನ್ ಚಕ್ರವರ್ತಿ ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿದ್ದರು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. ಸದ್ಯ ನಟನಿಗೆ ಪ್ರಜ್ಞೆ ಬಂದಿದ್ದು ಇಡೀ ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ. https://ainlivenews.com/mithun-chakraborty-hospitalised-in-kolkata-after-complaining-of-chest-pain/ ಮಿಥುನ್ ಅವರನ್ನು ಫೆ.10ರ ಬೆಳಿಗ್ಗೆ 9.40 ಕ್ಕೆ ಕೋಲ್ಕತ್ತಾದ ಅಪೋಲೋ ಆಸ್ಪತ್ರೆಯ ತುರ್ತು ವಿಭಾಗಕ್ಕೆ ದಾಖಲಿಸಲಾಯಿತು. ಮೆದುಳಿನ ಎಂಆರ್‌ಐ ಮತ್ತು ರೇಡಿಯಾಲಜಿ ಪರೀಕ್ಷೆ ಸೇರಿದಂತೆ ಇತರ ಪ್ರಮುಖ ಪರೀಕ್ಷೆಗಳನ್ನು ಸಹ ಮಾಡಲಾಯಿತು. ಅವರು ಮೆದುಳಿಗೆ ಇಸ್ಕೆಮಿಕ್ ಸೆರೆಬ್ರೊವಾಸ್ಕುಲರ್ ಸ್ಟ್ರೋಕ್ ಆಗಿದ್ದು ಅವರಿಗೆ ಲಘು ಆಹಾರ ನೀಡಲಾಗುತ್ತಿದೆ.

Read More

ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ರಜನಿಕಾಂತ್ ನಟನೆಯ ಲಾಲ್ ಸಲಾಂ ಸಿನಿಮಾ ನಿನ್ನೆಯಷ್ಟೇ ತೆರೆಗೆ ಬಂದಿದೆ. ಚಿತ್ರದಲ್ಲಿ ರಜನಿಕಾಂತ್ ಮೊಯ್ದೀನ್ ಭಾಯ್  ಎಂಬ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ರಜನಿಕಾಂತ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಪಾತ್ರಕ್ಕೆ ಸಾಕಷ್ಟು ಪ್ರಮುಖ್ಯತೆ ನೀಡಲಾಗಿದೆ. ಆದರೆ ಅಂದುಕೊಂಡ ಮಟ್ಟಿಗೆ ಚಿತ್ರ ಓಪನಿಂಗ್ಸ್ ಪಡೆದುಕೊಂಡಿಲ್ಲ ಅನ್ನೋದು ರಜನಿ ಅಭಿಮಾನಿಗಳಿಗೆ ಬೇಸರ ಮೂಡಿಸಿದ್ರು ಚಿತ್ರ ಮೊದಲ ದಿನ ನಾಲ್ಕುವರೆ ಕೋಟಿ ಗಳಿಸಿದೆ ಎಂದು ಅಂದಾಜಿಸಲಾಗಿದೆ. ‘ಜೈಲರ್’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ತೆರೆಗೆ ಬರುತ್ತಿರುವ ರಜನಿಕಾಂತ್ ನಟನೆಯ ಲಾಲ್ ಸಲಾಂ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಸ್ಪೋರ್ಟ್ ಡ್ರಾಮಾ ಕಥಾಹಂದರ ಹೊಂದಿರುವ ಸಿನಿಮಾವನ್ನು ರಜನಿ ಪುತ್ರಿ ಐಶ್ವರ್ಯ ರಜನಿಕಾಂತ್ ನಿರ್ದೇಶಿಸಿದ್ದು ವಿಷ್ಣು ವಿಶಾಲ್, ವಿಕ್ರಾಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಲಾಲ್‌ ಸಲಾಂ ಚಿತ್ರವನ್ನು ಕಾಲಿವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್‌ನ ಸುಭಾಸ್ಕರನ್‌ ನಿರ್ಮಿಸಿದ್ದು, ತಮಿಳುನಾಡಿನಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುವ ಹಕ್ಕನ್ನು ರೆಡ್ ಜೈಂಟ್ ಸಂಸ್ಥೆ…

