ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದಾರೆ. ವಿಜಯ್ ರಾಜಕೀಯ ಎಂಟ್ರಿಗೆ ಸೂಪರ್ ಸ್ಟಾರ್ ರಜನಿಕಾಂತ್ ಶುಭ ಹಾರೈಸಿದ್ದಾರೆ. ವಿಜಯ್ ದಳಪತಿ ಸಾಕಷ್ಟು ಸಮಯದಿಂದ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿ ಹರಡಿತ್ತು. ಅಲ್ಲದೆ ವಿಜಯ್ ರಾಜಕೀಯಕ್ಕೆ ಬರಬೇಕು ಅನ್ನೋದು ಕೋಟ್ಯಾಂತರ ಅಭಿಮಾನಿಗಳ ಆಸೆಯಾಗಿದ್ದು ಇದೀಗ ‘ತಮಿಳಿಗ ವೆಟ್ರಿ ಕಳಗಂ’ (TVK) ಎಂಬ ಪಕ್ಷ ಸ್ಥಾಪಿಸಿ ವಿಜಯ್ ರಾಜಕೀಯ ಅಖಾಡಕ್ಕೆ ದುಮುಕಿದ್ದಾರೆ. ಸದ್ಯ ವಿಜಯ್ ದಳಪತಿ ಗೋಟ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದು ವಿಜಯ್ ನಟನೆಯ 69ನೇ ಚಿತ್ರವಾಗಿದ್ದು ಇದನ್ನು ವೆಂಕಟ್ ಪ್ರಭು ನಿರ್ದೇಶನ ಮಾಡುತ್ತಿದ್ದಾರೆ. ತಾನು ಮುಖ್ಯಮಂತ್ರಿಯಾದರೆ ಸಿನಿಮಾಗಳಿಂದ ದೂರವಿರುವುದಾಗಿ ಈ ಹಿಂದೆ ವಿಜಯ್ ಹೇಳಿದರು. ಅಂತೆಯೇ ಸದ್ಯ ರಾಜಕೀಯಕ್ಕೆ ಎಂಟ್ರಿಕೊಟ್ಟಿರುವ ವಿಜಯ್ ಚಿತ್ರರಂಗದಿಂದ ದೂರವಾಗ್ತಾರಾ ಎಂದು ಕಾದು ನೋಡಬೇಕಿದೆ.
Author: Author AIN
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಸಿನಿಮಾ ರಿಲೀಸ್ ಆಗಿ ತಿಂಗಳು ಕಳೆದಿದ್ರು ಇಂದಿಗೂ ಸಾಕಷ್ಟು ಕ್ರೇಜ್ ಹುಟ್ಟಿಹಾಕಿದೆ. ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿರುವ ಕಾಟೇರನನ್ನು ಇಂದಿಗೂ ಸಾಕಷ್ಟು ಮಂದಿ ನೋಡಿ ಮೆಚ್ಚಿಕೊಳ್ತಿದ್ದಾರೆ. ಇದೀಗ ಹಿರಿಯ ನಟಿ ಗಿರಿಜಾ ಲೋಕೇಶ್ ಕಾಟೇರ ಚಿತ್ರವನ್ನು ನೋಡಿ ಮನಸಾರೆ ಹೊಗಳಿದ್ದಾರೆ. ಚಿತ್ರ ನೋಡಿ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಗಿರಿಜಾ ಲೋಕೇಶ್ ಬರೆದುಕೊಂಡಿದ್ದಾರೆ. ದರ್ಶನ್ ಎಂತಹ ಮೈಕಟ್ಟು, ಎಂತಹ ಅಭಿನಯ, ಅದೆಂತಹ ಎತ್ತರ. ಕಾಟೇರ ಸಿನಿಮಾದಲ್ಲಿ ತೋರಿಸಿರುವ ಸಮಸ್ಯೆ ಇಂದು ನಿನ್ನೆಯದಲ್ಲ ಬಿಡಿ. ಇದು ಯಾವಾಗಲೂ ಇದೆ. ಅದನ್ನ ಚಿತ್ರದಲ್ಲಿ ತುಂಬಾ ಚೆನ್ನಾಗಿಯೇ ತೋರಿದ್ದಾರೆ. ಹಾಗೆ ಈ ಸಿನಿಮಾದಲ್ಲಿ ದರ್ಶನ್ ಮಾಡಿರೋ ಫೈಟ್ಸ್ ಬಲು ಇಷ್ಟ ಆಗಿದೆ ಎಂದು ಬರೆದುಕೊಂಡಿದ್ದಾರೆ. ಕಾಟೇರ ಚಿತ್ರದಲ್ಲಿ ಹಲವು ಫೈಟ್ ದೃಶ್ಯಗಳಿವೆ. ಎಲ್ಲವೂ ನನಗೆ ತುಂಬಾನೆ ಇಷ್ಟ ಆಗಿವೆ. ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ಫೈಟ್ ಸೀನ್ ಇಷ್ಟ ಆಗೋದಿಲ್ಲ. ಆದರೆ ನನಗೆ ಬಲು ಇಷ್ಟ ಆಗಿವೆ…
ಬೆಂಗಳೂರು: ದಿನದಿಂದ ದಿನಕ್ಕೆ ದಿನಸಿ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಅದರಲ್ಲೂ ಅಕ್ಕಿಯ ಬೆಲೆ ಗಗನ ಕುಸುಮವಾಗ್ತಿದೆ. ಇದನ್ನು ಮನಗಂಡ ಕೇಂದ್ರ ಸರ್ಕಾರ ಜನ ಸಾಮಾನ್ಯರಿಗೆ ರೂ.29ಕ್ಕೆ ಒಂದು ಕೆಜಿ ಅಕ್ಕಿ ವಿತರಣೆಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಭಾರತ್ ಅಕ್ಕಿ ಯೋಜನೆಗೆ ಚಾಲನೆ ನೀಡಿದ್ದಾರೆ. ಇಂದು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಬಿಎಸ್ ಯಡಿಯೂರಪ್ಪ ಭಾರತ್ ಬ್ರಾಂಡ್ ಅಕ್ಕಿ ಯೋಜನೆಗೆ ಚಾಲನೆ ನೀಡಿದ್ದಾರೆ. ಇಂದಿನಿಂದ ಭಾರತ್ ಬ್ರಾಂಡ್ ಹೆಸರಿನಲ್ಲಿ ಕೇಂದ್ರ ಸರ್ಕಾರ ಒಂದು ಕೆಜಿಗೆ ರೂ.29ರಂತೆ ಅಕ್ಕಿಯನ್ನು ವಿತರಣೆ ಮಾಡುತ್ತಿದೆ. ಇದೀಗ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಚಾಲನೆ ನೀಡಿದ ಬಳಿಕ, ಪ್ರಾಥಮಿಕವಾಗಿ ಮಂಗಳವಾರ ಬೆಂಗಳೂರಿನಲ್ಲಿ ಮಾತ್ರ ಸಿಗಲಿದ್ದು, ನಗರದ ವಿವಿಧೆಡೆ ಭಾರತ್ ಅಕ್ಕಿ ವಾಹನಗಳು ಸಂಚರಿಸಿ ಅಕ್ಕಿ ಮಾರಲಿವೆ. ಬುಧವಾರದಿಂದ ಮಂಡ್ಯದಲ್ಲಿ ಹಾಗೂ ಇನ್ನೊಂದು ವಾರದಲ್ಲಿ ಇತರೆ ಜಿಲ್ಲೆಗಳಲ್ಲಿ ಗ್ರಾಹಕರಿಗೆ ಲಭ್ಯವಾಗೋ ಸಾಧ್ಯತೆ ಇದೆ. ಬಿಗ್ ಬಾಸ್ಕೆಟ್, ಪ್ಲಿಪ್‌ಕಾರ್ಟ್, ರಿಲೈಯನ್ಸ್ ಸ್ಟೋರ್ಸ್, ಸ್ಟಾರ್ ಹೈಪರ್…
ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ನೂತನ ಸೆನೆಟರ್ ಆಗಿ ಭಾರತ ಮೂಲದ ಬ್ಯಾರಿಸ್ಟರ್ ವರುಣ್ ಘೋಷ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಭಗವದ್ಗೀತೆಯ ಮೇಲೆ ಕೈಯಿಟ್ಟು ಪ್ರಮಾಣ ವಚನ ಸ್ವೀಕರಿಸಿದ ವರುಣ್ ಘೋಷ್ ಗೆ ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಪೆನ್ನಿ ವಾಂಗ್ ಅಭಿನಂದನೆ ಸಲ್ಲಿಸಿದ್ದಾರೆ. ವರುಣ್ ಘೋಷ್ ನೂತನ ಸೆನೆಟರ್ ಆಗಿ ಅಧಿಕಾರ ಸ್ವೀಕರಿಸಿರುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಪೆನ್ನಿ ವಾಂಗ್, ಪಶ್ಚಿಮ ಆಸ್ಟ್ರೇಲಿಯಾದ ನಮ್ಮ ಹೊಸ ಸೆನೆಟರ್ ವರುಣ್ ಘೋಷ್ ಅವರಿಗೆ ಸ್ವಾಗತ. ಸೆನೆಟರ್ ಘೋಷ್ ಅವರು ಭಗವದ್ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಆಸ್ಟ್ರೇಲಿಯಾದ ಸೆನೆಟರ್ ಎಂದಿದ್ದಾರೆ. ಲೇಬರ್ ಪಾರ್ಟಿಯು ವೆಸ್ಟರ್ನ್ ಆಸ್ಟ್ರೇಲಿಯವನ್ನು ಪ್ರತಿನಿಧಿಸಲು ಘೋಷ್ ಅವರನ್ನು ಆಯ್ಕೆ ಮಾಡಿದೆ. ಇತ್ತೀಚೆಗೆ ಘೋಷ್, ಫ್ರಾನ್ಸಿಸ್ ಬರ್ಟ್ ಚೇಂಬರ್ಸ್‌ನಲ್ಲಿ ಬ್ಯಾರಿಸ್ಟರ್, ಪ್ರಸ್ತುತ ಸೆನೆಟರ್ ಪ್ಯಾಟ್ರಿಕ್ ಡಾಡ್ಸನ್ ಅವರ ಸ್ಥಾನಕ್ಕೆ ಆಯ್ಕೆಯಾದರು. ಸೆನೆಟರ್ ಆಗಿ ಅಧಿಕಾರ ಸ್ವೀಕರಿಸಿರುವ ವರುಣ್ ಘೋಷ್ ಪರ್ತ್‌ನಲ್ಲಿ ವೃತ್ತಿಯಲ್ಲಿ ವಕೀಲರಾಗಿದ್ದಾರೆ. ಪಶ್ಚಿಮ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದಿಂದ ಕಲೆ ಮತ್ತು ಕಾನೂನಿನಲ್ಲಿ…
