Author: Author AIN

ಸದ್ಯ ದರ್ಶನ್ ನಟನೆಯ ಕಾಟೇರ ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಸಿನಿಮಾ ರಿಲೀಸ್ ಆಗಿ ತಿಂಗಳು ಕಳೆದಿದ್ರು ಬಾಕ್ಸ್ ಆಫೀಸ್ ನಲ್ಲಿ ಕಾಟೇರನ ಅಬ್ಬರ ಜೋರಾಗಿಯೇ ಇದೆ. ಈ ಮಧ್ಯೆ ದರ್ಶನ್ ಬಾಲಿವುಡ್ ಬ್ಯಾಡ್ ಬಾಯ್ ಸಂಜಯ್ ದತ್ ಅವರನ್ನು ಭೇಟಿಯಾಗಿದ್ದಾರೆ. ಯಶ್ ನಟನೆಯ ‘ಕೆಜಿಎಫ್ 2’ ಸಿನಿಮಾದಲ್ಲಿ ಅಧಿರಾನ ಪಾತ್ರದಲ್ಲಿ ಕಾಣಿಸಿಕೊಂಡ ಬಳಿಕ ಸಂಜಯ್ ದತ್ ಸೌತ್ ಸಿನಿಮಾಗಳಲ್ಲಿ ಹೆಚ್ಚು ಹೆಚ್ಚು ಕಾಣಿಸಿಕೊಳ್ತಿದ್ದಾರೆ. ಸದ್ಯ ಸಂಜಯ್ ಧ್ರುವ ಸರ್ಜಾ ನಟನೆಯ ಪ್ರೇಮ್ ನಿರ್ದೇಶನದ ಕೆಡಿ ಚಿತ್ರದಲ್ಲಿ ನಟಿಸುತ್ತಿದ್ದು ಈ ಚಿತ್ರತಂಡ ಇತ್ತೀಚೆಗೆ ಪಾರ್ಟಿಯೊಂದನ್ನು ಆಯೋಜಿಸಿದೆ. ಈ ಪಾರ್ಟಿಯಲ್ಲಿ ಸಂಜಯ ದತ್ ಭಾಗಿಯಾಗಿದ್ದು ಈ ವೇಳೆ ದಚ್ಚು ಸಂಜು ಭೇಟಿ ನಡೆದಿದೆ. ‘ಕೆಡಿ’ ಸಿನಿಮಾ ತಂಡದ ಜೊತೆ ದರ್ಶನ್, ಪ್ರೇಮ್, ರಕ್ಷಿತಾ ಕಾಣಿಸಿಕೊಂಡಿದ್ದಿ ಈ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಧ್ರುವ ಸರ್ಜಾ ನಟನೆಯ ಪ್ರೇಮ್ ನಿರ್ದೇಶನದ ‘ಕೆಡಿ’ ಸಿನಿಮಾವನ್ನು ‘ಕೆವಿಎನ್’ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ದರ್ಶನ್ ರ ಮುಂದಿನ…

