ಪತ್ರಕರ್ತ, ನಟ, ನಿರ್ಮಾಪಕ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ‘ಗೌರಿ’ ಚಿತ್ರದ ಮೂಲಕ ಗಾಂಧಿನಗರಕ್ಕೆ ಎಂಟ್ರಿಕೊಟ್ಟಿದ್ದಾರೆ. ಸದ್ಯ ಸಮರ್ಜಿತ್ ಹಾಗೂ ಸಾನ್ಯ ಐಯ್ಯರ್ ನಟನೆಯ ಗೌರಿ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು ಈ ಮಧ್ಯೆ ಸಮರ್ಜಿತ್ ತಾನ್ಯ ಜೊತೆ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ. ಮಾರ್ಚ್ 17, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ. ಪುನೀತ್ ಅವರ ಹುಟ್ಟುಹಬ್ಬಕ್ಕೆ ‘ಗೌರಿ’ ತಂಡದಿಂದ ವಿಶೇಷ ಗೀತೆಯೊಂದು ಬರಲಿದೆ. ಈ ವಿಶೇಷ ಗೀತೆಗೆ ಸಮರ್ಜಿತ್ ಲಂಕೇಶ್ ಜೊತೆ ದಕ್ಷಿಣ ಭಾರತದ ಖ್ಯಾತ ನಟಿ ತಾನ್ಯ ಹೋಪ್ ಹೆಜ್ಜೆ ಹಾಕಲಿದ್ದಾರೆ. ಮೋಹನ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ಪುನೀತ್ ಅವರ ಡ್ಯಾನ್ಸ್ ನನಗೆ ಸ್ಪೂರ್ತಿ. ಹಾಗಾಗಿ ಅವರ ಹುಟ್ಟುಹಬ್ಬದಂದು ಗೌರಿ ಚಿತ್ರತಂಡದಿಂದ ಈ ಹಾಡನ್ನು ಬಿಡುಗಡೆ ಮಾಡುವ ಮೂಲಕ ಅವರಿಗೆ ನಮನ ಸಲ್ಲಿಸುತ್ತಿದ್ದೇವೆ ಎಂದು ಸಮರ್ಜಿತ್ ಹೇಳಿದ್ದಾರೆ.
Author: Author AIN
ಮದುವೆಯಾಗುವುದಾಗಿ ನಂಬಿಸಿ ಯುವತಿಯ ಮೇಲೆ ಕಳೆದ 13 ವರ್ಷಗಳಿಂದ ನಿರಂತರ ಅತ್ಯಾಚಾರ ಎಸಗಿದ ಆರೋಪದ ಮೇಲೆ ಛತ್ತೀಸ್‍ಗಢದ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಮನೋಜ್ ರಜಪೂತ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿದ್ದ ರಜಪೂತ್ 2011 ರಿಂದ ತನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾನೆ ಎಂದು 29 ವರ್ಷದ ಸಂತ್ರಸ್ತೆ ಆರೋಪಿಸಿದ್ದಾಳೆ. ಈ ಬಗ್ಗೆ ಫೆ.22 ರಂದು ಓಲ್ಡ್ ಭಿಲಾಯ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದೀಗ ನಟನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿಯ ವಿರುದ್ಧ ಅತ್ಯಾಚಾರ, ಅಸ್ವಾಭಾವಿಕ ಲೈಂಗಿಕತೆ ಮತ್ತು ಬೆದರಿಕೆ ಪ್ರಕರಣಗಳು ದಾಖಲಾಗಿದೆ. ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಸಹ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಸ್ಥಳೀಯ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸಿದಾಗ ನ್ಯಾಯಾಲಯ ಪೋಕ್ಸೊ ಪ್ರಕರಣವನ್ನು ರದ್ದುಪಡಿಸಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಟೇರ ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದಾರೆ. ಈ ಮಧ್ಯೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರಿಗೆ ಹೇಳಿದ ಮಾತು ವಿವಾದಕ್ಕೆ ಕಾರಣವಾಗಿದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರಿಗೆ ದರ್ಶನ್ ತಗಡು ಎಂಬ ಪದ ಬಳಸಿದ್ದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ದರ್ಶನ್ ವಿರುದ್ಧ ದೂರು ದಾಖಲಾಗಿದೆ. ಆದರೆ ಇದ್ಯಾವುದರ ಬಗ್ಗೆ ತಲೆಕೆಡಿಸಿಕೊಳ್ಳದ ನಟ ದರ್ಶನ್ ಆರಾಮವಾಗಿ ಪತ್ನಿ ಹಾಗೂ ಆಪ್ತ ಸ್ನೇಹಿತರೊಂದಿಗೆ ಪಾರ್ಟಿ ಎಂಜಾಯ್ ಮಾಡಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಜೊತೆಗೆ ಡ್ಯಾನ್ಸ್ ಫ್ಲೋರ್ ನಲ್ಲಿ ದರ್ಶನ್ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ವಿಜಯಲಕ್ಷ್ಮಿ ಸಹ ಪತಿಯೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದಾರೆ. ದರ್ಶನ್ರ ಹಲವು ಗೆಳೆಯರು ಸಹ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ದರ್ಶನ್ ವಿರುದ್ಧ ಮಹಿಳಾಪರ ಸಂಘಟನೆ ಹಾಗೂ ಇತರೆ ಕೆಲವು ಸಂಘಟನೆಗಳು ದೂರುಗಳನ್ನು ದಾಖಲಿಸಿವೆ. ಆದರೆ ಅದ್ಯಾವುದನ್ನೂ ಗಮನಕ್ಕೆ ತೆಗೆದುಕೊಳ್ಳದೆ ಆರಾಮವಾಗಿ ಪಾರ್ಟಿ ಮಾಡಿದ್ದಾರೆ. ಪತ್ನಿಯೊಂದಿಗೆ ಪಾರ್ಟಿ ಮಾಡುವ ಮೂಲಕ ಕೆಲವು ದಿನಗಳ ಹಿಂದೆ ಪವಿತ್ರಾ ಗೌಡ ಹಾಗೂ ವಿಜಯಲಕ್ಷ್ಮಿ…
ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ನಡುವೆ ನಡೆಯುತ್ತಿರುವ ವಾಕ್ ಸಮರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಳೆದ 5 ದಿನಗಳಿಂದ ದರ್ಶನ್ ಆಡಿದ ಮಾತು ವಿವಾದ ಹುಟ್ಟುಹಾಕುತ್ತಿದ್ದು ಇದೀಗ ಈ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯಿಸಿದ್ದಾರೆ. ಕಾಟೇರ ಸಿನಿಮಾ ಯಶಸ್ವಿಯಾಗಿದೆ. ಬಹಳಷ್ಟು ವರ್ಷಗಳ ಬಳಿಕ ದರ್ಶನ್‌ಗೆ ಒಂದು ಸಕ್ಸಸ್ ಸಿಕ್ಕಿದೆ. `ಕಾಟೇರ’ ಸಿನಿಮಾ ನೋಡಿ ಜನ ಮೆಚ್ಚಿಕೊಂಡಿದ್ದಾರೆ. ಈ ಟೈಮ್‌ನಲ್ಲಿ ಈ ರೀತಿ ಮಾಡಿಕೊಳ್ಳಬಾರದಿತ್ತು. ಇಬ್ಬರ ಜಗಳ ಚಿತ್ರರಂಗದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. ನನ್ನ ಪ್ರೀತಿಯ ರಾಮು, `ಸಂಗೊಳ್ಳಿ ರಾಯಣ್ಣ’ ಬಳಿಕ ದರ್ಶನ್ ಕಾಟೇರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಸಿನಿಮಾ ಹಿಟ್ ಆಗಿದೆ. ಇಂತಹ ಸಮಯದಲ್ಲಿ ಅವರುಗಳೇ ಕುಳಿತು ಇದನ್ನು ಸರಿಮಾಡಿಕೊಳ್ಳಬೇಕು. ಇದು ಇಂಡಸ್ಟ್ರಿಗೆ ಶೋಭೆ ತರುವಂತಹ ವಿಚಾರವಲ್ಲ. ಈ ವಿಚಾರದ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಮುಂದೆ ಅದು ಕೆಟ್ಟ ಬೆಳವಣಿಗೆ ಆಗುತ್ತೆ ಎಂದಿದ್ದಾರೆ. ಸೋಷಿಯಲ್ ಮೀಡಿಯಾ ಒಂದು ಅದ್ಬುತ ಜಗತ್ತು. ಆದರೆ ಕೆಲವು…
ಸಾಕಷ್ಟು ಸದ್ದು ಮಾಡಿದ್ದ ಕಾಂತಾರ ಸಿನಿಮಾದ ಫಾರ್ಟ್ 2 ಯಾವಾಗ ಶುರುವಾಗುತ್ತೆ ಎಂದು ಕಾದು ಕೂತಿದ್ದ ಅಭಿಮಾನಿಗಳಿಗೆ ಶೆಟ್ರ ತಂಡದಿಂದ ಗುಡ್ ನ್ಯೂಸ್ ಸಿಕ್ಕಿದೆ. ನಟ ರಿಷಬ್ ಶೆಟ್ಟಿ ಸದ್ದಿಲ್ಲದೆ ಕಾಂತಾರ 2 ಚಿತ್ರದ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ಕುಂದಾಪುರದಲ್ಲಿ ಹಾಕಿರುವ ಸೆಟ್ ನಲ್ಲೇ ಚಿತ್ರೀಕರಣ ನಡೆಯುತ್ತಿದ್ದು, ಈ ಸಿನಿಮಾದಲ್ಲಿ ರಾಜನ ಪಾತ್ರವನ್ನು ಮಾಡುತ್ತಿರುವ ವಿನಯ್ ಬಿದ್ದಪ್ಪ ದೈವದ ಸನ್ನಿಧಿಗೆ ಹೋಗಿದ್ದಾರೆ. ಸಿನಿಮಾ ಕುರಿತಂತೆ ದೈವ ಅವರಿಗೆ ಅಭಯ ನೀಡಿದೆ. ಇತ್ತೀಚೆಗಷ್ಟೇ ಪುತ್ತೂರಿನ ಪನಡ್ಕದಲ್ಲಿ ನಡೆದ ದೈವದ ನೇಮದಲ್ಲಿ ಕಲ್ಲುರ್ಟಿ ದೈವದ ಬಳಿ ಕಾಂತಾರದಲ್ಲಿ ರಾಜನ ಪಾತ್ರವನ್ನು ನಿರ್ವಹಿಸುತ್ತಿರುವ ವಿನಯ್ ಬಿದ್ದಪ್ಪ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಧರ್ಮಕ್ಕೆ ಅಪಚಾರ ಆಗದಂತೆ ಸಿನಿಮಾ ಮಾಡಿ ಎಂದು ದೈವ ಅಭಯ ನೀಡಿದೆ. ಕಾಂತಾರ ಚಿತ್ರಕ್ಕಾಗಿಯೇ ಬೃಹತ್ ಸೆಟ್ ಗಳನ್ನು ಹಾಕಲಾಗಿದ್ದು, ಸದ್ಯ ಅದೇ ಸೆಟ್ ನಲ್ಲೇ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾ ಟೀಮ್ ಬಿಟ್ಟರೆ ಬೇರೆಯವರಿಗೆ ಅಲ್ಲಿ ಅವಕಾಶವಿಲ್ಲದಂತೆ ಕಾಳಜಿ ವಹಿಸಲಾಗಿದೆ. ಸಾಕಷ್ಟು ಮುತುವರ್ಜಿಯಿಂದ ಸಿನಿಮಾದ…
