ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ದುಭಾರಿ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಿಮ್ ಜಾಂಗ್ ಅವರ ವೈಯಕ್ತಿಕ ಬಳಕೆಗಾಗಿ ಈ ಕಾರು ನೀಡಲಾಗಿದೆಯಂತೆ. ಉಡುಗೊರೆ ನೀಡಿರುವುದಕ್ಕೆ ಕಿಮ್ ಸಹೋದರಿ ಪುಟಿನ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಜೊತೆಗೆ ಉಡುಗೊರೆಯು ಇಬ್ಬರು ಉನ್ನತ ನಾಯಕರ ನಡುವಿನ ವೈಯಕ್ತಿಕ ಸಂಬಂಧವನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ. ಈ ಉಡುಗೊರೆ ವಿಶ್ವಸಂಸ್ಥೆಯ ನಿಯಮಗಳ ಉಲ್ಲಂಘನೆಯಾಗಿರಬಹುದು ಎಂದು ಹೇಳಲಾಗುತ್ತಿದೆ. ಯಾಕೆಂದರೆ ವಿಶ್ವಸಂಸ್ಥೆಯು ರಷ್ಯಾ ಮತ್ತು ಉತ್ತರ ಕೊರಿಯಾ ನಡುವಿನ ವಹಿವಾಟುಗಳನ್ನು ನಿಷೇಧಿಸಿದೆ. ರಷ್ಯಾ ನಿರ್ಮಿತ ಕಾರನ್ನು ಫೆಬ್ರವರಿ 18 ರಂದು ಕಿಮ್‌ನ ಉನ್ನತ ಸಹಾಯಕರಿಗೆ ಹಸ್ತಾಂತರಿಸಲಾಗಿದೆ ಸುದ್ದಿ ಸಂಸ್ಥೆಯೊಂದು ವರಿ ಮಾಡಿದ್ದು, ಆದರೆ ಈ ಕಾರನ್ನು ರಷ್ಯಾದಿಂದ ಕಳುಹಿಸಲಾಗಿದೆ ಎಂಬುದನ್ನು ಉಲ್ಲೇಖಿಸಿಲ್ಲ. ಐಷಾರಾಮಿ ಕಾರುಗಳ ಮೇಲಿನ ಕಿಮ್ ಒಲವನ್ನು ಪರಿಗಣಿಸಿ ಪುಟಿನ್ ಈ ವಿಶೇಷ ಉಡುಗೊರೆಯನ್ನು ಕಳುಹಿಸಿದ್ದಾರೆ.
Author: Author AIN
ಬಾಲಿವುಡ್ ಬ್ಯೂಟಿ, ದಿವಂಗತ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಆಗಾಗ ತಮ್ಮ ಫೋಟೋಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೆ ಇರುತ್ತಾರೆ. ಪ್ರತಿಭಾರಿಯೂ ವಿಭಿನ್ನ ಡ್ರಸ್ ಗಳಲ್ಲಿ ಮಿಂಚು ಹರಿಸೋ ಜಾನ್ವಿ ಈ ಭಾರಿ ಸೀರೆಯುಟ್ಟು ಕ್ಯಾಮೆರಾಗೆ ಫೋಸ್ ನೀಡಿದ್ದಾರೆ. ಮುತ್ತಿನ ಮಣಿಗಳಿಂದ ರೆಡಿಯಾಗಿರುವ ಸೀರೆಯುಟ್ಟ ಜಾನ್ವಿ ಅದಕ್ಕೆ ಮ್ಯಾಚ್ ಆಗುವಂತೆ ಮುತ್ತಿನಿಂದ ತಯಾರಾಗಿರುವ ಬ್ಲಾವ್ಸ್ ತೊಟ್ಟು ಮುತ್ತಿನ ಮಣಿಗಳಿರುವ ಸರ ತೊಟ್ಟು ಮತ್ತಷ್ಟು ಮಾದಕವಾಗಿ ಕಾಣಿಸಿಕೊಂಡಿದ್ದಾರೆ. