Author: Author AIN

ಸದಾ ಸಖತ್ ಹಾಟ್ ಹಾಟ್ ಆಗಿರುವ ಡ್ರಸ್ ತೊಟ್ಟು ಫೋಟೋಗೆ ಫೋಸ್ ಕೊಡುವ ನಟಿ ಅನನ್ಯಾ ಪಾಂಡೆ ಇದೀಗ ಹಾಟ್ ಡ್ರಸ್ ಮೂಲಕವೇ ಪರಿಸರದ ಪಾಠ ಹೇಳಿಕೊಟ್ಟಿದ್ದಾರೆ. ಇತ್ತೀಚೆಗೆ ಪ್ಯಾರಿಸ್ ನಲ್ಲಿ ನಡೆದ ಪ್ಯಾರೀಸ್ ಕೌಂಟರ್ ವೀಕ್ ನಲ್ಲಿ ಭಾಗವಹಿಸಿದ್ದ ಅನನ್ಯಾ ಆಕರ್ಷಕ ಉಡುಪು ಧರಿಸಿ ಗಮನ ಸೆಳೆದಿದ್ದಾರೆ. ಅನನ್ಯಾ ಕಪ್ಪು ಸ್ಕರ್ಟ್ ಧರಿಸಿ ಚಿಟ್ಟೆ ಮಾದರಿಯ ಟಾಪ್ ಧರಿಸುವ ಮೂಲಕ ಸಾಕಷ್ಟು ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಉಡುಪಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಟಿ, ಇದು ಸೂಪರ್ ಹೀರೊ ಕಲ್ಪನೆ. ನಾವು ಕೀಟಗಳೊಂದಿಗೂ ಬದುಕುವ ಅವಶ್ಯಕತೆ ಇದೆ ಎಂಬುದನ್ನು ನಮ್ಮ ಡಿಸೈನರ್ ತೋರಿಸಿಕೊಟ್ಟಿದ್ದಾರೆ ಎಂದಿದ್ದಾರೆ. ಅನನ್ಯಾ ಧರಿಸಿದ್ದ ವಸ್ತ್ರವನ್ನು ಖ್ಯಾತ ಡಿಸೈನರ್ ರಾಹುಲ್ ಮಿಶ್ರಾ ಡಿಸೈನ್ ಮಾಡಿದ್ದಾರೆ.

Read More

ಇಸ್ಲಾಮಾಬಾದ್: ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ ಫಲಿತಾಂಶ ಪ್ರಕಟವಾಗಿ ಮೂರು ದಿನ ಕಳೆದಿದ್ದರೂ ಇದುವರೆಗೂ ಸರ್ಕಾರ ರಚನೆಯಾಗಿಲ್ಲ. ಹೀಗಾಗಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಬ್ಯಾರಿಸ್ಟರ್ ಗೋಹರ್ ಅಲಿ ಖಾನ್ ಅವರು ಭಾನುವಾರ ಚುನಾವಣಾಧಿಕಾರಿಗಳ (ಆರ್‌ಒ) ವಿರುದ್ಧ ರಾಷ್ಟ್ರ ವ್ಯಾಪಿ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿದ್ದಾರೆ ಎಂದು ಪಾಕಿಸ್ತಾನ ಮೂಲದ ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿಯಲ್ಲಿ ಉಲ್ಲೇಖಿಸಿದೆ. ಫೆಬ್ರವರಿ 8 ರ ಚುನಾವಣೆಯ ನಂತರ ‘ಗುಲಾಮಗಿರಿ ಸ್ವೀಕಾರಾರ್ಹವಲ್ಲ’ ಎಂಬ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ದೃಷ್ಟಿಯಲ್ಲಿ ಪಾಕಿಸ್ತಾನದ ಜನರು ಸಂಪೂರ್ಣ ವಿಶ್ವಾಸ ಹೊಂದಿದ್ದಾರೆ. ಮತ ಎಣಿಕೆ ದಿನದಂದು ಎದುರಿಸಿದ ಸವಾಲುಗಳ ಹೊರತಾಗಿಯೂ, ಜನರು ಪಿಟಿಐ ಪರವಾಗಿ ಸ್ಪಷ್ಟ ಮತ್ತು ಪಾರದರ್ಶಕ ಜನಾದೇಶವನ್ನು ಪ್ರದರ್ಶಿಸಿದ್ದಾರೆ ಎಂದು ಗೋಹರ್ ಅಲಿಖಾನ್ ಹೇಳಿದ್ದಾರೆ. ಆರ್‌ಒಗಳು ಮತ್ತೊಮ್ಮೆ ತಮ್ಮ ಅಧಿಕಾರವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಗೋಹರ್ ಅಲಿ ಖಾನ್ ಆರೋಪಿಸಿದ್ದು, ಚುನಾವಣಾ ಫಲಿತಾಂಶಗಳನ್ನು ತಿರುಚುವ ಮೂಲಕ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಪ್ರಯತ್ನಗಳನ್ನು ಖಂಡಿಸಿದರು. ಅಂತಹ ಯಾವುದೇ ಕ್ರಮವು ಪಾಕಿಸ್ತಾನಕ್ಕೆ…

