ಅಮೆರಿಕದ ಸ್ಯಾನ್‍ಡಿಯಾಗೊ ನಗರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಮೃತಪಟ್ಟಿದ್ದು ಮತ್ತೊರ್ವ ಗಂಭೀರ ಗಾಯಗೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಯಾನ್‍ಡಿಯಾಗೊದ ಯುನಿವರ್ಸಿಟಿ ಸಿಟಿ ಪ್ರದೇಶದ ಶಾಪಿಂಗ್ ಮಾಲ್‍ನ ಬಳಿ ಗುಂಡಿನ ದಾಳಿ ನಡೆದಿದ್ದು ಆರೋಪಿ ಪರಾರಿಯಾಗಿದ್ದಾನೆ. ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದು ಓರ್ವ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಪ್ರತ್ಯಕ್ಷದರ್ಶಿಗಳ ಮಾಹಿತಿ ಮತ್ತು ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ಮುಂದುವರಿದಿದೆ ಎಂದು ಸ್ಯಾನ್‍ಡಿಯಾಗೊ ಪೊಲೀಸ್ ಇಲಾಖೆಯ ಮುಖ್ಯಾಧಿಕಾರಿ ರಾಬರ್ಟ್ ಹೇಮ್ಸ್ ಮಾಹಿತಿ ನೀಡಿದ್ದಾರೆ.
Author: Author AIN
ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಾಯಿಯಾಗುವ ಸಂಭ್ರಮದಲ್ಲಿರುವ ಅದಿತಿ ಪ್ರಭುದೇವ್ ಅವರ ಸೀಮಂತ ಶಾಸ್ತ್ರ ಅದ್ಧೂರಿಯಾಗಿ ನಡೆದಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಅದಿತಿಯ ಸೀಮಂತ ಶಾಸ್ತ್ರದ ಫೋಟೋಗಳು ವೈರಲ್ ಆಗಿದೆ. ಹಸಿರು ಬಣ್ಣದ ಸೀರೆಯುಟ್ಟು ನಟಿ ಸಖತ್ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಅದಿತಿ ಮುಖದಲ್ಲಿ ತಾಯಿಯಾಗಿರುವ ಸಂಭ್ರಮ ಎದ್ದು ಕಾಣುತ್ತಿದೆ ಮನೆಗೆ ಹೊಸ ಅಥಿತಿಯ ಆಗಮನಕ್ಕೆ ದಂಪತಿ ಸಖತ್ ಖುಷಿಯಾಗಿದ್ದಾರೆ. 2024ರ ಹೊಸ ವರ್ಷದ ದಿನ ದಿನ ತಾಯಿಯಾಗುತ್ತಿರುವ ಗುಡ್ ನ್ಯೂಸ್ ಹಂಚಿಕೊಂಡಿದ್ರು. ಇದೀಗ ನಟಿ ಅದಿತಿ ಪ್ರಭುದೇವ ಶಾಸ್ತ್ರೋಕ್ತವಾಗಿ ತಮ್ಮ ಸೀಮಂತ ಮಾಡಿಸಿಕೊಂಡಿದ್ದಾರೆ. ಅದಿತಿ ಪ್ರಭುದೇವ ಶ್ರೀಮಂತ ಶಾಸ್ತ್ರಕ್ಕೆ ಅನೇಕ ಸ್ಯಾಂಡಲ್‌ವುಡ್ ನಟ-ನಟಿಯರು ಕೂಡ ಆಗಮಿಸಿದ್ರು. ನಟ ಶರಣ್ ಕೂಡ ಕಾರ್ಯಕ್ರಮಕ್ಕೆ ಬಂದು ಅದಿತಿಗೆ ಶುಭ ಹಾರೈಸಿದರು. ಬೆಂಗಳೂರಿನ ಅದಿತಿ ಅವರ ನಿವಾಸದಲ್ಲಿ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಸೀಮಂತ ಶಾಸ್ತ್ರ ನಡೆದಿದೆ. ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ…
ತಮಗೆ ಅನಿಸಿದ್ದನ್ನು ನೇರಾ ನೇರವಾಗಿ ಹೇಳುವ ನಟ ಜಗ್ಗೇಶ್ ಆಗಾಗ ವಿವಾದಕ್ಕೆ ಸಿಲುಕಿಕೊಳ್ಳುತ್ತಾರೆ. ಇದೀಗ ಜಗ್ಗೇಶ್ ಆಡಿದ ಮಾತೊಂದು ವಿವಾದಕ್ಕೆ ಕಾರಣವಾಗಿದ್ದು ಇದರಿಂದ ಕ್ಷತ್ರಿಯ ಸಮುದಾಯದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕ್ಷಮೆ ಯಾಚಿಸುವಂತೆ ಆಗ್ರಹಿಸಿದ್ದು, ಕೂಡಲೇ ಅವರು ಕ್ಷಮೆ ಕೇಳದಿದ್ದರೆ ಪ್ರತಿಭಟನೆ ನಡೆಸುವುದಾಗಿಯೂ, ಮನೆಗೆ ಮುತ್ತಿಗೆ ಹಾಕುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ‘ರಂಗನಾಯಕ’ ಸಿನಿಮಾದ ಕಾರ್ಯಕ್ರಮದಲ್ಲಿ ನಟ ಜಗ್ಗೇಶ್ ಹುಲಿ ಉಗುರು ಪ್ರಕರಣದ ಬಗ್ಗೆ ಮಾತನಾಡಿದ್ದರು. ಈ ವೇಳೆ ವರ್ತೂರು ಸಂತೋಷ್ ಹುಲಿ ಉಗುರು ಧರಿಸಿ ಬಂಧನಕ್ಕೆ ಒಳಗಾದ ವಿಷಯ ಮಾತನಾಡುತ್ತಾ, ‘ಯಾವನೋ ಕಿತ್ತೋದ್ ನನ್ ಮಗ ರಿಯಲ್ ಹುಲಿ ಉಗುರು ಹಾಕ್ಕೋಂಡ್ ಯಾವುದೋ ಟಿವಿಯಲ್ಲಿ ತಗಲಾಕ್ಕೊಂಡ’ ಎಂದು ಸಂತೋಷ್ ಹೆಸರು ಹೇಳದೆ ಮಾತನಾಡಿದ್ದರು. ಈ ಬಗ್ಗೆ ಮಾತನಾಡಿದ್ದ ವರ್ತೂರು ಸಂತೋಷ್, ‘ಅವರು ದೊಡ್ಡವರು, ಎಲ್ಲದಕ್ಕೂ ಉತ್ತರ ಕೊಡಬೇಕಿಲ್ಲ, ನಾವು ಸುಮ್ಮನಿದ್ದರೆ ಅದೇ ಉತ್ತರ, ‘ಕಾಲಾಯ ತಸ್ಮೈ ನಮಃ’ ಎಂದಿದ್ದರು. ರಾಜ್ಯಸಭಾ ಸದಸ್ಯರೂ ಆಗಿರುವ ಜಗ್ಗೇಶ್ ಅವರು ವರ್ತೂರು ಸಂತು ಬಗ್ಗೆ ಕೀಳು…