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ನಟಿ ಜಾನ್ವಿ ಕಪೂರ್ ಸಖತ್ ಆಫರ್ಗಳನ್ನು ಬಾಚಿಕೊಳ್ತಿದ್ದಾರೆ. ಈಕೆಯ ಸಿನಿಮಾಗಳು ಅಷ್ಟರ ಮಟ್ಟಿಗೆ ಸದ್ದು ಮಾಡದೆ ಹೋದ್ರು ಈಕೆಗಿರೋ ಆಫರ್ ಗಳು ಮಾತ್ರ ಕೊಂಚವು ಕಮ್ಮಿಯಾಗ್ತಿಲ್ಲ. ಪ್ಯಾನ್ ಇಂಡಿಯಾ ಸ್ಟಾರ್ ಜೂನಿಯರ್ ಎನ್ಟಿಆರ್ಗೆ ಜಾನ್ವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ದೇವರ ಸಿನಿಮಾದಲ್ಲಿ ಜಾನ್ವಿ ನಟಿಸುತ್ತಿದ್ದು ಶೂಟಿಂಗ್ ಭರದಿಂದ ಸಾಗಿದೆ. ದೇವರ ಸಿನಿಮಾದಲ್ಲಿ ನಟಿಯ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಜಾನ್ವಿ ತಂಗಂ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ…
ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರಿಗೂ ಮೊಬೈಲ್ ಫೋನ್ ಕೈಯಲ್ಲಿ ಇರ್ಲೇ ಬೇಕು. ಫೋನ್ ಇಲ್ಲ ಅಂದ್ರೆ ಒಂದು ಕ್ಷಣವೂ ಇರೋಕೆ ಸಾಧ್ಯವೇ ಇಲ್ಲವೆನೋ ಅನ್ನೋ ಅಷ್ಟರ ಮಟ್ಟಿಗೆ ಈ ಜನರೇಷನ್ ಬದಲಾಗಿದೆ. ಕುಂತ್ರು, ನಿಂತ್ರು ಕೈಯಲ್ಲಿ ಸ್ಮಾರ್ಟ್ ಫೋನ್ ಇರ್ಲೇ ಬೇಕು ಅನ್ನೋ ಜಯಮಾನ ಇದು. ಹಾಗಾದ್ರೆ ನಾವು ದಿನಕ್ಕೆ ಎಷ್ಟು ಬಾರಿ ಸ್ಮಾರ್ಟ್ ಫೋನ್ ಬಳಸುತ್ತೇವೆ ಗೊತ್ತಾ? ಯೆಸ್. ವರದಿಯ ಪ್ರಕಾರ ಭಾರತೀಯ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಅನ್ನು ದಿನಕ್ಕೆ 70-80 ಬಾರಿ ಯೂಸ್ ಮಾಡುತ್ತಾರೆ. ಅವರಲ್ಲಿ ಅರ್ಧದಷ್ಟು ಜನರು ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ಆಗಾಗ್ಗೆ ಫೋನ್ ತೆಗೆದು ನೋಡು ಅಭ್ಯಾಸವನ್ನು ಹೊಂದಿದ್ದಾರೆ ಎಂದು ವರದಿಯಲ್ಲಿ ತಿಳಿದು ಬಂದಿದೆ. ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ವರದಿಯ ಪ್ರಕಾರ, 50% ಜನರು ತಮ್ಮ ಫೋನ್‌ಗಳನ್ನು ಸ್ಪರ್ಶಿಸುವ ಅಭ್ಯಾಸವನ್ನು ಹೊಂದಿದ್ದು, ಅವರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಏಕೆ ತೆರೆಯುತ್ತಾರೆ ಎಂದು ಅವರಿಗೆ ತಿಳಿದಿಲ್ಲ. ಆದರೆ 45-50% ಜನರು ತಮ್ಮ ಫೋನ್ ಅನ್ನು ಕೆಲವು…
