Author: Author AIN

ಉತ್ತಮ ಗುಣಮಟ್ಟದ ಲ್ಯಾಪ್ ಟಾಪ್ ಖರೀದಿಸಬೇಕು ಅನ್ನೋದು ಪ್ರತಿಯೊಬ್ಬರ ಕನಸಾಗಿರುತ್ತೆ. ಆದರೆ ಅದೆಷ್ಟೋ ಜನರಿಗೆ  ಅದು ಸಾಧ್ಯವಾಗಿರೋದಿಲ್ಲ. ಆದರೆ ಇದೀಗ ಜನಪ್ರಿಯ ಲ್ಯಾಪ್‌ಟಾಪ್‌ ತಯಾರಕ ಕಂಪೆನಿಗಳಲ್ಲಿ ಒಂದಾದ ಆಸುಸ್‌ ಭಾರತದಲ್ಲಿ ಹೊಸ ಕ್ರೋಮ್‌ಬುಕ್‌ ಲ್ಯಾಪ್‌ಟಾಪ್‌ ಬಿಡುಗಡೆ ಮಾಡಿದೆ ಇದು ನಿಮ್ಮ ಬಜೆಟ್ ಫ್ರೆಂಡ್ಲಿ ಆಗಿರಲಿದೆ. ಆಸುಸ್ ಬಿಡುಗಡೆ ಮಾಡಿರುವ ಈ ಲ್ಯಾಪ್ ಟಾಪ್ ಗೆ ಸುಸ್‌ ಕ್ರೋಮ್‌ಬುಕ್‌ CM14 ಎಂದು ಹೆಸರಿಸಲಾಗಿದೆ. ಇನ್ನು ಈ ಲ್ಯಾಪ್‌ಟಾಪ್ MediaTek Kompanio ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದೆ. ಸುಸ್‌ ಕ್ರೋಮ್‌ಬುಕ್‌ CM14 ಲ್ಯಾಪ್‌ಟಾಪ್‌ ಮಿಲಿಟರಿ ದರ್ಜೆಯ ರಕ್ಷಣೆಯೊಂದಿಗೆ ಬರುತ್ತದೆ ಎಂದು ಹೇಳಲಾಗಿದೆ. ಇದು ಮೆಟಾಲಿಕ್ ಚಾಸಿಸ್ 180-ಡಿಗ್ರಿ ‘ಲೇ-ಫ್ಲಾಟ್’ ಹಿಂಗ್ಡ್ ಡಿಸ್‌ಪ್ಲೇಯನ್ನು ಹೊಂದಿದೆ. ಬಳಕೆದಾರರಿಗೆ ಸ್ನೇಹಿತರು ಮತ್ತು ಗೆಳೆಯರೊಂದಿಗೆ ಸುಲಭವಾದ ವಿಷಯ ಮತ್ತು ಕಲ್ಪನೆಯನ್ನು ಹಂಚಿಕೊಳ್ಳುವ ಅವಕಾಶಗಳನ್ನು ನೀಡುತ್ತದೆ. ಆಸುಸ್‌ ಕ್ರೋಮ್‌ಬುಕ್‌ CM14 ಲ್ಯಾಪ್‌ಟಾಪ್‌ 14 ಇಂಚಿನ ಫುಲ್‌ ಹೆಚ್‌ಡಿ ಆಂಟಿ-ಗ್ಲೇರ್ ನಾನ್-ಟಚ್ LCD ಸ್ಕ್ರೀನ್ ಹೊಂದಿದೆ. ಈ ಡಿಸ್‌ಪ್ಲೇಯು 1,920 x 1,080 ಪಿಕ್ಸೆಲ್‌…

