Author: Author AIN

ಸಹೋದರನ ಕೇಸ್ ವಿಷಯವಾಗಿ ಮನೆಗೆ ಹೋದ ಪೊಲೀಸರಿಗೆ ತೆಲುಗಿನ ಬಿಗ್ ಬಾಸ್ ರನ್ನರ್ ಅಪ್ ಗಾಂಜಾ ಮಾಲಿನ ಸಮೇತ ಸಿಕ್ಕಿ ಬಿದ್ದಿದ್ದಾರೆ. ಯೂಟ್ಯೂಬರ್ ಹಾಗೂ ತೆಲುಗಿನ ಬಿಗ್ ಬಾಸ್ ರನ್ನರ್ ಅಪ್ ಶಾನು ಅಲಿಯಾಸ್ ಷಣ್ಮುಖ್ ಜಸ್ವಂತ್ ಗಾಂಜಾ ಸೇವಿಸುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ತೆಲುಗು ಕಿರುತೆರೆ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದವರು ಶಾನು ತಮ್ಮ ಯುಟ್ಯೂಬ್ ನಲ್ಲಿ ಕೋಟ್ಯಾಂತರ ಫಾಲೋವರ್ಸ್ ಹೊಂದಿದ್ದಾರೆ. ಈ ಕಾರಣದಿಂದಾಗಿಯೇ ಬಿಗ್ ಬಾಸ್ ಮನೆ ಒಳಗೆ ಪ್ರವೇಶ ಕೂಡ ಸಿಕ್ಕಿತ್ತು. ಶಾನು ತಮ್ಮ ಸಂಪತ್ ವಿನಯ್ ಮಾಡಿದ ತಪ್ಪಿಗೆ ಶಾನು ಪೊಲೀಸರಿಗೆ ಅತಿಥಿ ಆಗುವಂತಾಗಿದೆ. ಈ ಹಿಂದೆ ವೈದ್ಯ ಗೆಳತಿಯೊಂದಿಗೆ ಸಂಪತ್ ವಿನಯ್ ಲೀವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದರಂತೆ. ನಂತರ ನಿಶ್ಚಿತಾರ್ಥ ಕೂಡ ಆಗಿತ್ತು. ಆ ಹುಡುಗಿಯ ತಾಯಿಯ ಆರೋಗ್ಯ ಹದಗೆಟ್ಟಿದ್ದರಿಂದ ಮದುವೆಯನ್ನು ಮುಂದೂಡಲಾಗಿತ್ತು. ಅಷ್ಟರಲ್ಲಿ ನಿಶ್ಚಿತಾರ್ಥ ಕೂಡ ಮುರಿದು ಬಿದ್ದಿತ್ತು. ನಂತರ ಸಂಪತ್ ಬೇರೆ ಹುಡುಗಿಯೊಂದಿಗೆ…