ಹಿಂದಿ ಕಿರುತೆರೆ ನಟ ರಿತುರಾಜ್ ಸಿಂಗ್ ಹೃದಯಘಾತದಿಂದ ಇಂದು (ಫೆ.20) ನಿಧನರಾಗಿದ್ದಾರೆ. ಹಲವು ದಿನಗಳಿಂದ ಪ್ಯಾಂಕ್ರಿಯಾಟಿಕ್ ಕಾಯಿಲೆಯಿಂದ ಬಳಲುತ್ತಿದ್ದ ರಿತುರಾಜ್ ಸಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ 59 ವರ್ಷದ ರಿತುರಾಜ್ ಸಿಂಗ್ ಕೊನೆಯುಸಿರೆಳೆದಿದ್ದಾರೆ ಎಂದು ರಿತುರಾಜ್ ಸಿಂಗ್ ಆಪ್ತ ನಟ ಅಮಿತ್ ಬೆಹ್ಲ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಅಮಿತ್ ಬೆಹ್ಲ್, ಸ್ನೇಹಿತ ರಿತುರಾಜ್ ಸಿಂಗ್ ಮುಂಜಾನೆ 12:30ಕ್ಕೆ ನಿಧನರಾದರು. ಹಲವು ದಿನಗಳಿಂದ ಅಸ್ವಸ್ಥರಾಗಿದ್ದ ರಿತುರಾಜ್ ಪ್ಯಾಂಕ್ರಿಯಾಟಿಕ್ ಸಮಸ್ಯೆಯಿಂದ 15 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆಮೇಲೆ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿ ಮನೆಗೆ ಮರಳಿದರು. ಮತ್ತೆ ಈ ಸಮಸ್ಯೆಯಿಂದ ಅಹಿತಕರ ಘಟನೆ ಸಂಭವಿಸಿದೆ ಎಂದರು. ನಟನ ನಿಧನಕ್ಕೆ ಆಪ್ತರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ರಿತುರಾಜ್ ಅವರು ಬನೇಗಿ ಅಪ್ನಿ ಬಾತ್, ಜ್ಯೋತಿ ಹಿಟ್ಲರ್ ದೀದಿ, ಶಪತ್ ವಾರಿಯರ್ ಹೈ, ಸೇರಿದಂತೆ ಹಲವು ಶೋಗಳಲ್ಲಿ ನಟಿಸಿದ್ದಾರೆ. ಲಾಡೋ 2 ಸೀರಿಯಲ್‌ನಲ್ಲಿ ಬಲವಂತ ಚೌಧರಿ ಪಾತ್ರದಲ್ಲಿ ನಟಿಸಿದ್ದಾರೆ.…
