Author: Author AIN

ಢಾಕಾ: ಬಾಂಗ್ಲಾದೇಶದಿಂದ ಪಲಾಯಗೊಂಡಿರುವ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಮತ್ತು ಮಾಜಿ ಮಿಲಿಟರಿ ಜನರಲ್‌ಗಳು ಮತ್ತು ಮಾಜಿ ಪೊಲೀಸ್ ಮುಖ್ಯಸ್ಥರು ಸೇರಿದಂತೆ 11 ಇತರರ ವಿರುದ್ಧ ಅಂತರಾಷ್ಟ್ರೀಯ ಕ್ರಿಮಿನಲ್ ಟ್ರಿಬ್ಯೂನಲ್ ಬಲವಂತದ ನಾಪತ್ತೆ ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಎರಡನೇ ಬಂಧನ ವಾರಂಟ್ ಹೊರಡಿಸಿದೆ. ಜನವರಿ 6ರಂದು ಈ ಬಂಧನ ವಾರಂಟ್ ಹೊರಡಿಸಲಾಗಿದೆ. ಇದು ಶೇಖ್ ಹಸೀನಾ ವಿರುದ್ಧ ಹೊರಡಿಸಲಾದ ಎರಡನೇ ಬಂಧನ ವಾರಂಟ್ ಇದಾಗಿದೆ. ಬಾಂಗ್ಲಾ ನ್ಯಾಯಮಂಡಳಿಯು ಹಸೀನಾ ವಿರುದ್ಧ ಇದುವರೆಗೆ ಮೂರು ಪ್ರಕರಣಗಳನ್ನು ದಾಖಲಿಸಿದೆ. ನೂರಾರು ಬಲವಂತದ ನಾಪತ್ತೆ ಪ್ರಕರಣದ ಸಂಬಂಧ ಹಸೀನಾ ಸೇರಿದಂತೆ 12 ವ್ಯಕ್ತಿಗಳನ್ನು ಬಂಧಿಸಿ ಫೆಬ್ರವರಿ 12 ರಂದು ನ್ಯಾಯಾಧಿಕರಣದ ಮುಂದೆ ಹಾಜರುಪಡಿಸುವಂತೆ ನ್ಯಾಯಾಲಯದ ಆದೇಶ ಪೊಲೀಸ್ ಮಹಾನಿರೀಕ್ಷಕರಿಗೆ ನಿರ್ದೇಶಿಸಲಾಗಿದೆ. ಹಸೀನಾ ವಿರುದ್ಧ ಹೊರಡಿಸಲಾಗಿದೆ ಎರಡನೇ ಬಂಧನ ವಾರಂಟ್ ಕುರಿತು ಮಾತನಾಡಿರುವ ಭಾರತದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಮತ್ತು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ​​ಅಧ್ಯಕ್ಷ ವಿಕಾಸ್ ಸಿಂಗ್, “ಅಂತಾರಾಷ್ಟ್ರೀಯ ಕ್ರಿಮಿನಲ್ ಟ್ರಿಬ್ಯೂನಲ್ ಬಾಂಗ್ಲಾದೇಶದಲ್ಲಿ ದೇಶೀಯ ಕಾನೂನಿನ…