ಐಫೋನ್ ತಗೋಬೇಕು ಅನ್ನೋದು ಸಾಕಷ್ಟು ಮಂದಿಯ ಕನಸಾಗಿರುತ್ತೆ,. ಆದರೆ ದುಭಾರಿ ಅನ್ನೋ ಕಾರಣಕ್ಕೆ ಅದೆಷ್ಟೋ ಮಂದಿ ತಮ್ಮ ಆಸೆಯನ್ನ ಆಸೆಯಾಗಿಯೇ ಉಳಿಸಿಕೊಂಡಿದ್ದಾರೆ. ಆದರೆ ಐಫೋನ್ ತಗೋಬೇಕು ಅಂತ ಕನಸು ಕಾಣ್ತಿರೋ ಸಾಕಷ್ಟು ಮಂದಿಗೆ ಇದೀಗ ಫ್ಲಿಪ್ ಕಾರ್ಟ್ ಭರ್ಜರಿ ಆಫರ್ ನೀಡಿದೆ. ಈ ಮೂಲಕ ನಿಮ್ಮ ಕನಸನ್ನ ನನಸಾಗಿಸಿಕೊಳ್ಳಬಹುದಾಗಿದೆ. ಆ್ಯಪಲ್ ತನ್ನ ಬಹುನಿರೀಕ್ಷಿತ ‘ಐಫೋನ್ 14 ‘ ಸರಣಿಯನ್ನು ಬಿಡುಗಡೆ ಮಾಡಿ ಕೆಲ ತಿಂಗಳೇ ಕಳೆದಿವೆ. ಸದ್ಯಕ್ಕೆ ಎಲ್ಲೆಡೆ ಐಫೋನ್ 14 ಮೇನಿಯಾ ಇದ್ದು ಮತ್ತೊಂದೆಡೆ ಐಫೋನ್ 14 ಬಿಡುಗಡೆ ಆದ ಬೆನ್ನಲ್ಲೇ ಐಫೋನ್ 13 ತನ್ನ ಬೆಲೆಯಲ್ಲಿ ನಿಧಾನವಾಗಿ ಇಳಿಕೆ ಕಾಣುತ್ತಿದೆ.ಅದರಲ್ಲೂ ಫ್ಲಿಪ್‌ಕಾರ್ಟ್‌ನಲ್ಲಿ ಈಗ ಐಫೋನ್ 13 ಫೋನ್ ಮೇಲೆ ಬಂಪರ್ ಆಫರ್ ಇದ್ದು, ಅತ್ಯಂತ ಕಡಿಮೆ ಬೆಲೆಗೆ ನೀವು ಈ ಐಫೋನ್ ಸಿರೀಸ್ ಅನ್ನು ಕೊಳ್ಳಬಹುದಾಗಿದೆ. 128GB ಸ್ಟೋರೇಜ್ ಹೊಂದಿರುವ ಐಫೋನ್ 13 ಫೋನ್ ಶಾಪ್ ನಲ್ಲಿ ಖರೀದಿಸಿದ್ರೆ 59,900 ರೂ ಇದೆ. ಅದರೆ ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ 26,147…
ಸಿದ್ದಾರ್ಥ್ ಆನಂದ್ ನಿರ್ದೇಶನದ ದೀಪಿಕಾ ಪಡುಕೋಣೆ ಹಾಗೂ ಹೃತಿಕ್ ರೋಷನ್ ಕಾಂಬಿನೇಷನ್ ನ ಫೈಟರ್ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ. ಈ ಮಧ್ಯೆ ಚಿತ್ರದಲ್ಲಿರುವ ಚುಂಬನ ದೃಶ್ಯ ಕುರಿತಂತೆ ವಾಯುಸೇನಾ ಅಧಿಕಾರಿಯೊಬ್ಬರು ಗರಂ ಆಗಿದ್ದಾರೆ. ವಾಯುಸೇನೆ ಸಮವಸ್ತ್ರ ಧರಿಸಿಕೊಂಡು ಹೃತಿಕ್ ಮತ್ತು ದೀಪಿಕಾ ಚುಂಬಿಸುವ ದೃಶ್ಯವು ವಸ್ತ್ರ ಸಂಹಿತೆ ನೀತಿಯನ್ನು ಉಲ್ಲಂಘಿಸಿದ್ದು ಇದರಿಂದಾಗಿ ವಾಯುಸೇನೆಗೆ ಮುಜುಗರ ತರಿಸಿದೆ ಎಂದು ಅಧಿಕಾರಿ ಅಸ್ಸಾಮಿನ ಸೌಮ್ಯ ದೀಪ್ ದಾಸ್ ಎನ್ನುವವರು ದೂರು ನೀಡಿದ್ದಾರೆ. ಫೈಟರ್ ಸಿನಿಮಾ ಒಂದಿಲ್ಲೊಂದು ಕಾರಣಕ್ಕೆ ವಿವಾದ ಎದುರಿಸುತ್ತಲೆ ಇದೆ. ಈ ಹಿಂದೆ ಸೆನ್ಸಾರ್ ಮಂಡಳಿಯು ಚಿತ್ರದ ಎರಡು ದೃಶ್ಯಗಳನ್ನು ಕತ್ತರಿಸುವಂತೆ ಸೂಚಿಸಲಾಗಿತ್ತು. ಅದರಲ್ಲೂ ದೀಪಿಕಾ ಪಡುಕೋಣೆ ಬಿಕಿನಿ ಧರಿಸಿದ್ದ ದೃಶ್ಯಕ್ಕೆ ಕತ್ತರಿ ಹಾಕಲಾಗಿತ್ತು. ಇದೀಗ ಚಿತ್ರಕ್ಕೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಈ ಹಿಂದೆಯೂ ಕೂಡ ಶಾರುಖ್ ಖಾನ್ ಜೊತೆ ಕಾಣಿಸಿಕೊಂಡಿದ್ದ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಧರಿಸಿದ್ದ ಕೇಸರಿ ಬಿಕಿನಿ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಇದೀಗ ಮತ್ತೊಮ್ಮೆ ಬಿಕಿನಿ ಕಾರಣಕ್ಕೆ…
ಕನ್ನಡದ ಹೊಂಬಾಳೆ ನಿರ್ಮಾಣ ಸಂಸ್ಥೆ ಪರಭಾಷೆಯಲ್ಲಿ ಸಖತ್ ಸದ್ದು ಮಾಡ್ತಿದೆ. ಹೊಂಬಾಳೆ ಬ್ಯಾನರ್ ಅಡಿಯಲ್ಲಿ ರಿಲೀಸ್ ಆಗುವ ಮುಂದಿನ ಸಿನಿಮಾ ಯಾವುದು ಅಂತ ಪ್ರತಿಯೊಬ್ಬರು ಕಾಯ್ತಿರ್ತಾರೆ. ಇದೀಗ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ಹೊಂಬಾಳೆ ಸಂಸ್ಥೆ ಸಜ್ಜಾಗ್ತಿದೆ. ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಸೂಪರ್ ಸಕ್ಸಸ್ ಸಂಭ್ರಮದಲ್ಲಿರುವ ಹೊಂಬಾಳೆ ಟೀಂ ಇದೀಗ ಅದೇ ಖುಷಿಯಲ್ಲಿ ಮತ್ತೊಂದು ದೊಡ್ಡ ಸಿನಿಮಾ ಮಾಡಲು ಮುಂದಾಗಿದೆ. ಹೊಂಬಾಳೆ ಸಂಸ್ಥೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡೋಕ್ಕೆ ರೆಡಿಯಾಗ್ತಿದ್ದು ಚಿತ್ರದಲ್ಲಿ ಧ್ರುವ ಸರ್ಜಾ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗ್ಲೆ ಧ್ರುವ ಸರ್ಜಾ ಜೊತೆ ಒಂದು ಸುತ್ತಿನ ಮಾತುಕತೆ ಮುಗಿದಿದ್ದು ಧ್ರುವ ಸರ್ಜಾರಿಂದ ಆಲ್ ಮೋಸ್ಟ್ ಗ್ರೀನ್ ಸಿಗ್ನಲ್ ಸಿಕ್ಕಿದೆ ಎನ್ನಲಾಗ್ತಿದೆ. ಕೆಜಿಎಫ್, ಕಾಂತಾರ, ಸಲಾರ್ ಮೂಲಕ ಸೂಪರ್ ಹಿಟ್ ನಂತರ ಹೊಂಬಾಳೆ ಮತ್ತೊಬ್ಬ ಸ್ಟಾರ್ ನಟನೆ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ನಿರ್ಧಾರಿಸಿದೆ.