ಯಾಂಗಾನ್: ಬಂಡುಗೋರ ಪಡೆಗಳಿಗೆ ಶರಣಾಗಿ ಆಯಕಟ್ಟಿನ ನಗರವನ್ನು ಹಸ್ತಾಂತರಿಸಿ ಸೇನೆಗೆ ಮುಖಭಂಗ ಉಂಟುಮಾಡಿರುವ ಮೂವರು ಉನ್ನತ ಸೇನಾಧಿಕಾರಿಗಳಿಗೆ ಮ್ಯಾನ್ಮಾರ್ ಸೇನಾಡಳಿತ ಮರಣದಂಡನೆ ಶಿಕ್ಷೆ ವಿಧಿಸಿದೆ ಎಂದು ಮಿಲಿಟರಿ ಮೂಲಗಳು ತಿಳಿಸಿವೆ. ಮ್ಯಾನ್ಮಾರ್ ನ ಉತ್ತರದಲ್ಲಿ ಚೀನಾ ಗಡಿಯ ಸನಿಹದ ಶಾನ್ ರಾಜ್ಯದ ಲೌಕ್ಕಾನಿ ನಗರವನ್ನು ಕೆಲ ತಿಂಗಳ ಹಿಂದೆ `ತ್ರೀ ಬದರ್‍ಹುಡ್ ಅಲಯನ್ಸ್’ ಎಂದು ಕರೆಯಲಾಗುವ ಮೂರು ಬಂಡುಗೋರ ಪಡೆಗಳ ಒಕ್ಕೂಟ ವಶಕ್ಕೆ ಪಡೆದಿತ್ತು. ಮ್ಯಾನ್ಮಾರ್ ನ್ಯಾಷನಲ್ ಡೆಮೊಕ್ರಟಿಕ್ ಅಲಯನ್ಸ್ ಆರ್ಮಿ(ಎಂಎನ್‍ಡಿಎಎ), ದಿ ಅರಾಕನ್ ಆರ್ಮಿ(ಎಎ) ಮತ್ತು ದಿ ತಾಂಗ್ ನ್ಯಾಷನಲ್ ಲಿಬರೇಷನ್ ಆರ್ಮಿ(ಟಿಎನ್‍ಎಲ್‍ಎ) ಪಡೆಗಳ ಒಕ್ಕೂಟವು ಅಕ್ಟೋಬರ್ ನಲ್ಲಿ ಉತ್ತರ ಮ್ಯಾನ್ಮಾರ್ ನ ಹಲವು ಪ್ರಮುಖ ನಗರಗಳನ್ನು ವಶಕ್ಕೆ ಪಡೆದುಕೊಂಡಿತ್ತು. ಚೀನಾ ಗಡಿಭಾಗದ ಸನಿಹದಲ್ಲಿರುವ ಈ ನಗರಗಳು ಚೀನಾದೊಂದಿಗಿನ ವ್ಯಾಪಾರ ವಹಿವಾಟಿಗೆ ಪ್ರಮುಖ ಮಾರುಕಟ್ಟೆಯಾಗಿವೆ. ಬಂಡುಗೋರರ ಕೈ ಮೇಲಾಗುತ್ತಿರುವಂತೆಯೇ ನೂರಾರು ಯೋಧರು ತಮ್ಮ ಶಸ್ತ್ರಾಸ್ತ್ರ ಕೆಳಗಿಟ್ಟು ಶರಣಾಗಿದ್ದರು. ಬಳಿಕ ಅವರನ್ನು ನಗರದಿಂದ ಹೊರಹೋಗಲು ಅವಕಾಶ ನೀಡಲಾಗಿದೆ. ಈ ಪ್ರಕ್ರಿಯೆಯ ಮೇಲುಸ್ತುವಾರಿ…
ಮಾಸ್ಕೋ: ಅಲೆಕ್ಸಿ ನವಾಲ್ನಿಯ ಸಾವಿನ ಕುರಿತ ತನಿಖೆ ನಡೆಯುತ್ತಿದೆ ಎಂದು ರಶ್ಯ ಅಧ್ಯಕ್ಷರ ಕಚೇರಿ ಹೇಳಿದ್ದು, ನವಾಲ್ನಿ ಸಾವಿನ ಪ್ರಕರಣದಲ್ಲಿ ರಶ್ಯ ಸರಕಾರವನ್ನು ಹೊಣೆಯಾಗಿಸಬೇಕೆಂಬ ಆಗ್ರಹ ಹಾಸ್ಯಾಸ್ಪದ ಎಂದು ಖಂಡಿಸಿದೆ. ನವಾಲ್ನಿ ಸಾವಿನ ತನಿಖೆ ಪಾರದರ್ಶಕ ರೀತಿಯಲ್ಲಿ ಮುಂದುವರಿದಿದೆ. ನವಾಲ್ನಿ ಸಾವಿನ ಪ್ರಕರಣದ ಕುರಿತ ಕೀಳುಮಟ್ಟದ ಹೇಳಿಕೆಗಳು ಸ್ವೀಕಾರಾರ್ಹವಲ್ಲ ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. ಈ ಮಧ್ಯೆ, ತನ್ನ ಪತಿಯ ಕೆಲಸವನ್ನು ಮತ್ತು ಸ್ವತಂತ್ರ ರಶ್ಯಕ್ಕಾಗಿನ ಹೋರಾಟವನ್ನು ನಾನು ಮುಂದುವರಿಸುತ್ತೇನೆ. ಸ್ವತಂತ್ರ ರಶ್ಯದಲ್ಲಿ ಬದುಕಲು ನಾನು ಬಯಸುತ್ತೇನೆ’ ಎಂದು ಅಲೆಕ್ಸಿ ನವಾಲ್ನಿಯ ಪತ್ನಿ ಯೂಲಿಯಾ ನವಲ್ನಾಯಾ ತಿಳಿಸಿದ್ದಾರೆ.