ಕಿರಣಿ ಅಂಗಡಿಯಲ್ಲಿ ಮಕ್ಕಳಿಗೆ ಚಾಕಲೇಟ್ ಖರೀದಿಸಿದ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿನಿಮಾದ ಬಳಿಕ ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಯಶ್ ಸಿನಿಮಾಗೆ ಬಂಡವಾಳ ಹೂಡಲು ನಿರ್ಮಾಪಕರು ತುದಿಗಾಲಲ್ಲಿ ನಿಂತಿದ್ದಾರೆ. ಕೋಟಿ ಕೋಟಿ ಇನ್ವೆಸ್ಟ್ ಮಾಡೋಕೆ ನಾ ಮುಂದು ತಾ ಮುಂದು ಎಂದು ಕ್ಯೂನಲ್ಲಿ ನಿಂತಿದ್ದಾರೆ. ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ರು ಸಖತ್ ಸಿಂಪಲ್. ಯಶ್ ಜೊತೆಗೆ ನಟಿ ರಾಧಿಕಾ ಪಂಡಿತ್ ಕೂಡ ಅಷ್ಟೇ ಸರಳ. ಈ ಜೋಡಿ ತಮ್ಮ ಸರಳತೆಯ ಮೂಲಕವೇ ಗಮನ ಸೆಳೆದಿದ್ದಾರೆ. ಯಶ್ ಈಗಾಗಲೇ ಹೊಸ ಸಿನಿಮಾ ಘೋಷಣೆ ಮಾಡಿದ್ದು ಹಾಲಿವುಡ್ ಲೆವೆಲ್ನಲ್ಲಿ ಸಿನಿಮಾ ನಿರ್ಮಾಣ ಮಾಡಲು ಸಿದ್ಧರಾಗಿದ್ದಾರೆ. ನಟ ಯಶ್ ತಮ್ಮ ಕುಟುಂಬದೊಟ್ಟಿಗೆ ಚಿತ್ರಾಪುರ ಮಠಕ್ಕೆ ಭೇಟಿ ನೀಡಿದ್ದರು. ಒಂದು ದಿನ ಮಠದಲ್ಲಿಯೇ ಉಳಿದುಕೊಂಡಿದ್ದರು. ಚಿತ್ರಾಪುರ ಮಠಕ್ಕೆ ಭೇಟಿ ನೀಡಿದ್ದ ವೇಳೆ ಮಕ್ಕಳಿಗಾಗಿ ಸಾಮಾನ್ಯ ಅಂಗಡಿಯಲ್ಲಿ ಚಾಕಲೇಟ್ ಕೊಡಿಸಿದರು. ಮಾತ್ರವಲ್ಲದೆ ಪತ್ನಿ ರಾಧಿಕಾ ಪಂಡಿತ್ಗೆ ಐಸ್ಕ್ಯಾಂಡಿ ಸಹ ಕೊಡಿಸಿದ್ದಾರೆ.…
ಸ್ಮಾರ್ಟ್ ಫೋನ್ ಗಳು ನಿತ್ಯ ಒಂದೊಂದು ರೀತಿಯಲ್ಲಿ ಮಾರುಕಟ್ಟೆಗೆ ಪರಿಚಯವಾಗುತ್ತವೆ. ಇವತ್ತು ಬಿಡುಗಡೆಯಾದ ಫೋನ್ ಇನ್ನೂ ಕೆಲವೇ ದಿನಗಳಲ್ಲಿ ಮತ್ತಷ್ಟು ವಿನ್ಯಾಸ ಹೊಸ ಪೀಚರ್ಸ್ ನಲ್ಲಿ ಮಾರುಕಟ್ಟೆಗೆ ಬರುತ್ತವೆ. ಇದೀಗ ಐಫೋನ್ ಕೂಡ ಹೊಸ ವಿನ್ಯಾಸದಲ್ಲಿ ಜನರ ಕೈಗೆಟುಕಲಿದೆ. ಪ್ರಸ್ತುತ, ಮಾರುಕಟ್ಟೆಯಲ್ಲಿ ಮಡಚಬಹುದಾದ ಸ್ಮಾರ್ಟ್ಫೋನ್ಗಳ ಇದೀಗ ಖ್ಯಾತ ಸ್ಮಾರ್ಟ್ ಫೋನ್ ದೈತ್ಯ ಆ್ಯಪಲ್ ಕೂಡ ಈ ಕ್ಷೇತ್ರಕ್ಕೆ ಕಾಲಿಡಲಿದೆಯಂತೆ. ಸದ್ಯದಲ್ಲೇ ಆ್ಯಪಲ್ ನಿಂದ ಫೋಲ್ಡಬಲ್ ಫೋನ್ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ ಎಂಬ ಸುದ್ದಿ ಹರಿದಾಡುತ್ತಿದೆ. ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಂದಾಗಿನಿಂದ ಆ್ಯಪಲ್ ಫೋನ್‌ಗಳ ಮಾರಾಟವು ಕಡಿಮೆಯಾಗುತ್ತಿದೆ. ಅದರಲ್ಲೂ ಚೀನಾದ ಮಾರುಕಟ್ಟೆಯಲ್ಲಿ ಹುವಾವೆಯ ಫೋಲ್ಡಬಲ್ ಫೋನ್‌ಗಳಿಂದಾಗಿ ಆ್ಯಪಲ್ ಫೋನುಗಳಿಗೆ ಬೇಡಿಕೆ ಕಮ್ಮಿ ಆಗಿದೆಯಂತೆ. ಈ ಹಿನ್ನೆಲೆಯಲ್ಲಿ ಇದೀಗ ಆ್ಯಪಲ್ ಸಂಸ್ಥೆ ಕೂಡ ಫೋಲ್ಡಬಲ್ ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ. ಇತರ ಕಂಪನಿಗಳಿಂದ ಬರುತ್ತಿರುವ ಸ್ಪರ್ಧೆಯನ್ನು ಎದುರಿಸುವ ಸಲುವಾಗಿ ಆ್ಯಪಲ್ ಕೂಡ ಫೋಲ್ಡಬಲ್ ಫೋನ್‌ಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಆ್ಯಪಲ್…
ಬಿಗ್ ಬಾಸ್ ಸೀಸನ್ 10ಕ್ಕೆ ಹೋಗಿ ಬಂದ ಬಳಿಕ ವರ್ತೂರು ಸಂತೋಷ್ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಅವರು ಹೋದಲ್ಲಿ ಬಂದಲ್ಲೆಲ್ಲಾ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದಾರೆ. ಇದೀಗ ನಟ ಜಗ್ಗೇಶ್ ಕಾರ್ಯಕ್ರಮವೊಂದರಲ್ಲಿ ಸಂತೋಷ್ ಹೆಸರು ಹೇಳದೆ ಟೀಕಿಸಿದ್ದು ಈ ಬಗ್ಗೆ ವರ್ತೂರು ಸಂತೋಷ್ ಪ್ರತಿಕ್ರಿಯೆ ನೀಡಿದ್ದಾರೆ. ‘ರಂಗನಾಯಕ’ ಸಿನಿಮಾದ ಕಾರ್ಯಕ್ರಮದಲ್ಲಿ ಹುಲಿ ಉಗುರು ಪ್ರಕರಣದ ಬಗ್ಗೆ ಮಾತನಾಡಿದ್ದ ನಟ ಜಗ್ಗೇಶ್, ‘ನಾನು ಹುಲಿ ಥರಹ ಬದುಕಬೇಕು ಅಂತ ನಮ್ಮಮ್ಮ ಹುಲಿ ಉಗುರಿನ ಪೆಂಡೆಂಟ್ ಕೊಟ್ಟರು, ಆದರೆ ಯಾವನೋ ಕಿತ್ತೋದ್ ನನ್ ಮಗ ನಿಜವಾದ ಹುಲಿ ಉಗುರು ಹಾಕ್ಕೊಂಡು ಟಿವಿಗೆ ಹೋಗಿ ಅಲ್ಲಿ ತಗಲಾಕ್ಕೊಂಡ’ ಎಂದಿದ್ದರು. ಜಗ್ಗೇಶ್ ಸಹ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದು ಅವರ ಮನೆ ಮೇಲೆ ಅರಣ್ಯಾಧಿಕಾರಿಗಳು ದಾಳಿ ಮಾಡಿ ಹುಲಿ ಉಗುರು ವಶಪಡಿಸಿಕೊಂಡಿದ್ದರು. ಇದರ ಬಗ್ಗೆ ಜಗ್ಗೇಶ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಗ್ಗೇಶ್ ಅವರು ವರ್ತೂರು ಸಂತೋಷ್ಗೆ ‘ಕಿತ್ತೋದ್ ನನ್ನ ಮಗ’ ಎಂಬ ಪದ ಬಳಸಬಾರದಿತ್ತು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದರು. ಜಗ್ಗೇಶ್ರ…