Read More

ಇಸ್ಲಾಮಾಬಾದ್: ಪಾಕ್ ರಾಷ್ಟ್ರೀಯ ಅಸೆಂಬ್ಲಿ ಚುನಾವಣೆಗೆ ಇಂದು ಮತದಾನ ನಡೆಯಲಿದ್ದು, ಒಟ್ಟು 5128 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಇಮ್ರಾನ್‌ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರಿಕೆ ಇನ್ಸಾಫ್ (ಪಿಟಿಐ) ಹಾಗೂ ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಝ್ ಶರೀಫ್) (ಪಿಎಂಎಲ್-ಎನ್) ಮತ್ತು ಬಿಲಾವಲ್ ಭುಟ್ಟೋ ಝರ್ದಾರಿ ನೇತೃತ್ವದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಚುನಾವಣಾ ಕಣದಲ್ಲಿರುವ ಪ್ರಮುಖ ಪಕ್ಷಗಳಾಗಿವೆ. ಪಾಕ್ ರಾಷ್ಟ್ರೀಯ ಅಸೆಂಬ್ಲಿ ಚುನಾವಣೆಗೆ ಕೆಲವೇ ದಿನಗಳ ಮೊದಲು, ಜನಪ್ರಿಯ ನಾಯಕ, ಪಿಟಿಐ ಪಕ್ಷದ ವರಿಷ್ಠ ಇಮ್ರಾನ್ ಖಾನ್ ಅವರನ್ನು ಭ್ರಷ್ಟಾಚಾರದ ಪ್ರಕರಣದಲ್ಲಿ ದೋಷಿಯೆಂದು ಪರಿಗಣಿಸಿ ಜೈಲು ಶಿಕ್ಷೆ ಘೋಷಿಸಿದ್ದು ಚುನಾವಣೆಗಳಲ್ಲಿ ಸ್ಪರ್ಧಿಸುವುದಕ್ಕೆ ಅನರ್ಹತೆಯನ್ನು ಘೋಷಿಸಲಾಗಿತ್ತು. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲು ಸೇರಿರುವುದರಿಂದ ಹಾಗೂ ಅವರ ಪಕ್ಷದ ಅಭ್ಯರ್ಥಿಗಳಿಗೆ ಪಕ್ಷದ ಬ್ಯಾಟ್ ಚುನಾವಣಾ ಚಿಹ್ನೆಯನ್ನು ನೀಡಲು ನಿರಾಕರಿಸಿರುವುದರಿಂದ ನವಾಝ್ ಶರೀಫ್ ನೇತೃತ್ವದ ಪಿಎಂಎಲ್(ಎನ್) ಪಕ್ಷಕ್ಕೆ ಗೆಲುವಿನ ಹಾದಿ ಸುಗಮವಾಗಲಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಪಿಎಂಎಲ್ (ಎನ್) ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು…

Read More

ತನಗಿಂತ 15 ವರ್ಷ ಕಿರಿಯನ ಕೈ ಹಿಡಿತಾರಾ ಮಾಜಿ ವಿಶ್ವ ಸುಂದರಿ ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಡೇಟಿಂಗ್ ವಿಚಾರದಲ್ಲಿ ಆಗಾಗ ಸದ್ದು ಮಾಡುತ್ತಲೆ ಇರುತ್ತಾರೆ. ಸುಶ್ಮಿತಾ ಸೇನ್ ಹೆಸರು ಈಗಾಗಲೇ ಸಾಕಷ್ಟು ಮಂದಿಯೊಂದಿಗೆ ತಳುಕು ಹಾಕಿಕೊಂಡಿದೆ. ಆದರೆ ಅದ್ಯಾವುದಕ್ಕೂ ನಟಿ ಕ್ಯಾರೆ ಎಂದಿಲ್ಲ. ಸುಶ್ಮಿತಾ ಕಳೆದ ಕೆಲ ವರ್ಷಗಳಿಂದ ರೋಹ್ಮನ್ ಶಾಲ್ ಜೊತೆ ಡೇಟಿಂಗ್ ಮಾಡ್ತಿದ್ದಾರೆ. ಆದರೆ ಮದುವೆಯಾಗುತ್ತಾರೆ ಎನ್ನುವ ಮಾತನ್ನು ಸುಶ್ಮಿತಾ ನಿರಾಕರಿಸಿದ್ದರು. ಇದೀಗ ಸುಶ್ಮಿತಾ ಮತ್ತೆ ರೋಹ್ಮನ್ ಮದುವೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಸುಶ್ಮಿತಾ ಸೇನ್ ತನಗಿಂತ 15 ವರ್ಷ ಕಿರಿಯ ಗೆಳೆಯ ರೋಹ್ಮನ್ ಶಾಲ್ ಜೊತೆ ಮದುವೆಯಾಗ್ತಾರಾ ಎಂಬ ಪ್ರಶ್ನೆಗೆ ಸುಶ್ಮಿತಾ ಸೇನ್ ಉತ್ತರಿಸಿದ್ದಾರೆ. ಎಲ್ಲರೂ ನಾನು ಮದುವೆಯಾಗಬೇಕೆಂದು ಬಯಸುತ್ತಾರೆ ಎಂದು ನನಗೆ ತಿಳಿದಿದೆ. ಈ ವಯಸ್ಸಿನಲ್ಲಿ ನಾನು ಜೀವನದಲ್ಲಿ ಸೆಟ್ಲ್ ಆಗ್ಬೇಕು ಎಂದು ಭಾವಿಸುತ್ತೀರಿ. ಆದರೆ ನಾನು ಮದುವೆ ಬಗ್ಗೆ ಚಿಂತಿಸುವುದಿಲ್ಲ ಎಂದಿದ್ದಾರೆ. ಮದುವೆಯ ಬಗ್ಗೆ ನನಗೆ ಅಪಾರ…

Read More

ಬಲೂಚಿಸ್ತಾನ: ಪಾಕ್ ನಲ್ಲಿ ನಡೆಯಲಿರುವ ಚುನಾವಣೆ ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ ಪಾಕಿಸ್ತಾನದ ಬಲೂಚಿಸ್ತಾನ ಪಿಶಿನ್‌ನಲ್ಲಿರುವ ಸ್ವತಂತ್ರ ಅಭ್ಯರ್ಥಿಯ ಪಕ್ಷದ ಕಚೇರಿಯ ಹೊರಗೆ ಬಾಂಬ್​​ ಸ್ಫೋಟಗೊಂಡಿದ್ದು ಘಟನೆಯಲ್ಲಿ ಹನ್ನೆರಡು ಮಂದಿ ಮೃತಪಟ್ಟಿದ್ದಾರೆ. ಪಾಕಿಸ್ತಾನದ ಪಿಶಿನ್‌ನ ಖನೋಜೈ ಪ್ರದೇಶದಲ್ಲಿ ಸ್ವತಂತ್ರ ಅಭ್ಯರ್ಥಿ ಅಸ್ಫಂಡ್ ಯಾರ್ ಖಾನ್ ಕಾಕರ್ ಅವರ ಕಚೇರಿಯ ಹೊರಗೆ ಬಾಂಬ್​​​ ಸ್ಫೋಟಿಸಲಾಗಿದೆ. ಘಟನೆಯಲ್ಲಿ 12 ಜನ ಮೃತಪಟ್ಟಿದ್ದು 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಾಗಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ವೇಳೆ ಸ್ವತಂತ್ರ ಅಭ್ಯರ್ಥಿ ಅಸ್ಫಂಡ್ ಯಾರ್ ಖಾನ್ ಕಾಕರ್ ಅವರು ತಮ್ಮ ಕಚೇರಿಯಲ್ಲಿ ಇರಲಿಲ್ಲ. ಘಟನೆಯ ಕುರಿತು ಪಾಕಿಸ್ತಾನದ ಚುನಾವಣಾ ಆಯೋಗವು ಪ್ರಾಂತೀಯ ಮುಖ್ಯ ಕಾರ್ಯದರ್ಶಿ ಮತ್ತು ಪ್ರಾಂತೀಯ ಪೊಲೀಸ್ ಮುಖ್ಯಸ್ಥರಿಂದ ತಕ್ಷಣದ ವರದಿಗಳನ್ನು ಕೇಳಿದೆ.  ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶವನ್ನು ನೀಡಲಾಗಿದೆ ಎಂದು ಹೇಳಲಾಗಿದೆ. ಅಸ್ಫಂಡ್ ಯಾರ್ ಖಾನ್ ಕಾಕರ್ ಅವರ ಮೋಟಾರ್‌ ಬೈಕ್‌ನಲ್ಲಿ ಬಾಂಬ್ ಇಡಲಾಗಿತ್ತು ಎಂದು ಜಿಲ್ಲಾಧಿಕಾರಿ ಜುಮಾ ದಾದ್…