Read More

ದೊಡ್ಮನೆಯ ಕುಡಿ, ಡಾ. ರಾಜಕುಮಾರ್ ಮೊಮ್ಮಗ, ರಾಘವೇಂದ್ರ ರಾಜ್‌ಕುಮಾರ್‌ ಅವರ ಕಿರಿಯ ಪುತ್ರ ಯುವರಾಜ್‌ ಕುಮಾರ್ ಗಾಂಧಿನಗರದಲ್ಲಿ ಧೂಳೆಬ್ಬಿಸೋಕೆ ರೆಡಿಯಾಗಿದ್ದಾರೆ. ಹೊಂಬಾಳೆ ಸಂಸ್ಥೆಯ ನಿರ್ಮಾಣದಲ್ಲಿ, ಸಂತೋಷ್ ಆನಂದ್ ರಾಮ್‌ ನಿರ್ದೇಶನದ ‘ಯುವ’ ಚಿತ್ರದ ಮೂಲಕ ಬಿಗ್ ಸ್ಕ್ರೀನ್ ಗೆ ಎಂಟ್ರಿಕೊಡ್ತಿದ್ದು ಇದೀಗ ಚಿತ್ರದ ಆಡಿಯೋ ರೈಟ್ಸ್ ದುಭಾರಿ ಮೊತ್ತಕ್ಕೆ ಸೇಲ್ ಆಗಿದೆ. ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಯುವ ಚಿತ್ರವನ್ನು ಹೊಂಬಾಳೆ ಫಿಲಂಸ್ ಮೂಲಕ ವಿಜಯ ಕಿರಗಂದೂರ್ ಹಾಗೂ ಚೆಲುವೇಗೌಡ ಅವರು ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗಷ್ಟೇ ಯುವ ಚಿತ್ರದ ಚಿತ್ರೀಕರಣ ಪೂರ್ಣವಾಗಿದ್ದು, ಮಾರ್ಚ್ 29 ರಂದು ತೆರೆ ಕಾಣಲಿದೆ.  ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಸುಮಧುರ ಹಾಡುಗಳು ಯುವ ಚಿತ್ರದಲ್ಲಿದ್ದು,  ಕನ್ನಡದ ಹೆಸರಾಂತ ಆಡಿಯೋ ಸಂಸ್ಥೆ ಆನಂದ್ ಆಡಿಯೋ ಬಾರಿ ಮೊತ್ತಕ್ಕೆ ಆಡಿಯೋ ಹಕ್ಕನ್ನು ಪಡೆದುಕೊಂಡಿದೆ. ಫಸ್ಟ್ ಲುಕ್ ಪೋಸ್ಟರ್ ನಿಂದ ಜನರ ಗಮನ ಸೆಳೆದಿರುವ ಯುವ ಚಿತ್ರದ ಹಾಡುಗಳು ಮಾರ್ಚ್ ಮೊದಲವಾರದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಟೀಸರ್ ಹಾಗೂ ಟ್ರೇಲರ್ ಸಹ…

Read More

ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇತ್ತೀಚೆಗೆ ರಜನಿಕಾಂತ್ ನಟನೆಯ ಜೈಲರ್ ಸಿನಿಮಾ ಸೂಪರ್ ಇಟ್ ಆಗಿದ್ದು ಇದೀಗ ಜೈಲರ್ ಪಾರ್ಟ್ 2 ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಜೈಲರ್ ಬಳಿಕ ಮತ್ತೊಮ್ಮೆ ತಲೈವಾ ಮತ್ತು ನೆಲ್ಸನ್ ದಿಲೀಪ್ ಕುಮಾರ್ ಜೊತೆಯಾಗಿ ಕೆಲಸ ಮಾಡಲಿದ್ದಾರೆ. ಕಳೆದ ವರ್ಷ ತೆರೆಕಂಡ ‘ಜೈಲರ್’ ಸಿನಿಮಾ ಬಾಕ್ಸ್ ಆಫೀಸ್ ದೂಳೆಬ್ಬಿಸಿತ್ತು. ಚಿತ್ರದಲ್ಲಿನ ರಜನಿಕಾಂತ್ ಖದರ್ ನೋಡಿ ಅಭಿಮಾನಿಗಳು ಇಷ್ಟಪಟ್ಟಿದ್ದರು. ಅಷ್ಟರ ಮಟ್ಟಿಗೆ ಜೈಲರ್ ಸಿನಿಮಾ ಕಮಾಲ್ ಮಾಡಿತ್ತು. ಈಗ ಮತ್ತೆ ಜೈಲರ್ ಪಾರ್ಟ್ 2 ಸಿನಿಮಾ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ‘ಜೈಲರ್’ ಸಿನಿಮಾ ರಜನಿಕಾಂತ್ ಮತ್ತು ನಿರ್ದೇಶಕ ನೆಲ್ಸನ್ ಇಬ್ಬರಿಗೂ ಮರುಜೀವ ನೀಡಿತ್ತು. ಹಾಗಾಗಿ ಪಾರ್ಟ್ 2ಗೆ ಕಥೆ ಬರೆಯಲು ಶುರು ಮಾಡಿದ್ದಾರಂತೆ ನೆಲ್ಸನ್. ಸದ್ಯ ರಜನಿಕಾಂತ್ ‘ಜೈ ಭೀಮ್’ ಡೈರೆಕ್ಟರ್ ಮತ್ತು ಲೋಕೇಶ್ ಕನಗರಾಜ್ ಅವರ ನಿರ್ದೇಶನದಲ್ಲಿ ಸಿನಿಮಾದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.  ಇದಾದ ಬಳಿಕ ‘ಜೈಲರ್ 2’ ತಂಡವನ್ನು ತಲೈವಾ…