ನಟಿಯರಾದ ರಶ್ಮಿಕಾ ಮಂದಣ್ಣ ಹಾಗೂ ಶ್ರದ್ಧಾ ದಾಸ್ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಷ ಮಾಡಲಾಗಿದೆ. ಘಟನೆ ಕುರಿತು ನಟಿ ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು ಸ್ಪಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾದುದಾಗಿ ಹೇಳಿಕೊಂಡಿದ್ದಾರೆ. ರಶ್ಮಿಕಾ ಹಾಗೂ ಶ್ರದ್ಧಾದಾಸ್ ಒಟ್ಟಿಗೆ ಪ್ರಯಾಣ ಮಾಡುತ್ತಿದ್ದು, ಈ ವೇಳೆ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ರಶ್ಮಿಕಾ ಹಾಗೂ ಶ್ರದ್ಧಾದಾಸ್ ಅವರುಗಳು ಮುಂಬೈ ವಿಮಾನ ನಿಲ್ದಾಣದಿಂದ ಹೈದರಾಬಾದ್ಗೆ ಪ್ರಯಾಣ ಬೆಳೆಸಿದ್ದರು. ವಿಮಾನ ಟೇಕ್ ಆಫ್ ಆದ ಬಳಿಕ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ವಿಮಾನ ನಿಲ್ದಾಣವನ್ನು ತುರ್ತು ಭೂಸ್ಪರ್ಷ ಮಾಡಲಾಗಿದೆ. ತಮ್ಮ ಹಾಗೂ ಶ್ರದ್ಧಾದಾಸ್ರ ಕೆಲವು ಚಿತ್ರಗಳನ್ನು ರಶ್ಮಿಕಾ ಮಂದಣ್ಣ ಹಂಚಿಕೊಂಡಿದ್ದು, ‘ಇಂದು ಹೀಗೆ ಮಾಡಿ ನಾವು ಪ್ರಾಣಾಪಾಯದಿಂದ ಪಾರಾದೆವು’ ಎಂದಿದ್ದಾರೆ. ತುರ್ತು ಭೂಸ್ಪರ್ಷದ ವೇಳೆ ವಿಮಾನ ಸಿಬ್ಬಂದಿ ನೀಡಿದ ಸೂಚನೆಯಂತೆ, ರಶ್ಮಿಕಾ ಹಾಗೂ ಶ್ರದ್ಧಾ ತಮ್ಮ ಕಾಲುಗಳಿಂದ ಎದುರಿನ ಸೀಟ್ನ ಹಿಂಬದಿಯನ್ನು ಜೋರಾಗಿ ಒತ್ತಿ ಹಿಡಿದುಕೊಂಡಿದ್ದಾರೆ. ಈ ಚಿತ್ರವನ್ನು ರಶ್ಮಿಕಾ ಸಾಮಾಜಿಕ…