Read More

ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದಾರೆ. ವಿಜಯ್ ರಾಜಕೀಯ ಎಂಟ್ರಿಗೆ ಸೂಪರ್ ಸ್ಟಾರ್ ರಜನಿಕಾಂತ್ ಶುಭ ಹಾರೈಸಿದ್ದಾರೆ. ವಿಜಯ್ ದಳಪತಿ ಸಾಕಷ್ಟು ಸಮಯದಿಂದ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿ ಹರಡಿತ್ತು. ಅಲ್ಲದೆ ವಿಜಯ್ ರಾಜಕೀಯಕ್ಕೆ ಬರಬೇಕು ಅನ್ನೋದು ಕೋಟ್ಯಾಂತರ ಅಭಿಮಾನಿಗಳ ಆಸೆಯಾಗಿದ್ದು ಇದೀಗ ‘ತಮಿಳಿಗ ವೆಟ್ರಿ ಕಳಗಂ’ (TVK) ಎಂಬ ಪಕ್ಷ ಸ್ಥಾಪಿಸಿ ವಿಜಯ್ ರಾಜಕೀಯ ಅಖಾಡಕ್ಕೆ ದುಮುಕಿದ್ದಾರೆ. ಸದ್ಯ ವಿಜಯ್ ದಳಪತಿ ಗೋಟ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದು ವಿಜಯ್ ನಟನೆಯ 69ನೇ ಚಿತ್ರವಾಗಿದ್ದು ಇದನ್ನು ವೆಂಕಟ್ ಪ್ರಭು ನಿರ್ದೇಶನ ಮಾಡುತ್ತಿದ್ದಾರೆ. ತಾನು ಮುಖ್ಯಮಂತ್ರಿಯಾದರೆ ಸಿನಿಮಾಗಳಿಂದ ದೂರವಿರುವುದಾಗಿ ಈ ಹಿಂದೆ ವಿಜಯ್ ಹೇಳಿದರು. ಅಂತೆಯೇ ಸದ್ಯ ರಾಜಕೀಯಕ್ಕೆ ಎಂಟ್ರಿಕೊಟ್ಟಿರುವ ವಿಜಯ್ ಚಿತ್ರರಂಗದಿಂದ ದೂರವಾಗ್ತಾರಾ ಎಂದು ಕಾದು ನೋಡಬೇಕಿದೆ.

Read More

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಸಿನಿಮಾ ರಿಲೀಸ್ ಆಗಿ ತಿಂಗಳು ಕಳೆದಿದ್ರು ಇಂದಿಗೂ ಸಾಕಷ್ಟು ಕ್ರೇಜ್ ಹುಟ್ಟಿಹಾಕಿದೆ. ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿರುವ ಕಾಟೇರನನ್ನು ಇಂದಿಗೂ ಸಾಕಷ್ಟು ಮಂದಿ ನೋಡಿ ಮೆಚ್ಚಿಕೊಳ್ತಿದ್ದಾರೆ. ಇದೀಗ ಹಿರಿಯ ನಟಿ ಗಿರಿಜಾ ಲೋಕೇಶ್ ಕಾಟೇರ ಚಿತ್ರವನ್ನು ನೋಡಿ ಮನಸಾರೆ ಹೊಗಳಿದ್ದಾರೆ. ಚಿತ್ರ ನೋಡಿ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಗಿರಿಜಾ ಲೋಕೇಶ್ ಬರೆದುಕೊಂಡಿದ್ದಾರೆ. ದರ್ಶನ್ ಎಂತಹ ಮೈಕಟ್ಟು, ಎಂತಹ ಅಭಿನಯ, ಅದೆಂತಹ ಎತ್ತರ. ಕಾಟೇರ ಸಿನಿಮಾದಲ್ಲಿ ತೋರಿಸಿರುವ ಸಮಸ್ಯೆ ಇಂದು ನಿನ್ನೆಯದಲ್ಲ ಬಿಡಿ. ಇದು ಯಾವಾಗಲೂ ಇದೆ. ಅದನ್ನ ಚಿತ್ರದಲ್ಲಿ ತುಂಬಾ ಚೆನ್ನಾಗಿಯೇ ತೋರಿದ್ದಾರೆ. ಹಾಗೆ ಈ ಸಿನಿಮಾದಲ್ಲಿ ದರ್ಶನ್ ಮಾಡಿರೋ ಫೈಟ್ಸ್ ಬಲು ಇಷ್ಟ ಆಗಿದೆ ಎಂದು ಬರೆದುಕೊಂಡಿದ್ದಾರೆ. ಕಾಟೇರ ಚಿತ್ರದಲ್ಲಿ ಹಲವು ಫೈಟ್ ದೃಶ್ಯಗಳಿವೆ. ಎಲ್ಲವೂ ನನಗೆ ತುಂಬಾನೆ ಇಷ್ಟ ಆಗಿವೆ. ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ಫೈಟ್ ಸೀನ್ ಇಷ್ಟ ಆಗೋದಿಲ್ಲ. ಆದರೆ ನನಗೆ ಬಲು ಇಷ್ಟ ಆಗಿವೆ…

