ಸಂಗೀತಾ ಮಾಂತ್ರಿಕ ಎ.ಆರ್.ರೆಹಮಾನ್ ಪತ್ನಿಸೈರಾ ಭಾನು ಅವರಿಂದ ಡಿವೋರ್ಸ್ ಪಡೆದುಕೊಂಡಿದ್ದಾರೆ. ಈ ಬಗ್ಗೆ ಇಬ್ಬರು ಅಧಿಕೃತ ಹೇಳಿಕೆ ನೀಡಿದ್ದಾರೆ. ಈ ಮಧ್ಯೆ ರೆಹಮಾನ್ ಮಲಯಾಳಂನ ‘ಆಡು ಜೀವಿತಂ’ ಸಿನಿಮಾದ ಹಿನ್ನೆಲೆ ಸಂಗೀತಕ್ಕಾಗಿ ಪ್ರತಿಷ್ಠಿತ ಹಾಲಿವುಡ್ ಮ್ಯೂಸಿಕ್ ಇನ್ ಮೀಡಿಯಾ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಎಆರ್ ರೆಹಮಾನ್ ವಿದೇಶಿ ಭಾಷಾ ಚಲನಚಿತ್ರಗಳ ವಿಭಾಗದಲ್ಲಿ ಅತ್ಯುತ್ತಮ ಹಿನ್ನೆಲೆ ಸಂಗೀತ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ನಿರ್ದೇಶಕ ಬ್ಲೆಸ್ಸಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ‘ಆಡು ಜೀವಿತಂ’ ಸಿನಿಮಾ ಅತ್ಯುತ್ತಮ ಹಾಡು ಮತ್ತು ಅತ್ಯುತ್ತಮ ಹಿನ್ನೆಲೆ ಸಂಗೀತಕ್ಕಾಗಿ ಎರಡು ವಿಭಾಗಗಳು ನಾಮೀನೇಟ್ ಆಗಿತ್ತು. ಲಾಸ್ ಏಂಜಲೀಸ್ ನಲ್ಲಿ ನಡೆದ ಸಮಾರಂಭದಲ್ಲಿ ಅತ್ಯುತ್ತಮ ವಿದೇಶಿ ಚಿತ್ರ ವಿಭಾಗದಲ್ಲಿ ಅತ್ಯುತ್ತಮ ಸಂಗೀತ ಸಂಯೋಜನೆ ಪ್ರಶಸ್ತಿಯನ್ನು ಎ.ಆರ್. ರೆಹಮಾನ್ ಅವರಿಗೆ ನೀಡಲಾಗಿದೆ. ಎ.ಆರ್. ರೆಹಮಾನ್ ಪರವಾಗಿ ಆಡು ಜೀವಿತಂ ಚಿತ್ರದ ನಿರ್ದೇಶಕರು ಈ ಪ್ರಶಸ್ತಿ ಸ್ವೀಕರಿಸಿದರು. ಚಿತ್ರದ ನಾಯಕ ನಟ ಪೃಥ್ವಿರಾಜ್ ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಆಡುಜೀವಿತಂ – ದಿ…
Author: Author AIN
ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ರಕ್ಷಣಾ ಕಾರ್ಯಕರ್ತನ ಸಹಿತ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದು ಇತರ 10 ಮಂದಿ ನಾಪತ್ತೆಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇಸ್ರೇಲ್ ಟ್ಯಾಂಕ್‍ಗಳು ಕಾರ್ಯಾಚರಣೆ ತೀವ್ರಗೊಳಿಸಿದ್ದು ಹಲವು ಮನೆಗಳನ್ನು ಧ್ವಂಸಗೊಳಿಸಿವೆ. ಘಟನೆಯಲ್ಲಿ ಕನಿಷ್ಠ 10 ಮಂದಿ ನಾಪತ್ತೆಯಾಗಿದ್ದಾರೆ. ಜಬಲಿಯಾ ಪ್ರದೇಶದಲ್ಲಿ ಮನೆಯೊಂದರ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ 12 ಮಂದಿ ಸಾವನ್ನಪ್ಪಿದ್ದರೆ, ಮನೆಯ ಸಮೀಪದಲ್ಲಿ ಟ್ಯಾಂಕ್ ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಮೃತಪಟ್ಟಿದ್ದಾನೆ. ಗಾಝಾ ನಗರದ ಹೊರವಲಯದಲ್ಲಿರುವ ಸಬ್ರಾದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಫೆಲೆಸ್ತೀನ್‍ನ ನಾಗರಿಕ ತುರ್ತು ಸೇವಾ ತಂಡವನ್ನು ಗುರಿಯಾಗಿಸಿ ನಡೆದ ಕ್ಷಿಪಣಿ ದಾಳಿಯಲ್ಲಿ ಓರ್ವ ಸಿಬ್ಬಂದಿ ಮೃತಪಟ್ಟಿದ್ದು ಇತರ ಮೂವರು ಗಾಯಗೊಂಡಿದ್ದಾರೆ. ದಕ್ಷಿಣ ಗಾಝಾ ಪಟ್ಟಿಯ ರಫಾ ನಗರದ ಪೂರ್ವ ಭಾಗದಲ್ಲಿ ಇಸ್ರೇಲ್‍ನ ವೈಮಾನಿಕ ದಾಳಿಯಲ್ಲಿ ಒಬ್ಬ ಸಾವನ್ನಪ್ಪಿದ್ದು ಇತರ ಮೂವರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಜಬಲಿಯಾ, ಬೈತ್ ಲಾಹಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಇಸ್ರೇಲ್ ಸೇನೆ ಸುಮಾರು…
ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಇಂದು ಹೈಕೋರ್ಟ್ನಲ್ಲಿ ನಡೆಯಿತು. ವಾದ, ಪ್ರತಿವಾದದ ಬಳಿಕ ಜಾಮೀನು ಅರ್ಜಿ ವಿಚಾರಣೆಯನ್ನು ನವೆಂಬರ್ 26ಕ್ಕೆ ಮುಂದೂಡಲಾಯ್ತು. ವಿಚಾರಣೆ ವೇಳೆ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಅವರು ದರ್ಶನ್ಗೆ ಮಧ್ಯಂತರ ಜಾಮೀನಿನ ನೀಡಿದ ವೇಳೆ ಸೂಚಿಸಲಾಗಿದ್ದ ಕೆಲ ನಿಯಮಗಳನ್ನು ಪಾಲಿಸಿಲ್ಲವ ಎಂದು ವಾದ ಮಂಡಿಸಿದರು. ದರ್ಶನ್ ಪರ ವಕೀಲರು ಹೊಸ ವೈದ್ಯಕೀಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಅರ್ಹತೆ ಮೇಲೆ ಮುಂದಿನ ದಿನಾಂಕದಂದು ವಿಚಾರಣೆ ನಡೆಸಬಹುದು ಎಂದು ನ್ಯಾಯಮೂರ್ತಿಗಳು ಸೂಚಿಸಿದರು. ಇದೇ ವೇಳೆ ವೈದ್ಯಕೀಯ ವರದಿಯ ಪ್ರತಿ ತಮಗೆ ನೀಡಿಲ್ಲವೆಂದು ಎಸ್ಪಿಪಿ ಆಕ್ಷೇಪಣೆ ಸಲ್ಲಿಸಿದರು. 6 ವಾರಗಳ ಅವಧಿಗೆ ಷರತ್ತಿನ ಮೇಲೆ ಮಧ್ಯಂತರ ಜಾಮೀನು ನೀಡಲಾಗಿದೆ, ಆದರೆ ಸರ್ಜರಿಯ ದಿನಾಂಕ ತಿಳಿಸಿಲ್ಲವೆಂದು ಎಸ್ಪಿಪಿ ಪ್ರಸನ್ನಕುಮಾರ್ ವಾದ ಮಂಡಿಸಿದರು. ಅದೇ ವೇಳೆಗೆ ದರ್ಶನ್ ಪರ ವಕೀಲ ಸಿವಿ ನಾಗೇಶ್ ಅವರು ಮತ್ತೊಂದು ವೈದ್ಯಕೀಯ ವರದಿಯನ್ನು ಹೈಕೋರ್ಟ್ಗೆ ಸಲ್ಲಿಕೆ ಮಾಡಿದರು. ಅದೇ ವೈದ್ಯಕೀಯ…
ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಅವರು ಪತ್ನಿ ಸೈರಾ ಭಾನು ಅವರಿಗೆ ವಿಚ್ಚೇಧನ ಘೋಷಿಸಿದ್ದಾರೆ. ಈ ಮೂಲಕ 29 ವರ್ಷಗಳ ಸಂಸಾರಿಕ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ರೆಹಮಾನ್ ವಿಚ್ಚೇಧನದ ಸುದ್ದಿ ಸದ್ದು ಮಾಡುತ್ತಿದ್ದಂತೆ ಅವರದ್ದೇ ತಂಡದಲ್ಲಿದ್ದ ಮೋಹಿನಿ ಡೇ ಕೂಡ ತಮ್ಮ ಪತಿಗೆ ವಿಚ್ಚೇದನ ನೀಡಿದ್ದು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದರು. ಕೆಲವೇ ಗಂಟೆಗಳ ಅಂತರದಲ್ಲಿ ಈ ಎರಡೂ ಡಿವೋರ್ಸ್ ಘೋಷಣೆ ಆಗಿದ್ದು, ಅನೇಕರು ಈ ಎರಡು ಪ್ರಕರಣಗಳ ಮಧ್ಯೆ ಲಿಂಕ್ ಮಾಡಲು ಶುರು ಮಾಡಿದ್ದಾರೆ. ಈ ಬಗ್ಗೆ ಸೈರಾ ಬಾನು ವಕೀಲರು ಸ್ಪಷ್ಟನೆ ನೀಡಿದ್ದು, ಎರಡೂ ಪ್ರಕರಣಗಳ ಮಧ್ಯೆ ಯಾವುದೇ ಲಿಂಕ್ ಇಲ್ಲ ಎಂದಿದ್ದಾರೆ. ಸೈರಾ ಬಾನು ರೆಹಮಾನ್ ರಿಂದ ದೂರವಾಗುತ್ತಿರುವ ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಮೋಹಿನಿ ಡೇ ಕೂಡ ತಮ್ಮ ಪತಿ ಮಾರ್ಕ್ ಅವರಿಂದ ಬೇರೆ ಆಗುತ್ತಿರುವುದಾಗಿ ಹೇಳಿದ್ದಾರೆ. ಇದನ್ನು ಕೆಲವರು ಲಿಂಕ್ ಮಾಡಿದ್ದಾರೆ. ಇಬ್ಬರ ಮಧ್ಯೆ ಏನೋ ನಡೆದಿರಬಹುದು ಇದೇ ಕಾರಣಕ್ಕೆ ಎರಡು…
ಕಳೆದ ಎರಡು ದಿನಗಳಿಂದ ಆಸ್ಕರ್ ಪ್ರಶಸ್ತಿ ವಿಜೇತ ಹಾಗೂ ಸಂಗೀತ ಸಂಯೋಜಕ, ಗಾಯಕ ಎಆರ್ ರೆಹಮಾನ್ ಸಖತ್ ಸುದ್ದಿಯಲ್ಲಿದ್ದಾರೆ. 29 ವರ್ಷಗಳ ವೈವಾಹಿಕ ಜೀವಕ್ಕೆ ಗುಡ್ ಬಾಯ್ ಹೇಳಿರುವ ರೆಹಮಾನ್ ಪತ್ನಿ ಸೈರಾ ಬಾನುಗೆ ವಿಚ್ಚೇದನ ಘೋಷಿಸಿದ್ದಾರೆ. 