ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹುನಿರೀಕ್ಷಿತ ಲಾಲ್ ಸಲಾಂ ಸಿನಿಮಾ ಈ ವಾರ ರಿಲೀಸ್ ಆಗುತ್ತಿದೆ. ಅದಕ್ಕೂ ಮುನ್ನ ಚಿತ್ರತಂಡ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ್ದು ಟ್ರೈಲರ್ ನಲ್ಲಿ ರಜನಿ ಎಂದಿನಂತೆ ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಲಾಲ್ ಸಲಾಂ ಸಿನಿಮಾಗೆ ಐಶ್ವರ್ಯ ರಜನಿಕಾಂತ್ ಆಕ್ಷನ್ ಕಟ್ ಹೇಳಿದ್ದು ಅಭಿಮಾನಿಗಳಿಗೆ ಏನೆಲ್ಲಾ ಬೇಕೋ ಅದನೆಲ್ಲವನ್ನೂ ಚಿತ್ರದಲ್ಲಿ ನೀಡಿದ್ದಾರೆ. ‘ಜೈಲರ್’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ತೆರೆ ಕಾಣುತ್ತಿರೋ ಲಾಲ್ ಸಲಾಂ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈಗಾಗ್ಲೆ ಸಿನಿಮಾದ ಟ್ರೈಲರ್ ನಲ್ಲಿ ರಜನಿಕಾಂತ್ ಅಬ್ಬರಿಸಿದ್ದು ಚಿತ್ರದ ಟ್ರೈಲರ್ ನೋಡಿ ಚಿತ್ರದ ಮೇಲಿರೋ ನಿರೀಕ್ಷೆ ದುಪ್ಪಟ್ಟಾಗಿದೆ. ಸಂಕ್ರಾಂತಿ ಹಬ್ಬದಂದು ಲಾಲ್ ಸಲಾಂ ಸಿನಿಮಾವನ್ನು ರಿಲೀಸ್ ಮಾಡೋಕೆ ಚಿತ್ರತಂಡ ಮುಂದಾಗಿತ್ತು. ಆದರೆ ಅಂದು ಧನುಷ್ ಸಿನಿಮಾ ರಿಲೀಸ್ ಆದ ಕಾರಣದಿಂದಾಗಿ ಫೆಬ್ರವರಿ 9ರಂದು ಲಾಲ್ ಸಲಾಂ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿತ್ತು. ಸ್ಪೋರ್ಟ್ ಡ್ರಾಮಾ ಕಥಾಹಂದರ ಹೊಂದಿರುವ ಸಿನಿಮಾದಲ್ಲಿ ವಿಷ್ಣು…
Author: Author AIN
ಬಿಗ್ ಬಾಸ್ ಸೀಸನ್ 10ರಲ್ಲಿ ತಮ್ಮ ಸ್ನೇಹದ ಮೂಲಕವೇ ಸಖತ್ ಫೇಮಸ್ ಆಗಿ ಸಂತು ಪಂತು ಎಂದೇ ಕರೆಸಿಕೊಂಡಿದ್ದ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕವೂ ತಮ್ಮ ಸ್ನೇಹ ಮುಂದುವರೆಸಿದ್ದಾರೆ. ಇತ್ತೀಚೆಗೆ ವರ್ತೂರು ಸಂತೋಷ್ ಮನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ತೂಕಲಿ ಸಂತೋಷ್ ಆಗಮಿಸಿದ್ದು ಈ ವೇಳೆ ವರ್ತೂರು ತುಕಾಲಿಗೆ ಚಿನ್ನದ ಉಡುಗೊರೆಯನ್ನು ನೀಡಿದ್ದಾರೆ. ವರ್ತೂರು ಸಂತೋಷ್ ಮನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಬಿಗ್ ಬಾಸ್ ಸೀಸನ್ 10ರಲ್ಲಿ ಭಾಗವಹಿಸಿದ್ದ ಸಾಕಷ್ಟು ಮಂದಿ ಕಂಟೆಸ್ಟೆಂಟ್ ಗಳು ಹಾಜರಿದ್ದರು. ಈ ವೇಳೆ ವರ್ತೂರು ಎಲ್ಲರನ್ನು ಸತ್ಕರಿಸಿ ಸನ್ಮಾನಿಸಿದ್ದರು. ಈ ವೇಳೆ ತಮ್ಮ ಆತ್ಮೀಯ ಸ್ನೇಹಿತ ತುಕಾಲಿ ಸಂತೋಷ್ ಗೆ ಚಿನ್ನದಲ್ಲಿ ಮಾಡಿಸಿರುವ ಸಂತು-ಪಂತು ಹೆಸರಿನ ಲಾಕೆಟ್ ನೀಡಿದ್ದಾರೆ. ಇದೇ ರೀತಿಯ ಲಾಕೆಟ್ ಅನ್ನು ವರ್ತೂರು ಸಂತೋಷ್ ಕೂಡ ಧರಿಸಿದ್ದರು. ತಮ್ಮಿಬ್ಬರ ಸ್ನೇಹ ಶಾಶ್ವತವಾಗಿರಲಿ ಎನ್ನುವ ಕಾರಣಕ್ಕಾಗಿ ಈ ಪದಕವನ್ನು ನೀಡಿರುವುದಾಗಿ ವರ್ತೂರು ಸಂತೋಷ್ ಹೇಳಿಕೊಂಡಿದ್ದಾರೆ. ನನ್ನ ನೆಚ್ಚಿನ…
ಕೆಜಿಎಫ್ ಸಿನಿಮಾದ ಬಳಿಕ ಯಶ್ ನಟನೆಯ ಮುಂದಿನ ಸಿನಿಮಾದ ಕುರಿತು ಸಾಕಷ್ಟು ಕುತೂಹಲಕರ ಮಾಹಿತಿಗಳು ಹೊರ ಬೀಳುತ್ತಿದೆ. ಈಗಾಗ್ಲೆ ಟಾಕ್ಸಿಕ್ ಸಿನಿಮಾದಲ್ಲಿ ಬಿಟೌನ್ ಬ್ಯೂಟಿ ಕರೀನಾ ಕಪೂರ್ ನಟಿಸಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ಇದೀಗ ಟಾಕ್ಸಿಕ್ ನಲ್ಲಿ ಬಾಲಿವುಡ್ ಬಾದ್ ಶಾ ಕಿಂಗ್ ಖಾನ್ ಶಾರುಖ್ ಖಾನ್ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಈಗಾಗಲೇ ನಟ ಶಾರುಖ್ ಖಾನ್ ಜೊತೆ ಒಂದು ಸುತ್ತಿನ ಮಾತುಕತೆ ನಡೆದಿದ್ದು ಕಿಂಗ್ ಖಾನ್ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಈ ಸುದ್ದಿ ಕೇಳಿ ರಾಕಿ ಬಾಯ್ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಕಿಂಗ್ ಖಾನ್ ಶಾರುಖ್ ಖಾನ್ ಬಿಟೌನ್ ನಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡ್ತಿದ್ದಾರೆ. ಈ ನಡುವೆ ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ಈ ಬಗ್ಗೆ ಶಾರುಖ್ ಖಾನ್ ಜೊತೆ ಮಾತುಕತೆ ಕೂಡ ನಡೆಸಿದ್ದು ಚಿತ್ರದಲ್ಲಿ ಶಾರುಖ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರಂತೆ. ನಿರ್ದೇಶಕಿ ಗೀತು ಮೋಹನ್…