Read More

ಬೆಂಗಳೂರು: ದಿನದಿಂದ ದಿನಕ್ಕೆ ದಿನಸಿ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಅದರಲ್ಲೂ ಅಕ್ಕಿಯ ಬೆಲೆ ಗಗನ ಕುಸುಮವಾಗ್ತಿದೆ. ಇದನ್ನು ಮನಗಂಡ ಕೇಂದ್ರ ಸರ್ಕಾರ ಜನ ಸಾಮಾನ್ಯರಿಗೆ ರೂ.29ಕ್ಕೆ ಒಂದು ಕೆಜಿ ಅಕ್ಕಿ ವಿತರಣೆಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಭಾರತ್ ಅಕ್ಕಿ ಯೋಜನೆಗೆ ಚಾಲನೆ ನೀಡಿದ್ದಾರೆ. ಇಂದು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಬಿಎಸ್ ಯಡಿಯೂರಪ್ಪ ಭಾರತ್ ಬ್ರಾಂಡ್ ಅಕ್ಕಿ ಯೋಜನೆಗೆ ಚಾಲನೆ ನೀಡಿದ್ದಾರೆ. ಇಂದಿನಿಂದ ಭಾರತ್ ಬ್ರಾಂಡ್ ಹೆಸರಿನಲ್ಲಿ ಕೇಂದ್ರ ಸರ್ಕಾರ ಒಂದು ಕೆಜಿಗೆ ರೂ.29ರಂತೆ ಅಕ್ಕಿಯನ್ನು ವಿತರಣೆ ಮಾಡುತ್ತಿದೆ. ಇದೀಗ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಚಾಲನೆ ನೀಡಿದ ಬಳಿಕ, ಪ್ರಾಥಮಿಕವಾಗಿ ಮಂಗಳವಾರ ಬೆಂಗಳೂರಿನಲ್ಲಿ ಮಾತ್ರ ಸಿಗಲಿದ್ದು, ನಗರದ ವಿವಿಧೆಡೆ ಭಾರತ್ ಅಕ್ಕಿ ವಾಹನಗಳು ಸಂಚರಿಸಿ ಅಕ್ಕಿ ಮಾರಲಿವೆ. ಬುಧವಾರದಿಂದ ಮಂಡ್ಯದಲ್ಲಿ ಹಾಗೂ ಇನ್ನೊಂದು ವಾರದಲ್ಲಿ ಇತರೆ ಜಿಲ್ಲೆಗಳಲ್ಲಿ ಗ್ರಾಹಕರಿಗೆ ಲಭ್ಯವಾಗೋ ಸಾಧ್ಯತೆ ಇದೆ. ಬಿಗ್ ಬಾಸ್ಕೆಟ್, ಪ್ಲಿಪ್‌ಕಾರ್ಟ್, ರಿಲೈಯನ್ಸ್ ಸ್ಟೋರ್ಸ್, ಸ್ಟಾರ್ ಹೈಪರ್…