57ನೇ ವಯಸ್ಸಿಗೆ ರೆಹಮಾನ್ ವಿಚ್ಚೇಧನ ಘೋಷಿಸಿರೋದು ಹಲವರಿಗೆ ಶಾಕ್ ಆಗಿದೆ. ಏಕಾಏಕಿ ಇಬ್ಬರು ದೂರ ದೂರವಾಗ್ತಿರೋದಕ್ಕೆ ದಂಪತಿ ಕಾರಣ ತಿಳಿಸಿಲ್ಲ. ಆದರೆ ಇದು ಹಲವರಿಗೆ ಶಾಕ್ ನೀಡಿದೆ. ಅಂದ ಹಾಗೆ ಇಂದು ಸಂಗೀತ ಕ್ಷೇತ್ರದಲ್ಲಿ ಭಾರಿ ಡಿಮ್ಯಾಂಡ್ ಕ್ರಿಯೇಟ್ ಮಾಡಿರುವ ರೆಹಮಾನ್ ಈ ಹಿಂದೆ ಹಿಂದೂವಾಗಿದ್ದರು. ಬಳಿಕ ಮುಸ್ಲಿಂ ಆಗಿ ಬದಲಾದರು. ಇದೇ ಕಾರಣಕ್ಕೆ ರೆಹಮಾನ್ ಮುಸ್ಲಿಂ ಯುವತಿಯನ್ನೇ ಮದುವೆಯಾದರು. ಮುಸ್ಲಿಂ ಧರ್ಮಕ್ಕೆ ಎಆರ್ ರೆಹಮಾನ್ ಮಂತಾತಗೊಂಡು ಹಲವು ವರ್ಷಗಳೇ ಕಳೆದು ಹೋಗಿದೆ. ದಿಲೀಪ್ ಕುಮಾರ್ ಅಲಿಯಾಸ್ ರೆಹಮಾನ್ ಹಿಂದೂ ಎಆರ್ ರೆಹಮಾನ್ ಅವರ ತಂದೆ ಆರ್ ಕೆ ಶೇಖರ್ ಮಲಯಾಳಂ ಚಿತ್ರಗಳಿಗೆ ಸಂಗೀತ ನೀಡುತ್ತಿದ್ದರು. ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ರೆಹಮಾನ್ ಬಾಲ್ಯವು…
ಪಾಕಿಸ್ತಾನದ ವಾಯವ್ಯ ಪ್ರಾಂತ್ಯದ ಚೆಕ್‍ಪೋಸ್ಟ್ ಬಳಿ ದುಷ್ಕರ್ಮಿಗಳು ಆತ್ಮಹತ್ಯಾ ಬಾಂಬ್ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ 11 ಯೋಧರು ಸೇರಿದಂತೆ 12 ಮಂದಿ ಮೃತಪಟ್ಟಿದ್ದು ಇತರ 7 ಮಂದಿ ಗಾಯಗೊಂಡಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕ್ಷುಬ್ಧ ಖೈಬರ್ ಪಖ್ತೂಂಕ್ವಾ ಪ್ರಾಂತದ ಬನ್ನು ಜಿಲ್ಲೆಯಲ್ಲಿ ಆತ್ಮಹತ್ಯಾ ಬಾಂಬರ್ ಭದ್ರತಾ ಚೆಕ್‍ಪೋಸ್ಟ್‍ಗೆ ಸ್ಫೋಟಕ ತುಂಬಿದ್ದ ವಾಹನವನ್ನು ಅಪ್ಪಳಿಸಿದಾಗ ನಡೆದ ಸ್ಫೋಟದಲ್ಲಿ ದಾಳಿಕೋರ ಹಾಗೂ 11 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು 7 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಭಯೋತ್ಪಾದಕ ಸಂಘಟನೆ ಪಾಕಿಸ್ತಾನ್ ತಾಲಿಬಾನ್‍ನಿಂದ ಪ್ರತ್ಯೇಕಗೊಂಡಿರುವ ಹಫೀಝ್ ಗುಲ್ ಬಹಾದೂರ್ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಂಡಿರುವುದಾಗಿ ವರದಿಯಾಗಿದೆ.