Read More

ಕಠ್ಮಂಡು: ಇಂದು ಬೆಳಗ್ಗೆ ಟಿಬೆಟ್ ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ 53 ಮಂದಿ ಮೃತಪಟ್ಟಿದ್ದು 62 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪವು ನೆರೆಯ ನೇಪಾಳದ ರಾಜಧಾನಿ ಕಠ್ಮಂಡು ಮತ್ತು ಭಾರತದ ಉತ್ತರ ಭಾಗಗಳಲ್ಲಿ ಸಂಭವಿಸಿದೆ ಪರಿಣಾಮ ಟಿಬೆಟ್‌ನಲ್ಲಿ ಅನೇಕ ಕಟ್ಟಡಗಳು ಕುಸಿತಗೊಂಡಿವೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ. ಚೀನಾ ಭೂಕಂಪ ನೆಟ್‌ವರ್ಕ್ ಸೆಂಟರ್ (ಸಿಇಎನ್‌ಸಿ) ಪ್ರಕಾರ, ನೇಪಾಳದ ಗಡಿಯ ಸಮೀಪ 7.1 ರ ತೀವ್ರತೆಯೊಂದಿಗೆ ಡಿಂಗ್ರಿ ಕೌಂಟಿಯಲ್ಲಿ ಬೆಳಿಗ್ಗೆ 6:35 ಕ್ಕೆ ಭೂಕಂಪ ಸಂಭವಿಸಿದೆ. ಬಿಹಾರದಲ್ಲಿಯೂ ಭೂಮಿ ಕಂಪಿಸಿದ ಅನುಭವ ಜನತೆಗೆ ಆಗಿದೆ. ಜನರು ತಮ್ಮ ಮನೆಗಳು ಮತ್ತು ಅಪಾರ್ಟ್‌ಮೆಂಟ್‌ಗಳ ಹೊರಗೆ ಓಡುತ್ತಿರುವ ದೃಶ್ಯ ಕಂಡುಬಂದಿದ್ದು ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ಯಾವುದೇ ವರದಿಯಾಗಿಲ್ಲ. ಈ ಪ್ರದೇಶದಲ್ಲಿ ಭೂಕಂಪಗಳು ಸಾಮಾನ್ಯವಾಗಿದ್ದರೂ, ಇಂದಿನ ಭೂಕಂಪವು ಕಳೆದ ಐದು ವರ್ಷಗಳಲ್ಲಿ 200-ಕಿಲೋಮೀಟರ್ ತ್ರಿಜ್ಯದಲ್ಲಿ ದಾಖಲಾದ ಅತ್ಯಂತ ಶಕ್ತಿಶಾಲಿ ಕಂಪನ ಎಂದು ಹೇಳಲಾಗುತ್ತಿದೆ.  ಭೂಕಂಪದ ತೀವ್ರತೆಯಿಂದ ಹಲವು ಕಟ್ಟಡಗಳು ನೆಲಕ್ಕುರುಳಿದ್ದು ಹಲವರು ಗಾಯಗೊಂಡಿದ್ದಾರೆಚೀನಾದ…

Read More

ಬೆಂಗಳೂರು: ಕೋಟಿ ಕೋಟಿ ಹಣ,ಚಿನ್ನಾಭರಣ ಪಡೆದು ಐಸ್ ಪೈಸ್ ಆಟ ಆಡ್ತಿದ್ದ ಐಶ್ವರ್ಯಳ ಮತ್ತೊಂದು ಮುಖ ಅನಾವರಣವಾಗಿದೆ..ಬೇರೆಯವರಿಂದ ಹಣ ಪಡೆದಿದ್ದಲ್ಲೆದ್ದೆ ಕೊಟ್ಟ ಹಣ ವಾಪಸ್ಸು ಕೇಳಿದ್ದಕ್ಕೆ ಜೀವಬೆದರಿಕೆ ಕೂಡ ಹಾಕಿದ್ದಾಳೆ..ಅಷ್ಟೇ ಅಲ್ಲಾ ಅವಾಚ್ಯ ಪದಗಳಿಂದ ನಿಂದಿಸಿ ಆಡಿಯೋ ಮೆಸೆಜ್ ಕಳಿಸಿದ್ದಾಳೆ.. ಐಶ್ವರ್ಯ ಗೌಡ‌..ಕೋಟಿ ಕೋಟಿ ಮೌಲ್ಯದ ಚಿನ್ನ ಪಡೆದು ವಂಚನೆ ಮಾಡಿರೊ ಚಿನ್ನದ ಕೋಳಿ..ಡಿ.ಕೆ.ಸುರೇಶ್ ಹೆಸರನ್ನೇ ಬಂಡವಾಳ ಮಾಡಿಕೊಂಡು ಉಂಡೇನಾಮ ಹಾಕಿರೊ ಐನಾತಿ..ಈಕೆಯ ವಂಚನೆ ಪುರಾಣ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ..ಸದ್ಯ ಆಕೆ ಧಮ್ಕಿ ಹಾಕಿರೊ ಮೂರು ಆಡಿಯೋ ಲಭ್ಯವಾಗಿದ್ದು..ಆಕೆಯ ಮತ್ತೊಂದು ಮುಖ ಅನಾವರಣವಾಗಿದೆ ಹೌದು..ಆರ್..ಆರ್..ನಗರದ ಉದ್ಯಮಿ ಶಿಲ್ಪ ಗೌಡಳಿಗೆ ನಾನು ಡಿ.ಕೆ.ಶಿವಕುಮಾರ್ ಸಹೋದರಿ..ಚಿನ್ನದ ವ್ಯಾಪಾರಿ..ವಿಲ್ಲ ಮಾಡೊ ರಿಯಲ್ ಎಸ್ಟೇಟ್ ಉದ್ಯಮಿ ಎಂದು ಪರಿಚಯಿಸಿಕೊಂಡು‌..3.25 ಕೋಟಿ ಹಣ 430 ಗ್ರಾಂ ಚಿನ್ನಾಭರಣ ಪಡೆದು ಹಣ ಚಿನ್ನಾಭರಣ ಕೊಡದೆ ವಂಚಿಸಿದ್ದಾಳೆ..ವಾಪಸ್ಸು ಕೇಳಿದ ಶಿಲ್ಪ ಗೌಡಳಿಗೆ ಅವಾಚ್ಯ ಪದಗಳಿಂದ ನಿಂದಿಸಿ ಆಡಿಯೋ ಕಳುಹುಸಿದ್ದಾಳೆ.. ನಾನ್ ಯಾಕ್ ಕಿ** ನೀನ್ ಬಂದು ಅದೇನ್ ಕಿ**** ಕಿ* ಅದೆಷ್ಟು…

Read More

ಬೆಂಗಳೂರು: ನೀವು ನೌಕರಿ ( Job ) ಹುಡುಕತಾ ಇದ್ದಿರಾ. SSLC / PUC ಯಾವುದೇ ಪದವಿ ಆಗಿದ್ರೆ ಕೂಡಲೆ ಇಲ್ಲಿ ಭೇಟಿ ಕೊಡಿ. ಇಲ್ಲಿ ವಾಕ್ ಇನ್ ಸಂದರ್ಶನವಿದ್ದು, ಪುರುಷರು ಮತ್ತು ಮಹಿಳೆಯರಿಗೆ ನೇಮಕಾತಿ ಆರಂಭವಾಗಿದೆ. ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನಲ್ಲಿ ಬ್ರ್ಯಾಂಚ್ ಮ್ಯಾನೆಜರ್, ಮ್ಯಾನೆಜರ್, ಅಸಿಸ್ಟೆಂಟ್ ಸೇಲ್ಸ್ ಎಕ್ಸಿಕ್ಯೂಟಿವ್, ಬಿಲ್ಲಿಂಗ್ ಎಕ್ಸಿಕ್ಯೂಟಿವ್, ಕ್ಯಾಶಿಯರ್ , ಸುಪರವೈಸರ್ ಸೇರಿದಂತೆ ಅನೇಕ ಹುದ್ದೆಗಳಿಗೆ ಇಲ್ಲಿ ಅವಕಾಶವಿದೆ. SSLC /PUC ಯಾವುದೇ ಪದವಿ ಮಾಡಿದ್ರು ಇಲ್ಲಿ ಕೆಲಸವಿದ್ದು. ಜೊತೆಗೆ ವಸತಿ + ಸ್ಥಿರ ಮತ್ತು ಆಕರ್ಷಕ ಸಂಬಳ + PF + ಪ್ರೋತ್ಸಾಹ ಧನ ಕೊಡಲಾಗುತ್ತದೆ. (Job alert – contact – 97406 26853 ) ದಿನಾಂಕ- 16-01-2025 ರಂದು ಮಧ್ಯಾಹ್ನ 3 ಗಂಟೆಯಿಂದ 5 ಗಂಟೆವರೆಗೆ ಸಂದರ್ಶನವಿದ್ದು, ನೌಕರಿ ಹುಡುಕುತ್ತಿರುವವರು ಸಂದರ್ಶನಕ್ಕೆ ಹಾಜರಾಗಬಹುದು. ಸಂದರ್ಶನ ನಡೆಯುವ ಸ್ಥಳ: #41 ಡಿ.ವಿ.ಜಿ ರಸ್ತೆ ಬಸವನಗುಡಿ, ಬೆಂಗಳೂರು- 04 ಹೆಚ್ಚಿನ ಮಾಹಿತಿಗಾಗಿ…