ಹಿಂದಿಯ ಬಿಗ್ ಬಾಸ್ ಸೀಸನ್ 8ರಲ್ಲಿ ಕಾಣಿಸಿಕೊಂಡಿದ್ದ ಮುಂಬೈ ಬೆಡಗಿ ನಟಿ ಸೋನಾಲ್ ರಾವತ್ ಇದೀಗ ಮತ್ತೆ ಸದ್ದು ಮಾಡ್ತಿದ್ದಾರೆ. ಸಖತ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿರುವ ನಟಿ ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುವ ಮೂಲಕ ಬೆಂಕಿ ಹಚ್ಚಿದ್ದಾರೆ. ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಸದ್ದು ಮಾಡುವ ನಟಿ ಸೋನಾಲಿ ಇದೀಗ ಟಾಪ್‌ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿ ತಮ್ಮ ಎದೆಗೆ ಟೋಪಿಯನ್ನು ಅಡ್ಡ ಇಟ್ಟಿದ್ದಾರೆ. ಸೋನಾಲಿ ಹಾಟ್ ಲುಕ್‌ಗೆ ಫ್ಯಾನ್ಸ್ ಸಾಕಷ್ಟು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. 2014ರಲ್ಲಿ ಬಾಲಿವುಡ್ ಗೆ ಎಂಟ್ರಿಕೊಟ್ಟ ಸೊನಾಲಿ ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿ ಗುರುತಿಸಿಕೊಂಡಿದ್ದರು. 105 ದಿನಗಳ ಕಾಲ ಸೋನಾಲಿ ದೊಡ್ಮನೆಯಲ್ಲಿ ಇದ್ದ ನಟಿ ಅಲ್ಲಿಂದ ಹೊರ ಬಂದ ಬಳಿಕವು ಆಗಾಗ ಸದ್ದು ಮಾಡುತ್ತಿದ್ದಾರೆ.
ಪಾಕಿಸ್ತಾನದಲ್ಲಿ ಫೆ.8ರಂದು ನಡೆದ ಚುನಾವಣೆಯ 3 ಕ್ಷೇತ್ರಗಳ ಫಲಿತಾಂಶವನ್ನು ಇಸ್ಲಮಾಬಾದ್ ಹೈಕೋರ್ಟ್ ಅಮಾನತುಗೊಳಿಸಿದೆ. ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಅವರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಪಕ್ಷ ಬೆಂಬಲಿತ ಅಭ್ಯರ್ಥಿಗಳಾದ ಅಮೀರ್ ಮುಘಲ್, ಶೋಯಬ್ ಶಹೀನ್ ಮತ್ತು ಮುಹಮ್ಮದ್ ಆಲಿ ಬುಖಾರಿ ಚುನಾವಣೆಯಲ್ಲಿ ಸೋತಿರುವುದಾಗಿ ಚುನಾವಣಾ ಆಯೋಗ ಘೋಷಿಸಿತ್ತು. ಆದರೆ ಮತ ಎಣಿಕೆಯಲ್ಲಿ ವ್ಯಾಪಕ ಅಕ್ರಮ ನಡೆದಿರುವುದಾಗಿ ಆರೋಪಿಸಿದ್ದ ಈ ಮೂವರು ಅಭ್ಯರ್ಥಿಗಳು ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ಎನ್‍ಎ-46, ಎನ್‍ಎ-47 ಮತ್ತು ಎನ್‍ಎ-48 ಕ್ಷೇತ್ರಗಳ ಫಲಿತಾಂಶಕ್ಕೆ ಸಂಬಂಧಿಸಿ ಪಾಕಿಸ್ತಾನ ಚುನಾವಣಾ ಆಯೋಗ ಹೊರಡಿಸಿದ್ದ ಅಧಿಸೂಚನೆಯನ್ನು ಅಮಾನತುಗೊಳಿಸಿದ್ದು, ಈ ಮೂರು ಕ್ಷೇತ್ರಗಳಲ್ಲಿ ಕ್ರಮವಾಗಿ ಅಂಜುಮ್ ಅಖೀಲ್‍ಖಾನ್, ತಾರಿಖ್ ಫಝಲ್ ಚೌಧರಿ ಮತ್ತು ರಾಜಾ ಖುರ್ರಮ್ ನವಾಝ್ ಗೆದ್ದಿದ್ದಾರೆ ಎಂಬ ಘೋಷಣೆಗೆ ತಡೆ ಹಿಡಿದಿದೆ.