Read More

ನಟನೆಯ ಜೊತೆಗೆ ನಿರ್ದೇಶಕನಾಗಿಯೂ ಗುರುತಿಸಿಕೊಂಡಿರುವ ಯುವ ನಟ ಕಂ ನಿರ್ದೇಶಕ ಅಭೀಷೇಕ್ ಶೆಟ್ಟಿ ಇದೀಗ ನಿಶ್ಚಿತಾರ್ಥದ ಸಂಭ್ರಮದಲ್ಲಿದ್ದಾರೆ. ಅಭೀಷೇಕ್  ನಮ್ ಗಣಿ ಬಿಕಾಂ ಪಾಸ್, ಗಜಾನನ & ಗ್ಯಾಂಗ್ ಚಿತ್ರದಲ್ಲಿ ನಿರ್ದೇಶನದ ಜೊತೆಗೆ ನಟನಾಗಿಯೂ ಕಾಣಿಸಿಕೊಂಡಿದ್ದಾರೆ. ಅಭಿಷೇಕ್ ‘ಆರಾಮ್ ಅರವಿಂದ ಸ್ವಾಮಿ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ಇತ್ತೀಚೆಗಷ್ಟೇ ಕುಂದಾಪುರದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಸಾಕ್ಷಾ ಶೆಟ್ಟಿ ಎಂಬುವವರ  ಜೊತೆ ಅಭಿಷೇಕ್ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಸಾಕ್ಷಾ ಶೆಟ್ಟಿ ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಫೈನಾನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್ 8ರಂದು ಕುಂದಾಪುರದಲ್ಲಿ ಅಭಿಷೇಕ್ ಹಾಗೂ ಸಾಕ್ಷಾ ಹಸೆಮಣೆ ಏರಲಿದ್ದಾರೆ. ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿರುವ ನವ ಜೋಡಿಗೆ ಚಿತ್ರರಂಗದವರು ಹಾಗೂ ಸ್ನೇಹಿತರು ಶುಭ ಹಾರೈಸಿದ್ದಾರೆ.

Read More

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ನಿನ್ನೆ ಅಂದರೆ ಗುರುವಾರ ಸಾರ್ವತ್ರಿಕ ಚುನಾವಣೆ ನಡೆದಿದೆ. ಈ ವೇಳೆ ಭಯೋತ್ಪಾದಕರು ದಾಳಿ ನಡೆಸಿದ್ದು ದಾಳಿಯಲ್ಲಿ 10 ಭದ್ರತಾ ಸಿಬ್ಬಂದಿ ಸೇರಿದಂತೆ ಕನಿಷ್ಠ 12 ಜನರು ನಿಧನರಾಗಿದ್ದಾರೆ. ಆದರೆ ಮತದಾನಕ್ಕೆ ಅಡ್ಡಿಪಡಿಸುವ ಭಯೋತ್ಪಾದಕರ 51 ದಾಳಿಗಳನ್ನು ಭದ್ರತಾ ಪಡೆಗಳು ವಿಫಲಗೊಳಿಸಿವೆ. ಈ ದಾಳಿಗಳಲ್ಲಿ ಹೆಚ್ಚಿನವು ಖೈಬರ್-ಪಖ್ತುಂಖ್ವಾ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳಲ್ಲಿ ನಡೆದಿವೆ ಕಾರ್ಯಾಚರಣೆಯಲ್ಲಿ ಐವರು ಭಯೋತ್ಪಾದಕರೂ ಹತರಾಗಿದ್ದಾರೆ ಎಂದು ಸೇನೆ ಹೇಳಿಕೆ ಬಿಡುಗಡೆ ಮಾಡಿದೆ. ದಾಳಿಯಲ್ಲಿ ಭದ್ರತಾ ಪಡೆಗಳು ಮತ್ತು ಕಾನೂನು ಜಾರಿ ಸಂಸ್ಥೆಗಳ 10 ಸಿಬ್ಬಂದಿ ಸೇರಿದಂತೆ 12 ಜನರು ಸಾವನ್ನಪ್ಪಿದ್ದಾರೆ ಮತ್ತು 39 ಮಂದಿ ಗಾಯಗೊಂಡಿದ್ದಾರೆ ಎಂದು ಸೇನೆ ಮಾಹಿತಿ ಹಂಚಿಕೊಂಡಿದೆ.