Read More

ದಿನದಿಂದ ದಿನಕ್ಕೆ ನಟಿ ರಶ್ಮಿಕಾ ಮಂದಣ್ಣ ಖ್ಯಾತಿ ಹೆಚ್ಚುತ್ತಿದೆ. ಸಿನಿಮಾ ರಂಗದಲ್ಲಿ ಸದ್ದು ಮಾಡುತ್ತಿರುವ ಕನ್ನಡದ ನಟಿ ಪ್ರಸ್ತುತ ವಿಶ್ವಾದ್ಯಂತ ಫ್ಯಾಷನ್ ಕ್ಷೇತ್ರದಲ್ಲಿ ಛಾಪು ಮೂಡಿಸೋ ಮೂಲಕ ಸದ್ದು ಮಾಡುತ್ತಿದ್ದಾರೆ. ಇಟಲಿಯ ಮಿಲನ್‌ನಲ್ಲಿ ನಡೆದ ಫ್ಯಾಷನ್ ಈವೆಂಟ್‌ನಲ್ಲಿ ರಶ್ಮಿಕಾ ಮಂದಣ್ಣ ಬ್ಲ್ಯಾಕ್ ಕೋಟ್​​​ ಔಟ್​ಫಿಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಫೆಬ್ರವರಿ 20ರಂದು ‘ಮಿಲನ್ ಫ್ಯಾಷನ್ ವೀಕ್ 2024’ ಪ್ರಾರಂಭವಾಗಿದ್ದು, 26ರವರೆಗೆ ನಡೆಯಲಿದೆ. ರಶ್ಮಿಕಾ ಮಂದಣ್ಣ ಫೆ.21ರಂದು ಮಿಲನ್ ಫ್ಯಾಷನ್ ಈವೆಂಟ್ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ. ನಟಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಸ್ಟೋರಿಸ್‌ನಲ್ಲಿ ಫ್ಯಾಶನ್ ಶೋನ ಫೋಟೋಗಳನ್ನು ಹಂಚಿಕೊಂಡು, “ಮಿಲನ್ ಫಾರ್ ಎ ಮಿನಿಟ್​” ಎಂದು ಬರೆದುಕೊಂಡಿದ್ದಾರೆ. ಫ್ಯಾಶನ್ ಶೋನಿಂದ ತಮ್ಮ ಮತ್ತೊಂದು ಫೋಟೋವನ್ನು ಹಂಚಿಕೊಂಡು, ಹೇರ್​​ ಸ್ಟೈಲಿಸ್ಟ್ ಮತ್ತು ಮೇಕ್ಅಪ್ ತಂಡವನ್ನು ಟ್ಯಾಗ್ ಮಾಡಿದ್ದಾರೆ. ಆ ಫೋಟೋಗೆ “ವೆನ್​ ದಿ ಗರ್ಲ್ಸ್ ಡು ದೇರ್ ಮ್ಯಾಜಿಕ್​ ಆನ್​ ಮಿ” ಎಂದು ಬರೆದುಕೊಂಡಿದ್ದಾರೆ.  ಮಿಲನ್ ಫ್ಯಾಷನ್ ವೀಕ್​ ಪ್ರತಿವರ್ಷ ಇಟಲಿಯಲ್ಲಿ ನಡೆಯುತ್ತದೆ. ಈ ಬಾರಿ…

Read More

ನಟಿ ರಕುಲ್ ಪ್ರೀತಿ ಸಿಂಗ್ ಸಖತ್ ಖುಷಿಯಲ್ಲಿದ್ದಾರೆ. ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ 5 ವರ್ಷಗಳ ಕಾಲ ಪ್ರೀತಿಸಿದ್ದ ಯುವಕನ ಕೈ ಹಿಡಿದಿರೋ ನಟಿ ಇದೀಗ ಮದುವೆಯಾದ ಬಳಿಕ ಮೊದಲ ಭಾರಿಗೆ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದಾರೆ. ನಟಿ ರಕುಲ್ ಪ್ರೀತ್‌ ಸಿಂಗ್ ಹಾಗೂ ನಿರ್ಮಾಪಕ ಜಾಕಿ ಭಗ್ನಾನಿ ಇದೇ ಫೆ.21ರಂದು ಗೋವಾದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಮದುವೆಗೆ ಕೇವಲ ಆಪ್ತರಿಗೆ ಮಾತ್ರವೇ ಆಹ್ವಾನ ನೀಡಲಾಗಿದ್ದು ಮದುವೆಯ ಬಳಿಕ ನಟಿ ಕೆಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಮದುವೆಯಾದ ಎರಡು ದಿನಗಳ ಬಳಿಕ ದಂಪತಿ ಕ್ಯಾಮೆರಾ ಮುಂದೆ ಬಂದಿದ್ದಾರೆ. ಜಾಕಿ ಭಗ್ನಾನಿ ಸಹೋದರ ನಿಕ್ಕಿ ಜೊತೆ ನವಜೋಡಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ವಧು ರಕುಲ್ ಮಾಡ್ರನ್ ಡ್ರಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಗೋವಾದ ಪ್ರತಿಷ್ಟಿತ ಐಟಿಸಿ ಗ್ರ್ಯಾಂಡ್‌ನಲ್ಲಿ ರಕುಲ್ ಪ್ರೀತ್ ಸಿಂಗ್, ಜಾಕಿ ಭಗ್ನಾನಿ ಮದುವೆ ಸಮಾರಂಭ ಅದ್ದೂರಿಯಾಗಿ ನಡೆದಿದೆ. ಹಲವು ವರ್ಷಗಳಿಂದ ಪ್ರೇಮದಲ್ಲಿದ್ದ ರಕುಲ್, ಜಾಕಿ ಗೋವಾದಲ್ಲಿ ಬೆಳಗ್ಗೆ ಸಿಖ್ ಸಂಪ್ರದಾಯದಂತೆ, ಸಂಜೆ ಸಿಂಧಿ…

Read More

ಕೊಲೆ ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಆರೋಪಿಗಳಿಗೆ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಬಹಿರಂಗವಾಗಿ ಮರಣ ದಂಡನೆ ಶಿಕ್ಷೆ ವಿಧಿಸಿದೆ. ಇಬ್ಬರಿಗೂ ಫುಟ್ಬಾಲ್ ಕ್ರೀಡಾಂಗಣದಲ್ಲಿ ಬಹಿರಂಗವಾಗಿ ಗುಂಡು ಹಾರಿಸುವ ಮೂಲಕ ಹತ್ಯೆ ಮಾಡಲಾಗಿದೆ. ಅಫ್ಘಾನಿಸ್ತಾನದ ಘಜ್ನಿ ನಗರದಲ್ಲಿ ಇರುವ ಫುಟ್ಬಾಲ್ ಕ್ರೀಡಾಂಗಣದಲ್ಲಿ ಈ ಬಹಿರಂಗ ಮರಣ ದಂಡನೆ ಶಿಕ್ಷೆಯನ್ನು ವಿಧಿಸಲಾಯಿತು. ಈ ಮರಣ ದಂಡನೆ ವಾರೆಂಟ್‌ ಮೇಲೆ ತಾಲಿಬಾನ್‌ನ ಪರಮೋಚ್ಛ ನಾಯಕ ಹಿಬಾತುಲ್ಲಾ ಅಕುಂಝಾದಾ ಅವರು ಸಹಿ ಹಾಕಿದ್ದು, ಅಫ್ಘಾನಿಸ್ತಾನದ ಸುಪ್ರೀಂ ಕೋರ್ಟ್‌ ಅಧಿಕಾರಿ ಅತೀಖುಲ್ಲಾ ದರ್ವಿಶ್ ಎಂಬುವರು ಇಬ್ಬರೂ ಅಪರಾಧಿಗಳ ವಿರುದ್ಧ ಜಾರಿಯಾಗಿದ್ದ ಮರಣ ದಂಡನೆ ವಾರೆಂಟ್ ಅನ್ನು ಸ್ಫೀಕರ್ ಮೂಲಕ ತಿಳಿಸಿದರು. ಮರಣ ದಂಡನೆ ಶಿಕ್ಷೆಗೆ ಗುರಿಯಾದ ಇಬ್ಬರೂ ಅಪರಾಧಿಗಳೂ ಕೊಲೆ ಮಾಡಿದ್ದರು. ಎರಡು ವರ್ಷಗಳ ಕಾಲ ನ್ಯಾಯಾಲಯಗಳಲ್ಲಿ ಈ ಕುರಿತ ವಿಚಾರಣೆ ನಡೆದಿತ್ತು. ನಂತರ ಮರಣ ದಂಡನೆ ಆದೇಶಕ್ಕೆ ಸಹಿ ಬಿದ್ದಿತ್ತು ಎಂದು ಅಫ್ಘಾನಿಸ್ತಾನ ಸುಪ್ರೀಂ ಕೋರ್ಟ್‌ ಅಧಿಕಾರಿ ಅತೀಖುಲ್ಲಾ ದರ್ವಿಶ್ ಅವರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಸೇರಿದ್ದ ಜನರಿಗೆ ಮಾಹಿತಿ…