Read More

ದಕ್ಷಿಣ ಫಿಲಿಪೈನ್ಸ್‌ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 54 ಕ್ಕೆ ಏರಿಯಾಗಿದ್ದು. 63 ಮಂದಿ ಕಾಣೆಯಾಗಿದ್ದಾರೆ. ಕಾಣೆಯಾದವರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸರ್ಕಾರ ತಿಳಿಸಿದೆ. ಫೆಬ್ರವರಿ 6 ರ ಸಂಜೆ ದಾವೊ ಡಿ ಓರೊ ಪ್ರಾಂತ್ಯದ ಪರ್ವತ ನಗರವಾದ ಮಾಕೊದಲ್ಲಿ ಭೂಕುಸಿತ ಸಂಭವಿಸಿದ್ದು, ಅನೇಕ ಮನೆಗಳು, ವಾಹನಗಳು ಮತ್ತು ಹತ್ತಾರು ಮಂದಿ ಸಮಾಧಿಯಾಗಿದ್ದಾರೆ. ಕನಿಷ್ಠ 32 ಜನರು ಗಾಯಗೊಂಡಿದ್ದಾರೆ ಎಂದು ಮ್ಯಾಕೋ ಟೌನ್ ವಿಪತ್ತು ತಡೆ ಕಚೇರಿ ತಿಳಿಸಿದೆ. ಮೈಕೊ ಪುರಸಭೆಯ ನಾಲ್ಕು ಗ್ರಾಮಗಳಲ್ಲಿ 1,347 ಕುಟುಂಬಗಳು ಅಥವಾ 5,431 ಜನರು ಭೂಕುಸಿತದಿಂದ ಪ್ರಭಾವಿತರಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ವರ್ಲ್ಡ್ ರಿಸ್ಕ್ ಇಂಡೆಕ್ಸ್ 2022 ಫಿಲಿಪೈನ್ಸ್ ವಿಶ್ವದ ಅತ್ಯಂತ ವಿಪತ್ತು-ಪೀಡಿತ ದೇಶಗಳಲ್ಲಿ ಮೊದಲ ಸ್ಥಾನದಲ್ಲಿದೆ. ಪೆಸಿಫಿಕ್ ರಿಂಗ್ ಆಫ್ ಫೈರ್‌ನಲ್ಲಿ ನೆಲೆಗೊಂಡಿರುವ ಈ ದ್ವೀಪಸಮೂಹವು ಆಗಾಗ ಪ್ರಬಲವಾದ ಬಿರುಗಾಳಿಗಳಿಂದ ಹೊಡೆತಕ್ಕೆ ಸಿಲುಕುತ್ತದೆ, ಭೂಕಂಪವೂ ಉಂಟಾಗುತ್ತಿರುತ್ತದೆ, ಇದು ಹಠಾತ್ ಪ್ರವಾಹಗಳು ಮತ್ತು ಭೂಕುಸಿತಗಳನ್ನು ಉಂಟುಮಾಡುತ್ತದೆ ಮತ್ತು ಜ್ವಾಲಾಮುಖಿ ಸ್ಫೋಟಗಳಿಂದ ಸಾಕಷ್ಟು ಬಾರಿ…