ಬಾಲಿವುಡ್ ನಟಿ ಇಶಾ ಡಿಯೋಲ್ ಇತ್ತೀಚೆಗೆ ಪತಿ ಭರತ್ ರಿಂದ ದೂರವಾಗಿದ್ದಾರೆ. ಈ ವಿಷಯವನ್ನು ಸ್ವತಃ ಇಶಾ ಹಾಗೂ ಭರತ್ ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟಪಡಿಸಿದ್ದಾರೆ. ಇದೀಗ ಇಶಾ ಡಿಯೋಲ್ ರಾಜಕೀಯದತ್ತ ಮುಖ ಮಾಡಿದ್ದಾರೆ. ಉದ್ಯಮಿ ಭರತ್ ಜೊತೆ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಮೇಲೆ ಇಶಾ ರಾಜಕೀಯಕ್ಕೆ ಎಂಟ್ರಿಕೊಡ್ತಾರೆ ಎಂಬ ಸುದ್ದಿ ಕೇಳಿ ಬರ್ತಿದೆ. ಇಷ್ಟೇಲ್ಲಾ ಸುದ್ದಿಯಾಗಲು ಹೇಮಾ ಮಾಲಿನಿ ನೀಡಿರುವ ಹೇಳಿಕೆ ಕಾರಣವಾಗಿದೆ. ಮಗಳಿಗೆ ರಾಜಕೀಯಕ್ಕೆ ಬರಲು ಆಸಕ್ತಿಯಿದೆ ಎಂದು ಹೇಮಾ ಮಾಲಿನಿ ಹೇಳಿದ್ದಾರೆ. ಮಥುರಾದಿಂದ ಬಿಜೆಪಿಯ ಲೋಕಸಭೆ ಸದಸ್ಯೆಯಾಗಿರುವ ಹೇಮಾ ಮಾಲಿನಿ ಅವರು ಸಂದರ್ಶನವೊಂದರಲ್ಲಿ ನಾನು ರಾಜಕೀಯದಲ್ಲಿ ಬೆಳೆಯಲು ಕುಟುಂಬದ ಬೆಂಬಲವಿದೆ. ಅವರ ಸಾಥ್‌ನಿಂದಲೇ ನಾನು ಆರಾಮ ಆಗಿ ಇಲ್ಲಿ ಕೆಲಸ ಮಾಡಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಮಕ್ಕಳು ಕೂಡ ರಾಜಕೀಯಕ್ಕೆ ಬರುವ ಆಸಕ್ತಿ ತೋರಿಸಿದರೆ ಬರಲಿ ಎಂದಿದ್ದಾರೆ. ಈ ಮೂಲಕ ಇಶಾ ರಾಜಕೀಯ ಎಂಟ್ರಿಕೊಡುವ ಸುಳಿವನ್ನು ನೀಡಿದ್ದಾರೆ.
ಪಬ್‌ಜಿ ಆಟದ ವೇಳೆ ಸಿಕ್ಕ ಪ್ರೇಮಿಗಾಗಿ ವೀಸಾ ಇಲ್ಲದೇ ಭಾರತ ಪ್ರವೇಶಿಸಿದ್ದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಳ ಮೊದಲ ಪತಿ ಗುಲಾಮ್ ಹೈದರ್ ತನ್ನ ಮಕ್ಕಳನ್ನು ಭಾರತದಿಂದ ಪಾಕ್ ಗೆ ವಾಪಸ್ ಕರೆದುಕೊಂಡು ಹೋಗಲು ನಿರ್ಧಾರ ಮಾಡಿದ್ದಾರೆ. ತನ್ನ ಅಪ್ರಾಪ್ತ ಮಕ್ಕಳನ್ನು ಭಾರತದಿಂದ ವಾಪಸ್ ಪಾಕಿಸ್ತಾನಕ್ಕೆ ಕರೆದುಕೊಂಡು ಹೋಗಲು ಕಾನೂನು ಹೋರಾಟಕ್ಕೆ ಗುಲಾಮ್ ಹೈದರ್ ಮುಂದಾಗಿದ್ದಾರೆ. ಅದಕ್ಕಾಗಿ ಭಾರತೀಯ ವಕೀಲನನ್ನು ನೇಮಿಸಿಕೊಂಡಿದ್ದಾರೆ ಎಂದು ಪಾಕ್ ವಕೀಲ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಅನ್ಸಾರ್ ಬರ್ನಿ ಹೇಳಿದ್ದಾರೆ. ಅಲಿ ಮೊಮಿನ್ ಎಂಬ ಭಾರತೀಯ ವಕೀಲರನ್ನು ನೇಮಿಸಿಕೊಂಡಿದ್ದು, ಭಾರತದಲ್ಲಿ ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಪವರ್ ಆಫ್ ಅಟಾರ್ನಿ ಕಳುಹಿಸಲಾಗಿದೆ ಎಂದು ಬರ್ನಿ ತಿಳಿಸಿದ್ದಾರೆ. ಗುಲಾಮ್ ಹೈದರ್ ಮಕ್ಕಳು ಇನ್ನೂ ಅಪ್ರಾಪ್ತ ವಯಸ್ಸಿನವರು ಆಗಿರುವುದರಿಂದ ಹಾಗೂ ಅಂತಾರಾಷ್ಟ್ರೀಯ ಕಾನೂನುಗಳ ಪ್ರಕಾರ ಧಾರ್ಮಿಕ ಮತಾಂತರ ನಿಷೇಧ ಇರೋದ್ರಿಂದ ಮಕ್ಕಳನ್ನು ಕರೆತರಲು ಮುಂದಾಗಿದ್ದಾರೆ. ಅಲ್ಲದೇ ಸೀಮಾ ನೋಯ್ಡಾದಲ್ಲಿ ನೆಲೆಸಿದ್ದರೂ ಅವರಿನ್ನೂ ಪಾಕಿಸ್ತಾನಿ ಪ್ರಜೆಯೇ ಆಗಿರುವುದರಿಂದ ಮೊದಲ ಪತಿ…
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮೇಲಿಂದ ಮೇಲೆ ಹೊಡೆತಗಳು ಬೀಳುತ್ತಿವೆ. ಅವರ ರಿಯಲ್ ಎಸ್ಟೇಟ್ ಸಾಮ್ರಾಜ್ಯವನ್ನು ನಾಶಪಡಿಸಿದ ಸಿವಿಲ್ ಪ್ರಕರಣದಲ್ಲಿ ಯುಎಸ್ ಎ ಮಾಜಿ ಅಧ್ಯಕ್ಷರು ಮತ್ತೊಂದು ಕಾನೂನು ಹಿನ್ನಡೆ ಅನುಭವಿಸಿದ್ದಾರೆ. ಟ್ರಂಪ್ತಮ್ಮ ಆಸ್ತಿ ಮೌಲ್ಯವನ್ನು ಕೃತ್ರಿಮವಾಗಿ ಹೆಚ್ಚಿಸಿದ್ದಕ್ಕಾಗಿ 3 ಸಾವಿರ ಕೋಟಿ ರೂ ದಂಡವನ್ನು ಪಾವತಿಸಬೇಕು ಎಂದು ನ್ಯೂಯಾರ್ಕ್ ಕೋರ್ಟ್ ತೀರ್ಪು ಪ್ರಕಟಿಸಿದೆ. ಮೂರು ತಿಂಗಳ ವಿವಾದಾಸ್ಪದ ವಿಚಾರಣೆಯ ನಂತರ, ನ್ಯಾಯಮೂರ್ತಿ ಆರ್ಥರ್ ಎಂಗೊರಾನ್ ತಮ್ಮ ತೀರ್ಪನ್ನು ಪ್ರಕಟಿಸಿದರು. ಈ ವರ್ಷ ಅಧ್ಯಕ್ಷ ಸ್ಥಾನವನ್ನು ಮರಳಿ ಪಡೆಯಲು ಹವಣಿಸುತ್ತಿರುವ ಟ್ರಂಪ್, ಮೂರು ವರ್ಷಗಳ ಕಾಲ ಯಾವುದೇ ನ್ಯೂಯಾರ್ಕ್ ಕಾರ್ಪೊರೇಷನ್ ಅಧಿಕಾರಿ ಅಥವಾ ನಿರ್ದೇಶಕರಾಗಿ ಸೇವೆ ಸಲ್ಲಿಸುವುದನ್ನು ಸಹ ನಿಷೇಧಿಸಲಾಗಿದೆ. ಈ ಬೆಳವಣಿಗೆಗಳ ಮಧ್ಯೆ, ಟ್ರಂಪ್ ಅವರ ವಕೀಲರಾದ ಅಲೀನಾ ಹಬ್ಬಾ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ. ನ್ಯಾಯಾಲಯವು ಈ ಹಿಂದೆ ಸೆಪ್ಟೆಂಬರ್‌ನಲ್ಲಿ ತಾನು ನೀಡಿದ್ದ ತೀರ್ಪನ್ನು ರದ್ದುಗೊಳಿಸುತ್ತಾ ಟ್ರಂಪ್‌ರ ರಿಯಲ್ ಎಸ್ಟೇಟ್ ಸಾಮ್ರಾಜ್ಯವನ್ನು ನಿಯಂತ್ರಿಸುವ ಆಧಾರ ಕಂಪನಿಗಳನ್ನು ಮುಚ್ಚುವಂತೆ…