Read More

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ‘ಮಾರ್ನಿಂಗ್ ಕನ್ಸಲ್ಟ್‌’ ಸರ್ವೇಕ್ಷಣಾ ಸಂಸ್ಥೆ ನಡೆಸುವ ಸರ್ವೆಯಲ್ಲಿ ಈ ಫಲಿತಾಂಶ ಲಭ್ಯವಾಗಿದ್ದು, ಮೋದಿ ಪರ ಜಾಗತಿಕವಾಗಿ ಶೇ. 78ರಷ್ಟು ‘ಅನುಮೋದನೆ ಸೂಚ್ಯಂಕ’ ಸಿಕ್ಕಿದೆ. ಜನವರಿ 30 ರಿಂದ ಫೆಬ್ರವರಿ 5ರವರೆಗೆ ವಿಶ್ವಾದ್ಯಂತ ಸರ್ವೇಕ್ಷಣಾ ಕಾರ್ಯ ನಡೆಸಿ ಮಾರ್ನಿಂಗ್ ಕನ್ಸಲ್ಟ್‌ ಸಂಸ್ಥೆಯು ಈ ಅಂಕಿ ಅಂಶ ಕಲೆ ಹಾಕಿದೆ. 7 ದಿನಗಳ ಕಾಲ ವಿವಿಧ ದೇಶಗಳ ವಯಸ್ಕ ಮತದಾರರ ಅಭಿಪ್ರಾಯಗಳನ್ನು ಆಲಿಸಿ ಅದರ ಸರಾಸರಿಯನ್ನು ಪ್ರಕಟ ಮಾಡಿರೋದಾಗಿ ಮಾರ್ನಿಂಗ್ ಕನ್ಸಲ್ಟ್‌ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ. ಎರಡನೇ ಸ್ಥಾನದಲ್ಲಿ ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನ್ಯುಲ್ ಲೋಪಜ್ ಆರ್ಬ್ರೇಡರ್ ಇದ್ದು ಅವರಿಗೆ ಜಾಗತಿಕವಾಗಿ ಶೇ. 64ರಷ್ಟು ಮತಗಳು ಲಭ್ಯವಾಗಿವೆ. ಇನ್ನು ಸ್ವಿಟ್ಜರ್‌ಲೆಂಡ್‌ನ ಅಲೈನ್ ಬೆರ್ಸತ್ ಅವರು ಮೂರನೇ ಸ್ಥಾನದಲ್ಲಿದ್ದು ಅವರಿಗೆ ಜಾಗತಿಕವಾಗಿ ಶೇ. 57 ರಷ್ಟು ಅನುಮೋದನಾ ಸೂಚ್ಯಂಕಗಳು ಲಭ್ಯ ಆಗಿವೆ.