ಸ್ಯಾಂಡಲ್ ವುಡ್ ನಟ ಡಾಲಿ ಧನಂಜಯ್ ಈ ಬಾರಿ ಲೋಕಸಭಾ ಚುನಾವಣೆಯ ಆಖಾಡಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗಿತ್ತು. ಮೈಸೂರು-ಕೊಡಗು ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ವಿರುದ್ಧ ಧನಂಜಯ್ ಅವರನ್ನು ಕಾಂಗ್ರೆಸ್ ಕಣಕ್ಕೆ ಇಳಿಸಲಿದೆ ಎಂದು ಹೇಳಲಾಗಿತ್ತು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಧನಂಜಯ್ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಕಾಂಗ್ರೆಸ್ ಪಕ್ಷದಲ್ಲಿ ಆ ರೀತಿ ಯಾವುದೇ ಚರ್ಚೆ ಆಗಿಲ್ಲ. ನನಗೆ ಮಾಹಿತಿ ಇಲ್ಲ ಎಂದು ಹೇಳುವ ಮೂಲಕ ಗಾಳಿ ಸುದ್ದಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಕರ್ನಾಟಕ ಸರಕಾರ ಧನಂಜಯ್ ಅವರನ್ನು ಲಿಡ್ಕರ್ ಸಂಸ್ಥೆಗೆ ರಾಯಭಾರಿಯನ್ನಾಗಿ ನೇಮಿಸಿಕೊಂಡಿದೆ. ಜೊತೆಗೆ ಧನಂಜಯ್ ನಿರ್ಮಾಣದ ಡೇರ್ ಡೆವಿಲ್ ಮುಸ್ತಾಫಾಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಶಂಸೆ ವ್ಯಕ್ತ ಪಡಿಸಿದ್ದರು. ಅಲ್ಲದೇ, ಕಾಂಗ್ರೆಸ್ ಮೆಚ್ಚುವಂತಹ ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ. ಇವೆಲ್ಲ ಕಾರಣದಿಂದಾಗಿ ಕಾಂಗ್ರೆಸ್ ಪಕ್ಷದಿಂದ ಡಾಲಿ ಕಣಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಸ್ಪತಃ ಮುಖ್ಯಮಂತ್ರಿಗಳು ಗಾಳಿ ಸುದ್ದಿಗೆ…
ನಟ ಕಮ್ ಫಿಟ್‌ನೆಸ್ ಟ್ರೈನರ್ ಸಾಹಿಲ್ ಖಾನ್ ತಮ್ಮ 50ನೇ ವಯಸ್ಸಿನಲ್ಲಿ 21 ವರ್ಷ ವಯಸ್ಸಿನ ಯುವತಿಯನ್ನು ಎರಡನೇ ಮದುವೆಯಾಗುವ ಮೂಲಕ ಸುದ್ದಿಯಾಗಿದ್ದಾರೆ. 50ರ ಅಂಚಿನಲ್ಲಿರುವ ಸಾಹಿಲ್ ಇದೀಗ ಸಾಮಾಜಿಕ ಜಾಲತಾಣದಲ್ಲಿ 2ನೇ ಪತ್ನಿಯ ಪರಿಚಯ ಬಗ್ಗೆ ಮಾಡಿಕೊಟ್ಟಿದ್ದಾರೆ. ಎರಡನೇ ಪತ್ನಿಯ ಜೊತೆಗಿರುವ ಫೋಟೋ ಹಂಚಿಕೊಂಡಿರುವ ನಟ ಈಕೆ ನನ್ನ ಗೊಂಬೆ ಎಂದು ಬರೆದುಕೊಂಡಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಇಬ್ಬರೂ ಜೊತೆಯಾಗಿ ಇರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ತಾವು ಎರಡನೇ ಮದುವೆ ಮಾಡಿಕೊಂಡಿರುವುದನ್ನು ರಿವೀಲ್ ಮಾಡಿದ್ದಾರೆ. ಶಾಹಿಲ್ ಎರಡನೇ ಪತ್ನಿಯ ಹೆಸರಾಗಲಿ ಆಕೆಯ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. 2003ರಲ್ಲಿ ನಿಗರ್ ಖಾನ್ ಎಂಬುವವರನ್ನು ಸಾಹಿಲ್ ಖಾನ್ ಮದುವೆಯಾಗಿದ್ದರು. ಕೆಲ ಮನಸ್ತಾಪಗಳಿಂದ 2005ರಲ್ಲಿ ಮೊದಲ ಪತ್ನಿಗೆ ನಟ ಡಿವೋರ್ಸ್ ನೀಡಿದರು. ಅಂದಹಾಗೆ, ಸಾಹಿಲ್ ಅವರು, ಬಾಲಿವುಡ್‌ನ ಸ್ಟೈಲ್, ಎಕ್ಸ್‌ಕ್ಯೂಸ್ ಮಿ ಚಿತ್ರಗಳಲ್ಲಿ ನಟಿಸಿದ್ದಾರೆ.