ಅಮೆರಿಕದ ಮಿಸ್ಸೋರಿಯಲ್ಲಿ ಫೆಬ್ರವರಿ 20ರಂದು ಮನೆಗೆ ಬೆಂಕಿ ಬಿದ್ದು 5 ಮಂದಿ ಜೀವಂತ ದಹನಗೊಂಡ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಘಟನೆಯಲ್ಲಿ ಮೃತಪಟ್ಟ ಮಹಿಳೆಯೇ ಮನೆಗೆ ಬೆಂಕಿ ಹಚ್ಚಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಶಿಕ್ಷಕಿಯಾಗಿರುವ ಬೆರ್ನಾಡಿನ್ ಪ್ರುಸ್ನರ್ (39 ವರ್ಷ) ಉದ್ದೇಶಪೂರ್ವಕವಾಗಿ ಹಾಸಿಗೆಗೆ ಅಗ್ನಿಸ್ಪರ್ಷ ಮಾಡಿದ್ದು ಬೆಂಕಿ ತಕ್ಷಣ ಸಂಪೂರ್ಣ ಮನೆಗೆ ವ್ಯಾಪಿಸಿದೆ. ಈ ವೇಳೆ ಮನೆಯಲ್ಲಿದ್ದ 5 ಮಂದಿ ಅಗ್ನಿಯ ಕೆನ್ನಾಲಿಗೆಗೆ ಆಹುತಿಯಾಗಿದ್ದಾರೆ. 9 ವರ್ಷದ ಅವಳಿ ಮಕ್ಕಳಾದ ಎಲೀ ಮತ್ತು ಐವಿ, 6 ವರ್ಷದ ಜಾಕ್ಸನ್ ಹಾಗೂ 2 ವರ್ಷದ ಮಿಲೀ ಬೆಂಕಿಯಲ್ಲಿ ದಹನಗೊಂಡಿದ್ದರು. ಬೆಂಕಿ ಹಚ್ಚಿದ್ದ ಪ್ರುಸ್ನರ್ ಕೂಡಾ ಮೃತಪಟ್ಟಿದ್ದಳು. ಆರಂಭದಲ್ಲಿ ಇದು ಅಕಸ್ಮಾತ್ ಆದ ದುರಂತ ಎಂದು ಪೊಲೀಸರು ಶಂಕಿಸಿದ್ದರು. ಆದರೆ ದುರ್ಘಟನೆ ನಡೆಯುವ ಒಂದು ದಿನ ಮೊದಲು ಪ್ರುಸ್ನರ್ ಸಾಮಾಜಿಕ ಮಾಧ್ಯಮದಲ್ಲಿ `ನಾವು ಪ್ರಪಂಚದ ವಿರುದ್ಧ. ನಿಮ್ಮ ತಾಯಿಯಾಗಿರುವುದು ನನ್ನ ಸೌಭಾಗ್ಯ’ ಎಂದು ಮಕ್ಕಳನ್ನು ಉದ್ದೇಶಿಸಿ ಪೋಸ್ಟ್ ಮಾಡಿದ್ದರು. 2017ರಲ್ಲಿ ಪುಸ್ನರ್ ಪತಿ ಡೇವಿಡ್…
ಕ್ಷುಲಕ ಕಾರಣಕ್ಕೆ ನಡೆದ ಗಲಾಟೆಯಿಂದ ಕೋಪಗೊಂಡ ಪತಿ ಪತ್ನಿಯನ್ನು ಇರಿದು ಹತ್ಯೆ ಮಾಡಿದ ಪ್ರಕರಣದಲ್ಲಿ ಭಾರತ ಮೂಲದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಘಟನೆ ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತದಲ್ಲಿ ನಡೆದಿದೆ. 40 ವರ್ಷದ ಭಾರತೀಯ ಮೂಲದ ವ್ಯಕ್ತಿ ನವೀಂದರ್ ಗಿಲ್ ಗೆ ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತದ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. 2022ರಲ್ಲಿ ನವೀಂದರ್ ಗಿಲ್ ತನ್ನ ಪತ್ನಿ ಹರ್‍ಪ್ರೀತ್ ಕೌರ್ ರನ್ನು ಇರಿದು ಹತ್ಯೆ ಮಾಡಿದ್ದ. ದಂಪತಿಗೆ 10 ವರ್ಷದ ಒಳಗಿನ 3 ಮಕ್ಕಳಿದ್ದಾರೆ. 2022ರ ಡಿಸೆಂಬರ್ 7ರಂದು ಸರ್ರೆ ನಗರದ ನಿವಾಸದಲ್ಲಿ ದಂಪತಿಯ ನಡುವೆ ಜಗಳವಾಗಿದ್ದು ನವೀಂದರ್ ಗಿಲ್ ತನ್ನ ಪತ್ನಿಯ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಹರ್‍ಪ್ರೀತ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ನವೀಂದರ್ ದೋಷಿ ಎಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ಘೋಷಿಸಿದ್ದು 10 ವರ್ಷ ಪೆರೋಲ್ ನೀಡಬಾರದು ಎಂದು ಆದೇಶಿಸಿದೆ.