Read More

ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ನೂತನ ಸೆನೆಟರ್ ಆಗಿ ಭಾರತ ಮೂಲದ ಬ್ಯಾರಿಸ್ಟರ್ ವರುಣ್ ಘೋಷ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಭಗವದ್ಗೀತೆಯ ಮೇಲೆ ಕೈಯಿಟ್ಟು ಪ್ರಮಾಣ ವಚನ ಸ್ವೀಕರಿಸಿದ ವರುಣ್ ಘೋಷ್ ಗೆ ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಪೆನ್ನಿ ವಾಂಗ್ ಅಭಿನಂದನೆ ಸಲ್ಲಿಸಿದ್ದಾರೆ. ವರುಣ್ ಘೋಷ್ ನೂತನ ಸೆನೆಟರ್ ಆಗಿ ಅಧಿಕಾರ ಸ್ವೀಕರಿಸಿರುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಪೆನ್ನಿ ವಾಂಗ್, ಪಶ್ಚಿಮ ಆಸ್ಟ್ರೇಲಿಯಾದ ನಮ್ಮ ಹೊಸ ಸೆನೆಟರ್ ವರುಣ್ ಘೋಷ್ ಅವರಿಗೆ ಸ್ವಾಗತ. ಸೆನೆಟರ್ ಘೋಷ್ ಅವರು ಭಗವದ್ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಆಸ್ಟ್ರೇಲಿಯಾದ ಸೆನೆಟರ್ ಎಂದಿದ್ದಾರೆ. ಲೇಬರ್ ಪಾರ್ಟಿಯು ವೆಸ್ಟರ್ನ್ ಆಸ್ಟ್ರೇಲಿಯವನ್ನು ಪ್ರತಿನಿಧಿಸಲು ಘೋಷ್ ಅವರನ್ನು ಆಯ್ಕೆ ಮಾಡಿದೆ. ಇತ್ತೀಚೆಗೆ ಘೋಷ್, ಫ್ರಾನ್ಸಿಸ್ ಬರ್ಟ್ ಚೇಂಬರ್ಸ್‌ನಲ್ಲಿ ಬ್ಯಾರಿಸ್ಟರ್, ಪ್ರಸ್ತುತ ಸೆನೆಟರ್ ಪ್ಯಾಟ್ರಿಕ್ ಡಾಡ್ಸನ್ ಅವರ ಸ್ಥಾನಕ್ಕೆ ಆಯ್ಕೆಯಾದರು. ಸೆನೆಟರ್ ಆಗಿ ಅಧಿಕಾರ ಸ್ವೀಕರಿಸಿರುವ ವರುಣ್ ಘೋಷ್ ಪರ್ತ್‌ನಲ್ಲಿ ವೃತ್ತಿಯಲ್ಲಿ ವಕೀಲರಾಗಿದ್ದಾರೆ. ಪಶ್ಚಿಮ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದಿಂದ ಕಲೆ ಮತ್ತು ಕಾನೂನಿನಲ್ಲಿ…

Read More

ಐಫೋನ್ ತಗೋಬೇಕು ಅನ್ನೋದು ಸಾಕಷ್ಟು ಮಂದಿಯ ಕನಸಾಗಿರುತ್ತೆ,. ಆದರೆ ದುಭಾರಿ ಅನ್ನೋ ಕಾರಣಕ್ಕೆ ಅದೆಷ್ಟೋ ಮಂದಿ ತಮ್ಮ ಆಸೆಯನ್ನ ಆಸೆಯಾಗಿಯೇ ಉಳಿಸಿಕೊಂಡಿದ್ದಾರೆ.  ಆದರೆ ಐಫೋನ್ ತಗೋಬೇಕು ಅಂತ ಕನಸು ಕಾಣ್ತಿರೋ ಸಾಕಷ್ಟು ಮಂದಿಗೆ ಇದೀಗ ಫ್ಲಿಪ್ ಕಾರ್ಟ್ ಭರ್ಜರಿ ಆಫರ್ ನೀಡಿದೆ. ಈ ಮೂಲಕ ನಿಮ್ಮ ಕನಸನ್ನ ನನಸಾಗಿಸಿಕೊಳ್ಳಬಹುದಾಗಿದೆ. ಆ್ಯಪಲ್ ತನ್ನ ಬಹುನಿರೀಕ್ಷಿತ ‘ಐಫೋನ್‌ 14 ‘ ಸರಣಿಯನ್ನು ಬಿಡುಗಡೆ ಮಾಡಿ ಕೆಲ ತಿಂಗಳೇ ಕಳೆದಿವೆ. ಸದ್ಯಕ್ಕೆ ಎಲ್ಲೆಡೆ ಐಫೋನ್‌ 14 ಮೇನಿಯಾ ಇದ್ದು ಮತ್ತೊಂದೆಡೆ ಐಫೋನ್ 14 ಬಿಡುಗಡೆ ಆದ ಬೆನ್ನಲ್ಲೇ ಐಫೋನ್‌ 13 ತನ್ನ ಬೆಲೆಯಲ್ಲಿ ನಿಧಾನವಾಗಿ ಇಳಿಕೆ ಕಾಣುತ್ತಿದೆ.ಅದರಲ್ಲೂ ಫ್ಲಿಪ್‌ಕಾರ್ಟ್‌ನಲ್ಲಿ ಈಗ ಐಫೋನ್‌ 13 ಫೋನ್‌ ಮೇಲೆ ಬಂಪರ್‌ ಆಫರ್‌ ಇದ್ದು, ಅತ್ಯಂತ ಕಡಿಮೆ ಬೆಲೆಗೆ ನೀವು ಈ ಐಫೋನ್‌ ಸಿರೀಸ್‌ ಅನ್ನು ಕೊಳ್ಳಬಹುದಾಗಿದೆ. 128GB ಸ್ಟೋರೇಜ್‌ ಹೊಂದಿರುವ ಐಫೋನ್ 13 ಫೋನ್‌ ಶಾಪ್ ನಲ್ಲಿ ಖರೀದಿಸಿದ್ರೆ 59,900 ರೂ ಇದೆ. ಅದರೆ ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ 26,147…