Read More

ಕಳೆದ ಸಾಕಷ್ಟು ಸಮಯದಿಂದ ರಷ್ಯಾದಲ್ಲಿ ಯುದ್ಧ ನಡೆಯುತ್ತಿದೆ. ಈ ಯುದ್ಧದ ಮಧ್ಯೆಯೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದು, ಉಕ್ರೇನ್ ಸೇನಾ ಮುಖ್ಯಸ್ಥ ವ್ಯಾಲೆರಿ ಜಲುಜ್ನಿ ಅವರನ್ನು ತೆಗೆದುಹಾಕಿದ್ದಾರೆ. ಇದೀಗ ವ್ಯಾಲೆರಿ ಸ್ಥಾನಕ್ಕೆ ಗ್ರೌಂಡ್ ಫೋರ್ಸ್ ಕಮಾಂಡರ್ ಒಲೆಕ್ಸಾಂಡರ್ ಸಿರ್ಸ್ಕಿಯನ್ನು ನೇಮಿಸಿದ್ದಾರೆ. ಸುಮಾರು ಎರಡು ವರ್ಷಗಳ ಯುದ್ಧದ ನಂತರ ಉಕ್ರೇನ್‌ನ ಸೇನಾ ನಾಯಕತ್ವದಲ್ಲಿ ಇದು ಪ್ರಮುಖ ಬದಲಾವಣೆಯಾಗಿದೆ. ಇಂದಿನಿಂದ ಹೊಸ ನಿರ್ವಹಣಾ ತಂಡವು ಉಕ್ರೇನ್ ಸಶಸ್ತ್ರ ಪಡೆಗಳ ನಾಯಕತ್ವವನ್ನು ವಹಿಸಿಕೊಳ್ಳಲಿದೆ. ನಾನು ಕರ್ನಲ್-ಜನರಲ್ ಸಿರ್ಸ್ಕಿಯನ್ನು ಉಕ್ರೇನ್ ಸಶಸ್ತ್ರ ಪಡೆಗಳ ಕಮಾಂಡರ್-ಇನ್-ಚೀಫ್ ಆಗಿ ನೇಮಿಸಿದ್ದೇನೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಉಕ್ರೇನ್ ಸಶಸ್ತ್ರ ಪಡೆಗಳಿಗೆ ಯಾವ ರೀತಿಯ ನವೀಕರಣದ ಅಗತ್ಯವಿದೆ ಎಂದು ನಾವು ಚರ್ಚಿಸಿದ್ದೇವೆ. ಉಕ್ರೇನ್ ಸಶಸ್ತ್ರ ಪಡೆಗಳ ಹೊಸ ನಾಯಕತ್ವದಲ್ಲಿ ಯಾರು ಇರಬಹುದೆಂದು ನಾವು ಚರ್ಚಿಸಿದ್ದೇವು. ಈಗ ನವೀಕರಣದ ಸಮಯ ಬಂದಿದೆ ಎಂದಿದ್ದದಾರೆ.