ಇತ್ತೀಚೆಗೆ ಸಿನಿಮಾ ವಿಮರ್ಷಕರ ಸಂಖ್ಯೆ ಹೆಚ್ಚುತ್ತಿದೆ. ಚಿತ್ರ ನೋಡಿ ಬಂದು ಸೋಷಿಯಲ್ ಮೀಡಿಯಾದಲ್ಲಿ ವಿಮರ್ಷೆ ತಿಳಿಸುತ್ತಾರೆ. ಈ ವಿಮರ್ಷೆ ನೋಡಿ ಸಾಕಷ್ಟು ಜನ ಥಿಯೇಟರ್ ಗೆ ಎಂಟ್ರಿಕೊಡ್ತಾರೆ. ಆದರಂತೆ ಇತ್ತೀಚೆಗೆ ರಿಲೀಸ್ ಆದ ‘ಕಂಗುವ’ ಹಾಗೂ ‘ವೆಟ್ಟೈಯಾನ್’ ಸಿನಿಮಾಗಳಿಗೆ ಕೆಟ್ಟ ವಿಮರ್ಶೆ ಸಿಕ್ಕವು. ‘ಕಂಗುವ’ ಸಿನಿಮಾ ನೋಡಿ ಬಂದ ಎಲ್ಲರೂ ಸಾಕಷ್ಟು ಟೀಕೆ ವ್ಯಕ್ತಪಡಿಸಿದರು. ಸಿನಿಮಾ ನೋಡುತ್ತೇನೆ ಎಂದು ಹೊರಡಬೇಕು ಎಂದುಕೊಂಡಿದ್ದವರಿಗೆ ಈ ವಿಮರ್ಶೆಯಿಂದ ಹಿನ್ನಡೆ ಆಯಿತು. ಇದನ್ನು ಗಮನದಲ್ಲಿ ಇಟ್ಟುಕೊಂಡು ತಮಿಳುನಾಡು ನಿರ್ಮಾಪಕರ ಸಂಘ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ವಿಮರ್ಶೆ ಎಂದರೆ ಸಿನಿಮಾ ಬಗ್ಗೆ ಸಂಪೂರ್ಣ ವಿವರ ಇರಬೇಕು. ಆದರೆ, ಇಲ್ಲಿ ಆ ರೀತಿ ಆಗುವುದಿಲ್ಲ. ಸಿನಿಮಾ ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎಂದಷ್ಟೇ ಹೇಳಲಾಗುತ್ತದೆ. ಈ ರೀತಿಯ ವಿಮರ್ಶೆಗಳಿಂದಲೇ ‘ಕಂಗುವ’ ಹಾಗೂ ‘ವೆಟ್ಟೈಯಾನ್’ ಸಿನಿಮಾ ಹಿನ್ನಡೆ ಅನುಭವಿಸಿತು ಎಂದು ಕೆಲವರು ಅಭಿಪ್ರಾಯ ಹೊರಹಾಕಿದ್ದಾರೆ. ಈ ಕಾರಣಕ್ಕೆ ತಮಿಳು ನಿರ್ಮಾಪಕರ ಸಂಘದವರು ಥಿಯೇಟರ್ ಮುಂಭಾಗದಲ್ಲಿ ಸಿನಿಮಾ ವಿಮರ್ಶೆ ಮಾಡೋದನ್ನು ಬ್ಯಾನ್ ಮಾಡಿದ್ದಾರೆ.…
ಬಹುನಿರೀಕ್ಷಿತ ಪುಷ್ಪ 2 ಬಿಡುಗಡೆಗೆ ಇನ್ನೆನ್ನೂ ಕೆಲವೇ ಕೆಲವು ದಿನಗಳು ಮಾತ್ರವೇ ಬಾಕಿ ಇದೆ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ್ ನಟನೆಯ ಈ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ಅದ್ದೂರಿಯಾಗಿ ತೆರೆಗೆ ತರ್ತಿದೆ. ಸಿನಿಮಾದ ಪ್ರಚಾರಕ್ಕೆಂದೇ ಸುಮಾರು 50 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಸಿನಿಮಾದ ಒಟ್ಟು ಬಜೆಟ್ 500 ಕೋಟಿಗೂ ಹೆಚ್ಚಾಗಿದೆ. ಸಿನಿಮಾಕ್ಕೆ ಹೂಡಿರುವ ಬಂಡವಾಳ ವಾಪಸ್ ಪಡೆಯಲು ಟಿಕೆಟ್ ದರಗಳನ್ನು ಹೆಚ್ಚಿಸಲು ಚಿತ್ರತಂಡ ಮುಂದಾಗಿದೆ. ಆದರೆ ಇದಕ್ಕೆ ಅಲ್ಲು ಅರ್ಜುನ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಸಿನಿಮಾ ಟಿಕೆಟ್ ದರಗಳ ಮೇಲೆ ನಿಯಂತ್ರಣ ಹೇರಲಾಗಿದೆ. ಒಂದೊಮ್ಮೆ ದೊಡ್ಡ ಬಜೆಟ್ ಸಿನಿಮಾಗಳು ಬಿಡುಗಡೆ ಆಗುವುದಿದ್ದರೆ ಸರ್ಕಾರದಿಂದ ಅನುಮತಿ ಪಡೆದ ಬಳಿಕವಷ್ಟೆ ಟಿಕೆಟ್ ದರಗಳನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಟಿಕೆಟ್ ದರ ಎಷ್ಟು ಹೆಚ್ಚಿಸಬೇಕು, ಎಷ್ಟು ದಿನಗಳ ಕಾಲ ಟಿಕೆಟ್ ದರ ಹೆಚ್ಚಿಗೆ ಇರಬೇಕು ಎಂಬಿತ್ಯಾದಿಯನ್ನು ಸರ್ಕಾರವೇ ಸೂಚಿಸುತ್ತದೆ. ಇದೀಗ ‘ಪುಷ್ಪ 2’ ಸಿನಿಮಾದ ಟಿಕೆಟ್ ದರ ಹೆಚ್ಚಳ…
ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಆಟ ಜೋರಾಗುತ್ತಿದೆ. 50ನೇ ದಿನಕ್ಕೆ ವೈಲ್ಡ್ ಕಾರ್ಡ್ ಮೂಲಕ ಶೋಭಾ ಶೆಟ್ಟಿ ಹಾಗೂ ರಜತ್ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ವೇದಿಕೆಗೆ ಕಾಲಿಡ್ತಿದ್ದಂಗೆ ಇಬ್ಬರು ಸಾಕಷ್ಟು ಮಾತನಾಡಿದ್ದರು. ಅಲ್ಲದೆ ಶೋಭಾ ಶೆಟ್ಟಿ ಜೋರು ಧ್ವನಿಯಲ್ಲಿ ಕಿರುಚಾಡುತ್ತಾ ಎಲ್ಲರಿಗೂ ನಡುಕ ಹುಟ್ಟಿಸಲು ಪ್ರಯತ್ನಿಸಿದ್ದರು. ಆದರೆ ಮೊದಲ ಆಟದಲ್ಲೇ ಶೋಭಾ ಶೆಟ್ಟಿಗೆ ಹಿನ್ನಡೆ ಆಗಿದೆ ಇದರಿಂದ ಶೋಭಾ ಕಣ್ಣೀರು ಹಾಕಿದ್ದಾರೆ. ಇಂದಿನ ಸಂಚಿಕೆಯಲ್ಲಿನ ಪ್ರೋಮೋವೊಂದನ್ನು ವಾಹಿನಿ ಹಂಚಿಕೊಂಡಿದೆ. ಅದರಲ್ಲಿ ಶೋಭಾ ಮತ್ತು ಭವ್ಯಾ ಗೌಡ ನೇತೃತ್ವದಲ್ಲಿ ಎರಡು ಟೀಮ್‌ಗಳಾಗಿ ವಿಂಗಡಿಸಿದ್ದಾರೆ. ಎದುರಾಳಿ ತಂಡ ಭವ್ಯಾಗಿಂತ ವೇಗವಾಗಿ ಟಾಸ್ಕ್ ಪೂರ್ಣಗೊಳಿಸಬೇಕು ಎಂಬ ಆತುರದಲ್ಲಿ ಶೋಭಾ ಆಟ ಆಡುವಾಗ ಎತ್ತರದಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಇದನ್ನು ನೋಡಿ ಸಹಸ್ಪರ್ಧಿಗಳು ಒಂದು ಕ್ಷಣ ಶಾಕ್ ಆಗಿದ್ದಾರೆ. ಎತ್ತರದಿಂದ ಬಿದ್ದರೂ ಕೂಡ ಅವರು ಆಟ ನಿಲ್ಲಿಸಲಿಲ್ಲ. ದೇವರ ಸ್ಮರಣೆ ಮಾಡುತ್ತಾ ಆಟ ಮುಂದುವರಿಸಿದರು. ಹಾಗಿದ್ದರೂ ಕೂಡ ಅವರಿಗೆ ಗೆಲವು ಸಿಗಲಿಲ್ಲ. ಅಂತಿಮವಾಗಿ…
ಸಂಭಾವ್ಯ ವಾಯುದಾಳಿಯ ಮಾಹಿತಿ ಪಡೆದ ನಂತರ ಉಕ್ರೇನ್ ರಾಜಧಾನಿ ಕೀವ್‍ನಲ್ಲಿನ ಅಮೆರಿಕದ ರಾಯಭಾರ ಕಚೇರಿಯನ್ನು ಮುಚ್ಚಲಾಗಿದೆ ಎಂದು ವರದಿಯಾಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ರಾಯಭಾರ ಕಚೇರಿಯನ್ನು ಮುಚ್ಚಲಾಗುವುದು ಮತ್ತು ರಾಯಭಾರ ಕಚೇರಿಯ ಸಿಬ್ಬಂದಿಗಳಿಗೆ ಸುರಕ್ಷಿತ ಪ್ರದೇಶಕ್ಕೆ ತೆರಳಲು ಸೂಚಿಸಲಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಕಾನ್ಸುಲರ್ ವ್ಯವಹಾರಗಳ ವಿಭಾಗ ಹೇಳಿದೆ. ವಾಯುದಾಳಿಯ ಎಚ್ಚರಿಕೆ ಕೇಳಿಬಂದರೆ ತಕ್ಷಣ ಸುರಕ್ಷಿತ ಸ್ಥಳಕ್ಕೆ ತೆರಳಲು ಸಿದ್ಧವಾಗಿರುವಂತೆ ಅಮೆರಿಕದ ಪ್ರಜೆಗಳಿಗೆ ರಾಯಭಾರ ಕಚೇರಿ ಸೂಚಿಸಿದೆ. ಅಮೆರಿಕ ಒದಗಿಸಿದ ಎಟಿಎಸಿಎಂಎಸ್ ಕ್ಷಿಪಣಿಗಳನ್ನು ಬಳಸಿ ಮಂಗಳವಾರ ಉಕ್ರೇನ್ ರಶ್ಯದ ವಿರುದ್ಧ ದಾಳಿ ನಡೆಸಿದ ಬೆನ್ನಲ್ಲೇ ಅಮೆರಿಕ ರಾಯಭಾರ ಕಚೇರಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.