Read More

ಅಮೀರ್ ಖಾನ್ ನಟನೆಯ ದಂಗಲ್ ಸಿನಿಮಾದಲ್ಲಿ ನಟಿಸಿದ್ದ ಸುಹಾನಿ ಇತ್ತೀಚೆಗಷ್ಟೇ ನಿಧನರಾಗಿದ್ದಾರೆ. ಇದೀಗ ನಟ ಅಮೀರ್ ಖಾನ್ ಸುಹಾನಿ ಕುಟುಂಬಕ್ಕೆ ಭೇಟಿ ನೀಡಿ ಪೋಷಕರಿಗೆ ಸಾಂತ್ವಾನ ಹೇಳಿದ್ದಾರೆ. ಸುಹಾನಿ ನಿಧನರಾಗಿ 5 ದಿನಗಳ ನಂತರ ನಟ ಆಮೀರ್ ಫರಿದಾಬಾದ್‌ನಲ್ಲಿರುವ ನಟಿಯ ಕುಟುಂಬಸ್ಥರನ್ನು ಭೇಟಿಯಾಗಿದ್ದಾರೆ. ಸುಹಾನಿ ನಿಧನದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದ ನಟ, ಕುಟುಂಬಸ್ಥರಿಗೆ ಧೈರ್ಯ ನೀಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸುಹಾನಿ ನಿಧನಕ್ಕೆ ಆಮೀರ್‌ ಸಂತಾಪ ಸೂಚಿಸಿದ್ದರು. ಈಗ ಅವರ ಕುಟುಂಬದವರನ್ನು ನಟ ಭೇಟಿಯಾಗಿರುವುದ್ದಕ್ಕೆ‌ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ‘ದಂಗಲ್’ ಸಿನಿಮಾದಲ್ಲಿ ಬಬಿತಾ ಪೋಗಟ್ ಪಾತ್ರದಲ್ಲಿ ನಟಿಸಿದ್ದ ಸುಹಾನಿ ಭಟ್ನಾಗರ್ ಭರವಸೆಯ ನಟಿಯಾಗಿ ಗುರುತಿಸಿಕೊಂಡಿದ್ದರು. ಆದರೆ ಅಪ್ರಾಪ್ತ ವಯಸ್ಸಿನಲ್ಲಿ ಸುಹಾನಿ ನಿಧನರಾಗಿರುವುದು ನಿಜಕ್ಕೂ ದುಃಖದ ಸಂಗತಿ. ಅಂದ ಹಾಗೆ ಆಪ್ತರ ಪ್ರಕಾರ, ಸುಹಾನಿ ತಮ್ಮ ಕಾಲಿನ ಮೂಳೆ ಮುರಿತದ ಸಲುವಾಗಿ ಚಿಕಿತ್ಸೆ ಪಡೆದುಕೊಂಡು, ಅದಕ್ಕೆ ಸಂಬಂಧಿಸಿದ ಔಷಧಿ ಸೇವಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ಔಷಧಿಯ ಅಡ್ಡ ಪರಿಣಾಮದಿಂದ ಸುಹಾನಿ ಮೃತಪಟ್ಟಿರಬಹುದು ಎಂದು ಹೇಳಲಾಗುತ್ತಿದೆ.