Read More

ಪುಷ್ಪ ಸಿನಿಮಾದ ಬಳಿಕ ನಟಿ ರಶ್ಮಿಕಾ ಮಂದಣ್ಣ ಸಖತ್ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕೊಡಗಿನ ನಟಿ ಇದೀಗ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸದ್ಯ ರಶ್ಮಿಕಾ ಹಾಗೂ ರಣಬೀರ್ ಕಪೂರ್ ನಟನೆಯ ಅನಿಮಲ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಇದೇ ಕಾರಣಕ್ಕೆ ರಶ್ಮಿಕಾ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಆಕೆ ಕೋಟಿ ಕೋಟಿ ಕೇಳುತ್ತಿದ್ದರು ನಿರ್ಮಾಪಕರು ಮಾತ್ರ ಆಕೆಯ ಹಿಂದೆಯೇ ಬಿದ್ದಿದ್ದಾರೆ. ಸದ್ಯ ರಶ್ಮಿಕಾ ಡಾರ್ಲಿಂಗ್ ಪ್ರಭಾಸ್ ಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ‘ಅನಿಮಲ್’ ಸಿನಿಮಾದಿಂದ ಸಂದೀಪ್ ಹಾಗೂ ರಶ್ಮಿಕಾ ಒಂದಾಗಿದ್ದಾರೆ. ಹೀಗಾಗಿಯೇ ಸಂದೀಪ್ ಹೊಸ ಚಿತ್ರಕ್ಕೆ ಕನ್ನಡದ ನಟಿ ರಶ್ಮಿಕಾ ನಾಯಕಿ ಎಂದೇ ಹೇಳಲಾಗುತ್ತಿದೆ. ರಶ್ಮಿಕಾ ನಟನೆಯ ಫಿದಾ ಆಗಿರುವ ಸಂದೀಪ್ ರೆಡ್ಡಿ ವಂಗಾ ಮತ್ತೊಮ್ಮೆ ಆಕೆಯ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸೂಪರ್ ಸ್ಟಾರ್‌ ನಟರಿಗೆ ಜೋಡಿಯಾಗುತ್ತಿರುವ ರಶ್ಮಿಕಾ ಇದೇ ಮೊದಲ ಭಾರಿಗೆ…

Read More

ಬಿಗ್ ಬಾಸ್ 10ರ ರನರ್ ಅಪ್ ಡ್ರೋಣ್ ಪ್ರತಾಪ್ ಮತ್ತೆ ಸಂಕಷ್ಟುಕ್ಕೆ ಸಿಲುಕಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ಪ್ರತಾಪ್ ವಿರುದ್ಧ ದಾಖಲಾಗುತ್ತಿರುವ ದೂರುಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಡಿಜಿಸಿಎ ಹೆಸರಲ್ಲಿ ಪ್ರತಾಪ್ ಮೋಸ ಮಾಡಿ ಡ್ರೋಣ್ ಮಾರಾಟ ಮಾಡ್ತಾ ಇದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಡ್ರೋಣ್ ತಯಾರಿ ಮಾಡಲಿಕ್ಕಾಗಲಿ ಅಥವಾ ಡ್ರೋಣ್ ಮಾರಾಟ ಮಾಡೋದಕ್ಕೆ ಆಗಲಿ ಡಿಜಿಸಿಎ ಅನುಮತಿ ಪರವಾನಿಗೆ ಪಡೆಯಬೇಕು. ಆದರೆ, ಪ್ರತಾಪ್ ಆ ಪರವಾನಿಗೆ ಪಡೆದಿಲ್ಲ ಎಂದು ಪರಮೇಶ್ ಎಂಬುವವರು ದೂರು ನೀಡಿದ್ದರು. ಈಗ ದೂರಿ‌ನ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರ ಪೊಲೀಸರು ದೂರಿನ ಮಾಹಿತಿಯನ್ನು ಡಿಜಿಸಿಎ ಗೆ ಕಳುಹಿಸಿದ್ದಾರೆ. ಈಗಾಗಲೇ ಡ್ರೋನ್ ಪ್ರತಾಪ್ ಮೇಲೆ ಮೂರು ದೂರುಗಳು ದಾಖಲಾಗಿದೆ. ಆದರೆ ಯಾವುದೇ ಎಫ್.ಐ.ಆರ್ ದಾಖಲಾಗಿಲ್ಲ ಎಂದು ಸುದ್ದಿಕೇಳಿ ಬಂದಿದೆ.

Read More

ಒಡಿಶಾ ನಟ ಹಾಗೂ ಸಂಸದ ಅನುಭವ್ ಮೊಹಂತಿ ಪತ್ನಿ ವರ್ಷಾ ಪ್ರಿಯಾದರ್ಶಿನಿ ಅವರಿಂದ ದೂರವಾಗಿದ್ದಾರೆ. ಈ ಮೂಲಕ ತಮ್ಮ 10 ವರ್ಷಗಳ ಸಾಂಸಾರಿಕ ಜೀವನವನ್ನು ಕೊನೆಗೊಳಿಸಿದ್ದಾರೆ. ಸದ್ಯ ಜೋಡಿಗೆ ಡಿವೋರ್ಸ್ ಸಿಕ್ಕಿದ್ದು ಈ ಬಗ್ಗೆ ಅನುಭವ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನನಗಾಗಿ ಮತ್ತು ನನ್ನ ಕುಟುಂಬದ ಶಾಂತಿ, ನೆಮ್ಮದಿಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು. 10 ವರ್ಷ ಪೂರ್ಣಗೊಳ್ಳುವ ಒಂದು ದಿನ ಮುಂಚಿತವಾಗಿ ನಿಷ್ಪ್ರಯೋಜಕ, ಅರ್ಥಹೀನ, ಹೃದಯಹೀನ, ನೋವಿನ ಮತ್ತು ಸುಳ್ಳಿನಿಂದ ಕೂಡಿದ ಈ ದಾಂಪತ್ಯ ಜೀವನಕ್ಕೆ ಅಂತ್ಯ ಸಿಕ್ಕಿದೆ. ವಿಚ್ಛೇದನದ ತೀರ್ಪು ಸಿಕ್ಕಿತು. ನಾನು ಅವಳ ಸಂತೋಷಕ್ಕಾಗಿ ಪ್ರಾರ್ಥಿಸುತ್ತೇನೆ. ಇದರಲ್ಲಿ ಯಾವುದೇ ಅಪರಾಧವಿಲ್ಲ. ಹ್ಯಾಪಿ ರೋಸ್ ಡೇ ಎಂದು ಅನುಭವ್ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ರಾಜಕೀಯ ಜೀವನ ಆರಂಭಕ್ಕೂ ಮುನ್ನು ಸಿನಿಮಾರಂಗದಲ್ಲಿ ಅನುಭವ್ ಸಾಕಷ್ಟು ಹೆಸರು ಮಾಡಿದ್ದರು. 2013ರಲ್ಲಿ ರಾಜಕೀಯಕ್ಕೆ ಎಂಟ್ರಿಕೊಟ್ಟ ಮೊಹಂತಿ 2014ರಲ್ಲಿ ರಾಜ್ಯಸಭಾ ಸಂಸದರಾದರು. 2019ರ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರಪಾರ ಲೋಕಸಭಾ ಕ್ಷೇತ್ರದಿಂದ ಬೈಜಯಂತ್ ಪಾಂಡಾ ವಿರುದ್ಧ…