ಪಾಕಿಸ್ತಾನದಲ್ಲಿ ಫೆಬ್ರವರಿ 8ರಂದು ನಡೆದ ಸಾರ್ವತ್ರಿಕ ಚುನಾವಣೆಯ ಫಲಿತಾಂಶವನ್ನು ಪ್ರಶ್ನಿಸಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಪಿಟಿಐ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದೆ. ಮತದಾನದ ಹಾಗೂ ಮತಗಳ ಎಣಿಕೆಯ ಸಂದರ್ಭದಲ್ಲಿ ವ್ಯಾಪಕ ಅಕ್ರಮ ನಡೆದಿದ್ದು ಮತ ಎಣಿಕೆ ಪ್ರಕ್ರಿಯೆ ಅಕ್ರಮಗಳ ತಾಯಿಯಾಗಿದೆ. ಹಲವು ಕ್ಷೇತ್ರಗಳ ಫಲಿತಾಂಶವನ್ನು ತಿರುಚಲಾಗಿದೆ. ಸೋತ ಅಭ್ಯರ್ಥಿಗಳು ಗೆದ್ದಿದ್ದಾರೆಂದು ಘೋಷಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗಿದೆ ಎಂದು ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷ ಆರೋಪಿಸಿದೆ. ಈ ಎಲ್ಲಾ ಅಕ್ರಮಗಳಿಂದ ಪಿಟಿಐ ಪಕ್ಷ ಬೆಂಬಲಿಸಿದ ಅಭ್ಯರ್ಥಿಗಳ ಜನಾದೇಶವನ್ನು ಕದಿಯಲಾಗಿದೆ ಎಂದು ಸುಪ್ರೀಂಕೋರ್ಟ್‍ಗೆ ಸಲ್ಲಿಸಿದ ಅರ್ಜಿಯಲ್ಲಿ ನಮೂದಿಸಲಾಗಿದೆ. ರಾಷ್ಟ್ರೀಯ ಅಸೆಂಬ್ಲಿಗೆ ನಡೆದಿದ್ದ ಚುನಾವಣೆಯಲ್ಲಿ ಪಿಟಿಐ ಬೆಂಬಲದಿಂದ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿಗಳು 180 ಸ್ಥಾನಗಳಲ್ಲಿ ಗೆದ್ದಿದ್ದಾರೆ. ಆದರೆ ಮತ ಎಣಿಕೆಯ ಅಕ್ರಮದಿಂದಾಗಿ ಪಕ್ಷಕ್ಕೆ ದಕ್ಕಿದ ಸ್ಥಾನಗಳನ್ನು 92ಕ್ಕೆ ಇಳಿಸಲಾಗಿದ್ದು ಅಧಿಕಾರಕ್ಕೆ ಮರಳುವ ಅವಕಾಶವನ್ನು ಕಿತ್ತುಕೊಳ್ಳಲಾಗಿದೆ ಎಂದು ಪಿಟಿಐ ಪ್ರತಿಪಾದಿಸಿದೆ. ಚುನಾವಣೆಯ ಅಕ್ರಮವನ್ನು ಪ್ರಶ್ನಿಸಿ ಪಿಟಿಐ ಹಿರಿಯ ಮುಖಂಡ ಶೇರ್ ಅಫ್ಝಲ್ ಮರ್ವಾಟ್ ಸುಪ್ರೀಂಕೋರ್ಟ್‍ಗೆ ಅರ್ಜಿ…
ನೊರೊವೈರಸ್ ಎಂದು ಕರೆಯಲಾಗುವ ಹೊಟ್ಟೆಯ ಸೋಂಕು ಸದ್ಯ ಅಮೆರಿಕದ ಈಶಾನ್ಯ ಪ್ರದೇಶದಾದ್ಯಂತ ವೇಗವಾಗಿ ಹರಡುತ್ತಿದೆ ಎಂದು ಅಮೆರಿಕದ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಏಜೆನ್ಸಿ ಸಿಡಿಸಿ ಅಂಕಿ ಅಂಶದಲ್ಲಿ ವರದಿ ಆಗಿದೆ. ಸಿಡಿಸಿ ವರದಿಯ ಪ್ರಕಾರ, ಈಶಾನ್ಯ ಪ್ರದೇಶದಲ್ಲಿನ 3 ವಾರಗಳ ಪರೀಕ್ಷೆಯ ಸರಾಸರಿ ಪಾಸಿಟಿವ್ ಪ್ರಮಾಣ 13.9%ಕ್ಕೆ ತಲುಪಿದೆ ಮತ್ತು 2023ರ ಡಿಸೆಂಬರ್ ಮಧ್ಯಭಾಗದಿಂದ ಪಾಸಿಟಿವ್ ಪ್ರಮಾಣ 10%ಕ್ಕೂ ಹೆಚ್ಚಿನ ಪ್ರಮಾಣದಲ್ಲಿಯೇ ಉಳಿದಿದೆ. ಅಮೆರಿಕದಲ್ಲಿ ವಾಂತಿ, ಅತಿಸಾರ ಮತ್ತು ಆಹಾರದಿಂದ ಹರಡುವ ಅನಾರೋಗ್ಯದ ಪ್ರಾಥಮಿಕ ಕಾರಣ ನೊರೊವೈರಸ್ ಎಂದು ಗುರುತಿಸಲಾಗಿದೆ. ಈ ಅನಾರೋಗ್ಯ ಎಲ್ಲಾ ವಯಸ್ಸಿನ ವ್ಯಕ್ತಿಗಳ ಮೇಲೆ ಪರಿಣಾಮ ಬೀರಬಹುದು ಮತ್ತು ಇದು ಬಹಳ ಸುಲಭವಾಗಿ ಮತ್ತು ತ್ವರಿತವಾಗಿ ಹರಡುತ್ತದೆ. ನೊರೊವೈರಸ್ ಹರಡುವುದನ್ನು ತಡೆಯಲು ಸಾಬೂನು ಮತ್ತು ನೀರಿನಿಂದ ಕೈತೊಳೆಯಬೇಕು, ಬ್ಲೀಚಿಂಗ್ ಪೌಡರ್ ಬಳಸಬೇಕು ಮತ್ತು ಬಿಸಿನೀರಿನಿಂದ ಬಟ್ಟೆಗಳನ್ನು ಒಗೆಯಬೇಕು ಎಂದು ಸಿಡಿಸಿ ವರದಿಯಲ್ಲಿ ತಿಳಿಸಿದೆ.
ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದ ಪತ್ನಿಯ ಫೋನ್ ಕರೆಗಳನ್ನು ಕದ್ದಾಲಿಕೆ ಮಾಡಿ ಆಕೆ ಕೆಲಸ ಮಾಡುತ್ತಿದ್ದ ಸಂಸ್ಥೆಯ ದತ್ತಾಂಶಗಳನ್ನು ತಿಳಿದು, ಅವುಗಳ ಆಧಾರದಲ್ಲಿ ಅಕ್ರಮವಾಗಿ ವ್ಯವಹಾರ ನಡೆಸಿ 16.58 ಕೋಟಿ ರೂ. ಘಳಿಸಿದ್ದ ಪತಿಗೆ ಪತ್ನಿ ವಿಚ್ಚೇದನ ನೀಡಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಟೆಕ್ಸಾಸ್ ನಿವಾಸಿ ಟೈಲರ್ ಲೌಡನ್ ಅವರ ಪತ್ನಿ ಬ್ರಿಟಿಷ್ ಪೆಟ್ರೋಲಿಯಂ (ಬಿಪಿ) ಸಂಸ್ಥೆಯಲ್ಲಿ ವಿಲೀನ ಮತ್ತು ಸ್ವಾಧೀನ ವಿಭಾಗದಲ್ಲಿ ನಿರ್ವಹಣ ಅಧಿಕಾರಿಯಾಗಿ ಕಾರ್ಯನಿರ್ವ ಹಿಸುತ್ತಿ ದ್ದರು. ಬಿಪಿ ಸಂಸ್ಥೆಯು ಅಮೆರಿಕ ಐಎನ್‌ಸಿಯ ಟ್ರಾವೆಲ್ಸ್ ಸಂಸ್ಥೆಗಳನ್ನು ಖರೀದಿಸಲು ಯೋಜಿಸಿದ್ದು, ಅದರ ಮೇಲ್ವಿಚಾರಣೆಯನ್ನೂ ನೋಡಿಕೊ ಳ್ಳುತ್ತಿದ್ದರು. ಆಕೆ ಮನೆಯಿಂದ ಕಾರ್ಯ ನಿರ್ವಹಿಸುವಾಗ ಟೈಲರ್ ಪತ್ನಿಯ ಫೋನ್ ಕರೆಗಳನ್ನು ಕದ್ದಾಲಿಸಿ ಈ ಬಗ್ಗೆ ತಿಳಿದುಕೊಂಡು, ಟ್ರಾವೆಲ್ ಸಂಸ್ಥೆಗಳ ಷೇರನ್ನು ಖರೀದಿಸಿದ್ದಾರೆ. ಈ ಮೂಲಕ 16.58 ಕೋಟಿ ರೂ. ಗಳ ಲಾಭ ಪಡೆದಿದ್ದಾರೆ. ಇತ್ತ ಸಂಸ್ಥೆಯು ಮಾಹಿತಿ ಸೋರಿಕೆಯಾಗಿದೆ ಎಂದು ಟೈಲರ್ ಅವರ ಪತ್ನಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಇದರಿಂದ ಮನನೊಂದಿ ಪತ್ನಿ ಪತಿಯಿಂದ ವಿಚ್ಚೇದನ ಪಡೆದಿದ್ದಾರೆ.