ಸಲ್ಮಾನ್ ಖಾನ್ ಅವರಿಗೆ ದಿನದಿಂದ ದಿನಕ್ಕೆ ಜೀವ ಬೆದರಿಕೆ ಹೆಚ್ಚುತ್ತಿದೆ. ಅದರಲ್ಲೂ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ಧಿಕಿ ಹತ್ಯೆಯ ಬಳಿಕ ಸಲ್ಮಾನ್ ಗೆ ನೀಡಲಾಗಿರುವ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ನಿರಂತರ ಬೆದರಿಕೆಯಿಂದಾಗಿ ಸಲ್ಮಾನ್ ಖಾನ್ ಗೆ ಮುಂಬೈ ಪೊಲೀಸರು ವೈ ಪ್ಲಸ್ ಭದ್ರತೆ ನೀಡಿದ್ದಾರೆ. ಈ ಮಧ್ಯೆ ಕೆಲವು ಪಾಪರಾಜಿಗಳು ಸಲ್ಮಾನ್ ಖಾನ್ ಬಗ್ಗೆ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಸಲ್ಮಾನ್ ಖಾನ್ ಫೋಟೋ ತೆಗೆಯಲು, ಮುಂದಿನ ಸಿನಿಮಾಗಳ ಬಗ್ಗೆ ತಿಳಿದುಕೊಳ್ಳಲು ಪಾಪಾರಾಜಿಗಳು ಕಾದು ಕೂತಿರ್ತಾರೆ. ಇದರ ಜೊತೆಗೆ ಸಲ್ಮಾನ್ ಖಾನ್ ಅವರ ಚಲನವಲಗಳ ಬಗ್ಗೆಯೂ ಪಾಪಾರಾಜಿಗಳು ಕಣ್ಣಿಟ್ಟಿರುತ್ತಾರೆ. ಆದರೆ ಸದ್ಯ ಸಲ್ಮಾನ್ ಭದ್ರತೆಯಿಂದಾಗಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರಿಂದ ಹಿಡಿದು ಸಲ್ಮಾನ್ನ ಅಂಗರಕ್ಷಕರವರೆಗೆ ಎಲ್ಲರೂ ಅವರ ಸುತ್ತಲು ಸುತ್ತುತ್ತಿರುತ್ತಾರೆ. ಸಲ್ಮಾನ್‌ಗೆ ಬಂದಿರುವ ಬೆದರಿಕೆಗಳ ಗಂಭೀರತೆಯನ್ನು ಪರಿಗಣಿಸಿ ಪಾಪರಾಜಿಗಳು ಅವರ ಸುರಕ್ಷತೆಗಾಗಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ಪರಿಸ್ಥಿತಿ ಶಾಂತವಾಗುವವರೆಗೆ ಅಥವಾ ಸಲ್ಮಾನ್ ಮೇಲಿನ ಬಿಕ್ಕಟ್ಟು ಬಗೆಹರಿಯುವವರೆಗೆ ಸಲ್ಮಾನ್ ಅವರ ಯಾವುದೇ…
Author: Author AIN
‘ಬಿಗ್ ಬಾಸ್ ಕನ್ನಡ’ದ 11ನೇ ಸೀಸನ್ ಶುರವಾಗಿ ಮೂರು ವಾರ ಕಳೆದಿದೆ. ಇದೀಗ ಮೂರನೇ ವಾರಕ್ಕೆ ಕಾಲಿಟ್ಟಿದ್ದು ಈ ಮಧ್ಯೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೊಬ್ಬ ಸ್ಪರ್ಧಿ ಮನೆಯೊಳಗೆ ಕಾಲಿಟ್ಟಿದ್ದಾರೆ. ಬಿಗ್ ಬಾಸ್ ಶೋ ಮೂರು ವಾರ ಪೂರ್ಣಗೊಳಿಸಿದೆ. ಹೀಗಿರುವಾಗಲೇ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ. ಹೌದು, ದೊಡ್ಮನೆಯಲ್ಲಿ ಮಧ್ಯದಲ್ಲಿಯೇ ಇಬ್ಬರು ಎಲಿಮಿನೇಟ್ ಆದ ಕಾರಣದಿಂದಲೋ ಏನೋ ಹೊಸಬರನ್ನು ಒಳಗೆ ಕರೆ ತರಲಾಗಿದೆ. ಅಂದ ಹಾಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಎಂಟ್ರಿಕೊಟ್ಟಿರೋದು ಸಿಂಗರ್ ಹನುಮಂತ. ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದವು. ದೊಡ್ಮನೆಯಲ್ಲಿ ದೊಡ್ಡದಾಗಿ ಜಗಳ ನಡೆದ ಇಬ್ಬರು ಎಲಿಮಿನೇಟ್ ಆದರು. ಲಾಯರ್ ಜಗದೀಶ್ ಹಾಗೂ ರಂಜಿತ್ ಔಟ್ ಆದರು. ಈಗ ದೊಡ್ಮನೆ ಒಳಗೆ ಹನುಮಂತ ಎಂಟ್ರಿಕೊಟ್ಟಿದ್ದಾರೆ. ಕಲರ್ಸ್ ಕನ್ನಡವು ಈಗ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಗಾಯಕ ಹನುಮಂತ ಅವರ ಆಗಮನ ಆಗಿದೆ. ಹನುಮಂತ ಅವರು…
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ದಿನದಿಂದ ದಿನಕ್ಕೆ ಹೈರಾಣಾಗಿ ಹೋಗಿದ್ದಾರೆ. ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಾಧ್ಯವಾಗದೆ, ಜಾಮೀನು ಸಿಗದೆ ಒದ್ದಾಡುತ್ತಿದ್ದಾರೆ. ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಮೂಲಗಳ ಪ್ರಕಾರ, ದರ್ಶನ್ಗೆ ಕೂರುವುದು-ಏಳುವುದು ಮಹಾ ಸಮಸ್ಯೆಯಾಗಿ ಪರಿಣಮಿಸಿದೆ. ನಡೆಯಲು ಸಹ ಬಹಳ ಕಷ್ಟಪಡುವ ಸ್ಥಿತಿ ತಲುಪಿದ್ದು, ಚಿಕಿತ್ಸೆಗಾಗಿ ದರ್ಶನ್ ಅಧಿಕಾರಿಗಳ ಬಳಿ ಮೊರೆ ಇಡುತ್ತಿದ್ದಾರೆ. ನಿನ್ನೆ ವಕೀಲ ರಾಮ್ ಸಿಂಗ್, ದರ್ಶನ್ ಭೇಟಿಗಾಗಿ ಬಳ್ಳಾರಿ ಜೈಲಿಗೆ ಆಗಮಿಸಿದ್ದರು. ಸಂದರ್ಶಕರ ಕೊಠಡಿಗೆ ಬರುವಾಗ ಬೆನ್ನನ್ನು ಪದೇ ಪದೇ ಮುಟ್ಟಿಕೊಳ್ಳುತ್ತಾ ನೋವಿನಲ್ಲಿಯೇ ಸಂದರ್ಶಕರ ಕೊಠಡಿಗೆ ದರ್ಶನ್ ಬಂದರು. ಹೆಚ್ಚು ಸಮಯ ನಿಲ್ಲಲು ಸಹ ಆಗದೆ ಗೋಡೆಯ ಆಸರೆ ಪಡೆದು ಹೈಸೆಕ್ಯುರಿಟಿ ಸೆಲ್ ಮುಂದೆ ನಿಂತಿದ್ದರು ದರ್ಶನ್. ದರ್ಶನ್ಗೆ ಜೈಲಿನಲ್ಲಿ ಫಿಜಿಯೋಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗಿದ್ದರೂ ಸಹ ಬೆನ್ನು ನೋವು ಕಡಿಮೆ ಆಗಿಲ್ಲ. ದರ್ಶನ್ರ ಬೆನ್ನಿನ ಎಲ್1 ಹಾಗೂ ಎಲ್5 ಭಾಗದಲ್ಲಿ ತೀವ್ರವಾಗಿ ನೋವಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯ ಇದೆಯೆಂದು ವೈದ್ಯರು…
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸರೋಜ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಇಂದು ಮುಂಜಾನ ಸರೋಜ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸರೋಜ ಅವರ ಮೃತದೇಹವನ್ನು ಮಧ್ಯಾಹ್ನ 12 ಗಂಟೆಗೆ ಸುದೀಪ್ ಅವರ ಜೆಪಿ ನಗರ ನಿವಾಸಕ್ಕೆ ತರಲಾಗುವುದು, ಜೆಪಿ ನಗರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಲಿದೆ. ಸುದೀಪ್ ಅವರ ತಾಯಿಯವರು ಕಳೆದ ಕೆಲ ದಿನಗಳಿಂದಲೂ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯ ಸಂಬಂಧ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಜಯನಗರದ ಅಪೋಲೊ ಆಸ್ಪತ್ರೆಗೆ ಸುದೀಪ್ ಅವರ ತಾಯಿಯನ್ನು ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ 07:04 ಕ್ಕೆ ಸುದೀಪ್ರ ತಾಯಿ ನಿಧನ ರಾಗಿದ್ದಾರೆ. ತಾಯಿಯ ಅನಾರೋಗ್ಯದ ಕಾರಣಕ್ಕೆ ನಿನ್ನೆ ಬಿಗ್ಬಾಸ್ ಶೂಟಿಂಗ್ ಅನ್ನು ಬೇಗನೆ ಮುಗಿಸಿ ಹೋಗಿದ್ದಾರೆ ಸುದೀಪ್. ನಿನ್ನೆಯ ವಾರದ ಪಂಚಾಯಿತಿ, ಸಾಮಾನ್ಯಕ್ಕಿಂತಲೂ ಕಡಿಮೆ ಅವಧಿಗೆ ಪ್ರಸಾರವಾಗಿತ್ತು. ಇತ್ತೀಚೆಗಷ್ಟೆ ಬಿಗ್ಬಾಸ್ ವೇದಿಕೆ ಮೇಲೆ ಸುದೀಪ್ ಅವರು ಅವರ…
ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11ರ ವಾರದ ಪಂಚಾಯಿತಿಯ ಎಪಿಸೋಡ್ ಸಖತ್ ಇಂಟ್ರೆಸ್ಟಿಂಗ್ ಆಗಿತ್ತು. ಮನೆಯಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಭಾರಿ ಜಗಳ, ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಗಿರುವುದು, ಸ್ಪರ್ಧಿಗಳು ವರ್ತಿಸಿದ ರೀತಿ, ಮಾತನಾಡಿದ ರೀತಿ ಹಲವು ವಿಷಯಗಳಿಗೆ ಸುದೀಪ್ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ಕೂತಿದ್ದ ಅಭಿಮಾನಿಗಳು ಕಿಚ್ಚನ ಡಿಸಿಷನ್ ಗೆ ಹ್ಯಾಟ್ಸ್ ಆಫ್ ಹೇಳಿದ್ದಾರೆ. ಎಂದಿನಂತೆ ಸ್ಟೈಲ್ ಆಗಿ ಬಿಗ್ ಬಾಸ್ ವೇದಿಕೆಗೆ ಎಂಟ್ರಿ ಕೊಟ್ಟ ಸುದೀಪ್ ಸ್ಪರ್ಧಿಗಳ ಜೊತೆ ಸಣ್ಣದಾಗಿ ಉಭಯ ಕುಶಲೋಪರಿ ನಡೆಸಿದರು. ಆ ನಂತರ ಬಿಗ್ಬಾಸ್ ಮನೆಯೊಳಗೆ ಒಂದು ಕೇಕ್ ಒಂದನ್ನು ಕಳಿಸಿದರು. ಕೇಕ್ ಮೇಲೆ ಅಭಿನಂದನೆಗಳು ಎಂದು ಬರೆಯಲಾಗಿದ್ದು ಕೇಕ್ ನೋಡಿ ಸ್ಪರ್ಧಿಗಳೆಲ್ಲ ಬಹಳ ಖುಷಿಯಾದರು. ವಿಷಯ ಗೊತ್ತಿಲ್ಲದ ಸ್ಪರ್ಧಿಗಳು ಖುಷಿಯಿಂದ ಕೇಕ್ ತಿಂದರು. ಕೇಕ್ ಕಳಿಸಿದ ಜನರಿಗೆ ಥ್ಯಾಂಕ್ಸ್ ಎಂದು ಖುಷಿಯಿಂದ ಹೇಳಿದರು. ಕೇಕ್ ಕತ್ತರಿಸುವಾಗ ಹಾಡುಗಳನ್ನು ಸಹ ಹಾಡಿದರು. ಕೆಲವು ಸ್ಪರ್ಧಿಗಳು…
ಕನ್ನಡ ಬಿಗ್ ಬಾಸ್ ಸೀಸನ್ 11 ಆರಂಭವಾಗಿ ಎರಡು ವಾರವಷ್ಟೇ ಕಳೆದಿದೆ. ಆದರೆ ಆರಂಭದಿಂದಲೂ ಬಿಗ್ ಬಾಸ್ ಮನೆಯಲ್ಲಿ ಒಂದಲ್ಲ ಒಂದು ವಿವಾದಗಳು ನಡೆಯುತ್ತಲೆ ಇದೆ. ಪ್ರತಿಸಲ ತಪ್ಪು ನಡೆದಾಗ ಅದು ಸ್ಪರ್ಧಿಗಳಿಂದಲೇ ಆಗುತ್ತಿತ್ತು. ಆದರೆ ಈ ಭಾರಿ ಸ್ವತಃ ಬಿಗ್ ಬಾಸ್ ತಪ್ಪು ಮಾಡಿದಂತಿದೆ. ಅದೇ ಕಾರಣಕ್ಕೆ ಬಿಗ್ ಬಾಸ್ ನಿರ್ಧಾರವನ್ನೇ ಪ್ರಶ್ನಿಸಿದ್ದಾರೆ. ಬಿಗ್ಬಾಸ್ ತೀರ್ಮಾನವನ್ನೇ ಕಿಚ್ಚ ಸುದೀಪ್ ಈ ಬಾರಿ ಪ್ರಶ್ನೆ ಮಾಡಿದ್ದಾರೆ. ವಾರಾಂತ್ಯದ ಪಂಚಾಯ್ತಿಯಲ್ಲಿ ಈ ಬಾರಿ ಬಿಗ್ಬಾಸ್ ನಿರ್ಧಾರದ ಬಗ್ಗೆ ಚರ್ಚೆ ಶುರುವಾಗಿದೆ. ಇಷ್ಟು ಮನೆಯವರು ಮಾಡುವ ತಪ್ಪುಗಳನ್ನು ಚರ್ಚೆ ಮಾಡುತ್ತಿರುವ ಈ ವೇದಿಕೆಯಲ್ಲಿ ಈ ಬಾರಿ ಕಂಪ್ಲೇಂಟ್ ಇರುವುದು ಬಿಗ್ಬಾಸ್ ಮೇಲೆ ಎನ್ನುತ್ತ ಮಾತು ಶುರು ಮಾಡಿರುವ ಸುದೀಪ್ ಅವರು, ಬಿಗ್ಬಾಸ್ ಅವಸರದ ನಿರ್ಧಾರ ತೆಗೆದುಕೊಂಡ್ರಾ ಅಥವಾ ತೆಗೆದುಕೊಂಡಿರುವ ನಿರ್ಧಾರ ತಪ್ಪಾಗಿತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ಸುದೀಪ್ ಅವರು ಯಾವ ನಿರ್ಧಾರದ ಬಗ್ಗೆ ಮಾತನಾಡುತ್ತಿದ್ದಾರೆ ಎನ್ನುವ ಬಗ್ಗೆ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಸಾಕಷ್ಟು ಮಂದಿ ಚರ್ಚೆ…
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇಬ್ಬರೂ ಕೂಡ ತಮ್ಮ ಫಿಟ್ನೆಸ್ ಬಗ್ಗೆ ಬಹಳ ಗಮನಕೊಡುತ್ತಾರೆ. ಎಷ್ಟೇ ಬ್ಯುಸಿಯಾಗಿದ್ದರು ತಮ್ಮ ವರ್ಕೌಟ್ ಬಗ್ಗೆ ಹೆಚ್ಚಿಗೆ ಕಾಳಜಿ ವಹಿಸುತ್ತಾರೆ. ತುಂಬಾ ಕಟ್ಟುನಿಟ್ಟಾದ ಜೀವನ ಶೈಲಿ ಪಾಲಿಸಿಕೊಂಡು ಬರುತ್ತಿರುವ ಅನುಷ್ಕಾ ಹಾಗೂ ವಿರಾಟ್ ಕುಡಿಯುವ ನೀರಿನಲ್ಲೂ ಸಾಕಷ್ಟು ಚ್ಯುಸಿಯಾಗಿದ್ದಾರೆ. ವಿರಾಟ್ ಹಾಗೂ ಅನುಷ್ಕಾ ತಮ್ಮ ಕುಡಿಯುವ ನೀರಿನಲ್ಲಿ ಬದಲಾವಣೆಯನ್ನು ಮಾಡುತ್ತಿರುತ್ತಾರೆ. ಈ ಜೋಡಿ ಕುಡಿಯುವ ಮಿನರಲ್ ವಾಟರ್ನ ಬ್ರ್ಯಾಂಡ್ ಆಗಾಗ ಬದಲಾಗುತ್ತಿರುತ್ತದೆ. ಅನುಷ್ಕಾ ಮತ್ತು ವಿರಾಟ್ ಕುಡಿಯುವ ನೀರು ವಿಶೇಷವಾದದ್ದು, ಬೇರೆ ದೇಶದಿಂದ ಆಮದು ಮಾಡಲಾಗುತ್ತದೆ. ವಿರಾಟ್ ಹಾಗೂ ಅನುಷ್ಕಾ ಕುಡಿಯಲು ಇವೈನ್ ನ್ಯಾಚುರಲ್ ಸ್ಪ್ರಿಂಗ್ ವಾಟರ್ ಹೆಚ್ಚು ಬಳಸುತ್ತಾರೆ.ಇದು ಮೂಲತಃ ಫ್ರಾನ್ಸ್ನಿಂದ ಬರುವಂತಹ ಮಿನರಲ್ ವಾಟರ್, ಯಾವುದೇ ಕೆಮಿಕಲ್ ಮಿಕ್ಸ್ ಇಲ್ಲದ ಪರಿಶುದ್ಧ ನೀರು ಎಂದು ಹೇಳಲಾಗುತ್ತದೆ. ಈ ನೀರಿನ ಒಂದು ಬಾಟಲ್ಗೆ ಸುಮಾರು 600 ರೂಪಾಯಿಗಳು. ದಿನಕ್ಕೆ ನೀವು ಎರಡು ಲೀಟರ್ ಈ ನೀರು ಕುಡಿದಲ್ಲಿ ತಗಲುವ ವೆಚ್ಚ 1200 ರೂಪಾಯಿಗಳು…
ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಹತ್ಯೆ ಪ್ರತೀಕಾರಕ್ಕೆ ಮುಂದಾಗಿರುವ ಹಿಜ್ಬುಲ್ಲಾ ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ನಿವಾಸದ ಮೇಲೆ ಡ್ರೋನ್ ದಾಳಿ ನಡೆಸಿದೆ. ನೆತನ್ಯಾಹು ಖಾಸಗಿ ನಿವಾಸದ ಮೇಲೆ ಹಿಜ್ಬುಲ್ಲಾ ಪಡೆ ಡ್ರೋನ್ ದಾಳಿ ನಡೆಸಿದ್ದು, ನೆತನ್ಯಾಹು ನಿವಾಸದಿಂದ ಕೊಂಚ ದೂರದಲ್ಲಿ ಡ್ರೋನ್ ಸ್ಫೋಟಗೊಂಡಿದೆ. ಆ ಮೂಲಕ ಇಸ್ರೇಲ್ ಅಧ್ಯಕ್ಷರ ಹತ್ಯೆಗೆ ಪ್ರಯತ್ನ ನಡೆಸಲಾಗಿದೆ. ಸದ್ಯ ಅಧ್ಯಕ್ಷರ ನಿವಾಸಕ್ಕೆ ಯಾವುದೇ ಹಾನಿಯಾಗಿಲ್ಲ. ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಹತ್ಯೆಯ ಬೆನ್ನಲ್ಲೇ ಶನಿವಾರ ಇಸ್ರೇಲ್‌ನ ಸಿಸೇರಿಯಾ ಪಟ್ಟಣದಲ್ಲಿರುವ ನೆತನ್ಯಾಹು ಅವರ ನಿವಾಸದ ಕಡೆಗೆ ಡ್ರೋನ್ ಹಾರಿಸಲಾಯಿತು. ಲೆಬನಾನ್‌ನಿಂದ ಡ್ರೋನ್ ಉಡಾವಣೆ ಮಾಡಲಾಗಿದ್ದು, ಅದು ಕಟ್ಟಡಕ್ಕೆ ಅಪ್ಪಳಿಸಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ಇಸ್ರೇಲ್ ಭೂಪ್ರದೇಶಕ್ಕೆ ಎಂಟ್ರಿ ಕೊಟ್ಟಿದ್ದ ಇನ್ನೂ ಎರಡು ಡ್ರೋನ್‌ಗಳನ್ನು ತಡೆಹಿಡಿಯಲಾಗಿದೆ ಎಂದು ಮಿಲಿಟರಿ ತಿಳಿಸಿದೆ. ಲೆಬನಾನ್‌ನಿಂದ ಲಾಂಚ್ ಆಗಿದ್ದ ಡ್ರೋನ್ ಅನ್ನು ಇಸ್ರೇಲಿ ಮಿಲಿಟರಿ ಬೆನ್ನಟ್ಟಿತು. ಆದರೂ ಅದರನ್ನು ತಡೆಯಲು ಸಾಧ್ಯವಾಗಲಿಲ್ಲ. ಕೊನೆಗೆ ಇಸ್ರೇಲ್ ಅಧ್ಯಕ್ಷ ನಿವಾಸದ ಬಳಿ ಡ್ರೋನ್…
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಕೆಲವು ಆರೋಪಿಗಳಿಗೆ ಜಾಮೀನು ಸಿಕ್ಕಿ ಹೊರ ಬಂದಿದ್ದಾರೆ. ಅವರಲ್ಲಿ ಪ್ರಕರಣದ ಎ8 ಆರೋಪಿ ರವಿಶಂಕರ್ ಗೆ ಜಾಮೀನು ಮಂಜೂರಾಗಿ 6 ದಿನ ಕಳೆದರೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆ ನಡೆಸಿ 57ನೇ ಸಿಸಿಹೆಚ್ ನ್ಯಾಯಾಲಯ ಕಳೆದ ಸೋಮವಾರ ಆರೋಪಿ ರವಿಶಂಕರ್‌ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಅಲ್ಲದೇ 2 ಲಕ್ಷ ರೂ. ಬಾಂಡ್ ಹಾಗೂ ಇಬ್ಬರ ಶ್ಯೂರಿಟಿಯನ್ನೂ ನೀಡುವಂತೆನ್ಯಾಯಾಲಯ ಆದೇಶಿಸಿದೆ. ಆದರೆ ಶ್ಯೂರಿಟಿದಾರರು ಸಿಗದೇ ರವಿಶಂಕರ್ ಕುಟುಂಬ ಪರದಾಡುತ್ತಿದ್ದು ಇದೇ ಕಾರಣಕ್ಕೆ ರವಿಶಂಕರ್ ಜೈಲಿನಿಂದ ಹೊರ ಬರದೆ ಅಲ್ಲಿಯೇ ಉಳಿದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇಂದು ಬಹುತೇಕ ಶ್ಯೂರಿಟಿ ಪ್ರಕ್ರಿಯೆ ಮುಗಿಯುವ ಸಾಧ್ಯತೆಯಿದ್ದು, ಪ್ರಕ್ರಿಯೆ ಮುಗಿದ ಬಳಿಕ ತುಮಕೂರು ಜೈಲಾಧಿಕಾರಿಗೆ ಮೇಲ್ ಮೂಲಕ ಜಾಮೀನು ಪ್ರತಿ ತಲುಪಲಿದೆ. ಜಾಮೀನು ಪ್ರತಿ ಜೈಲಾಧಿಕಾರಿಗೆ ತಲುಪಿದ ಬಳಿಕ ಆರೋಪಿ ರವಿಶಂಕರ್ ಬಿಡುಗಡೆಯಾಗುವ ಸಾಧ್ಯತೆಯಿದೆ. ಬಹುತೇಕ ಇಂದು (ಶನಿವಾರ) ಸಂಜೆ ಒಳಗೆ ಆರೋಪಿ ರವಿಶಂಕರ್ ಬಿಡುಗಡೆಯಾಗುವ…
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ಬಿಡುಗಡೆಗೆ ಎದುರು ನೋಡ್ತಿದ್ದಾರೆ. ಈಗಾಗಲೇ ದರ್ಶನ್ ಜಾಮೀನು ಅರ್ಜಿ ವಜಾ ಮಾಡಲಾಗಿದ್ದು ಇದೀಗ ದರ್ಶನ್ ಪರ ವಕೀಲರು ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಈ ಮಧ್ಯೆ ದರ್ಶನ್ಗೆ ಕೊಂಚ ರಿಲೀಫ್ ಸಿಕ್ಕಿದೆ. ಅಂದ ಹಾಗೆ ದರ್ಶನ್ ಗೆ ರಿಲೀಫ್ ಸಿಕ್ಕಿರುವುದು ಫಿಜಿಯೋ ಥೆರಪಿ ಚಿಕಿತ್ಸೆ ಮೂಲಕ. ಶುಕ್ರವಾರ ಸಂಜೆಯಿಂದಲೇ ವಿಮ್ಸ್ ಆಸ್ಪತ್ರೆ ವೈದ್ಯರಿಂದ ದರ್ಶನ್ ಗೆ ಫಿಜಿಯೋಥೆರೆಪಿ ಚಿಕಿತ್ಸೆ ನೀಡಲಾಗುತ್ತಿದೆ. ಜೈಲಿನ ಹೈ ಸೆಕ್ಯೂರಿಟಿ ಸೆಲ್ನಲ್ಲೇ ವಿಮ್ಸ್ ವೈದ್ಯರು ಒಂದು ಗಂಟೆ ಫಿಜಿಯೋಥೆರೆಪಿ ನೀಡಿದ್ದಾರೆ. ಇದರಿಂದ ದರ್ಶನ್ ಕೊಂಚ ರಿಲೀಫ್ ಆಗಿದ್ದಾರೆ. ದರ್ಶನ್ ಬೆನ್ನಿನ ಭಾಗದಲ್ಲಿ ಊತ ಕಾಣಿಸಿಕೊಂಡಿದ್ದು, ಈಗ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನ್ಯೂರೋ ಹಾಗೂ ಆರ್ಥೋಪಿಡಿಷನ್ ವೈದ್ಯರು ದರ್ಶನ್ ಅವರ ದೇಹವನ್ನು ಸ್ಕ್ಯಾನಿಂಗ್ ಮಾಡಿದ್ದರು. ಈ ವೇಳೆ ಸರ್ಜರಿ ಹಾಗೂ ಫಿಜಿಯೋಥೆರಪಿ ಮಾಡಿಸುವಂತೆ ಸಲಹೆ ನೀಡಿದ್ದರು. ಸದ್ಯ ಸರ್ಜರಿಯನ್ನು ಬೆಂಗಳೂರಿಗೆ ಹೋಗಿ ಮಾಡಿಸಿಕೊಳ್ಳುವುದಾಗಿ ಹೇಳಿರುವ ದರ್ಶನ್…