Read More

ವಾಷಿಂಗ್ಟನ್: ಭಾರತವು ಅಮೆರಿಕದ ಜೊತೆ ಪಾಲುದಾರರಾಗಲು ಬಯಸಿದೆ. ಆದರೆ ಸದ್ಯಕ್ಕೆ ಅವರು ಅಮೆರಿಕನ್ನರು ದೇಶವನ್ನು ಮುನ್ನಡೆಸುತ್ತಾರೆ ಎಂಬುದನ್ನು ನಂಬುವುದಿಲ್ಲ ಎಂದು ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ನಿಕ್ಕಿ ಹ್ಯಾಲೆ ಹೇಳಿದ್ದಾರೆ. ಪ್ರಸ್ತುತ ಜಾಗತಿಕ ಪರಿಸ್ಥಿತಿಯಲ್ಲಿ ನವದೆಹಲಿಯು ಚುರುಕಾಗಿ ವರ್ತಿಸುತ್ತಿದೆ ಮತ್ತು ರಷ್ಯಾದೊಂದಿಗೆ ನಿಕಟವಾಗಿದೆ ಎಂದು ಭಾರತೀಯ-ಅಮೆರಿಕನ್ ಮೂಲದ ಹ್ಯಾಲೆ ಹೇಳಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ಹ್ಯಾಲೆ, ಪ್ರಸ್ತುತ ಭಾರತವು ಯುನೈಟೆಡ್ ಸ್ಟೇಟ್ಸ ಅನ್ನು ದುರ್ಬಲವಾಗಿ ನೋಡುತ್ತಿದೆ. “ನಾನು ಭಾರತದ ಜತೆ ಕೂಡ ವ್ಯವಹರಿಸಿದ್ದೇನೆ. ನಾನು ಮೋದಿ ಜತೆ ಮಾತನಾಡಿದ್ದೇನೆ. ಭಾರತವು ನಮ್ಮ ಜತೆ ಪಾಲುದಾರನಾಗಲು ಬಯಸಿದೆ. ಅವರು ರಷ್ಯಾ ಜತೆ ಪಾಲುದಾರಕೆ ಹೊಂದಲು ಬಯಸಿಲ್ಲ. ಆದರೆ ಸಮಸ್ಯೆ ಏನೆಂದರೆ ಗೆಲ್ಲಲು ಭಾರತ ನಮ್ಮನ್ನು ನಂಬುವುದಿಲ್ಲ. ನಮ್ಮ ನಾಯಕತ್ವದಲ್ಲಿ ಅವರಿಗೆ ವಿಶ್ವಾಸ ಇಲ್ಲ. ಅವರು ಈಗ ನಮ್ಮನ್ನು ದುರ್ಲಬರು ಎಂಬಂತೆ ನೋಡುತ್ತಿದ್ದಾರೆ. ಭಾರತ ಯಾವಾಗಲೂ ಜಾಣ್ಮೆಯಿಂದ ಆಟವಾಡುತ್ತಿದೆ. ಈ ಚತುರ ಆಟದೊಂದಿಗೆ ರಷ್ಯಾ ಜತೆ ಆಪ್ತವಾಗಿ ಉಳಿದುಕೊಂಡಿದೆ. ಈ ಕಾರಣದಿಂದಾಗಿ ಅವರು ತಮ್ಮ ಸಾಕಷ್ಟು ಸೇನಾ…

Read More

ಬಿಗ್‍ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸಿದ್ದ ನಟಿ ತನಿಷಾಗೆ ಬಿಗ್ ರಿಲೀಫ್ ಸಿಕ್ಕಿದೆ. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ತನಿಷಾ ಮೇಲೆ ಅಟ್ರಾಸಿಟಿ ಕೇಸ್ ದಾಖಲಾಗಿತ್ತು. ಸದ್ಯ ಈ ಕೇಸ್ ನಲ್ಲಿ ತನಿಷಾಗೆ ಕ್ಲೀನ್‍ಚಿಟ್ ಸಿಕ್ಕಿದ್ದು ಬೆಂಕಿ ತನಿಷಾ ನಿಟ್ಟುಸಿರು ಬಿಟ್ಟಿದ್ದಾರೆ. ಬಿಗ್ ಬಾಸ್ ನಲ್ಲಿದ್ದ ವೇಳೆ ತನಿಷಾ ಕುಪ್ಪಂಡ ಭೋವಿ ಸಮುದಾಯದ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಅವರ ಮೇಲೆ ಭೋವಿ ಸಮಾಜದ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಪದ್ಮ ಕುಂಬಳುಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ಕುಂಬಳಗೋಡು ಪೊಲೀಸರು ಜಾತಿನಿಂದನೆ ಆರೋಪದಡಿ ತನಿಷಾ ಕುಪ್ಪಂಡ ವಿರುದ್ಧ ಎಫ್‍ಐಆರ್ ದಾಖಲಾಸಿದ್ದರು. ಈ ಪ್ರಕರಣದಲ್ಲಿ ತನಿಷಾ ಮೇಲೆ ಕ್ರಮ ತೆಗೆದುಕೊಳ್ಳಲೇಬೇಕು ಎಂದು ಒತ್ತಡ ಹೇರಲಾಗಿತ್ತು. ಈ ಕುರಿತಂತೆ ತನಿಷಾ ತಾನು ಆ ರೀತಿ ಮಾತನಾಡಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಆದರೂ, ಕ್ರಮಕ್ಕೆ ಒತ್ತಾಯ ಮಾಡಲಾಗಿತ್ತು. ಸದ್ಯ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ದೂರಿನ ಜೊತೆ ತನಿಷಾ ಬಿಗ್…