Read More

ಕೊಲಂಬೊ: ಇಂದಿನಿಂದ ಶ್ರೀಲಂಕಾ ಮತ್ತು ಮಾರಿಷಸ್‌ಗಳಲ್ಲಿ ಭಾರತದ ಯುನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌ (ಯುಪಿಐ) ಸೇವೆ ಗಳಿಗೆ ಚಾಲನೆ ದೊರೆಯಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಶ್ರೀಲಂಕಾ ಅಧ್ಯಕ್ಷ ರಣಿಲ್‌ ವಿಕ್ರಮಸಿಂಘೆ ಮತ್ತು ಮಾರಿಷಸ್‌ ಪ್ರಧಾನಿ ಪ್ರವಿಂದ್‌ ಜುಗೌ°ಥ್‌ ವೀಡಿಯೋ ಕಾನ್ಫರೆನ್ಸ್‌ ಮೂಲಕ ಇದರಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಶ್ರೀಲಂಕಾ ಮತ್ತು ಮಾರಿಷಸ್‌ಗೆ ಪ್ರಯಾಣಿಸುವ ಭಾರತೀಯರು ಮತ್ತು ಭಾರತಕ್ಕೆ ಪ್ರಯಾಣಿಸುವ ಈ ದೇಶಗಳ ನಾಗರಿಕರಿಗೆ ಯುಪಿಐ ಸೇವೆಗಳ ಅನುಕೂಲ ದೊರೆಯಲಿದೆ.

Read More

ಆರ್ ಆರ್ ಆರ್ ಸಿನಿಮಾ ಸೂಪರ್ ಹಿಟ್ ಆದ ಬಳಿಕ ನಟ ಜ್ಯೂನಿಯರ್ ಎನ್ ಟಿ ಆರ್ ದೇವರ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಸಿನಿಮಾ ಒಂದಲ್ಲಾ ಒಂದು ವಿಚಾರವಾಗಿ ಸದ್ದು ಮಾಡುತ್ತಿದೆ. ಈಗಾಗ್ಲೆ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದು ಈ ಮಧ್ಯೆ ಚಿತ್ರತಂಡಕ್ಕೆ ಮತ್ತೋರ್ವ ನಟಿಯ ಎಂಟ್ರಿಯಾಗಿದೆ. ಜ್ಯೂ.ಎನ್‌ಟಿಆರ್‌ಗೆ ನಾಯಕಿಯಾಗಿ ಬಾಲಿವುಡ್ ನಟಿ ಜಾನ್ವಿ ಕಪೂರ್ ಕಾಣಿಸಿಕೊಂಡಿದ್ದಾರೆ. ಹಳ್ಳಿ ಹುಡುಗಿಯ ಪಾತ್ರಕ್ಕೆ ನಟಿ ಜೀವ ತುಂಬಿದ್ದಾರೆ. ಹೀಗಿರುವಾಗ ಸಿನಿಮಾಗೆ ಮತ್ತೊಬ್ಬ ಖ್ಯಾತ ನಟಿಯ ಆಗಮನವಾಗಿದೆ. ‘ದೇವರ’ ಸಿನಿಮಾದಲ್ಲಿ ಮರಾಠಿ ಸಿನಿಮಾರಂಗದ ನಟಿ ಶ್ರುತಿ ಮರಾಠೆ ಅವರು ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಚಿತ್ರದಲ್ಲಿ ಜೂನಿಯರ್ ಎನ್ ಟಿ ಆರ್ ಮುಂದೆ ಸೈಫ್ ಅಲಿ ಖಾನ್ ವಿಲನ್ ಆಗಿ ಕಾಣಿಸಿಕೊಳ್ತಿದ್ದು, ಕನ್ನಡದ ನಟಿ ಚೈತ್ರಾ ರೈ ಸೈಫ್ ಪತ್ನಿಯಾಗಿ ನಟಿಸಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.

Read More

ಸ್ಯಾಂಡಲ್‌ವುಡ್ ಸೆಂಡ್ರೆಲಾ ನಟಿ ರಾಧಿಕಾ ಪಂಡಿತ್ ವ್ಯಾಲೆಂಟೈನ್ ಮೂಡ್ ನಲ್ಲಿದ್ದಾರೆ. ಪ್ರೇಮಿಗಳ ದಿನ ಹತ್ತಿರವಾಗುತ್ತಿರುವ ಖುಷಿಯಲ್ಲಿರುವ ರಾಧಿಕಾ ಇದೇ ಖುಷಿಯಲ್ಲಿ ಸಖತ್ತಾಗೆ ಫೋಟೋಶೂಟ್ ಮಾಡಿಸಿದ್ದಾರೆ. ಪತಿ ಯಶ್‌ಗಾಗಿ ಕಾಯುತ್ತಿರುವ ಸುಂದರ ಫೋಟೋಗಳನ್ನು ರಾಧಿಕಾ ಪಂಡಿತ್ ಶೇರ್ ಮಾಡಿದ್ದು, ಸದ್ಯ ನಟಿಯ ಹೊಸ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಂಪು ಬಣ್ಣದ ಡ್ರೆಸ್‌ನಲ್ಲಿ ತೊಟ್ಟಿರುವ ನಟಿ ಮಿನುಗುವ ಲೈಟ್ ಮಧ್ಯೆ ಕುಳಿತು ಕ್ಯೂಟ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ತಮ್ಮ ಫೋಟೋಗಳಿಗೆ ‘ನನ್ನ ವ್ಯಾಲೆಂಟೈನ್ ಕಾಣಿಸಿಕೊಂಡಾಗ ಹ್ಯಾಪಿ ಟೈಮ್ ಪ್ರಾರಂಭವಾಗುತ್ತದೆ’ ಎಂದು ರಾಧಿಕಾ ಪಂಡಿತ್ ಕ್ಯಾಪ್ಷನ್ ನೀಡಿದ್ದಾರೆ. ರಾಧಿಕಾರ ಸುಂದರ ಫೋಟೋ ನೋಡ್ತಿದ್ದಂತೆ ಯಶ್ ಎಲ್ಲಿ? ರಾಕಿ ಬಾಯ್‌ಗಾಗಿ ಕಾಯುತ್ತಿದ್ದೀರಾ ಅಲ್ವಾ? ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಸಾಕಷ್ಟು ವರ್ಷಗಳ ಕಾಲ ಪ್ರೀತಿಯಲ್ಲಿದ್ದ ರಾಧಿಕಾ ಹಾಗೂ ಯಶ್ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೋಡಿಗೆ ಐರಾ ಹಾಗೂ ಯಥರ್ವ ಹೆಸರಿನ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಮದುವೆಯ ಬಳಿಕ ಸಿನಿಮಾ ರಂಗದಿಂದ ದೂರವಾಗಿರೋ…

Read More

ಕೊಲಂಬೊ: ಇಂದಿನಿಂದ ಶ್ರೀಲಂಕಾ ಮತ್ತು ಮಾರಿಷಸ್‌ಗಳಲ್ಲಿ ಭಾರತದ ಯುನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌ (ಯುಪಿಐ) ಸೇವೆ ಗಳಿಗೆ ಚಾಲನೆ ದೊರೆಯಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಶ್ರೀಲಂಕಾ ಅಧ್ಯಕ್ಷ ರಣಿಲ್‌ ವಿಕ್ರಮಸಿಂಘೆ ಮತ್ತು ಮಾರಿಷಸ್‌ ಪ್ರಧಾನಿ ಪ್ರವಿಂದ್‌ ಜುಗೌ°ಥ್‌ ವೀಡಿಯೋ ಕಾನ್ಫರೆನ್ಸ್‌ ಮೂಲಕ ಇದರಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಶ್ರೀಲಂಕಾ ಮತ್ತು ಮಾರಿಷಸ್‌ಗೆ ಪ್ರಯಾಣಿಸುವ ಭಾರತೀಯರು ಮತ್ತು ಭಾರತಕ್ಕೆ ಪ್ರಯಾಣಿಸುವ ಈ ದೇಶಗಳ ನಾಗರಿಕರಿಗೆ ಯುಪಿಐ ಸೇವೆಗಳ ಅನುಕೂಲ ದೊರೆಯಲಿದೆ.