ಕನ್ನಡದ ಚಿತ್ರರಂಗದ ನಟ ಹಾಗೂ ನಿರ್ದೇಶಕ ಅಭಿಷೇಕ್ ಶೆಟ್ಟಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಸಾಕ್ಷಾ ಶೆಟ್ಟಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಅದರ ಫೋಟೋಗಳ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕುಂದಾಪುರದಲ್ಲಿ ಫೆ.4ರಂದು ಗುರು ಹಿರಿಯರು ನಿಶ್ಚಯಿಸಿದ ಹುಡುಗಿಯ ಬೆರಳಿಗೆ ಅಭಿಷೇಕ್ ಉಂಗುರ ತೊಡಿಸಿದ್ದಾರೆ. ಇದು ಪಕ್ಕಾ ಅರೇಂಜ್ ಮ್ಯಾರೇಜ್ ಆಗಿದ್ದು, ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಅಭಿಷೇಕ್ ಶೆಟ್ಟಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಾಕ್ಷಾ ಶೆಟ್ಟಿ ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಫೈನಾನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವರ್ಷ ಡಿಸೆಂಬರ್ 8ರಂದು ಅಭಿಷೇಕ್- ಸಾಕ್ಷಾ ಮದುವೆ ಕುಂದಾಪುರದಲ್ಲಿ ನಡೆಯಲಿದೆ. ಇನ್ನು ಅಭಿಷೇಕ್ ನಮ್ ಗಣಿ ಬಿಕಾಂ ಪಾಸ್, ಗಜಾನನ & ಗ್ಯಾಂಗ್ ಚಿತ್ರದಲ್ಲಿ ನಿರ್ದೇಶನದ ಜೊತೆಗೆ ನಟನಾಗಿಯೂ ಕಾಣಿಸಿಕೊಂಡಿದ್ದಾರೆ. ಅಭಿಷೇಕ್ ‘ಆರಾಮ್ ಅರವಿಂದ ಸ್ವಾಮಿ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ.
ಇಸ್ಲಮಾಬಾದ್: ಇಸ್ಲಮಾಬಾದ್‍ನ ಬನಿಗಾಲದಲ್ಲಿ ಇರುವ ತನ್ನ ಮನೆಯನ್ನು ಸಬ್‍ಜೈಲೆಂದು ಘೋಷಿಸುವ ಅಧಿಕಾರಿಗಳ ಕ್ರಮವನ್ನು ತಡೆಯಬೇಕು ಮತ್ತು ತನ್ನನ್ನು ರಾವಲ್ಪಿಂಡಿಯ ಅಡಿಯಾಲಾ ಜೈಲಿಗೆ ಸ್ಥಳಾಂತರಿಸಬೇಕು ಎಂದು ಕೋರಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪತ್ನಿ ಬುಷ್ರಾ ಬೀಬಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ. ತೋಷಖಾನ ಭ್ರಷ್ಟಾಚಾರ ಪ್ರಕರಣ ಸಂಬಂಧ ಇಮ್ರಾನ್‍ಖಾನ್ ದಂಪತಿಗೆ ವಿಶೇಷ ನ್ಯಾಯಾಲಯ 14 ವರ್ಷ ಜೈಲುಶಿಕ್ಷೆ ವಿಧಿಸಿತ್ತು. ಇಮ್ರಾನ್ ಖಾನ್ ರನ್ನು ಅಡಿಯಾಲಾ ಜೈಲಿನಲ್ಲಿ ಹಾಗೂ ಬುಷ್ರಾ ಬೀಬಿಯನ್ನು ಅವರ ಮನೆಯಲ್ಲೇ ಗೃಹ ಬಂಧನದಲ್ಲಿ ಇರಿಸಲಾಗಿದೆ. ಜೊತೆಗೆ ಅವರ ಮನೆಯನ್ನು ಸಬ್‍ಜೈಲು ಎಂದು ಘೋಷಿಸಲು ಅಧಿಕಾರಿಗಳು ನಿರ್ಧರಿಸಿದ್ದು ಇದನ್ನು ತಡೆಯುವಂತೆ ಬುಷ್ಟಾ ಬೀಬಿ ಕೋರ್ಟ್ ಮೊರೆ ಹೋಗಿದ್ದಾರೆ. ತಾನು ಸಾಮಾನ್ಯ ಕೈದಿಯಂತೆ ಅಡಿಯಾಲಾ ಜೈಲಿನಲ್ಲಿ ಇರಲು ಬಯಸುತ್ತೇನೆ. ಸಬ್‍ಜೈಲು ಎಂದು ಸರಕಾರ ಘೋಷಿಸಿರುವ ತನ್ನ ಮನೆಯಲ್ಲಿ ಒಬ್ಬಂಟಿಯಾಗಿರುವುದರಿಂದ ನನಗೆ ಜೀವ ಭಯ ಎದುರಾಗಿದೆ. ಗುರುತಿಸಲಾಗದ ವ್ಯಕ್ತಿಗಳು ಮನೆಗೆ ಬಂದು ಹೋಗುತ್ತಿರುವುದು ಅಭದ್ರತೆಯ ಭಾವನೆಯನ್ನು ಮೂಡಿಸಿದೆ. ಆದ್ದರಿಂದ ಮನೆಯನ್ನು ಸಬ್‍ಜೈಲು ಎಂದು…
ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ರಣಬೀರ್ ಕಪೂರ್ ಜೊತೆಗಿನ ಅನಿಮಲ್ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಶ್ಮಿಕಾ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಈ ಕುರಿತು ನಟಿ ಪ್ರತಿಕ್ರಿಯಿಸಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶದನ ರಣ್‌ಬೀರ್, ರಶ್ಮಿಕಾ, ತೃಪ್ತಿ ದಿಮ್ರಿ ಕಾಂಬಿನೇಷನ್ ನ ‘ಅನಿಮಲ್’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. 900 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿಯಲ್ಲಿರುವ ಚಿತ್ರತಂಡ ಅದೇ ಖುಷಿಯಲ್ಲಿ ಅನಿಮಲ್ ಪಾರ್ಟ್ 2ಗೂ ತಯಾರಿ ಮಾಡ್ತಿದ್ದಾರೆ ಎನ್ನಲಾಗ್ತಿದೆ. ಸದ್ಯ ರಶ್ಮಿಕಾ ಮಂದಣ್ಣ ಕೈಯಲ್ಲಿ 6ಕ್ಕೂ ಹೆಚ್ಚು ಸಿನಿಮಾಗಳಿವೆ. ಇದುವರೆಗೂ ಸಿನಿಮಾವೊಂದಕ್ಕೆ ಎರಡರಿಂದ ಮೂರು ಕೋಟಿ ರೂ. ಚಾರ್ಜ್ ಮಾಡುತ್ತಿದ್ದ ನಟಿ ಇದೀಗ 4 ರಿಂದ 5 ಕೋಟಿ ರೂ.ವರೆಗೆ ಹೆಚ್ಚಳ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಇದಕ್ಕೆ ರಶ್ಮಿಕಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಈ ಸುದ್ದಿ ರಶ್ಮಿಕಾ ಗಮನಕ್ಕೂ ಬಂದಿದ್ದು, ಇದೆಲ್ಲವನ್ನೂ ನೋಡಿದ ನಂತರ…