Read More

ಅಬುಧಾಬಿ: ಅಬುಧಾಬಿಯಲ್ಲಿ ನಿರ್ಮಾಣವಾದ ಮೊದಲ ಹಿಂದು ದೇವಾಲಯವನ್ನು ಫೆಬ್ರುವರಿ 14 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಸ್ವಾಮಿನಾರಾಯಣ ಸಂಸ್ಥೆ ತಮ್ಮ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಅಬುಧಾಬಿಯಲ್ಲಿ ನಿರ್ಮಾಣವಾದ ಮೊದಲ ಹಿಂದು ದೇವಾಲಯವನ್ನು ಸ್ವಾಮಿನಾರಾಯಣ ಸಂಸ್ಥೆ (ಬಿಎಪಿಎಸ್) ನಿರ್ಮಿಸಿದ್ದು, ಇದು ಯುಎಇಯ ಮೊದಲ ಸಾಂಪ್ರದಾಯಿಕ ಕಲ್ಲಿನ ಹಿಂದೂ ದೇವಾಲಯವಾಗಿದೆ. ಈ ದೇವಸ್ಥಾನವನ್ನು ಅಬುಧಾಬಿಯ ಮುರೇಖಾ ಜಿಲ್ಲೆಯಲ್ಲಿ 27 ಎಕರೆ ಜಾಗದಲ್ಲಿ ನಿರ್ಮಿಸಲಾಗಿದೆ. ಉದ್ಘಾಟನೆ ಹಿನ್ನೆಲೆ ಬಿಎಪಿಎಸ್‌ನ ಆಧ್ಯಾತ್ಮಿಕ ಗುರು ಸ್ವಾಮಿ ಮಹಂತ್ ಸ್ವಾಮಿ ಮಹಾರಾಜ್ ಅವರು ಯುಎಇಗೆ ಆಗಮಿಸಿದ್ದಾರೆ. ಮಂದಿರದ ಉದ್ಘಾಟನೆಯನ್ನು ‘ಸೌಹಾರ್ದತೆಯ ಹಬ್ಬ’ದಂತೆ ಆಚರಿಸಲಾಗುತ್ತದೆ. ನಂಬಿಕೆಯನ್ನು ಬಲಪಡಿಸುವುದು, ಎಲ್ಲಾ ತಲೆಮಾರುಗಳು ಮತ್ತು ಹಿನ್ನೆಲೆಗಳುಳ್ಳ ಜನರ ನಡುವೆ ಸಾಮರಸ್ಯವನ್ನು ಬೆಳೆಸುವುದು ಈ ಉದ್ಘಾಟನಾ ಕಾರ್ಯಕ್ರಮದ ಧ್ಯೇಯವಾಗಿದೆ ಎಂದು ಸ್ವಾಮಿನಾರಾಯಣ ಸಂಸ್ಥೆ (ಬಿಎಪಿಎಸ್) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಈ ಭೇಟಿ ಭಾರತ ಮತ್ತು ಯುಎಇ ನಡುವಿನ ನಿಕಟ ಸಂಬಂಧವನ್ನು ಮತ್ತಷ್ಟು ‌ಹೆಚ್ಚಿಸಲಿದೆ ಎಂದು ವಿಶ್ಲೇಷಿಸಲಾಗಿದೆ.

Read More