Read More

ನಟಿ ಹರಿಪ್ರಿಯಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತುಂಬು ಗರ್ಭಿಯಾಗಿರುವ ಹರಿಪ್ರಿಯಾಗೆ ಅದ್ದೂರಿಯಾಗಿ ಸೀಮಂತ ಶಾಸ್ತ್ರ ಮಾಡಲಾಗಿದೆ. ಈ ವೇಳೆ ಹಲವು ನಟಿಯರು ಭಾಗಿಯಾಗಿ ಹರಿಪ್ರಿಯಾಗೆ ಶುಭ ಹಾರೈಸಿದ್ದಾರೆ. ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಜೋಡಿ ಮೊದಲ ಮಗುಗಿನ ಆಗಮನಕ್ಕೆ ಕಾಯ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದ ಹರಿಪ್ರಿಯಾ ಇದೀಗ ಅದ್ದೂರಿಯಾಗಿ ಸೀಮಂತ ಶಾಸ್ತ್ರ ಮಾಡಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ನಟಿ ತಾರಾ ಕೂಡ ಭಾಗವಹಿಸಿ ಹರಿಪ್ರಿಯಾ ಶುಭಕೋರಿದ್ದಾರೆ. ನಟಿಗೆ ಕುಂಕುಮ ಇಟ್ಟು ಗಿಫ್ಟ್‌ ನೀಡಿ ವಿಶ್‌ ಮಾಡಿದ್ದಾರೆ. ಕಳೆದ ವರ್ಷ ಜ.26ರಂದು ಮೈಸೂರಿನಲ್ಲಿ ವಸಿಷ್ಠ ಸಿಂಹ ಜೊತೆ ನಟಿ ಹಸೆಮಣೆ ಏರಿದರು. ಹಲವು ವರ್ಷಗಳು ಪ್ರೀತಿಸಿ ಗುರುಹಿರಿಯರ ಒಪ್ಪಿಗೆ ಪಡೆದು ಮದುವೆಯಾದರು. ಇದೀಗ ಚೊಚ್ಚಲ ಮಗುವನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿದ್ದಾರೆ. ಮದುವೆಯ ಬಳಿಕ ಸಿನಿಮಾ ರಂಗದಿಂದ ದೂರ ಉಳಿದ ಹರಿಪ್ರಿಯಾ ಇದೀಗ ಮೊದಲ ಮಗುವನ್ನು ಭರಮಾಡಿಕೊಳ್ಳುವ ಸಂತಸದಲ್ಲಿದ್ದಾರೆ.

Read More

ನವದೆದಲಿ: ಮುಂಬರುವ ದೈಹಿಕ ಅಂಗವಿಕಲ ಚಾಂಪಿಯನ್ಸ್ ಟ್ರೋಫಿಗೆ DCCI ತಂಡವನ್ನು ಪ್ರಕಟಿಸಿದೆಮುಂಬರುವ ದೈಹಿಕ ಅಂಗವಿಕಲ ಚಾಂಪಿಯನ್ಸ್ ಟ್ರೋಫಿಗೆ DCCI ತಂಡವನ್ನು ಪ್ರಕಟಿಸಿದೆ. ಜನವರಿ 12 ರಿಂದ ಜನವರಿ 21 ರವರೆಗೆ. ಇದು 2019 ರಿಂದ ಮೊದಲ ಬಾರಿಗೆ ಪಂದ್ಯಾವಳಿಯನ್ನು ನಡೆಸುತ್ತಿದೆ ಮತ್ತು ಜನವರಿಯಲ್ಲಿ ಪಾಕಿಸ್ತಾನವನ್ನು ಎದುರಿಸುವ ಮೂಲಕ ಭಾರತ ತನ್ನ ಅಭಿಯಾನವನ್ನು ಪ್ರಾರಂಭಿಸುತ್ತದೆ. ಭಾರತದ ವೇಳಾಪಟ್ಟಿ ಈ ಟೂರ್ನಿಯಲ್ಲಿ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಲಿದೆ. ಈ ಪಂದ್ಯ ಜನವರಿ 12 ರಂದು ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಇದಾದ ಬಳಿಕ ಭಾರತ ತಂಡ ಜನವರಿ 13ರಂದು ಇಂಗ್ಲೆಂಡ್‌ ತಂಡವನ್ನು ಎದುರಿಸಲಿದೆ. ಹಾಗೆಯೇ ಟೀಂ ಇಂಡಿಯಾ ತನ್ನ ಮೂರನೇ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಆಡಲಿದ್ದು, https://ainlivenews.com/big-update-have-you-received-your-griha-lakshmi-money-yet-minister-lakshmi-hebbalkar-shares-good-news/ ಈ ಪಂದ್ಯ ಜನವರಿ 15 ರಂದು ನಡೆಯಲಿದೆ. ಇದಾದ ಬಳಿಕ ಭಾರತ ತಂಡ ಜನವರಿ 16ರಂದು ಮತ್ತೆ ಪಾಕಿಸ್ತಾನವನ್ನು ಎದುರಿಸಲಿದೆ. ಜನವರಿ 18 ರಂದು ಇಂಗ್ಲೆಂಡ್ ಮತ್ತು ಜನವರಿ 19…