Read More

ಹಿರಿಯ ರಾಜಕಾರಣಿಗಾಗಿ ನಟಿ ತ್ರಿಶಾ ಅವರನ್ನು 25 ಲಕ್ಷ ರೂಪಾಯಿ ಕೊಟ್ಟು ರೆಸಾರ್ಟ್‌ಗೆ ಕರೆಯಿಸಿಕೊಂಡಿದ್ದೆವು ಎಂದು ಎಐಎಡಿಎಂಕೆ ಉಚ್ಚಾಟಿತ ಮುಖಂಡ ಎ.ವಿ.ರಾಜು  ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ನಟಿ ತ್ರಿಷಾ ಪ್ರತಿಕ್ರಿಯಿಸಿದ್ದು ಎ.ವಿ.ರಾಜುಗೆ  ತಕ್ಕ ಪಾಠ ಕಲಿಸೋದಾಗಿ ಹೇಳಿದ್ದರು. ಅಲ್ಲದೆ ಎ.ವಿ ರಾಜು ವಿರುದ್ಧ ಕಾನೂನು ಸಮರಕ್ಕೆ ನಟಿ ಮುಂದಾಗಿದ್ದಾರೆ. ನಟಿ ತ್ರಿಶಾ ಅವರು ಎ.ವಿ ರಾಜು ಅವರ ಕುರಿತ ನೋಟಿಸ್ ಅನ್ನು ನೇರವಾಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಎ.ವಿ ರಾಜು ತಮ್ಮ ವಿರುದ್ಧ ನೀಡಿರುವ ಅವಹೇಳನಕಾರಿ ಹೇಳಿಕೆ ನೀಡಿದ್ದು, ಪರಿಹಾರ ನೀಡುವಂತೆ ನೋಟಿಸ್‌ನಲ್ಲಿ ತಿಳಿಸಿದ್ದಾರೆ. ರಾಜು ಕೊಟ್ಟಿರುವ ಹೇಳಿಕೆಗಳಿಂದ ನಟಿ ತ್ರಿಶಾ ಮಾನಸಿಕವಾಗಿ ನೊಂದಿರುವುದಾಗಿ ಹೇಳಿದ್ದಾರೆ. ಅಲ್ಲದೇ, ಮಾಧ್ಯಮಗಳಲ್ಲಿ ಅವಹೇಳನಕಾರಿ ಕಾಮೆಂಟ್‌ಗಳನ್ನು ನೀಡದಂತೆ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ರಾಜು ಮಾಡಿರುವ ಹೇಳಿಕೆಗಳನ್ನು ಮುದ್ರಣ ಮಾಧ್ಯಮ, ಎಲೆಕ್ಟಾçನಿಕ್ ಮಾಧ್ಯಮಗಳು ಹಾಗೂ ಸೋಶಿಯಲ್ ಮೀಡಿಯಾಗಳಿಂದ ಸಂಪೂರ್ಣ ಅಳಿಸಿ ಹಾಕಬೇಕು ಎಂದು ಹೇಳಿದ್ದಾರೆ. ಈ ನೋಟಿಸ್ ಸ್ವೀಕರಿಸಿದ 24 ಗಂಟೆಗಳ ಒಳಗೆ ನಟಿ…

Read More

ಇಸ್ರೇಲ್ ಗಾಜಾದ ದಕ್ಷಿಣದಲ್ಲಿರುವ ರಫಾದ ಮೇಲೆ ಬಾಂಬ್ ದಾಳಿಯನ್ನು ತೀವ್ರಗೊಳಿಸಿದೆ. ವೈಮಾನಿಕ ದಾಳಿಯಲ್ಲಿ ಒಂದೇ ಕುಟುಂಬದ 12 ಜನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಯುದ್ಧದಲ್ಲಿ ಇದುವರೆಗೂ 29,313 ಮಂದಿ ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ಟೀನ್‌ ಆರೋಗ್ಯ ಸಚಿವಾಲಯ ಮಾಹಿತಿ ಹಂಚಿಕೊಂಡಿದೆ. ಹಮಾಸ್‌ ಬಂಡುಕೋರರು ದಕ್ಷಿಣ ಇಸ್ರೇಲ್‌ ಮೇಲೆ 2023ರ ಅಕ್ಟೋಬರ್‌ 7ರಂದು ದಾಳಿ ನಡೆಸಿದ್ದರು. ಅದಕ್ಕೆ ಪ್ರತಿಯಾಗಿ ಗಾಜಾ ಪಟ್ಟಿಯ ಮೇಲೆ ಇಸ್ರೇಲ್‌ ತೀವ್ರ ದಾಳಿ ನಡೆಸುತ್ತಿದೆ. ಗಾಜಾ ಸ್ಮಶಾನಭೂಮಿಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆ ಹಾಗೂ ವಿವಿಧ ರಾಷ್ಟ್ರಗಳು, ಮಾನವೀಯ ಆಧಾರದಲ್ಲಿ ಗಾಜಾದಲ್ಲಿ ಕದನ ವಿರಾಮ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿವೆ.

Read More