Read More

ಬಾಲಿವುಡ್ ಬ್ಯೂಟಿ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಬಾಲಿವುಡ್ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಜಾನ್ವಿಗೆ ನಿರೀಕ್ಷಿಸಿದ ಮಟ್ಟಿಗಿನ ಯಶಸ್ಸು ಲಭಿಸದೆ ಹೋದ್ರು ಆಫರ್ ಗಳಿಗೆ ಮಾತ್ರ ಯಾವುದೇ ಕೊರತೆಯಾಗಿಲ್ಲ. ಇದೀಗ ಸೌತ್ ಸಿನಿ ಇಂಡಸ್ಟ್ರಿಗೆ ಎಂಟ್ರಿಕೊಟ್ಟಿದ್ದು ದುಬಾರಿ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಜೂನಿಯರ್​ ಎನ್​ಟಿಆರ್​ ನಟನೆಯ ‘ದೇವರ’ ಚಿತ್ರದಲ್ಲಿ ಜಾನ್ವಿ ಕಪೂರ್​ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಈ ಸಿನಿಮಾಗೆ ಜಾನ್ವಿ 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಅಚ್ಚರಿ ಏನೆಂದರೆ, ‘ದೇವರ’ ಬಿಡುಗಡೆ ಆಗುವುದಕ್ಕೂ ಮುನ್ನವೇ ತೆಲುಗಿನಲ್ಲಿ ಅವರು ಒಪ್ಪಿಕೊಳ್ಳುವ ಹೊಸ ಸಿನಿಮಾಗಳಿಗೆ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ದೇವರ ಸಿನಿಮಾದ ಬಳಿಕ ನಟಿಸಲಿರುವ ಸಿನಿಮಾಗಳಿಗೆ ಶ್ರಿದೇವಿ ಪುತ್ರಿ ಸಂಭಾವನೆ ಏರಿಸಿಕೊಂಡಿದ್ದು, ಪ್ರತಿ ಚಿತ್ರಕ್ಕೆ 10 ಕೋಟಿ ರೂ. ಎನ್ನಲಾಗಿದೆ. ಜಾನ್ವಿ ಸಿನಿಮಾಗಳು ಹೆಚ್ಚು ಸದ್ದು ಮಾಡದೆ ಹೋದ್ರು ಆಕೆಯ ಸಂಭಾವನೆ ಮಾತ್ರ ಹೆಚ್ಚುತ್ತಲೆ ಇದೆ. ಆದ್ರೆ ಈ ಬಗ್ಗೆ ಜಾನ್ವಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Read More

ನವದೆಹಲಿ: ನಾಳೆ ಅಂದರೆ ಫೆಬ್ರವರಿ 12ರಿಂದ 2023 -24 ನೇ ಸಾಲಿನ ನಾಲ್ಕನೇ ಸರಣಿಯ ಗೋಲ್ಡ್ ಬಾಂಡ್ ಸ್ಕೀಮ್ ಆರಂಭವಾಗಲಿದ್ದು, ಫೆಬ್ರವರಿ 16 ರವರೆಗೆ ಬಾಂಡ್ ಗಳನ್ನು ಖರೀದಿಸಬಹುದಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಗೋಲ್ಡ್ ಬಾಂಡ್ ಗಳನ್ನು ನಿರ್ದಿಷ್ಟ ಅಂಚೆ ಕಚೇರಿಗಳು, ವಾಣಿಜ್ಯ ಬ್ಯಾಂಕುಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್, ಕ್ಲಿಯರಿಂಗ್ ಕಾರ್ಪೊರೇಷನ್ ಗಳಲ್ಲಿ ಪಡೆದುಕೊಳ್ಳಬಹುದಾಗಿದೆ. ಫೆಬ್ರವರಿ 8, 2016ರಲ್ಲಿ ಜಾರಿ ಮಾಡಿದ್ದ ಗೋಲ್ಡ್ ಬಾಂಡ್ ಬೆಲೆ ಪ್ರತಿ ಗ್ರಾಂಗೆ 2600 ರೂ. ನಿಗದಿಪಡಿಸಲಾಗಿತ್ತು. ಎಂಟು ವರ್ಷ ಮೆಚುರಿಟಿ ಅವಧಿ ನಿಗದಿಗೊಳಿಸಲಾಗಿದ್ದು, 2024ರ ಫೆಬ್ರವರಿ 8ರಂದು ಅವಧಿ ಮುಕ್ತಾಯವಾಗಲಿದೆ. ಮೆಚುರಿಟಿ ಮೊತ್ತವನ್ನು ಘೋಷಣೆ ಮಾಡಿದ್ದು, ಪ್ರತಿ ಯುನಿಟ್ 6271 ರೂ. ನಿಗದಿಪಡಿಸಿದೆ. ಗೋಲ್ಡ್ ಬಾಂಡ್ ದಾರರಿಗೆ ಶೇಕಡ 141 ರಷ್ಟು ರಿಟರ್ನ್ಸ್ ಸಿಗಲಿದೆ. ಹೂಡಿಕೆದಾರರಿಗೆ ಮೆಚುರಿಟಿ ಸಮಯದಲ್ಲಿನ ಚಿನ್ನದ ಮಾರುಕಟ್ಟೆ ಮೌಲ್ಯ ಮತ್ತು ಬಡ್ಡಿ ಸಹಿತ ರಿಟರ್ನ್ಸ್ ಸಿಗಲಿದೆ.

Read More

ಟಾಲಿವುಡ್ ಪ್ರಿನ್ಸ್ ನಟ ಮಹೇಶ್ ಬಾಬು ಮಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದ್ದಾರೆ. ಇದನ್ನೇ ಬಳಸಿಕೊಂಡಿರೋ ವಂಚಕರು ವಂಚನೆಗೆ ಇಳಿದಿದ್ದಾರೆ. ಮಹೇಶ್ ಬಾಬು ಅವರ ತಂಡ ಈಗಾಗಲೇ ಈ ಕುರಿತಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ, ಸಿತಾರಾ ಅವರ ತಾಯಿ, ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಈ ವಂಚನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಎಚ್ಚರಿಕೆ ಸಂದೇಶವನ್ನು ಸಹ ನೀಡಿದ್ದಾರೆ. ವ್ಯಕ್ತಿಯೋರ್ವ ಸಿತಾರಾ ಗಟ್ಟಿಮನೇನಿಯ ಚಿತ್ರ, ವಿಡಿಯೋ ಹಾಗೂ ಹೆಸರು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಕೆಲವು ಲಿಂಕ್​ಗಳನ್ನು ಹಂಚಿಕೊಳ್ಳುತ್ತಿದ್ದಾನೆ. ಅಲ್ಲದೆ ಬಂಡವಾಳ ಹೂಡಿಕೆ ಯೋಜನೆಗಳ ಮಾರಾಟ, ಲೋನ್ ಕೊಡಿಸುವುದಾಗಿ ಹೇಳಿ ಲಿಂಕ್ ಕಳಿಸುವುದು, ಷೇರು ಮಾರುಕಟ್ಟೆಗೆ ಸಂಬಂಧಿಸಿದ ಹೂಡಿಕೆ ಐಡಿಯಾಗಳನ್ನು ಕೊಡುವುದಾಗಿ ಹೇಳಿಕೊಂಡು ಹಲವರನ್ನು ಸಂಪರ್ಕ ಮಾಡಿದ್ದಾನೆ. ಸದ್ಯ ಪೊಲೀಸರು ವಂಚನೆ ಎಸಗಿದ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಜನರು ಸಾಮಾಜಿಕ ಜಾಲತಾಣದಲ್ಲಿ ತಮಗೆ ಬಂದ ಹೂಡಿಕೆ ಮಾಹಿತಿಯನ್ನು ನಿಜವೆಂದು ನಂಬುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡಿಕೊಳ್ಳಿ…

Read More