Read More

ನಾಳೆ ಅಂದರೆ ಜ.8ರಂದು ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಈ ಹಿನ್ನೆಲೆ ‘ಟಾಕ್ಸಿಕ್’ ಸಿನಿಮಾದ ಬಗ್ಗೆ ಬಿಗ್ ಅಪ್ ಡೇಟ್ ನೀಡುವುದಾಗಿ ಚಿತ್ರತಂಡ ಮಾಹಿತಿ ನೀಡಿದೆ. ಇದೀಗ ನಟ ರಿಷಬ್ ಶೆಟ್ಟಿ ತಾನು ಕೂಡ ಟಾಕ್ಸಿಕ್ ಸಿನಿಮಾಗಾಗಿ ಕಾಯ್ತಿರೋದಾಗಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಅಪ್‌ಡೇಟ್‌ಗಾಗಿ ನಾನು ಕಾಯುತ್ತಿದ್ದೇನೆ ಎಂದು ರಿಷಬ್ ಶೆಟ್ಟಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಕಾಯುತ್ತಿದ್ದೇನೆ ಎಂದು ಲವ್ಲಿ ಇಮೋಜಿ ಹಾಕಿ ‘ಟಾಕ್ಸಿಕ್’ ಕುರಿತು ನಟ ಪ್ರತಿಕ್ರಿಯೆ ನೀಡಿದ್ದಾರೆ. ‘ಕೆಜಿಎಫ್ 2’ ಬಳಿಕ ಯಶ್ ಅವರು ನಿರ್ದೇಶಕಿ ಗೀತು ಮೋಹನ್‌ದಾಸ್ ಜೊತೆ ಕೈಜೋಡಿಸಿದ್ದಾರೆ. ಯಶ್ ಜೊತೆ ಕೆವಿಎನ್ ಸಂಸ್ಥೆ ಕೂಡ ಕೈಜೋಡಿಸಿದೆ. ಜ.8ರಂದು ಬೆಳಗ್ಗೆ 10:25ಕ್ಕೆ ಟಾಕ್ಸಿಕ್ ಬಿಗ್ ಅಪ್‌ಡೇಟ್ ಹೊರಬೀಳಲಿದೆ. ನಟನ ಲುಕ್ ಅನಾವರಣ ಆಗಲಿದೆ. ಫ್ಯಾನ್ಸ್ ಕಾತರದಿಂದ ಕಾಯ್ತಿದ್ದಾರೆ.

Read More

ಬೆಂಗಳೂರು: ಕೋವಿಡ್ ವೈರಸ್ ಕಾಣಿಸಿಕೊಂಡ ಐದು ವರ್ಷದ ಬಳಿಕ ಮತ್ತೆ ದೇಶದಲ್ಲಿ ವೈರಸ್ ಹಾವಳಿ ಶುರುವಾಗಿದೆ. ಇನ್ನು HMPV ಸೋಂಕಿತ 8 ತಿಂಗಳ ಮಗು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಲಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಕಾರಣ ಇಂದು ಮಧ್ಯಾಹ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಲಿದೆ. ಸೋಮವಾರ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಆಸ್ಫತ್ರೆಗೆ ಭೇಟಿ ಮಗುವಿನ ಪೋಷಕರಿಂದ ಮಾಹಿತಿಯನ್ನು ಪಡೆದುಕೊಂಡಿದ್ದರು. ಸದ್ಯಕ್ಕೆ ಮಗು ಈಗ ಆರೋಗ್ಯವಾಗಿದೆ. https://ainlivenews.com/big-update-have-you-received-your-griha-lakshmi-money-yet-minister-lakshmi-hebbalkar-shares-good-news/ ಸೋಮವಾರವೇ ಡಿಸ್ಚಾರ್ಜ್‌ ಆಗಬೇಕಿತ್ತು. ಆದರೆ ವೈದ್ಯರು ಇಂದು ಒಂದು ದಿನ ಇರಲಿ ನಿಗಾದಲ್ಲಿ ಅಂತಾ ಚಿಕಿತ್ಸೆ ನೀಡಿದ್ದರು. ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ HMPV ಪತ್ತೆಯಾಗಿತ್ತು. ಸೋಂಕು ಕಾಣಿಸಿದ 3 ತಿಂಗಳ ಮಗು ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದರೆ 8 ತಿಂಗಳ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಕೆ ಕಾಣುತ್ತಿದೆ.