Read More

ಸಿದ್ದಾರ್ಥ್ ಆನಂದ್ ನಿರ್ದೇಶನದ ದೀಪಿಕಾ ಪಡುಕೋಣೆ ಹಾಗೂ ಹೃತಿಕ್ ರೋಷನ್ ಕಾಂಬಿನೇಷನ್ ನ ಫೈಟರ್ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ. ಈ ಮಧ್ಯೆ ಚಿತ್ರದಲ್ಲಿರುವ ಚುಂಬನ ದೃಶ್ಯ ಕುರಿತಂತೆ ವಾಯುಸೇನಾ ಅಧಿಕಾರಿಯೊಬ್ಬರು ಗರಂ ಆಗಿದ್ದಾರೆ. ವಾಯುಸೇನೆ ಸಮವಸ್ತ್ರ ಧರಿಸಿಕೊಂಡು ಹೃತಿಕ್ ಮತ್ತು ದೀಪಿಕಾ ಚುಂಬಿಸುವ ದೃಶ್ಯವು ವಸ್ತ್ರ ಸಂಹಿತೆ ನೀತಿಯನ್ನು ಉಲ್ಲಂಘಿಸಿದ್ದು ಇದರಿಂದಾಗಿ ವಾಯುಸೇನೆಗೆ ಮುಜುಗರ ತರಿಸಿದೆ ಎಂದು ಅಧಿಕಾರಿ ಅಸ್ಸಾಮಿನ ಸೌಮ್ಯ ದೀಪ್ ದಾಸ್ ಎನ್ನುವವರು ದೂರು ನೀಡಿದ್ದಾರೆ. ಫೈಟರ್ ಸಿನಿಮಾ ಒಂದಿಲ್ಲೊಂದು ಕಾರಣಕ್ಕೆ ವಿವಾದ ಎದುರಿಸುತ್ತಲೆ ಇದೆ. ಈ ಹಿಂದೆ ಸೆನ್ಸಾರ್ ಮಂಡಳಿಯು ಚಿತ್ರದ ಎರಡು ದೃಶ್ಯಗಳನ್ನು ಕತ್ತರಿಸುವಂತೆ ಸೂಚಿಸಲಾಗಿತ್ತು. ಅದರಲ್ಲೂ ದೀಪಿಕಾ ಪಡುಕೋಣೆ ಬಿಕಿನಿ ಧರಿಸಿದ್ದ ದೃಶ್ಯಕ್ಕೆ ಕತ್ತರಿ ಹಾಕಲಾಗಿತ್ತು. ಇದೀಗ ಚಿತ್ರಕ್ಕೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಈ ಹಿಂದೆಯೂ ಕೂಡ ಶಾರುಖ್ ಖಾನ್ ಜೊತೆ ಕಾಣಿಸಿಕೊಂಡಿದ್ದ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಧರಿಸಿದ್ದ ಕೇಸರಿ ಬಿಕಿನಿ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಇದೀಗ ಮತ್ತೊಮ್ಮೆ ಬಿಕಿನಿ ಕಾರಣಕ್ಕೆ…

Read More