Read More

ಬಿಗ್ ಬಾಸ್ ಸೀಸನ್ 10 ಮುಗಿದು ಸ್ಪರ್ಧಿಗಳು ಮನೆ ಸೇರಿದ್ದಾರೆ. ಆದರು ಬಿಗ್ ಬಾಸ್ ಸ್ಪರ್ಧಿಗಳ ಫ್ಯಾನ್ಸ್ ವಾರ್ ನಿಂತಿಲ್ಲ. ಇದರಿಂದಾಗಿ ಸಹಜವಾಗಿಯೇ ಕಾರ್ತಿಕ್ ಹಾಗೂ ತನಿಷಾಗೆ ಬೇಸರವಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಲೈವ್ ಗೆ ಬಂದಿದ್ದ ಈ ಜೋಡಿ ಆಕ್ರೋಶ ಹೊರ ಹಾಕಿದ್ದಾರೆ. ಕಾರ್ತಿಕ್ ಹಾಗೂ ತನಿಷಾ ಲೈವ್ ನಲ್ಲಿ ಇದ್ದಾಗ ಬೇರೆ ಕಂಟೆಸ್ಟೆಂಟ್ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಹಲವರು ಕಾರ್ತಿಕ್ ಮತ್ತು ತನಿಷಾಗೆ ಟಾಂಗ್ ಕೊಟ್ಟಿದ್ದಾರೆ. ಇದರಿಂದಾಗಿ ಬೇಸರಿಸಿಕೊಂಡ ಕಾರ್ತಿಕ್ ಮತ್ತು ತನಿಷಾ ಅಸಮಾಧಾನ ಹೊರ ಹಾಕಿದ್ದಾರೆ. ಬೇರೆ ಬೇರೆ ಕಂಟೆಸ್ಟೆಂಟ್ ಗಳ ಮಧ್ಯ ಪಿನ್ ಇಡುವವರನ್ನು ನಾನಂತೂ ಸುಮ್ಮನೆ ಬಿಡಲ್ಲ ಎಂದು ತನಿಷಾ ಹೇಳಿದಾಗ, ಪಿನ್ ಅಲ್ಲ, ಗನ್ ಇಟ್ಟು ಶೂಟ್ ಮಾಡ್ತೀನಿ ಅಂತ ಹೇಳು ಎಂದು ತನಿಷಾಗೆ ಕಾರ್ತಿಕ್ ಹೇಳಿದ್ದಾರೆ. ಈ ವೇಳೆ ನಿಜವಾಗಿಯೂ ನನಗೆ ಶೂಟ್ ಮಾಡೋಕೆ ಬರತ್ತೆ. ಹುಷಾರ್ ಅಂದಿದ್ದಾರೆ ತನಿಷಾ.

Read More

ಕಡಿಮೆ ಬಜೆಟ್ ನಲ್ಲಿ ಒಂದೊಳ್ಳೆ ಮೊಬೈಲ್ ಖರೀದಿ ಮಾಡ್ಬೇಕು ಅನ್ನೋರಿಗೆ ಲಾವಾ ಯುವ 3 ಬೆಸ್ಟ್ ಮೊಬೈಲ್ ಆಗಿದೆ. ಇದು 4GB RAM ಮತ್ತು 64GB ಸ್ಟೋರೇಜ್ ಒಳಗೊಂಡಿದ್ದು ಕೇವಲ 6,799 ರೂಗೆ ನಿಮ್ಮ ಕೈ ಸೇರಲಿದೆ. ಈ ಮೊಬೈಲ್ ನ ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಟ್ರಿಪಲ್ AI ಕ್ಯಾಮೆರಾ ಇದ್ದು ಇಂದಿನಿಂದ ಅಮೆಜಾನ್‌, ಲಾವಾದ ರಿಟೇಲ್ ನೆಟ್‌ವರ್ಕ್ ಮತ್ತು ಲಾವಾ ಇ-ಸ್ಟೋರ್‌ನಲ್ಲಿ ಇಂದಿನಿಂದ ಲಭ್ಯವಿರಲಿದೆ. ಲಾವಾ ಯುವ 3 ಸ್ಮಾರ್ಟ್​ಫೋನ್ 6.5 ಇಂಚಿನ HD + ಪಂಚ್ ಹೋಲ್ ಡಿಸ್ಪ್ಲೇಯನ್ನು ಹೊಂದಿದೆ. ಇದರ ರೆಸಲ್ಯೂಶನ್ 720 * 1600 ಪಿಕ್ಸೆಲ್ಗಳು ಮತ್ತು ರಿಫ್ರೆಶ್ ದರ 90Hz ಆಗಿದೆ. ಈ ಸ್ಮಾರ್ಟ್‌ಫೋನ್ 4GB RAM ಅನ್ನು ಹೊಂದಿದೆ, ಇದನ್ನು ವರ್ಚುವಲ್ RAM ಮೂಲಕ 4GB ವರೆಗೆ ಹೆಚ್ಚಿಸಬಹುದು. ಈ ಫೋನ್​ನಲ್ಲಿ 64GB ಅಥವಾ 128GB ಸಂಗ್ರಹಣೆಯ ಆಯ್ಕೆ ಇದೆ. ಇದನ್ನು ಮೈಕ್ರೋ SD ಕಾರ್ಡ್ ಮೂಲಕ 512GB ವರೆಗೆ ವಿಸ್ತರಿಸಬಹುದು. ಯುವಾ…

Read More