Read More

ತುಮಕೂರು: ಟ್ರ್ಯಾಕ್ಟರ್‌ – ಬೈಕ್‌ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಘಟನೆ ತುಮಕೂರು ತಾಲೂಕಿನ ಓಬಳಾಪುರ ಬಳಿ ನಡೆದಿದೆ. ಮಹ್ಮದ್ ಆಸೀಫ್ (12), ಮಮ್ತಾಜ್ (38) ಮತ್ತು ಶಾಖೀರ್ ಹುಸೇನ್ (48) ಮೃತ ದುರ್ಧೈವಿಗಳಾಗಿದ್ದು, ರಸ್ತೆಯಲ್ಲಿ ಮುಂದೆ ಸಾಗುತ್ತಿದ್ದ ಟ್ರ್ಯಾಕ್ಟರ್​ಗೆ ಹಿಂಬದಿಯಿಂದ ಬಂದ ಬೈಕ್ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. https://ainlivenews.com/big-update-have-you-received-your-griha-lakshmi-money-yet-minister-lakshmi-hebbalkar-shares-good-news/ ಮೃತರು ಮಧುಗಿರಿ ತಾಲೂಕಿನ ಗುಡ್ಡೆನಹಳ್ಳಿ ಗ್ರಾಮದವರು ಎನ್ನಲಾಗಿದೆ. ಸ್ಥಳಕ್ಕೆ ಎಸ್ ಪಿ ಅಶೋಕ್ ವೆಂಕಟ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಮೊದಲೆಲ್ಲಾ ಹೃದಯಕ್ಕೆ ಸಂಬಂಧಿಸಿದ ಕೆಲ ಕಾಯಿಲೆಗಳನ್ನು ಅದರಲ್ಲೂ ಈ ಹಾರ್ಟ್‌ ಅಟ್ಯಾಕ್‌ ಅನ್ನು ಸಾಮಾನ್ಯವಾಗಿ ವೃದ್ಧರ ಕಾಯಿಲೆ ಎಂದು ಪರಿಗಣಿಸಲಾಗಿತ್ತು. ಅಂದರೆ ವಯಸ್ಸಾದವರಲ್ಲಿ ಈ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಈಗ ವಯಸ್ಸಿನ ಯಾವುದೇ ಮಿತಿ ಇಲ್ಲದೇ ಹಠಾತ್‌ ಸಾವಿಗೆ ಕಾರಣವಾಗಿರುವ ಕೆಲ ಹೃದಯ ರೋಗಗಳು ಸಂಭವಿಸುತ್ತಿವೆ. ಅದಕ್ಕೆ ನಮ್ಮ-ನಿಮ್ಮ ಮುಂದೆ ಹಲವಾರು ನಿದರ್ಶನ ಕೂಡ ಇವೆ. ಮಕ್ಕಳಲ್ಲಿ ಹೃದಯಾಘಾತದ ಲಕ್ಷಣಗಳು ಇಲ್ಲಿವೆ: ಚಳಿಗಾಲದ ತಿಂಗಳುಗಳಲ್ಲಿ ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ. ಚಳಿಯ ವಾತಾವರಣವು ವಯಸ್ಸಾದ ಜನರನ್ನು, ಕೊಮೊರ್ಬಿಡಿಟಿ ಹೊಂದಿರುವ ಜನರನ್ನು ಹೆಚ್ಚು ದುರ್ಬಲಗೊಳಿಸುತ್ತದೆ. ನಿನ್ನೆ 8 ವರ್ಷದ ಚಿಕ್ಕ ಬಾಲಕಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಇದು ಆಘಾತಕಾರಿಯಾಗಿದ್ದರೂ ಯುವಜನರು ಹೃದಯ ಸ್ತಂಭನ ಮತ್ತು ಹೃದಯಾಘಾತಕ್ಕೆ ಹೆಚ್ಚು ಒಳಗಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಜಡ ಜೀವನಶೈಲಿ ಮುಖ್ಯ ಕಾರಣವಾಗಿದೆ. ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪುವುದು ಆಯಾಸ ಎದೆಯಲ್ಲಿ ನೋವು ಅನಿಯಮಿತ ಉಸಿರಾಟ ಅತಿಯಾದ ಹೃದಯ ಬಡಿತ ಮಗುವಿನ ಹೃದಯವೂ ದುರ್ಬಲವಾಗುತ್ತಿದೆಯೇ? ಹೃದ್ರೋಗ ತಜ್ಞರ ಪ್ರಕಾರ,…

Read More